Brief Mumbai, Mangalore News with pictures


Rons Bantwal
Kemmannu News Network, 03-11-2019 08:54:10


Write Comment     |     E-Mail To a Friend     |     Facebook     |     Twitter     |     Print


ಅದಮಾರು ಮಠ ಮುಂಬಯಿ ಶಾಖೆಯಲ್ಲಿ ಬೆಳಕಿನ ಹಬ್ಬದ ಆಚರಣೆ  
ದೀಪಾವಳಿ ಸಂಭ್ರಮವು ಜ್ಞಾನದ ಸಂಕೇತವಾಗಿದೆ : ಈಶ ಪ್ರಿಯತೀರ್ಥಶ್ರೀ 
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುAಬಯಿ, ಅ.೨೭: ದೀಪಾವಳಿ ಅನ್ನುವುದು ದೀಪಗಳ ಸಮೂಹ. ಸಾಲುಸಾಲು ದೀಪಗಳ ಸರದಿಗಳಾಗಿಸಿ ದೀಪಗಳ ಮೂಲಕ ದೇವರನ್ನು ಕಾಣುವ ಹಬ್ಬವಾಗಿದೆ. ಇಂತಹ ಬೆಳಗುವ ಹಬ್ಬವನ್ನು ನಾವು ದಿನನಿತ್ಯ ಆಚರಿಸುವ ಅಗತ್ಯವಿದೆ. ಪೂರ್ವಜರು ದೀಪವನ್ನು ಜ್ಞಾನಕ್ಕೆ ಹೋಲಿಸಿದ್ದಾರೆ. ಏಕೆಂದರೆ ಬೆಳಕು ಕಷ್ಟಮುಕ್ತಗೊಳಿಸಿ ದಾರಿ ತೋರಿಸುವ ಸಾಧನವಾಗಿದ್ದು, ಹೇಗೆ ದೀಪದ ಬೆಳಕಿಲ್ಲದೆ ಪ್ರಾಣಿಸಂಕುಲಕ್ಕೆ ಏನೂ ಕಾಣದೋ ಅಂತೆಯೇ ಬದುಕು ಕೂಡಾ ದೀಪವಿನಃ ಕತ್ತಲಾಗಿರುತ್ತದೆ. ಪ್ರಕೃತಿ ಸೃಷ್ಠಿಯ ಹಿನ್ನಲೆಯಲ್ಲಿ ದೀಪವು ಜ್ಞಾನದ ಸಂಕೇತವಾಗಿದ್ದು ಅಜ್ಞಾನವನ್ನು ದೂರಗೊಳಿಸುವ ಶಕ್ತಿಯಾಗಿದೆ. ಭಗವಂತನ ಸಾಕ್ಷಾತ್ಕರ ಮಾಡಲು ಜ್ಞಾನಿಯ ಅವಶ್ಯವಿದ್ದು ಅದನ್ನು ದೀಪವು ಸೃಷ್ಟಿಸಬಲ್ಲದು. ಈ ಹಬ್ಬವು ಜ್ಞಾನದ ಬೆಳಕಲ್ಲಿ ಬೆಳಕಿನ ಅನುಸಂಧಾನ ಮಾಡುವ ಸಂಭ್ರಮವಾಗಬೇಕು. ಹೊರಗಿಡುವ ದೀಪಗಳು ಬರೇ ಬಾಹ್ಯಚರಣೆಗಳಾಗಿದ್ದು, ಮನುಕುಲದ ಅಂತಾರಚಣೆಯು ಸಾಕ್ಷಾತ್ಕರದ ದೀಪಾವಳಿಯಾಗಬೇಕು. ಅಂದರೆ ದೇವರನ್ನು ತಿಳಿದು ಬಾಳುವ ಬುದುಕೇ ದೀಪಾವಳಿ ಆಗಬೇಕು. ಹಿಂದೂ ಧರ್ಮದ ಜಾಗತಿಕ  ಸಂದೇಶ ಸಂಭ್ರಮವೇ ದೀಪಾವಳಿ ಎಂದು ಉಡುಪಿ ಶ್ರೀ ಅದಮಾರು ಮಠದ  ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

