Brief University college news with picturews


Guru Prasad T N
Kemmannu News Network, 19-11-2019 13:12:56


Write Comment     |     E-Mail To a Friend     |     Facebook     |     Twitter     |     Print


ಸತ್ಯಕ್ಕೆ ಪ್ರಿಯವಾದವನು ಸಮಾಜಕ್ಕೆ ಅಪ್ರಿಯನಾಗುತ್ತಾನೆ: ಲಕ್ಷ್ಮೀಶ ತೋಳ್ಪಾಡಿ

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಹಿಂದಿ ವಿಭಾಗ, ಗಾಯತ್ರಿ ಪ್ರಕಾಶನ ಮತ್ತು ಹನೆಹಳ್ಳಿ ಬಳಗ ಜೊತೆಯಾಗಿ ಆಯೋಜಿಸಿದ್ದ ದೇವು ಹನೆಹಳ್ಳಿಯವರ ʼಮಾಯಕದ ನೆಲೆʼ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ಶನಿವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ವಲಯ ಅರಣ್ಯಾಧಿಕಾರಿ ಕೆ.ಎಂ ಚಿಣ್ಣಪ್ಪ, ನಮ್ಮದಲ್ಲದ ಪ್ರಕೃತಿಯನ್ನು ಮುಂದಿನ ಜನಾಂಗಕ್ಕೆ ಒಪ್ಪಿಸುವುದು, ಆರೋಗ್ಯವಂತ ಪರಿಸರ ಒದಗಿಸುವುದು ನಮ್ಮ ಕರ್ತವ್ಯ. ಈಗ ಆರಂಭವಾಗಿರುವ ಪ್ರಕೃತಿ ವಿಕೋಪ ಕೇವಲ ಆರಂಭವಷ್ಟೆ. ಅರಣ್ಯನಾಶ ಮುಂದುವರಿದರೆ ಕುಡಿಯುವ ನೀರು ಸಿಗುವುದೂ ಕಷ್ಟವಾಗಬಹುದು, ಎಂದು ಎಚ್ಚರಿಸಿದರು.

ಪ್ರಾಧ್ಯಾಪಕ, ಚಿಂತಕ ಡಾ. ವಿವೇಕ ಧಾರೇಶ್ವರ, ಕವಿ ರವೀಂದ್ರನಾಥ ಟ್ಯಾಗೋರ್, ಗಾಂಧೀಜಿಯಂತವರು ಸಾಂಸ್ಕೃತಿಕ ಸಮಾಜದ ಬಗ್ಗೆ ಮಾತನಾಡಿದ್ದರು. ಅದರೆ ನಾವು ಅದನ್ನು ಮುಂದುವರಿಸದೆ, ನಮ್ಮ ಪರಿಕಲ್ಪನೆಗಳನ್ನೂ ಕಳೆದುಕೊಂಡೆವು. ಸ್ವಂತ ತಿಳುವಳಿಕೆಯಿಲ್ಲದೆ, ಸರ್ಕಾರವನ್ನು ಅತಿಯಾಗಿ ಅವಲಂಭಿಸಿದ್ದೇವೆ, ಎಂದರು. ಚಿಂತಕ ಲಕ್ಷ್ಮೀಶ ತೋಳ್ಪಾಡಿ, “ಸತ್ಯವನ್ನು ಪ್ರಿಯವಾಗಿ ಹೇಳಬೇಕು ಎಂದಾಗಲೇ ತಿರುಚುವಿಕೆ ಆರಂಭವಾಗುತ್ತದೆ. ಎಲ್ಲಾ ಮತಪಂಥಗಳು ದೇವರು ಸರ್ವಾಂತರ್ಯಾಮಿ ಎಂದರೂ ನಾವು ದೇವರಿಗೆ ನಮ್ಮದೇ ವ್ಯಾಖ್ಯಾನ ನೀಡುತ್ತೇವೆ”, ಎಂದರು.

ಲೇಖಕ ದೇವು ಹನೆಹಳ್ಳಿ, ಪ್ರಕಾಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ, ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ, ಹಿಂದಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಆರ್ ಮೊದಲಾದವರು ಭಾಗವಹಿಸಿದ್ದರು. ಸಂವಾದದಲ್ಲಿ ಅನೇಕ ಹಿರಿಯ ಸಾಹಿತಿಗಳು, ಚಿಂತಕರು ಉಪಸ್ಥಿತರಿದ್ದರು.

‘ಓದುವಿಕೆ ಉದ್ಯೋಗಕ್ಕೆ ಮಾತ್ರವಲ್ಲ, ಜ್ಞಾನ ಸಂಪಾದನೆಗೆ’
ಪಿಲಿಕುಳದಲ್ಲಿ ಇನ್ಸ್ಪೈರ್‍ ಇಂಟರ್ನ್‍ಶಿಪ್‍ ಶಿಬಿರ ಉದ್ಘಾಟಿಸಿದ ಪ್ರೊ. ಜಿ.ಡಿ. ಕೇದ್ಕರ್

ಮಂಗಳೂರು: ಭಾರತದಲ್ಲಿ ಇನ್ನೂ ಓದುವುದು ಉದ್ಯೋಗಕ್ಕೆ ಮತ್ತು ಹೊಟ್ಟೆಪಾಡಿಗೆ ಎಂಬ 30 ವರ್ಷಗಳ ಹಿಂದಿನ ಮನಸ್ಥಿತಿಯಿದೆ. ಹೀಗಾಗಿ 11 ವಿಶ್ವವಿದ್ಯಾನಿಲಯಗಳಿರುವ ಇಸ್ರೇಲ್‍ ವಿಜ್ಞಾನದಲ್ಲಿ ಮಾಡಿರುವ ಸಾಧನೆಯನ್ನು 1000 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿರುವ ಭಾರತಕ್ಕೆ ಮಾಡಲಾಗುತ್ತಿಲ್ಲ, ಎಂದು ಔರಂಗಾಬಾದ್ನ ಡಾ. ಬಿ.ಎ.ಎಂ. ವಿಶ್ವವಿದ್ಯಾನಿಲಯದ ಪಾಲ್ ಹೆಬರ್ಟ್ ಸೆಂಟರ್ ಫಾರ್ ಡಿಎನ್ಎ ಬಾರ್ಕೋಡಿಂಗ್ ಆಂಡ್ ಬಯೋಡೈವರ್ಸಿಟಿ ಸ್ಟಡೀಸ್ ನಿರ್ದೇಶಕ ಪ್ರೊ. ಜಿ.ಡಿ. ಕೇದ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಯೋಜಕತ್ವದೊಂದಿಗೆ, ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಿರುವ ಡಿಎಸ್‍ಟಿ- ಇನ್ಸ್ಪೈರ್‍ ಇಂಟರ್ನ್‍ಶಿಪ್‍ ಶಿಬಿರ 2019 ರ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದೇಶಕ್ಕೆ ಹಾರುತ್ತಿರುವ ಭಾರತದ ಪ್ರತಿಭಾವಂತ ವಿಜ್ಞಾನಿಗಳಿಗೆ ದೇಶದಲ್ಲೇ ಅವಕಾಶ ಒದಗಿಸಲು ಈ ಶಿಬಿರವನ್ನು ಆಯೋಜಿಸಲಾಗಿದೆ. ಇದು ಒಂದು ಕಾರ್ಯಕ್ರಮವಾಗಿರದೆ, ವಿವಿಧ ಹಂತಗಳಲ್ಲಿ ಪ್ರತಿಭಾವಂತರಿಗೆ ಉನ್ನತ ವಿದ್ಯಾಭ್ಯಾಸ ಪಡೆದು ಬೋಧನೆಗೂ ಅವಕಾಶಮಾಡಿಕೊಡುತ್ತದೆ, ಎಂದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ ವಿ ರಾವ್ ತಮ್ಮ ಉದ್ಘಾಟನಾ ಭಾಷಣದಲ್ಲಿ, ನಮ್ಮ ಬದಲಾಗಬೇಕಾದ ಶಿಕ್ಷಣನೀತಿಯ ಕುರಿತು ಉಲ್ಲೇಖಿಸುವುದರ ಜೊತೆಗೆ ವಿದ್ಯಾರ್ಥಿಗಳು ಚೌಕಟ್ಟಿಗಿಂತಲೂ ಹೊರಗೆ ಯೋಚಿಸುವುದನ್ನು ಕಲಿಯಬೇಕು. ಮುಕ್ತ ಮನಸ್ಸಿನಿಂದ ಹೊಸ ವಿಷಯಗಳನ್ನು ಕಲಿತು ಸಮಾಜಕ್ಕೆ ನೆರವಾಗಬೇಕು, ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ, ಮಹತ್ತರ ಕನಸಿನೊಂದಿಗೆ ಬದ್ಧತೆಯಿಂದ ಗುರಿ ತಲುಪಲು ಸಾಧ್ಯ. ಜೀವನವನ್ನು ಸಂತೋಷದಿಂದ ಅನುಭವಿಸಬೇಕು. ನಿರಾಶೆ ಪಡಬಾರದು. ಶಿಕ್ಷಣವೆಂದರೆ ಶಿಕ್ಷೆಯಾಗಬಾರದು, ಎಂದರು.

ನವೆಂಬರ್‍ 18 ರವರೆಗೆ ನಡೆಯಲಿರುವ ಶಿಬಿರದಲ್ಲಿ ವಿವಿಧ ಕಾಲೇಜುಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು  ಭಾಗವಹಿಸಿದ್ದಾರೆ. ರಸಾಯನಶಾಸ್ತ್ರ ವಿಭಾಗದ ಡಾ. ಕೆ. ಲಕ್ಷ್ಮಣ್, ಗಣಕ ವಿಜ್ಞಾನದ ಡಾ. ವೀರಭದ್ರಪ್ಪ, ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಸುಮಂಗಲಾ ಮೊದಲಾದವರು ಭಾಗವಹಿಸಿದ್ದರು. ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್‌ ಸ್ವಾಗತಿಸಿದರೆ, ಪ್ರಾಣಿಶಾಸ್ತ್ರ ವಿಭಾಗದ ಡಾ. ಕೆ.ಎ. ನಾಗರತ್ನ ವಂದಿಸಿದರು. ಸುಶ್ಮಿ ಕಾರ್ಯಕ್ರಮ ನಿರ್ವಹಿಸಿದರು. ಐಶ್ವರ್ಯ ಶೆಣೈ ಪ್ರಾರ್ಥನೆ ಸಲ್ಲಿಸಿದರು.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Senora Unisex Salon opened in GSJ Galaxy, Santhekatte, KallianpurSenora Unisex Salon opened in GSJ Galaxy, Santhekatte, Kallianpur
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
House for Rent at KemmannuHouse for Rent at Kemmannu
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India