Brief Mumbai, Mangalore News with pictures
Kemmannu News Network, 25-12-2019 09:54:13
ಮೂಡುಬಿದಿರೆ ಪ್ರೆಸ್ಕ್ಲಬ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಮೂಡುಬಿದಿರೆ
ಸಹಯೋಗದಲ್ಲಿ ಅನಿತಾ ಪಿ.ಪೂಜಾರಿ ರಚಿತ `ಮೋಹನ ತರಂಗ’ ಕೃತಿ ಬಿಡುಗಡೆ
ಮುಂಬಯಿ, ಡಿ.24: ಅನಿತಾ ಪಿ ಪೂಜಾರಿ ತಾಕೊಡೆ ಅವರು ಬರೆದಿರುವ ಐದನೆಯ ಕೃತಿ ಮೋಹನ ತರಂಗ ಕೃತಿ ಡಿ.30ರ ಸೋಮವಾರ ಸಾಯಂಕಾಲ 4.00 ಗಂಟೆಗೆ ಮೂಡುಬಿದಿರೆ ಇಲ್ಲಿನ ಸಮಾಜ ಮಂದಿರ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಮಾಜಿ ಸಚಿವ ಹಾಗೂ ಸಮಾಜ ಮಂದಿರ ಸಭಾ ಮೂಡುಬಿದಿರೆ ಇದರ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆ, ಮುಖ್ಯ ಅತಿಥಿüಯಾಗಿ ಕರ್ನಾಟಕ ರಾಜ್ಯದ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಗೌರವ ಅತಿಥಿüಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯೆ, ಉಡಲ್ ತುಳು ಮಾಸಿಕದ ಸಂಪಾದಕಿ ಜಯಂತಿ ಎಸ್.ಬಂಗೇರ ಆಗಮಿಸಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಕೃತಿ ಬಿಡುಗಡೆ ಗೊಳಿಸಲಿದ್ದಾರೆ.
ಕರ್ನಾಟಕ ಸರಕಾರದ ರಂಗ ಸಮಾಜ ಸದಸ್ಯ ಜೀವನ್ ರಾಂ ಸುಳ್ಯ ಶುಭಶಂಸÀನೆ ಗೈಯಲಿದ್ದು ಪ್ರಸಿದ್ಧ ಉರಗತಜ್ಞ ಸಾಹಿತಿ ಗುರುರಾಜ್ ಸನಿಲ್ ಕೃತಿ ಪರಿಚಯಿಸಲಿದ್ದಾರೆ. ಕರ್ನಾಟಕ ಸಂಘ ಮುಂಬಯಿ ಪ್ರಕಾಶನದ ಮೂಲಕ ಪ್ರಕಟಗೊಂಡ ಈ ಕೃತಿ, ಎಂ.ಎ ಪದವಿಗೆ ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಿಂದ ಸಿದ್ಧಪಡಿಸಿದ, ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ರಚಿಸಿದ ಸಂಪ್ರಬಂಧ ಇದಾಗಿದೆ.
ಮೂಡುಬಿದಿರೆ ಪ್ರೆಸ್ಕ್ಲಬ್ನ ಅಧ್ಯಕ್ಷ ವೇಣುಗೋಪಾಲ್, ಮೋಹನ್ ಮಾರ್ನಾಡ್ , ಅನಿತಾ ಪಿ.ತಾಕೊಡೆ ಉಪಸ್ಥಿತರಿದ್ದು, ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಕಾರ್ಯಕ್ರಮದ ನಿರ್ವಹಿಸಲಿದ್ದಾರೆ. ಸಂತ ಅಲೋಶಿಯಸ್ ಪ.ಪೂ ಕಾಲೇಜು, ಮಂಗಳೂರು ಇದರ ಉಪನ್ಯಾಸಕ ದೀವಿತ್ ಎಸ್. ಕೆ. ಪೆರಾಡಿ ಅವರು `ಏಕವ್ಯಕ್ತಿ ಯಕ್ಷ ಪ್ರಯೋಗ’ ಪ್ರಸ್ತುತಪಡಿಸಲಿದ್ದಾರೆ ಎಂದು ಸುರೇಂದ್ರಕುಮಾರ್ ಮಾರ್ನಾಡ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.
ಡಿ.26: ಪೇಜಾವರ ಮಠದಲ್ಲಿ ಧನ್ವಂತರೀ ಜಪ-ವಿಷ್ಣು ಸಹಸ್ರ ನಾಮಾರ್ಚನೆ
ಮುಂಬಯಿ, ಡಿ.23: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪಾದಂಗಳವರ ಆರೋಗ್ಯ ವೃದ್ಧಿಗಾಗಿ ಸೂರ್ಯಗ್ರಹಣದ ಸಂದರ್ಭದಲ್ಲಿ ಡಿ.26ನೇ ಗುರುವಾರ ಬೆಳಿಗ್ಗೆ 8.00 ಗಂಟೆಯಿಂದ 11.00 ಗಂಟೆಯವರೆಗೆ ಶ್ರೀ ಪೇಜಾವರ ಮಠ, ಪ್ರಭಾತ್ ಕಾಲೋನಿ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ವಿಶೇಷ ರೀತಿಯ ಪೂಜಾಧಿಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 8.00 ಗಂಟೆಗೆ ಮಠದಲ್ಲಿನ ಶಿಲಾಮಯ ಮಂದಿರದ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಧನ್ವಂತರೀ ಜಪ ಹಾಗೂ ವಿಷ್ಣು ಸಹಸ್ರ ನಾಮಾರ್ಜನೆ, ಉಪರಾಗ ಶಾಂತಿಯನ್ನು ಮಾಡುವುದಾಗಿ ಮಠದ ವಿದ್ವಾನರು ಸಂಕಲ್ಪ ಮಾಡಿದ್ದಾರೆ.
ಆ ಪ್ರಯುಕ್ತ ಶ್ರೀ ಗುರುಗಳ ಭಕ್ತರು ಹಾಗೂ ಸಕಲ ಶಿಷ್ಯವೃಂದ ಈ ಧಾರ್ಮಿಕ ಕಾಯಕ, ಜಪ ಪೂಜಾಧಿಗಳಲ್ಲಿ ಭಾಗಿಗಳಾಗಬೇಕಾಗಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ಮಂಡಳಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ ಈ ಮೂಲಕ ವಿನಂತಿಸಿದ್ದಾರೆ.
ಮಂಗಳೂರು ಮೂಡುಶೆಡ್ಡೆ ಶ್ರೀ ದುರ್ಗಾ ಪರಮೇಶ್ವರಿ ಕೃಪಾದಲ್ಲಿ
ಬಂಟರ ಸಂಘಗಳ ಕ್ಕೂಟಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ಸನ್ಮಾನ
ಮುಂಬಯಿ, ಡಿ.24: ಥಾಣೆ ಭಿವಂಡಿಯ ಹೆಸರಾಂತ ಉದ್ಯಮಿ, ವಿಶ್ವಾಮೃತ ಟೌನ್ಶಿಪ್ ಮುರ್ಬಾಡ್ ನಿರ್ದೇಶಕ, ಬಂಟರ ಸಂಘ ಮುಂಬಯಿ ಇದರ ಭಿವಂಡಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಎಸ್.ಶೆಟ್ಟಿ ತನ್ನ ಮಂಗಳೂರು ಇಲ್ಲಿನ ಮೂಡುಶೆಡ್ಡೆಯ ಶ್ರೀ ದುರ್ಗಾ ಪರಮೇಶ್ವರಿ ಕೃಪಾ ಗೃಹದಲ್ಲಿ ಇತ್ತೀಚೆಗೆ (ಡಿ.20) ನಡೆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿü ಆಗಿ ಭಾಗವಹಿಸಿದ್ದ ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಹೊಸಲಕ್ಕೆ ದೇವತಿ ಸಂಜೀವ ಶೆಟ್ಟಿ ಅವರನ್ನೊಳಗೊಂಡು ವಿಶ್ವನಾಥ ಶೆಟ್ಟಿ ಮತ್ತು ರೇವತಿ ವಿಶ್ವನಾಥ್ ದಂಪತಿ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಆರತಿ ನೆರವೇರಿಸಿದರು. ಬಳಿಕ ಹರೀಶ್ ಶೆಟ್ಟಿ ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಕರುಣಾಕರ ಎಸ್.ಶೆಟ್ಟಿ, ನ್ಯಾಯವಾದಿ ಉಮೇಶ್ ಎಸ್.ಶೆಟ್ಟಿ, ದಿನೇಶ್ ಎಸ್.ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು, ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು. ರಾತ್ರಿ ಶ್ರೀ ಕಟೀಲು ದುರ್ಗಾ ದಶಾವತಾರ ಯಕ್ಷಗಾನ ಮಂಡಳಿದ್ದು ಮೂಡುಶೆಡ್ಡೆ ಇಲ್ಲಿನ ಶ್ರೀ ದೇವಿ ಭಜನಾ ಮಂಡಳಿಯ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆಯಾಟ ಪ್ರದರ್ಶಿಸಿದರು. ಚೌಕಿ ಪೂಜೆಯ ಬಳಿಕ ಮಹಾ ಅನ್ನಸಂತಾರ್ಪಣೆ ನಡೆಸಲ್ಪಟ್ಟಿತು.
ಮಂಗಳೂರು ಮೂಡುಶೆಡ್ಡೆ ಶ್ರೀ ದುರ್ಗಾ ಪರಮೇಶ್ವರಿ ಕೃಪಾದಲ್ಲಿ
ಬಂಟರ ಸಂಘಗಳ ಕ್ಕೂಟಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ಸನ್ಮಾನ
ಮುಂಬಯಿ, ಡಿ.24: ಥಾಣೆ ಭಿವಂಡಿಯ ಹೆಸರಾಂತ ಉದ್ಯಮಿ, ವಿಶ್ವಾಮೃತ ಟೌನ್ಶಿಪ್ ಮುರ್ಬಾಡ್ ನಿರ್ದೇಶಕ, ಬಂಟರ ಸಂಘ ಮುಂಬಯಿ ಇದರ ಭಿವಂಡಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಎಸ್.ಶೆಟ್ಟಿ ತನ್ನ ಮಂಗಳೂರು ಇಲ್ಲಿನ ಮೂಡುಶೆಡ್ಡೆಯ ಶ್ರೀ ದುರ್ಗಾ ಪರಮೇಶ್ವರಿ ಕೃಪಾ ಗೃಹದಲ್ಲಿ ಇತ್ತೀಚೆಗೆ (ಡಿ.20) ನಡೆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿü ಆಗಿ ಭಾಗವಹಿಸಿದ್ದ ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಹೊಸಲಕ್ಕೆ ದೇವತಿ ಸಂಜೀವ ಶೆಟ್ಟಿ ಅವರನ್ನೊಳಗೊಂಡು ವಿಶ್ವನಾಥ ಶೆಟ್ಟಿ ಮತ್ತು ರೇವತಿ ವಿಶ್ವನಾಥ್ ದಂಪತಿ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಆರತಿ ನೆರವೇರಿಸಿದರು. ಬಳಿಕ ಹರೀಶ್ ಶೆಟ್ಟಿ ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಕರುಣಾಕರ ಎಸ್.ಶೆಟ್ಟಿ, ನ್ಯಾಯವಾದಿ ಉಮೇಶ್ ಎಸ್.ಶೆಟ್ಟಿ, ದಿನೇಶ್ ಎಸ್.ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು, ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು. ರಾತ್ರಿ ಶ್ರೀ ಕಟೀಲು ದುರ್ಗಾ ದಶಾವತಾರ ಯಕ್ಷಗಾನ ಮಂಡಳಿದ್ದು ಮೂಡುಶೆಡ್ಡೆ ಇಲ್ಲಿನ ಶ್ರೀ ದೇವಿ ಭಜನಾ ಮಂಡಳಿಯ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆಯಾಟ ಪ್ರದರ್ಶಿಸಿದರು. ಚೌಕಿ ಪೂಜೆಯ ಬಳಿಕ ಮಹಾ ಅನ್ನಸಂತಾರ್ಪಣೆ ನಡೆಸಲ್ಪಟ್ಟಿತು.
ಆಕಾಶವಾಣಿಯಲ್ಲಿ ಬಿಷ್ಪ್ರಿಂದ ಕ್ರಿಸ್ಮಸ್ ಸಂದೇಶ
ಮುಂಬಯಿ, ಡಿ.24: ಕಲಬುರಗಿ ಆಕಾಶವಾಣಿ ಕೇಂದ್ರವು ಕ್ರಿಸ್ಮಸ್ ದಿನ ಇಂದು (ಡಿ.25) ರಂದು ನಾಳೆ ಬೆಳಿಗ್ಗೆ 9.20 ಗಂಟೆಗೆ ಕಲಬುರಗಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕೆಲ್ ಮಿರಾಂಡಾ ಅವರ ಕ್ರಿಸ್ಮಸ್ ಸಂದೇಶ ಪ್ರಸಾರ ಮಾಡಲಿದೆ ಎಂದು ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್ ಕುಲಕುರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.18: ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ವಿರಾರ್ ಸಂಸ್ಥೆಯಿಂದ
ನಲ್ಲಸೋಫರಾದಲ್ಲಿ 7ನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವ
ಮುಂಬಯಿ, ಡಿ.24: ವಿರಾರ್ನ ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ನ ಆಯೋಜನೆಯಲ್ಲಿ 7ನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವವನ್ನು ಬರುವ ಜ.18ನೇ ಶನಿವಾರ ಯಶವಂತ್ ವಿವಾ ಟೌನ್ಶಿಪ್ ಮೈದಾನ, ವಿವಿಸಿಎಂಸಿ ಫೈರ್ ಬ್ರಿಗೇಡ್ ಹೌಸ್, ಅಲ್ಕಾಪುರಿ ನಲ್ಲಸೋಫರಾ ಪಶ್ಚಿಮ ಇಲ್ಲಿ ವಸಾಯ್-ನಲ್ಲಸೋಫರ ಪ್ರದೇಶದ ಜನಮಾನ್ಯ ಧುರೀಣ ಜಯೇಂದ್ರ ವಿಷ್ಣು ಠಾಕೂರ್ (ಭಾಯ್ ಠಾಕೂರ್) ಅವರ ನೇತೃತ್ವ ಹಾಗೂ ನಗರದ ಉದ್ಯಮಿ, ಸಮಾಜ ಸೇವಕ, ಧಾರ್ಮಿಕ ಚಿಂತಕ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಮತ್ತು ಬಳಗದ ಮುಂದಾಳತ್ವ, ಬಹುಜನ್ ವಿಕಾಸ್ ಆಘಾಡಿ (ಬಿವಿಎ) ಅಧ್ಯಕ್ಷ ಹಿತೇಂದ್ರ ಠಾಕೂರ್, ನಲ್ಲಸೋಫರಾದ ಶಾಸಕ ಕ್ಷಿತಿಜ್ ಠಾಕೂರ್, ಮಾಜಿ ಮಹಾಪೌರ ರಾಜೀವ್ ಪಾಟೀಲ್ ಉಪಸ್ಥಿತಿಯಲ್ಲಿ ನೆರವೇರಲಿದೆ. ಧಾರ್ಮಿಕ ಮುಂದಾಳುಗಳಾದ ಶೇಖರ್ ನಾೈಕ್, ಹರೀಶ್ ಶೆಟ್ಟಿ ಗುರ್ಮೆ, ಮೋಹನ್ ಭಾಯಿ, ಶ್ರೀನಿವಾಸ ನಾಯ್ಡು, ಸುನಂದ ಉಪಾಧ್ಯಾಯ ಮತ್ತಿತರರ ಸಹಭಾಗಿತ್ವÀದಲ್ಲಿ ಇದೀಗಲೇ ಈ ವಾರ್ಷಿಕ ಮಂಗಲೋತ್ಸವದ ಸರ್ವ ಸಿದ್ದತೆಗಳು ಭರದಿಂದ ಸಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ವಿೂರಾರೋಡ್ನಿಂದ ಡಹಾಣು ವರೆಗಿನ ಸರ್ವ ತುಳು ಕನ್ನಡಿಗರು ಮತ್ತು ಮುಂಬಯಿ ಮಹಾನಗರ ಮತ್ತು ಉಪನಗರಗಳ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಕ್ರೀಯರಾಗಿ ಕಾರ್ಯನಿರತರಾಗಿದ್ದಾರೆ.
ಅಂದು (ಜ.18) ಶನಿವಾರ ಶ್ರೀಪ್ರಸ್ಥ ಮೈದಾನ ನಾಲಾಸೋಫರಾ ಪಶ್ಚಿಮ ಇಲ್ಲಿ ಬೆಳಿಗ್ಗೆ 7.00 ಗಂಟೆಯಿಂದ ವಿದ್ವಾನ್ ಆನಂದ ತೀರ್ಥಾಚಾರ್ಯರ ನೇತೃತ್ವದಲ್ಲಿ, ವಿದ್ವಾನ್ ಪ್ರಹ್ಲಾದ್ ಆಚಾರ್ಯ ನಾಗರಹಳ್ಳಿ, ವಿದ್ವಾನ್ ಗೋಪಾಲ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಸುಪ್ರಭಾತಂ, ತೋಮಾಲ ಸೇವಾ, ಕುಂಕುಮಾರ್ಚನೆ, ವಿಷ್ಣು ಸಹಸ್ರ ನಾಮಾರ್ಚನಂ, ತುಲಾಭಾರ ಸೇವೆ ನೆರವೇರಲಿದೆ. ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆ ರವರೆಗೆ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಾನಗಳೊಂ ದಿಗೆ ಶ್ರೀ ದೇವರಿಗೆ ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ರಕ್ಷೆ, ಮಹಾಗಣಪತಿ ಹೋಮ ಮುಂತಾದ ಪೂಜೆಗಳು ನೆರವೇರಲಿದೆ.
ಮಧ್ಯಾಹ್ನ 3.00 ಗಂಟೆಯಿಂದ ಕರಾವಳಿ ಕರ್ನಾಟಕದ ಸಂಸ್ಕಾರ, ಸಂಸ್ಕøತಿ ಪರಂಪರೆಗಳ ಸಾಂಸ್ಕøತಿಕ ಧಾರ್ಮಿಕ ಹಿನ್ನೆಲೆಗಳನ್ನು ಬಿತ್ತರಿಸುವ ವೇಷ ಭೂಷಣ, ಚೆಂಡೆ ವಾದ್ಯ, ಬ್ಯಾಂಡ್ ಬಳಗ, ಮಹಾರಾಷ್ಟ್ರದ ಜನತೆಯ ಪರಂಪರೆ ವೈಶಿಷ್ಟ್ಯತೆ ಸಾರುವ ಡೋಲು ವಾದ್ಯಗಳ ವಾದನ, ಕೊಂಬು ಕಹಳೆಗಳ ಝೇಂಕಾರ, ಸಾಂಸ್ಕøತಿಕ ವೈಭವಗಳ ಪ್ರಾತ್ಯಕ್ಷಿಕೆ, ಗುಜರಾತ್, ಕೇರಳ, ತಮಿಳುನಾಡು, ಉತ್ತರ ಭಾರತೀಯ ಶೈಲಿಯ ಜಾನಪದ ನೃತ್ಯಗಳ ಪ್ರಾತ್ಯಕ್ಷಿಕೆಗಳು, ಸುಡುಮದ್ದುಗಳ ಅಬ್ಬರ, ಸುಮಂಗಳೆಯರ ಕಲಶ ಸ್ವಾಗತ ಇತ್ಯಾದಿಗಳ ವೈವಿಧ್ಯತೆಯೊಂದಿಗೆ ಶ್ರೀ ಪ್ರಸ್ಥ ಮೈದಾನದಿಂದ ಶ್ರೀನಿವಾಸ ಮಂಗಲ ಮಹೋತ್ಸವದ ಭವ್ಯ ಶೋಭಾಯಾತ್ರೆ (ಮೆರವಣಿಗೆ)ಯೊಂದಿಗೆ ಪುಷ್ಪಾಲಂಕೃತ ರಥದಲ್ಲಿ ಶ್ರೀ ದೇವಿ, ಭೂದೇವಿಯರ ಮೂರ್ತಿಗಳ ಭವ್ಯ ವೈಭವದ ಉತ್ಸವದೊಂದಿಗೆ ಮಂಗಲೋತ್ಸವ ನೆರವೇರಲಿರುವ ಪುಣ್ಯಸ್ಥಳಕ್ಕೆ ಬರಮಾಡಿ ಕೊಂಡು ಶ್ರೀನಿವಾಸ ಉತ್ಸವ ನಡೆಸಲಾಗುವುದು.
ಸಂಜೆ 6.00 ಗಂಟೆಯಿಂದ ತಿರುಮಂಜನ ಪುಷ್ಪಯಜ್ಞ ನೆರವೇರಲಿದ್ದು,7.00 ಗಂಟೆಗೆ ಲಕ್ಷಾಂತರ ಭಕ್ತಾಭಿಮಾಣಿಗಳ ಸಮ್ಮುಖದಲ್ಲಿ ದಾಸಸಾಹಿತ್ಯ ನಿರ್ದೇಶಕ ವಿದ್ವಾನ್ ಆನಂದ ತೀರ್ಥಾಚಾರ್ಯಋ ನೇತೃತ್ವದಲ್ಲಿ, ವಿದ್ವಾನ್ ಪ್ರಹ್ಲಾದ್ ಆಚಾರ್ಯ ನಾಗರಹಳ್ಳಿ, ವಿದ್ವಾನ್ ಗೋಪಾಲ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಶ್ರೀನಿವಾಸ ಮಂಗಲ ಮಹೋತ್ಸವವು ನೆರವೇರಲಿದೆ. ಈ ಪೂಜಾಧಿ ಕಾರ್ಯಕ್ರಮಗಳ ನಂತರ ನೆರೆದ ಸಮಸ್ತ ಭಕ್ತಾಭಿಮಾನಿಗಳಿಗೆ ಪ್ರಸಾದ ರೂಪದಲ್ಲಿ ತಿರುಪತಿ ಲಡ್ಡು ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ವಿೂರಾರೋಡ್ನಿಂದ ಡಹಾಣು ತನಕದ ಸರ್ವ ತುಳು ಕನ್ನಡಿಗರ ಸಂಘ ಸಂಸ್ಥೆಗಳ ಪೆÇ್ರ್ರೀತ್ಸಾಹ ಹಾಗೂ ಸಹಕಾರದಿಂದ ಈ ವರೆಗಿನ ಈ ಪವಿತ್ರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ಈ ಬಾರಿಯ 7ನೇ ವಾರ್ಷಿಕ ಮಂಗಲೋತ್ಸವದಲ್ಲೂ ಪಾಲ್ಗೊಳ್ಳುವ ಭಕ್ತರಿಗೆ ಹಲವಾರು ವ್ಯವಸ್ಥೆಗಳನ್ನು ಅಲ್ಲಲ್ಲಿ ಕಲ್ಪಿಸಲಾಗುತ್ತಿದೆ. ಅಂದು ಬೆಳಿಗ್ಗೆ ತುಲಾಭಾರ ಸೇವೆಯು ನೆರವೇರಲಿದ್ದು, ತುಲಾಭಾರ ಸೇವೆಯನ್ನು (ಅಕ್ಕಿ, ಸಕ್ಕರೆ, ಬೆಲ್ಲ, ತೆಂಗಿನಕಾಯಿ, ಧವಸಧಾನ್ಯ ಇತ್ಯಾದಿಗಳಿಂದ) ತುಲಾಭಾರ ಮಾಡಲಾಗುವುದು. ಉತ್ಸವದಲ್ಲಿ ಪಾಲ್ಗೊಳ್ಳುವ ದಂಪತಿಗಳಿಗಾಗಿ ಮಂಟಪದ ಮುಂಭಾಗ ವೈಭವ ಉತ್ಸವದ ಯಜಮಾನಿಕೆ ಪಡೆದುಕೊಳ್ಳುವ ಅವಕಾಶ ಒದಗಿಸಲಾಗಿದೆ. ಮುಂಬಯಿ ಮಹಾನಗರ ಮತ್ತು ಉಪನಗರ ಹಾಗೂ ಮೀರಾರೋಡ್ನಿಂದ ಡಹಾಣು ವರೆಗಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸರ್ವ ತುಳು ಕನ್ನಡಿಗರು ಮತ್ತು ವಿಶೇಷವಾಗಿ ಉತ್ಸವದ ಸುಪ್ರಭಾತಮ್ನಲ್ಲಿ ವೃತಸ್ಥ ಕೈಗೊಳ್ಳುವವರು ತುಳುನಾಡಿನ ಸಾಂಪ್ರದಾಯಿಕ ಉಡುಪು ಧರಿಸಿ ಬರುವಂತೆ ಮತ್ತು ಸುಮಂಗಲೆಯರು ಕಲಶ ಮತ್ತು ಶ್ರೀಫಲ (ತೆಂಗಿನಕಾಯಿ) ತಂದು ಬಂದು ಈ ಧಾರ್ಮಿಕ ಉತ್ಸವಕ್ಕೆ ಹೆಚ್ಚಿನ ಶೋಭೆ ತರುವಂತೆ ಸಂಘಟಕರು ವಿನಂತಿಸಿದ್ದಾರೆ.
ನಾಲಾಸೋಫರಾ ಪರಿಸರದಲ್ಲಿ ದಾಖಲಾತ್ಮಕ ಸಂಖ್ಯೆಯ ಭಕ್ತ ಜನಸ್ತೋಮದೊಂದಿಗೆ ವಿಶೇಷ ರೀತಿಯಲ್ಲಿ ನೆರವೇರಲಿರುವ ಈ ವಿಜೃಂಭಣೆಯ ಧಾರ್ಮಿಕ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತುಳು-ಕನ್ನಡಿಗರು, ಧಾರ್ಮಿಕ ಚಿಂತಕರು, ಭಕ್ತಾಭಿಮಾನಿಗಳು, ಮುಂಬಯಿ ಹಾಗೂ ಉಪನಗರಗಳ ತುಳು-ಕನ್ನಡ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಧಾನ ಸಂಘಟಕ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಹಾಗೂ ಕಾರ್ಯಕ್ರಮ ಸಂಯೋಜನಾ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯ ಮಂಡಳಿ ಈ ಮೂಲಕ ವಿನಂತಿಸಿದ್ದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link