ಉಡುಪಿ ಶ್ರೀ ಕೃಷ್ಣ ಮಠದ ೩೨ನೇ ಆವೃತ್ತಿಯ ಉಡುಪಿ ಪರ್ಯಯ ಪಟ್ಟಾಧೀಶ ದೀಕ್ಷೆ ಸ್ವೀಕಾರ ಪೂರ್ವ ಪರ್ಯಾಯ ಸಂಚಾರ ನಿಮಿತ್ತ ಅಂಧೇರಿ ಪಶ್ಚಿಮದ ಎಸ್.ವಿ.ರೋಡ್‌ನ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ವಾಸ್ತವ್ಯವಿರುವ ಈಶ ಪ್ರಿಯತೀರ್ಥರು ಇಂದಿಲ್ಲಿ ಭಾನುವಾರ ಮುಂಬಯಿ ಅದಮಾರು ಮಠದಲ್ಲಿ ಶ್ರೀಪಾದರು ಮಠದಲ್ಲಿನ ಶ್ರೀದೇವರಿಗೆ ಮತ್ತು ಭೂದೇವಿಗೆ ಎಣ್ಣೆ ಶಾಸ್ತçದೂಂದಿಗೆ ಪೂಜೆಗೈದು ಆ ಎಣ್ಣೆ ಹಚ್ಚಿ ಪ್ರಸಾದ ರೂಪದಲ್ಲಿ ಆ ಎಣ್ಣೆಯೊಂದಿಗೆ ಶಿಷ್ಯರನ್ನೊಳಗೂಡಿ ಶ್ರೀಗಳು ಅಭ್ಯಂಜನಗೈದÀÄ ಹಳೆಕಾಲದ ನರಕಾಸುರವಧೆಯನ್ನು ಮುಂಬಯಿ ಭಕ್ತರಲ್ಲಿ ಮೆಲುಕು ಹಾಕಿದರು.  ಶ್ರೀ ಚತುರ್ಭುಜ ಕಲಿಯಾ ಮರ್ದಾನ (ರುಕ್ಮಿಣಿ ಸತ್ಯಭಾಮ ಸಹಿತ) ಹಳೆ ಸಂಪ್ರದಾಯಿಕ ಅರ್ಚನೆಗೈದು ತೈಲದೀಪದ ನಡುವೆ ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿದರು. ಬಳಿಕ ಅಲಂಕಾರ ಪೂಜೆ, ಸಹಸ್ರನಾಮಾರ್ಚನೆ, ತೀರ್ಥಪೂಜೆ, ಧೂಪಪೂಜೆ ಮತ್ತು ಮಹಾಪೂಜೆ ನೆರವೇರಿಸಿದರು. ನಂತರ ಆರತಿಗೈದು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸಿ ನೆರೆದ ನೆರೆದ ಸದ್ಭಕ್ತರಿಗೆ, ಮಂತ್ರಾಕ್ಷತೆ ನೀಡಿ ಅನುಗ್ರಹಿಸಿ ದೀಪಾವಳಿ ಸಂದೇಶವನ್ನಿತ್ತರು.

ಈ ಶುಭಾವಸರದಲ್ಲಿ ಪುರೋಹಿತರಾದ ವಾಸುದೇವ ಉಡುಪ, ಜನಾರ್ಧನ ಅಡಿಗ, ರಾಮವಿಠಲ ಕಲ್ಲೂರಾಯ, ಸರ್ವಜ್ಞ ಉಡುಪ, ಶಂಕರ ಕಲ್ಯಾಣಿತ್ತಾಯ, ರಾಘವೇಂದ್ರ ಉಡುಪ, ಅದಮಾರು ಮಠದ ಮುಂಬಯಿ ಶಾಖೆಯ ದಿವಾನ ಐ.ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ವಾಣಿ ಆರ್.ಭಟ್, ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಉಪಸ್ಥಿತರಿದ್ದರು.

ಕರ್ತವ್ಯನಿಷ್ಠೆ ಮನುಕುಲದ ಧರ್ಮ, ಶಾಸ್ತçವಾಗಬೇಕು 
ಸಾಂತಾಕ್ರೂಜ್‌ನ ಪೇಜಾವರ ಮಠದ ದೀಪಾವಳಿ ಆಚರಣೆಯಲ್ಲಿ ಶ್ರೀ ಈಶ ಪ್ರಿಯ ತೀರ್ಥರು 
ಮುಂಬಯಿ, ಅ.೨೮: ನಮ್ಮಲ್ಲಿನ ಕೆಲವು ಕಡೆ ಪವಿತ್ರಗ್ರಂಥ ಭಗವದ್‌ಗೀತೆ ಮನೆಯಲ್ಲೂ ಇದ್ದರೆ. ಮನೆಯಲ್ಲಿ ಜಗಳನಿಮಿತ್ತ ಈ ಗ್ರಂಥ ಮನೆಯಲ್ಲಿ ಬೇಡ ಎನ್ನುವವರಿದ್ದಾರೆ. ಆದರೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು ಎಂದು ಕೃಷ್ಣನ ಉಪದೇಶವಾದ. ಈ ಪಾವಿತ್ರ‍್ಯತಾ ಗ್ರಂಥ ಎಲ್ಲಾ ಕಡೆ ಇರಬೇಕು. ಇದರ ಒಬ್ಬ ಸೈನಿಕ ತನ್ನ ಕರ್ತವ್ಯ ಮಾಡಲೇಬೇಕಾಗುತ್ತದೆ. ನಿಷ್ಠೆಯಿಂದ ಕರ್ತವ್ಯ ನಿಭಾಯಿಸದೇ ನಾನು ಯಾರನ್ನು ಹಿಂಸೆ ಮಾಡುವುದಿಲ್ಲ ಎಂದರೇ ದೇಶ ಉಳಿದೀತೇ. ಆದ್ದರಿಂದ ಕರ್ತವ್ಯನಿಷ್ಠೆ ಮನುಕುಲದ ಶಾಸ್ತçವಾಗಬೇಕು. ನಮಗೆ ಅಲ್ಪ ತೃಪ್ತಿ,  ಸುಖ ನೀಡುವ ಈ ಸಂಸಾರಕ್ಕಿAತ ಎಲ್ಲಾ ಸುಖವನ್ನು ನೀಡುವ ಭಗವಂತನೇ ಸರ್ವಸ್ವ ಎಂದು ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶ, ಭಾವೀ ಪರ್ಯಾಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠವು ಆಯೋಜಿಸಿದ್ದ ದೀಪಾವಳಿ ಸಂಭ್ರಮಾಚರಣೆಯಲ್ಲಿ  ಪಾಲ್ಗೊಂಡು ಮಠದ ಶಿಲಾಮಯ ಮಂದಿರದಲ್ಲಿ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿದರು. ಬಳಿಕ ಪಟ್ಟದ ದೇವರಿಗೆ ಶ್ರೀಗಳು ಪೂಜಾಧಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.

ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿಯ ಡಾ| ಎ.ಎಸ್ ರಾವ್, ಅವಿನಾಶ್ ಶಾಸ್ತಿç ಉಪಸ್ಥಿತರಿದ್ದು ಸಂಪ್ರದಾಯಿಕವಾಗಿ ಶ್ರೀಗಳನ್ನು ಮಠಕ್ಕೆ ಬರಮಾಡಿ ಕೊಂಡರು. ನಳೀನಿ ರಾವ್ (ಗೋಕುಲ ಭಜನಾ ಮಂಡಳಿ), ಶ್ಯಾಮಲಾ ಶಾಸ್ತಿç (ಮಧ್ವೇಶ ಭಜನಾ ಮಂಡಳಿ), ಭಾರತಿ ಉಡುಪ (ವಿಠಲಾ ಭಜನಾ ಮಂಡಳಿ ವಿÆರಾರೋಡ್) ಮುಂದಾಳುತ್ವದಲ್ಲಿ ಭಜನೆ ನಡೆಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಅದಮಾರು ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್, ಗೋವಿಂದ ಭಟ್, ಪರೇಲ್ ಶ್ರೀನಿವಾಸ ಭಟ್, ಬಿಎಸ್‌ಕೆಬಿ ಎಸೋಸಿಯೇಶನ್‌ನ ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್. ರಾವ್, ಸ್ಮೀತಾ ಭಟ್, ಶಾಕುಂತಳಾ ಸಾಮಗ, ಗಿರಿಜಾ ಆನಂದತೀರ್ಥ, ಶಾಂತಳಾ ಎಸ್.ಎನ್ ಉಡುಪ, ವನಿತಾ ರಾವ್ ಸಹಿತ ನೂರಾರು ಭಕ್ತಾದಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು,  ಸೇವಾಥಿüðಗಳಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ಶ್ರೀಪಾದರು ಮಂತ್ರಾಕ್ಷತೆ ನೀಡಿ, ವಿದ್ವಾನ್ ವಿಷ್ಣುತೀರ್ಥ ಸಾಲಿ ತೀರ್ಥ ಪ್ರಸಾದ ನೀಡಿ ಹರಸಿದರು.

ಭಾವಶುದ್ದಿಯೊಂದಿಗೆ ಅಕ್ಷರಕ್ಕೆ ಜೀವಕಳೆ : ರಾಧಾಕೃಷ್ಣ ಕೆ.ಉಳಿಯತ್ತಡ್ಕ 
ಮುಂಬಯಿ, (ಪೆರ್ಲ) ಅ.೩೧: ಸಮಕಾಲೀನ ವೈಚಾರಿಕ ನೆಲೆಗಳಲ್ಲಿ ಜನಪರ, ಜೀವಪರವಾದ ಸಾಹಿತ್ಯ ಬರಹಗಳು ವರ್ತಮಾನದ ಅಗತ್ಯವಾಗಿದೆ. ಕವಿತೆಗಳು ಆಂತರAಗಿಕ ಭಾವನೆಗಳನ್ನು ಅರಳಿಸುವ, ವೈಚಾರಿಕತೆಯೊಂದಿಗೆ ಹಿತ ನೀಡುವ ನಿಟ್ಟಿನಲ್ಲಿ ಕವಿಗಳು ಭಾವಶುದ್ದಿಯೊಂದಿಗೆ ಅಕ್ಷರಕ್ಕೆ ಜೀವಕಳೆ ನೀಡಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ  ತಿಳಿಸಿದರು.

ಸಾಹಿತಿ, ಪ್ರಾಧ್ಯಾಪಕ ಬಾಲಕೃಷ್ಣ ಬೇರಿಕೆ ಅವರ ನಾಲ್ಕನೆಯ ಸಾಹಿತ್ಯ ಸಂಕಲನವಾದ ಹೆಸರಿರದ ಹೂವು ಹನಿಗವನ ಸಂಕಲನದ ಆರ್ಲಪದವಿನ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಬಿಡುಗಡೆಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಹನಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ  ಉಳಿಯತ್ತಡ್ಕ ಮಾತನಾಡಿದರು.

ಜನಮನವನ್ನು ತಲಪುವಲ್ಲಿ ಕಾವ್ಯದ ಗಾತ್ರ ಮುಖ್ಯವಾಗುವುದಿಲ್ಲ. ಆದರೆ ಅಕ್ಷರದೊಳಗಣ ಭಾವಾರ್ಥ ಗಾತ್ರವನ್ನು ನಿರ್ಧರಿಸುತ್ತದೆ ಎಂದ ಅವರು ಸಮಗ್ರ ಸಾಹಿತ್ಯ ಪ್ರಕಾರಗಳು ಇಂದು ಕಿರಿದುಗೊಂಡು ಹಿರಿದಾದ ಅರ್ಥವ್ಯಾಪಕತೆಗಳಿಂದ ಸಮಾಜವನ್ನು ಮುನ್ನಡೆಸುತ್ತಿದೆ ಎಂದು ತಿಳಿಸಿದರು. ಬಾಲಕೃಷ್ಣ ಬೇರಿಕೆಯವರ ಹನಿ ಕವನಗಳ ಒಳಾರ್ಥ ಚಿಂತನೆಗೊಳಪಡಿಸಿ ಹೃದಯಕ್ಕೆ ನಾಟುತ್ತದೆ. ಅಧ್ಯಯನಶೀಲತೆ, ವಿಷಯ ಸಂಗ್ರಹ ಹಾಗೂ ಅಕ್ಷರಗಳನ್ನು ಬಳಸುವ ನಾಜೂಕು, ಸ್ಪಷ್ಟತೆಗಳನ್ನು ಯುವ ಕವಿಗಳು ಅಳವಡಿಸಿಕೊಳ್ಳಬೇಕೆಂದು ಅವರು ಕರೆನೀಡಿದರು.

ವೆಂಕಟ್ ಭಟ್ ಎಡನೀರು, ಗಣೇಶ್ ಪೈ ಬದಿಯಡ್ಕ, ಸುಭಾಶ್ ಪೆರ್ಲ, ಡಾ.ಎಸ್.ಎನ್.ಭಟ್ ಪೆರ್ಲ, ಶ್ರೀನಿವಾಸ ಸ್ವರ್ಗ, ಕೃಷ್ಣಕಾಂತ ರೈ ಕಳ್ವಾಜೆ, ನಾರಾಯಣ ಕುಂಬ್ರ, ಪರಮೇಶ್ವರ ನಾಯ್ಕ್, ರಿತೇಶ್ ಕಿರಣ್ ಕಾಟುಕುಕ್ಕೆ, ಆನಂದ ರೈ ಅಡ್ಕಸ್ಥಳ, ಜ್ಯೋಸ್ನಾ÷್ಸ ಎಂ.ಕಡAದೇಲು, ದಯಾನಂದ ರೈ ಕಳ್ವಾಜೆ, ಚಿನ್ಮಯಕೃಷ್ಣ ಕಡಂದೇಲು, ಚಿತ್ತರಂಜನ್ ಕಡಂದೇಲು, ಉಮೇಶ್ ಬೆಳ್ಳಿಪ್ಪಾಡಿ, ಸುಜಯ ಕೊಡೆಂಕಿರಿ, ಪುರುಷೋತ್ತಮ ಭಟ್ ಕೆ., ಜನಾರ್ದನ, ಉದಯರವಿ ಕೋಂಬ್ರಾಜೆ, ಅಭಿ ಪೆರ್ಲ ಮೊದಲಾದವರು ಸ್ವ ರಚಿತ ಹನಿಗವನಗಳನ್ನು ವಾಚಿಸಿದರು. ಸುಂದರ ಬಾರಡ್ಕ ಗೋಷ್ಠಿ ನಿರ್ವಹಿಸಿದರು. ಬಾಲಕೃಷ್ಣ ಬೇರಿಕೆ ಸ್ವಾಗತಿಸಿ, ವಂದಿಸಿದರು.

 

Bharat Bank Awarded “Best Mobile Banking App Award

& Best Debit Card Initiative Award” by Banking Frontiers

Mumbai, Oct.30: The Bharat Co-operative Bank (Mumbai) Limited a leading Multi-State Scheduled bank in the co-operative sector has been awarded with “Best Mobile Banking App Award & Best Debit Card Initiative Award” by “Banking Frontier” in Category of Large Urban Co-operative banks. The award distribution ceremony was held on 19th September, 2019 at Holiday Inn Hotel, Goa.

Mr. Vidyanand S.Karkera - M.D & C.E.O (Designate) and Mr. Nityanand Kirodian-CIO along with other executives of the bank received the award on behalf of Bharat Co-operative Bank (Mumbai) Ltd.

Mr. Babu Nair & Mr. Manoj Agrawal, Group Editor, Banking Frontiers presented the Award along with Dr. M Ramannuni – Former GM – Thrissur DCCB Bank, Mr. Ravikiran  Mankikar and other Jury members.

ಕೃಷ್ಣಾವತಾರದಿಂದ ರೂಪುಗೊಳ್ಳುತ್ತಿದೆ ಸಯಾನ್‌ನ ಗೋಕುಲ ಶ್ರೀಕೃಷ್ಣ ಮಂದಿರ
ಬಿಎಸ್‌ಕೆಬಿಎ ಮಂದಿರ ಮುಂಬಯಿನ ಶ್ರೀಕೃಷ್ಣತಾಣವಾಗಲಿದೆ-ಡಾ| ಸುರೇಶ್ ರಾವ್ ಕಟೀಲು
(ಚಿತ್ರ  /  ಮಾಹಿತಿ: ರೋನ್ಸ್ ಬಂಟ್ವಾಳ್)
ಮುAಬಯಿ, ಅ.೨೭: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಇವುಗಳ `ಗೊಕುಲ’ ಮಂದಿರವು ಬರುವ ೨೦೨೦ರ ಜೂನ್‌ನಲ್ಲಿ ಕೃಷ್ಣಾವತಾರ ರೂಪತಾಳಿದ ಶ್ರೀಕೃಷ್ಣ ಮಂದಿರವಾಗಿ ಪುನಃರ್ ಪ್ರತಿಷ್ಠಾಪಿ ಧಾರ್ಮಿಕ ಸೇವೆಗೆ ಸಿದ್ಧಗೊಳಿಸುವ ಆಶಯ ನಮ್ಮದಾಗಿದೆ ಎಂದು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿಎ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.

ಕಳೆದ ಜೂನ್‌ನಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದಿವ್ಯ ಹಸ್ತಗಳಿಂದ ಶಿಲಾನ್ಯಾಸ ನೆರವೇರಿಸಲ್ಪಟ್ಟ `ಗೊಕುಲ’ದ ಕಾಮಗಾರಿ ಭರದ ಸಿದ್ಧತೆಯಲ್ಲಿದ್ದು ಬರುವ ಜೂನ್‌ನಲ್ಲಿ ಸೇವೆಗೆ ಸಿದ್ಧಗೊಳ್ಳುವ ಬಗ್ಗೆ ಇಂದಿಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಡಾ| ಸುರೇಶ್ ರಾವ್ ತಿಳಿಸಿದರು.

ದೇವಸ್ಥಾನದ ಸ್ಥಪತಿ (ವಾಸ್ತುಶಿಲ್ಪಿ) ಉಡುಪಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರ ಸಂರಚನೆಯಲ್ಲಿ ವಿಷ್ಣುಮೂರ್ತಿ ಆಚಾರ್ಯ ಎಲ್ಲೂರು ಇವರ ಶಿಲಾಮಯ ಕೆತ್ತನೆಯಲ್ಲಿ ದೇವಸ್ಥಾನದ ಗರ್ಭಗುಡಿಯು ಶಿರಕಲ್ಲುಗಳಲ್ಲಿ ಸಿದ್ಧಗೊಂಡು, ೫೦ ಅಡಿ ಎತ್ತರÀದ ಭವ್ಯ ಗೋಪುರದೊಂದಿಗೆ ಮಂದಿರದ ಪೂರ್ಣ ಪ್ರಮಾಣದ ಕಾಮಗಾರಿ ಕೊನೆಯಂAತದಲ್ಲಿದೆ. ಮಂದಿರದ ತೀರ್ಥ ಮಂಟಪದ ಕೆಳಭಾಗವು (ಆದಿಸ್ಥಾನ) ಸಂಪೂರ್ಣವಾಗಿ ಬೂದುಕಲ್ಲುಗಳ ಶಿಲಾಮಯವಾಗಿದ್ದು ಕೃಷ್ಣಾವತಾರಕ್ಕೆ ಸಂಬAಧಿತ ೪೪ ಶಿಲಾಮಯ ಮೂರ್ತಿಗಳು ಇದೀಗಲೇ ಸಿದ್ಧಗೊಂಡಿವೆ. ಮೇಲಿನ ಭಾಗವು ಪರಿಪೂರ್ಣವಾಗಿ ಮರದ ಕೆತ್ತನೆಯಲ್ಲಿ ರಚಿಸಲಾಗುತ್ತಿದೆ. ಶ್ರೀಕೃಷ್ಣ ದೇವರಿಗೆ ಸಂಬAಧಿತ ೨೫ ಮರದ ಮೂರ್ತಿಗಳನ್ನು ಹರೀಶ್ ಆಚಾರ್ಯ ಪುತ್ತಿಗೆ ಸಿದ್ಧಪಡಿಸಿದ್ದಾರೆ. ಸುಮಾರು ೨೫೦೦ ಚದರ ಅಡಿ ವಿಸ್ತೀರ್ಣದ ಮಂದಿರದ ಮೇಲ್ಛಾವಣಿಯು ಕೂಡಾ ಶ್ರೀ ಕೃಷ್ಣಾವತಾರದ ವಿಶ್ವರೂಪ ದರ್ಶನ, ಗಜೇದ್ರ ಮೋಕ್ಷ, ಕಾಳಿಂಗ ಮರ್ಧನ ಇತ್ಯಾದಿ ಮಹತ್ವದ ಉಪಾಖ್ಯಾನಗಳ ಮನಾಕರ್ಷಕ, ಚೌಬೀನೆ ಕೆತ್ತನೆ ಮತ್ತು ತಾಮ್ರದ ತಗಡುಗಳಲ್ಲಿ ಸಿದ್ಧಪಡಿಸಿ ಸ್ವರ್ಣಲೇಪಿತ ಹತ್ತು ದಶಾವತಾರಗಳ ಚಿತ್ರಣಗಳುಳ್ಳ ಕಲಾಕೃತಿಗಳೊಂದಿಗೆ ರಚಿಸಲಾಗುವುದು. ಈ ಎಲ್ಲಾ ಕೆಲಸಗಳಿಂದ ಮಂದಿರದ ಸಮಗ್ರ ಕೆಲಸಗಳು ಶೀಘ್ರವಾಗಿಯೇ ಕೊನೆಗೊಳಿಸಿ   ಪುನರ್ ನಿರ್ಮಾಣದ ಶ್ರೀಕೃಷ್ಣ ಮಂದಿರ ಸದ್ಭಕ್ತರ ಸೇವೆಗೆ ಅಣಿಗೊಳ್ಳುತ್ತಿದೆ ಎಂದೂ ಡಾ| ರಾವ್ ಮಾಹಿತಿ ನೀಡಿದರು.

ತುಳುನಾಡÀ ಪ್ರಸಿದ್ಧ ವಾಸ್ತುತಜ್ಞರ ಸಲಹೆ, ನುರಿತ ಶಿಲ್ಪಿಗಳ ಮಾರ್ಗದರ್ಶನದಂತೆ ಪ್ರತ್ಯೇಕ ಗರ್ಭ ಗುಡಿಯೊಂದಿಗೆ ಮಂದಿರ ನಿರ್ಮಾಣವಾಗಲಿರುವ ಮಂದಿರದಲ್ಲಿ ಶ್ರೀ ಕೃಷ್ಣ ಅವತಾರಕ್ಕೆ ಸಂಬAಧ ಪಟ್ಟಂತಹ, ೪೪ ಕೇಶವಾದಿ ಕೃಷ್ಣ ಶೀಲಾ ದೇವತಾ ಮೂರ್ತಿಗಳನ್ನೊಳಗೊಂಡ  ಗರ್ಭಗುಡಿಯ ಸುತ್ತು ಪೌಳಿ, ತೀರ್ಥ ಪ್ರಸಾದ ವಿತರಣೆಗಾಗಿ ಪ್ರತ್ಯೇಕ ಮುಖ ಮಂಟಪ, ದೇವಳದ ಮುಂಭಾಗದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗುವಂತೆ, ಸರಿ ಸುಮಾರು ೩೫೦೦ ಚದರ ಅಡಿಗಳಷ್ಟು ವಿಶಾಲವಾದ ಸಭಾಗೃಹ, ಸುಮಾರು ೩೬ ಅಡಿ ಎತ್ತರದ ಗೋಪುರ, ಸಭಾಗೃಹದ ಛಾವಣಿಯ ಒಳಮೈಯ್ಯಲ್ಲಿ  ಶ್ರೀ ಕೃಷ್ಣನ ಲೀಲೆಗಳಾಧಾರಿತ  ಮರದ ಕುಸುರಿ ಕೆತ್ತನೆಗಳು ಮುಂತಾದ ವಿಶಿಷ್ಟತೆಗಳೊಂದಿಗೆ ನೂತನ ಮಂದಿರದ ಗರ್ಭ ಗುಡಿಯಲ್ಲಿ ಶ್ರೀ ಕೃಷ್ಣನ ಪ್ರತಿಷ್ಠೆ ನಡೆಸಲಾಗುವುದು ಎಂದರು.

ಈ ಎಲ್ಲಾ ಸೇವೆಗಳÀಲ್ಲಿ ಬಿಎಸ್‌ಕೆಬಿಎ ಸಂಸ್ಥೆಯ ಉಪಾಧ್ಯಖ್ಶರಾದ ವಾಮನ ಹೊಳ್ಳ   ಮತ್ತು ಶೈಲಿನಿ ರಾವ್, ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಕಾರ್ಯದರ್ಶಿ ಎ.ಶ್ರೀನಿವಾಸ ರಾವ್ ಹಾಗೂ ಉಭಯ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಗಣ್ಯರು ಸೇವಾ ನಿರತರಾಗಿದ್ದಾರೆ ಎಂದರು.

ಧಾರಾವಿಯ ಹೋಪ್ ಫೌಂಡೇಶನ್‌ನಲ್ಲಿ ಜಾಗೃತಿ ಅರಿವು ಸಪ್ತಾಹ ಆಚರಣೆ
ವಿದ್ಯಾಥಿüð ದೆಸೆಯಲ್ಲಿ ರೂಢಿಸುವ ಅರಿವು ಶಾಸ್ವತವಾದದು : ದೆಲೀಲಾ ಸಿಕ್ವೇರಾ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುAಬಯಿ, ನ.೦೧: ವಿದ್ಯಾಥಿüð ದೆಸೆಯಲ್ಲಿ ರೂಢಿಸುವ ಅರಿವು ಶಾಸ್ವತವಾದದು ಎಂದು ನಗರದಲ್ಲಿನ ಪ್ರತಿಷ್ಠಿತ ಸಂಸ್ಥೆ ಜಿಸಿಐ ಇದರ  ಸಹಾಯಕ ಮುಖ್ಯ ವ್ಯವಸ್ಥಾಪಕಿ ದೆಲೀಲಾ ಸಿಕ್ವೇರಾ ತಿಳಿಸಿದರು.

ಸಯಾನ್ ಧಾರಾವಿ ಅಲ್ಲಿನ ದಿ ಹೋಪ್ ಫೌಂಡೇಶನ್ ನಡೆಸುತ್ತಿರುವ ಉಚಿತ ಬೋಧನಾ ತರಗತಿಗಳಿಗೆ ಭೇಟಿ ನೀಡಿ ಸಿಕ್ವೇರಾ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾಥಿüðಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿಎಸ್‌ಆರ್ ಸಂಸ್ಥೆಯ ವರಿಷ್ಠ ವ್ಯವಸ್ಥಾಪಕ ಡಾ| ಪ್ರಕಾಶ್ ಕುಮಾರ್ ಮೂಡಬಿದ್ರಿ ಮತ್ತು ಉಪ ವ್ಯವಸ್ಥಾಪಕ ಪಂಕಜ್ ಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಯಶೋಧರಾ ದೇವಿ ಮತ್ತಿತರÀರು ಅಭ್ಯಾಗತರಾಗಿದ್ದು ಜಿಸಿಐ ಮತ್ತು ಸಿಎಸ್‌ಆರ್ ಸಂಸ್ಥೆಯ ಮುಖ್ಯಸ್ಥರು ಸೇವಾ ನಿರತ ಸ್ವಯಂಸೇವಕರು ಹಾಗೂ ವಿದ್ಯಾಥಿüðಗಳೊಂದಿಗೆ ಸಂವಹನ ನಡೆಸಿದರು.

ಈ ಸಂದರ್ಭದಲ್ಲಿ ಸಿಎಸ್‌ಆರ್ ಸಂಸ್ಥೆಯ  ವರಿಷ್ಠರು ಭ್ರಷ್ಟಾಚಾರವು ನಮ್ಮ ಆಥಿüðಕತೆಯನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ವಿವರಿಸಿದರು. ಸ್ವಯಂಸೇವಕರು ಸಮಗ್ರತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಮಗ್ರತೆ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಅಮೂಲ್ಯವಾದ ಜ್ಞಾನ ಕ್ರೋಢೀಕರಿಸುವ ಬಗ್ಗೆ ವಿದ್ಯಾಥಿüðಗಳಿಗೆ ಮಾರ್ಗದರ್ಶನ ನೀಡಿ ಸ್ವಯಂ ಸೇವಕರ ಸೇವಾಕಾರ್ಯ ಮತ್ತು ವಿದ್ಯಾಥಿüðಗಳ ಪ್ರಯತ್ನ ಶ್ಲಾಘಿಸಿದರು. ಹಾಗೂ ವಿದ್ಯಾಥಿüðಗಳಿಗೆ ಅಧ್ಯಯನ ಸಾಮಗ್ರಿಗಳನ್ನು  ವಿತರಿಸಿದರು.

ರಾಕೇಶ್ ಬಡಿಗೆರಿ, ರವಿ ದಂಡು, ಗಣೇಶ್ ವಸುಮನಿ, ಡ್ಯಾನಿಯಲ ಜಗಲಿ, ಗೋವರ್ಧನ ರವುರ್ಕರ್, ಆಂಜನೇಯ ದಾಸರು, ಕೆ.ಸುರೇಶ್ ಉಪಸ್ಥಿತರಿದ್ದು ಹೋಪ್ ಫೌಂಡೇಶನ್‌ನ ಮಕ್ಕಳು ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಭಾಷಣ ಮಾಡಿದರು. ಅನಿಲ ಬೊಡಲ್ ಸ್ವಾಗತಿಸಿದರು. ತಾಯಪ್ಪ ಅನ್ಮೊಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟçಗೀತೆಯೊ ಂದಿಗೆ ಕಾರ್ಯಕ್ರಮ ಸಮಾನಪನ ಗೊಂಡಿತು.


ಮುಂಬಯಿನಾದ್ಯAತ ಹೊಸ ಬೆಳಕು ಮೂಡಿಸಿದ ದೀಪಾವಳಿಯ ಸಂಭ್ರಮ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುAಬಯಿ, ಅ.೨೭: ಕಳೆದ ಒಂದು ವಾರದಿಂದ ಮುಂಬಯಿನಾದ್ಯAತ ಕತ್ತಲು ಕವಿದ ವಾತಾವರಣ, ತುಂತುರು ಮಳೆಯಿಂದ ನಗರ ಮಾಲಿನ್ಯ ಇತ್ಯಾದಿಗಳಿಂದ ಮಹಾನಗರದ ಜನತೆ ದೀಪಾವಳಿ ಸಡಗರದ ಹುಮ್ಮನಸ್ಸಿನಲ್ಲಿದ್ದಂತೆ ಕಂಡರೂ ಇಂದು ವರುಣನೂ ದೂರಸರಿದು ನೇಸರನು ಆದಿತ್ಯನಾಗಿ ಕಾಣಿಸಿದ ಕಾರಣ ನಾಡಜನತೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಉತ್ಸಹ ನೀಡಿತು. ಎಲ್ಲೆಲ್ಲೂ ಸಿಹಿತಿಂಡಿ, ಹೂವು, ಪಟಾಕಿ, ದೀಪಗಳನ್ನು ಖರೀದಿಸಿದ ಮನಸ್ಸುಗಳು ಎಲ್ಲರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿತು.

 

ವಿನೋದ್ ಕೋಟ್ಯಾನ್ ನಿಧನ
ಮುಂಬಯಿ, ಅ.೨೮: ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಸದಸ್ಯ ಹಾಗೂ  ಮಹಾನಗರದ ಪ್ರಸಿದ್ದ ಸೆಕ್ಸೋಫೋನ್ ವಾದಕ ದಿನೇಶ್ ಕೋಟ್ಯಾನ್ ಇವರ ವಿನೋದ್ ಕೋಟ್ಯಾನ್ (೭೮.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಸೋಮವಾರ ಮುಂಜಾನೆ ಕುರ್ಲಾ ಪಶ್ಚಿಮದ ಜೆರಿಮೆರಿ ಕಾಜುಪಾಡ ಇಲ್ಲಿನ ಸ್ವನಿವಾಸದಲ್ಲಿ ನಿಧನರಾದರು.


ಉಡುಪಿ ಜಿಲ್ಲೆಯ ಕಲ್ಯಾಣ್ಪುರ ಹೂಡೆ ಮೂಲತಃ ಇವರು ಮುಂಬಯಿನಲ್ಲಿ ವಾದ್ಯಬಳಗ ನಡೆಸುತ್ತಿದ್ದು ಜನಾನುರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಬಂಧು ಬಳಗ ಅಗಲಿದ್ದಾರೆ.

ತುಳು ಪ್ರತಿಭಾ ಪುರಸ್ಕಾರ ನಾಳೆ
ಉಜಿರೆ: ಮಂಗಳೂರಿನ ತುಳುಕೂಟದ ಆಶ್ರಯದಲ್ಲಿ ತುಳು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವು ಶನಿವಾರ ಗುರುವಾಯನಕೆರೆಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ ಮತ್ತು ತುಳುಕೂಟದ ಕಾರ್ಯದರ್ಶಿ ರತ್ನಕುಮಾರ್ ಎಂ. ತಿಳಿಸಿದ್ದಾರೆ.
    ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಗುರುವಾಯನಕೆರೆ ಸರ್ಕಾರಿ ಪ್ರೌಢ ಶಾಲೆಯ ಕುಮಾರಿ ತೇಜಸ್ವಿನಿ ಕೆ. ಮತ್ತು ಪಿ.ಯು.ಸಿ. ಯಲ್ಲಿ ಗರಿಷ್ಠ ಅಂಕ ಪಡೆದ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಮನೀಶ್ ಶ್ರೀರಾಮ್ ಅವರಿಗೆ ತುಳು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
    ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಯನ್. ಪೂವಣಿ ಕಾರ್ಯಕ್ರಮ ಉದ್ಘಾಟಿಸುವರು.
    ಮಂಗಳೂರು ತುಳುಕೂಟದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸುವರು.
    ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ದಿವಾ ಕೊಕ್ಕಡ ಮತ್ತು ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶುಭಾಶಂಸನೆ ಮಾಡುವರು.

ಉಚಿತ ತರಬೇತಿ
ಉಜಿರೆ: ನಿರುದ್ಯೋಗಿಗಳು ಸ್ವ-ಉದ್ಯೋಗ ಆರಂಭಿಸಲಿಕ್ಕಾಗಿ ಉಜಿರೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಊಟ, ವಸತಿಯೊಂದಿಗೆ ಉಚಿತ ತರಬೇತಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
    ಹೊಲಿಗೆ ತರಬೇತಿ (೩೦ ದಿನ), ಸೆಲೂನ್ ಉದ್ಯಮ (೩೦ ದಿನ), ದ್ವಿಚಕ್ರ ವಾಹನಗಳ ದುರಸ್ತಿ (೩೦ ದಿನ), ಎಲೆಕ್ಟಿçಕಲ್ ಮೋಟಾರ್ ರಿವೈಂಡಿAಗ್ (೩೦ ದಿನ), ರಬ್ಬರ್ ಟ್ಯಾಪಿಂಗ್ (೩೦ ದಿನ).
    ಆಸಕ್ತರು ಸವಿವರ ಮಾಹಿತಿಯೊಂದಿಗೆ ತಕ್ಷಣ ಅರ್ಜಿ ಸಲ್ಲಿಸಲು ಕೋರಲಾಗಿದೆ.
    ವಿಳಾಸ: ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ದವನ, ಉಜಿರೆ – ೫೭೪ ೨೪೦, ದೂರವಾಣಿ: ೦೮೨೫೬ – ೨೩೬೪೦೪.
------------
ಪಿ.ಎಚ್‌ಡಿ. ಪದವಿ
ಡಾ. ಬಾಲಕೃಷ್ಣ ಶೆಟ್ಟಿ
ಉಜಿರೆ: ಸ್ಥಳೀಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಜೈವಿಕ ರಸಾಯನಶಾಸ್ತç ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ ಅವರಿಗೆ ಮಂಗಳೂರಿನ ಯೇನೆಪೋಯ ವಿಶ್ವವಿದ್ಯಾಲಯ ಪಿ.ಎಚ್‌ಡಿ. ಪದವಿ ಪ್ರದಾನ ಮಾಡಿ ಗೌರವಿಸಿದೆ.
    ಯೇನೆಪೋಯ ಮೆಡಿಕಲ್ ಕಾಲೇಜಿನ ಡಾ. ಮಂಜುಳಾ ಶಾಂತಾರಾಮ್ ಮಾರ್ಗದರ್ಶನದಲ್ಲಿ ಸ್ಥೂಲಕಾಯದ ತೊಂದರೆ ಇರುವವರಲ್ಲಿ ಜೀವ ರಾಸಾಯನಿಕ ಪದಾರ್ಥಗಳ ಮೇಲೆ ಆಗುವ ಪರಿಣಾಮಗಳ ಬಗ್ಯೆ ತುಲನಾತ್ಮಕ ವೈದ್ಯಕೀಯ ಅಧ್ಯಯನದ ಬಗ್ಯೆ ಇವರು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಎಚ್‌ಡಿ. ಪದವಿ ಪ್ರದಾನ ಮಾಡಲಾಗಿದೆ.
------------

A new opened at Bombay Institute for performing Arts and dance Center J. B Nagar   Andheri East on 26th October by Lighting lamp from Yaksha Guru Ajekar Balakrishna Shetty and others. Shri D.K.Shetty Powai, Adv. Morla Rathnakara Shetty, Mithili Shetty of dance Centre and many other distinguished guests were presents on this occasion.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi