Brief Mumbai Managalore news with pictures.


Rons Bantwal
Kemmannu News Newtwork, 13-02-2020 15:08:21


Write Comment     |     E-Mail To a Friend     |     Facebook     |     Twitter     |     Print


ಫೆ.16: ಮೈಸೂರು ಅಸೋಸಿಯೇಷÀನ್‍ನಲ್ಲಿ ರಾಷ್ಟ್ರಕವಿ ಡಾ| ಜಿ.ಎಸ್ ಶಿವರುದ್ರಪ್ಪ ಸಾಹಿತ್ಯದ
ವಿಚಾರ ಸಂಕಿರಣ-ಕಾವ್ಯ ಗಾಯನ-ಗೋಷ್ಠಿ-ಲೋಕ ವಿಮರ್ಶೆ
ಮುಂಬಯಿ, ಫೆ.11: ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ರಾಷ್ಟ್ರಕವಿ ಡಾ| ಜಿ.ಎಸ್ ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಷನ್‍ನ ಸಭಾಗೃಹದಲ್ಲಿ  ಇದೇ ಫೆ.16ನೇ ಭಾನುವಾರ ಪೂರ್ವಾಹ್ನ 10.00 ಗಂಟೆಗೆ  ಮೈಸೂರು ಅಸೋಸಿಯೇಷನ್‍ನ ಸಭಾಗೃಹದಲ್ಲಿ  ರಾಷ್ಟ್ರಕವಿ ಡಾ| ಜಿ.ಎಸ್ ಶಿವರುದ್ರಪ್ಪ ಅವರ ಸಾಹಿತ್ಯದ ಕುರಿತು ವಿಚಾರ ಸಂಕಿರಣ ಆಯೋಜಿಸಿದೆ.

ಅಂದು ಬೆಳಿಗ್ಗೆ 10.00 ಗಂಟೆಗೆ ರಾಷ್ಟ್ರಕವಿ ಡಾ| ಜಿ.ಎಸ್ ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷ ಪೆÇ್ರ| ಎಸ್.ಜಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನೆರವೇರುವ ವಿಚಾರ ಸಂಕಿರಣವನ್ನು ಮಹಾನಗರದಲ್ಲಿನ ಪ್ರಸಿದ್ಧ ವಿಜ್ಞಾನಿ, ಗೋಕುಲ ಮಾಸಿಕದ ಸಂಪಾದಕ ಡಾ| ವ್ಯಾಸರಾವ್ ನಿಂಜೂರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿüಯಾಗಿ ಮೈಸೂರು ಅಸೋಸಿಯೇಶನ್ ಮುಂಬಯಿ ಅಧ್ಯಕ್ಷೆ ಕಮಲಾ ಕಾಂತರಾಜ್ ಆಗಮಿಸಲಿದ್ದು ಮಹಾನಗರದ ಹಿರಿಯ ಸಾಹಿತಿ ಡಾ| ಕೆ.ರಘುನಾಥ್ ಪ್ರಬಂಧ ಮಂಡಿಸಲಿದ್ದಾರೆ.

ಮಹಾರಾಣಿ ಕ್ಲಸ್ಟರ್ ವಿವಿ ಬೆಂಗಳೂರು ಇದರ ಪ್ರಾಧ್ಯಾಪಕ ಡಾ| ಎಸ್.ಆರ್ ವಿಜಯಶಂಕರ್ ಅಧ್ಯಕ್ಷತೆಯಲ್ಲಿ ಜಿ.ಎಸ್.ಎಸ್ ಕಾವ್ಯಲೋಕ ಮೊದಲ ಗೋಷ್ಠಿ ನಡೆಯಲಿದ್ದು ಮೈಸೂರುನ ಪ್ರಾಧ್ಯಾಪಕಿ ಡಾ| ಕವಿತಾ ರೈ ಅವರು ಜಿ.ಎಸ್.ಎಸ್ ಭಾವಲೋಕದ ಪಯಣದ ಬಗ್ಗೆ, ಡಾ| ಕೆ.ವೈ ನಾರಾಯಣಸ್ವಾಮಿ ಅವರು ಲೋಕ ವಿಮರ್ಶೆ ವಿಚಾರದಲ್ಲಿ ಪ್ರಬಂಧ ಮಂಡಿಸಲಿದ್ದಾರೆ.

ಪ್ರಸಿದ್ಧ ಕತೆಗಾರ ಡಾ| ಲೋಕೇಶ್ ಅಗಸನಕಟ್ಟೆ ಚಿತ್ರದುರ್ಗ ಅಧ್ಯಕ್ಷತೆಯಲ್ಲಿ ದ್ವಿತೀಯ ಗೋಷ್ಠಿ ನಡೆಯಲಿದ್ದು ಕಾವ್ಯ ಚಿಂತನೆ ಮತ್ತು ವಿಚಾರ ವಿಮರ್ಶೆ ಗೋಷ್ಠಿಯಲ್ಲಿ ಪ್ರಾಧ್ಯಾಪಕಿ ಡಾ| ತಾರಿಣಿ ಶುಭದಾಯಿನಿ (ಚಿತ್ರದುರ್ಗ) ಅವರು ಜಿ.ಎಸ್.ಎಸ್ ಕಾವ್ಯ ಚಿಂತನೆ ನಡೆಸಲಿದ್ದು, ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಬಿ.ಎಂ ಪುಟ್ಟಯ್ಯ ಅವರು ವಿಮರ್ಶೆಯ ನೆಲೆಗಳು ವಿಚಾರದಲ್ಲಿ ಪ್ರಬಂಧ ಮಂಡಿಸಲಿದ್ದಾರೆ.

ಜಿ.ಎಸ್.ಎಸ್ ಕಾವ್ಯ ಗಾಯನದಲ್ಲಿ ವಿದುಷಿ ಡಾ| ಶ್ಯಾಮಲಾ ಪ್ರಕಾಶ್ ಮತ್ತು ವಿದುಷಿ ಡಾ| ಶ್ಯಾಮಲಾ ರಾಧೇಶ್ ಭಾಗವಹಿಸಲಿದ್ದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಗೋಷ್ಠಿ ನಿರೂಪಿಸುವರು.  ಕಾವ್ಯಲೋಕ ದ್ವಿತೀಯ ಗೋಷ್ಠಿಯಲ್ಲಿ ವಿದುಷಿ ವೀಣಾ ಶಾಸ್ತ್ರಿ ಮತ್ತು ವಿದುಷಿ ಜ್ಯೋತಿ ಭಟ್ ಭಾಗವಹಿಸಲಿದ್ದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ನಳಿನಾ ಪ್ರಸಾದ್ ಗೋಷ್ಠಿ ನಿರೂಪಿಸುವರು.

ಕೊನೆಯಲ್ಲಿ ಮೈಸೂರು ಅಸೋಸಿಯೇಷನ್‍ನ ವಿಶ್ವಸ್ಥ ಕೆ.ಮಂಜುನಾಥಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಬೆಂಗಳೂರು ಅಲ್ಲಿನ ಪ್ರಸಿದ್ಧ ಚಿಂತಕ ಡಾ| ಕೆ.ಮರುಳಸಿದ್ಧಪ್ಪ ಸಮಾರೋಪ ನುಡಿ ತಿಳಿಸುವರು. ಮುಖ್ಯ ಅತಿಥಿüಯಾಗಿ ಪ್ರಸಿದ್ಧ ಕವಿ ಪೆÇ್ರ| ಚಂದ್ರಶೇಖರ ತಾಳ್ಯ ಪಾಲ್ಗೊಳ್ಳಲಿದ್ದು ನೇಸರು ಮಾಸಿಕದ ಸಂಪಾದಕಿ ಡಾ| ಜ್ಯೋತಿ ಸತೀಶ್ ಸಭಾಕಾರ್ಯಕ್ರಮ ನಿರೂಪಿಸುವರು.

ಮುಂಬಯಿಯ ಸಮಸ್ತ ಕನ್ನಡ ಜನತೆಗೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಚಾರ ಸಂಕಿರಣದ ಯಶಸ್ವಿಗೆ ಸಹಕರಿಸುವಂತೆ  ಮೈಸೂರು ಅಸೋಸಿಯೇಷನ್‍ನ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ಮತ್ತು ಶಿವರುದ್ರಪ್ಪ ಪ್ರತಿಷ್ಠಾನದ  ಕಾರ್ಯದರ್ಶಿ ಬಿ.ನೀಲಮ್ಮ ಈ ಮೂಲಕ ತಿಳಿಸಿದ್ದಾರೆ.

ಮೂವತ್ತರ ಮುನ್ನಡೆಯಲ್ಲಿ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ
ಬಂಟ ಸಾಧಕರಿಗೆ ಸಾಧನಾಶೀಲ ಪುರಸ್ಕಾರ ಪ್ರದಾನ-ಉದ್ಯಮಗಳ ಪ್ರದರ್ಶನ
ಮುಂಬಯಿ, ಫೆ.11: ಮೂರು ದಶಕಗಳ ದಕ್ಷ ಸೇವೆ, ಸಾಧನೆಗಳ ಫಲಪ್ರದ ಮುನ್ನಡೆಯಲ್ಲಿನ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಸಂಸ್ಥೆ ಇದೀಗ ಬಂಟ ಸಾಧಕರಿಗೆ `ಐಬಿಸಿಸಿಐ ಬಂಟ್ಸ್ ಸ್ಟಾರ್ ಸಾಧಕ ಪುರಸ್ಕಾರ 2020’ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಇದೇ 2020ರ ಮಾರ್ಚ್, 01ನೇ ಭಾನುವಾರ ಸಂಜೆ 4.30 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಏರ್‍ಪೆÇೀರ್ಟ್ ಇಲ್ಲಿನ ಸಹರಾ ಸ್ಟಾರ್ ಪಂಚತಾರಾ ಹೊಟೇಲು ಸಭಾಗೃಹದಲ್ಲಿ ಭವ್ಯ ಪುರಸ್ಕಾರ ಪ್ರದಾನ ಸಮಾರಂಭ ಆಯೋಜಿಸಿದೆ.

ಸಮಾರಂಭಕ್ಕೆ ಅತಿಥಿs ಅಭ್ಯಾಗತರುಗಳಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ, ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್ ಗಡ್ಕರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜ್‍ಕಿರಣ್ ರೈ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ಈ ಬಾರಿ ಪ್ರಮುಖವಾಗಿ ಸಾಧಕ ಬಂಟ ಉದ್ಯಮಿಗಳÀು ಹಾಗೂ ಇತರ ವ್ಯವಸಾಯಿಕ ತಜ್ಞರನ್ನು ಗುರುತಿಸಿ `ಐಬಿಸಿಸಿಐ ಬಂಟ್ಸ್ ಸ್ಟಾರ್ ಸಾಧಕ ಪುರಸ್ಕಾರ 2020’ ಪ್ರದಾನಿಸಿ ಗೌರವಿಸಲಾಗುವುದು. ಆ ಪೈಕಿ ವ್ಯವಹಾರ ಶ್ರೇಷ್ಠತಾ ಉದ್ಯಮಿ (ಇexಛಿeಟಟeಟಿಛಿe iಟಿ ಃusiಟಿess), ವೃತ್ತಿಪರ ಶ್ರೇಷ್ಠತಾ ವ್ಯಕ್ತಿ (ಇexಛಿeಟಟeಟಿಛಿe iಟಿ Pಡಿoಜಿessioಟಿ), ಶ್ರೇಷ್ಠ ಭವಿಷ್ಯ ಪ್ರಾರಂಭಿಕ ಉದ್ಯಮಿ (ಇxಛಿeಟಟeಟಿಛಿe iಟಿ ಜಿuಣuಡಿisಣiಛಿ Sಣಚಿಡಿಣ-uಠಿ), ಆತಿಥೇಯ (ಹೊಟೇಲು ಕ್ಷೇತ್ರದ) ತಾರಾ ಉದ್ಯಮಿ (Sಣಚಿಡಿ Peಡಿಜಿoಡಿmeಡಿ iಟಿ ಊosಠಿiಣಚಿಟiಣಥಿ Iಟಿಜusಣಡಿಥಿ) ವಿಭಾಗಗಳನ್ನಾಗಿಸಿ ಸಾಧಕ ಬಂಟರನ್ನು ಗೌರವಿಸಲಿದೆ. ಬಂಟ ಸಮಾಜದ ದಿಗ್ಗಜ ಉದ್ಯಮಿಗಳು ಹಾಗೂ ಬಂಟರೇತರ ಉದ್ಯಮಿಗಳೂ ವಿಶೇಷ ಆಹ್ವಾನಿತರಾಗಿ ಆಗಮಿಸಿ ತಮ್ಮ ಉದ್ಯಮಗಳ ಬಗ್ಗೆ ಪ್ರದರ್ಶನ ನೀಡಿ ಸಮಾರಂಭಕ್ಕೆ ಮೆರುಗು ನೀಡಲಿದ್ದಾರೆ.

ಈ ಸಮಾರಂಭದಲ್ಲಿ ತಮ್ಮ ಉದ್ಯಮಗಳ ಬಗ್ಗೆ ಮಾಹಿತಿ, ಪ್ರದರ್ಶನ ನೀಡಲಿಚ್ಛಿಸುವ ಉದ್ಯಮಿಗಳು ಐಬಿಸಿಸಿಐ ಕಾರ್ಯಕಾರಿ ಸಮಿತಿಯನ್ನು ಸಂಪರ್ಕಿಸಬಹುದು. ಸಮಾರಂಭದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಅತಿಥಿsಗಳು ಪ್ರವೇಶ ಪತ್ರಗಳನ್ನು ಮುಂಚಿತವಾಗಿ ಸ್ವತಃ ಅಥವಾ ವೆಬ್‍ಸೈಟ್  ಮುಖೇನ ಪಡೆದು ಕೊಳ್ಳುವಂತೆ ಕೋರಲಾಗಿದೆ. ಈ ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಸದಸ್ಯರು ಹಾಗೂ ಆಮಂತ್ರ್ರಿತರು ಪಾಲ್ಗೊಂಡು ಸಮಾರಂಭದ ಶ್ರೇಯಸ್ಸಿಗೆ ಸಹಕರಿಸುವಂತೆ ಐಬಿಸಿಸಿಐ ಇದರ ಕಾರ್ಯಕಾರಿ ಸಮಿತಿ ಈ ಮೂಲಕ ವಿನಂತಿಸಿದೆ.

ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ:
ರಾಷ್ಟ್ರದ ಆಥಿರ್üಕ ರಾಜಧಾನಿ ಸೇರಿದಂತೆ ರಾಷ್ಟ್ರದಾದ್ಯಂತ ಹೊಟೇಲ್ ಉದ್ಯಮದಲ್ಲಿ ಯಶಸ್ವಿಗಳಾಗಿದ್ದ ಬಂಟರು, ಕಳೆದ ಸುಮಾರು ಮೂರು ದಶಕಗಳಿಂದ ವಿವಿಧ ಪ್ರಕಾರದ ಔದ್ಯೋಗಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಉದ್ಯಮಶೀಲತ್ವದತ್ತ ಸಾಗುತ್ತಿದ್ದಾರೆ. ಈ ಮೂಲಕ ಲಕ್ಷಾಂತರ ಜನರಿಗೆ ನೌಕರಿಯ ಸೌಭಾಗ್ಯ, ಸೌಲಭ್ಯ ಒದಗಿಸಿ ಮನುಕುಲದ ಬಾಳಿಗೆ ಪ್ರೇರಕರಾಗಿದ್ದಾರೆ. ಕೆಲವು ಉದ್ಯಮಿಗಳು ಕ್ರಾಂತಿಕಾರಿ ಪ್ರಗತಿಯೊಂದಿಗೆ ಯಶಸ್ವಿನ ಶಿಖರವನ್ನೇರಿ ಸಾಧನಾಶೀಲ ಉದ್ಯಮಿಗಳಾಗಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮನವರಿಸಿ ಸಮಾನ ಮನಸ್ಕ ಬಂಟ ಉದ್ಯಮಿಗಳು, ಧುರೀಣರು 1990ರಲ್ಲಿ ಪ್ರಥಮತಃ ಮುಂಬಯಿಯ ಉದ್ಯಮಿಗಳನ್ನು ಹಾಗೂ ಇತರ ವ್ಯವಸಾಯಗಳಲ್ಲಿ ತೊಡಗಿಸಿ ಕೊಂಡವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತಾ `ಮೌಲ್ಯಗಳೊಂದಿಗೆ ಸಂಪರ್ಕ ಸಾಧನೆ’ ಧ್ಯೇಯನ್ನಿರಿಸಿ ಆಸ್ತಿತ್ವಕ್ಕೆ ತರಲಾದ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ (ಬಿಸಿಸಿಐ) ಸಂಸ್ಥೆ ಇದೀಗ ಮೂವತ್ತರ ಮುನ್ನಡೆಯಲ್ಲಿದೆ.

ಎಸ್‍ಎಂ ಗ್ರೂಪ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಎಸ್.ಎಂ ಶೆಟ್ಟಿ ಇವರು ಮೊದಲಾಗಿ ಬಿಸಿಸಿಐ ಇದರ ಸಾರಥ್ಯ ವಹಿಸಿ ಸ್ಥಾಪಕ ಅಧ್ಯಕ್ಷರಾಗಿ ಸೇವೆಯನ್ನಿತ್ತÀರು. ಬಳಿಕ ವಿ.ಕೆ ಗ್ರೂಪ್‍ನ ವಿ.ಕೆ ಶೆಟ್ಟಿ (ಸ್ವರ್ಗಸ್ಥರು) ಅಧ್ಯಕ್ಷರಾಗಿ  ತಮ್ಮ ನೇತೃತ್ವದಲ್ಲಿ 3 ವರ್ಷಗಳ ಕಾಲಾವಧಿಯಲ್ಲಿ ಸಂಸ್ಥೆಯನ್ನು ಯೋಗ್ಯ ರೀತಿಯಲ್ಲಿ ಮುಂದುವರಿಸಿದರು. ನಂತರ ಯುನಿಟಾಪ್ ಸಮೂಹದ ಬಾರ್ಕೂರು ಧರ್ಮರಾಜ್ ಶೆಟ್ಟಿ (ಬಿ.ಡಿ ಶೆಟ್ಟಿ) 12 ವರ್ಷಗಳ ತನಕ ಅಧ್ಯಕ್ಷರಾಗಿದ್ದು ಸಂಸ್ಥೆಯನ್ನು ಸಕಾರಾತ್ಮಕವಾಗಿ ಮುನ್ನಡೆಸಿ ಬಿಸಿಸಿಐ ಇದನ್ನು ಜನಮಾನ್ಯ ಸಂಸ್ಥೆಯನ್ನಾಗಿಸಿ ಬೆಳೆಸಿ ತನ್ನ ಕಾಲಾವಧಿಯಲ್ಲಿ ಹಲವಾರು ಬಂಟದಾನಿಗಳ ಧನ ಸಹಾಯದಿಂದ ಸಂಸ್ಥೆಗೆ ಸ್ವಂತಃದ ಕಚೇರಿಯನ್ನು ರೂಪಿಸಿದರು. ಜೊತೆಗೆ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಇರಾದೆಯೊಂದಿಗೆ ದೇಶವ್ಯಾಪಿಯಾಗಿ ಪಸರಿಸುವ ನಿಟ್ಟಿನಲ್ಲಿ ಬಿ.ಡಿ ಶೆಟ್ಟಿ ಅವರು ದೂರದೃಷ್ಠಿ ಇರಿಸಿ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಎಂದು ಮರು ನಾಮಕರಣಗೊಳಿಸಿ  ಸರಕಾರದ ಮಾನ್ಯತೆಯೊಂದಿಗೆ ನೋಂದಾವಣಿ ಗೊಳಿಸಿ ರಾಷ್ಟ್ರ ಮಟ್ಟದ ಸಂಸ್ಥೆಯಾಗಿ ರೂಪಿಸಿದರು. ನಂತರ 3 ವರ್ಷಗಳ ಕಾಲ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಅಧ್ಯಕ್ಷರಾಗಿ ಕಾರ್ಯಪ್ರಪ್ತರಾಗಿ ತನ್ನ ಕಾಲಾವಧಿಯಲ್ಲಿ ವಿವಿಧ ಜೌದ್ಯೋಗಿಕ ತರಬೇತಿ ಶಿಬಿರ, ಉದ್ಯಮ ಪ್ರವಾಸಗಳನ್ನು ಆಯೋಜಿಸಿ ಸಂಸ್ಥೆಗೆ ಹೊಸದಿಶೆಯನ್ನು ಪ್ರಾಪ್ತಿಸಿದರು. 2018ರ ಜನವರಿ 25ರಂದು ಜರುಗಿದ ಮಹಾಸಭೆಯಲ್ಲಿ ಉದ್ಯಮಿ, ಲ್ಯೂಮೇನ್ಸ್ ಗ್ರೂಫ್ ಆಫ್ ಇಂಡಿಯಾ ಇದರ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ) ಇವರನ್ನು ಐಬಿಸಿಸಿಐ ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ ಮಹಾಸಭೆ ಸರ್ವಾನುಮತದಿಂದ ಆಯ್ಕೆ ಗೊಳಿಸಿದ್ದು ಸದ್ಯ ಕಾರ್ಯನಿರತ ಕೆ.ಸಿ ಶೆಟ್ಟಿ ಅವರು ತಮ್ಮದೇ ಆದ ಕಾರ್ಯವೈಖರಿಯಲ್ಲಿ ಸಂಸ್ಥೆ ಮುನ್ನಡೆಸುತ್ತಿದ್ದು, ಬಂಟ ಸಾಧಕರಿಗೆ ಸಾಧನಾಶೀಲ ಪುರಸ್ಕಾರ ಯೋಜನೆಯನ್ನು ಹಮ್ಮಿಕೊಂಡು ಇನ್ನಷ್ಟು ಬಂಟ ಉದ್ಯಮಿಗಳನ್ನು ಪೆÇ್ರತ್ಸಹಿಸಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಸೇವಾ ನಿರತರಾಗಿದ್ದರೆ.


ಐಬಿಸಿಸಿಐ ಸಂಸ್ಥೆ ಭಾರೀ ಸಂಖ್ಯೆಯ ಸದಸ್ಯರನ್ನೊಳಗೊಂಡಿದ್ದು, ತನ್ನ ವೆಬ್‍ಸೈಟ್‍ನ್ನು ತುಂಬಾ ಪರಿಣಾಮಕಾರಿ ಆಗಿಸಿ ಬಳಸಿಕೊಳ್ಳುತ್ತಿದೆ. ಈ  ಮೂಲಕ ಬಂಟ ಯುವಕರು ತಮ್ಮ ನೌಕರಿ, ಉದ್ಯಮಕ್ಕಾಗಿ ನೊಂದಯಿಸಲು ಅವಕಾಶವಿದೆ. ಎಲ್ಲಾ ಸದಸ್ಯರ ಪರಿಚಯ ಹಾಗೂ ವ್ಯವಸಾಯಗಳ ಅರಿವು ಈ ವೆಬ್‍ಸೈಟ್ ಮೂಲಕ ಪಡೆಯಲೂ ಸಾಧ್ಯವಿದೆ. ಪೇಮೆಂಟ್ ಗೇಟ್‍ವೇ ಸಹಾಯದಿಂದ ಹೊಸ ಸದಸ್ಯರು ಅಥವಾ ದಾನಿಗಳು ತಮ್ಮ ಹಣವನ್ನು ಸಂಸ್ಥೆಗೆ ತಲುಪಿಸಲು ಅವಕಾಶವಿದೆ. ಸಂಸ್ಥೆಯ ಪ್ರಗತಿಯ ಪಕ್ಷಿನೋಟವನ್ನು ಎಲ್ಲಾ ಸದಸ್ಯರು ಸುಲಭವಾಗಿ ವೀಕ್ಷಿಸಬಹುದು. 2018ರ ಜುಲೈನಲ್ಲಿ ನಡೆಸಿದ ಸಂತೋಷ್ ನಾಯರ್ ಶಿಬಿರದಲ್ಲಿ  ಬಂಟ ಇನ್ನಿತರ ವ್ಯಕ್ತಿಗಳು ಪಾಲ್ಗೊಂಡು ತಮ್ಮ ಔದ್ಯೋಗಿಕ ಜ್ಞಾನವೃದ್ಧಿಸಿ ಫಲಾನುಭವ ಪಡೆದಿರುವರು.

ಜನವರಿ 2019ರಲ್ಲಿ ನಡೆದ ಔದ್ಯೋಗಿಕ ಪ್ರವಾಸದಲ್ಲಿ 42 ಸದಸ್ಯರು ಹಿಮಾಚಲ ಪ್ರದೇಶದ ಬದ್ದಿ ಎಂಬ ಔದ್ಯೋಗಿಕ ಸಂಕುಲಕ್ಕೆ ಭೇಟಿ ನೀಡಿದ್ದು ಹಲವಾರು ಹೆಸರಾಂತ ಉದ್ಯಮಿಗಳ ಕಾರ್ಖಾನೆಗಳ ಅಧ್ಯಯನ ಮಾಡಿಕೊಳ್ಳುವಂತಾಗಿತ್ತು. ಪ್ರಸ್ತುತ್ ಕೆ.ಸಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಸೇವಾ ನಿರತ ಐಬಿಸಿಸಿಐ ಸಂಸ್ಥೆಯಲ್ಲಿ ಎಸ್.ಬಿ ಶೆಟ್ಟಿ (ಉಪಾಧ್ಯಕ್ಷ)  ಕೆ.ಜಯ ಸೂಡಾ (ಕಾರ್ಯದರ್ಶಿ) ದುರ್ಗಾಪ್ರಸಾದ್ ಬಿ.ರೈ (ಕೋಶಾಧಿಕಾರಿ) ಪ್ರಭಾಕರ ಕೆ.ಶೆಟ್ಟಿ (ಜತೆ ಕಾರ್ಯದರ್ಶಿ), ಪ್ರಸಾದ್ ಬಿ.ಶೆಟ್ಟಿ (ಜತೆ ಕೋಶಾಧಿಕಾರಿ) ಮತ್ತು  ಕಾರ್ಯಕಾರಿ ಸಮಿತಿ 19 ಸದಸ್ಯರು ಸೇವಾ ನಿರತರಾಗಿದ್ದಾರೆ. ಮಾಹಿತಿ: ರೋನ್ಸ್ ಬಂಟ್ವಾಳ್

 

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ ರಾಜೇಂದ್ರ ಆರ್.ರಾವ್ ಆಯ್ಕೆ
ಮುಂಬಯಿ, ಫೆÀ.11: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ ಸಭೆಯನ್ನು ತನ್ನ ಕಛೇರಿಯಲ್ಲಿ ಜರುಗಿಸಿದ್ದು ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ 2020-2022ರ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಂದ್ರ ಆರ್.ರಾವ್ ಆಯ್ಕೆ ಗೊಂಡರು.

ಸಂಘದ ಉಪಾಧ್ಯಕ್ಷರಾಗಿ ಎನ್.ರವೀಂದ್ರನಾಥ್ ರಾವ್ ವಾಶಿ, ಗೌ| ಪ್ರ| ಕಾರ್ಯದರ್ಶಿ ಕೇದರ್‍ನಾಥ ಆರ್.ಬೋಳಾರ್, ಕೋಶಾಧಿಕಾರಿ ಆಗಿ ರೂಪೇಶ್ ಆರ್.ರಾವ್, ಜೊತೆ ಕಾರ್ಯದರ್ಶಿಗಳಾಗಿ ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್ ಹಾಗೂ ಜೊತೆ ಕೋಶಾಧಿಕಾರಿ ಆಗಿ ದಿವೀತ್ ಡಿ.ರಾವ್, ಕಾರ್ಯಕಾರು ಸಮಿತಿ ಸದಸ್ಯರಾಗಿ ರಾಜ್‍ಕುಮಾರ್ ಕಾರ್ನಾಡ್ (ಸಲಹೆಗಾರರು), ಸಂತೋಷ್ ಕುಮಾರ್ ಆರ್.ರಾವ್, ಮನೋಜ್ ಸಿ.ರಾವ್, ಹರಿಶ್ಚಂದ್ರ ಆರ್.ರಾವ್, ಸುಹಾಸ್ ಎಸ್.ರಾವ್, ಕೆ.ಎಂ ಆಶಿತ್ ರಾವ್, ಆಶ್ವಿನಿ ಕೆ.ರಾವ್, ನಾರಯಣ್ ರಾವ್, ಧನಂಜಯ ಶೇರು ವೆಗಾರ್, ನವೀನ್ ಎಸ್.ರಾವ್, ಜಯಕರ ಎಸ್.ರಾವ್ ಆಯ್ಕೆ ಗೊಂಡರು.


 


 

ಮಲಾಡ್-ಕುರಾರ್‍ನ ಶ್ರೀ ದುರ್ಗಾಪರಮೇಶ್ವರೀ ಮಂದಿರದ ಪುನಃರ್ ನಿರ್ಮಾಣ
ಬ್ರಹ್ಮಕಲಶೋತ್ಸವದ ಪೂರ್ವಸಿದ್ಧತೆ-ಸಂಕೋಚ ಪೂಜಾಧಿಗಳ ಸಂಪನ್ನ
ಮುಂಬಯಿ, ಫೆ.08: ಮಲಾಡ್ ಪೂರ್ವದ ಕುರಾರ್ ವಿಲೇಜ್‍ನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಪುನಃರ್‍ನಿರ್ಮಾಣ ನಿಮಿತ್ತ ಪೂರ್ವಸಿದ್ಧತೆಯಾಗಿಸಿ ಸಂಕೋಚ ನಡೆಸಿ ಪೂಜಾಧಿಗಳನ್ನು ನೆರವೇರಿಸಲಾಯಿತು.

ಕಳೆದ ಮಂಗಳವಾರ ವೇ| ಮೂ| ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಅವರು ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಸೂಡ ಪ್ರಾರ್ಥನೆಗೈದು ತೀರ್ಥ ಪ್ರಸಾದ ವಿತರಿಸಿ ಹರಸಿದರು. ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ ಮತ್ತು ಆಶಾ ಆರ್.ಕೊಟ್ಟಾರಿ ದಂಪತಿ ಪೂಜಾಧಿಗಳ ಜಯಮಾನತ್ವವಹಿಸಿದ್ದರು.

ದೇವಸ್ಥಾನದ ಜಿರ್ಣೋದ್ಧಾರ, ಮುಖ್ಯದ್ವಾರಕ್ಕೆ ರಜಕ ಕವಚ, ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಬ್ರಹ್ಮಕಲಶೋತ್ಸವವನ್ನುಇದೇ ಫೆ.23 ರಿಂದ 28ರ ಸಪ್ತದಿನಗಳಲ್ಲಿ ಮಂದಿರದ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಎಲ್ಲವೂ ನಿರ್ವಿಘ್ನವಾಗಿ ನೆರವೇರಿಸುವಂತೆ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಬಿ ಕೋಟ್ಯಾನ್ ಪ್ರಾಥಿರ್üಸಿದರು.

ಈ ಸಂದರ್ಭದಲ್ಲಿ ಮಂದಿರ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಟಿ.ಶೆಟ್ಟಿ, ಗೌರವ ಕೋಶಾಧಿಕಾರಿ ಬಾಬು ಎಂ.ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು, ಸದಸ್ಯರು ಹಾಗೂ ಭಕ್ತರನೇಕರು ಉಪಸ್ಥಿತರಿದ್ದರು.

ಕುವೈಟ್ ಕನ್ನಡ ಕೂಟ 2020ರಕಾರ್ಯಕಾರಿಸಮಿತಿಗೆ ಪದಾಧಿಕಾರಿಗಳ ಆಯ್ಕೆ - ರಾಜೇಶ ವಿಠ್ಠಲ್ (ಅಧ್ಯಕ್ಷ)-ಪ್ರವೀಣ್‍ಕುಮಾರ್ ಶೆಟ್ಟಿ (ಕಾರ್ಯದರ್ಶಿ)
ಮುಂಬಯಿ (ಕುವೈಟ್), ಫೆ.13: ಕಳೆದ 35 ವರ್ಷಗಳಿಂದ ಕುವೈಟ್‍ನಲ್ಲಿ ಸೇವಾ ನಿರತ ಭಾರತ ರಾಷ್ಟ್ರದ, ಕರ್ನಾಟಕ ರಾಜ್ಯ ಮೂಲದ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯಾದ ಕುವೈಟ್ ಕನ್ನಡ ಕೂಟದ (ಕು.ಕ.ಕೂ.) ತನ್ನ ವಾರ್ಷಿಕ ಮಹಾಸಭೆಯನ್ನು ಇತ್ತೀಚೆಗೆ ಇಲ್ಲಿನ ಖೈತಾನ್ನ ಭಾರತೀಯ ಸಮುದಾಯ ಶಾಲೆಯಲ್ಲಿ ನಡೆಸಿತು.
ಮಹಾಸಭೆಯ ಜೊತೆಜೊತೆಗೆ ವಿವಿಧ ವಿನೋದಾವಳಿಯನ್ನೊಳಗೊಂಡ ಕಾರ್ಯಕ್ರಮದಲ್ಲಿ, 2020ರ ಕೂಟದ ನಿರ್ವಹಣೆಯ ಮೇಲ್ವಿಚಾರಣೆ ನಡೆಸಲು ಹೊಸ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಯಿತು. ಸಿಎ| ಗುರುರಾಜ್ ರಾವ್ ಚುನಾವಣಾಧಿಕಾರಿ ಆಗಿದ್ದು ಚುನಾವಣಾ ಪ್ರಕ್ರಿಯೆ ನಿರ್ವಹಿಸಿ ಸರ್ವಾನುಮತದಿಂದ ಚುನಾಯಿತರಾದ ಸದಸ್ಯರನ್ನು ಘೋಷಿಸಿದರು.

ರಾಜೇಶ ವಿಟ್ಟಲ್ (ಅಧ್ಯಕ್ಷ), ಸಂದೀಪ್ ಚಬ್ಬಾ (ಉಪಾಧ್ಯಕ್ಷ), ಪ್ರವೀಣ್‍ಕುಮಾರ್ ಶೆಟ್ಟಿ (ಕಾರ್ಯದರ್ಶಿ),
ಪ್ರದೀಪ್ ರಾವ್ ಆಳುಗ್ಗೇಲು (ಖಜಾಂಚಿ) ಚುನಾಯಿತರಾದ ಸದಸ್ಯರು 2020 ರ ವರ್ಷಕ್ಕೆ ಕುವೈತ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಭೆಯಲ್ಲಿ ಅಧಿಕಾರ ಪದಗ್ರಹಣದ ಬಳಿಕ ನೂತನÀ ಕಾರ್ಯಕಾರಿ ಸಮಿತಿಗೆ ನೆರೆದ ಸದಸ್ಯರು ಶುಭ ಹಾರೈಸಿದರು.

ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ಖಾರ್ ಪೂರ್ವ) ಸಂಪನ್ನ ಗೊಳಿಸಿದ - 53ನೇ ವಾರ್ಷಿಕ ಶನೀಶ್ವರ ಮಹಾಪೂಜೆ-ಶನೀಶ್ವರ ಗ್ರಂಥ ಪಾರಾಯಣ 
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.08: ಮುಂಬಯಿ ಉಪನಗರದ ಖಾರ್ ಪೂರ್ವದಲ್ಲಿ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಸಮಿತಿಯು ಇಂದಿಲ್ಲಿ ಶನಿವಾರ 53ನೇ ವಾರ್ಷಿಕ ಶನೀಶ್ವರ ಮಹಾಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿತು. ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ಪ್ರತಿಷ್ಠಾಪಿತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಮುಂಜಾನೆ ಗಣಹೋಮ, ಬೆಳಿಗ್ಗೆ ಶ್ರೀಸತ್ಯನಾರಾಯಣ ಮಹಾಪೂಜೆ ನಡೆಸಲಾಗಿದ್ದು ವೈಧಿಕ ತಂತ್ರಿಗಳಾದ ಸಂತೋಷ್ ಭಟ್ ಹಾಗೂ ರಮೇಶ್ ಭಟ್ ಚಾರ್ಕೋಪ್ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಮಧ್ಯಾಹ್ನ  ಕಲಶ ಪ್ರತಿಷ್ಠಾ, ಭಜನೆ, ಅಪರಾಹ್ನ ಶನೀಶ್ವರ ಗ್ರಂಥ ಪಾರಾಯಣ, ಸಂಜೆ ಮಂಗಳಾರತಿ, ರಾತ್ರಿ ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಲಾಗಿದ್ದು ಮಂದಿರದ ಯೊಗೇಶ್ ಕೆ.ಹೆಜ್ಮಾಡಿ ಕಲಶ ಮಹೂರ್ತ ನೆರವೇರಿಸಿ ಮಂಗಳಾರತಿಯೊಂದಿಗೆ ಭಕ್ತರಿಗೆ ಪ್ರಸಾದ ನೀಡಿ ಅನುಗ್ರಹಿಸಿದರು. ನಿಖಿತಾ ಭಾವಿತ್ ಆರ್.ಪೂಜಾರಿ ಮತ್ತು ವಿಮಲಾ ಜಯರಾಮ ಶೆಟ್ಟಿ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಈ ಶುಭಾವಸರದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಜೆ.ಪೂಜಾರಿ, ಸಮಿತಿ ಗೌರವಾಧ್ಯಕ್ಷ ಶ್ರೀಧರ್ ಜೆ.ಪೂಜಾರಿ, ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಉಪ ಕಾರ್ಯಧ್ಯಕ್ಷ ಜಯರಾಮ ಶೆಟ್ಟಿ, ಅಧ್ಯಕ್ಷ ಶಂಕರ್ ಕೆ.ಸುವರ್ಣ,  ಉಪಾಧ್ಯಕ್ಷರುಗಳಾದ ದೇವೆಂದ್ರ ವಿ.ಬಂಗೇರ ಮತ್ತು ಭೋಜ ಸಿ.ಪೂಜಾರಿ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ, ಜತೆ ಕಾರ್ಯದರ್ಶಿ ರಮೇಶ್ ಎನ್.ಪೂಜಾರಿ, ಜತೆ ಸಹಾಯಕ ಕಾರ್ಯದರ್ಶಿಗಳಾದ ಹರೀಶ್ ಕೋಟ್ಯಾನ್ ಕಾಪು, ಜನಾರ್ದನ ಎನ್.ಸಾಲ್ಯಾನ್, ಜತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಮಹಿಳಾ ಸಮಿತಿ ಮುಖ್ಯಸ್ಥೆ ಕಾರ್ಯಾಧಕ್ಷೆ ಕೇಸರಿ ಬಿ.ಅಮೀನ್, ಜೊತೆ  ಕಾರ್ಯಾಧಕ್ಷೆಯರಾದ ಶೋಭ ವಿ.ಕೋಟ್ಯಾನ್ ಮತ್ತು ಸರಸ್ವತಿ ಬಿ.ಪೂಜಾರಿ, ಕಾರ್ಯದರ್ಶಿ ರೇವತಿ ಕೆ.ಶೆಟ್ಟಿ, ಯುವ ವಿಭಾಗÀಧ್ಯಕ್ಷ ವಿಜಯ್ ಎನ್.ಸಾಲ್ಯಾನ್, ಸಾಂಸ್ಕೃತಿಕ-ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಹರೀಶ್ಚಂದ್ರ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಮೂಡಬಿದ್ರಿ, ವೈದ್ಯಕೀಯ ಮತ್ತು ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ್ ಕರ್ನಿರೆ, ಆರ್ಚಕರಾದ ಗಿರೀಶ್ ಪೂಜಾರಿ, ರವೀಂದ್ರ ಕೋಟ್ಯಾನ್, ಸಲಹಾದಾರರಾದ ನ್ಯಾ| ಸೋಮನಾಥ್ ಬಿ.ಅವೀನ್, ಸಿಎ| ಪ್ರಕಾಶ್ ಶೆಟ್ಟಿ, ಕಮಲಾಕ್ಷ ಬಿ.ಸುವರ್ಣ, ವಾಸು ಎಸ್.ಕೋಟ್ಯಾನ್, ವಾಸ್ತವ್ಯ ವ್ಯವಸ್ಥಾಪಕರಾದ ಅಶೋಕ್ ಶೆಟ್ಟಿ, ನಾರಾಯಣ ಜಿ.ಕೋಟ್ಯಾನ್, ರವಿ ನಾೈಕ್, ನರಸಿಂಹ ಸಾಲ್ಯಾನ್, ವಿಶ್ವಸ್ಥ ಸದಸ್ಯರು, ಸದಸ್ಯರನೇಕರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡÀು ಶ್ರೀ ಶನಿದೇವರ ಕೃಪೆಗೆ ಪಾತ್ರರಾದರು. 

ಇದೇ ಫೆ.16ನೇ ಭಾನುವಾರ ಸಂಜೆ 4.30 ಗಂಟೆಗೆ  ಜವಹಾರ್‍ನಗರ್‍ನ ಸಾಯಿಧಾಮ್ ಬಿಲ್ಡಿಂಗ್‍ನ ಆವರಣ ದಲ್ಲಿ ಶ್ರೀ ಧನಂಜಯ ಶಾಂತಿ ಅವರು `ಸತ್ಯ ಹರಿಶ್ಚಂದ್ರ’ ಹರಿಕಥೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲೂ ಭಕ್ತರು, ಸಮಿತಿಯ ಸರ್ವ ಸದಸ್ಯರು ಆಗಮಿಸುವಂತೆ ಸಮಿತಿ ಪರವಾಗಿ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಈ ಮೂಲಕ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




THEELN POLETHANA | A Konkani Short Film | ICYM Udu
View More

Happy Birthday Dear Rev. Fr. Pradeep Cardoza.Happy Birthday Dear Rev. Fr. Pradeep Cardoza.
ಅನ್-ಡು (UNDO) | A Konkani Short Film | ICYM Kallianpur Deaneryಅನ್-ಡು (UNDO) | A Konkani Short Film | ICYM Kallianpur Deanery
THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi DeaneryTHEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery
World Alzheimer’s Day at Mount Rosary, Santhekatte on Sep 21World Alzheimer’s Day at Mount Rosary, Santhekatte on Sep 21
Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Feast of Assumption & Independence Day Celebration | St. Theresa Church, KemmannuFeast of Assumption & Independence Day Celebration | St. Theresa Church, Kemmannu
Moiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis CornelioMoiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis Cornelio
Final Journey of Golbert Suares (65 years) | LIVE from Barkur | UdupiFinal Journey of Golbert Suares (65 years) | LIVE from Barkur | Udupi
Final Journey of Gretta Suares (69 years) | LIVE from BarkurFinal Journey of Gretta Suares (69 years) | LIVE from Barkur
Final Journey of Asha Fernandes (43 years) | LIVE from Thottam | UdupiFinal Journey of Asha Fernandes (43 years) | LIVE from Thottam | Udupi
Yuva Samagam 2025 | ICYM | LIVE from Sastan, UdupiYuva Samagam 2025 | ICYM | LIVE from Sastan, Udupi
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi