Brief University college news with picturews


Guru Prasad T N
Kemmannu News Network, 12-01-2020 09:56:55


Write Comment     |     E-Mail To a Friend     |     Facebook     |     Twitter     |     Print


ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು,ಜ.11: ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ಮಾತಾ ಅಮೃತಾನಂದಮಯಿ ಮಠ ಜಂಟಿಯಾಗಿ ಸ್ವಚ್ಛ ಭಾರತ ಕಾರ್ಯಕ್ರಮವನ್ನು   ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದವು. ‌

ಮಾತಾ ಅಮೃತಾನಂದಮಯಿ ಮಠದ  ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರು‌ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ  ಪುಷ್ಪಮಾಲೆ  ಅಪಿ೯ಸುವುದರೊಂದಿಗೆ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. ಈ ಸಂದಭ೯ದಲ್ಲಿ ಮಾತನಾಡಿದ ಜಿಲ್ಲಾ ಸಜ೯ನ್ ಡಾ. ರಾಜೇಶ್ವರಿ, ಮಾತಾ ಅಮೃತಾನಂದಮಯಿ ಮಠದ ಬೆಂಬಲ ಆಸ್ಪತ್ರೆಯ ಸ್ವಚ್ಚತಾ ಕಾಯ೯ಕ್ರಮಕ್ಕೆ ಸ್ಪೂರ್ತಿ ನೀಡಿದೆ, ಎಂದರು. ವಿಶ್ವವಿದ್ಯಾನಿಲಯದ ಯುವ ರೆಡ್ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳನ್ನು ಶ್ಲಾಘಿಸಿದರು.

ಭಾರತೀಯ ಯುವ ರೆಡ್ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷ ಸಿ.ಎ ಶಾಂತಾರಾಮ್ ಶೆಟ್ಟಿ ಮಾತನಾಡಿ ಸದ್ಯದಲ್ಲೇ ವೆನ್ಲಾಕ್ನಲ್ಲಿ ರೆಡ್ ಕ್ರಾಸ್ ವತಿಯಿಂದ ಹೆಲ್ಪ್ ಡೆಸ್ಕ್ ಪ್ರಾರಂಭಿಸಲಾಗುವುದು, ಎಂದರು. ನಂತರ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು , ಕೆನರಾ ಕಾಲೇಜು , ಸರಕಾರಿ ಪ್ರಥಮ ದಜೆ೯ ಕಾಲೇಜು ಕಾವೂರು, ಅಲೋಶಿಯಸ್  ಕಾಲೇಜು ,ದಯಾನಂದ ಪೈ- ಸತೀಶ್ ಪೈ ಕಾಲೇಜು,  ಆಗ್ನೇಸ್ ಕಾಲೇಜು, ಸರಕಾರಿ ಮಹಿಳಾ ಪ್ರಥಮ ದಜೆ೯ ಕಾಲೇಜು ಬಲ್ಮಠ, ಶ್ರೀ ರಾಮಕೃಷ್ಣ ಕಾಲೇಜು, ಶ್ರೀ ಗೋಕಣ೯ನಾಥೇಶ್ವರ  ಕಾಲೇಜಿನ  ಸುಮಾರು 200 ಕ್ಕೂ ಹೆಚ್ಚು ರೆಡ್ಕ್ರಾಸ್ ಮತ್ತು ಎಸ್ಎಸ್ಎಸ್ ಸ್ವಯಂಸೇವಕರು ಆಸ್ಪತ್ರೆಯ ಪರಿಸರವನ್ನು ಸ್ವಚ್ಛಗೊಳಿಸಿದರು.

ಈ ಕಾಯ೯ಕ್ರಮದಲ್ಲಿ ಎಸ್ಸಿಎಸ್ ಆಸ್ಪತ್ರೆಯ ಮುಖ್ಯ ಸರ್ಜನ್ ಡಾ. ಜೀವರಾಜ್ ಸೂರಕೆ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ , ಎನ್ಎಸ್ಎಸ್ ನ ಸಮನ್ವಯಾಧಿಕಾರಿ ಡಾ.ನಾಗರತ್ನ  ಕೆ., ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿ, ರೆಡ್ ಕ್ರಾಸ್ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಅಮಲ ಭಾರತ ಅಭಿಯಾನದ ಕಾರ್ಯಕರ್ತರು ಭಾಗವಹಿಸಿದ್ದರು.

ʼಪಠ್ಯಕ್ರಮ ರೂಪಿಸುವಲ್ಲಿ ಶಿಕ್ಷಕ ಮುಖ್ಯ ಪಾತ್ರ ವಹಿಸಲಿʼ

ಮಂಗಳೂರು: ಪದವಿಗಳ ಸಂಖ್ಯೆಯನ್ನು ನಾವು ಅವುಗಳ ಗುಣಮಟ್ಟ ಕಾಪಾಡಿಕೊಳ್ಳಲು ಮರೆತಿದ್ದೇವೆ. ಗುಣಮಟ್ಟ ಮತ್ತು ಮೌಲ್ಯಧಾರಿತ ಶಿಕ್ಷಣದ ಹೊರತಾಗಿ ನಾವು ಭವಿಷ್ಯದ ಶಿಕ್ಷಣ ಪದ್ಧತಿಯನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಎಂದು ಯುಜಿಸಿ ಸದಸ್ಯ ಡಾ. ಗೋಪಾಲ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

(ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್) ಜಂಟಿಯಾಗಿ ಎಸ್.ಡಿ. ಎಂ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ʼಚಾಲೆಂಜಸ್ ಇನ್ ಹೈಯರ್ ಎಜುಕೇಶನ್ : ಟೀಚರ್ಸ್ ಇನಿಷಿಯೇಟಿವ್ಸ್, ಕ್ವಾಲಿಟಿ, ಕರಿಕ್ಯುಲಮ್, ಎಥಿಕ್ಸ್ʼ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ)ದ ಅಂಗವಾಗಿ ನಡೆದ ಗುಂಪು ಚರ್ಚೆಯ ಮುಖ್ಯಸ್ಥರಾಗಿದ್ದ ಅವರು, ಧ್ಯೇಯಗಳನ್ನು ನೆನಪಿಸುತ್ತಿದ್ದ ಅದೆಷ್ಟೋ ವಿಷಯಗಳು ನಮ್ಮ ಪಠ್ಯದಿಂದ ಕಾಣೆಯಾಗಿವೆ. ಇದಕ್ಕೆ ಶಿಕ್ಷಕವಲಯವೇ ಹೊಣೆಯಾಗಿದೆ ಹೊರತು ರಾಜಕಾರಣಿಗಳಲ್ಲ, ಎಂದರು.
ದೇಶದ ಕಾಲೇಜುಗಳಲ್ಲಿನ ೫೦% ಶೇಕಡಾಕ್ಕೂ ಹೆಚ್ಚು ಮಂದಿ ಉಪನ್ಯಾಸಕರು ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಜುಲೈ ಒಳಗೆ ಪ್ರತಿ ಶಿಕ್ಷಣ ಸಂಸ್ಥೆಯೂ ೮೦ % ಪೂರ್ಣಕಾಲಿಕ ಉಪನ್ಯಾಸಕರನ್ನು ಹೊಂದದೇ ಇದ್ದರೆ ಯುಜಿಸಿ ಅಥವಾ ಯಾವುದೇ ಅನುದಾನ ಪಡೆಯಲು ಸಾಧ್ಯವಾಗುವುದಿಲ್ಲ, ಎಂದರು. ನ್ಯಾಕ್ನ ಉಪ ಸಲಹೆಗಾರ ಡಾ. ದೇವೇಂದರ್ ಕಾಡೆ, ನಮ್ಮ ಆಸ್ತಿಯಾದ, ಉನ್ನತ ಶಿಕ್ಷಣ ಪಡೆಯುತ್ತಿರುವ ೩೭.೪ ಮಿಲಿಯನ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಶಿಕ್ಷಕರಿಗೆ ಉತ್ತೇಜನ ಬೇಕಿದೆ, ಎಂದರು.

ಕರ್ನಾಟಕ ವಿಶ್ವವಿದ್ಯಾನಿಲಯದ ಯುಜಿಸಿ- ಹೆಚ್ಆರ್ಡಿಸಿ ನಿರ್ದೇಶಕ ಪ್ರೊ. ಹರೀಶ್ ರಾಮಸ್ವಾಮಿ, ಕಲೆ-ವಿಜ್ಞಾನದ ಸಮ್ಮಿಳಿತವಾಗಿರುವ ಪಠ್ಯ ರಚನೆಯಲ್ಲಿ ಶಿಕ್ಷಕನೂ ಪಾತ್ರವಹಿಸಬೇಕು. ಪಠ್ಯ ಶಿಕ್ಷಕರ ಮುಗಿಸುವ ಧಾವಂತ, ಆಕರ್ಷಕವೆನಿಸದ ಪಠ್ಯ ಬದಲಾಗಬೇಕು. ಅದು ವಿಷಯ, ವಿದ್ಯಾರ್ಥಿ ಮತ್ತು ಸಮಸ್ಯೆ ಕೇಂದ್ರಿತವಾಗಿರಬೇಕು. ಸ್ಥಳೀಯ ವಿಷಯಗಳಿಗೆ ಆಧ್ಯತೆ ದೊರೆಯಬೇಕು, ಎಂದರು.

ವಿಚಾರ ಸಂಕಿರಣದ ಸಂಯೋಜಕ ಡಾ. ಯತೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಿಡಿಸಿ ಮುಖ್ಯಸ್ಥ, ಕಲಾ ವಿಭಾಗದ ಡೀನ್ ಡಾ. ಪಿ.ಎಲ್ ಧರ್ಮ, ಕಾರ್ಯಕ್ರಮ ಸಂಯೋಜಕ ಡಾ. ಮಾಧಮ ಎಂ.ಕೆ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕನಿಗೆ ಉತ್ತೇಜನವಿಲ್ಲದೆ ಆತ ವಿದ್ಯಾರ್ಥಿಗಳನ್ನು ಉತ್ತೇಜಿಸಲಾರ: ಡಾ. ಭಗವತಿ ಪ್ರಕಾಶ್ ಶರ್ಮಾ

ಮಂಗಳೂರು: ಗುಣಮಟ್ಟದ ನವೀನ ಶಿಕ್ಷಣದಲ್ಲಿ ನಾವು ಹಿಂದೆ ಬೀಳುತ್ತಿದ್ದೇವೆ. ಶಿಕ್ಷಕನಿಗೆ ಉತ್ತೇಜನ ದೊರೆಯದಿದ್ದರೆ ಅವನು ವಿದ್ಯಾರ್ಥಿಗಳನ್ನು ಉತ್ತೇಜಿಸಲಾರ, ಎಂದು ನೋಯ್ಡಾದ ಗೌತಮ ಬುದ್ಧ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಭಗವತಿ ಪ್ರಕಾಶ್ ಶರ್ಮಾ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್) ಜಂಟಿಯಾಗಿ ಎಸ್.ಡಿ. ಎಂ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ʼಚಾಲೆಂಜಸ್ ಇನ್ ಹೈಯರ್ ಎಜುಕೇಶನ್ : ಟೀಚರ್ಸ್ ಇನಿಷಿಯೇಟಿವ್ಸ್, ಕ್ವಾಲಿಟಿ, ಕರಿಕ್ಯುಲಮ್, ಎಥಿಕ್ಸ್ʼ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿರುವಾಗ ನಾವು ಹಿಂದುಳಿಯಬಾರದು. ದೇಶ ತಂತ್ರಜ್ಞಾನಗಳ ಆಮದಿನ ಬದಲಿಗೆ ಇಲ್ಲಿನ ವಿದ್ಯಾರ್ಥಿಗಳಿಗೇ ಶಿಕ್ಷಣ ನೀಡುವಂತಾಗಬೇಕು.ಶಿಕ್ಷಣ ಪದ್ಧತಿಯಲ್ಲಿ ನಮ್ಮ ಹಿರಿಯರ ಅಮೂಲ್ಯ ಜ್ಞಾನವನ್ನು ಬಳಸಿಕೊಳ್ಳಬೇಕು, ಎಂದರು.

ಉದ್ಘಾಟನಾ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಎಸ್ ಯಡಪಡಿತ್ತಾಯ ಅವರು, ನಾವು ಶಿಕ್ಷಣ  ಮತ್ತು ಉದ್ಯೋಗದ ಮಧ್ಯದಲ್ಲಿರುವ ಉದ್ಯೋಗಾರ್ಹತೆಯ ಕಡೆಗೂ ಗಮನಹರಿಸಬೇಕು. ಸ್ವಯಂ ಸಂತೃಪ್ತಿ, ಅಹಂಕಾರ ನಮ್ಮ ಶಕ್ತಿಯನ್ನು ಕುಂದಿಸಿ ಅತ್ಯುತ್ತಮ ಸಾಧನೆಗೆ ಅಡ್ಡಗಾಲಾಗುತ್ತವೆ. ಜ್ಞಾನ, ಕೌಶಲ್ಯ, ನಡತೆ, ಕಲಿಯುವ ಹವ್ಯಾಸ, ಮೌಲ್ಯಗಳು ಮುಖ್ಯ. ವಿಜ್ಞಾನ ಮತ್ತು ಆದ್ಯಾತ್ಮ , ರಾಷ್ಟ್ರೀಯತೆ ಜೊತೆಗೂಡಿದಾಗ ಶಿಕ್ಷಣದಲ್ಲಿ ಗುಣಮಟ್ಟ ಸಾಧ್ಯ. ಉದ್ಯೋಗವನ್ನು ಮಾತ್ರ ಗಮನದಲ್ಲಿಡದೆ, ಸಿಲೆಬಸ್ ಹೊರತಾಗಿಯೂ ಯೋಚನೆ ಹೊಸತನಕ್ಕೆ ದಾರಿಮಾಡಿಕೊಡುತ್ತದೆ, ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಉಜಿರೆಯ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ನಾವು ಶಿಕ್ಷಣ ಪದ್ಧತಿಯನ್ನು ಕುರುಡಾಗಿ ಹಿಂಬಾಲಿಸುತ್ತಿದ್ದೇವೆ. ಶಿಕ್ಷಕನಿಗೆ ಬೇಕಾದಷ್ಟು ಪ್ರಾಮುಖ್ಯತೆ ದೊರೆಯುತ್ತಿಲ್ಲ. ಆರ್ಟಿಫಿಶಿಯಲ್ ಇಂಟೆಲೆಜೆನ್ಸ್, ಯಾಂತ್ರಿಕ ಕಲಿಕೆ ನಮ್ಮ ಶಿಕ್ಷಣಕ್ಕೆ ಸಹಕಾರಿಯಾಗಬೇಕೇ ಹೊರತು ಅವು ನಮ್ಮನ್ನು ನಿಯಂತ್ರಿಸಬಾರದು. ಶಿಕ್ಷಣವನ್ನು ಹೊಸ ಮನಸ್ಥಿತಿಯೊಂದಿಗೆ, ವಿವಿಧ ದೃಷ್ಟಿಕೋನಗಳಿಂದ ನೋಡಿದಾಗ ಹೊಸ ಸಾಧ್ಯತೆಗಳು ಕಂಡುಬರುತ್ತವೆ, ಎಂದರು. ಇದೇ ವೇಳೆ, ಅಗಲಿದ ಚೇತನಗಳಾದ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಸಾಹಿತಿ ಚಿದಾನಂದಮೂರ್ತಿ ಅವರಿಗೆ ಮೌನಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು.
ಕೆಆರ್ಎಮ್ಎಸ್ಎಸ್ ಅಧ್ಯಕ್ಷ ಡಾ. ರಘು ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಕೆಆರ್ಎಮ್ಎಸ್ಎಸ್ ಕಾರ್ಯದರ್ಶಿ ಡಾದ. ಜಿ. ಸಿ ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು. ಕೆಆರ್ಎಮ್ಎಸ್ಎಸ್ ಮಂಗಳೂರು ಖಜಾಂಜಿ ಕಾವ್ಯ ಪಿ. ಹೆಗ್ಡೆ, ಕಾರ್ಯದರ್ಶಿ ವೆಂಕಟೇಶ ನಾಯಕ್, ಸಮ್ಮೇಳನ ಕಾರ್ಯದರ್ಶಿ ಡಾ. ಸುಭಾಷಿಣಿ ಶ್ರೀವತ್ಸ ಕಾರ್ಯಕ್ರಮ ನಿರ್ವಹಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Monti Fest - 2025 | Nativity of Mother Mary | St.
View More

Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Feast of Assumption & Independence Day Celebration | St. Theresa Church, KemmannuFeast of Assumption & Independence Day Celebration | St. Theresa Church, Kemmannu
Moiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis CornelioMoiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis Cornelio
Final Journey of Golbert Suares (65 years) | LIVE from Barkur | UdupiFinal Journey of Golbert Suares (65 years) | LIVE from Barkur | Udupi
Final Journey of Gretta Suares (69 years) | LIVE from BarkurFinal Journey of Gretta Suares (69 years) | LIVE from Barkur
Final Journey of Asha Fernandes (43 years) | LIVE from Thottam | UdupiFinal Journey of Asha Fernandes (43 years) | LIVE from Thottam | Udupi
Yuva Samagam 2025 | ICYM | LIVE from Sastan, UdupiYuva Samagam 2025 | ICYM | LIVE from Sastan, Udupi
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi