ಮುಂಬಯಿ ವಿವಿ ಕನ್ನಡದ ವಿಭಾಗದಿಂದ ಕೃತಿಗಳ ಬಿಡುಗಡೆ


Rons Bantwal
Kemmannu News Network, 06-01-2020 11:20:27


Write Comment     |     E-Mail To a Friend     |     Facebook     |     Twitter     |     Print


ಮುಂಬಯಿ ವಿವಿ ಕನ್ನಡದ ವಿಭಾಗದಿಂದ ಕೃತಿಗಳ ಬಿಡುಗಡೆ-ಚಿತ್ರಕಲಾ ಪ್ರದರ್ಶನ-ಪದವಿ ಪ್ರದಾನ
ಕಲಾನ್ವೇಷಣೆಯಿಂದ ಸಮಾಜ ಪರಿವರ್ತನೆ ಸಾಧ್ಯ: ದೇವದಾಸ ಶೆಟ್ಟಿ    
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.04: ಮುಂಬಯಿ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬರುದೆಂದರೆ ದೊಡ್ದ ಮಾತು. ನಮಗೆ ಬಾರದಿದ್ದರೂ ಬೇಸರವಿಲ್ಲ. ಆದರೆ ನನ್ನ ಮಿತ್ರರೋರ್ವರಿಗೆ ಬಂದಿರುವುದು ಸಂತೋಷವಾಗಿದೆ. ಕಲೆ ಪ್ರದರ್ಶನಕ್ಕೆ ಪ್ರಶಂಸೆ, ಪ್ರಶಸ್ತಿ ಮುಖ್ಯವಲ್ಲ, ಕಲಾವಿದನ ಸಂತುಷ್ಟತನವೇ ಪ್ರಧಾನವಾದದು. ಬರೇ ಮಾರಾಟಕ್ಕಾಗಿ ಚಿತ್ರಕಲಾವಿದನಾಗುವುದು ಸರಿಯಲ್ಲ. ಕಲಾವೃತ್ತಿ, ಪ್ರವೃತ್ತಿಯಿಂದ ಪರರ ಜೀವನಕ್ಕೆ ಆದರ್ಶರಾಗಬೇಕು. ಆ ಮೂಲಕ ಕಲಾ ಉಳಿವಿಗೆ ಕಲಾವಿದನು ಶ್ರಮಿಸಬೇಕು. ಕಲಾವಿದನಿಂದ ಸೃಜನಶೀಲಾ ಕಲೆ ತೃಪ್ತಿದಾಯಕವಾಗಿದೆ. ಕಲಾವಿದನು ಬಣ್ಣ ನಿರ್ಮಾಣ ಮಾಡಿ ಕಲಾ ಪ್ರದರ್ಶನ ಮಾಡಿದಾಗಲೇ ಅಂತಹ ಕಲೆ ಜೀವನದಲ್ಲಿ ಶಾಸ್ವತವಾಗಿ ಉಳಿಯುತ್ತದೆ. ಕಲಾಧರ್ಮ ಉಳಿಸುವಿಕೆಯೇ ಕಲಾವಿದನ ಧರ್ಮವಾದಾಗಲೇ ಕಲೆಯಲ್ಲಿ ಸಮಾಜ ಪರಿವರ್ತನೆ ಸಾಧ್ಯವಾಗುವುದು ಎಂದು ಚಿತ್ರಕಲಾ ಪುರಸ್ಕೃತ, ಅಂತರಾಷ್ಟ್ರೀಯ ಪ್ರಸಿದ್ಧಿಯ ಹಿರಿಯ ಕಲಾವಿದ ದೇವದಾಸ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಶನಿವಾರ ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡದ ವಿಭಾಗ ಆಯೋಜಿಸಿದ್ದ ಕೃತಿಗಳ ಬಿಡುಗಡೆ, ಚಿತ್ರಕಲಾ ಪ್ರದರ್ಶನ, ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ದೇವದಾಸ ಶೆಟ್ಟಿ ಮಾತನಾಡಿದರು.

ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಪ್ರಜಾವಾಣಿ ದೈನಿಕ ಮೈಸೂರು ಆವೃತ್ತಿಯ ಉಪ ಸಂಪಾದಕ ಗಣೇಶ್ ಅಮೀನಗಡ ಅವರ `ವನ್ಯ ವರ್ಣ’ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಚಿತ್ರ ಕಲಾವಿದ, ಮುಂಬಯಿ ಕನ್ನಡಿಗ, ಜಯಂತ ಮುನ್ನೊಳ್ಳಿ ಕಲಾ ಬದುಕಿನ ನೋಟ) ಕೃತಿಯನ್ನು ದೇವದಾಸ ಶೆಟ್ಟಿ ಮತ್ತು ಸಹನಾ ಕಾಂತಬೈಲು ಇವರ `ಆನೆ ಸಾಕಲು ಹೊರಟವಳು’ ಕೃತಿಯನ್ನು ಜಯಂತ ಮುನ್ನೊಳ್ಳಿ ಬಿಡುಗಡೆ ಗೊಳಿಸಿದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಮತ್ತು ಕನ್ನಡ ವಿಭಾಗದ ಸಹ ಸಂಶೋಧÀಕಿ ಡಾ| ಉಮಾ ರಾವ್ ಕ್ರಮವಾಗಿ ಕೃತಿ ಪರಿಚಯಗೈದರು. ಇದೇ ಸಂದರ್ಭದಲ್ಲಿ ಎಂ.ಫಿಲ್ ಪದವೀಧರ ಸುಶೀಲಾ ಎಸ್.ದೇವಾಡಿಗ ಮತ್ತು ಸಂತೋಷ್ ಮೊಗಾವೀರ ಅವರಿಗೆ ಸನದು ಪ್ರದಾನಿಸಿ ಅಭಿನಂದಿಸಲಾಯಿತು.

ನಾನು ಶೈಕ್ಷಣಿಕ ಚೌಕಟ್ಟಿಗೆ ಒಳಪಟ್ಟವನಲ್ಲ. ಆದರೆ ಎಲ್ಲಾ ಪತ್ರಕರ್ತರಲ್ಲಿ ಬಹುತರಹ ವಿಚಾರಗಳು ಹೊಳೆದಂತೆ ನನ್ನಲ್ಲೂ ಹೊಳೆದು ವನ್ಯಜೀವಿ ಚಿತ್ರ ಕಲಾವಿದನೋರ್ವರ ಕೃತಿ ರಚಿಸಿದೆ. ಇಂದು ಪತ್ರಿಕೆಗಳಲ್ಲಿ ಸಾಹಿತಿಕ ವಿಷಯಗಳಿಗೆ ಜಾಗ ಕಡಿಮೆ ಆಗುತ್ತಿದ್ದರೂ ಹೊರನಾಡಿನ ಮುಂಬಯಿನಲ್ಲಿ ಕನ್ನಡದ ಕೈಕಂರ್ಯಗಳು ಶ್ರೀಮಂತಿಕೆಯಿಂದ ನಡೆಯುತ್ತಿರುವುದೇ ನಮ್ಮ ಅಭಿಮಾನ. ಮುಂಬಯಿವಾಸಿ ಕನ್ನಡಿಗರು ತಾವೂ ಬೆಳೆದು ಮತ್ತೊಬ್ಬರನ್ನೂ ಬೆಳೆಸುವ ಗುಣವುಳ್ಳವರು. ಆದುದರಿಂದ ಇಲ್ಲಿ ಕಲೆ, ಸಾಹಿತ್ಯದ ಬೆಳವಣಿಗೆಗೆ ಅವಕಾಶಗಳಿವೆ. ತಪ್ಪುಗಳ ಹುಡುಕಾಟ ಪತ್ರಕರ್ತರ ಅಭ್ಯಾಸಬಲವಾಗಿದ್ದರೂ ಸಾಂದರ್ಭಿಕವಾಗಿ ಹೊಂದಾಣಿಕಾ ಮನೋಭಾವ ಅಗತ್ಯವಾಗಿರಬೇಕು ಎಂದು ಗಣೇಶ್ ಅಮೀನಗಡ ತಿಳಿಸಿದರು.

ಜಯಂತ ಮುನ್ನೊಳ್ಳಿ ಮಾತನಾಡಿ ಪ್ರಾಥಮಿಕ ಶಾಲಾ ಚಿತ್ರಕಲಾ ಶಿಕ್ಷಕರ ಪ್ರೇರಣೆಯೇ ನನ್ನ ಚಿತ್ರಕಲಾಸಕ್ತಿಗೆ ಪ್ರೇರಣೆಯಾಗಿದೆ. ಕಲಾಪ್ರೇಮಿಗಳ ಸಹಕಾರ ಈ ಮಟ್ಟದ ಸಾಧನೆಗೆ ಕಾರಣವಾಗಿದೆ. ಪ್ರಾಣಿಗಳ ಮೇಲಿನ ದಯೆ, ಪ್ರೀತಿ ಕಲಾವರಣ ಗೊಳಿಸಿ ಕಲಾವಿದನಾದೆ. ಪ್ರತಿಭಾನ್ವಿತÀರಿಗೆ ಅನುಕೂಲಕರವಾದ ಅವಕಾಶಗಳು ಪೆÇ್ರೀತ್ಸಾಹದಾಯಕವಾಗಿದೆ. ಆದುದರಿಂದ ಕಲಾವಿದರು ಅವಕಾಶಗಳ ಸದುಪಯೋಗ ಪಡೆದು ಸಾಧನಶೀಲರಾಗಬೇಕು ಎಂದರು.
ಸಹನಾ ಕಾಂತಬೈಲು ಮಾತನಾಡಿ ನನ್ನ ಮೊದಲ ಕೃತಿಯೇ ಮುಂಬಯಿ ಕನ್ನಡ ವಿಭಾಗದಲ್ಲಿ ಬಿಡುಗಡೆ ಆಗುವುದು ನನ್ನ ಬಾಗ್ಯವೇ ಸರಿ. ಡಾ| ಜಿ.ಎನ್ ಉಪಾಧ್ಯ ಅವರ ಒತ್ತಾಸೆ ಇರದಿದ್ದಾರೆ ಈ ಕೃತಿ ಬೆಳಕು ಕಾಣುತ್ತಿರಲಿಲ್ಲ. ದುಖ ದುಗುಡಗಳಿಂದ ಮುಕ್ತರಾಗಲು ಬರವಣಿಗೆ ಅಭ್ಯಾಸ ಪ್ರೇರಕ ಶಕ್ತಿಯಾಗಿದೆ ಅನ್ನುತ್ತಾ ಕೃತಿ ಪ್ರಕಾಶನಕ್ಕೆ ಪ್ರೇರಕರಾದ ಬಗ್ಗೆ ತಿಳಿಸಿದರು.

ಸುಶೀಲಾ ದೇವಾಡಿಗ ಮಾತನಾಡಿ  ಕರ್ನಾಟಕ ಸಂಘ ಮುಂಬಯಿ ಇದರ  ಕನ್ನಡÀದ ಕೈಂಕರ್ಯಕ್ಕೆ ರಾಷ್ಟ್ರ ಮಾನ್ಯತೆ ದೊರೆತಿದೆ. ಆ ನಿಟ್ಟಿನಲ್ಲಿ ಡಾ| ಜಿ.ಎನ್ ಉಪಾಧ್ಯ ಅವರ ಪ್ರೇರಣೆಯೊಂದಿಗೆ ಈ ಬಗ್ಗೆ ಕೃತಿಯಾಗಿಸುವ ಭಾಗ್ಯ ನನಗೆ ದೊರಕಿ ಎಂ.ಫಿಲ್ ಪದವೀಧರೆಯಾಗುವಂತಾಯಿತು ಎಂದರು.

ಏಕದಿನದ ಪಂದ್ಯಾಟದ ಆಸಕ್ತಿ ಕಳೆಯುತ್ತಿದ್ದಂತೆಯೇ ಟ್ವೆಂಟಿಟ್ವೆಂಟಿಯ ಕುತೂಹಲ ಹೆಚ್ಚುತ್ತಿರುವಂತೆ ಇದೀಗ 2020 ವರುಷಾರಂಭದಲ್ಲಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತಷ್ಟು ಉತ್ಸುಕತೆಯಿಂದ ಕಾರ್ಯಕ್ರಮಗಳೊಂದಿಗೆ ಸಿದ್ಧವಾಗಿದೆ. ನಮ್ಮದು ಒಂತರಹ ಸಮ್ಮಿಶ್ರ ಸರಕಾರದ ಕಾರ್ಯಕ್ರಮ ಇದ್ದಂತೆ. ಇಂದು ಎರಡು ಎಂ.ಫಿಲ್ ಪದವಿ ಪ್ರದಾನ ಮತ್ತು ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮಗಳು. ಸಾಹಿತ್ಯದ ಮೂಲಕವೂ ಜಗತ್ತಿನ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಬಹುದು ಮತ್ತು ಜಗತ್ತನ್ನು ಸಾಹಿತ್ಯದ ಮೂಲಕ ತಿಳಿಯಬಹುದು ಅನ್ನುವುದನ್ನು ತೋರ್ಪಡಿಸಿದ್ದೇವೆ. ಈ ವಿಭಾಗ ಕೇವಲ ಸಾಹಿತಿಗÀರನ್ನು ಮಾತ್ರವಲ್ಲ ಎಲ್ಲರನ್ನೂ ಪೆÇ್ರೀತ್ಸಹಿಸುವ ಕೇಂದ್ರವಾಗಿದೆ. ಆದುದರಿಂದ ಕನ್ನಡವನ್ನೇ ಕಾರಣವಾಗಿಸಿ ಇಲ್ಲಿ ಎಲ್ಲರೂ ಸೇರುವುದೇ ಯೋಗಯೋಗವಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ನುಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ರತ್ನಾಕರ್ ಆರ್.ಶೆಟ್ಟಿ, ಮಹೇಶ್ವರ್ ಕಾಂತಬೈಲು, ಪ್ರತಿಷ್ಠಿತ ಚಿತ್ರಕಲಾವಿದ ಜಯ್ ಸಿ.ಸಾಲ್ಯಾನ್, ಸಣ್ಣಯ್ಯ ದೇವಾಡಿಗ, ಡಾ| ಸತೀಶ್ ಮುನ್ನೊಳ್ಳಿ, ಡಾ| ಸಂಗೀತಾ ಮುನ್ನೊಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕೃತಿಕರ್ತರನ್ನು ಹಾಗೂ ಎಂ.ಫಿಲ್ ಪದವೀಧರರನ್ನು ಅಭಿನಂದಿಸಿದರು.

ಕಲಾ ಭಾಗವತ್, ಪಾರ್ವತಿ ಪೂಜಾರಿ, ಶಶಿಕಲಾ ಹೆಗಡೆ ಪ್ರಾರ್ಥನೆಯನ್ನಾಡಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸುಶೀಲಾ ದೇವಾಡಿಗ ಧನ್ಯವದಿಸಿದರು.

ವಿದ್ಯಾನಗರಿಯಲ್ಲಿ ರಾಮಚಂದ್ರ ಉಚ್ಚಿಲ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಉಚ್ಚಿಲರು ಮುಂಬಯಿ ಕನ್ನಡ ಬಾನಂಗಳದ ಧ್ರುವ ತಾರೆ : ಡಿ.ಜಿ ಬೋಳಾರ್
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.04: ನನ್ನ ಗುರುಗಳಾದ ಉಚ್ಚಿಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಮರಣೆಯನ್ನು  ಮಾಡುವ ಈ ಸುಸಂದರ್ಭ ನನ್ನ ಭಾಗ್ಯವೇ ಹೌದು. ರಾತ್ರಿ ಶಾಲಾ ಶಿಕ್ಷಕರಾಗಿದ್ದ ಅವರು ಬಡ ಮಕ್ಕಳ ಕಷ್ಟ ಸುಖದ ಬಗ್ಗೆ ಕಾಳಜಿ ವಹಿಸಿ, ಅವರಲ್ಲಿ ಕೀಳರಿಮೆ ಮೂಡದ ಹಾಗೆ ನೋಡಿ ಕೊಳ್ಳುತಿದ್ದರು. ಉಚ್ಚಿಲರು ಮುಂಬಯಿ ಕನ್ನಡ ಬಾನಂಗಳದಲ್ಲಿ ಧ್ರುವ ತಾರೆಯಂತೆ ಎಂದು ಹೆಸರಾಂತ ಸಮಾಜ ಸೇವಕ, ಥಾಣೆ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಡಿ.ಜಿ ಬೋಳಾರ್ ತಿಳಿಸಿದರು.
   
ಮುಂಬಯಿ ವಿವಿ ಕನ್ನಡದ ವಿಭಾಗ, ಮಿತ್ರ ವೃಂದ ಮುಲುಂಡ್ ಹಾಗೂ ಗುರುಶಿಷ್ಯ ಒಕ್ಕೂಟ ಮುಂಬಯಿ ತಮ್ಮ ಸಂಯುಕ್ತ ಆಶ್ರಯದಲ್ಲಿ ಕನ್ನಡದ ಹೆಸÀರಾಂತ  ಸಾಹಿತಿ, ಲೇಖಕ, ಸÀಂಘಟಕ ವಿದ್ವಾನ್ ರಾಮಚಂದ್ರ ಉಚ್ಚಿಲ್ (ಚರಾ) ಅವರ  ಜನ್ಮ ಶತಮಾನೋತ್ಸವದ ಸರಣಿ ಕಾರ್ಯಕ್ರಮದ (ವಿಚಾರ ಸಂಕಿರಣ, ರಾಮಚಂದ್ರ ಉಚ್ಚಿಲ್ ವಾಙ್ಮಯ ವಿಹಾರ) ಉದ್ಘಾಟನಾ ಸಮಾರಂಭ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್‍ನ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಆಯೋಜಿಸಿದ್ದು ದೀಪ ಪ್ರಜ್ವಲಿಸಿ ಸರಣಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಬೋಳಾರ್ ಮಾತನಾಡಿದರು.

ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಹಿರಿಯ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾಯ ನಿಂಜೂರು, ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್, ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅತಿಥಿü ಅಭ್ಯಾಗತರಾಗಿ ವೇದಿಕೆಯಲ್ಲಿದ್ದು `ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಪ್ರಶಸ್ತಿ’ಯನ್ನು ಮುಂಬಯಿನ ಹಿರಿಯ ಸಾಹಿತಿ, ಪ್ರಾಧ್ಯಾಪಕ ಡಾ| ವಿಶ್ವನಾಥ ಕಾರ್ನಾಡ್ ಅವರಿಗೆ ಪ್ರದಾನಿಸಿ ಹಾಗೂ ನಗರದ ಹೆಸರಾಂತ ಮಕ್ಕಳ ತಜ್ಞ ಡಾ| ಕೆ.ಮೋಹನ್ ಅವರಿಗೆ ವಿಶೇಷ ಗೌರವ ಸಲ್ಲಿಸಿ ಅಭಿನಂದಿಸಿದರು.

ಡಾ| ನಿಂಜೂರು ಮಾತನಾಡಿ ರಾ.ಉಚ್ಚಿಲ, ವ್ಯಾಸರಾಯ ಬಲ್ಲಾಳ, ಹಾವನೂರು ಮಂತಾದವರ ಸಾಹಿತ್ಯ ಕೂಟದಲ್ಲಿ ಮರಿ ಸಾಹಿತಿಯಾಗಿದ್ದ ನನಗೂ ಪಾಲುಗೊಳ್ಳುವ ಅವಕಾಶ ಸಿಕ್ಕಿತ್ತು. ಅಲ್ಲಿ ಉಚ್ಚಿಲರು ಸತ್ಯ ನಿಷ್ಠುರವಾಗಿ ತರ್ಕಿಸುತಿದ್ದರು. ಅಪ್ರಾಣಿಕತೆಯನ್ನು  ಎಂದೂ ಸಹಿಸುತ್ತಿರಲಿಲ್ಲ. ಹೀಗಿದ್ದೂ ಅವರು ಸ್ನೇಹ ಜೀವಿ. ಉಚ್ಚಿಲರು ಕನ್ನಡ ಸಾಹಿತ್ಯ ಪರಂಪರೆಯನ್ನು ಅರೆದು ಕುಡಿದಂತ ಪಾಂಡಿತ್ಯವುಳ್ಳವರು ಎಂದರು.

ನಾನು ಉಚ್ಚಿಲರಲ್ಲಿ ತರ್ಕ ಹಾಗೂ ಸಲಿಗೆ ಎರಡನ್ನೂ ಇಟ್ಟು ಕೊಂಡವನು. ಅವರು ತಾಯಿನುಡಿಯಲ್ಲಿ ನನ್ನ ಕುರಿತು ಏನೋ ಬರೆದಾಗ ಅವರಲ್ಲಿ ಜಗಳ ಮಾಡಲು ಹೋದವನಿಗೆ ಚಾಹ ಕುಡಿಸಿದ್ದು ಅದನ್ನು ಸವಿದು ಹಿಂದೆ ಬಂದಿದ್ದೆ. ಯಕ್ಷಗಾನ ಹಾದಿ ತಪ್ಪುತ್ತಿರುವ ಸಂದರ್ಭ ಅವರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುವಾಗ ನಾನೂ ಜೊತೆ ಸೇರಿದ್ದೆ ಎಂದು ಹೆಚ್.ಬಿ.ಎಲ್ ರಾವ್ ತಿಳಿಸಿದರು.

ಸುನೀತಾ ಶೆಟ್ಟಿ ಮಾತನಾಡಿ ಮುಂಬಯಿಯಲ್ಲಿ ಕವಿ ಮುದ್ದಣನನ್ನು ಜೀವಂತ ಇರಿಸಿದವರು. ಕನ್ನಡ ಭಾಷೆಯಲ್ಲಿ ಅಪಾರ ಪಾಂಡಿತ್ಯವುಳ್ಳ ಸರಳ ಜೀವಿಯಾಗಿದ್ದ ಅವರು ಮಿತೃತ್ವದ ಸೊಗಡು ಆತ್ಮೀಯ ಮನಸ್ಸುಳ್ಳವರು. ಹೀಗೆ ಮಾನವೀಯವಾಗಿ ಬದುಕಿದ ಅವರ ಸ್ಮರಣೆ  ಅಗತ್ಯ ಹಾಗು ಅರ್ಥಪೂರ್ಣವಾದುದು ಎಂದರು.

ಪಾಲೆತ್ತಾಡಿ ಮಾತನಾಡಿ ಮುಂಬಯಿಯಲ್ಲಿ ಉಚ್ಚಿಲ ಅವರದ್ದು ಚಿರಸ್ಥಾಯಿ ಹೆಸರು. ಕನ್ನಡ ಭಾಷಾ ಬಳಕೆ, ಶುದ್ಧೀಕರಣದ ಕುರಿತು ಅಪಾರ ಕಾಳಜಿವುಳ್ಳವರಾಗಿದ್ದ ಅವರು ತುಳು ಯಕ್ಷಗಾನ ವಿರೋಧಿಯಲ್ಲ. ಆದರೆ ಅಲ್ಲಿ ಬಳಕೆ ಆಗುತ್ತಿರುವ ಭಾಷಾ ಪ್ರಯೋಗದ ಕುರಿತು ಕಿಡಿಕಾರುತಿದ್ದರು. ಅವರ ಹೆಸರನ್ನು ಉಳಿಸಿ ಬೆಳೆಸುವ ಕಾರ್ಯ ಮುಂಬಯಿಯಲ್ಲಿ ಸದಾ ನಡೆಯುತ್ತಿರಲಿ ಎಂದರು.

ಡಾ| ಕಾರ್ನಾಡ್ ಪ್ರಶಸ್ತಿಗೆ ಉತ್ತರಿಸಿ ತಮಗೂ ಉಚ್ಚಿಲರಿಗೂ ಫುಟ್ಬಾಲ್ ಪಂದ್ಯಾಟಗಳ ದಿನಗಳಲ್ಲಿ ಮುಖಾಮುಖಿ ಯಾದ ಶಾಲಾ ಕಾಲೇಜು ದಿನಗಳನ್ನು ಸ್ಮರಿಸಿಕೊಂಡರು.

ಮಿತ್ರ ವೃಂದದ ಎ.ನರಸಿಂಹ ಪ್ರಸ್ತಾವಿಕ ನುಡಿಗಳನ್ನಾಡೊ ಚಿಕ್ಕ ಪ್ರಾಯದಲ್ಲೆ ಮುಂಬಯಿಗೆ ಬಂದ ಉಚ್ಚಿಲರು ಜಿಜ್ಞಾಸೆವುಳ್ಳವರು. ತಾವು ಮಾಡುವ ಯಾವುದೇ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು, ಪೂರ್ಣ ತೆಯಲ್ಲಿ  ಸೌಂದರ್ಯವನ್ನು ಕಾಣುವವರು. ಓರೆ ಕೋರೆಗಳನ್ನು ಕಟುವಾಕಿ ಟೀಕಿಸುತ್ತಿದ್ದ ಅವರ ಬರಹಗಳಿಗೆ ಒಂದು ಸ್ಪಷ್ಟವಾದ ಉದ್ದೇಶ ಇರುತಿತ್ತು ಎಂದರು.

ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ಭಾಷಣಗೈದು ರಾಮಚಂದ್ರ ಉಚ್ಚಿಲರು  ಅಂದು ಹಚ್ಚಿಟ್ಟ ಕನ್ನಡದ ದೀಪವನ್ನು ಬೆಳಗಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಆ ಬೆಳಕಲ್ಲೆ ನಾವು ಮುಂದುವರಿಯೋಣ. ಇಂತಹ ಅಪರೂಪದ ವ್ಯಕ್ತಿಯ ಕುರಿತು ಅಗತ್ಯವಾಗಿ ಕನ್ನಡ ವಿದ್ಯಾಥಿರ್üಗಳು ಪಿಹೆಚ್‍ಡಿ ಸಂಶೋಧನಾ ಪ್ರಬಂಧದಲ್ಲಿ ತೊಡಗಿಸಿಕೊಳ್ಳುವ ಕೆಲಸ ಆಗಬೇಕು ಎಂದೇಳಿ ಕೃತಿಗಳ ಕುರಿತು ಅಚ್ಚುಕಟ್ಟಾಗಿ  ಪ್ರಬಂಧ ಮಂಡಿಸಿದ ಸಾಹಿತಿಗಳನ್ನು ಅಭಿನಂದಿಸಿದರು.

ಹೆಸರಾಂತ ಸಾಹಿತಿ ಡಾ| ಮಮತಾ ಟಿ.ರಾವ್, ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್.ಸುವರ್ಣ, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಬಹುಮುಖ ಪ್ರತಿಭಾವಂತ ಕವಿ, ಕಥೆಗಾರ ಗೋಪಾಲ ತ್ರಾಸಿ, ಸಂಶೋಧನಾ ಸಹಾಯಕ ಮಧುಸೂದನ ವೈ.ರಾವ್, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿದ್ದು ರಾಮಚÀಂದ್ರ ಉಚ್ಚಿಲ್ ಅವರ  ಏಳು ಕೃತಿಗಳ ಸಮೀಕ್ಷೆ ಗೈದÀು ವಿಚಾರ ಮಂಡಿಸಿದರು.

ಮಿತ್ರ ವೃಂದದ ಎಸ್.ಕೆ ಸುಂದರ್, ಗುರುಶಿಷ್ಯ ಒಕ್ಕೂಟದ ವಸಂತ ಎನ್.ಸುವರ್ಣ, ಸತೀಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದು ಗುರುಶಿಷ್ಯ ಒಕ್ಕೂಟ ಮುಂಬಯಿ ಇದರ ಮುಖ್ಯಸ್ಥೆ, ಹಿರಿಯ ಶಿಕ್ಷಕಿ ಡಾ| ವಾಣಿ ನಾರಾಯಣ ಉಚ್ಚಿಲ್ಕರ್ ಪ್ರಶಸ್ತಿ ಕುರಿತು ಪ್ರಸ್ತಾಪಿಸಿದರು. ಪುರಸ್ಕೃತ ಚಿತ್ರಕಲಾವಿದ ಜಯ್ ಸಿ.ಸಾಲ್ಯಾನ್ ರಚಿತ ರಾಮಚಂದ್ರ ಉಚ್ಚಿಲ್‍ರ ಭಾವಚಿತ್ರ ನೀಡಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi