Brief Mumbai, Mangalore News with pictures
Kemmannu News Network, 07-12-2019 06:09:23
ಎನ್.ಪಿ ಸುವರ್ಣ ಮುಂಬಯಿ-ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಣದ
`ಟ್ರಿಪಲ್ ತಲಾಖ್’ ಡಿ.08: ಲಂಡನ್‍ನ ಬ್ರಿಸ್ಟೆಲ್ಲ್‍ನಲ್ಲಿ ಬಿಡುಗಡೆ
ಮುಂಬಯಿ, ಡಿ.05: ಮುಂಬಯಿ ಅಲ್ಲಿನ ಸಮಾಜ ಸೇವಕ, ಎನ್.ಪಿ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಣದ `ಟ್ರಿಪಲ್ ತಲಾಖ್’ ಡಿ.8 ರಂದು ಲಂಡನ್‍ನ ಬ್ರಿಸ್ಟೆಲ್ಲ್‍ನಲ್ಲಿ ತೆರೆ ಕಾಣಲಿದೆ. ಇದೇ ಡಿ.08ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಇಂಗ್ಲೆಂಡ್ ನೈರುತ್ಯ ಕರಾವಳಿಯ ಬ್ರಿಸ್ಟಲ್ಲ್ ಇಲ್ಲಿನ ನಾರ್ಥುಂಬ್ರಿಯಾ ರಸ್ತೆ-51ಯಲ್ಲಿನ ಸ್ಕಾಟ್ ಸಿನೆಮಾ ಮಂದಿರದಲ್ಲಿ ಮೊದಲ ಚಿತ್ರ ಪ್ರದರ್ಶನವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 2017ರಲ್ಲಿ ರಾಷ್ಟ್ರಪ್ರಶಸ್ತಿ (ರಜತಕಮಲ) ಪಡೆದ ಕನ್ನಡ ಚಲನಚಿತ್ರ `ರಿಸರ್ವೇಶನ್’ ನಿರ್ಮಿಸಿದ ಗುಲ್ವಾಡಿ ಟಾಕೀಸ್ ಇದೀಗ `ಟ್ರಿಪಲ್ ತಲಾಖ್- ಕುರಾನ್ ಹೇಳಿಲ್ಲ’ ಚಿತ್ರ ನಿರ್ಮಿಸಿದೆ.
ಈ ಹಿಂದೆ `ರಿಸರ್ವೇಶನ್’ ಪ್ರದರ್ಶನಕ್ಕೆ ಬ್ರಿಸ್ಟಲ್‍ಗೆ ಬಂದಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ, ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅವರು ಬ್ರಿಸ್ಟಲ್‍ಗೆ ತೆರಳಿ ಸಿನೆಮಾ ಪ್ರದರ್ಶನದ ನಂತರ ಸ್ಥಳಿಯ ಸಿನಿಮಾ ಪ್ರೇಕ್ಷಕರ ಜೊತೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಕನ್ನಡದ ಪ್ರಾದೇಶಿಕ ಭಾಷೆಗಳಲ್ಲೊಂದಾದ ಬ್ಯಾರಿ ಹಾಗೂ ಕನ್ನಡ ಭಾಷೆಗಳಲ್ಲಿ (ಇಂಗ್ಲಿಷ್ ಸಬ್ ಟೈಟಲ್ ಇದೆ) ಚಿತ್ರಿತಗೊಂಡಿರುವ ಸಾಂಸಾರಿಕ ಸಿನೆಮಾ ಇದಾಗಿದ್ದು ಡಾ| ಸಾ.ರಾ ಅಬೂಬಕ್ಕರ್ ರಚಿತ ಕತೆಯನ್ನು ಈ ಸಿನೆಮಾ ಆಧರಿಸಿದೆ. ಭಾರತದಲ್ಲಿನ ಸಮುದಾಯವೊಂದರಲ್ಲಿ ಪ್ರಸ್ತುತವಾಗಿರುವ ತ್ರಿವಳಿ ತಲಾಖ್ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್‍ನ ಇತ್ತೀಚಿನ ತೀರ್ಪಿನ ಸುತ್ತ ಚಿತ್ರಕತೆ ಸಿನೆಮಾದಲ್ಲಿ ಹೆಣೆಯಲ್ಪಟ್ಟಿದೆ.
ಬ್ರಿಸ್ಟಲ್ಲ್‍ನ ಕನ್ನಡ ಸ್ನೇಹಿತರು ಈ ಚಿತ್ರ ಪ್ರದರ್ಶನ ಆಯೋಜಿಸಿದ್ದು ಸಿನೆಮಾ ಸದಭಿರುಚಿಯ ಕನ್ನಡ ಮೂಲದ ಸಿನೆಮಾಗಳನ್ನು ಇಷ್ಟಪಡುವ ಬ್ರಿಸ್ಟಲ್ ಹಾಗು ನೆರೆಯ ಊರಿನ ಕನ್ನಡಿಗರು ವಿಶೇಷ ಕಾತರದಿಂದ ಗುಲ್ವಾಡಿ ಟಾಕೀಸ್ ನ ಹೊಸಚಿತ್ರವನ್ನು ನಿರೀಕ್ಷಿಸುತ್ತಿದ್ದಾರೆ.
ಟ್ರಿಪಲ್ ತಲಾಖ್ (ಬ್ಯಾರಿ ಭಾಷೆಯ ಚಲನಚಿತ್ರ)
ನಾಡೋಜ ಡಾ| ಸಾ. ರಾ ಅಬೂಬಕ್ಕರ್ ಕಥೆಯನ್ನಾಧರಿಸಿ ಯಾಕೂಬ್ ಖಾದರ್ ಗುಲ್ವಾಡಿ ಅವರ ಚಿತ್ರಕಥೆ ಸಂಭಾಷಣೆ-ನಿರ್ದೇಶನ ಹಾಗೂ ಪಣಕನಹಳ್ಳಿ ಪ್ರಸನ್ನ ಮತ್ತು ರಿಝ್ವಾನ್ ಗುಲ್ವಾಡಿ ಸಹ ನಿರ್ದೇಶನದಲ್ಲಿ ಮುಂಬಯಿನ ಎನ್.ಪಿ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಪಕತ್ವದಲ್ಲಿ ಗುಲ್ವಾಡಿ ಟಾಕೀಸ್ ನಿರ್ಮಾಣ ಗೊಳಿಸಿದೆ.
ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್ ಛಾಯಾಗ್ರಹಣದಲ್ಲಿ ರಚಿತ ಸಿನೆಮಾಕ್ಕೆ ಗಿರೀಶ್ ಬಿ.ಎಂ ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್ ನೀಡಿರುವರು. ಮೋಹನ್ ಎಲ್.ರಂಗ ಕಹಳೆ ಕಲರೀಸ್ಟ್ ಎಡಿಟರ್ ಆಗಿದ್ದು ಮುನೀಬ್ ಅಹಮದ್ ಸೌಂಡ್ ಮಿಕ್ಸಿಂಗ್ ನಡೆಸಿರುವರು. ಆಬೀದ್ ಖಾದರ್ ಕಲೆಯಲ್ಲಿ ರಚಿಸಿದ ಚಿತ್ರಕ್ಕೆ ಇಸ್ಮಾಯಿಲ್ ಸರ್ಫುದ್ದೀನ್ ವಸ್ತ್ರವಿನ್ಯಾಸಗೊಳಿಸಿರುವರು. ರೂಪ ವರ್ಕಾಡಿ, ನವ್ಯ ಪೂಜಾರಿ, ಬೇಬಿ ಫಹಿಮತುಲ್ ಯುಶ್ರ, ಅಝರ್ ಶಾ, ಮಹಮ್ಮದ್ ಬಡ್ಡೂರ್, ಎಂ.ಕೆ ಮಠ, ಅಮೀರ್ ಹಂಝ, ರವಿಕಿರಣ್ ಮುರ್ಡೇಶ್ವರ, ಎ.ಎಸ್.ಎನ್ ಹೆಬ್ಬಾರ್, ಉಮರ್ ಯು.ಹೆಚ್, ಮಾಸ್ಟರ್ ಫಹಾದ್, ನಾರಾಯಣ ಸುವರ್ಣ, ಪ್ರಭಾ ಎನ್.ಪಿ ಸುವರ್ಣ ಅಭಿನಯದಲ್ಲಿ ಈ ಸಿನೆಮಾ ಮೂಡಿಬಂದಿದೆ.
ಟ್ರಿಪಲ್ ತಲಾಖ್ (ಕಥೆ ಸಾರಾಂಶ)
ಅದೊಂದು ಬ್ಯಾರಿ ಜನಾಂಗ ಇರುವ ಊರು.ಅಲ್ಲೊಂದು ಕುಟುಂಬ,ಹಂಝ, ಫಾತಿಮಾಳಿಗೆ ಎರಡನೇ ಗಂಡ.ಅವಳಿಗೆ ಶಬೀನ ಎಂಬ ಮೊದಲ ಗಂಡನ ಮಗಳಿದ್ದಾಳೆ.ಈಗ ಹಂಝಾನಿಗೂ ಒಂದು ಗಂಡು ಮಗು ಹುಟ್ಟಿದೆ.ಹಂಝ ಲಾರಿ ಡ್ರೈವರ್, ಫಾತಿಮಾ ಬೀಡಿ ಕಟ್ಟುವ ಕೆಲಸ ಮಾಡುತ್ತ ಕಷ್ಟದ ಜೀವನ ಸಾಗಿಸುತ್ತಿದ್ದಾಳೆ. ಅದೊಂದು ದಿನ ಗಂಡ ಕೆಲಸದ ಮೇಲೆ ಗೋವ ಕಡೆ ಹೋಗುತ್ತೇನೆಂದು ಹೋದವನು,ಒಂದು ಘಟನೆಯ ಮೂಲಕ ಮತ್ತೊಂದು ಮದುವೆ ಆಗುತ್ತಾನೆ. ಫಾತಿಮಾಳಿಗೆ ಅಂಚೆ ಮೂಲಕ ತಲಾಖ್ ಪತ್ರ ಕಳಿಸಿ ಕೊಡುತ್ತಾನೆ. ಅದರಿಂದ ಫಾತಿಮ ಆಘಾತಕ್ಕೆ ಒಳಗಾಗುತ್ತಾಳೆ. ಇರುವ ಊರಲ್ಲಿ ಅವಮಾನದ ಬದುಕು ಸಾಗಿಸುವುದು ಕಷ್ಟವೆನಿಸಿ ಊರು ತೊರೆಯುತ್ತಾಳೆ.
ಪರಿಚಯವಿಲ್ಲದ ಊರಿಗೆ ಬಂದ ಫಾತಿಮ ಅಲ್ಲಿ ಪರಿಚಯವಾದ ವಕೀಲರೊಬ್ಬರ ಹೆಂಡತಿ ಮಮ್ತಾಜ್‍ಳ ನೆರವಿನ ಮೂಲಕ ಅವರ ಮನೆ ಕೆಲಸದವಳಾಗಿ ನೆಲೆಯೂರುತ್ತಾಳೆ. ಅವರ ಸಹಕಾರದಿಂದ ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ಯಶ ಸಾಧಿಸುತ್ತಾಳೆ. ಮಗಳು ಕಾನೂನು ಪದವಿ ಮಾಡಿ, ಸ್ನಾತಕೋತ್ತರ ಪದವಿ ಮಾಡುವ ಪ್ರಯತ್ನದಲ್ಲಿ ಇರುತ್ತಾಳೆ. ಆ ದಿನಗಳಲ್ಲಿ ಆಕಸ್ಮಿಕ ಘಟನೆಯ ಮೂಲಕ ಪರಿಚಯವಾದ ಹೈದರಾಬಾದ್ ಮೂಲದ ಮುಸ್ತಾಕ್ ಎನ್ನುವ ಹುಡುಗನ ಜೊತೆ ಶಬೀನಳ ಮದುವೆ ಆಗುತ್ತದೆ. ಆ ನಂತರ ಕೆಲ ದಿನಗಳಲ್ಲೇ ಅವನಿಂದಲೂ ಶಬೀನಾಗೆ ತಲಾಖ್ ಆಗುತ್ತದೆ . ಅಂಚೆ, ವಾಟ್ಸಪ್, ಪೆÇೀನ್, ಈ ಮೈಲ್ ಈ ತರದ ಒಂದೇ ಬಾರಿ ಮೂರು ಸಾರಿ ಹೇಳುವ `ಟ್ರಿಪಲ್ ತಲಾಖ್’ಗೆ ಪವಿತ್ರ ಕುರಾನ್‍ನಲ್ಲಿ ಅರ್ಥವಿಲ್ಲವೆಂದು ಕಾನೂನಿನ ಮೂಲಕ ಹೋರಾಟ ಮಾಡುವ ಸಂಘರ್ಷಮಯ ಕಥಾನಕವೆ `ಟ್ರಿಪಲ್ ತಲಾಖ್’ ಇದೊಂದು ಚಿಂತನ ಶೀಲ ಸಂವೇನಾತ್ಮಕ ಕಥಾವಸ್ತು. ಹ್ರದಯಸ್ಪರ್ಶಿ ದೃಶ್ಯಗಳ ಮೂಲಕ ಕಥಾಹಂದರ ಬಿಚ್ಚಿಕೊಳ್ಳುತ್ತದೆ.
: ಚಿತ್ರ-ಮಾಹಿತಿ: ರೋನ್ಸ್ ಬಂಟ್ವಾಳ್


ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ
ಶಾಲೆಯಲ್ಲಿ ಕಲಿತ ಋಣ ನಮ್ಮೆಲ್ಲರಲ್ಲಿದೆ-ಎನ್.ಟಿ ಪೂಜಾರಿ
ಮುಂಬಯಿ, ಡಿ.04: ಉಡುಪಿ ಜಿಲ್ಲೆಯ ಕುಂದಾಪುರ ಗುಜ್ಜಾಡಿ ಇಲ್ಲಿನ ತೀರಾ ಗ್ರಾಮೀಣ ಪ್ರದೇಶದÀಲ್ಲಿ ದಿ| ಶಾಬುದ್ದೀನ್ ಅಬ್ದುಲ್ ಖಾದಿರ್ ಮಾಸ್ತರ್ ಅವರಿಂದ ಅಸ್ತಿತ್ವಕ್ಕೆ ಬಂದಿರುವ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಶತಮಾನೋತ್ಸವ ಸಂಭ್ರಮ. ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು ಕೂಡ ಅವರೇ ಆಗಿದ್ದು, 1919ರಲ್ಲಿ ಆರಂಭಿಸಿದ ಈ ಜ್ಞಾನದೇಗುಲ ದಿ| ಯು.ಅನಂತಮಯ್ಯ ಈ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ಮೊದಲಿಗೆ ಖಾಸಗಿ ಜಾಗವೊಂದರಲ್ಲಿ ಪುಟ್ಟ ಕೊಠಡಿಯಲ್ಲಿ ಆರಂಭಗೊಂಡ ಈ ಶಾಲೆ ಬಳಿಕ ಮ್ಯಾಕ್ಸಿಂ ಮಿರಾಂದರ್ ಎಂಬುವರ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. ಬಳಿಕ ಸುಮಾರು ಐದು ದಶಕಗಳ ಹಿಂದೆ ಈಗಿರುವ ಸರಕಾರಿ ಜಾಗದಲ್ಲಿ ಈ ಶಾಲೆಯು ಪಾಠ ಬೋಧನೆ ಮುಂದುವರೆಸಿತು.1980-90ರ ದಶಕದಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ ಒಂದು ಸಾವಿರ ಮಂದಿ ವಿದ್ಯಾಥಿರ್üಗಳು ವಿದ್ಯಾರ್ಜನೆಗೈದ ಇತಿಹಾಸ ಇದೆ.
ಹಿಂದೆ ಈ ಶಾಲೆಗೆ ಕಂಚುಗೋಡು, ತ್ರಾಸಿ, ಗಂಗೊಳ್ಳಿ, ಮುಳ್ಳಿಕಟ್ಟೆ, ಗುಜ್ಜಾಡಿ, ನಾಯಕವಾಡಿ, ಬೆಣ್ಗೆರೆ, ಕಳಿಹಿತ್ಲು ಮತ್ತಿತರ ಕಡೆಗಳಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದರು. ಪ್ರಸ್ತುತ ಈ ಶಾಲೆಯಲ್ಲಿ 1ರಿಂದ 8ರವರೆಗಿನ ತರಗತಿಯಲ್ಲಿ 229 ಮಂದಿ ಹಾಗೂ ಪೂರ್ವ ಪ್ರಾಥಮಿಕ (ಎಲ್‍ಕೆಜಿ, ಯುಕೆಜಿ)ದಲ್ಲಿ 58 ಮಕ್ಕಳು ಸಹಿತ ಒಟ್ಟು 287 ಮಂದಿ ವಿದ್ಯಾಥಿರ್üಗಳು ವ್ಯಾಸಾಂಗ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ಆಂಗ್ಲಮಾಧ್ಯಮ ವಿಭಾಗ ಕೂಡ ಅಳವಡಿಸಿ ಕೊಂಡಿದ್ದು, ಇದಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸದ್ಯ ಮುಖ್ಯ ಶಿಕ್ಷಕ ಸಹಿತ 9 ಮಂದಿ ಶಿಕ್ಷಕರಿದ್ದು, ಮೂವರು ಗೌರವ ಶಿಕ್ಷಕಿಯರಿದ್ದಾರೆ. ರಾಮನಾಥ್ ಚಿತ್ತಾಲ್ ಎಸ್‍ಡಿಎಂಸಿ ಅಧ್ಯಕ್ಷರಾಗಿದ್ದು ಉಮೇಶ್ ಎಚ್. ಮೇಸ್ತ್ರು ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ.

ಮುಂಬಯಿನ ಯುವೋದ್ಯಮಿ ಎನ್.ಟಿ ಪೂಜಾರಿ, ಶೇಷಯ್ಯ ಕೋತ್ವಾಲ್, ಪದ್ಮನಾಭ ಕೋತ್ವಾಲ್, ಗಣಪತಿ ಮೇಸ್ತ, ದಯಾಕರ ಮೇಸ್ತ, ಲಂಡನ್‍ನಲ್ಲಿ ವೈದ್ಯರಾಗಿರುವ ಡಾ| ಪ್ರಭಾಕರ ಮೇಸ್ತ, ಡಾ| ಅರುಣ್ ಕುಮಾರ್ ಜಿ., ಇತಿಹಾಸತಜ್ಞ ಡಾ| ವಸಂತ ಮಾದವ ಕೊಡಂಚ, ಸಿಂಡಿಕೇಟ್ ಬ್ಯಾಂಕ್ ಎಜಿಎಂ ಗಣಪತಿ ಶೇರುಗಾರ್, ನಟ ಚಂದ್ರಕಾಂತ್ ಕೊಡಪಾಡಿ, ಕುಂದಾಪುರ ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಮಂಜು ನಾಯ್ಕ, ಕುಂದಾಪುರ ತಾಲೂಕು ಸಮಿತಿ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ, ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಮೇಸ್ತ ಸೇರಿದಂತೆ ಹಲವು ಮಂದಿ ಸಾದಕರು ಈ ಶಾಲೆಯಲ್ಲಿ ಕಲಿತಿದ್ದಾರೆ.
ಗಣಪತಿ ಮೇಸ್ತ ಸಹೋದರರು, ಪ್ರಶಾಂತ್ ಹನಿವಲ್, ಶಾಂತೆರಾಜ್ ಕೆ, ಎನ್.ಟಿ ಪೂಜಾರಿ, ಗೋಪಾಲ ಎಸ್. ಪುತ್ರನ್, ದುಬಾಯಿ ಉದ್ಯಮಿ ದಿ| ಕೊಂಚಾಡಿ ಗಣಪತಿ ಶೆಣೈ ಟ್ರಸ್ಟ್‍ನಿಂದ ಶಾಲೆಯ ಕಟ್ಟಡ ನವೀಕರಣ ಗೊಂಡಿದ್ದು ಐಶ್ವರ್ಯ ಡಿ.ಮೇಸ್ತ ಶಾಲಾ ವಾಹನ ಒದಗಿಸಿ ತಮ್ಮ ಶಿಕಣಾರ್ಜನಾ ಸಂಸ್ಥೆಯ ಋಣ ಪೂರೈಸಿದ್ದಾರೆ. ಸ್ಮಾರ್ಟ್ ಕ್ಲಾಸ್ ಅಗತ್ಯವಿದ್ದು ಕಂಪ್ಯೂಟರ್ ಲ್ಯಾಬ್, ಗ್ರೀನ್‍ಬೋರ್ಡ್, ಶಿಕ್ಷಕರ ಕೊಠಡಿಗಳ ಸಹಿತ ಅನೇಕ ಬೇಡಿಕೆಗಳಿವೆ.
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆ ಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಕಷ್ಟದ ದಿನಗಳಲ್ಲಿ ಕಲಿತ ನೆನಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನನ್ನ ಈವರೆಗಿನ ಬದುಕಿನ ಪಯಣದ ಆರಂಭದ ಮೆಟ್ಟಿಲು ಈ ಶಾಲೆ ಎನ್ನುವುದೇ ಹೆಮ್ಮೆ. ವಿದ್ಯಾಥಿರ್üಯಾಗಿದ್ದಾಗ ಕೃಷಿ ಮಂತ್ರಿಯಾಗಿದ್ದೆ. ಈ ಶಾಲೆಯಲ್ಲಿ ಕಲಿತ ಋಣ ನಮ್ಮೆಲ್ಲರ ಮೇಲಿದೆ ಎಂದು ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಎನ್.ಟಿ ಪೂಜಾರಿ ತಿಳಿಸಿದ್ದಾರೆ. ಜನವರಿ ಕೊನೆಯಲ್ಲಿ ಶತಮಾನೋತ್ಸವ ಸಂಭ್ರಮಿಸಲಾಗುವುದು. ಶಾಲಾಭಿವೃದ್ಧಿಯಲ್ಲಿ ಸರಕಾರದ ಜತೆಗೆ ಊರವರು, ಪೆÇೀಷಕರು, ದಾನಿಗಳು, ಎಸ್‍ಡಿಎಂಸಿ, ಹಳೆ ವಿದ್ಯಾರ್ಥಿ ಸಂಘದ ನೆರವು ಹಳೆ ವಿದ್ಯಾಥಿರ್üಗಳು, ಊರವರ ಸಹಕಾರ ಅಗತ್ಯವಿದೆ ಎಂದು ಮುಖ್ಯ ಶಿಕ್ಷಕ ಆನಂದ ಜಿ. ತಿಳಿಸಿದ್ದಾರೆ.


ಆಕಾಶವಾಣಿಯ ರಾಜ್ಯ ಮಟ್ಟದ 2019ನೇ ಸಾಲಿನ ವಾರ್ಷಿಕ ಸ್ಪರ್ಧೆ
ಅವಳಿ ಪುರಸ್ಕಾರಗಳಿಗೆ ಭಾಜನವಾದ ಕಲಬುರಗಿ ಆಕಾಶವಾಣಿ
ಮುಂಬಯಿ, ಡಿ.03: ಆಕಾಶವಾಣಿಯ ರಾಜ್ಯ ಮಟ್ಟದ 2019ನೇ ಸಾಲಿನ ವಾರ್ಷಿಕ ಸ್ಪರ್ಧೆಯಲ್ಲಿ ಅವಳಿ ಪುರಸ್ಕಾರ ಪಡೆದ ಕಲಬುರಗಿ ಆಕಾಶವಾಣಿಗೆ ಬೆಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ (ನ.29) ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.
ಸಿನಿಮಾ ರಂಗದ ನಿರ್ಮಾಪಕ, ನಿರ್ದೇಶಕರಾದ ಎಸ್.ನಾರಾಯಣ್ ಅವರು ಕಲಬುರಗಿ ಆಕಾಶವಾಣಿ ಕೇಂದ್ರ ಸಿದ್ಧಪಡಿಸಿದ `ನಾಯಿಬಾಲ ಡೊಂಕೆ’ ನಾಟಕ ನಿರ್ಮಾಣ ಮಾಡಿದ ಕಾರ್ಯಕ್ರಮ ನಿರ್ವಾಹಕ ರಾಜೇಂದ್ರ ಆರ್.ಕುಲಕರ್ಣಿ ಮತ್ತು ಸೋಮಶೇಖರ್ ಎಸ್.ರುಳಿ ಅವರಿಗೆ ಪ್ರಶಸ್ತಿ ಪತ್ರ, ಫಲಕ ನೀಡಿ ಸತ್ಕರಿಸಿದರು.
ಬೆಂಗಳೂರು ಆಕಾಶವಾಣಿ ಕೇಂದ್ರದ ಉಪಮಹಾ ನಿರ್ದೇಶಕಿ (ಇ) ನೇಹಾ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರಕಾರದ ಯೋಜನೆಗಳಿಗೆ ಕೊಡಮಾಡುವ `ಪೆÇೀಷಣ್ ಅಭಿಯಾನ್’ ವಿಭಾಗದಲ್ಲಿ ಅರ್ಹತಾ ಪ್ರಮಾಣ ಪತ್ರ (ಸರ್ಟಿಫಿಕೇಟ್ ಆಫ್ ಮೆರಿಟ್) ಎರಡನೇ ಬಹುಮಾನ ಪಡೆದ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಅವರಿಗೆ ಎಸ್. ನಾರಾಯಣ್ ಪುರಸ್ಕಾರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕವಯಿತ್ರಿ ವಿಮರ್ಶಕಿ ಡಾ| ಪಿ.ಚಂದ್ರಿಕಾ, ಬೆಂಗಳೂರು ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಡಾ| ನಿರ್ಮಲಾ ಎಲಿಗಾರ್, ಡಾ| ಎನ್.ರಘು, ಮಾರುಕಟ್ಟೆ ವಿಭಾಗದ ಉಪ ಮಹಾನಿರ್ದೇಶಕ ಅನಿಲ್ ಕುಮಾರ್ ಮಂಗಲಗಿ, ವಿವಿಧ ಭಾರತಿಯ ಉಪನಿರ್ದೇಶಕ ಆರ್.ಕೆ ಗೋವಿಂದರಾಜನ್, ಪಿಸಿಡಬ್ಲ್ಯೂ ಮುಖ್ಯಸ್ಥ ಉದಯವೀರ್ ಸಿಂಗ್, ತಾಂತ್ರಿಕ ವಿಭಾಗದ ಎಸ್.ಪಿ ಮೇತ್ರೆ, ಆಡಳಿತಾಧಿಕಾರಿ ಅಶ್ವಿನಿ, ಕಲಬುರಗಿ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್ ಕುಲಕರ್ಣಿ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಾಹಕ ಡಾ| ಎ.ಎಸ್ ಶಂಕರನಾರಾಯಣ್ ಸ್ವಾಗತಿಸಿದರು. ಉದ್ಘೋಷಕಿ ಕೆ.ಸುಮತಿ ಕಾರ್ಯಕ್ರಮ ನಿರೂಪಿಸಿದರು.



ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ : ಬಿಜೆಪಿ ಅಭ್ಯಥಿರ್ü ಡಾ| ನಾರಾಯಣ ಗೌಡ ಮತದಾನ
ಮುಂಬಯಿ (ಕೆ.ಆರ್‍ಪೇಟೆ), ಡಿ.05: ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಮಹಾಸಮರದ ಹಿನ್ನೆಲೆಯಲ್ಲಿ ಇಂದು ತಾಲೂಕಿನ 258 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವು ನಡೆಯಿತು. ಬೆಳಿಗ್ಗೆÉಯಿಂದ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆ ಮುಕ್ತಾಯಗೊಂಡಿತು. ಒಟ್ಟಾರೆ ಕ್ಷೇತ್ರದಲ್ಲಿ ಶೇ.80ರಷ್ಟು ಮತದಾನವಾಗಿದೆ.
ಬಿಜೆಪಿ ಅಭ್ಯಥಿರ್ü ಡಾ| ಕೆ.ಸಿ ನಾರಾಯಣ ಗೌಡ ಅವರು ಪತ್ನಿ ದೇವಕಿ ಎನ್. ಗೌಡ ಹಾಗೂ ಸುಪಿತ್ರಿ ನೇಹಾ ಕರಣ್ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಬಳಿಕ ಮತದಾನ ಕೇಂದ್ರದಿಂದ ಹೊರಬಂದು ವಿಜಯದ ಸಂಕೇತವನ್ನು ಪ್ರದರ್ಶಿಸಿ ತಮ್ಮ ಗೆಲುವು ನಿಚ್ಛಳವಾಗಿದೆ ಎಂದರು.
ಸತತ ಎರಡು ಅವಧಿಗೆ ಗೆದ್ದು ತಾಲೂಕಿನ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದ ಡಾ| ನಾರಾಯಣ ಗೌಡ ಪಕ್ಷದ ವರ್ತನೆಗೆ ಮನನೊಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಶಾಸಕ ಸ್ಥಾನದಿಂದ ಅನರ್ಹಗೊಂಡು ಮೂರನೇ ಗೆಲುವಿಗೆ ಮತದಾರರ ಮುಂದೆ ಬಂದಿರುವ ಸ್ವಾಭಿಮಾನಿ ಬಿಜೆಪಿ ಅಭ್ಯಥಿರ್ü ಎಂದೆಣಿಸುವರು.






Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of Cecilia Menezes( 88 Years ) | LIVE From Kemmannu | Udupi

New year Mass | St. Theresa Church, Kemmannu | Udupi

Christman Mass | St. Theresa Church, Kemmannu | Udupi

Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi

Annual Day Calebration 2025 | Carmel English School, Kemmannu

Final Journey Of Francis Paul Quadros (59 Years) | LIVE From Udupi

Final Journey of Sudeep Sebastian Gordon Martis (55 years) | LIVE from Kalmady

Final Journey of Tyron Pereira (57 years) | LIVE from Kalmady, Udupi

Final Journey of Lawrence M Lewis (82 years) | LIVE from Milagres, Kallianpur, Udupi

Final Journey of Salvadore Fernandes (76 Years) | LIVE from Shirva | Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Focus Studio, Near Hotel Kidiyoor, Udupi

Earth Angels - Kemmannu Since 2023

Kemmannu Channel - Ktv Live Stream - To Book - Contact Here

Click here for Kemmannu Knn Facebook Link
Sponsored Albums
Exclusive
Annual Day Celebrated at Carmel English School, Kemmannu
Save Swarna River By Dr Gerald Pinto, Kallianpur
Udupi: Cooking without fire competition at Kemmannu Church [Video]
A ‘Wisdom Home of Memories’, a heritage Museum in Suratkal, Mangaluru
Celebrating 50 Years of Devotion: Iconic Konkani Hymn Moriye Krista Maye Marks Golden Jubilee
Arrest of Nuns’ at Chhattisgarh - Massive Protest Rally in Udupi Echoes a Unified Call for Justice and Harmony [Video]
MCC Bank Inaugurates Its 20th Branch in Byndoor
Mog Ani Balidan’ – A Touching Konkani Novel Released at Anugraha, Udupi [Photographs updated]
Milagres Cathedral celebrates Sacerdotal Ruby Jubilee of Mngr Ferdinand Gonsalves and Parish Community Day with grandeur
TODAY -
Write Comment
E-Mail To a Friend
Facebook
Twitter
Print 



