Brief University college news with picturews


Guru Prasad T N
Kemmannu News Network, 03-10-2019 09:04:55


Write Comment     |     E-Mail To a Friend     |     Facebook     |     Twitter     |     Print


ಗಾಂಧೀ ತತ್ವಪಾಲನೆ ನಮ್ಮಿಂದಲೇ ಆರಂಭವಾಗಲಿ: ಪ್ರೊ. ಬಿ.ಎ ವಿವೇಕ ರೈ

ಮಂಗಳೂರು: ಗಾಂಧೀಜಿಯವರ ಕನಸಿನ ಭಾರತದಲ್ಲಿ ಹಿಂಸೆ ಮತ್ತು ಲೋಭಕ್ಕೆ ಅವಕಾಶವಿಲ್ಲ. ಅಹಿಂಸೆಯೇ ಪರಮ ಧರ್ಮವಾಗಿತ್ತು. ಗಾಂಧಿ ತತ್ವಗಳನ್ನು ಸಮಾಜಕ್ಕೆ ಬೋಧಿಸುವ ಮೊದಲು ನಮ್ಮಿಂದಲೇ ಅದರ ಪಾಲನೆ ಆರಂಭವಾಗಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ ವಿವೇಕ ರೈ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ನಡೆದ ಗಾಂಧಿ ಜಯಂತಿ ಆಚರಣೆ, ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ವಾರ್ಷಿಕ ಗೌರವ 2019 ಪ್ರಧಾನ, ಗಾಂಧಿ 150 ರ ಅಂಗವಾಗಿ ನಡೆದ ವಿಶೇಷ ಉಪನ್ಯಾಸಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನೈತಿಕ ಅರ್ಥಶಾಸ್ತ್ರವಿಲ್ಲದೆ, ಸಮಾನತೆ ದೊರೆಯದೆ, ರಾಮರಾಜ್ಯ ಸ್ಥಾಪನೆ ಸಾಧ್ಯವಿಲ್ಲ. ಎಲ್ಲಾ ವಿಷಯಗಳನ್ನು ಕುರುಡಾಗಿ ಒಪ್ಪುವ ಬದಲು ತರ್ಕಿಸಲು ಕಲಿಯಬೇಕು. ಎಲ್ಲರಿಗೂ ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸ್ವಾತಂತ್ರ್ಯಅಗತ್ಯ, ಎಂದರು.

ಉದ್ಘಾಟನಾ ಭಾಷಣ ಮಾಡಿದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಸರ್ವರಿಂದಲೂ ಗೌರವಿಸಲ್ಪಟ್ಟ ಗಾಂಧೀಜಿ ಇಂದಿಗೂ ಪ್ರಸ್ತುತ. ಆದರೆ ಅವರ ತತ್ವಗಳು ನಮಗೆ ಭಾರವಾಗುತ್ತಿವೆ, ದ್ವಂದ್ವದಲ್ಲಿ ಬದುಕುತ್ತಿದ್ದೇವೆ. ಹೀಗಾದರೆ ಮುಂದಿನ ಜನಾಂಗ ಅವರ ತತ್ವಗಳನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲುದು, ಎಂಬ ಆತಂಕ ವ್ಯಕ್ತಪಡಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎ. ಎಮ್. ಖಾನ್, ಗಾಂಧೀಜಿಯವರ ಬಹುತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೊಬೈಲ್ ಯುಗದಲ್ಲಿ ಇನ್ನೊಬ್ಬರ ನೋವಿಗೆ ಸ್ಪಂದಿಸುವುದನ್ನು ಮರೆಯಬಾರದು. ಸಮಾಜ ಹಾಳಾಗಿದೆ ಎಂದು ಮರುಗುವ ಬದಲು ಮೊದಲು ನಾವು ಸರಿಯಾಗಿರೋಣ, ಎಂದರು. ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ.ಎ, ಇಂದಿನ ಜನಾಂಗಕ್ಕೆ ವೈಭವೀಕರಣ ರುಚಿಸುತ್ತದೆ, ಸತ್ಯ ಒಪ್ಪುವುದಿಲ್ಲ. ಗಾಂಧಿಯವರ ಶಾಂತಿ, ಸೌಹಾರ್ಧತೆಯ ಮಂತ್ರ ಆಕರ್ಷಕವಾಗಿ ಕಾಣುವುದಿಲ್ಲ. ಆದರೂ ಭರವಸೆ ಕುಂದಿಲ್ಲ, ಎಂಬ ಆಶಾವಾದ ವ್ಯಕ್ತಪಡಿಸಿದರು.

ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಸ್ಮಾಯಿಲ್ ಎನ್, ಪ್ರತಿಷ್ಠಾನದಲ್ಲಿ ರಾಜಕೀಯವಿಲ್ಲ. ಗಾಂಧಿಯ ಮೌಲ್ಯಗಳನ್ನು ಕಿರಿಯರಿಗೆ ತಲುಪಿಸುವ ಗುರಿಯೊಂದಿಗೆ ಒಟ್ಟು 10 ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ ನಡೆದಿದೆ. ಗಾಂಧೀಜಿಯವರ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ದೊರಕಿಸುವ ಆಶಯಕ್ಕೆ ಇದು ಪೂರಕವಾಗಿದೆ ಎಂದರು. ಈ ಬಾರಿಯ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವ 2019 ನ್ನು ಹಿರಿಯ ವಿಧ್ವಾಂಸ ಪ್ರೊ. ಅಮೃತ ಸೋಮೇಶ್ವರರಿಗೆ ಅವರ ನಿವಾಸದಲ್ಲಿ ನೀಡಿ ಗೌರವಿಸಲಾಯಿತು.

ಪ್ರತಿಷ್ಠಾನದ ಉಪಾಧ್ಯಕ್ಷ ಇಬ್ರಾಹಿಂ ಕೋಡಿಚಾಲ್, ಉಪಾಧ್ಯಕ್ಷ ಬಿ. ಪ್ರಭಾಕರ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಎನ್ಎಸ್ಎಸ್ ಘಟಕದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

‘ನಿಜವಾದ ಮನುಷ್ಯರಾಗಿ ಬದುಕಿದಾಗ ಮಾತ್ರ ಸ್ವರಾಜ್ಯ ಸಾಧ್ಯ’
ಅಂತರ ಕಾಲೇಜು ವಿಚಾರ ಸಂಕಿರಣದಲ್ಲಿ ಕವಿ ಪ್ರೊ. ಸತ್ಯನಾರಾಯಣ ರಾವ್ ಅಣತಿ ಅಭಿಮತ

ಮಂಗಳೂರು: ಮಹಾತ್ಮ ಗಾಂಧೀಜಿ ಸಂತನಿಗಿಂತಲೂ ಮಿಗಿಲು. ಸ್ವಾತಂತ್ರ್ಯದ ತುಡಿತದ ನಡುವೆಯೂ 20 ನೇ ಶತಮಾನದ ಆರಂಭದಲ್ಲೇ ಈ ದೇಶದ ಸಂಸ್ಕೃತಿ, ಸಮಾಜ, ಆರ್ಥಿಕತೆಯ ಬಗ್ಗೆ ಚಿಂತಿಸಿದವರು ಅವರು, ಎಂದು ಎಂದು ಖ್ಯಾತ ಕವಿ ಪ್ರೊ. ಸತ್ಯನಾರಾಯಣ ರಾವ್ ಅಣತಿ ಹೇಳಿದರು.

ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಹಿಂದ್ ಸ್ವರಾಜ್’ ಎಂಬ ಒಂದು ದಿನದ ಅಂತರ ಕಾಲೇಜು ವಿಚಾರ ಸಂಕಿರಣದ ಆಶಯ ಭಾಷಣದಲ್ಲಿ ಅವರು, ಈ ಭೂಮಿಯಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಮನುಷ್ಯನ ದುರಾಸೆಯೇ ಆತನ ವಿನಾಶಕ್ಕೆ ಕಾರಣವಾಗಬಲ್ಲುದು ಎಂಬ ತತ್ವಜ್ಞಾನ ಬೋಧಿಸಿದವರು ಗಾಂಧೀಜಿ.  ಅವರ ತತ್ವಗಳನ್ನು ಮೈಗೂಡಿಸಿಕೊಳ್ಳದೇ ನಾವು ವಿನಾಶದ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು. “ಜಾತಿ, ಧರ್ಮದ ಹಂಗಿಲ್ಲದೆ ಮನುಷ್ಯರಾಗಿ ಬದುಕಿದಾಗ ಮಾತ್ರ ನಿಜವಾದ ಸ್ವರಾಜ್ಯ ಸಾಧ್ಯ”, ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ, ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ, ಒಂದು ಚಿಂತನೆ. ನಾಗರೀಕತೆಯನ್ನು ಬದಲಿಸಿಕೊಳ್ಳದಿದ್ದರೆ, ಪ್ರೀತಿ ಇಲ್ಲದೇಹೋದರೆ ಜಗತ್ತಿನಲ್ಲಿ ಬದಲಾವಣೆ ಸಾಧ್ಯವಿಲ್ಲ. ನಮ್ಮ ಚಿಂತನೆ- ಆಲೋಚನೆಗಳನ್ನು ಸ್ವಚ್ಛಗೊಳಿಸದೆ, ಜಗತ್ತನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ, ಎಂದರು.

ಅಂತರ್ ಕಾಲೇಜು ವಿಚಾರ ಸಂಕಿರಣದಲ್ಲಿ  17 ಕಾಲೇಜುಗಳ ಸುಮಾರು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪ್ರಬುದ್ಧ ವಿಚಾರಧಾರೆ ಗಮನ ಸೆಳೆಯಿತು. ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದುಕೊಂಡರು. ಸಾಹಿತಿ, ಚಿಂತಕ ವಾಸುದೇವ ಉಚ್ಚಿಲ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಯಶು ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi: Traffic congestion and dangers to pedestria
View More

Obituary: Lilly D’Sa (66), Milagres, KallianpurObituary: Lilly D’Sa (66), Milagres, Kallianpur
Hottetumba Fish Court” inaugurated at UdupiHottetumba Fish Court inaugurated at Udupi
Congratulations to Vishu ShettyCongratulations to Vishu Shetty
CongratulationsCongratulations
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India