Brief University College news with pictures


Guru Prasad
Kemmannu News Network, 15-09-2019 14:38:46


Write Comment     |     E-Mail To a Friend     |     Facebook     |     Twitter     |     Print


ಕ್ಯಾನ್ಸರ್ ಪತ್ತೆಯಲ್ಲಿ ಎಪಿಜೆನೆಟಿಕ್ ಪಾತ್ರದ ಕುರಿತು ಉಪನ್ಯಾಸ

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ “ಡಿಎನ್ಎ ಮಿಥೈಲೇಷನ್ ಆ್ಯಂಡ್ ಕ್ಯಾನ್ಸರ್:  ಅಪಾರ್ಚುನಿಟೀಸ್ ಆ್ಯಂಡ್ ಚಾಲೆಂಜಸ್” ಎಂಬ ಕುರಿತು ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮಣಿಪಾಲ್ ಸ್ಕೂಲ್ ಆಫ್ ಸೈನ್ಸ್, ಮಾಹೆಯ ಸಹ ಪ್ರಾಧ್ಯಾಪಕ ಡಾ. ಶ್ಯಾಮ್ ಪ್ರಸಾದ್, ಕ್ಯಾನ್ಸರ್ ಎಂದರೇನು. ಅದಕ್ಕೆ ಕಾರಣವೇನು, ಕ್ಯಾನ್ಸರ್ ಪತ್ತೆಗೆ ಎಪಿಜೆನೆಟಿಕ್  ಬಳಸಬಹುದೇ ಎಂಬ ವಿಚಾರಗಳ ಕುರಿತು ಸಂಶೋಧನೆಯಲ್ಲಿ ಕಂಡುಕೊಂಡ ಅಂಶಗಳ ಕುರಿತು ಉಪನ್ಯಾಸ ನೀಡಿದರು. ಭಾರತದಲ್ಲಿ ಸಾಮಾನ್ಯವಾಗಿರುವ ಗರ್ಭಕೋಶ, ಸ್ತನ  ಮತ್ತು ಬಾಯಿಯ ಕ್ಯಾನ್ಸರ್ ಪತ್ತೆಯಲ್ಲಿ ಎಪಿಜೆನೆಟಿಕ್ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಡಾ. ಹರೀಶ್ ಎ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ ಮೊದಲಾದ ಪ್ರತಿನಿಧಿಗಳು ಭಾಗವಹಿಸಿದ್ದರು.

‘ಎಫ್.ಎಂ ರೇಡಿಯೋದತ್ತ ಯುವಜನತೆಯ ಚಿತ್ತ’

ಮಂಗಳೂರು: ಇಂದು ಯುವಜನತೆ ಕೇವಲ ಟಿ.ವಿ, ಸಾಮಾಜಿಕ ಜಾಲತಾಣಗಳಿಗೆ ಮರುಳಾಗಿಲ್ಲ, ಬದಲಾಗಿ ರೇಡಿಯೋದ ಬದಲಾದ ರೂಪ ಎಫ್.ಎಂ ಚಾನೆಲ್ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ, ಎಂದು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಶಾನಿ ಕೆ.ಆರ್ ಅಭಿಪ್ರಾಯಪಟ್ಟಿದ್ದಾರೆ.

ಕಾಲೇಜಿನ ಪತ್ರಿಕೋದ್ಯಮ ವಿಭಾಗದ ‘ಮಾಧ್ಯಮ ವೇದಿಕೆ’, ರೆಡ್ ಎಫ್.ಎಂ 93.5 ಮತ್ತು ಮ್ಯಾಕ್ಸ್ ಜೊತೆಗೂಡಿ ರವೀಂದ್ರ ಕಲಾಭವನದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಆರ್ಜೆ ನಯನಾ ಮತ್ತು ಆರ್ಜೆ ತ್ರಿಶೂಲ್, ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗಿರದೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು, ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಜಾಹೀರಾತು ಪ್ರದರ್ಶನ, ಹಾಡು, ಕಿರು ಪ್ರಹಸನ, ಮಿಮಿಕ್ರಿ ಪ್ರತಿಭೆಗಳ ಪೈಪೋಟಿಯಂತೆ ಕಂಡುಬಂತು. ಉತ್ತಮ ಪ್ರದರ್ಶನ ನೀಡಿದ ಪ್ರಥಮ ಬಿಎ ಯ ಗೀತಾಂಜಲಿ, ದ್ವಿತೀಯ ಬಿ.ಎ ಯ ಹರ್ಷಿತಾ ಮತ್ತು ತೃತೀಯ ಬಿ.ಎ ಯ ಗ್ರೀಷ್ಮಾ ಬಹುಮಾನ ಪಡೆದುಕೊಂಡರು. ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ್ ಎ ಉಪಸ್ಥಿತರಿದ್ದರು.

‘ಸೇವೆ ಮಾಡಲು ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ’
ಮಂಗಳೂರು: ಸೇವೆ ಮಾಡಲು ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಸೇವೆಯಲ್ಲಿ ಸಿಗುವ ತೃಪ್ತಿಯನ್ನು ಬೇರೆ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ. ಇದು ರೆಡ್ಕ್ರಾಸ್ನಿಂದ ದೊರೆಯುತ್ತದೆ, ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ರೆಡ್ಕ್ರಾಸ್ ಸಮಿತಿಯ ಅಧ್ಯಕ್ಷ ಸಚೇತ್ ಸುವರ್ಣ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತ್ತೀಚೆಗೆ ಯುವ ರೆಡ್ಕ್ರಾಸ್ ಸಂಘ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು, ರೆಡ್ಕ್ರಾಸ್ನಲ್ಲಿ ಮೊತ್ತಮೊದಲಿಗೆ ಮಾನವೀಯತೆ, ಮಾನವ ಸೇವೆಗೆ ಆದ್ಯತೆ ನೀಡಲಾಗುತ್ತದೆ, ಎಂದರು. ಅಲ್ಲದೆ ರೆಡ್ಕ್ರಾಸ್ನ ಉಗಮ, ಅದರ ವಿಶೇಷತೆ, ವ್ಯಾಪ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ .ಮೀನಾ ಎಸ್ ಕಜಂಪಾಡಿ, ಸಮಾಜ ಸೇವೆ ಮಾಡುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ರೆಡ್ಕ್ರಾಸ್ ಸಂಘದ ಉಪಾಧ್ಯಕ್ಷೆ ಡಾ. ಕೆ.ಎ. ನಾಗರತ್ನ, ಕಾರ್ಯದರ್ಶಿ ಶ್ರುತಿ, ಸಹಕಾರ್ಯದರ್ಶಿ ಮನೀಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯೆ ಸ್ಪಂದನಾ ಧನ್ಯವಾದ ಸಮರ್ಪಿಸಿದರೆ, ಶೃತಿ ಕಾರ್ಯಕ್ರಮ ನಿರೂಪಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

KEMMANNU CHURCH - Weekly Announcements.KEMMANNU CHURCH - Weekly Announcements.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 113Veez Konkani Illustrated Weekly e-Magazine # 113
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India