Brief Mumbai, Mangalore News with pictures


Rons Bantwal
Kemmannu News Network, 30-11-2019 06:32:39


Write Comment     |     E-Mail To a Friend     |     Facebook     |     Twitter     |     Print


ಡಿ.15: ಗಾಣಿಗ ಸಮಾಜ ಮುಂಬಯಿ (ರಿ.) ಸಂಸ್ಥೆಯ
ಪೇಜಾವರ ಸಭಾಗೃಹಲ್ಲಿ 22ನೇ ವಾರ್ಷಿಕ ಮಹಾಸಭೆ
   
ಮುಂಬಯಿ, ನ. 25: ಗಾಣಿಗ ಸಮಾಜ ಮುಂಬಯಿ (ರಿ) ಇದರ  22ನೇ ವಾರ್ಷಿಕ ಮಹಾಸಭೆಯು ಇದೇ ಬರುವ ತಾ.15.ಡಿಸೆಂಬರ್,2019ನೇ ರವಿವಾರ ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಶ್ರೀ ವಿಶ್ವೇಶ ತೀರ್ಥ ಸಭಾಗೃಹ, ಪೇಜಾವರ ಮಠ, ಮಧ್ವ ಭವನ, ಪ್ರಭಾತ್ ಕಾಲೊನಿ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವುದು.

ಸದಸ್ಯರೆಲ್ಲರೂ ಕ್ಲಪ್ತ ಸಮಯಕ್ಕೆ ಹಾಜರಿದ್ದು, ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಆಡಳಿತ ಮಂಡಳಿ ಪರವಾಗಿ ಪ್ರಧಾನ  ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಈ ಮೂಲಕ ವಿನಂತಿಸಿದ್ದಾರೆ.

ನ.30: ಅನಿತಾ ಪಿ.ಪೂಜಾರಿ ಅವರ ಎರಡು ಕೃತಿಗಳ ಬಿಡುಗಡೆ
ಮುಂಬಯಿ; ಅನಿತಾ ಪಿ.ಪೂಜಾರಿ ತಾಕೊಡೆ ಅವರು ಬರೆದಿರುವ `ಸವ್ಯಸಾಚಿ ಸಾಹಿತಿ’ ಹಾಗೂ `ಮೋಹನ ತರಂಗ’ ಎರಡು ಕೃತಿಗಳು ನವೆಂಬರ್ 30, ಶನಿವಾರದಂದು ಸಾಂತಕ್ರೂಜ್ ಕಲೀನಾ ಇಲ್ಲಿನ ಮುಂಬಯಿ ವಿಶ್ವವಿದ್ಯಾಲಯದಲ್ಲಿನ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕವಿಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ಅನಿತಾ ಅವರ ನಾಲ್ಕನೆಯ ಕೃತಿ `ಸವ್ಯಸಾಚಿ ಸಾಹಿತಿ’ ಲೋಕಾರ್ಪಣೆಗೊಳ್ಳಲಿದೆ. `ಸಾಹಿತ್ಯ ಸುಧೆ’ ಪ್ರಕಾಶನದಿಂದ ಪ್ರಕಟವಾದ ಈ ಕೃತಿ, ಎಂ.ಎ ಪದವಿಗೆ ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನ ದಿಂದ ಸಿದ್ಧಪಡಿಸಿದ, ಡಾ.ಬಿ.ಜನಾರ್ದನ ಭಟ್ ಅವರ ಜೀವನ ಸಾಧನೆಯ ಕುರಿತು ಬರೆದಿರುವ ಶೋಧ ಸಂಪ್ರಬಂಧವಾಗಿದೆ. ಈ ಕೃತಿಯನ್ನು ಡಾ. ಈಶ್ವರ್ ಅಲೆವೂರು ಪರಿಚಯಿಸಲಿರುವರು. 2019 ಮೇ ತಿಂಗಳಿನಲ್ಲಿ ನಡೆದ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ, ಪ್ರಥಮ ರ್ಯಾಂಕ್ ಪಡೆದ ಅನಿತಾ ಪಿ.ಪೂಜಾರಿ ತಾಕೊಡೆ ಅವರಿಗೆ  ಚೊಚ್ಚಲ ಎಂ.ಬಿ ಕುಕ್ಯಾನ್ ಚಿನ್ನದ ಪದಕವನ್ನು  ರಂಗತಜ್ಞ  ಜೆ.ಲೋಕೇಶ್, ಸಾಹಿತಿ ಅನುಬೆಳ್ಳೆ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಸಾಹಿತಿ ಶಾಂತಾರಾಮ ವಿ.ಶೆಟ್ಟಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ವಿವಿ ವತಿಯಿಂದ ಪ್ರದಾನಿಸಲಾಗುವುದು.

ಕರ್ನಾಟಕ ಸಂಘ ಮುಂಬಯಿಯ ಅಧ್ಯಕ್ಷ ಮನೋಹರ ಎಂ.ಕೋರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಧ್ಯಾಹ್ನ 2.30ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ರಚಿಸಿದ ಅನಿತಾ ಅವರ ಐದನೆಯ ಕೃತಿ `ಮೋಹನ ತರಂಗ’ ಬಿಡುಗಡೆ ಆಗಲಿದೆ. ಕರ್ನಾಟಕ ಸಂಘ ಮುಂಬಯಿ ಪ್ರಕಾಶನದ ಮೂಲಕ ಪ್ರಕಟಗೊಂಡ ಈ ಕೃತಿಯನ್ನು ರಂಗ ಕಲಾವಿದ ಅವಿನಾಶ್ ಕಾಮತ್ ಅವರು ಪರಿಚಯಿಸಲಿದ್ದಾರೆ. ಮುಖ್ಯ ಅತಿಥಿüಗಳಾಗಿ ಜೆ.ಲೋಕೇಶ್, ಗೌರವಾನ್ವಿತ ಅತಿಥಿüಗಳಾಗಿ, ಎನ್.ಸಿ ಶೆಟ್ಟಿ, ಧರ್ಮಪಾಲ ದೇವಾಡಿಗ, ಡಾ| ಜಿ.ಎನ್ ಉಪಾಧ್ಯ, ಡಾ.ಬಿ.ಆರ್ ಮಂಜುನಾಥ್, ಮಹೇಶ್ ತಲಕಾಡ್, ಎಂ.ಗಣೇಶ ಪಾಲ್ಗೊಳ್ಳಲಿರುವರು.

ಮೂಲತಃ ಮೂಡಬಿದರೆ ತಾಕೊಡೆ ಇಲ್ಲಿಯವರಾದ ಅನಿತಾ, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿ ರುವ ಇವರು ಪ್ರತಿಭಾವಂತ ವಿದ್ಯಾಥಿರ್üನಿ. ಕವಿಯಾಗಿ, ಕಥೆಗಾರ್ತಿಯಾಗಿ, ಅಂಕಣಕಾರೆಯಾಗಿ ಈಗಾಗಲೇ ಪ್ರಸಿದ್ಧಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳಾಗಿವೆ. `ಅಂತರಂಗದ ಮೃದಂಗ’ ಕೃತಿಗೆ ಜಗಜ್ಯೋತಿ ಕಲಾವೃಂದ (ರಿ.) ಸಂಸ್ಥೆಯಿಂದ `ಶೀಮತಿ ಸುಶೀಲ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ’ ಹಾಗೂ ಶಿಕಾರಿಪುರದ ಜನಸ್ಪಂದನ ಟ್ರಸ್ಟ್ (ರಿ.) ವತಿಯಿಂದ `ಅಲ್ಲಮ ಸಾಹಿತ್ಯ ಪ್ರಶಸ್ತಿ’ ಲಭಿಸಿದೆ. ಈ ಬಾರಿಯ ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಟಿಯಲ್ಲಿಯೂ ಭಾಗವಹಿಸಿದ್ದಾರೆ. ಸೃಜನಾ ಲೇಖಕಿಯರ ಬಳಗ ಮುಂಬಯಿ ಇದರ ಜೊತೆಕೋಶಾಧಿಕಾರಿ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಕಾರ್ಯಕಾರಿ ಸಮಿತಿ ಸದಸ್ಯೆ ಆಗಿ ಸೇವಾ ನಿರತರಾಗಿದ್ದಾರೆ.

ಕಿನ್ನಿಗೋಳಿಯಲ್ಲೊಂದು ಮಹಾತಾಯಿಯ ಕುಟುಂಬದ ಕರುಣಾಜನಕ ಕಥೆ ಸಹೃದಯಿ ದಾನಿಗಳು, ಸಂಘ-ಸಂಸ್ಥೆಗಳಿಂದ ಸಹಯಾಸ್ತಕ್ಕೆ ಮನವಿ
(ಚಿತ್ರ  /  ಮಾಹಿತಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.26: ಮಂಗಳೂರು ತಾಲೂಕು ಕಿನ್ನಿಗೋಳಿ ಇಲ್ಲಿನ ಗುತ್ತಕಾಡು ಮಾರ್ಗವಾಗಿ ಹೋದಾಗ,  ಎಳತ್ತೂರು ಗ್ರಾಮದಲ್ಲಿ ಇಸ್ರೋಜಿ ಕೋಡಿ ಎಂಬ ಒಂದು ಪುಟ್ಟ ಊರಿದೆ. ಆ ಊರಿನ ಮಹಾತಾಯಿಯೇ ದೇವಕಿ. ಕಡು ಬಡವರು ಆಗಿರುವ ದೇವಕಿ ಅಮ್ಮ ನವರಿಗೆ ಒಂದು ಚಿಕ್ಕ ಮನೆ ಮಾತ್ರ ಇರುವುದು, ಗಂಡನ ಆರೋಗ್ಯ ಸರಿಯಿಲ್ಲದೆ ಮನೆಯಲ್ಲೇ ಮಲಗಿದ್ದರೆ, ನಾಲ್ಕು ಮಕ್ಕಳಲ್ಲಿ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು. ಕಷ್ಟಪಟ್ಟು ಬೇರೆಯವರ ಮನೆ ಕೆಲಸ ಮಾಡಿ ಸಾಲ ಮಾಡಿ ಈ ತಾಯಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ. ದೊಡ್ಡ ಮಗಳನ್ನು ದೂರದ ದಾವಣಗೆರೆಗೆ ಮದುವೆ ಮಾಡಿ ಕೊಟ್ಟಿದ್ದು, ಮದುವೆ ಆದ ಸುಮಾರು ನಾಲ್ಕು ವರ್ಷಗಳಲ್ಲಿ ಗಂಡ ಕಾಯಿಲೆಯಿಂದ ಮರಣ ಹೊಂದಿದ್ದಾರೆ. ಮತ್ತೊಂದು ಮಗಳನ್ನು ಕಾರ್ಕಳಕ್ಕೆ ಮದುವೆ ಮಾಡಿ ಕೊಟ್ಟಿದ್ದು ಆಕೆಗೆ ಕೀರ್ತನ ಎಂಬ ಎಂಟು ವರ್ಷದ ಹೆಣ್ಣು ಮಗುವಿದೆ. ಆ ಮಗು ತನ್ವಿ ವಿಶೇಷ ಚೇತನ (ಬುದ್ಧಿಮಾಂದ್ಯ). ಒಬ್ಬ ಮಗನಿಗೆ ಮದುವೆ ಆಗಿದ್ದು, ಈತನಿಗೆ ಇಬ್ಬರು ಮುದ್ದಾದ ಮಕ್ಕಳು ಅದರಲ್ಲಿ 11 ವರ್ಷದ ಹೆಣ್ಣು ಮಗುವಿಗೆ ಹೃದಯದ ಕಾಯಿಲೆ, ಸುಮಾರು  ಲಕ್ಷಾಂತರ ಹಣ ಖರ್ಚು  ಮಾಡಿ ಈಗ ಸ್ವಲ್ಪ ಗುಣ ಹೊಂದಿದೆ. ಇನ್ನೊಂದು ಗಂಡುಮಗು ಚರಣ್  ತಲೆಯ  ಮೆದುಳಿನ ತೊಂದರೆ ಇರುವುದರಿಂದ ಖರ್ಚು ಮಾಡಲು ಹಣ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಮತ್ತೊಬ್ಬ ಗಂಡು ಮಗುವನ್ನು ಸ್ವತಃ  ಸಾಕಿ, ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಆದುದರಿಂದ ದೇವಕಿಅಮ್ಮನ ಕಷ್ಟ ಮುಗಿದಂತಿಲ್ಲ.


ಒಟ್ಟಾರೆ ಈ ಕುಟುಂಬಕ್ಕೆ  ಕಷ್ಟದ ಮೇಲೆ ಕಷ್ಟಗಳ ಬರೆ, ಬದುಕು ಸಾಗಿಸಲಾಗ ಹೊರೆ. ಇಷ್ಟೆಲ್ಲವನ್ನೂ ಈ ವರೆಗೆ ಸಹಿಸಿ ಬಾಳಿದ ದೇವಕಿ ಇದೀಗ ಮಾನಸಿಕ ಮತ್ತು ದೈಹಿಕವಾಗಿ ಬಳಲಿ ಕುಸಿದು ಬಿದ್ದು ಸ್ವತಃ ತಾನೇ ಅನಾರೋಗ್ಯ ಪೀಡಿತೆಯಾಗಿದ್ದಾರೆ. ಇದನ್ನರಿತ ಪಕ್ಕದ ಮನೆಯವರು ಚಿಕಿತ್ಸೆಗಾಗಿ ಮಂಗಳೂರು ಇಲ್ಲಿನ ಎ.ಜೆ ಹಾಸ್ಪಿಟಲ್‍ಗೆ ದಾಖಲಿಸಿದ್ದಾರೆ. ಹಿಗೇ ದೇವಕಿಅಮ್ಮನ ಕಷ್ಟದ ಕಥೆ ಇಲ್ಲಿಗೂ ಮುಗಿಯಲಿಲ್ಲ ಇವರನ್ನು ತಪಾಸನೆ ಮಾಡಿ ಚಿಕಿತ್ಸೆ ಮಾಡುತ್ತಿರುವ ವೈದ್ಯರು ದೇವಕಿ ಅವರ ಹೃದಯದಲ್ಲಿ ಎರಡು ರಂಧ್ರಗಳು ಇವೆ. ತಕ್ಷಣ ಆಪರೇಷನ್ ಮಾಡ ಬೇಕು ಇಲ್ಲದಿದ್ದರೆ ಇವರ ಜೀವಕ್ಕೆ ಆಪತ್ತು ಕಟ್ಟಿಟ್ಟಬುತ್ತಿ ಅಂದಿದ್ದಾರೆ.   

ಮಗ ಪೂನಾದಲ್ಲಿ  ಹೋಟೆಲ್  ಕೆಲಸದಲ್ಲಿದ್ದು, ಈಗ ತಾಯಿಯ ಆರೈಕೆಗಾಗಿ ಕೆಲಸ ಬಿಟ್ಟು ಊರಿಗೆ ಬಂದಿದ್ದಾರೆ. ಈಗ ಅವರಿಗೂ ದುಡಿಮೆ ಇಲ್ಲದ ಕಾರಣ ಕುಟುಂಬ ಬಾರೀ ಸಂಕಷ್ಟದಲ್ಲಿದೆ. ಇದೀಗಲೇ ಮುಂಬಯಿನ ಹಿರಿಯ ಹೊಟೇಲು ಉದ್ಯಮಿ, ಸಮಾಜ ಸೇವಕ ಡಾ| ಶಂಕರ್ ಶೆಟ್ಟ್ಟಿ ವಿರಾರ್ ಮತ್ತು ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಘದ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ತಮ್ಮ ದೇಣಿಗೆಯನ್ನು ನೀಡಿ ಕುಟುಂಬಕ್ಕೆ ಸಂತೈಸಿದ್ದಾರೆ. ದೇವಕಿ ಅವರ ಆಪರೇಷನ್ ಖರ್ಚು ಬಹಳಷ್ಟು ಇರುವ ಕಾರಣ, ಉದಯ ಶೆಟ್ಟಿ ಅವರೂ ಸಹೃದಯಿ ದಾನಿಗಳ ಸಹಾಯಸ್ತ ಕೋರಿದ್ದಾರೆ.

ಸಹೃದಯಿ ದಾನಿಗಳು, ಸಂಘಸಂಸ್ಥೆಗಳು ದಯವಿಟ್ಟು ಸಹಯಾಸ್ತ ಚಾಚಿ ಒಂದೇ ಕುಟುಂಬದ ಹತ್ತಾರು ಜನರ ಬಾಳನ್ನು ಬೆಳಗಿಸುವರೇ ವಿನಂತಿ. ನೀವು ಕೊಡುವ ನೂರು ರೂಪಾಯಿ ಕೂಡಾ ಈ ಕುಟುಂಬಕ್ಕೆ ಅತ್ಯಮೂಲ್ಯ ಆಗಿರುತ್ತದೆ. ದೇವರೇ.... ಕಷ್ಟ ಕೊಡುವುದಿದ್ದರೆ ಯಾವೊತ್ತೂ ಒಂದೇ ಮನೆಗೆ ಮಾತ್ರ ಕೊಡದಿರಿ ಎಂದು ಪ್ರಾಥಿರ್üಸಿ ಈ ಕುಟುಂಬಕ್ಕೆ ಮತ್ತೆ ಪುನಶ್ಚೇತನ ಕರುಣಿಸುವರೇ ಕೋರಿಕೆ. ದಾನಿಗಳು ಸಂಪರ್ಕಿಸ ಬೇಕಾದವರು
ಆಇಗಿಂಏI, ಓo 2-27, Isಡಿoರಿi ಏoಜi, ಙeಟಚಿಣಣhuಡಿ Posಣ & ಗಿiಟಚಿge, ಏiಟಿಟಿigoಟi, ಒಚಿಟಿgಚಿಟoಡಿe ಖಿಚಿಟuಞ, ಆ.ಏ, ಏಚಿಡಿಟಿಚಿಣಚಿಞಚಿ, Iಟಿಜiಚಿ - 574150. ಒbಟ: 9730526860 ಖಚಿghಚಿveಟಿಜಡಿಚಿ (Soಟಿ).
ಃಚಿಟಿಞ ಂ/ಅ: 0635108065581 (ಅಚಿಟಿಚಿಡಿಚಿ ಃಚಿಟಿಞ, ಏiಟಿಟಿigoಟi) IಈSಅ: ಅಓಖಃ0000635.

ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬಯಿ-ಘಟಕಗಳ ಸಮ್ಮೇಳನ
ಘಟಕಗಳ ಸಾಧಕರು-ಸಂಚಾಲಕರÀÀುಗಳಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.26: ವಿಶ್ವದ ಬೇರೆ ಮೂಳೆಗಳಲ್ಲಿ ಸಮಾಜದ ವಿಕಾಸಕಾಗಿ ಘಟಕಗಳನ್ನು ಸ್ಥಾಪಿತ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬಯಿ ತನ್ನ  ಘಟಕ 1, 2 ಮತ್ತು 3ಎ ಘಟಕಗಳ ಸಮ್ಮೇಳನವನ್ನು ಕಳೆದ ಆದಿತ್ಯವಾರ ಗುಜರಾತ್ ರಾಜ್ಯದ ದಮನ್ ಇಲ್ಲಿನ ಹೊಟೇಲ್ ಹನಿಗಾರ್ಡನ್ ಸಭಾಗೃಹದಲ್ಲಿ ನೆರವೇರಿಸಿತು.

ಘಟಕ 3ಎ ಇದರ  ಅಧ್ಯಕ್ಷ ಅಶೋಕ್ ಭಾರೋತ್  ಅಧ್ಯಕ್ಷತೆÉ ಹಾಗೂ ಘಟಕದ ಉಪಾಧ್ಯಕ್ಷ, ತುಳುನಾಡ ಐಸಿರಿ ವಾಪಿ ಅಧ್ಯಕ್ಷ  ಬಾಲಕೃಷ್ಣ  ಎಸ್. ಶೆಟ್ಟಿ ಅವರ  ಸಂಚಾಲಕತ್ವದಲ್ಲಿ ದೀಪ  ಬೆಳಗಿಸಿ ಉದ್ಘಾಟಿಸಲ್ಪಟ್ಟ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ, ಸನ್ಮಾನ, ಗೌರವ ಸಮರ್ಪಣಾ ಕಾರ್ಯಕ್ರಮ ನಡೆಸಲಾಯಿತು. ಉಪಸ್ಥಿತ ಪದಾಧಿಕಾರಿಗಳು, ಗಣ್ಯರು  ವಿವಿಧ  ಘಟಕದ  ಸಾಧಕರು, ಸಂಚಾಲಕರÀನ್ನು  ಶಾಲು ಹೊದೆಸಿ ಫಲಪುಷ್ಪ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.

ಈ ಸಂಘಟನೆಯು ವಿದ್ಯೆ, ಲಘು ಕೈಗಾರಿಕೆ, ಸ್ವಚ್ಛ ಭಾರತ ಅಭಿಯಾನ, ಬಡವರಿಗೆ ಧನ ಸಹಕಾರ ನೀಡುತ್ತಿದ್ದರೂ ಎಂದಿಗೂ ಪ್ರಚಾರ ಬಯಸದೆ ನಿರಂತರ 50 ವರ್ಷಗಳಿಂದ ಜನಸಾಮಾನ್ಯರು ಮೆಚ್ಚುವಂತ  ಕಾರ್ಯಕ್ರಮ ಸಮಾಜಕ್ಕೆ ನೀಡಿದೆ.ಮುಂದೆಯೂ ಇದೆ ರೀತಿ ಸ್ಪಂದಿಸಲಿದೆ. ಹಿರಿಯರು, ಗಣ್ಯರು  ಮನದಾಳದ ಭಾವನೆಗಳಿಗೆ  ಸ್ಪಂದಿಸ ಬೇಕು ಎಂದು ಅಶೋಕ್ ಭಾರೋತ್ ತಿಳಿಸಿದರು.

ವಿಶ್ವ ಮಟ್ಟದ ಈ ಸಂಘಟನೆ ಕಳೆದ 5 ದಶಕಗಳಿಂದ ಯಾವುದೇ ಜಾತಿ, ಮತ ಬೇಧವಿಲದೆ, ಒಳೆಯ ಮನೋಭಾವನೆ ಇರುವ ಈ ಸಂಘಟನೆಯಾಗಿ ಬೆಳೆದಿದೆ.  ಯಾವಾಗಲು ಸಹಕಾರಾತ್ಮಕ ಮನೋಭಾವನೆ ಇರಿಸಿ ಒಳ್ಳೆಯ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಬೇಕು, ನಕಾರಾತ್ಮಕ ವಿಚಾರಣೆ ನಮಲ್ಲಿ ಬರಬಾರದು ಎಂದು ಮುಂಬಯಿ ವಲಯ  ಅಧ್ಯಕ್ಷ ಭೂಫೆದ್ರ ವಾಶಿ ಎಲ್ಲಾ ಸದಸ್ಯರುಗಳಿಗೆ  ಕರೆ ನೀಡಿದರು.

ಮುಂಬಯಿ  ಸಮಿತಿಯ ಅನಿಲ್  ರಾವತು, ಶ್ವೇತ  ಭೋತ್ರ, ಪರಮ್ ಜೀತು  ಕೌರ್, ಶಾಂತರಾಮ್ ಕೌರ್, ಚಾರು ಶೀಲಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಧರ್ ಯಾನ್. ಶೆಟ್ಟಿ, ಜನಾರ್ಧನ  ಶೆಟ್ಟಿ  ಪುತ್ತೂರು,  ತುಳುನಾಡ ಐಸಿರಿಯ ಜೊತೆ  ಕಾರ್ಯದರ್ಶಿ  ಸುಕೇಶ್  ಶೆಟ್ಟಿ, ಸುನಿಲ್ ಡಿಸೋಜಾ, ನಿತೇಶ್ ಶೆಟ್ಟಿ, ಭಾಸ್ಕರ್ ಸರಪಾಡಿ ಮತ್ತಿತರರು ಕಾರ್ಯಕ್ರಮಕ್ಕೆ ಸಹಕರಿಸಿದರು. 

ಘಟಕದ ಹಿರಿಯ ಕಾರ್ಯಕರ್ತ  ಅತ್ತುಲ್ ಸಿ.ಶ್ಹಾ ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ಬಾಲಕೃಷ್ಣ  ಶೆಟ್ಟಿ ಪ್ರಸ್ತಾವನೆಗೈದು ಸಂಸ್ಥೆಯು 5 ದಶಕದಿಂದ ನಡೆಸಿದ ಸೇವೆ,  ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು  ಕಾರ್ಯಕಲಾಪಗಳ ಬಗ್ಗೆ  ತಿಳಿಸಿದರು. ರಜನಿ  ಬಾಲಕೃಷ್ಣ  ಶೆಟ್ಟಿ ಮತ್ತು ಚಾರು ಶೀಲಾ ಭಟ್  ಕಾರ್ಯಕ್ರಮ  ನಿರೂಪಣೆ ಮಾಡಿದರು. 3ಎ ಘಟಕದ  ಪ್ರದಾನ  ಕಾರ್ಯದರ್ಶಿ ಪೂಜಾ  ಅರೋರ  ಧನ್ಯವದಿಸಿದರು.

ಕೆ.ಆರ್ ಪೇಟೆ: ಡಾ| ನಾರಾಯಣ ಗೌಡ ಪರ ಮುಖ್ಯಮಂತ್ರಿ ಬೃಹತ್ ಪ್ರಚಾರ
15 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯಥಿರ್üಗಳದ್ದೇ ಗೆಲುವು : ಬಿ.ಎಸ್ ಯಡಿಯೂರಪ್ಪ
ಮುಂಬಯಿ (ಕೃಷ್ಣರಾಜಪೇಟೆ), ನ.25: ಸಮೃದ್ಧ ಸ್ವಾಭಿಮಾನಿ ಕರ್ನಾಟಕದ ನಿರ್ಮಾಣ ನನ್ನ ಮುಖ್ಯ ಆಶಯವಾಗಿದೆ. ಆದ್ದರಿಂದ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಎಲ್ಲಾ 15ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯಥಿರ್üಗಳನ್ನು ಗೆಲ್ಲಿಸಿಕೊಡುವ ಮೂಲಕ ನಾಡಿನ ಪ್ರಜ್ಞಾವಂತ ಮತದಾರ ಬಂಧುಗಳು ಯಡಿಯೂರಪ್ಪನ ಕೈಬಲಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಮುಗಿದು ಮನವಿ ಮಾಡಿದರು.

ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ, ಮಾಜಿ ಸಚಿವ ಬಿ.ಸೋಮಶೇಖರ್, ತಮ್ಮ ಪುತ್ರ ವಿಜಯೇಂದ್ರ ಅವರೊಡಗೂಡಿ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಮತ್ತು ತಮ್ಮ ಹುಟ್ಟೂರು ಬೂಕನಕೆರೆ ಇಲ್ಲಿ ಬಿಜೆಪಿ ಅಭ್ಯಥಿರ್ü ಡಾ| ನಾರಾಯಣ ಗೌಡ ಪರವಾಗಿ ಬೃಹತ್ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಿ ಕೆ.ಆರ್.ಪೇಟೆ ಸೇರಿದಂತೆ ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯಥಿರ್üಗಳು ಭರ್ಜರಿ ಗೆಲುವು ಸಾಧಿಸುತ್ತಾರೆ. ಡಿ.9ರಂದು ಫಲಿತಾಂಶವು ಪ್ರಕಟವಾದ ನಂತರ ಉತ್ತರ ವಿಪಕ್ಷಗಳಿಗೆ ಉತ್ತರಿಸುವೆ ಎಂದು ಯಡಿಯೂರಪ್ಪ ಗುಡುಗಿದರು.

ಜಾತಿರಾಜಕಾರಣ ಮಾಡುತ್ತಿಲ್ಲ, ಸೇಡಿನ ರಾಜಕಾರಣ ನನಗೆ ಗೊತ್ತಿಲ್ಲ: ನಾನು ನಾಡಿನಾಧ್ಯಂತ ಪ್ರವಾಸ ಮಾಡುತ್ತಿದ್ದೇನೆ. ಪ್ರಸ್ತುತ ಉಪಚುನಾವಣೆಯು ನಡೆಯುತ್ತಿರುವ ಎಲ್ಲಾ 15ಕ್ಷೇತ್ರಗಳಲ್ಲಿಯೂ ಜಾತಿಯಿಂದ ಮುಕ್ತವಾಗಿ ಅಭಿವೃದ್ಧಿಗೆ ಒತ್ತನ್ನು ನೀಡಿ ಜಾತ್ಯಾತೀತವಾಗಿ ಹಾಗೂ ಧರ್ಮಾತೀತವಾಗಿ ಮತನೀಡಿ ಮಾನವತೆ ಹಾಗೂ ಮನುಷ್ಯತ್ವಕ್ಕೆ ಗೌರವ ನೀಡುವಂತೆ ಕೋರಿ ಮತಯಾಚನೆ ಮಾಡುತ್ತಿದ್ದೇನೆ. ನನಗೆ ಜಾತಿ ರಾಜಕಾರಣದಲ್ಲಿ ನಂಬಿಕೆಯಿಲ್ಲ, ಮಾವನತೆ ಹಾಗೂ ಮಾನವ ಸಂಬಂಧಗಳು, ಪ್ರೀತಿ-ವಿಶ್ವಾಸದ ಮೇಲೆ ನನಗೆ ಭಾರೀ ಭರವಸೆಯಿದೆ, ನಾಡಿನ ಜನತೆ ಯಡಿಯೂರಪ್ಪನ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶಕ್ತಿಯನ್ನು ತುಂಬುತ್ತಾರೆ. ಜಾತಿರಾಜಕಾರಣ ಮತ್ತು ಸೇಡಿನ ರಾಜಕಾರಣ ಮಾಡುತ್ತಿಲ್ಲ. ಹೃದಯವಂತ, ಮಾವನತೆಗೆ ಒತ್ತು ನೀಡಿ ಕ್ಷೇತ್ರದಲ್ಲಿ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ನಾರಾಯಣಗೌಡರು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ತಮ್ಮ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದರು. ಇಂತಹ ದೊಡ್ಡವ್ಯಕ್ತಿಯನ್ನು ಗೆಲ್ಲಿಸಿಕೊಡಿ ಎಂದು ಕೇಳಿ, ಮತಭಿಕ್ಷೆ ಪಡೆಯಲು ನಿಮ್ಮ ಮುಂದೆ ಬಂದಿದ್ದೇನೆ. ನಾನು ಹೋದೆಡೆಯಲ್ಲೆಲ್ಲಾ ಅಭೂತಪೂರ್ವವಾದ ಜನಬೆಂಬಲ ಹಾಗೂ ಹೃದಯಸ್ಪರ್ಷಿ ಸ್ವಾಗತ ದೊರೆಯುತ್ತಿದೆ. ವಿರೋಧಿಗಳು ಏನೇ ಕುತಂತ್ರ ಮಾಡಿದರೂ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯಥಿರ್üಗಳ ಗೆಲುವನ್ನು ತಡೆಯಲು ಯಾರೀಗೂ ಸಾದ್ಯವಿಲ್ಲ ಏಕೆಂದರೆ ಮತದಾರ ಪ್ರಭುಗಳ ಆಶೀರ್ವಾದವು ನಮ್ಮ ಮೇಲಿದೆ. ನಾರಾಯಣ ಗೌಡರು ಗೆದ್ದು ಶಾಸಕರಾಗಿ ನನ್ನ ಸಚಿವ ಸಂಪುಟದಲ್ಲಿ ಮಂತ್ರಿಗಳಾಗುವುದು ನೂರಕ್ಕೆ ನೂರು ಸತ್ಯ ಎಂದು ಯಡಿಯೂರಪ್ಪ ಜನರ ಭಾರೀ ಚಪ್ಪಾಳೆಯ ನಡುವೆ ಘೋಷಿಸಿದರು.

ಜನ್ಮಭೂಮಿಯಲ್ಲಿ ಕಮಲ ಅರಳಲಿಲ್ಲವೆಂಬ ಕೊರಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನನ್ನ ಕರ್ಮಭೂಮಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ನನ್ನ ಜನ್ಮಭೂಮಿ, ಮಂಡ್ಯ ಜಿಲ್ಲೆಯ ನನ್ನ ಜನ್ಮಭೂಮಿಯಾದ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಲಿಲ್ಲ, ನಾನೇ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕರು ಇಲ್ಲವಲ್ಲ ಎಂಬ ನೋವು ನನ್ನನ್ನು ಕಾಡುತ್ತಿತ್ತು. ಆದರೆ ಇಂದು ಆ ನೋವನ್ನು ಮರೆಸುವ ಸುಸಂದರ್ಭ ಬಂದಿದೆ. ತಾಲೂಕಿನಿಂದ ಆಯ್ಕೆಯಾಗುವ ಶಾಸಕರಿಗೆ ನನ್ನ ಸಚಿವಸಂಪುಟದಲ್ಲಿ ಸಚಿವರಾಗುವ ಯೋಗವಿದೆ. ಇನ್ನೇನಿದ್ದರೂ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವಕ್ಕೆ ಕೆ.ಆರ್.ಪೇಟೆಯ ಮೂಲಕವೇ ಉತ್ತರ ನೀಡಬೇಕು. ನಾರಾಯಣಗೌಡರನ್ನು ಭಾರೂ ಬಹುಮತಗಳ ಮೂಲಕ ಆರಿಸಿ ಶಾಸಕರನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೈಮುಗಿದು ಮನವಿ ಮಾಡಿದರು.

ಸಜ್ಜನ ರಾಜಕಾರಣಿಯ ಮೇಲೆ ಚಪ್ಪಲಿ ತೂರಿದ ಜೆಡಿಎಸ್: ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಮೇಲೆ ಚಪ್ಪಲಿ ತೂರಿ ಜೆಡಿಎಸ್ ಕಾರ್ಯಕರ್ತರು ಗೂಂಢಾಗಿರಿ ಮಾಡಿ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಹೊರಟಿದ್ದಾರೆ. ಈ ಜಿಲ್ಲೆಯಲ್ಲಿ ಗೂಂಢಾಗಿರಿ ದಾದಾಗಿರಿ ನಡೆಯಲು ಬಿಡಲ್ಲ, ಗೂಂಢಾಗಳನ್ನು ಹೇಗೆ ಮಟ್ಟ ಹಾಕಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹೇಗೆ ಕಾಪಾಡಬೇಕು ಅದಕ್ಕಾಗಿ ನಾರಾಯಣ ಗೌಡ ಗೆಲ್ಲಬೇಕು ನನ್ನ ಆಶಯ ಎಂದರು.

ಮಲಾಡ್ ಕನ್ನಡ ಸಂಘದ ವತಿಯಿಂದ ವಾರ್ಷಿಕ ಚೆಸ್ ಮತ್ತು ಕೇರಮ್ ಟೂರ್ನಮೆಂಟ್
ಸಂಘಗಳಿಂದ ನವಪೀಳಿಗೆಯಲ್ಲಿ ಭಾಷೆ-ಸಂಸ್ಕೃತಿಗಳ ಅರಿವು ಸಾಧ್ಯ-ಹರೀಶ್ ಎನ್.ಶೆಟ್ಟಿ   
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ ನ.25: ಮಲಾಡ್ ಕನ್ನಡ ಸಂಘದ ಯುವ ವಿಭಾಗದ ವತಿಯಿಂದ ಚೆಸ್ ಮತ್ತು ಕೇರಮ್ ಟೂರ್ನಮೆಂಟ್ ಮಲಾಡ್ ಕನ್ನಡ ಸಂಘದ ವತಿಯಿಂದ ಕಳೆದ ಶನಿವಾರ (ನ.24) ವಾರ್ಷಿಕ ಚೆಸ್ ಮತ್ತು ಕೇರಮ್ ಟೂರ್ನಮೆಂಟ್ ಕಾರ್ಯಕ್ರಮ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಉದ್ಘಾಟಿಸಿದರು.

ಸಂಘದ ಕಚೇರಿಯ ಶ್ರೀ ರಮಾನಾಥ ಎಸ್. ಪಯ್ಯಡೆ ಸ್ಮಾರಕ ಸಭಾಗೃಹದಲ್ಲಿ ಸೂರಪ್ಪ ಕುಂದರ್ ಉಸ್ತುವಾರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪರಿಸರದ ಮಕ್ಕಳು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ದಿನಪೂರ್ತಿ ಜರಗಿದ ಈ ಕಾರ್ಯಕ್ರಮದಲ್ಲಿ ಯುವ ವಿಭಾಗದ ಕಾರ್ಯದರ್ಶಿ ಸುಂದರ ಪೂಜಾರಿ ವಾಲ್ಪಾಡಿ, ರಂಜನ್ ಪೂಜಾರಿ, ದೀಕ್ಷಿತ್ ಪೂಜಾರಿ, ಶ್ರುತಿ ಪೂಜಾರಿ ಮೊದಲಾದವರು ಕಾರ್ಯಕ್ರಮ ಸುಗಮಗೊಳ್ಳುವಲ್ಲಿ ಯಶಸ್ವಿಯಾದರು.


ಸಂಜೆ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿದ್ದು ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಸ್ಪರ್ಧೆಯನ್ನು ಎದುರಿಸುವ ಎದೆಗಾರಿಕೆ ಮಕ್ಕಳಿಗೆ ಎಳೆತನದಲ್ಲೇ ರೂಢಿಗೊಳಿಸಬೇಕು. ಪಾಲಕರು ಮಕ್ಕಳನ್ನು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಸಂಘ ಸಂಸ್ಥೆಗಳಲ್ಲಿ ಜರಗುವ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆ ಭಾಗವಹಿಸಿದಾಗ ಅವರಿಗೆ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವಾಗುತ್ತದೆ. ಅದರಿಂದ ನಮ್ಮ ಭಾಷೆ, ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಾಗಬಹುದು. ನಮ್ಮ ಸಂಘದ ವತಿಯಿಂದ ಸ್ಥಾಪಿಸಿದ ಕನ್ನಡ ಕಲಿಕಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಪೆÇ್ರೀತ್ಸಾಹಿಸಬೇಕು ಎಂದÀು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಹರೀಶ್ ಶೆಟ್ಟಿ ಕರೆಯಿತ್ತರು. 

ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸು ಗೊಳಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. 

ಉಪಸ್ಥಿತ ಗಣ್ಯರುಉ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ನಡೆಸಲಾಯಿತು. ಕಾರ್ಯಕ್ರಮವನ್ನು ಕೊಡುಗೈ ದಾನಿಗಳಾದ  ಶೇಖರ ಪೂಜಾರಿ ಹಾಗೂ ಹಿಲೆರಿ ಲೋಬೋ ಅವರು ಪ್ರಾಯೋಜಿಸಿದ್ದು, ಸಂಘದ ಕಾರ್ಯದರ್ಶಿ ಶಂಕರ ಡಿ. ಪೂಜಾರಿ ಕಾರ್ಯಕ್ರಮ  ನಿರೂಪಿಸಿದರು.

ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಚೆಸ್ ಸ್ಪರ್ಧೆ: ಪ್ರಥಮ-ವಿಜ್ಞೇಶ್ ಭಂಡಾರಿ, ದ್ವಿತೀಯ-ಭರತ್ ಮೋಹನ್ ರೈ, ಕ್ಯಾರಂ ಸ್ಪರ್ಧೆ (ಮಕ್ಕಳು15 ವರ್ಷಕ್ಕಿಂತ ಕೆಳಗೆ) ಪ್ರಥಮ-ನಿಧಿ ಪೂಜಾರಿ, ದ್ವಿತೀಯ-ಜಯೇಶ್ ಶೆಟ್ಟಿ, ತೃತೀಯ-ನಿಶಾ ಪೂಜಾರಿ, ಕ್ಯಾರಂ ಸ್ಪರ್ಧೆ (ಮಹಿಳೆಯರು) ಪ್ರಥಮ-ಅಖಿಲಾ ಆಚಾರ್ಯ, ದ್ವಿತೀಯ-ಶಶಿ ಆಚಾರ್ಯ, ತೃತೀಯ-ಶ್ರುತಿ ಪೂಜಾರಿ, ಕ್ಯಾರಂ ಸ್ಪರ್ಧೆ (15 ವರ್ಷಕ್ಕಿಂತ ಮೇಲ್ಪಟ್ಟವರು) ಪ್ರಥಮ-ಸುರೇಂದ್ರ ಆಚಾರ್ಯ, ದ್ವಿತೀಯ -ದೀಕ್ಷಿತ್ ಪೂಜಾರಿ, ಕ್ಯಾರಂ ಡಬಲ್ಸ್: ಪ್ರಥಮ-ದೀಕ್ಷಿತ್ ಪೂಜಾರಿ, ವಿಘ್ನೇಶ್ ಭಂಡಾರಿ, ದ್ವಿತೀಯ-ರಂಜನ್ ಪೂಜಾರಿ ಮತ್ತು ಸರೋಜಿನಿ ಪೂಜಾರಿ ವಿಜೇತರೆಣಿಸಿದರು.

ಮುಂಬಯಿ (ಕಾಸರಗೋಡು), ನ.25: ಕಳೆದ ಶನಿವಾರ ಕಾಸರಗೋಡು ಇಲ್ಲಿನ ಕ್ಯಾಪಿಟಲ್ ಇನ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕೈರಾಳಿ ಪ್ರಕಾಶನದ ಜಂಟಿ ಆಶ್ರಯದಲ್ಲಿ ನಡೆದ ಗಡಿನಾಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಂಬಯಿನ ಹಿರಿಯ ಹೊಟೇಲು ಉದ್ಯಮಿ, ಸಮಾಜ ಸೇವಕ ಡಾ. ಶಂಕರ್ ಶೆಟ್ಟ್ಟಿವಿರಾರ್ ಮತ್ತು ನಾಡಿನ ಹಿರಿಯ ಬ್ಯಾರಿ ಭಾಷಾ ಕವಿ, ಚಲನಚಿತ್ರ ನಟ ಮುಹಮ್ಮದ್ ಬಡ್ಡೂರ್ ಇವರಿಗೆ `ಗಡಿನಾಡ ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಕನ್ನಡ ವಿಭಾಗ ಮುಂಬಯಿ ವಿವಿ-ಕರ್ನಾಟಕ ಸಂಘ ಮುಂಬಯಿ-ಕರ್ನಾಟಕ ನಾಟಕ ಅಕಾಡಮಿಯಿಂದ
ಮೋಹನ್ ಮಾರ್ನಾಡ್‍ಗೆ ನಾಟಕ ಅಕಾಡಮಿ ಪ್ರಶಸ್ತಿಪ್ರದಾನ-`ಮೋಹನ ತರಂಗ’ ಕೃತಿ ಬಿಡುಗಡೆ
ಮುಂಬಯಿ, ನ.28: ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಸಂಸ್ಥೆ ಕರ್ನಾಟಕ ಸಂಘ ಮುಂಬಯಿ ಜೊತೆಗೂಡಿ ನಾಳೆ ಶನಿವಾರ (ನ.30) ಅಪರಾಹ್ನ 2.30 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿರುವ  ಸಮಾರಂಭದಲ್ಲಿ ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರಿಗೆ `ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ-2018’ ಪ್ರದಾನಿಸಲಿದ್ದಾದೆ ಎಂದು ಕರ್ನಾಟಕ ನಾಟಕ ಅಕಾಡಮಿಯ ರಿಜಿಸ್ಟ್ರಾರ್ ಡಾ| ಶೈಲಜಾ ಎ.ಸಿ ತಿಳಿಸಿದ್ದಾರೆ.

ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ ಎಂ.ಕೋರಿ ಅಧ್ಯಕ್ಷತೆಯಲ್ಲಿ ನಡೆಯಲಿರು ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಕರ್ನಾಟಕ ನಾಟಕ ಅಕಾಡಮಿಯ ಪೂರ್ವಾಧ್ಯಕ್ಷ, ಹಿರಿಯ ರಂಗತಜ್ಞ ಜೆ.ಲೋಕೇಶ್ ಗೌರವ್ವಾನಿತ ಅತಿಥಿüಗಳಾಗಿ ಬೋಂಬೆ ಬಂಟ್ಸ್ ಎಸೋಸಿಯೇಶನ್ ಹಾಗೂ ಜವಾಬ್ ಸಂಸ್ಥೆಗಳ ಮಾಜಿ ಅಧ್ಯಕ್ಷ ಎನ್.ಸಿ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ರಂಗತಜ್ಞ ಡಾ| ಬಿ.ಆರ್ ಮಂಜುನಾಥ್, ಚಲನಚಿತ್ರ ನಿರ್ಮಾಪಕ ಮಹೇಶ್ ತಲಕಾಡ್, ನೀನಾಸಂ ಸಂಸ್ಥೆಯ ರಂಗ ನಿರ್ದೇಶಕ ಎಂ.ಗಣೇಶ್ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯೆ, ಪ್ರಶಸ್ತಿ ಪುರಸ್ಕೃತ ಲೇಖಕಿ, ಕವಯತ್ರಿ ಅನಿತಾ ಪಿ.ಪೂಜಾರಿ ತಾಕೋಡೆ  ರಚಿತ ಕೃತಿ ಮೋಹನ್ ಮಾರ್ನಾಡ್ ಅವರ ಜೀವನ ಕಥನ `ಮೋಹನ ತರಂಗ’ ಕೃತಿ ಬಿಡುಗಡೆ ಗೊಳಿಸಲಾಗುವುದು. ರಂಗ ಕಲಾವಿದ ಅವಿನಾಶ್ ಕಾಮತ್  ಕೃತಿ ಪರಿಚಯಿಸಲಿದ್ದು, ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಡಾ| ಭರತ್‍ಕುಮಾರ್ ಪೆÇಲಿಪು ರಚಿತ ಮೋಹನ್ ಮಾರ್ನಾಡ್ ಅವರ ಜೀವನಾಧಾರಿತ ಸಾಕ್ಷ ್ಯ ಪ್ರದರ್ಶಿಸಲಾಗುವುದು ಎಂದು ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ತಿಳಿಸಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಂಬಯಿ ಮಹಾನಗರದ ಎಲ್ಲಾ ತುಳು-ಕನ್ನಡ, ಸಾಹಿತ್ಯ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಈ ಮೂಲಕ ತಿಳಿಸಿದ್ದಾರೆ.
 

ಮೂಲ್ಕಿ: ಮಧ್ಯಪ್ರದೇಶದಲ್ಲಿ  ನಡೆಯಲಿರುವ  ರಾಷ್ಟ್ರಮಟ್ಟದ ಕರಾಟೆ ಪಂದ್ಯಕ್ಕೆ  ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಚಾರ್ಲಿ ಸರಸ್ವತಿಯನ್ನು  ಮುಲ್ಕಿ ಮೆಡಲಿನ್ ಪ.ಪೂ ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕಿ ಸಿ ಮರಿಯೋಲಾ, ಕಾನ್ವೆಂಟ್ ಸುಪೀರಿಯರ್ ಸಿ ನಂದಿತಾ , ವಕೀಲರು ಹಾಗೂ ನೋಟರಿ  ಕೆ ಹರೀಶ್ ಅಧಿಕಾರಿ, ವೆಂಕಟೇಶ್ ಹೆಬ್ಬಾರ್, ಸುಜಾತ ಉಮೇಶ್,  ಪ್ರಾಂಶುಪಾಲರಾದ ಸಿ ಪೆಟ್ರಿಶಿಯ ಪಾಯ್ಸ್ ಉಪಸ್ಥಿತರಿದ್ದರು. ಉಪನ್ಯಾಸಕ ವಿಶಾಂತ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.

ಸಾಫಲ್ಯ ಸೇವಾ ಸಂಘದ ಮಹಿಳಾ ವಿಭಾಗದಿಂದ ಖಾರ್‍ಘರ್‍ನ ಆಶ್ರಮಕ್ಕೆ ಭೇಟಿ
ವೃದ್ಧಾಶ್ರಮದಲ್ಲಿನ ಬಂಧುಗಳನ್ನು ಸ್ಪಂದಿಸುವುದೇ ಭಾಗ್ಯ : ಶೋಭಾ ಬಂಗೇರ 
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.24: ಅನಾಥರ ಬದುಕಿನಲ್ಲಿ ಆಶ್ರಯವಾಗುವುದು, ವೃದ್ಧಾಶ್ರಮದಲ್ಲಿರುವ ಹಿರಿಯರ ಸುಖದುಃಖಗಳಿಗೆ ಸ್ಪಂದಿಸುವುದು ಪುಣ್ಯಾಧಿ ಕಾಯಕವೇ ಸರಿ. ಇಂತಹ ಕಾರ್ಯಗಳು ಮಾನಸಿಕ ಪೀಡೆಯನ್ನು ಅನುಭವಿಸಿದ ಬಂಧು-ಭಗಿನಿಂiÀರ ಖುಷಿಯೊಂದಿಗೆ ಜೀವನದಲ್ಲಿ ಮುಂದುವರಿಯಲು ಪ್ರೇರಣೆಯನ್ನೂ ನೀಡುತ್ತವೆ ಎಂದು ಸಾಫಲ್ಯ ಸೇವಾ ಸಂಘ (ರಿ.) ಮುಂಬಯಿ ಇದರ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಬಂಗೇರ ಅಭಿಪ್ರಾಯ ಪಟ್ಟರು.

ಸಾಫಲ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಇವರ ಮಾರ್ಗದರ್ಶನ ಹಾಗೂ ಸಂಘದ ಮಹಿಳಾ ವಿಭಾಗದ ಸಾರಥ್ಯದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಮತ್ತು ಯುವ ವಿಭಾಗದ ಸದಸ್ಯರು ಕಳೆದ ಭಾನುವಾರ ಪೂರ್ವಾಹ್ನ ಉಪನಗರ ನವಿಮುಂಬಯಿ ಖಾರ್‍ಘರ್ ಅಲ್ಲಿನ ಗಿರಿಜಾ ವೆಲ್ಫೇರ್ ಅಸೋಸಿಯೇಷನ್‍ನ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವಂತಹ ಹಾಗೆಯೇ ದೈನಂದಿನ ಆಹಾರ ಸಾಮಾಗ್ರಿಗಳನ್ನು ಮತ್ತು ಧನಸಹಾಯವನ್ನಿತ್ತು ಸೇವೆಯನ್ನೀಡಿದ್ದು ಇದೇ ಸಂದರ್ಭದಲ್ಲಿ ಶೋಭಾ ಬಂಗೇರ ತಿಳಿಸಿದರು.

ಬದುಕು ಬಂಗಾರವಾಗಬೇಕಾದರೆ ಶೃಂಗಾರದ ಅಗತ್ಯವಿಲ್ಲ. ಜೀವನದಲ್ಲಿ ಹತಾಶರಾದವರ ಕಣ್ಣೀರನ್ನು ಒರೆಸುವುದೇ ಸಮಾಜಕ್ಕೆ ನಾವು ನೀಡಬಲ್ಲಂತಹ ಶ್ರೇಷ್ಠವಾದ ಕೊಡುಗೆ. ಗಿರಿಜಾ ವೆಲ್ಫೇರ್ ಅಸೋಸಿಯೇಶನ್‍ನ ಸದಸ್ಯರಿಗೆ ಆಶ್ರಯದಾತನಾಗಿ, ಅನ್ನದಾತನಾಗಿ, ವಿದ್ಯಾರ್ಜನೆಗೆ ಬೇಕಾದ ಗುರುವಾಗಿ, ಅವರ ಬೆಳವಣಿಗೆಗೆ ಮಾರ್ಗದರ್ಶಕನಾಗಿ ನಿಂತಿರುವ ಕೊಡುಗೈದಾನಿ ವಸಂತ್ ಕುಂಜಾರ್ ಇವರು ಸಂಸ್ಥೆಯ ಸದಸ್ಯರ ದೃಷ್ಟಿಯಲ್ಲಿ ಧರೆಗಿಳಿದು ಬಂದಂತಹ ಪ್ರತ್ಯಕ್ಷ ದೇವರು ಎಂದರೂ ತಪ್ಪಾಗಲಾರದು. ಜನತಾ ಸೇವೆಯೇ ಜನಾರ್ದನನ ಸೇವೆ ಎಂದು 15 ವರ್ಷಗಳಿಂದ ನಂಬಿ ನಡೆಯುತ್ತಿರುವ ಇವರ ನಿರಂತರ ಸೇವೆಯಲ್ಲಿ ಅಡಕವಾಗಿರುವ ಪ್ರೀತಿ, ಪ್ರೇಮ, ವಾತ್ಸಲ್ಯ ಸದಾ ನೆಲೆಸಿದ್ದು, ಇವರಿಗೆ ಇನ್ನಷ್ಟು ನಿಸ್ವಾರ್ಥ ಸೇವೆ ಮಾಡುವಂತಹ ಸೌಭಾಗ್ಯವನ್ನು ಭಗವಂತನು ಕರುಣಿಸಲಿ ಎಂದೂ  ಉಪಸ್ಥಿತರ ಪರವಾಗಿ ಶೋಭಾ ಬಂಗೇರ ಹಾರೈಸಿದರು.

ನಂತರ ಸಂಘದ ಹಿರಿಯ ಸದಸ್ಯ ಕೊಗ್ಗ ಸಾಲಿಯಾನ್ ದಂಪತಿ ವಿದ್ಯಾರ್ಜನೆಗೆ ಬೇಕಾದಂತಹ ಸಾಮಾಗ್ರಿಗಳನ್ನು  ಮಕ್ಕಳಿಗೆ ಹಂಚಿದರು  ಹಾಗೂ ಗೀತಾ ಶ್ರೀಯಾನ್ ವೃದ್ಧಾಪ್ಯದಲ್ಲಿರುವವರಿಗೆ ವೈದ್ಯಕೀಯ ಸೌಲಭ್ಯಕ್ಕೆ ಬೇಕಾದ ಸಾಮಗ್ರಿಗಳನ್ನು (Piಟಟ ಔಡಿgಚಿಟಿiseಡಿ) ಹಸ್ತಾಂತರಿಸಿದರು. ಮಕ್ಕಳನ್ನು ಕಲಾಪ್ರೇಮಿಗಳನ್ನಾಗಿ ಪರಿವರ್ತಿಸಿ,ಅವರ ಬದುಕಿನಲ್ಲಿ ಇನ್ನಷ್ಟು ಸಂತಸ ತರಲೋಸುವ ಆರ್ಟ್ ಝೋನ್‍ನ   ರೇಶ್ಮಾ ಕುಂದರ್ ಅಲ್ಲಿನ ಮಕ್ಕಳಿಗೆ ಕಲೆಯ ಕುಸುರಿ ಕೆಲಸದ (ಆoಣ ಂಡಿಣ) ಬಗ್ಗೆ ತರಬೇತಿ ನೀಡಿದರು.

ಸಂಘದ ಸಕ್ರೀಯ ಸದಸ್ಯ ಕಿರಣ್ ಸಫಲಿಗ ಹಾಗೂ ಇತರ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನಡೆದ   ಕಾರ್ಯಕ್ರಮದಲ್ಲಿ ಸಂಘದ ಗೌರವ ಕೋಶಾಧಿಕಾರಿ ಹೇಮಂತ್ ಬಿ.ಸಫಲಿಗ, ಕಾರ್ಯಕಾರಿ ಸಮಿತಿಯ ರವಿಕಾಂತ್ ಸಫಲಿಗ, ಸಚಿನ್ ಸಾಲ್ಯಾನ್, ವಿಮಲಾ ಎಸ್.ಬಂಗೇರಾ, ಶೋಭಾ ಕರ್ಕೇರ, ಪದ್ಮಿನಿ ಬಂಗೇರಾ, ಮಹಿಳಾ ವಿಭಾಗದ  ರತಿಕಾ ಸಫಲ್ಯಾ, ಕಲಾ ಬಂಗೇರ, ಅನುಸೂಯ ಸೋಮೇಶ್ವರ್, ಸುಲೋಚನಾ ಸಫಲಿಗ, ಲೋಲಾಕ್ಷಿ ಬಂಗೇರ, ಪ್ರತಿಭಾ ಹೇಮಂತ್, ಯುವ ವಿಭಾಗದ ಅಶ್ವಿನಿ ಸಫಲಿಗ, ದಿವ್ಯ ಸಫಲ್ಯ, ಸ್ನೇಹ ಕುಂಜತ್ತೂರು, ಸದಸ್ಯರಾದ ಪದ್ಮನಾಭ ಸೋಮೇಶ್ವರ್, ವಿಮಲಾಕ್ಷಿ ಬಂಗೇರ, ಕುಸುಮಾ ಬಂಗೇರ, ವಿೂನಾಕ್ಷಿ ಸಫಲಿಗ, ಜಯಶ್ರೀ ಸಫಲಿಗ ಪಾಲ್ಗೊಂಡಿದ್ದರು.

ದೇಶಾದ್ಯಂತ ಇರುವ ಎಲ್ಲಾ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ಲಭಿಸಿ, ಅವರ ಭವಿಷ್ಯ ಉಜ್ವಲವಾಗಲಿ, ಜೀವನದ ಸಂಧ್ಯಾ ಕಾಲದಲ್ಲಿ ಪ್ರೀತಿಯ ಆಸರೆ ಸಿಗದೆ ಯಾತನೆ ಅನುಭವಿಸುವ ವೃದ್ಧರು  ನೆಮ್ಮದಿಯ ಬಾಳನ್ನು ಸಾಗಿಸುವಂತಾಗಲಿ ಎಂಬುದಾಗಿ ಉಪಸ್ಥಿತರು ಒಮ್ಮತದ ಅಭಿಪ್ರಾಯಪಟ್ಟರು.

ಸಾಫಲ್ಯ ಸೇವಾ ಸಂಘವು ತನ್ನ 76ನೇ ವಾರ್ಷಿಕ ಸಂದರ್ಭದಲ್ಲಿ ಸಮಾಜಕ್ಕೆ ಪೂರಕವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವುದನ್ನು ಸಂಘದ ಗೌ| ಪ್ರ| ಕಾರ್ಯದರ್ಶಿ ಭಾಸ್ಕರ್ ಟಿ.ಸಫಲಿಗ ಸರ್ವರನ್ನು ಸ್ವಾಗತಿಸಿದರು. ಸಚಿನ್ ಸಾಲ್ಯಾನ್ ಅವಕಾಶಕ್ಕಾಗಿ ಸರರನ್ನು ವಂದಿಸಿದರು.

ಬಾನುಲಿ: ರೇಡಿಯೋ ಶಾಲೆಯಲ್ಲಿ ಅಂಚೆ ಕಚೇರಿ ಮಾಹಿತಿ
ಮುಂಬಯಿ (ಕಲಬುರಗಿ), ನ.28:  ಕಲಬುರಗಿ ಆಕಾಶವಾಣಿ ಕೇಂದ್ರದ  ಮಕ್ಕಳ ಕಾರ್ಯಕ್ರಮ ಬಾಲಲೋಕದಲ್ಲಿ ಡಿ. ಒಂದರಂದು ಬೆಳಿಗ್ಗೆ 09.05 ಕ್ಕೆ ಅಂಚೆಕಚೇರಿ ಕಾರ್ಯಚಟುವಟಿಕೆಗಳ ಕುರಿತು `ರೇಡಿಯೋ ಶಾಲೆ’ಯಲ್ಲಿ ಕಾರ್ಯಕ್ರಮ ಬಿತ್ತರವಾಗಲಿದೆ.
ಕಲಬುರಗಿ ವಲಯ ಹಿರಿಯ ಅಂಚೆ ವರಿಷ್ಠಾಧಿಕಾರಿ ಬಿ.ಆರ್ ನಾನಜಗಿ ಮತ್ತು ಕಲಬುರಗಿಯ ಗಾಜಿಪುರದ ಚೇತನಾ ಯೂತ್‍ಫೋರಂ ಶಾಲೆಯ ವಿದ್ಯಾಥಿರ್üಗಳಾದ ಭವಾನಿ ತೆಗನೂರ್ ಹಾಗೂ ಭವಾನಿ ಅಗಸ್ತೀರ್ಥ ಭಾಗವಹಿಸಲಿರುವರು. ಬದಲಾದ ಮತ್ತು  ಸ್ಪರ್ಧಾತ್ಮಕ ಪರಿಸರದಲ್ಲಿ ಅಂಚೆ ಕಚೇರಿಯು ನೀಡುತ್ತಿರುವ ಸೇವೆಗಳು, ಅಂಚೆ ಚೀಟಿ,  ಕೇಂದ್ರ ಸರಕಾರದ ಯೋಜನೆ , ಪಿಂಚಣಿ ಸ್ಕೀಮ್, ಠೇವಣಿ ಸಂಗ್ರಹ, ಅಂಚೆ ಬಟವಾಡೆ ಕ್ರಮ, ಮುಂತಾದುವುಗಳ ಕುರಿತಾದ ಸಮಗ್ರ ಮಾಹಿತಿ ನೀಡುವ ವಿನೂತನ ಕಾರ್ಯಕ್ರಮಗಿ `ರೇಡಿಯೋ ಶಾಲೆ’ ವಿದ್ಯಾಥಿರ್üಗಳಿಗೆ ಹಾಗೂ ಮಕ್ಕಳಿಗೆ ಉಪಯುಕ್ತ ಎಂದು ಕಾರ್ಯಕ್ರಮವಾಗಿದೆ. ನಿರ್ವಾಹಕರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ.
ಕಲಬುರಗಿ ಆಕಾಶವಾಣಿ ಕೇಂದ್ರವು ವಿನೂತನ ಮತ್ತು ಮಾಹಿತಿ ಪೂರ್ಣ ಕಾರ್ಯಕ್ರವiಗಳನ್ನು ಪ್ರಸಾರ ಮಾಡುತ್ತಿದ್ದು ಇದನ್ನು ಪ್ರಸಾರಭಾರತಿಯ  ಟಿeತಿsoಟಿಚಿiಡಿ  ಆ್ಯಪ್‍ನಲ್ಲೂ ಎಲ್ಲಿ ಬೇಕಾದರೂ ಕೇಳುವ ಅವಕಾಶ ಇದೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.

(ಕಲಬುರಗಿ), ನ.28: ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಕಲಬುರಗಿ ಆಕಾಶವಾಣಿಗೆ ಗುರುವಾರ ಭೇಟಿ ನೀಡಿದರು. ಎಂ.ಎನ್.ಎಸ್.ಶಾಸ್ತ್ರಿ, ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ, ಮುಖ್ಯ ಅಭಿಯಂತರಾದ ಶ್ರೀಮತಿ ಅಖಿಲಾಂಡೇಶ್ವರಿ ಆರ್, ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ, ಸೋಮಶೇಖರ ಎಸ್.ರುಳಿ, ಅನಿಲ್ ಕುಮಾರ ಎಚ್. ಎನ್, ಶ್ರೀಮತಿ ಉಷಾ ಸರನಾಡ್ ಮತ್ತಿತರಿದ್ದರು.

Obituary: Victor D’Souza Palimar

Mumbai, Nov.29: Victor D’Souza Palimar , who was one of the first directors when Daijiworld Media Pvt Ltd established in the year 2007, passed away during early hours of Friday, November 29 on the way to a private hospital in Mangaluru due to heart attack. 

Mr. Victor, who had established his electrical contracting and interior decoration business under the name ’Palimar Electricals’ in Mumbai during early 90s, had shifted his base few years back to Palimar. He was running ’Wilson Hollow Blocks’ as well as interior decoration business in Udupi and Mangaluru.

Victor was well known in his native place Palimar and in Mangaluru for his integrity and honesty in business as well as for his friendly nature.

Victor leaves behind his wife Leena D’Souza and only son Wilson D’Souza, who is studying in USA, but currently in Palimar on holidays.  Active, healthy and fitness freak Victor was jovial until last moment. He even actively attended a wedding function last night in Kirem, Damaskatte. Funeral will be held on Saturday , November 30 at St Pius Church, Palimar at 4 pm.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi