Brief Mumbai, Mangalore News with pictures


Rons Bantwal
Kemmannu News Network, 18-09-2019 10:56:15


Write Comment     |     E-Mail To a Friend     |     Facebook     |     Twitter     |     Print


ಧರ್ಮಸ್ಥಳ ಭಜನಾ ತರಬೇತಿ ಶಿಬಿರ ಉದ್ಘಾಟನೆ
ಭಜನಾ ಸಂಸ್ಕøತಿಯಿಂದ ಸಭ್ಯ, ಸುಸಂಸ್ಕøತ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ

ಚಿತ್ರಶೀರ್ಷಿಕೆ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಭಜನಾ ತರಬೇತಿ ಶಿಬಿರ ಉದ್ಘಾಟಿಸಿದರು (16 ಯು.ಜೆ.ಆರ್. 1)

ಉಜಿರೆ: ದೆವರ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಸರಳ ಮಾಧ್ಯಮವಾಗಿದೆ. ಭಜನಾ ಸಂಸ್ಕøತಿಯಿಂದ ಸಭ್ಯ, ಸುಸಂಸ್ಕøತ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
    ಅವರು ಸೋಮವಾರ ಧರ್ಮಸ್ಥಳದಲ್ಲಿ ಇಪ್ಪತ್ತೊಂದನೆ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಸಂಸ್ಕøತಿ ಸಂವರ್ಧನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
    ಮುನುಷ್ಯ ಜನ್ಮ ಶ್ರೇಷ್ಠ ಅವಕಾಶವಾಗಿದ್ದು ಸತ್ಯ, ಸದಾಚಾರ ಮತ್ತು ಸತ್ಕಾರ್ಯಗಳೊಂದಿಗೆ ಸಾರ್ಥಕ ಜಿವನ ನಡೆಸಬೇಕು. ನವವಿಧ ಭಕ್ತಿಯಿಂದ ದೆವರ ಸ್ತುತಿ, ಆರಾಧನೆ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು ಸತ್ಸಂಗದಿಂದ ಭಜನೆ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
    ರಾಗ, ತಾಳ, ಲಯ ಬದ್ಧವಾಗಿ ಶಿಸ್ತಿನಿಂದ ಭಜನಾ ಸಂಸ್ಕøತಿ ಪ್ರಸಾರಕ್ಕೆ ಧರ್ಮಸ್ಥಳದ ಕೊಡುಗೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
    ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
    ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಭಜನೆಯಿಂದ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗಿ ಸಾಮಾಜಿಕ ಪರಿವರ್ತನೆಯಾಗಬೇಕು. ಗ್ರಾಮಗಳಲ್ಲಿ ಸ್ವಚ್ಛತೆಯೊಂದಿಗೆ ಉತ್ತಮ ಸಂಸ್ಕಾರ ಮೂಡಿ ಬರಬೇಕು. ಭಜನಾ ಪಟುಗಳು ಆದರ್ಶ ನಾಯಕತ್ವದೊಂದಿಗೆ ಊರಿನ ಸರ್ವತೋಮುಖ ಪ್ರಗತಿಯ ರೂವಾರಿಗಳಾಗಬೇಕು ಎಂದು ಹೆಗ್ಗಡೆಯವರು ಕಿವಿ ಮಾತು ಹೇಳಿದರು.
    ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೆಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
    ಭಜನಾ ತರಬೇತಿ ಶಿಬಿರದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:
•    1920 ಭಜನಾ ಮಂಡಳಿಗಳ 3840 ಮಂದಿಗೆ ಕಳೆದ 20 ವರ್ಷಗಳಲ್ಲಿ ಭಜನಾ ತರಬೇತಿ ನೀಡಲಾಗಿದೆ.
•    ಈ ಬಾರಿ 145 ಪುರುಷರು ಹಾಗೂ 105 ಮಹಿಳೆಯರು ತರಬೇತಿ ಶಿಬಿರದಲ್ಲಿ ಭಾಗವಹಸುತ್ತಿದ್ದಾರೆ.
•    ಶಿಬಿರದಲ್ಲಿ ಉಪನ್ಯಾಸ, ಚರ್ಚೆ, ಚಿಂತನ ಮಂಥನ, ಯೋಗಾಭ್ಯಾಸ, ನಗರ ಭಜನೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸಲಾಗಿದೆ.
•    ಇದೇ 22ರಂದು ಭಾನುವಾರ ಸಮಾರೋಪ ಸಮಾರಂಭ ಹಾಗೂ 500 ಭಜನಾ ಪಟುಗಳಿಂದ  ನೃತ್ಯ ಭಜನೆ ನಡೆಯಲಿದೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರ ನೆರೆ ಪರಿಹಾರ ನಿಧಿಗೆ ಎರಡು ಲಕ್ಷ ದೇಣಿಗೆ
ನೀಡಿದ ಬಂಟರ ಸಂಘ ಮುಂಬಯಿ-ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ
ಮುಂಬಯಿ, ಸೆ.16: ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸೃಷ್ಟಿಯಾದ ನೆರೆ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಜನತೆಯ ಸಹಾಯಾರ್ಥ ಕರ್ನಾಟಕದ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ (ರಿಲೀಫ್ ಫಂಡ್‍ಗೆ) ಎರಡು ಲಕ್ಷ ರೂಪಾಯಿ ಮೊತ್ತವನ್ನು ಇಂದಿಲ್ಲಿ ನೀಡಲಾಯಿತು.
ಇಂದಿಲ್ಲಿ ಸೋಮವಾರ ಭೇಟಿಯಾದ ಡಾ| ಆರ್.ಕೆ ಶೆಟ್ಟಿ ನಿಯೋಗವು  ಈ ಚೆಕ್‍ನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯ ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯದ ರಾಜಧಾನಿ ಮೆಂಗಳೂರು ಮಹಾನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ 2010ರ ನವೆಂಬರ್ 02ರಂದು ಅಂದಿನ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಸಚಿವ ಗೋವಿಂದ್ ಕರಜೋಲ್ ಸಮ್ಮುಖದಲ್ಲಿ ತನ್ನ ಹಸ್ತಗಳಲ್ಲೇ 2010ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನಿಸಿದ್ದನ್ನು ಮುಖ್ಯಮಂತ್ರಿ ನೆನಪಿಸಿ ಹರ್ಷ ವ್ಯಕ್ತಪಡಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮುಲುಂಡ್ ಸ್ಥಳೀಯ ಕಚೇರಿ ಸಂಭ್ರಮಿಸಿದ   
ಗುರುಪೂಜೆಯೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯೋತ್ಸವ
ಮುಂಬಯಿ, ಸೆ.14: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಲುಂಡ್ ಸ್ಥಳೀಯ ಕಚೇರಿಯು  ಇಂದಿಲ್ಲಿ ಶನಿವಾರ ಅಪರಾಹ್ನ  ಮುಲುಂಡ್ ಪೂರ್ವದ ನೀಲಂ ನಗರದಲ್ಲಿನ ಶ್ರೀ ವರ್ಧನ್ ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಸಂಭ್ರಮಿಸಿತು. ಮುಲುಂಡ್ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿ ಧುರೀಣ ಸರ್ದರ್ ತಾರಾ ಸಿಂಗ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು.

ಜಯಂತ್ಯೋತ್ಸವ ಪ್ರಯುಕ್ತ ಮಧ್ಯಾಹ್ನ ಬ್ರಹ್ಮಶ್ರೀ ನಾರಾಯಣ ಗುರುಪೂಜೆ ನಡೆಸಿದ್ದು ನಂತರ ಶ್ರೀರಾಧಾಕೃಷ್ಣ ಶ್ರೀ ಶನೀಶ್ವರ ಮಂದಿರ ಡೊಂಬಿವಲಿ ಭಕ್ತಾವೃಂದವು ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹಾಪೂಜೆ ನೆರವೇರಿಸಿದರು. ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯೊಂದಿಗೆ ಗುರು ಜಯಂತ್ಯೋತ್ಸವ ಸಮಾಪನ ಕಂಡಿತು.
ಪ್ರಕಾಶ್ ಭಟ್ ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ಮಂಗಳಾರತಿಗೈದು ಪ್ರಸಾದ ವಿತರಿಸಿ ಶುಭಾರೈಸಿದರು. ಮುಲುಂಡ್ ಸ್ಥಳೀಯ ಕಚೇರಿ  ಕಾರ್ಯಾಧ್ಯಕ್ಷ ಕೆ.ಸುರೇಶ್ ಕುಮಾರ್ ಮತ್ತು ರತ್ನಾ ಸುರೇಶ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಈ ಶುಭಾವಸರದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ನಿರ್ದೇಶಕ ನ್ಯಾ| ರಾಜಾ ವಿ.ಸಾಲ್ಯಾನ್, ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್.ಕಿರೋಡಿಯನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ, ಸತೀಶ್ ಎಂ.ಬಂಗೇರಾ, ಪ್ರಭಾಕರ ಜಿ.ಪೂಜಾರಿ, ಮುಲುಂಡ್ ಸ್ಥಳೀಯ ಕಚೇರಿ  ಕೇಂದ್ರ  ಕಚೇರಿ ಪ್ರತಿನಿಧಿ ಶಕುಂತಳಾ ಕೆ.ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪದಾಧಿಕಾರಿಗಳು ಗೌರವಿಸಿದರು.

ಮುಲುಂಡ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಕೆ.ಪಿ ಸಂಜೀವ, ಉಪಾಧ್ಯಕ್ಷರುಗಳಾದ ರವಿ ಕೋಟ್ಯಾನ್ ಮತ್ತು ಶಂಕರ ಅವಿೂನ್, ಗೌ| ಕಾರ್ಯದರ್ಶಿ ಸತೀಶ್ ಎಂ.ಪೂಜಾರಿ, ಗೌ| ಕೋಶಾಧಿಕಾರಿ ಶಂಕರ ಜೆ.ಪೂಜಾರಿ, ಜೊತೆ  ಕೋಶಾಧಿಕಾರಿ ಶ್ರೀಧರ ಪೂಜಾರಿ ಹಾಲಿ-ಮಾಜಿ ಪದಾಧಿಕಾರಿಗಳು ಸೇರಿದಂತೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದರು.

ಕಲಾ ಸೌರಭ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಕೆ.ಸುರೇಶ್ ಕುಮಾರ್ ಸುಖಾಗಮನ ಬಯಸಿದರು. ಸತೀಶ್ ಎಂ.ಪೂಜಾರಿ ಧನ್ಯವದಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ದೇಶದ ಪ್ರಗತಿ

ಉಜಿರೆ: ವಿಜ್ಞಾನ ಮತ್ತು ತಂತ್ರಜ್ಞಾನ ಪರಸ್ಪರ ಪೂರಕವಾಗಿದ್ದು ಇದರ ಬಳಕೆಯಿಂದ ದೇಶದ ಉತ್ತಮ ಪ್ರಗತಿ ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಇಸ್ರೋ ಪ್ರಾಧ್ಯಾಪಕ ಡಾ. ಬಿ.ಎನ್. ಸುರೇಶ್ ಹೇಳಿದರು.
ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಿಜ್ಞಾನವು ಜ್ಞಾನವನ್ನು ನೀಡಿದರೆ, ಆ ಜ್ಞಾನವನ್ನು ನಮ್ಮ ದೈನಂದಿನ ಜೀವನದಲ್ಲಿ ಸುತ್ತಮುತ್ತ ನಡೆಯುವ ಘಟನೆಗಳನ್ನು ಕುತೂಹಲದಿಂದ ವೀಕ್ಷಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಬೇಕು. ಯುವ ಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ಹೊಸ ಆವಿಷ್ಕಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ವರದಾನವಾಗಬೇಕು. ನಿತ್ಯವೂ ವಿಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತವೆ. ಕೃಷಿ ಹಾಗೂ ನೀರಿನ ಬಳಕೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ತುಂಬಾ ಉಪಯುಕ್ತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚಂದ್ರಯಾನದ ಬಗ್ಯೆ ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಅವರು ಸಮರ್ಪಕ ಉತ್ತರ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಪ್ರೊ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿಯ ನಾಲ್ಕನೇ ವಾರ್ಷಿಕ ಮಹಾಸಭೆ
ಕ್ಷೇತ್ರÀದ ರೈತರ ಭದ್ರ ಭವಿಷ್ಯತ್ತಿಗಾಗಿ ಶ್ರಮಿಸುವೆ: ಶಾಸಕ ಸುನೀಲ್ ಕುಮಾರ್
ಮುಂಬಯಿ (ಕಾರ್ಕಳ), ಸೆ.16: ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ನಿಯಮಿತ ಇದರ ನಾಲ್ಕನೇ ವಾರ್ಷಿಕ ಮಹಾಸಭೆ ಕಳೆದ ಭಾನುವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿನ   ಕಂಪೆನಿಯ ಕಾರ್ಯಾಲಯದಲ್ಲಿ ಕಂಪೆನಿ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ರೈತರಿಂದ, ರೈತರಿಗಾಗಿ, ರೈತರೇ ನಡೆಸುವ ಈ ಕಂಪೆನಿಯು 3 ವರ್ಷಗಳನ್ನು ಪೂರೈಸಿ 4ನೇ ವರ್ಷದತ್ತ ಸಾಗುವ  ಸಂದರ್ಭದಲ್ಲಿ ಕಂಪೆನಿಯು ಅನೇಕ ಪೂರ್ವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಎಲ್ಲಾ ಕಾರ್ಯ ಯೋಜನೆಗಳು ರೈತರ ಅಭಿವೃಧ್ಧಿಗಾಗಿ ಸಹಕಾರಗೊಳ್ಳಲು ಸರಕಾರದ ವತಿಯಿಂದ ನನ್ನ ಕ್ಷೇತ್ರ ಕಾರ್ಕಳದ ರೈತರ ಭದ್ರ ಭವಿಷ್ಯತ್ತಿಗಾಗಿ ಎಲ್ಲಾ ಸಹಕಾರಗಳನ್ನು ಕೊಡುವ ಪ್ರಯತ್ನ ಮಡುತ್ತೇನೆ ಎಂದು ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಅತಿಥಿü ಭಾಷಣ ಹೇಳಿದರು.

ಮುಂದಿನ ವರ್ಷ ಕಂಪೆನಿಯು ರೈತ ಸದಸ್ಯರ ಬೆಂಬಲದೊಂದಿಗೆ ಇನ್ನಷ್ಷು ಗಟ್ಟಿಗೊಳ್ಳಬೇಕು. ಕಂಪೆನಿಯು ಲಾಭಾಂಶವನ್ನು  ಪಡೆಯಬೇಕು ಎನ್ನುವ ಪೂರ್ವ ಯೋಜನೆಯೊಂದಿಗೆ ಕಾರ್ಕಳದ ರೈತ ಸದಸ್ಯರಿಗೆ ಕಂಪೆನಿಯ ಮುಖೇನ ಕಡಿಮೆ ಬೆಲೆಯಲ್ಲಿ  ಎಲ್ಲಾ ತರಹದ ರಸಗೊಬ್ಬರ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಯಂತ್ರೋಪಕರಣ ಪರಿಕರ ಕಡಿಮೆ ಬಾಡಿಗೆಯಲ್ಲಿ ಉಳುಮೆಯ ಯಂತ್ರ ಕಟವುಯಂತ್ರ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ರೈತ ಸದಸ್ಯರು ಪಡೆಯಬೇಕೆಂದು ಅಂತೋನಿ ಡಿಸೋಜಾ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ನಿರ್ದೇಶಕರಾದ ಕೆ.ಪಿ ಧರಣೇಂದ್ರ,  ಪ್ರವೀಣ್ ಸಾಲ್ಯಾನ್, ಹರೀಶ್ ಅಂಚನ್, ನಾರಾಯಣ್ ಸುವರ್ಣ, ಅನಿಲ್ ಎಸ್.ಪೂಜಾರಿ, ಗಂಗಯ್ಯ ಪೂಜಾರಿ, ಜಯಲಕ್ಷ್ಮಿ ಮುಡಾರು, ವೀಣಾ ನಾಯಕ್ ಹಾಗೂ ಶೋಭಾ  ವೇದಿಕೆಯಲ್ಲಿದ್ದು ಉಪಾಧ್ಯಕ್ಷ ಹರೀಶ್ಚಂದ್ರ ತೆಂಡುಲ್ಕರ್ ಸ್ವಾಗತಿಸಿದರು.  ಸಭೆಯಲ್ಲಿ ಜಮಾ ಖರ್ಚಿನ ವಿವರ ಮತ್ತು  ಅಂತಿಮ ಲೆಕ್ಕ ಪತ್ರ ಮಹಾಸಭೆಯಲ್ಲಿ ಅನುಮೋದನೆಗೊಂಡ ನಂತರ 2019-20ನೇ ಸಾಲಿನ ಬಜೆಟ್ ತಿಳಿಸಲಾಯಿತು. ವಿಶೇಷ ಆಹ್ವಾನಿತರಾಗಿದ್ದ ನವೀನ್‍ಚಂದ್ರ ಜೈನ್ ಹಾಗೂ ಎಪಿಎಂಸಿ ಅಧ್ಯಕ್ಷ ಜಯವರ್ಮ ಜೈನ್ ತಮ್ಮ ಸಲಹೆ ಸೂಚನೆಗಳನ್ನಿತ್ತರು.

ರೈತ ಸದಸ್ಯರ ಕೃಷಿ ಭೂಮಿಯ ಮಣ್ಣು ಪರೀಕ್ಷೆಗಾಗಿ ಎಂಸಿಎಫ್ ವತಿಯಿಂದ ಮಣ್ಣು ಪರೀಕ್ಷೆ ಘಟಕದ ಮುಖೇನ ಮಾಹಿತಿ ಶಿಬಿರ ನಡೆಸಲಾಯಿತು. ಎಂಸಿಎಫ್‍ನ ಪ್ರಾದೇಶಿಕ ವ್ಯವಸ್ಥಾಪಕ  ಡಾ| ಕೆ.ನಿರಂಜನ್  ಮಣ್ಣು ಪರೀಕ್ಷೆಯ ಬಗ್ಗೆ ಹಾಗೂ ರಸಗೊಬ್ಬರ ಅಳವಡಿಕೆಯ ಸವಿಸ್ತಾರವಾದ ಮಾಹಿತಿ ನೀಡಿದರು. ಕಾರ್ಕಳ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಬಿ.ಶ್ರೀನಿವಾಸ್ ರೈತರಿಗೆ ಇಲಾಖಾ ವತಿಯಿಂದ ಲಭಿಸುವ ಸಹಾಯ ಧನದ ಬಗ್ಗೆ ವಿವರಿಸಿದರು.

ನಿರ್ದೇಶಕಿ ವೀಣಾ ನಾಯಕ್ ಅವರ ರೈತ ಗೀತೆಯೊಂದಿಗೆ ಮಹಾಸಭೆ ಆರಂಭಗೊಂಡಿತು. ಗಣ್ಯರು ಮತ್ತು ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ಗಂಗಾಧರ್ ಪಣಿಯೂರು  ವಾರ್ಷಿಕ ಮಹಾಸಭೆಯ ತಿಳುವಳಿಕೆ ಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಿ ಸಭಾ ಕಲಾಪ  ನಿರೂಪಿಸಿದರು. ನಿರ್ದೇಶಕ ಕೆ.ಪಿ ಧರಣೇಂದ್ರ  ಧನ್ಯವಾದ ಸಮರ್ಪಿಸಿದರು.

 

ಅಂಧೇರಿ ಪಶ್ವಿಮ: ಜವಾಬ್ ಸಂಸ್ಥೆಯ ಹದಿನೆಂಟನೇ ವಾರ್ಷಿಕ ಮಹಾಸಭೆ  
2019-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿಎ| ಐ.ಆರ್ ಶೆಟ್ಟಿ ಆಯ್ಕೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.13: ಮಹಾನಗರದಲ್ಲಿನ ಬಂಟ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್ (ಜವಾಬ್) ಸಂಸ್ಥೆ ತನ್ನ18ನೇ ವಾರ್ಷಿಕ ಮಹಾಸಭೆ ಇಂದಿಲ್ಲ್ಲಿ ಶನಿವಾರ ರಾತ್ರಿ ಅಂಧೇರಿ ಪಶ್ವಿಮದಲ್ಲಿನ ಪ್ಯಾಪಿಲಾನ್ ಪಾರ್ಕ್ ಹೊಟೇಲು ಸಭಾಗೃಹದಲ್ಲಿ ಜವಾಬ್‍ನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿಸಿತು. ಮಹಾಸಭೆಯಲ್ಲಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ, ಪ್ರತಿಷ್ಠಿತ ಲೆಕ್ಕ ಪರಿಶೋಧಕ  ಸಿಎ| ಐ.ಆರ್ ಶೆಟ್ಟಿ ಅವರನ್ನು 2019-2021ನೇ ಸಾಲಿನ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು.

ಜವಾಬ್‍ನ ಉಪಾಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಗೌರವ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ,  ಗೌರವ ಕೋಶಾಧಿಕಾರಿ ಅಶೋಕ್‍ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಟಿ.ವಿಶ್ವನಾಥ್ ಶೆಟ್ಟಿ, ಜೊತೆ ಕೋಶಾಧಿಕಾರಿ ಹೆಚ್.ಶೇಖರ್ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದು, ಜಯಪ್ರಕಾಶ್ ಶೆಟ್ಟಿ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನಿತ್ತು ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದರು.
ಸಭೆಯಲ್ಲಿ 2019-21ನೇ ಸಾಲಿನ ಕಾರ್ಯಕಾರಿ ಸಮಿತಿಗೆ 26 ಸದಸ್ಯರ ಆಯ್ಕೆ ನಡೆಸಲ್ಪಟ್ಟಿದ್ದು ನ್ಯಾ| ರತ್ನಾಕರ ವಿ.ಶೆಟ್ಟಿ, ಮೋಹನ್ ಶೆಟ್ಟಿ, ರಮೇಶ್ ಎಂ.ಶೆಟ್ಟಿ, ವಿಜಯ್ ಎನ್.ಶೆಟ್ಟಿ, ಪ್ರಭಾಕರ ಕೆ.ಶೆಟ್ಟಿ, ನ್ಯಾ| ಪ್ರದೀಪ್ ಎ.ಶೆಟ್ಟಿ, ಸುಭಾಷ್ ಶೆಟ್ಟಿ, ಜಗದೀಶ್ ಬಿ.ಶೆಟ್ಟಿ, ಹೆಚ್.ಶೇಖರ್ ಹೆಗ್ಡೆ, ರಾಜೇಶ್ ಬಿ.ಶೆಟ್ಟಿ, ಪಿ.ವಿಶ್ವನಾಥ ಶೆಟ್ಟಿ, ನ್ಯಾ| ಡಿ.ಕೆ ಶೆಟ್ಟಿ, ಸುರೇಂದ್ರ ಕೆ.ಶೆಟ್ಟಿ, ವಾಮನ ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬೋಳ, ಶ್ರೀಧರ ಡಿ.ಶೆಟ್ಟಿ, ಪ್ರವೀಣ್ ಕುಮಾರ್ ಆರ್.ಶೆಟ್ಟಿ, ವೆಂಕಟೇಶ್ ಎನ್.ಶೆಟ್ಟಿ, ಬಿ.ಆರ್ ಪೂಂಜ, ಮಧುಕರ್ ಎ.ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ, ಮಹೇಶ್ ಎಸ್.ಶೆಟ್ಟಿ, ಅಶೋಕ್‍ಕುಮಾರ್ ಶೆಟ್ಟಿ, ಪಿ.ಭಾಸ್ಕರ ಶೆಟ್ಟಿ, ಭಾಸ್ಕರ ಶೆಟ್ಟಿ ಕಾರ್ನಾಡ್, ನ್ಯಾ| ಯು.ಶೇಖರ್ ಶೆಟ್ಟಿ ಆಯ್ಕೆಯಾದರು. ನ್ಯಾ| ಮಾಧವ ಎಂ.ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ನ್ಯಾ| ಗುಣಪಾಲ ಡಿ.ಶೆಟ್ಟಿ ಆಯ್ಕೆಯಾದ ಸದಸ್ಯರ ಯಾದಿ ಪ್ರಕಟಿಸಿ ಶುಭಾರೈಸಿದರು. ನಿರ್ಗಮನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಪುಷ್ಪಗುಪ್ಛವನ್ನಿತ್ತು ನೂತನ ಅಧ್ಯಕ್ಷ ಸಿಎ| ಐ.ಆರ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.

ಸಿಎ| ಐ.ಆರ್ ಶೆಟ್ಟಿ:    
ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ, ಪ್ರತಿಷ್ಠಿತ ಲೆಕ್ಕ ಪರಿಶೋಧಕ ಎಂದೇ ಗುರುತಿಸಿ ಕೊಂಡಿರುವ ಸಿಎ| ಐ.ಆರ್ ಶೆಟ್ಟಿ ಮೂಲತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಇಲ್ಲಿನ ಪಡುಬಿದ್ರಿ ಅಂಜಾರು ಮನೆ ವಿಠಲ್ ಶೆಟ್ಟಿ ಮತ್ತು ಇನ್ನಬಗ್ಗರಗುತ್ತು ಗುಲಾಬಿ ಶೆಟ್ಟಿ ದಂಪತಿ ಸುಪುತ್ರ. ವಿಜಯಾ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾಥಿರ್s. ಜವಾಬ್ ಸಂಸ್ಥೆಯಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಕೋಶಾಧಿಕಾರಿ ಆಗಿ ಬಂಟ್ಸ್ ಸಂಘದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮೂಹ ಪೆÇವಾಯಿ ಇದರ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಇದರ ಗೌರವ ಕೋಶಾಧಿಕಾರಿ ಆಗಿದ್ದ ಇವರು ಪ್ರಸ್ತುತ ಸಮಿತಿಯ ಉಪಾಧ್ಯಕ್ಷರಾಗಿರುವರು. ಅಂತೆಯೇ ರಾಷ್ಟ್ರ ಮಾನ್ಯತೆಯ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ  ಸಲಹಾ ಸಮಿತಿ ಸದಸ್ಯ ಮತ್ತು ಲೆಕ್ಕ ಪರಿಶೋಧಕರೂ ಆಗಿ ಮತ್ತು ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್‍ನ ವಿಶೇಷ ಆಮಂತ್ರಿತ ಸದಸ್ಯರಾಗಿಯೂ ಶ್ರಮಿಸುತ್ತಿದ್ದಾರೆ. ಪತ್ನಿ ಕವಿತಾ ಐಆರ್ ಸುಪುತ್ರಿಯರಾದ ಕು| ಭಕ್ತಿ ಐ.ಆರ್ ಶೆಟ್ಟಿ (ಬಂಟ ಸಮುದಾಯದ ಪ್ರಥಮ ಬಂಟ್ಸ್ ಪೈಲೆಟ್) ಮತ್ತು ಕು| ಕೃತಿ ಐ.ಆರ್ ಶೆಟ್ಟಿ (ಬಂಟ ಸಮುದಾಯದ ಪ್ರಥಮ ಬಂಟ್ಸ್ ಪೈಲೆಟ್), ಜಿತೇಶ್  ಹೆಚ್.ಶೆಟ್ಟಿ ಇವರೊಂದಿಗೆ ಸಾಂಸರಿಕ ಬದುಕು.

ಜವಾಬ್: 
ಸುಮಾರು ಎರಡು ದಶಕಗಳ ಹಿಂದೆ ಮಹಾನಗರ ಮುಂಬಯಿಯ ಪ್ರಸಿದ್ದ ಪ್ರದೇಶವಾದ ಅಂಧೇರಿ ಪರಿಸರದ ಪ್ರತಿಷ್ಠಿತ ಬಂಟ ಮಹಾನೀಯರು ಬಂಟರ ಏಕತೆ, ಭವಿಷ್ಯತ್ತಿನ ಬದುಕು ಮನವರಿಸಿ ಅಸ್ತಿತ್ವಕ್ಕೆ ತಂದ ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್ (ಜವಾಬ್) ಒಂದು ಪರಿಪೂರ್ಣ ಬಂಟ ಪರಿವಾಗಿ ರೂಪುಗೊಂಡಿತ್ತು. ಕರ್ನಾಟಕ ಕರಾವಳಿಯ ತುಳುನಾಡ  ಬಂಟರ ಸಾಂಪ್ರಾದಾಯಿಕ ಉಡುಗೆ, ತೊಡುಗೆ, ಆಹಾರ ಪದ್ಧತಿ,  ಧಾರ್ಮಿಕ ಆಚರಣೆ, ಬಂಟ ಪ್ರಧಾನ ಸತ್ಯದ ದೈವ ಜುಮಾದಿ `ಭಂಡಾರ’ದ ಮಹತ್ವ, ದೈವಾರಾಧನೆ ಇತ್ಯಾದಿಗಳ ಮಹತ್ವಕ್ಕೆ ಒತ್ತುನೀಡಿ ಬಂಟರ ಸಾಂಘಿತ್ವ, ಸಂಸ್ಕಾರ, ಸಂಪ್ರದಾಯ, ಪರಂಪರೆ ಚಿಂತನಾ ಭಾವನೆಯ ಮೂಲಕ ಪರಸ್ಪರ ಪ್ರೀತಿವಾತ್ಸಲ್ಯ ಮೂಡಿಸಿ ಯುವಜನತೆಯನ್ನು ಒಗ್ಗೂಡಿಸುವ ಉದ್ದೇಶದಿಂದ ಸ್ಥಾಪನೆಯಾದ ಜವಾಬ್ ಇಂದು ಯುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ಆ ಮೂಲಕ ಬಂಟ ಸಂಸ್ಕೃತಿಯನ್ನು ಹಳೆ ತಲೆಮಾರಿನಿಂದ ನವ ಪೀಳಿಗೆಯಲ್ಲಿ ರೂಢಿಸಿ ಉಳಿಸಿ ಬೆಳೆಸಲು ಕಳೆದ ಹದಿನೆಂಟು ವರ್ಷಗಳಿಂದ ವಿಭಿನ್ನ ನೆಲೆಗಳಲ್ಲಿ ಶ್ರಮಿಸಿ ವಿಭಿನ್ನ ನೆಲೆಗಳಲ್ಲಿ ಶ್ರಮಿಸಿ ಬಂಟ ಸಂಸ್ಕೃತಿಯನ್ನು ಪರಿಚಯಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




| Special Program in collaboration with Kemmannu Y
View More

Final Journey of Cecilia Menezes( 88 Years ) | LIVE From Kemmannu | UdupiFinal Journey of Cecilia Menezes( 88 Years ) | LIVE From Kemmannu | Udupi
New year Mass | St. Theresa Church, Kemmannu | UdupiNew year Mass | St. Theresa Church, Kemmannu | Udupi
Christman Mass | St. Theresa Church, Kemmannu | UdupiChristman Mass | St. Theresa Church, Kemmannu | Udupi
Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, UdupiSilver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi
Annual Day Calebration 2025 | Carmel English School, KemmannuAnnual Day Calebration 2025 | Carmel English School, Kemmannu
Final Journey Of Francis Paul Quadros (59 Years) | LIVE From UdupiFinal Journey Of Francis Paul Quadros (59 Years) | LIVE From Udupi
Final Journey of Sudeep Sebastian Gordon Martis (55 years) | LIVE from KalmadyFinal Journey of Sudeep Sebastian Gordon Martis (55 years) | LIVE from Kalmady
Final Journey of Tyron Pereira (57 years) | LIVE from Kalmady, UdupiFinal Journey of Tyron Pereira (57 years) | LIVE from Kalmady, Udupi
Final Journey of Lawrence M Lewis (82 years) | LIVE from Milagres, Kallianpur, UdupiFinal Journey of Lawrence M Lewis (82 years) | LIVE from Milagres, Kallianpur, Udupi
Final Journey of Salvadore Fernandes (76 Years) | LIVE from Shirva | UdupiFinal Journey of Salvadore Fernandes (76 Years) | LIVE from Shirva | Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi