Bank Federation Award 2020 (Model Bank)


Rons Bantwal
Kemmannu News Newtwork, 12-02-2020 19:52:39


Write Comment     |     E-Mail To a Friend     |     Facebook     |     Twitter     |     Print


ಮಹಾರಾಷ್ಟ್ರ ಬ್ಯಾಂಕ್ಸ್ `ಉತ್ಕೃಷ್ಟ ಸಾಧಕ ಬ್ಯಾಂಕ್’ ಪುರಸ್ಕಾರ ಮುಡಿಗೇರಿಸಿದ - ಮೋಡೆಲ್ ಬ್ಯಾಂಕ್; ಪುರಸ್ಕಾರ ಪ್ರದಾನಿಸಿದ ಡಿಸಿಎಂ ಅಜಿತ್ ಪವಾರ್ (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ.ಫೆ.10: ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯು 24ನೇ ವಾರ್ಷಿಕ ಬ್ಯಾಂಕ್ ಪುರಸ್ಕಾರ ಪ್ರದಾನ ಸಮಾರಂಭ ಇಂದಿಲ್ಲಿ ಸೋಮವಾರ ದಾದರ್ ಪಶ್ಚಿಮದ ಪ್ರಭಾದೇವಿ ಇಲ್ಲಿನ ಪಿ.ಎಲ್ ದೇಶಪಾಂಡೆ ಮಹಾರಾಷ್ಟ್ರ ಕಲಾ ಅಕಾಡೆಮಿ ಇದರ ರವೀಂದ್ರ ನಾಟ್ಯ ಮಂದಿರದ ಸಭಾಗೃಹದಲ್ಲಿ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಧುರೀಣ, ಮಹಾರಾಷ್ಟ್ರದ ಸರಕಾರದ ಉಪಮುಖ್ಯಮಂತ್ರಿ (ವಿತ್ತ ಮತ್ತು ಯೋಜನಾ ಖಾತೆ ಸಚಿವ) ಅಜಿತ್ ಪವಾರ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಿದ್ದು ಅತಿಥಿü ಅಭ್ಯಾಗತರಾಗಿ ಮಹಾರಾಷ್ಟ್ರದ ಸರಕಾರದ ಗೃಹ ಸಚಿವ ಅನಿಲ್ ದೇಶ್‍ಮುಖ್ ಮತ್ತು ಸಹಕಾರಿ ಸಚಿವ ಬಾಳಸಾಹೇಬ್ ಪಾಟೀಲ್ ಉಪಸ್ಥಿತರಿದ್ದರು.

ಬಾಂಕ್ಸ್ ಫೆಡರೇಶನ್‍ನ ಕಾರ್ಯಾಧ್ಯಕ್ಷ ಮುಕುಂದ್ ಕಳಂಮ್ಕರ್, ಉಪ ಕಾರ್ಯಾಧ್ಯಕ್ಷ ವಸಂತ್ ಗುಯಿಖೇಡ್ಕರ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ವಾತಿ ಪಾಂಡೆ ಇವರ ಸಮಾಕ್ಷಮದಲ್ಲಿ ಜರುಗಿದ ಭವ್ಯ  ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಕ್ಯಾ| ಪದ್ಮಭೂಷಣ ವಸಂತದಾದಾ ಪಾಟೀಲ್ ಉತ್ಕೃಷ್ಟ ನಗರಿ ಸಹಕರಿ ಬ್ಯಾಂಕ್ ಪುರಸ್ಕಾರವನ್ನು ಮೋಡೆಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಪಥಸಂಸ್ಥೆಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರದಾನಿಸಿದ್ದು ಮೋಡೆಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ ್ಯ.ಡಿ’ಸೋಜಾ ಪುರಸ್ಕಾರ ಫಲಕ, ಪ್ರಶಸ್ತಿಪತ್ರ ಸ್ವೀಕರಿಸಿದರು.

ಮುಂಬಯಿ ಪ್ರಾದೇಶಿಕ ಸಹಕಾರಿ ವಿಭಾಗದಲ್ಲಿ ಮೋಡೆಲ್ ಬ್ಯಾಂಕ್‍ನ 2018-19ರ ಕ್ಯಾಲೆಂಡರ್ ವರ್ಷದ ರೂಪಾಯಿ 1,000 ಕೋಟಿ ಅಧಿಕ ಮೊತ್ತದ ವ್ಯವಹಾರಕ್ಕಾಗಿ `ಉತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ 2019’ ಹಾಗೂ ಶತಮಾನೋತ್ತರ (ದೀರ್ಘಾವಧಿಯ 103 ವರ್ಷಗಳ) ಹಣಕಾಸು ಸೇವೆಗೆ ಸಚಿವÀರು ಗೌರವಿಸಿ ಶುಭಾರೈಸಿದರು. 

ಈ ಶುಭಾವಸರದಲ್ಲಿ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರಾದ ಸಿಎ| ಪೌಲ್ ನಝರೆತ್, ಥೋಮಸ್ ಡಿ.ಲೋಬೊ, ಲಾರೇನ್ಸ್ ಡಿಸೋಜಾ, ನ್ಯಾಯವಾದಿ ಪಿಯುಸ್ ವಾಸ್, ಜೆರಾಲ್ಡ್ ಕರ್ಡೋಜಾ, ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಲೂಯಿಸ್ ಡಿ’ಸೋಜಾ ಉಪ ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ಉಪಸ್ಥಿತರಿದ್ದು ಪುರಸ್ಕಾರಕ್ಕಾಗಿ ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು.


ಬ್ಯಾಂಕ್ಸ್ ಫೆಡರೇಶನ್‍ನ ಈ ಮರ್ಯಾದೆ ನಮ್ಮ ಸಂಸ್ಥೆಯ ಗೌರವದ ಜೊತೆಗೆ ಪರಿಶ್ರಮ ಮತ್ತು ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದು ನಮ್ಮ ಬ್ಯಾಂಕ್ ಮಂಡಳಿ ಮತ್ತು ನೌಕರ ವೃಂದದ ಅವಿರತ ಮತ್ತು ದಕ್ಷ ಸೇವೆಗೆ ಸಂದ ಗೌರವವಾಗಿದೆ. ಈ ಪುರಸ್ಕಾರವು ಬ್ಯಾಂಕ್‍ನ ಎಲ್ಲಾ ಶೇರುದಾರರು, ಗ್ರಾಹಕರು, ಹಿತೈಷಿಗಳು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರಿಗೆ ಸಲ್ಲುವ ಮಾನ್ಯತೆ ಆಗಿದೆ  ಎಂದು ಮೋಡೆಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿ’ಸೋಜಾ ತಿಳಿಸಿದರು.

ಮಹಾನಗರ, ಉಪನಗರಗಳಲ್ಲಿ ಒಟ್ಟು 25 ಶಾಖೆಗಳನ್ನು ಹೊಂದಿರುವ ಮೋಡೆಲ್ ಬ್ಯಾಂಕ್ ಗತ ಹಣಕಾಸು ಸಾಲಿನಲ್ಲಿ ಶೇರ್ ಕ್ಯಾಪಿಟಲ್ 37.88 ಕೋಟಿ, ಫಿಕ್ಸೆಡ್ ಡಿಪಾಜಿಟ್ 804.23 ಕೋಟಿ, ರಿಝರ್ವ್ ಫಂಡ್ 44.60 ಕೋಟಿ, ಲೋನ್ ಎಂಡ್ ಎಡ್‍ವಾನ್ಸಸ್ 560.94 ಕೋಟಿ, ಸೇವ್ಹಿಂಗ್ ಡಿಪಾಜಿಟ್ 185.31 ಕೋಟಿ, ಚಾಲ್ತಿ ಠೇವಣಾತಿ (ಕರೆಂಟ್ ಫಂಡ್) 28.65 ಕೋಟಿ, ಕಾರ್ಯಮಾನ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂಪಾಯಿ 1,114.88 ಕೋಟಿ ವ್ಯವಹರಿಸಿದೆ. ನಿವ್ವಳ ಲಾಭ (ನೆಟ್ ಪ್ರಾಫಿಟ್) ರೂಪಾಯಿ 7.60 ಕೋಟಿಯೊಂದಿಗೆ ಒಟ್ಟು  ಠೇವಣಾತಿ (ಟೋಟಲ್ ಬಿಸ್ನೆಸ್ ಮಿಕ್ಸ್) 1583.13 ಕೋಟಿ ವ್ಯವಹಾರ ನಡೆಸಿ ಕಳೆದ ವರ್ಷಕ್ಕಿಂತ 5.12% ವ್ಯವಹಾರ ಹೆಚ್ಚಿಸಿ ಕೊಂಡಿದೆ. ಆ ಮೂಲಕ ನೆಟ್ ಎನ್‍ಪಿಎ1.59% ಹೊಂದಿದ್ದು ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ (ಆಡಿಟ್ ಕ್ಲಾಸಿಫೀಕೇಶನ್) `ಎ’ ಮಾನ್ಯತೆಯೊಂದಿಗೆ ಧೃಡೀಕೃತ ಗೊಂಡಿರುವುದೇ ಈ ಗೌರವಕ್ಕೆ ಮಾನದಂಡವಾಗಿದೆ ಎಂದು ಸಿಇಒ ವಿಲಿಯಂ ಲೂಯಿಸ್ ಡಿ’ಸೋಜಾ ತಿಳಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Nirmala Thonse organizes Awareness Campaign agains
View More

Obituary: Theresa Cornelio (95) Kamblathota, Kemmannu.Obituary: Theresa Cornelio (95) Kamblathota, Kemmannu.
Veez Konkani Issue # 139Veez Konkani Issue # 139
Milarchi Lara - Bulletin Issue July 2020.Milarchi Lara - Bulletin Issue July 2020.
Cut down your medical expenses. With Manipal Arogya CardCut down your medical expenses. With Manipal Arogya Card
Contact for Masks, Sanitizers, PPE kits and More..Contact for Masks,  Sanitizers, PPE kits and More..
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums