Brief Mumbai, Mangalore News with pictures


Rons Bantwal
Kemmannu News Network, 20-10-2019 15:25:18


Write Comment     |     E-Mail To a Friend     |     Facebook     |     Twitter     |     Print


ನ.02: ಬಿಲ್ಲವ ಭವನದಲ್ಲಿ ಗಿರ್‍ಗಿಟ್ ಗಿರಿಧರೆ ತುಳು ನಾಟಕ ಪ್ರದರ್ಶನ - ಎಸ್‍ಬಿಬಿಪಿ ಗರೋಡಿ ಸೇವಾ ಟ್ರಸ್ಟ್ (ಮುಂಬಯಿ)ನಿಂದ ವಿದ್ಯಾನಿಧಿ ಪ್ರದಾನ ಕಾರ್ಯಕ್ರಮ

ಮುಂಬಯಿ, ಅ.18: ಶ್ರೀ ಬ್ರಹ್ಮಬೈದರ್ಕಳ ಪಂಚಧೂಮವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸಂಸ್ಥೆಯು ವಿದ್ಯಾನಿಧಿ ಸಲುವಾಗಿ ಇದೇ ಬರುವ ನವೆಂಬರ್ 02ರ ಶನಿವಾರ ಸಂಜೆ 3.30 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, ರಂಗ್‍ದ ರಾಜೆ ಲ| ಸುಂದರ್ ರೈ ಮಂದಾರ ನಿರ್ದೇಶಿಸಿ ಪ್ರಧಾನ ಭೂಮಿಕೆಯಲ್ಲಿ ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ಸಾರಥ್ಯ ಮತ್ತು ಕುಸಲ್ದರಸೆ ನವೀನ್ ಡಿ.ಪಡೀಲ್ ಸಹಕಾರದಲ್ಲಿ  ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಬಳಗವು ಅಭಿನಯಿಸುವ `ಗಿರ್‍ಗಿಟ್ ಗಿರಿಧರೆ’ ತುಳು ನಾಟಕ ಪ್ರದರ್ಶನ ಆಯೋಜಿಸಿದೆ.


ಅಂದು ಸಂಜೆ 3.00 ಗಂಟೆಗೆ ಎಸ್‍ಬಿಬಿಪಿ ಗರೋಡಿ ಸೇವಾ ಟ್ರಸ್ಟ್ (ಮುಂಬಯಿ) ವತಿಯಿಂದ ಗರೋಡಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ವಾರ್ಷಿಕ ವಿದ್ಯಾನಿಧಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ತೋನ್ಸೆಯ ಹಿರಿಯ ಸಾಧಕರನ್ನು ಸನ್ಮಾನಿಸಲಾಗು ವುದು ಹಾಗೂ ಗತಸಾಲಿನಲ್ಲಿ ಎಸ್‍ಎಸ್‍ಸಿ-ಹೆಚ್‍ಎಸ್‍ಸಿ ಪರೀಕ್ಷೆಯಲ್ಲಿ 70%ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್ü ವೇತನ ಪ್ರದಾನಿಸಲಾಗುವುದು. ಮಕ್ಕಳಿಗಾಗಿ ಛದ್ಮವೇಶ ಸ್ಪರ್ಧೆ, ಪ್ರತಿಭಾ ಪ್ರದರ್ಶನ ಜೊತೆಗೆ ಸಂಘದ ಸದಸ್ಯರು, ಮಕ್ಕಳು ವಿವಿಧ ಮನೋರಂಜನಾ ಇತ್ಯಾದಿ ಕಾರ್ಯಕ್ರಮಗಳನ್ನೂ  ಪ್ರಸ್ತುತ ಪಡಿಸಲಿದ್ದಾರೆ. ಆ ಬಳಿಕ  `ಗಿರ್‍ಗಿಟ್ ಗಿರಿಧರೆ’ ನಾಟಕ ಪ್ರದರ್ಶನಗೊಳ್ಳಲಿದೆÉ.

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್, ಮುಂಬಯಿ ಕಾರ್ಯಕಾರಿ ಸಮಿತಿಯಲ್ಲಿ ನಿತ್ಯಾನಂದ ಡಿ.ಕೋಟ್ಯಾನ್ (ಅಧ್ಯಕ್ಷರು), ಡಿ.ಬಿ ಅವಿೂನ್, ಸಿ.ಕೆ ಪೂಜಾರಿ, ವಿಶ್ವನಾಥ ತೋನ್ಸೆ (ಉಪಾಧ್ಯಕ್ಷರುಗಳು), ಸಂಜೀವ ಪೂಜಾರಿ ತೋನ್ಸೆ (ಗೌ| ಪ್ರ| ಕಾರ್ಯದರ್ಶಿ), ರವಿರಾಜ್ ಕಲ್ಯಾಣ್ಫುರ್ (ಗೌ| ಪ್ರ| ಕೋಶಾಧಿಕಾರಿ), ಕರುಣಾಕರ ಬಿ.ಪೂಜಾರಿ (ಜೊತೆ ಕಾರ್ಯದರ್ಶಿ), ವಿಜಯ್ ಸನಿಲ್ (ಜೊತೆ ಕೋಶಾಧಿಕಾರಿ), ಅಶೋಕ್ ಎಂ.ಕೋಟ್ಯಾನ್ ಥಾಣೆ, ಆನಂದ್ ಜತ್ತನ್, ಸೋಮ ಸುವರ್ಣ, ವಿಠಲ ಎಸ್.ಪೂಜಾರಿ, ರೂಪ್‍ಕುಮಾರ್ ಕಲ್ಯಾಣ್ಪುರ್, ಸುರೇಶ್ ಅಂಚನ್, ಸದಾನಂದ ಬಿ.ಪೂಜಾರಿ, ವಿಜಯ್ ಪಾಲನ್, ಕೃಷ್ಣ ಪಾಲನ್ (ಕಾರ್ಯಕಾರಿ ಸಮಿತಿ ಸದಸ್ಯರುಗಳು) ಸಮಿತಿಯ ಹಿರಿಯರಾದ ಶಂಕರ್ ಸುವರ್ಣ, ವಿ.ಸಿ ಪೂಜಾರಿ, ಗೋಪಾಲ್ ಪಾಲನ್, ಲಜ್ಹಾರ್ ಟಿ.ಮುತ್ತಪ್ಪ ಕೋಟ್ಯಾನ್,  ಲಕ್ಷಿ ್ಮೀ ದಿವಾಕರ್ ಅಂಚನ್ ಅವರ ಸಲಹೆಯಂತೆ ಸೇವಾ ನಿರತರಾಗಿದ್ದಾರೆ.

ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಉದ್ದೇಶಗಳನ್ನಿರಿಸಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗರೋಡಿ ಸೇವಾ ಟ್ರಸ್ಟ್ ಸರ್ವ ಪದಾಧಿಕಾರಿಗಳೊಂದಿಗೆ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ  ಈ ಮೂಲಕ ವಿನಂತಿಸಿದ್ದಾರೆ.

ಶ್ರೀಮತಿ ಯಶವಂತಿ ಸುವರ್ಣರಿಗೆ ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ
ಮುಂಬಯಿ, ಅ.19: ಉಡುಪಿ ಜಿಲ್ಲೆಯ ಕಾರ್ಕಳದ ನಕ್ರೆಯವರಾದ ಯಶವಂತಿ ಸದಾಶಿವ ಸುವರ್ಣ ಇವರಿಗೆ ಅರ್ಹವಾಗಿಯೇ ಇತ್ತೀಚೆಗೆ ಉಡುಪಿಯಲ್ಲಿ `ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ’ ಪ್ರದಾನಿಸಿ ಗೌರವಿಸಲಾಯಿತು. ಯುವವಾಹಿನಿ ಉಡುಪಿ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ತುಳುಕೂಟದ ಗೌರವ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದ್ದು, ಡಾ| ದುಗ್ಗಪ್ಪ ಕಜೆಕಾರ್ ಅಭಿನಂದನಾ ಭಾಷಣ ಮಾಡಿದರು. ಯುವವಾಹಿನಿ ಜಿಲ್ಲಾಧ್ಯಕ್ಷ ನಾರಾಯಣ ಬಿ.ಎಸ್, ಕೇಂದ್ರ ಸಮಿತಿ ಉಪಾಧ್ಯಕ್ಷ ಉದಯ ಅಮೀನ್, ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ, ಜಾನಪದ ವಿದ್ವಾಂಸ ಬನ್ನಂಜೆ  ಬಾಬು ಅಮೀನ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಯಶವಂತಿ ಸದಾಶಿವ ಸುವರ್ಣ:
ಸುಮಾರು 2 ದಶಕಗಳ ಕಾಲ ಮುಂಬಾಯಿಯಲ್ಲಿ ನೆಲೆ ನಿಂತು ಸಾಹಿತ್ಯ ರಚನೆಯಲ್ಲಿ ತೊಡಗಿಸಿ ಕೊಂಡವರು.  ಆ ಸಂದರ್ಭದಲ್ಲಿ ಅವರ ಕತೆಗಳು ನವಭಾರತ, ಕೃಷಿಕರ ಸಂಘಟನೆ, ಜನಪ್ರಗತಿ, ಪ್ರಜಾಮತ, ಮೊಗವೀರ ಮುಂತಾದ ಪತ್ರಿಕೆಗಳಲ್ಲಿ  ಪ್ರಕಟಗೊಳ್ಳುತ್ತಿದ್ದವು. 1970-80ರ ದಶಕದಲ್ಲಿ  ಇವರ ಅನೇಕ  ಸಣ್ಣ ಕತೆಗಳು ಈ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವರದಕ್ಷಿಣೆಯ ಕುರಿತಾದ ಇವರ ಪ್ರಥಮ ಲೇಖನವೊಂದು ನವಭಾರತದಲ್ಲಿ 60 ನೆಯ ದಶಕದಲ್ಲಿ ಪ್ರಕಟಗೊಂಡಾಗ ಅನೇಕರು ಮೆಚ್ಚುಗೆಯನ್ನು ಸೂಚಿಸಿದ್ದರು. ತುಳು-ಕನ್ನಡದಲ್ಲಿ ಬರೆಯುವ ಶ್ರ್ರೀಮತಿ ಯಶವಂತಿ ಸುವರ್ಣರು ಎರಡು ಸಣ್ಣ ಕತೆಗಳ ಸಂಕಲನವನ್ನು ಹೊರ ತಂದಿದ್ದಾರೆ. ಆ ಹೆಣ್ಣು ನಾಯಿಯ ಆತ್ಮಕತೆ (1986)  ಮತ್ತು ದಾರಿ (1990).  ಪಶ್ಚಿಮಕ್ಕೆ ವಾಲಿದ ಸೂರ್ಯ  ಆತ್ಮಕತೆಯನ್ನು ಪ್ರಕಟಿಸಿದ್ದಾರೆ (2002). ಮೋಡ ಚದುರಿತು ಇವರ ಅಪ್ರಕಟಿತ ಕಾದಂಬರಿ. ಇವರ ಇತರ ಪುಸ್ತಕಗಳು- ದೇಯಿ ಬೈದೆತಿ (ತುಳು) (ಇದರ ಇಂಗ್ಲೀಷ್ ಭಾಷಾಂತರ ಪೆÇ್ರ| ಎಸ್.ಎನ್.ಡಿ ಪೂಜಾರಿ), ಮಾಯಂದಾಳ್ ಜಾನಪದ ಕೃತಿ ತುಳು-ಕನ್ನಡ-ಇಂಗ್ಲೀಷ್ ಮೂರು ಭಾಷೆಗಳಲ್ಲಿ ಪ್ರಕಟ ಗೊಂಡಿವೆ. ಅಂಕಣದೊಳಗೆ ಮಹಿಳೆ, ಎಳೆಯರಿಗಾಗಿ ಅಬ್ದುಲ್ ಕಲಾಂ, ಆ ಗೋಳಿದ ಮರ, ಶ್ರೀ ಕ್ಶೇತ್ರ ಪಡ್ಯ, ಅನುಭವಾಮ್ರತ ಇವರ ಇತರ ಕೃತಿಗಳು. ಜನಬಿಂಬ, ಉದಯವಾಣಿ, ಅಕ್ಷಯದಲ್ಲಿಯೂ ಕತೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಅಲ್ಲದೆ ಬಿಡಿ ಲೇಖನಗಳು ಅನೇಕ ಸ್ಮರಣ ಸಂಚಿಕೆಗಳಲ್ಲಿಯೂ ಪ್ರಕಟ ಗೊಂಡಿವೆ.

ಬರವಣಿಗೆಯ ಜೊತೆಗೆ ಕೃಷಿ ಕಾರ್ಯ, ಸಾಮಾಜಿಕ- ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿರುವ ಮಹಿಳೆ. ಒರ್ವ ಸಂವೇದನಾಶೀಲ ಮಹಿಳೆ ಯಾಗಿ ಅನೇಕ ಜನಪರ ಕಾರ್ಯಗಳನ್ನು ನಡೆಸಿದ್ದಾರೆ. ತಮ್ಮ ಕೃಷಿ ಕೆಲಸಗಾರರಿಗಾಗಿ ಮನೆಯಲ್ಲಿ  ವಯಸ್ಕರ ಶಿಕ್ಷಣ ಕೇಂದ್ರ ತೆರೆದು ರಾತ್ರಿ 7-9ರವರೆಗೆ ಶಿಕ್ಷಣ ನೀಡಿ ಕ್ರತಾರ್ಥರಾದವರು. ನಕ್ರೆಯಲ್ಲಿ ಹೈಸ್ಕೂಲು ಇಲ್ಲದನ್ನು ಗಮನಿಸಿ ಶಾಲೆಯನ್ನು ಆರಂಭಿಸುವಲ್ಲಿ ದುಡಿದವರಲ್ಲಿ ಮೊದಲಿಗರು. ಅನೇಕ ವರ್ಷಗಳ ಕಾಲ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶಿಕ್ಷಕರಿಗೆ ಸಂಬಳವನ್ನೂ ನೀಡುತ್ತಿದ್ದುದನ್ನು ಊರವರು ನೆನಪಿಸಿಕೊಳ್ಳುತ್ತಾರೆ. ಎರಡು ಬಾರಿ ಪಂಚಾಯತ್ ಸದಸ್ಯರಾಗಿ, ಉಪ ಪ್ರಧಾನರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ. ನೂರಾರು ಸೂರಿಲ್ಲದ ಬಡಬಗ್ಗರಿಗೆ ಮನೆ ಒದಗಿಸಿಕೊಡುವಲ್ಲಿ, ವಿಧ್ಯುತ್ ದೀಪ ಒದಗಿಸಿಕೊಡುವಲ್ಲಿ, ನ್ಯಾಯ-ತೀರ್ಮಾನ ಮಾಡುವಲ್ಲಿ ಯಶಸ್ವಿಯಾದವರು. ಯುವ ಶಿಕ್ಷಣಾಥಿರ್üಗಳಿಗೆ ಪೆÇ್ರ್ರೀತ್ಸಾಹ ಧನ ನೀಡುತ್ತಿದ್ದುದನ್ನು ಅತ್ಯಂತ ಗೌರವದಿಂದ ನೆನಪಿಸಿಕೊಳ್ಳುತ್ತಾರೆ ಅವರಿಂದ ಪ್ರೇರಣೆ ಪಡೆದು ಯಶಸ್ವಿಯದವರು.

ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಆರಂಭಗೊಂಡಾಗ ಅದರ ಏಕೈಕ ಮಹಿಳಾ ಸದಸ್ಯೆಯಾಗಿ ನೇಮಕಗೊಂಡಿದ್ದರು. ಕರಾವಳಿ ಲೇಖಕಿ-ವಾಚಕಿಯರ ಸಂಘ, ಕಾರ್ಕಳ ಸಾಹಿತ್ಯ ಬಳಗದಲ್ಲಿ ಸಕ್ರೀಯವಾಗಿ ಕಾಣಿಸಿಕೊಂಡವರು.ಯಾವುದೆ ಸದ್ದುಗದ್ದಲವಿಲ್ಲದೆ, ಎಲೆಮರೆಕಾಯಿಯಾಗಿ ನಕ್ರೆಯಲ್ಲಿ ನೆಲೆನಿಂತು ತಮ್ಮ ನಿವ್ರತ್ತ ಜೀವನವನ್ನು ಸಾಗಿಸುತ್ತಿರುವ ಶ್ರೀಮತಿ ಯಶವಂತಿ ಸುವರ್ಣರಿಗೆ ಇದೀಗ 78ರ ಹರೆಯ (31-01-1941). ಇಬ್ಬರು ಉಪನ್ಯಾಸಕಿ ಪುತ್ರಿಯರನ್ನು  ಹೊಂದಿರುವ ಯಶವಂತಿ ಸುವರ್ಣರು,  ದಿ| ಸದಾಶಿವ ಎಂ.ಸುವರ್ಣರ ಧರ್ಮಪತ್ನಿ. ಈ ಹಿಂದೆ ಡಾ| ಅಮೃತ ಸೋಮೇಶ್ವರ, ಪೆÇ್ರ| ಬಿ.ಎ ವಿವೇಕ ರೈ, ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್, ಪೆÇ್ರ| ಎ.ವಿ ನಾವಡ, ಮುದ್ದು ಮೂಡುಬೆಳ್ಳೆ, ಯು.ಪಿ ಉಪಾಧ್ಯಾಯ ದಂಪತಿಗಳ ಸಾಲಿನಲ್ಲಿ ಇದೀಗ ಯಶವಂತಿ ಸುವರ್ಣ ಸೇರಿರುವುದು ಅಭಿಮಾನದ ಸಂಗತಿ. 

ಬಿಎಸ್‍ಕೆಬಿಎ ಆಶ್ರಯ ವಾರ್ಷಿಕೋತ್ಸವ-ಜ್ಯೇಷ್ಠ ನಾಗರಿಕರ ದಿನಾಚರಣೆ  `ಆಶ್ರಯ ಸ್ಟಾರ್ ಅವಾರ್ಡ್’ ಪ್ರದಾನ-ನೃತ್ಯ-ದಾಂಡಿಯಾ ಕಾರ್ಯಕ್ರಮ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಅ.17:ಬಿಎಸ್‍ಕೆಬಿ ಎಸೋಸಿಯೇಶನ್ (ಗೋಕುಲ) ಸಾಯನ್  ತನ್ನ ಅಮೃತ ಮಹೋತ್ಸವದ ಸವಿನೆನಪಿಗಾಗಿ ನೇರೂಲ್ ಸೀವುಡ್ಸ್‍ನಲ್ಲಿ  ಸ್ಥಾಪಿಸಿದ ಹಿರಿಯ ನಾಗರಿಕರ ಆಶ್ರಯಧಾಮ  `ಆಶ್ರಯ’ದ ವಾರ್ಷಿಕೋತ್ಸವ ಸಮಾರಂಭ ಹಾಗೂ ಜ್ಯೇಷ್ಠ ನಾಗರಿಕರ ದಿನಾಚರಣೆಯನ್ನು ಕಳೆದ  ರವಿವಾರ (ಅ.13) ಆಶ್ರಯದಲ್ಲಿ ಜರಗಿಸಿತು.  

ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಡಾಲ್ಟನ್ ಕ್ಯಾಪಿಟಲ್ ಆಡ್ವೈಸರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಯು.ಆರ್ ಭಟ್, ವೀ ಕ್ಲಬ್ ಸಂಸ್ಥಾಪಕರಾದ ಕವಲ್ ರೇಖಿ ಮತ್ತು ಸರೋಜಾ ರೇಖಿ  ಹಾಗೂ  ಆಶ್ರಯದ ಹಿರಿಯ ನಾಗರಿಕರು ಉಪಸ್ಥಿತರಿದ್ದು ಜ್ಯೋತಿ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಇದೇ ಶುಭಾವಸರದಲ್ಲಿ ಜಗದೀಶ್  ಆಚಾರ್ಯ ತಮ್ಮ ಮಾತೃಶ್ರೀ ದಿ| ರತ್ನಾ ಆಚಾರ್ಯ ಅವರ ಸ್ಮಾರಣಾರ್ಥ ಸ್ಥಾಪಿಸಿದ `ಆಶ್ರಯ ಸ್ಟಾರ್ ಅವಾರ್ಡ್’  ಬಗ್ಗೆ ತಿಳಿಸಿದ ಬಳಿಕ   2019ನೇ ಸಾಲಿನ (ಪ್ರಸಕ್ತ ವರ್ಷದ) ಪುರಸ್ಕಾರನ್ನು  ಅನ್ನಪೂರ್ಣ ರಾವ್  ಮತ್ತು  ನಾಗರಾಜ್ ಅವರಿಗೆ  ಪ್ರದಾನಿಸಿದರು.

ಯು.ಆರ್ ಭಟ್ ಮಾತನಾಡ್ತಿ ಬಾಳ ಸಂಜೆಯಲ್ಲಿರುವ ಹಿರಿಯರು  ಗೌರವಯುತರಾಗಿ,  ನೆಮ್ಮದಿಯಾಗಿ ಬಾಳುವಂತೆ  ಅನುಕೂಲ ಕಲ್ಪಿಸಿಕೊಟ್ಟು ತನ್ನ ಸಾಮಾಜಿಕ ಪ್ರಜ್ಞೆಯನ್ನು ಮೆರೆದ   ಬಿಎಸ್‍ಕೆಬಿ ಸಂಸ್ಥೆಯ  ಪದಾಧಿಕಾರಿಗಳ ಪ್ರಯತ್ನ ಅತ್ಯಂತ ಸ್ತುತ್ಯರ್ಹ ಅನ್ನುತ್ತಾ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ  ಪಡಿಸಿದ ಹಿರಿಯ ನಾಗರಿಕರನ್ನು  ಅಭಿನಂದಿಸಿದರು. 

ಆಶ್ರಯದಲ್ಲಿ ಈಗಾಗಲೇ ಹಿರಿಯರಿಗೆ ಬೇಕಾದ ಮೂಲಭೂತ ಅಗತ್ಯತೆಗಳನ್ನು ನಾವು ಒದಗಿಸಿದ್ದರೂ, ಈಗಿರುವ ಕಟ್ಟಡದಲ್ಲಿ ಇನ್ನೂ ಎರಡು ಮಹಡಿ ವಿಸ್ತರಿಸಿ ಫಿಸಿಯೋ ಥೆರಪಿ ಮುಂತಾದ ವೈದ್ಯಕೀಯ ಸೌಲಭ್ಯಗಳನ್ನು ಇಲ್ಲೇ ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ.  ಗೋಕುಲ ಪುನ:ರ್ ನಿರ್ಮಾಣದ  ಕಾರ್ಯ ಪೂರ್ಣಗೊಂಡ ನಂತರ ಈ ಕೆಲಸ ಕೈಗೆತ್ತಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಸರ್ವರ ತುಂಬು ಸಹಕಾರದ  ಅಗತ್ಯವಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಸುರೇಶ್ ರಾವ್ ಕೋರಿದರು.

ವೀಕ್ಲಬ್ ಆಫ್ ವಸಂತ್ ವಿಹಾರ್‍ನ ಡಾ| ಅರುಣ್ ರಾವ್, ಅಶೋಕ್ ಮೇಲ್ಮನೆ, ಸವಿತಾ ನಾಯಕ್   ಪ್ರಾಯೋಜಕತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶೈಲಿನಿ ರಾವ್,  ಕೋಶಾಧಿಕಾರಿ ಹರಿದಾಸ್ ಭಟ್,  ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಉಪಸ್ಥಿತರಿದ್ದು  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಲಿಜಬೆತ್ ಪರೇರಾ ಪಂಡಿತ್, ಫರಾಶಾ ಕವರಾನ ಮತ್ತು ಹರ್ಷಿತಾ ಗೋವಿಂದಾನಿಯವರ ನೃತ್ಯ ಸಂಯೋಜನೆಯಲ್ಲಿ ಆಶ್ರಯದ ಹಿರಿಯ ನಾಗರಿಕರು,  ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿ ಸಮ್ಮಿಶ್ರ  ನೃತ್ಯ ಕಾರ್ಯಕ್ರಮ ಖಯಾಲಿ ಪುಲಾವ್ ಮತ್ತು ದೇಸಿ ತಡ್ಕಾ ಸಾದರ ಪಡಿಸಿದರು. 60 ರಿಂದ 95 ವರ್ಷದ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಯಬದ್ಧವಾಗಿ ಹೆಜ್ಜೆ ಹಾಕಿ ನರ್ತಿಸಿ ಪ್ರೇಕ್ಷಕರ ಮನರಂಜಿಸಿದ ರು. ಯುವ ವಿಭಾಗವು ಜರಗಿದ ವಾರ್ಷಿಕ ದಾಂಡಿಯಾ ಕಾರ್ಯಕ್ರಮ ಆಯೋಜಿಸಿದ್ದು, ನೂರಾರು ಹಿರಿ ಕಿರಿಯ ಸದಸ್ಯರು ಪಾಲ್ಗೊಂಡರು. ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.  

ಆಶ್ರಯ ನಿವಾಸಿ ಧರ್ಮಾ0ಬಾಳ್ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷರಾದ  ವಾಮನ್ ಹೊಳ್ಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಿತ್ರಾ ಮೇಲ್ಮನೆ ಅತಿಥಿüಗಳನ್ನು ಪರಿಚಯಿಸಿದರು. ಡಾ| ಸುರೇಶ್ ರಾವ್ ಅತಿಥಿüಗಳಿಗೆ ಶಾಲು ಹೊದಿಸಿ, ಸ್ಮರಣಿಕೆ, ಹೂಗುಚ್ಛವನ್ನಿತ್ತು ಗೌರವಿಸಿದರು ಹಾಗೂ ಪದಾಧಿಕಾರಿಗಳು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ನೃತ್ಯ ಸಂಯೋಜಕರು, ಪ್ರಾಯೋಜಕರನ್ನು ಹಾಗೂ ಆಶ್ರಯ ಸ್ವಯಂ ಸೇವಕರನ್ನು ಅಭಿವಂದಿಸಿದರು. ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಆಶ್ರಯದ ಸೌಕರ್ಯ, ಸವಲತ್ತು, ಮತ್ತು ಅಲ್ಲಿಯ  ಚಟುವಟಿಕೆಗಳನ್ನು ಸಾಕ್ಷ ್ಯ ಚಿತ್ರಪ್ರದರ್ಶನದ ಮೂಲಕ  ಪ್ರಸ್ತುತಪಡಿಸಿದರು. ಚಂದ್ರಾವತಿ ರಾವ್ ಧನ್ಯವಾದ ಸಮರ್ಪಣೆ ಗೈದರು.

ಫೆ.14: ದುಬಾಯಿನಲ್ಲಿ ಧ್ವನಿ ಸಾಂಸ್ಕೃತಿಕ ಉತ್ಸವ 2020
ಮುಂಬಯಿ, ಅ19: ಯು.ಎ.ಇ (ದುಬಾಯಿ)ಯಲ್ಲಿ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಧ್ವನಿ ಪ್ರತಿಷ್ಠಾನ 35ವಸಂತಗಳನ್ನು ಪೂರೈಸಿದ ಸಂತಸದ ಆಚರಣೆಗಾಗಿ `ಧ್ವನಿ ಸಾಂಸ್ಕೃತಿಕ ಉತ್ಸವ -2020’ವನ್ನು 2020ರ ಫೆಬ್ರವರಿ.14ನೇ ಶುಕ್ರವಾರ ಸಂಜೆ ಎಮಿರೇಟ್ಸ್ ಥಿüಯೇಟರ್ ಜುಮೇರಾ ದುಬಾಯಿ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಉತ್ಸವದ ಅಂಗವಾಗಿ ವಿಶ್ವ ಮಾನ್ಯತೆ ಪಡೆದ ನಾಟಕಗಾರ ಡಾ| ಗಿರೀಶ್ ಕಾರ್ನಾಡ ಅವರ ಕನ್ನಡ  ಸಾಮಾಜಿಕ ನಾಟಕ `ವೆಡ್ಡಿಂಗ್ ಆಲ್ಬಮ್’ ಅನ್ನು ಧ್ವನಿ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. ಹೊರನಾಡಿನ ಪ್ರಖ್ಯಾತ ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರು ನಾಟಕ ನಿರ್ದೇಶಿಸಲಿರುವರು.

ಶೀಘ್ರದಲ್ಲೇ ಕಾರ್ಯಕ್ರಮದ ಪಟ್ಟಿ ಹಾಗು ಹೆಚ್ಚಿನ ವಿವರಗಳನ್ನು ನೀಡಲಾಗುತ್ತದೆ. ಯುಎಇ ಇಲ್ಲಿನ ಕನ್ನಡ ನಾಟಕ ಆಸಕ್ತರು ಕಾರ್ಯಕ್ರಮಕ್ಕೆ ಪೆÇ್ರೀತ್ಸಾಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಧ್ವನಿ ಸಂಘಟಕರು ಹಾಗೂ ಕಲಾವಿದರು ಈ ಮೂಲಕ ವಿನಂತಿಸಿ ಕೊಂಡಿದ್ದಾರೆ .

Dhwani Cultural Fest 2020 to be held on Feb 14th 2020

Mumbai, Oct.19: Dhwani Pratishthana  one of the well-known Kannada theater and literature enthusiast organization outside Karnataka established in the year 1985 in Mumbai is celebrating 35 successful years. To mark this occasion Dhwani has organized “Dhwani Cultural Fest-2020” on February 14th 2020 Friday evening at Emirates Theater, Jumeirah-Dubai.  Internationally acclaimed play writer Dr. Girish Karnad’s well-known social play “WEDDING ALBUM” will be staged in Kannada by Dhwani Artists as part of the Fest. Play will be directed by renowned stage director Shri Prakash Rao Payyar.

The further details and programs of the Fest will be released soon, Dhwani artists requested UAE’s kannada theater followers to mark this date to make the program grand success.

ಸ್ವಚ್ಛ ಭಾರತ ಅಭಿಯಾನ: ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಪರಿಹಾರ

ಯೋಜನೆಗಳು ಪ್ರಯೋಜನಕಾರಿಯಾಗಿ ಉತ್ಸಾದನಾ ಮಟ್ಟಕ್ಕೆ ತಲುಪಬೇಕು.
ಚಿತ್ರಶೀರ್ಷಿಕೆ: ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಉಜಿರೆ: ನಮ್ಮ ಯೋಚನೆಗಳು ಮತ್ತು ಯೋಜನೆಗಳು ಸಮಾಜಕ್ಕೆ ಉಪಯುಕ್ತವಾಗುವಂತೆ ಉತ್ಪಾದನಾ ಮಟ್ಟಕ್ಕೆ ತಲುಪಿದಾಗ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹೇಳಿದರು.
    ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್  ಕಾಲೇಜಿನಲ್ಲಿ ಬೆಂಗಳೂರಿನ ಡಿಲೈಟ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನೇತೃತ್ವದಲ್ಲಿ ಆಯೋಜಿಸಿದ ಸ್ವಚ್ಛಭಾರತ ಅಭಿಯಾನದಡಿ ತ್ಯಾಜ್ಯ ವಿಭಜನೆ ಬಗ್ಯೆ ಯೋಜನೆಗಳನ್ನು ರೂಪಿಸುವ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನಮ್ಮ ಜ್ಞಾನವು ಕೇವಲ ಮಾಹಿತಿ ಸಂಗ್ರಹಕ್ಕೆ ಸೀಮಿತವಾಗಬಾರದು. ಮನದಲ್ಲಿ ಮತ್ತು ಮನೆಯಲ್ಲಿ ಒಳ್ಳೆದು ಮತ್ತು ಕೆಟ್ಟದ್ದನ್ನು ವಿಭಜಿಸುವಂತೆ ಅಂತರಂಗ ಮತ್ತು ಬಹಿರಂಗದಲ್ಲಿ ತ್ಯಾಜ್ಯ ವಿಭಜನೆ ಮಾಡಬೇಕು. ನಾವು ರೂಪಿಸುವ ಯೋಜನೆಗಳು ಸಾರ್ವಜನಿಕ ಸ್ಥಳಗಳಲ್ಲಿಯೂ ಸಮಾಜಕ್ಕೆ ಉಪಯುಕ್ತವಾಗುವಂತೆ ಮೂಡಿ ಬಂದು ಉತ್ಪಾದನಾ ಹಂತಕ್ಕೆ ತಲುಪಬೇಕು. ತ್ಯಾಜ್ಯ  ವಿಭಜನೆ ಎಲ್ಲರ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆಯಾಗಿದೆ. ಯುವಜನತೆ, ವಿಶೆಷವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಬಗ್ಯೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಯೋಜನೆಗು ಕಾಲಮಿತಿಗೆ ಸೀಮಿತವಾಗದೆ ನಿರಂತರವಾಗಿರಬೇಕು. ಸ್ವಚ್ಛತಾ ಅಭಿಯಾನದಲ್ಲಿ ಮಾಧ್ಯಮದವರ ಪಾತ್ರವೂ ಮುಖ್ಯವಾಗಿದ್ದು ಅವರು ಸಾಮಾಜಿಕ ಅರಿವು ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

    ಬೆಂಗಳೂರಿನ ಡಿಲೈಟ್ ಸಂಸ್ಥೆಯ ನಿರ್ದೇಶಕ ಅರುಣ್ ರಾಜ್ ಪುರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ತ್ಯಾಜ್ಯ ನಿರ್ವಹಣೆಗೆ ತಮ್ಮ ಸಂಸ್ಥೆ ಉತ್ತಮ ಪ್ರಯತ್ನ ಮಾಡುತ್ತಿದ್ದು ತಾಂತ್ರಿಕ ಜ್ಞಾನದ ಬಳಕೆಯಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
    ಸ್ವಚ್ಛ ಮನಸ್ಸು ಮತ್ತು ಸ್ವಚ್ಛ ಪರಿಸರ ಕಾಪಾಡುವ ಉದ್ದೇಶದಿಂದ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ತ್ಯಾಜ್ಯ ವಿಭಜನೆಗೆ ಹೊಸ ಚಿಂತನೆಯೊಂದಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.
    ಬೆಂಗಳೂರಿನ ಸಂತೋಷ್ ಭೂಷಣ್ ಮತ್ತು ರಾಘವೇಂದ್ರ ಗಾಣಿಗ ಉಪಸ್ಥಿತರಿದ್ದರು.
    ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಅಶೋಕ ಕುಮಾರ್ ಸ್ವಾಗತಿಸಿದರು. ಪ್ರೊ. ರಾಮಕೃಷ್ಣ ಹೆಗ್ಡೆ ಧನ್ಯವಾದವಿತ್ತರು. ಕುಮಾರಿ ಯಸ್ತಿಕಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
    ಮಂಗಳೂರು ವಲಯದ ಎಂಜಿನಿಯರಿಂಗ್ ಕಾಲೇಜುಗಳಿಂದ 25 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.

ಕ್ರೀಡಾಕೂಟ ಮುಂದೂಡಿಕೆ (ಬಾಕ್ಸ್ ಐಟಂ)

ಉಜಿರೆ: ಜಡಿಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಕೊಯ್ಯೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮತ್ತು ಶನಿವಾರ (ಇದೇ 18 ಮತ್ತು 19) ನಡೆಸಲು ಯೋಜಿಸಿದ್ದ ಬೆಳ್ತಂಗಡಿ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಮುಂದೂಡಲಾಗಿದೆ.
    ಇದೇ 23 ಮತ್ತು 24 ರಂದು ಕ್ರೀಡಾಕೂಟ ಅದೇ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸತೀಶ್, ಪಿ. ತಿಳಿಸಿದ್ದಾರೆ.

ಸತ್ಯನಾರಾಯಣ ಪೂಜೆ ನೆರವೇರಿಸಿದ ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥ್ಥೆ

ಮುಂಬಯಿ, ಅ.20: ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯು ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಧಾರ್ಮಿಕ ಮತ್ತು ಸಂಪ್ರದಾಯಿಕ ಪೂಜಾಧಿಗಳೊಂದಿಗೆ ನೆರವೇರಿಸಿತು.

ಶ್ರೀ ಪೇಜಾವರ ಮಠದ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಪೂಜೆ ನೆರವೇರಿಸಿದ ಬಳಿಕ ಪುರೋಹಿತ ವಿದ್ವಾನ್ ಸುಬ್ರಹ್ಮಣ್ಯ ಐತಾಳ್ ತನ್ನ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿ ನೆರೆದ ಸದ್ಭಕ್ತರಿಗೆ ಪ್ರಸಾದವನ್ನಿತ್ತು ಹರಸಿದರು.  ಎ.ಸೂರ್ಯನಾರಾಯಣ ಐತಾಳ್ ಮತ್ತು  ಪದ್ಮಾವತಿ ಎಸ್.ರಾವ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ನಾವು ಬರೇ ಪೂಜಾಧಿಗಳಲ್ಲಿ ಪಾಲ್ಗೊಂಡರೆ ಗುರುಭಕ್ತರೆನಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿನ ಸ್ವಾರ್ಥ ತೊರೆದು ಸಜ್ಜನರೆನಿಸಿ ಪೂಜಾಕೈಂಕರ್ಯಗಳನ್ನು ಕೈಗೊಂಡಾಗ ಪುಣ್ಯಕ್ಕೆ ಭಾಜನರಾಗ ಬಹುದು. ಆಧ್ಯಾತ್ಮಿಕವಾಗಿ ನಾವು ಬಲಯುತರಾದಾಗ ಶ್ರದ್ಧಾಭಕ್ತಿಯು ತನ್ನೀಂತಾನೇ ಮೈಗೂಡುವುದು. ಆ ಮೂಲಕ ಸಧ್ಬಕ್ತರೆಣಿಸಲು ಅರ್ಹರಾಗಬಲ್ಲೆವು ಎಂದು ಕೂಟದ ಮುಂಬಯಿ ಅಂಗ ಸಂಸ್ಥೆಯ ಅಧ್ಯಕ್ಷ ಯು.ಎನ್ ಐತಾಳ್ ತಿಳಿಸಿದರು.

ಧಾರ್ಮಿಕ ಸೇವೆಗಳು ಪರಿಶುದ್ಧ ಹೃನ್ಮನಗಳಿಂದ ಸಲ್ಲಿಸಿದಾಗಲೇ ಮನುಕುಲದ ಮತ್ತು ಸಮಾಜದ ಪರಿಶುದ್ಧತಾ ಉದ್ಧಾರ ಸಾಧ್ಯವಾಗುವುದು. ಎಲ್ಲಿ ಪಾವಿತ್ರ್ಯತೆ ಇರುವುದೋ ಅಲ್ಲೇ ಪರಿಶುದ್ಧತೆ ಒಳ್ಳೆಯ ಮನೋಭಾವ ಬೆಳಗುವುದು. ನಿಷ್ಕಲಂಕ ಸೇವೆಯಿಂದ ಮಾತ್ರ ಮನಶುದ್ಧಿ, ಆತ್ಮಶುದ್ಧಿ ಸಾಧ್ಯವಾಗಿದ್ದು ನಮ್ಮ ಯಾವುದೇ ಪೂಜೆಗಳು ನಿರ್ಮಲತ್ವವಾಗಿ ಈಡೇರಿಸಿ ಸಮೃದ್ಧಿಯ ಬಾಳಿಗೆ ಕಾರಣಕರ್ತರಾಗೋಣ ಎಂದು ಸುಬ್ರಹ್ಮಣ್ಯ ಐತಾಳ್ ತಿಳಿಸಿ ಅನುಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೆ.ನಾರಾಯಣ ರಾವ್, ಪಿ.ನಾಗೇಶ್ ರಾವ್ ಸೇರಿದಂತೆ ಹಲವು ಗಣ್ಯರು, ಕೂಟದ ಸದಸ್ಯರನೇಕರು ಉಪಸ್ಥಿತರಿದ್ದರು. ಕೂಟದ ಕಾರ್ಯದರ್ಶಿ ಹಾಗೂ ಕೂಟ ಬ್ರಾಹ್ಮಣರ ತ್ರೈಮಾಸಿಕದ ಮುಖವಾಣಿ ಗುರು ನರಸಿಂಹವಾಣಿ ಸಂಪಾದಕ ರಮೇಶ್ ಎಂ.ರಾವ್ ಸ್ವಾಗತಿಸಿ ವಂದಿಸಿದರು.

ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮದ ಪರ್ವಕಾಲದಲ್ಲಿ - ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು                 
(ಶ್ಯಾಮಲಾ ಮಾಧವ)
ಮುಂಬಯಿ, ಅ.18: ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳಿಗಿದು ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮ. ವರ್ಷದ ಹಿಂದೆ ಆರಂಭಗೊಂಡ ಶತಮಾನೋತ್ಸವ ಕಾರ್ಯಕ್ರಮಗಳ ಸಂಭ್ರಮಕ್ಕೆ ಇದೇ 2019ರ ನ.5,16,17ರಂದು ಉದ್ಘಾಟನೆ, ಸಮಾರೋಪಗಳ ಪರ್ವಕಾಲ. ಶಾಲೆ ನಡೆದು ಬಂದ ದಾರಿಯನ್ನು ಜನತೆಯೆದುರು ತೆರೆದಿಡುವ ಚರಿತ್ರಕಾಲ.

ಶತಮಾನದ ಹಿಂದೆ ಅಕ್ಷರ ಜ್ಞಾನವಿಲ್ಲದೆ ದಾರಿದ್ರ್ಯ, ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ಸಮಾಜವೊಂದು ಪ್ರಥಮ ಜಾಗತಿಕ ಮಹಾಯುಧ್ಧದ ದಳ್ಳುರಿಯ ಬೇಗೆಯಿಂದೆದ್ದು ಬಂದು ವಿದ್ಯೆಯ ಹೊಂಬೆಳಕಿನಿಂದ ನಾಡನ್ನು ಬೆಳಗಿದ ಅನುಪಮ ಸಾಧನೆಯ ಕಥೆ ಇಲ್ಲಿ ತೆರೆದುಕೊಂಡಿದೆ.

ಮಂಗಳೂರುನ ಸೆರಗು ಹಾಸಿದಂತಿರುವ ಸೋಮೇಶ್ವರ ಉಚ್ಚಿಲದ ಈ ನಾಡಿನಲ್ಲಿ ವಿದ್ಯೆಯ ಶ್ರೀಕಾರ ಹಾಕಿದ ಉದ್ಯಾವರ ಬೀಚ ಬೆಳ್ಚಪ್ಪಾಡರು ಹಾಗೂ ಉಚ್ಚಿಲ ಮಂಜಪ್ಪನವರು ಹಚ್ಚಿದ ಜ್ಞಾನಜ್ಯೋತಿ, ಸಮಾಜವನ್ನೂ, ನಾಡನ್ನೂ ಬೆಳಗಿ ಪ್ರಗತಿಪಥದ ದಾರಿಯನ್ನು ತೆರೆದಿದೆ. 1918ರಲ್ಲಿ ಉಚ್ಚಿಲ ಮಂಜಪ್ಪನವರ ಬಂಗ್ಲೆ ಮನೆಯಲ್ಲಿ ಆರಂಭವಾದ ಶಾಲೆಯ ಸ್ಥಾಪನೆ, ಮಂಜೂರಾತಿ ಎಲ್ಲವೂ ಸಾಧ್ಯವಾದುದು, ಅವರ ಮಕ್ಕಳ ಶತಪ್ರಯತ್ನದಿಂದ. ನಾಡ ಹಿರಿಯರಾದ ನೀಲೇಶ್ವರ ದಾಮೋದರ ತಂತ್ರಿಯವರು ಉದಾರ ಹೃದಯದಿಂದ ಶಾಲೆಗಾಗಿ ಊರ ನಡುಮಧ್ಯೆ ನಿವೇಶನವನ್ನು ದಾನವಾಗಿತ್ತರು. ಇಲ್ಲಿ 1921ರಲ್ಲಿ ಸಮಾಜ ಬಾಂಧವರ ಸಹಕಾರದಿಂದ ಶಾಲೆಗಾಗಿ ಶಾಶ್ವತ, ಸುಂದರ, ಮಾದರಿ ಕಟ್ಟಡ ಒದಗಿ ಬಂತು. 1969ರಲ್ಲಿ ಶಾಲೆಯ ಸುವರ್ಣಮಹೋತ್ಸವವೂ, 1989ರಲ್ಲಿ ವಜ್ರ ಮಹೋತ್ಸವವೂ ಯಥೋಚಿತವಾಗಿ ನೆರವೇರಿದ್ದು,
ಇದೀಗ ಶತವರುಷ ಸಂಭ್ರಮ ತೆರೆದುಕೊಳ್ಳುತ್ತಿದೆ:

ನೂರು ವರುಷ ಹಳೆಯದಾಗಿದ್ದ ಶಾಲಾ ಕಟ್ಟಡ ನವೀಕರಣಗೊಂಡು, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಲ್ಲೇ ಪುನರಾರಂಭವಾಗಿದೆ. ಕಾಲಮಾನದ ಬೇಡಿಕೆಯಂತೆ ಆಂಗ್ಲಮಾಧ್ಯಮ ಪ್ರೌಢಶಾಲೆಯೂ ಸಮೀಪದಲ್ಲೇ ನೂತನ ಕಟ್ಟಡದಲ್ಲಿ ತೆರೆದಿದ್ದು, ಈ ವರ್ಷದ ಎಸ್.ಎಸ್.ಎಲ್.ಸಿ. ಬ್ಯಾಚ್ ನೂರು ಶೇಕಡಾ ಫಲಿತಾಂಶ ತಂದಿದೆ. ಸುವರ್ಣ ಹಾಗೂ ವಜ್ರ ಮಹೋತ್ಸವಗಳ ಸ್ಮಾರಕವಾಗಿ ಫಿಶರೀಸ್ ಹೈಸ್ಕೂಲ್ ಹಾಗೂ ಸಭಾಭವನಗಳ ಸ್ಥಾಪನೆಯಾಗಿದೆ.ಶತಮಾನೋತ್ಸವ ಸ್ಮಾರಕ ಯೋಜನೆಯೂ ರೂಪುಗೊಳ್ಳುತ್ತಿದ್ದು, ಮಹತ್ವಪೂರ್ಣ ಸ್ಮರಣಸಂಚಿಕೆ ಸಿಧ್ಧಗೊಳ್ಳುತ್ತಿದೆ.              

ಬೋವತನದಿಂದ ಘಟ್ಟವಿಳಿದು ಕರಾವಳಿಗೆ ಬಂದು ನೆಲೆನಿಂತ ಸಮಾಜವೊಂದು ಶಿಕ್ಷಣ, ಉದ್ಯೋಗ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿ, ಸಾಧನಾ ಪಥದಲ್ಲಿ ಸಾಗಿದೆ. ಈ ಭವ್ಯ ಚರಿತ್ರೆಯ ಶ್ರೀಕಾರ ಬರೆದ ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶತಮಾನೋತ್ಸವ ಆಚರಣಾ ಸಮಿತಿ ವಿದ್ಯಾಭಿಮಾನಿಗಳಿಂದ ಉದಾರ ದೇಣಿಗೆಯ ನಿರೀಕ್ಷೆಯಲ್ಲಿದೆ. 
                                                          

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi