ಸಾಫಲ್ಯ ಸೇವಾ ಸಂಘದ ಯುವ ವಿಭಾಗ ಪ್ರಸ್ತುತಿಯ ನೃತ್ಯ ವೈಭವ-2020 ಸ್ಪರ್ಧೆಗೆ ಚಾಲನೆ


Rons Bantwal
Kemmannu News Network, 20-01-2020 09:11:42


Write Comment     |     E-Mail To a Friend     |     Facebook     |     Twitter     |     Print


ಸಾಫಲ್ಯ ಸೇವಾ ಸಂಘದ ಯುವ ವಿಭಾಗ ಪ್ರಸ್ತುತಿಯ ನೃತ್ಯ ವೈಭವ-2020 ಸ್ಪರ್ಧೆಗೆ ಚಾಲನೆ  -  ಯುವಶಕ್ತಿಯಿಂದ ಮಾತ್ರ ಸಮಾಜ ಪರಿವರ್ತನೆ ಸಾಧ್ಯ : ಕೃಷ್ಣಕುಮಾರ್ ಬಂಗೇರ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ,ಜ.19: ಸಮುದಾಯದ ಒಗ್ಗೂಡುವಿಕೆಯಿಂದ ಅಖಂಡ ಸಮಾಜದ ಬದಲಾವÀಣೆ ಆಗುತ್ತಿದೆ. ಇವೆಲ್ಲಕ್ಕೂ ಮಿಗಿಲಗಿ ಯುವ ಜನತೆಯ ಮುಂದಾಳತ್ವದಿಂದ ಸಮಾಜ ಪರಿವರ್ತನೆ ಸಾಧ್ಯ. ಕರ್ನಾಟಕದ ಕರವಳಿಯಿಂದ ಮುಂಬಯಿಗೆ ವಲಸಿಗರಾಗಿ ಬಂದ ಮೊದಲಿಗರೇ ಮೊಗವೀರರು. ಇಲ್ಲಿ ಬಂದೂ ತಮ್ಮ ಪರಂಪರೆ, ಸಿದ್ಧಾಂತಗಳನ್ನು ರೂಢಿಸಿ ಬಾಳುತ್ತಾ ಎಲ್ಲರಿಗೂ ಪ್ರೇರಕರಾಗಿದ್ದಾರೆ.  ತುಳುನಾಡ ಜನತೆಯಲ್ಲಿನ ನೀತಿಶಾಸ್ತ್ರ, ಕಠಿಣ ಪರಿಶ್ರಮ ನಮಗೆ ವರದಾನವಾಗಿದ್ದು ಸಾಮರಸ್ಯಕ್ಕೆ ನಾವೇ ವಿಶೇಷ ಗುಣವುಳ್ಳವರು. ಆ ಪೈಕಿ  ಸಫಲಿಗ ಸಮುದಾಯವೂ ಒಂದಾಗಿದೆ. ಸಫಲಿಗರು ಸಜ್ಜನಶೀಲರಾಗಿ ನಮ್ರತೆಗೆ ಪ್ರೇರಕರಾಗಿದ್ದಾರೆ. ಆದ್ದರಿಂದ ನಮ್ಮ ಯುವಜನತೆ ಇವೆಲ್ಲವನ್ನೂ ಮೈಗೂಡಿಸಿ ವಿಶೇಷವಾಗಿ ಕೂಡುಕುಟುಂಬಕ್ಕೆ ಅಸಾಧ್ಯವಾದರೂ ಸಾಂಗತ್ಯ ಬದುಕಿಗೆ ಒತ್ತುನೀಡಿ ಬದುಕು ರೂಪಿಸುವಂತಾಗಬೇಕು. ಇವೆಲ್ಲವನ್ನೂ ರೂಪಿಸಿ ಬಾಳಿದಾಗ ವ್ಯಕ್ತಿ ಪ್ರತಿಷ್ಠಿತ ಸಾಧ್ಯವಾಗುವುದು ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್.ಬಂಗೇರ ತಿಳಿಸಿದರು.

ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಯುವ ವಿಭಾಗವು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಅಂಧೇರಿ ಇಲ್ಲಿನ ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಭಾಗೃಹದಲ್ಲಿ ತುಳು ಕನ್ನಡಿಗರಿಗಾಗಿ ಆಯೋಜಿಸಿದ್ದ ನೃತ್ಯ ವೈಭವ-2020 ಮುಕ್ತ ನೃತ್ಯ ಸಮರ್ಥಕ (ಓಪನ್ ಡ್ಯಾನ್ಸ್ ಚಾಂಪಿಯನ್) ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಬೆಳಗಿಸಿ ಹಿಂಗಾರ ಅರಳಿಸಿ ಬತ್ತದ ಕಣಜದಲ್ಲಿರಿಸಿ ವಿಶೇಷವಾಗಿ ನೃತ್ಯ ವೈಭವಕ್ಕೆ ಚಾಲನೆಯನ್ನಿತ್ತು ಕೃಷ್ಣಕುಮಾರ್ ಮಾತಮಾಡಿದರು.

ಸಾಫಲ್ಯ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಕರ್ಕೇರ ಇವರ ಸಾರಥ್ಯ ಹಾಗೂ ಸಾಫಲ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿüಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ರಾಮರಾಜ ಕ್ಷತಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್, ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ ಓಂ ಪ್ರಕಾಶ್ ರಾವ್, ರಾಮರಾಜ ಕ್ಷತಿಯ ಸಂಘ ಮುಂಬಯಿ ಅಧ್ಯಕ್ಷ ಬಿ.ಗಣಪತಿ ಶೇರ್ವೆಗಾರ್ ಉಪಸ್ಥಿತರಿದ್ದು ಯುವ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷ ರವಿಕಾಂತ್ ಎನ್.ಸಫಲಿಗ ಮತ್ತು ಉಪ ಕಾರ್ಯಾಧ್ಯಕ್ಷೆ ಕವಿತಾ ಎಸ್.ಬಂಗೇರ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

ರಾಜ್‍ಕುಮಾರ್ ಮಾತನಾಡಿ 1941ರಲ್ಲಿ ಸಮುದಾಯದ ಉನ್ನತಿ ಆಶಿಸಿ ಸಂಸ್ಥೆಯನ್ನು ಈ ಮಟ್ಟಕ್ಕೆ ಸಂಸ್ಥಾಪಕರನ್ನು ನೆನಪಿಸುವುದು ಆದ್ಯಕರ್ತವ್ಯ. ಅವಾಗಲೇ ಅವರ ಧ್ಯೇಯೋದ್ದೇಶಗಳು ಪೂರೈಸಿದಂತಾಗುವುದು. ಸಾಂಘಿಕತೆಯೊಂದಿಗೆ ಮುನ್ನಡೆದಾಗ ಸಂಘವು ನಿರಂತರವಾಗಿ ಸಾಗಿ ಸಂಬಂಧಗಳು ಬೆಳೆದು ಸಂಘಟನೆ ಬಲಶಾಲಿ ಹೊಂದಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಸಮುದಾಯದೊಳÀಗಿನ ಪ್ರತಿಭಾನ್ವೇಶನೆ, ಸಾಮರ್ಥ್ಯ ಪ್ರದರ್ಶನಕ್ಕೆ ಇದು ಸೂಕ್ತ ವೇದಿಕೆಯಾಗಿದೆ ಎಂದರು.

ಯುವಜನರೇ ಸಮಾಜದ ಬಲಾಡ್ಯತೆ ಆದುದರಿಂದ ಯುವ ಜನತೆ ಗಟ್ಟಿಯಾದರೆ ರಾಷ್ಟ್ರಶಕ್ತಿಯುತವಾಗುವುದು. ಕಿರಿಯರು ಹಿರಿಯರನ್ನು ಮುಂದಿಟ್ಟು ಸಮಾಜದ ಏಳಿಗೆಗೆ ಚಿಂತಿಸಿ ಕಾರ್ಯನಿರತರಾದಾಗ ಸಮುದಾಯದ ಒಳಿತಾಗುವುದು. ಇದನ್ನು ಸಾಫಲ್ಯ ಸಂಘ ಸಿದ್ಧಿಸಿದೆ. ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯುವ ಮನೋಭಾವ ನಮ್ಮಲ್ಲಿದ್ದಾಗ ಸಮಗ್ರ ಸಮಾಜ ಬಲಿಷ್ಠವಾಗುವುದು. ಇದನ್ನು ಸಫಲಿಗ ಸಂಘ ಸಾಬೀತು ಪಡಿಸಿದೆ. ಹಿರಿಯರೂ ಯುವಜನತೆಯನ್ನು ನಿರ್ಲಕ್ಷಿಸದೆ ಅವರ ಮುತುವರ್ಜಿಗೆ ಪೆÇ್ರೀತ್ಸಾಹಿಸಬೇಕು. ಯುವಶಕ್ತಿಯನ್ನು ಪೆÇ್ರೀತ್ಸಾಹಿಸಿದಾವಲೇ ಸರ್ವರೂ ಸಮಾನವಾಗಿ ಬಾಳಲಾಗುವುದು. ಯುವಕರೂ ಸಂಘದಲ್ಲಿ ಸ್ಥಾನ ಇರುವಾಗ ಮಾತ್ರ ಆಸಕ್ತಿ ಸಮುಅದಾಯದ ತೋರಿಸದೆ  ಕೊನೆ ತನಕ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಐಕಳ ಹರೀಶ್ ಕಿವಿಮಾತುಗಳನ್ನಾಡಿದರು.
ಗಣಪತಿ ಶೇರ್ವೆಗಾರ್ ಮಾತನಾಡಿ ನಾವು ಕನ್ನಡಿಗರು ಕರ್ನಾಟಕದ ಒಳನಾಡಿನಿಂದ ಹೊರನಾಡ ಮುಂಬಯಿಗೆ ಬಂದಿದ್ಡೇವೆ. ಶತಮಾನದ ಹಿಂದೆ ಜೀವನ ನಡೆಸುವುದೇ ಕಷ್ಟಕರ ಪರಿಸ್ಥಿತಿಯಿದ್ದು ಉದರ ಪೆÇೀಷಣೆಗೆ ಇಲ್ಲಿಗೆ ಬರುವುದು ಅನಿವಾರ್ಯವಾದÀರೂÉೈಲ್ಲೂ ಸ್ವಸಂಸ್ಕೃತಿ ಉಳಿಸಿ ಬೆಳೆಸಲು ಸಫಲರಾಗಿದ್ದೇವೆ. ಅಂತಹ ನಮ್ಮ ಪೂರ್ವಜರ ದೂರದೃಷ್ಟಿಯನ್ನು ಯುವಜನಾಂಗ ಮನವರಿಸುವ ಅಗತ್ಯವಿದೆ. ನಮ್ಮಲ್ಲಿ ನಮ್ಮವರು ಎಂಬ ಭಾವನೆ ಬಂದಾಗ ಆತ್ಮೀಯತೆ ಬೇರೆಯೇ ಆಗುತ್ತದೆ. ಇಂತಹ ಭಾವನೆಗಳು ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದರು.

ಇದು ಸಫಲಿಗರ ಸಾಫಲ್ಯತೆಯ ಸಂಭ್ರಮವಾಗಿದೆ. ಈ ಸಂಸ್ಥೆಯ ಬುನಾದಿಗೆ ಸ್ಫೂರ್ತಿಕೊಟ್ಟ, ಆಶೀರ್ವಾದವಿತ್ತ ಸ್ಥಾಪಕರ ದೂರದೃಷ್ಟಿತ್ವ ಉದ್ದೇಶಗಳನ್ನು ಪೂರೈಸುವ ಸಂಭ್ರಮ ಅಂದುಕೊಂಡಿದ್ದೇವೆ. ನಮ್ಮ ಮನಸ್ಸಿನ ನೋವು ಬೇಜಾರುಗಳಿಂದ ಮುಕ್ತರಾಗಲು ಇಂತಹ ವೈಭವಗಳು ಪ್ರೇರಕವಾಗಿವೆ. ಆ ಮೂಲಕ ಹೃನ್ಮನಗಳಲ್ಲಿ ಅಡಕವಾದ ಕಲಾನ್ವೇಷಣೆಗೂ ಅವಕಾಶವಾಗಿದೆ. ಜೀವನದಲ್ಲಿ ಆಶೆ ಆಕಾಂಕ್ಷೆಗಳು ರೂಪಿಸಲು ನಾಟ್ಯಕಲೆ ಜೀವಾಳವಾಗಿದ್ದು, ಭಾರತ ರಾಷ್ಟ್ರದ ಶ್ರೇಷ್ಠತೆಗೆ ನಾಟ್ಯವೈಭವ ಅಡಿಪಾಯವಾಗಿದೆ. ಆದುದರಿಂದ ತುಳು ಕನ್ನಡಿಗರ ವಿಲೀನಕ್ಕಾಗಿ ನಾವು ನಾಟ್ಯ ಸಮ್ಮೇಳನವಾಗಿಸಿ ನಾಟ್ಯ ಶಾಸ್ತ್ರದಲ್ಲಿ ಸ್ವಂತಿಕೆಯುಳ್ಳ ಜಾತೀಯ ಹಿರಿಮೆಯನ್ನು  ಪ್ರದರ್ಶಿಸಲು ಈ ಕಾರ್ಯಕ್ರಮ ಉದ್ದೇಶವಾಗಿಸಿದ್ದೇವೆ ಎಂದು  ಅಧ್ಯಕ್ಷೀಯ ಭಾಷಣದಲ್ಲಿ ಶ್ರೀನಿವಾಸ ಸಾಫಲ್ಯ ತಿಳಿಸಿದರು.

ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ಬಂಗೇರ, ಗೌ| ಪ್ರ| ಕಾರ್ಯದರ್ಶಿ ಭಾಸ್ಕರ್ ಟಿ.ಸಫಲಿಗ, ಗೌ| ಕೋಶಾಧಿಕಾರಿ ಹೇಮಂತ್ ಬಿ.ಸಫಲಿಗ, ಮಹಿಳಾಧ್ಯಕ್ಷೆ ಶೋಭಾ ಬಂಗೇರ, ಯುವ ವಿಭಾಗಧ್ಯಕ್ಷ ಪ್ರತೀಕ್ ಕರ್ಕೇರ ವೇದಿಕೆಯಲ್ಲಿದ್ದು ಉಪಸ್ಥಿತ ಸ್ವಸಮಾಜದ ಮತ್ತು ಸಮುದಾಯೇತರ ಸಂಸ್ಥೆಗಳ ಮುಂದಾಳುಗಳನ್ನು, ಸಮಾಜದ ಗಣ್ಯವ್ಯಕ್ತಿಗಳನ್ನು ಗೌರವಿಸಿದರು. ಅಸ್ವಸ್ಥತೆಯಿಂದ ಬಳಲುವವರ ಸರಕರೇತರ ಸೇವಾಸಂಸ್ಥೆಯಾದ ಸಂಗೋಪಿತ ಚಾರಿಟೇಬಲ್ ಟ್ರಸ್ಟ್‍ಗೆ ಸಾಫಲ್ಯ ಸೇವಾ ಸಂಘದ ಯುವ ವಿಭಾಗವು ಆಥಿರ್üಕ ದೇಣಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದರು.

ಬಳಿಕ ಜೂನಿಯರ್ ಏಕವ್ಯಕ್ತಿ (ಸೋಲೋ) ನೃತ್ಯ ಸ್ಪರ್ಧೆ, ಹಿರಿಯ ಏಕವ್ಯಕ್ತಿ (ಸೀನಿಯರ್ ಸೋಲೋ) ಮತ್ತು ಕೊನೆಯಲ್ಲಿ ಸಮೂಹ ನೃತ್ಯ ಸ್ಪರ್ಧೆ ನಡೆಸಲ್ಪಟ್ಟವು. ಗೌತಮ್ ಬಂಗೇರ, ಕೀರ್ತನಾ ಕುಂದರ್, ತುಷಾರ್ ಶೆಟ್ಟಿ ನಿರ್ಣಾಯಕರಾಗಿ ಸಹಕರಿಸಿದ್ದು ಒಟ್ಟು 55 ಸ್ಪರ್ಧಿಗಳು ಭಾಗವಹಿಸಿದ್ದರು. ಮನೋರಂಜನೆ ನಿಮಿತ್ತ ಸಾಫಲ್ಯ ಸೇವಾ ಸಂಘದ ಯುವ ವಿಭಾಗ, ಸಂಗೋಪಿತ ತಂಡ ಮತ್ತು ಗೌತಮ್ ಬಂಗೇರ ಬಳಗವು ಅತ್ಯಾಕರ್ಷಕ ನೃತ್ಯ ವೈಭವ ಪ್ರಸ್ತುತ ಪಡಿಸಿದರು.

ಶ್ವೇತಾ ಬಂಗೇರ, ಶಾಲಿನಿ ಸಾಲ್ಯಾನ್, ಹರ್ಷದ್ ಸಫಲಿಗ ಪ್ರಾರ್ಥನೆಯನ್ನಾಡಿದರು. ಪ್ರತೀಕ್ ಕರ್ಕೇರ ಸ್ವಾಗತಿಸಿದರು. ಕೋಶಾಧಿಕಾರಿ ಸಂಧ್ಯಾ ಪುತ್ರನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಯುವ ವಿಭಾಗದ ಕಾರ್ಯದರ್ಶಿ ಕಾರ್ತಿಕ್ ಸೋಮಶ್ವೇರ, ರಿತೇಶ್ ಬಂಗೇರಾ, ವಿನಿತಾ ಉಳೆಪಾಡಿ, ಭಾವನಾ ಕುಂದರ್, ಶ್ವೇತಾ ಪುತ್ರನ್, ಅನುಷಾ ಸೋಮಶ್ವೇರ, ಶಾಲಿನಿ ಸಾಲ್ಯಾನ್, ಗೀತೇಶ್ ಸಾಲ್ಯಾನ್, ಕಿರಣ್ ಸಫಲಿಗ, ಕೃತಿಕಾ ಕಾಂಚನ್, ಶ್ವೇತಾ ಬಂಗೇರಾ, ದೀಶಾ ಬಂಗೇರ, ಅಮೃತ ಸಫಲಿಗ, ಸುಧೀರ್ ಸುವರ್ಣ ಅತಿಥಿüಗಳನ್ನು ಮತ್ತು ತೀರ್ಪುಗಾರರನ್ನು ಪರಿಚಯಿಸಿದರು. ಹರ್ಷದ್ ಸಫಲಿಗ ಮತ್ತು ಸುಧೀರ್ ಬಂಗೇರ ಸನ್ಮಾನಿತರನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ದಿವ್ಯ ಸಾಫಲ್ಯ ಮತ್ತು ಉಷಾ ಸಫಲಿಗ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಅಶ್ವಿನಿ ಸಫಲಿಗ ವಂದನಾರ್ಪಣೆಗೈದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




| Special Program in collaboration with Kemmannu Y
View More

Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Feast of Assumption & Independence Day Celebration | St. Theresa Church, KemmannuFeast of Assumption & Independence Day Celebration | St. Theresa Church, Kemmannu
Moiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis CornelioMoiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis Cornelio
Final Journey of Golbert Suares (65 years) | LIVE from Barkur | UdupiFinal Journey of Golbert Suares (65 years) | LIVE from Barkur | Udupi
Final Journey of Gretta Suares (69 years) | LIVE from BarkurFinal Journey of Gretta Suares (69 years) | LIVE from Barkur
Final Journey of Asha Fernandes (43 years) | LIVE from Thottam | UdupiFinal Journey of Asha Fernandes (43 years) | LIVE from Thottam | Udupi
Yuva Samagam 2025 | ICYM | LIVE from Sastan, UdupiYuva Samagam 2025 | ICYM | LIVE from Sastan, Udupi
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi