Brief Mumbai, Mangalore News with pictures
Kemmannu News Network, 20-01-2020 09:25:48
ಬಿಸಿಸಿಐ ಮಂಗಳೂರು ಘಟಕದ ಅಧ್ಯಕ್ಷರಾಗಿ ಗಣೇಶ ಬಂಗೇರ ಆಯ್ಕೆ
ಮುಂಬಯಿ, ಜ.14: ಮಂಗಳೂರುನ ಪ್ರತಿಷ್ಠಿತ ಉದ್ಯಮಿ, ಹೆಸರಾಂತ ಕೊಡುಗೈದಾನಿ ಗಣೇಶ ಬಂಗೇರ ಅವರು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಇದರ ಮಂಗಳೂರು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಸೋಮವಾರ ಮಂಗಳೂರು ಇಲ್ಲಿನ ದೀಪಾ ಕಂಫರ್ಟ್ಸ್ ಹೊಟೇಲು ಸಭಾಗೃಹದಲ್ಲಿ ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಘಟಕದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು, ಪ್ರಧಾನ ಕಾರ್ಯದರ್ಶಿ ಆಗಿ ರವಿ ಪೂಜಾರಿ ಚಿಲಿಂಬಿ, ಗೌರವ ಸಲಹೆಗಾರರಾಗಿ ನವೀನ್ಚಂದ್ರ ಡಿ.ಸುವರ್ಣ ಮಂಗಳೂರು ಹಾಗೂ ಪಿತಾಂಬರ ಹೇರಾಜೆ ಬೆಳ್ತಂಗಡಿಯ ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.
ಉಪಾಧ್ಯಕ್ಷರುಗಳಾಗಿ ಜಯಂತ ನಡುಬೈಲ್ ಮತ್ತು ಚಂದ್ರಶೇಖರ ನಾನಿಲ್ ಹಾಗೂ ಜತೆ ಕಾರ್ಯದರ್ಶಿ ಆಗಿ ಸತೀಶ ಬೋಳಾರ್, ಕೋಶಾಧಿಕಾರಿ ಆಗಿ ಕು| ಯಶಸ್ವಿನಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಎಂ.ಡಿ ಪೂಜಾರಿ, ಸಂಪತ್ ಸುವರ್ಣ, ಕಿರಣ್ರಾಜ್, ಪದ್ಮರಾಜ್, ನವೀನ್ ಸುವರ್ಣ, ಸಂತೋಷ್ ಕುಮಾರ್, ಅಶೋಕ್ ಕುಮಾರ್, ಭಾಸ್ಕರ್ ಸಾಲಿಯಾನ್, ಪ್ರಶಾಂತ್ ಸನಿಲ್ ಆಯ್ಕೆಯಾದರು.
ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿ ಬಿಸಿಸಿಐ ಸಂಸ್ಥೆಯ ಧ್ಯೇಯೋದ್ದೇಶವನ್ನು ಸ್ಥೂಲವಾಗಿ ತಿಳಿಸಿದರು.
ಸಭೆಯಲ್ಲಿ ಬಿಸಿಸಿಐ ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಡಾ| ಶ್ರೇಯಸ್, ಡಾ| ವಿಶಾಲ ಅಮೀನ್, ಡಾ| ವಿವೇಕ್ ಅಮೀನ್, ಸಖಾರಾಮ್ ಕಿರೋಡಿಯನ್ ಮುಂತಾದ ಗಣ್ಯರು ಹಾಜರಿದ್ದರು. ಅರುಣ್ ಕಿರೋಡಿಯನ್ ಸ್ವಾಗತಿಸಿ ಜಿಲ್ಲೆಯಲ್ಲಿನ ಉದ್ಯಮಿಗಳು ಸದಸ್ಯತ್ವ ಪಡೆದು ಈ ಸಂಸ್ಥೆಯ ಸದುಪಯೋಗ ಪಡೆಯಲು ತಿಳಿಸಿದರು.
ನಿರ್ಗಮನ ಅಧ್ಯಕ್ಷ ಅರುಣ್ ಕಿರೋಡಿಯನ್ ಅವರು ನೂತನ ಅಧ್ಯಕ್ಷ ಗಣೇಶ ಬಂಗೇರ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿ ಶುಭಾರೈಸಿದರು. ಮೋಹನ್ ಅಮೀನ್ ಸಭಾ ಕಲಾಪ ನಡೆಸಿದರು. ರವಿ ಪೂಜಾರಿ ಚಿಲಿಂಬಿ ವಂದಿಸಿದರು.
`ಧ್ವನಿ ಶ್ರೀರಂಗ’ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಡಾ| ಹೆಚ್.ಎಸ್.ವಿ ಆಯ್ಕೆ - ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವ `ರಂಗಸಿರಿ ಉತ್ಸವ 2020’ದಲ್ಲಿ ಪ್ರದಾನ
ಮುಂಬಯಿ (ದುಬಾಯಿ), ಜ.14: ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಯಲ್ಲಿ ವಿಶೇಷ ಸೇವೆಗೈದವರನ್ನು ಗುರುತಿಸಿ ಕಳೆದ ಹನ್ನೆರಡು ವರ್ಷಗಳಿಂದ ನೀಡುತ್ತಾ ಬರುತ್ತಿರುವ `ಧ್ವನಿ ಶ್ರೀರಂಗ’ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಡಾ| ಹೆಚ್.ಎಸ್ ವೆಂಕಟೇಶ ಮೂರ್ತಿ ಅವರು ಅಯ್ಕೆ ಗೊಂಡಿರುವರು. ಇವರು ಕನ್ನಡ ರಂಗ ಕ್ಷೇತ್ರಕ್ಕೆ ತಮ್ಮ ವಿಭಿನ್ನ ನಾಟಕಗಳ ಮುಖಾಂತರ ಹೊಸತನವನ್ನು ಮೂಡಿಸಿರುವುದಲ್ಲದೆ ಕವಿಯಾಗಿಯು ಅಗ್ರಗಣ್ಯರಾಗಿರುವರು.
ಅಧುನಿಕ ನಾಟಕಗಳ ಬ್ರಹ್ಮ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಅಂತಾರಾಷ್ಟ್ರೀಯ ನೆಲೆಯಲ್ಲಿ ಕೊಡಮಾಡುವ ಈ ರಂಗ ಪ್ರಶಸ್ತಿ ದುಬೈಯ ಪ್ರಯಾಣ, ಮೂರುದಿನಗಳ ವಸತಿ ವೆಛ್ಚ ಹಾಗೂ 25,000/- ನಗದು ಮತ್ತು ಸ್ಮರಣಿಕೆಯನ್ನು ಹೊಂದಿದೆ. (ಈ ತನಕ ಬಿ.ಜಯಶ್ರೀ, ಟಿ.ಎಸ್.ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು,ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ| ಹೆಚ್.ಎಸ್ ಶಿವಪ್ರಕಾಶ್, ಶ್ರೀಮತಿ ಉಮಾಶ್ರೀ, ಡಾ| ನಾ.ದಾ ಶೆಟ್ಟಿ, ಗಿರಿಜಾ ಲೋಕೇಶ್, ಸಿ.ಕೆ.ಗುಂಡಣ್ಣ ಮುಂತಾದವರು ಭಾಜಕರಾಗಿರುವರು). ಪ್ರಶಸ್ತಿಯನ್ನು ದುಬಾಯಿಯ ಏಮಿರೇಟ್ಸ್ ಥಿüಯೇಟರ್ನಲ್ಲಿ ತಾ.14.02.2020ರ ಶುಕ್ರವಾರ ಸಂಜೆ ನಡೆಯಲಿರುವ ಧ್ವನಿ ಪ್ರತಿಷ್ಠಾನದ ಮೂವತ್ತೈದನೇ ವಾರ್ಷಿಕೋತ್ಸವ ಸಮಾರಂಭ ರಂಗಸಿರಿ ಉತ್ಸವ 2020’ ದಲ್ಲಿ ಪ್ರದಾನಿಸಲಾಗುವುದು.
ಇದೇ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ `ಮದುವೆಯ ಆಲ್ಬಮ್’ ನಾಟಕವನ್ನು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ನಿರ್ದೇಶನದಲ್ಲಿ ರಂಗವೇರಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.
ಒತ್ತಡದ ಜೀವನದಿಂದ ಅನಾರೋಗ್ಯ - ಮಂಜುನಾಥ್ ಸಾಗರ್
ಮಂಗಳೂರು : "ಆಧುನಿಕ ಕಾಲದಲ್ಲಿ ನಿರಂತರ ಒತ್ತಡದಿಂದಾಗಿ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಕ್ಕರೆ ಕಾಯಿಲೆ ತೀರಾ ಸಾಮಾನ್ಯವೆನ್ನುವಂತೆ ಎಲ್ಲರನ್ನೂ ಕಾಡುತ್ತಿದೆ. ನೇತ್ರ ತಪಾಸಣೆಯನ್ನು ಕ್ಲಪ್ತ ಸಮಯದಲ್ಲಿ ಮಾಡುವುದರಿಂದ ಮುಂದೊದಗ ಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಶಿಬಿರಾರ್ಥಿಗಳು ಈ ಶಿಬಿರದ ಪೂರ್ಣ ಪ್ರಯೋಜನ ಪಡೆದುಕೊಂಡಿರುವುದು ಸಂಘಟಕರಿಗೆ ಸಮಾಧಾನವನ್ನುಂಟು ಮಾಡಿದೆ ಹಾಗೂ ಈ ಸಂದರ್ಭದಲ್ಲಿ ನೇತ್ರ ಪರೀಕ್ಷೆಗೊಳಪಟ್ಟ 120 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಿರುವುದು ಶ್ಲಾಘನೀಯ ವಿಷಯ ಎಂದು ಇಂ. ಕೆ.ಪಿ. ಮಂಜುನಾಥ ಸಾಗರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಜರ್ಸ್ ಲಿಮಿಟೆಡ್, ಪಣಂಬೂರು, ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಎಸ್.ಕೆ.ಮುನಿಸಿಪಲ್ ಎಂಪ್ಲಾಯೀಸ್ ಯೂನಿಯನ್ (ರಿ) ಮನಪಾ ಮಂಗಳೂರು ಹಾಗೂ ಯೂತ್ ರೆಡ್ ಕ್ರಾಸ್ ಯೂನಿಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬ್ಯುಸಿನೆಸ್ ಮೆನೇಜ್ಮೆಂಟ್ ಮಂಗಳೂರು ಇವರ ಸಹಯೋಗದಲ್ಲಿ ದ.ಕ.ಜಿ.ಪ.ಸ. ಹಿರಿಯ ಪ್ರಾಥಮಿಕ ಶಾಲೆ, ಪಾಂಡೇಶ್ವರದಲ್ಲಿ ಇತ್ತೀಚೆಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಂದರು ಕಾರ್ಪೊರೇಟರ್ ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದ್ದರು. ಅತ್ತಾವರ ಕಾರ್ಪೊರೇಟರ್ ದಿವಾಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಮುಖ್ಯ ಶಿಕ್ಷಕಿ ಶ್ರೀಮತಿ ಶಾಲಿನಿ, ಮುನೀರ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ವೀಣಾ ಪ್ರಾರ್ಥನೆಗೈದರು. ದಿನೇಶ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಶಿಬಿರಾರ್ಥಿಗಳಿಗೆ ತಜ್ಞರಿಂದ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಸಲಹೆ, ಅವಶ್ಯಕತೆಯಿದ್ದವರಿಗೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ, ಸಕ್ಕರೆ ಕಾಯಿಲೆಗೆ ಉಚಿತ ರಕ್ತಪರೀಕ್ಷೆ, ಉಚಿತ ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತಲ್ಲದೆ ಉಚಿತ ಕನ್ನಡಕಗಳನ್ನೂ ನೀಡಲಾಯಿತು. ಅನೇಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ಸಂಘಸಂಸ್ಥೆಗಳಾದ ಕರ್ನಾಟಕ ಶಿವ ಸೇವಾ ಸಮಿತಿ (ರಿ.) ಪಾಂಡೇಶ್ವರ, ಮಂಗಳೂರು, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಪಾಂಡೇಶ್ವರ, ಮಂಗಳೂರು,ಯಂಗ್ ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್, ಪಾಂಡೇಶ್ವರ, ರೈಸಿಂಗ್ ಸ್ಟಾರ್ ಫ್ರೆಂಡ್ಸ್ ಕ್ಲಬ್, ಮಂಕಿಸ್ಟ್ಯಾಂಡ್, ಬಾಬಾ ಫ್ರೆಂಡ್ಸ್, ಪೆÇಲೀಸ್ ಲೈನ್, ಪಾಂಡೇಶ್ವರ ಸಹಕಾರ ನೀಡಿದವು.
ತಾ.12-1-2020ರಂದು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ದ.ಕ.ಜಿ.ಪ.ಸ. ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ, ಮಂಗಳೂರು ಅಲ್ಲಿ ಜರಗಿತು. ಕಾರ್ಯಕ್ರಮದ ಮುಖ್ಯ ರೂವಾರಿ ಶಿವರಾಜ್ ಪಾಂಡೇಶ್ವರ ಅವರು ಸರ್ವರಿಗೂ ಧನ್ಯವಾದ ಸಮರ್ಪಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link