Brief University College news with pictures


Guru Prasad
Kemmannu News Network, 19-09-2019 08:41:31


Write Comment     |     E-Mail To a Friend     |     Facebook     |     Twitter     |     Print


‘ಆಸಕ್ತಿ, ತಿಳುವಳಿಕೆಯ ಕೊರತೆಯಿಂದ ಅದ್ಭುತ ಪರಂಪರೆ ನಾಶ’
ವಿವಿ ಕಾಲೇಜಿನಲ್ಲಿ ಇತಿಹಾಸ ಸಂಶೋಧಕ ಡಾ. ಪುಂಡಿಕಾೈ ಗಣಪಯ್ಯ ಭಟ್ ಅಭಿಮತ

ಮಂಗಳೂರು: ಸ್ಥಳೀಯ ಇತಿಹಾಸ ಬಿಟ್ಟು ಹೊರದೇಶಗಳ ಇತಿಹಾಸಕ್ಕೆ ಒತ್ತು ಕೊಟ್ಟಿರುವುದೇ ಇತಿಹಾಸದಲ್ಲಿ ಆಸಕ್ತಿ ಕಳೆದುಹೋಗಲು ಕಾರಣ. ತಿಳುವಳಿಕೆಯ ಕೊರತೆಯಿಂದಾಗಿ ಪೂರ್ವಜರು ಬಿಟ್ಟುಹೋಗಿರುವ ಅದ್ಭುತ ಪರಂಪರೆಯನ್ನು ಕೈಯಾರೆ ನಾಶ ಮಾಡುತ್ತಿದ್ದೇವೆ, ಎಂದು ಇತಿಹಾಸ ಸಂಶೋಧಕ ಡಾ. ಪುಂಡಿಕಾೈ ಗಣಪಯ್ಯ ಭಟ್ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾನಿಲಯ ಮಂಗಳೂರಿನ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗ, ಕರ್ನಾಟಕ ಇತಿಹಾಸ ಅಕಾಡೆಮಿಯ ಸಹಯೋಗದೊಂದಿಗೆ ಬುಧವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ್ದ ‘ಇತಿಹಾಸ ಪರಂಪರೆ ಉಳಿಸಿ ಕಾರ್ಯಕ್ರಮ’ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದ ಪುರಾತತ್ವ ಇಲಾಖೆಯ ಅಧೀನದಲ್ಲಿ ಸುಮಾರು 35,000 ಮತ್ತು ತುಳುನಾಡಿನಲ್ಲೇ 2000 ಕ್ಕೂ ಹೆಚ್ಚು ದೇವಾಲಯಗಳಿವೆ. ಆದರೆ ನಗರೀಕರಣ, ಯಾಂತ್ರೀಕರಣ, ಮೂಢನಂಬಿಕೆಗಳಿಂದ ಅವು ಅಪಾಯದಲ್ಲಿವೆ. ‘ತುಳುನಾಡಿನ ಹಂಪಿ’ ಬಾರ್ಕೂರು ಹಾಳುಹಂಪೆಯಾಗಿದೆ, ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಐತಿಹಾಸಿಕ ಜ್ಞಾನ, ಪ್ರಜ್ಞೆಯ ಕೊರತೆಯಿಂದ ಇತಿಹಾಸ ಪರಂಪರೆ ಅಳಿವಿನಲ್ಲಿದೆ. ಮೊದಲು ನಾವು ನಮ್ಮ, ಸುತ್ತಮುತ್ತಲಿನ ಇತಿಹಾಸ ತಿಳಿದುಕೊಳ್ಳೋಣ. ವಿದ್ಯಾರ್ಥಿಗಳು ದಾಖಲೀಕರಣದ ಮೂಲದ ತಮ್ಮದೇ ಆದ ಕೊಡುಗೆ ನೀಡಬಹುದಾಗಿದೆ, ಎಂದರು.

ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ, ನಾವು ಹಿಂದಿನ ದಾಖಲೆಗಳನ್ನು ಮರೆತು ನಮ್ಮದೇ ಆದ ಇತಿಹಾಸ ಬರೆಯುವುದು ಆತ್ಮಹತ್ಯಾ ತತ್ವವಾಗಬಹುದು, ಎಂದು ಕಳವಳ ವ್ಯಕ್ತಪಡಿಸಿದರು. ಕಾಲೇಜಿನ ಹೊಸ ಪುರಾತತ್ವ ಸ್ನಾತಕೋತ್ತರ ವಿಭಾಗಕ್ಕೆ ಇನ್ನಷ್ಟು ಬಲ ಬೇಕಿದೆ ಎಂದರು. ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಸಿದ್ದರಾಜು ಎಂ.ಎನ್ ನೇತೃತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ 15 ಕಾಲೇಜುಗಳ ಪೈಕಿ ನಗರದ ಸಂತ ಆಗ್ನೇಸ್ ಕಾಲೇಜು ಪ್ರಶಸ್ತಿ ಪಡೆದುಕೊಂಡಿತು. ಪ್ರಬಂಧ ಸ್ಪರ್ಧೆಯಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ಮೊಹಮ್ಮದ್ ರಿಯಾಜ್ ಬಹುಮಾನ ಪಡೆದುಕೊಂಡರು.

ಇತಿಹಾಸ ಮತ್ತು ಪುರಾತತ್ವ ಸ್ನಾತಕೋತ್ತರ ವಿಭಾಗ ಸಂಯೋಜಕ ಡಾ. ಗಣಪತಿ ಗೌಡ ಅತಿಥಿಗಳನ್ನು ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಪಿ. ರಾಜೇಶ್ವರಿ, ಹಿರಿಯ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ, ಡಾ. ಕುಮಾರಸ್ವಾಮಿ ಎಂ, ಡಾ.ಎನ್ ಜಯರಾಜ್, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಸಾಂಪ್ರದಾಯಿಕ ಉಡುಗೆ ಮತ್ತು  ಪೂಕ್ಕಳಂ (ಹೂವಿನ ರಂಗೋಲಿ) ಬಿಡಿಸುವ ಮೂಲಕ ಓಣಂ ಹಬ್ಬವನ್ನು ಆಚರಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Rafael Saldana, St. Joseph Ward (Kodi), Kemmannu.Obituary: Rafael Saldana, St. Joseph Ward (Kodi), Kemmannu.
*ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತೀ ಗರೋಡಿ, ತೋನ್ಸೆ.* *ವಾರ್ಷಿಕ ನೇಮೋತ್ಸವದ ಕರೆಯೋಲೆ**ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತೀ ಗರೋಡಿ,  ತೋನ್ಸೆ.* *ವಾರ್ಷಿಕ ನೇಮೋತ್ಸವದ  ಕರೆಯೋಲೆ*
Land for Sale at Neelavara, Udupi District.Land for Sale at Neelavara, Udupi District.
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 115Veez Konkani Illustrated Weekly e-Magazine # 115
Milagres English Medium, School, KallianpurMilagres English Medium, School, Kallianpur
Open Air Dance and Music Festival at Aryan Resorts, near Kemmannu on 7th March.Open Air Dance and Music Festival at Aryan Resorts, near Kemmannu on 7th March.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India