Brief Mumbai Managalore news with pictures.


Rons Bantwal
Kemmannu News Newtwork, 16-02-2020 15:40:03


Write Comment     |     E-Mail To a Friend     |     Facebook     |     Twitter     |     Print


ದಶಮಾನೋತ್ಸವ ಸಂಭ್ರಮದಲ್ಲಿ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ - ಪ್ರತಿಷ್ಠಾನ ದಶ ಸಂವತ್ಸರಗಳ `ದಶಧಾರೆ (ನನ್ನೂರು-ನನ್ನ ಶಹರ)’ ಕೃತಿ ಲೋಕಾರ್ಪಣೆ
ಮುಂಬಯಿ, ಫೆ.13: ವೈಚಾರಿಕತೆ, ಜಾನಪದ, ಐತಿಹಾಸಿಕ, ಸಾಮಾಜಿಕ ಬದ್ಧತೆಯೊಂದಿಗೆ ಈ ಹತ್ತು ವರ್ಷದಲ್ಲಿ ತನ್ನದೇ ಆದ ಕಾರ್ಯ ಚಟುವಟಿಕೆಗಳಿಂದ ಗುರುತಿಸಿ ಕೊಂಡಿರುವ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಇದೇ ಫೆ.19ರ ಬುಧವಾರ ಗೀತಾಂಬಿಕಾ ಸಭಾಗೃಹ, ಶ್ರೀ ಗೀತಾಂಬಿಕಾ ಮಂದಿರ, ಅಸಲ್ಪ, ಘಾಟ್ಕೋಪರ್ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಂಸ್ಕೃತ ಕಾವ್ಯಗೋಷ್ಠಿ ಇತ್ಯಾದಿಗಳೊಂದಿಗೆ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮಿಸಲಿದೆ.

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಲಾಜಗತ್ತು ಮುಂಬಯಿ ಅಧ್ಯಕ್ಷ ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಅಧ್ಯಕ್ಷ ಕನ್ನಡ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಡಾ| ರಜನಿ ವಿ.ಪೈ, ನವೀನ್ ಶೆಟ್ಟಿ ಇನ್ನಬಾಳಿಕೆ, ಶ್ರೀ ಪಲಿಮಾರು ಮಠ, ವಿೂರಾರೋಡ್-ಮುಂಬಯಿ ಇದರ ಪ್ರಧಾನ ಆರ್ಚಕ ವಿದ್ವಾನ್ ರಾಧಾಕೃಷ್ಣ ಶ್ರೀಪತಿ ಭಟ್ ಕಲ್ಲಂಜೆ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ (2019) ವಾರ್ಷಿಕ `ಚಕ್ರಧಾರಿ ಪ್ರಶಸ್ತಿ’ಯನ್ನು ನಾಡಿನ ಹಿರಿಯ ಲೇಖಕಿ, ಕವಯತ್ರಿ, ಸಂಘಟಕಿ, ನಿವೃತ್ತ ಪ್ರಾಧ್ಯಾಪಕಿ, ಡಾ| ಸುನೀತಾ ಎಂ.ಶೆಟ್ಟಿ ಮತ್ತು `ಕೃಷಿಬಂಧು’ ಪುರಸ್ಕಾರವನ್ನು ಶಾರದಾ ಚಂದ್ರಶೇಖರ್ ಮೂಲೆಮನೆ ಅವರಿಗೆ ವಾರ್ಷಿಕ ಕೊಡಮಾಡುವ ಪ್ರದಾನಿಸಲಾಗುವುದು. ಪ್ರತಿಷ್ಠಾನ ಹತ್ತು ವರ್ಷಗಳ ಸವಿನೆನಪಿನ `ದಶಧಾರೆ (ನನ್ನೂರು-ನನ್ನ ಶಹರ)’ ಕೃತಿ ಲೋಕಾರ್ಪಣೆ ಮಾಡಲಾಗುವುದು. ಪ್ರದ್ಯುಮ್ನ ಮೂರ್ತಿ ಕಡಂದಲೆ ಅಧ್ಯಕ್ಷತೆಯಲ್ಲಿ ಸಂಸ್ಕೃತ ಕಾವ್ಯ ಸೌರಭ (ಕಾವ್ಯಗೋಷ್ಠಿ) ನಡೆಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟಕ ಪ್ರದರ್ಶಗೊಳ್ಳಲಿದೆÉ ಎಂದು ಮಯೂರವರ್ಮದ ಉಪಾಧ್ಯಕ್ಷ ರಾಜೇಶ್ ಗೌಡ ತಿಳಿಸಿದ್ದಾರೆ.

ಮುಂಬಯಿನ ಸಮಸ್ತ ಕನ್ನಡ ಜನತೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರತಿಷ್ಠಾನದ ದಶಮಾನೋತ್ಸವ ಯಶಸ್ವಿ ಗೊಳಿಸುವಂತೆ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ, ಖಜಾಂಜಿ ಪದ್ಮನಾಭ ಸಫಲಿಗ,  ಜತೆ ಕಾರ್ಯದರ್ಶಿ ಗೋಪಾಲ ಉಳ್ಳೂರ ಈ ಮೂಲಕ ತಿಳಿಸಿದ್ದಾರೆ.

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ:
2009-10ರಲ್ಲಿ ಹಲವು ವಿಚಾರಗಳೊಂದಿಗೆ ಪ್ರಾರಂಭವಾದ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಈ ಹತ್ತು ವರ್ಷಗಳಲ್ಲಿ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಜಾನಪದ, ಸಾಮಾಜಿಕ ಬದ್ಧತೆಯೊಂದಿಗೆ ತನ್ನ ಆಯವ್ಯಯದ ಇತಿಮಿತಿಯೊಳಗೆ ಸಾಕಾರಗೊಳ್ಳುವತ್ತ ಹಲವು ಹೆಜ್ಜೆಗಳನ್ನು ಇರಿಸಿದೆ. ಕೆಲ ಐತಿಹಾಸಿಕ ಕೃತಿಗಳು, ಆಧ್ಯಾತ್ಮ ಕೃತಿ, ನಾಟಕ ಕೃತಿ, ಅಭಿನಂದನಗ್ರಂಥಗಳನ್ನು ಪ್ರಕಟಿಸಿದ್ದಲ್ಲದೆ ಹತ್ತರ ಸವಿನೆನಪಿಗೆ `ದಶಧಾರೆ’ (ನನ್ನೂರು - ನನ್ನ ಶಹರ) ಕೃತಿಯನ್ನು ಲೋಕಾರ್ಪಣೆಗೊಳಿಸುತ್ತಿದೆ. ಮುಂಬಯಿಯ ನಲ್ವತ್ತಕ್ಕೂ ಅಧಿಕ ಉಪನಗರಗಳ ಮಾಹಿತಿಗಳನ್ನೊಳಗೊಂಡ ಕೃತಿಯಲ್ಲಿ ಮುಂಬಯಿಯ ಹಿರಿ-ಕಿರಿಯ ಬರಹಗಾರರು ತಮ್ಮ ಅನುಭವವನ್ನು ಹಂಚಿಕೊಂಡಿರುವರು.

ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಸಂಘ ಯಾ ವ್ಯಕ್ತಿಗೆ ಪ್ರತಿವರ್ಷ ನಗದುವಿನೊಂದಿಗೆ `ಚಕ್ರಧಾರಿ’ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ವಿವೇಕಾನಂದ ಶಿಕ್ಷಣ  ಸಂಸ್ಥೆ ಬನ್ನೂರ ಶಂಕರ ನಾರಾಯಣ ಹೆಗಡೆ, ಶ್ರೀಮದ್ಭಾರತ ಮಂಡಳಿ ಅಂಧೇರಿ, ಆನಂದ ವಿದ್ಯಾಲಯ ವಿರಾರ್, ಸಂಕಲ್ಪ ಸೇವಾ ಸಂಸ್ಥೆ, ಗಿರಿಜಾ ಬಾಲಗೃಹ ಖಾರ್‍ಘರ್, ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ಡೊಂಬಿವಲಿ, ಗೋರೆಗಾಂವ್ ಕರ್ನಾಟಕ ಸಂಘಗಳಿಗೆ ಈ ಹಿಂದೆ `ಚಕ್ರಧಾರಿ’ ಪ್ರಶಸ್ತಿ ನೀಡಲಾಗಿದೆ. ಅದೇ ರೀತಿ ಸಾಮಾನ್ಯ ಕೃಷಿಕರೊಬ್ಬರನ್ನು ಗುರುತಿಸಿ ಕೃಷಿಬಂಧು ಪುರಸ್ಕಾರವನ್ನು ನಗದುವಿನೊಂದಿಗೆ ನೀಡಲಾಗುತ್ತಿದೆ.
ಅವೈಜ್ಞಾನಿಕವಾಗಿ ವಿದ್ಯುತ್ ತಂತಿ ಎಳೆಯುವ ಇಲಾಖೆಯ ಕ್ರಮದಿಂದ ಮಳೆಗಾಲದಲ್ಲಿ ಗ್ರಾಮೀಣ ಭಾಗದ ಜನರಲ್ಲದೆ ಅಪಾರ ಸಂಖ್ಯೆಯ ವನ್ಯ ಜೀವಿಗಳು ಅಸುನೀಗುತ್ತವೆ. ಈ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾವಿರ ಜನರ ಸಹಿ ಸಂಗ್ರಹ ಅಭಿಯಾನ, ಪತ್ರಿಕಾಗೋಷ್ಠಿ ಮುಖಾಂತರ ಸಂಬಂಧಿಸಿದ ಇಲಾಖೆಯ ಗಮನಸೆಳೆಯುವ ಕಾರ್ಯವನ್ನು ಮುತುವರ್ಜಿಯಿಂದ ನಡೆಸಿದೆ. ಅಡುಗೂಲಜ್ಜಿಯ ಕಥಾ ಕಮ್ಮಟ, ಗಾದೆಗಳ ವೈಭವ ವಿಚಾರಸಂಕಿರಣಗಳಂತಹ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ ಸಂಸ್ಕೃತಿಯ ನೆನಪನ್ನು ಮೆಲುಕು ಹಾಕಿದೆ. ತೆನಾಲಿ ರಾಮಕೃಷ್ಣನ ಆದರ್ಶಗಳು, ವಿಚಾರ ಸಂಕಿರಣ, ಚತುರ್ವೇದ ಪಾರಾಯಣದಂತಹ ಧಾರ್ಮಿಕ, ವೈಚಾರಿಕ ಕಾರ್ಯಕ್ರಮ ಹಮ್ಮಿಕೊಂಡು ತನ್ನ ಅಳಿಲು ಸೇವೆ ಸಲ್ಲಿಸಿದೆ.

ಒಂದು ಕಾಲದಲ್ಲಿ ಸರಕಾರಿ ಶಾಲೆಗಳೆಂದರೆ ಮುಗಿಯಿತು ಅಲ್ಲಿ ಬಡವ, ಶ್ರೀಮಂತರೆಲ್ಲರ ಮಕ್ಕಳು ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ವಿಶಾಲವಾದ ಶಾಲೆ, ಬೃಹತ್ ಆಟದ ಮೈದಾನ, ಕೈತೋಟ ಜೊತೆಗೆಒತ್ತಡ ರಹಿತ ಶಿಕ್ಷಣದ ಸವಿ ನೆನಪನ್ನು ತೊಂಬತ್ತಕ್ಕೂ ಅಧಿಕ ಹಿರಿಯ ಹಾಗೂ ಹಳೆ ವಿದ್ಯಾರ್ಥಿಗಳು ಅಂದಿನ ಆನಂದವನ್ನು ಹಂಚಿಕೊಂಡಿರುವ ಕೃತಿಯೇ `ಕನ್ನಡ ಶಾಲೆಯ ಸವಿ ನೆನಪುಗಳು’.

ಮಕ್ಕಳ ಲಾಲನೆ-ಪಾಲನೆಯಲ್ಲಿ ತಾಯಿಯಂದಿರ ಪಾತ್ರದ ಕುರಿತು ಹಿರಿ-ಕಿರಿಯ ತಾಯಂದಿರ ವಿಚಾರಗೋಷ್ಠಿ, ಒಂದು ಕಾಲದ ಮಕ್ಕಳ  ಜ್ಞಾನದ ಆಗರವಾಗಿದ್ದ `ಅಡುಗೂಲಜ್ಜಿಯ ಕಥಾ ಕಮ್ಮಟ’ ದಂತಹ ಜಾನಪದ ಕಾರ್ಯಕ್ರಮಗಳಲ್ಲದೆ ದೊಡ್ಡ ವಿಷಯವನ್ನು ಚಿಕ್ಕದಾಗಿ (ಸೂಕ್ಷ್ಮವಾಗಿ) ಹೇಳುವ ಪರಿಯೇ ಗಾದೆಗಳು. ನಮ್ಮ ಪೂರ್ವಜರಿಗೆ ಅಕ್ಷರ ಜ್ಞಾನ ಕಡಿಮೆ ಇದ್ದರೂ ಅನುಭವದ ಜ್ಞಾನ ಹೇರಳವಾಗಿತ್ತು. ಅದರ ಫಲವೇ ಗಾದೆಗಳು ಜನ್ಮತಳೆದವು. `ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ’ ಎನ್ನುವ ಗಾದೆಯೇ ಇದೆ. ಇಷ್ಟೇ ಅಲ್ಲ ಗಾದೆಗಳು ಜಾನಪದ ವೇದಕ್ಕೆ ಸಮಾನ ಎನ್ನುವ ಮಾತೂ ಇದೆ. ಅಂತಹ ಗಾದೆಗಳ ವಿಚಾರ ಸಂಕಿರಣ ಕಾರ್ಯಕ್ರಮವಲ್ಲದೆ ತೆನಾಲಿ ರಾಮಕೃಷ್ಣನ ಜಾಣ್ಮೆ ವಿಚಾರ ಮಂಡನೆ, ಸಂಗೀತ, ಯಕ್ಷಗಾನವಲ್ಲದೆ ಪೌರಾಣಿಕ ನಾಟಕಗಳನ್ನು ರಂಗದ ಮೇಲೆ ಪ್ರಸ್ತುತಪಡಿಸಿರುವರು.

2009-10ರಿಂದ 2020ರ ಈ ಹತ್ತು ವರ್ಷದಲ್ಲಿ ಮೂಲ ಉದ್ದೇಶದೊಂದಿಗೆ  ಕರ್ನಾಟಕದ ಪ್ರಥಮ ರಾಜರೆಂಬ ಹೆಗ್ಗಳಿಕೆಗೆ ಪಾತ್ರರಾದ ಬನವಾಸಿ ಕದಂಬರ ಮೂಲ ಪುರುಷ ಮಯೂರ ವರ್ಮನ ಹೆಸರಿನಲ್ಲಿ ಜನ್ಮತಳೆದ ಪ್ರತಿಷ್ಠಾನದ ಹತ್ತನೇ ವಾರ್ಷಿಕೋತ್ಸವದ ಸಡಗರದಲ್ಲಿದೆ.

ಬಿಲ್ಲವರ ಭವನದಲ್ಲಿ ನೆರವೇರಿದ ವಾರ್ಷಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ 
(ಚಿತ್ರ /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ವಾರ್ಷಿಕವಾಗಿ ನೆರವೇರಿಸುತ್ತಿರುವಂತೆ ಈ ಬಾರಿ ಮಂಡಳಿಯ ಅಮೃತ ಮಹೋತ್ಸವದ ಶುಭಾವಸರದಲ್ಲಿ ಸಾರ್ವಜನಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಧಾರ್ಮಿಕ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದÀಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಿತು. ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ದೀಪ ಬೆಳಗಿಸಿ ವಾರ್ಷಿಕ ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.

ಶ್ರೀ ಚಂದ್ರಶೇಖರ್ ಎಸ್.ಶಾಂತಿ (ಅಧ್ಯಕ್ಷರು) ಇವರ ಪೌರೋಹಿತ್ಯದಲ್ಲಿ ನಡೆಸಲ್ಪಟ್ಟ ಪಾರಾಯಣ ಕಾರ್ಯಕ್ರಮದಲ್ಲಿ ಶ್ರೀ ಉಳ್ಳ್ಳೂರು ಶೇಖರ ಶಾಂತಿ  ಮತ್ತು  ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ಶ್ರೀ ರವೀಂದ್ರ ಎ.ಶಾಂತಿ ಪುಜಾಧಿಗಳನ್ನು ನೇರವೇರಿಸಿ, ಶ್ರೀ ಶನೀಶ್ವರ ಮಹಾಪೂಜೆ ನೆರವೇರಿಸಿ ಹರಸಿದರು. ಅಸೋಸಿಯೇಶನ್‍ನ ಉಪಾಧ್ಯಕ್ಷ ದಯಾನಂದ್ ಆರ್.ಪೂಜಾರಿ (ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ),  ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಮತ್ತು ವನಿತಾ ಅಶೋಕ್ ದಂಪತಿ ಪೂಜೆಯ ಯಜಮಾನಿಕೆ ವಹಿಸಿದ್ದರು.

ಬಿ.ಎಂ ಸುವರ್ಣ ಮೂಲ್ಕಿ, ಯಶೋಧರ ಡಿ.ಪೂಜಾರಿ, ವಾಸು ಸಾಲ್ಯಾನ್, ಬಾಲಕೃಷ್ಣ ಪೂಜಾರಿ, ನಾರಾಯಣ ಬಂಗೇರ ಮತ್ತು ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಇತರ ಕಲಾವಿದರು ತಾಳಮದ್ದಲೆ ರೂಪದಲ್ಲಿ ಶ್ರೀ ಶನೀಶ್ವರ ಗ್ರಂಥ ಪಾರಾಯಣ ನಡೆಸಿದರು.

ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಶ್ರೀ ಧನಂಜಯ ಶಾಂತಿ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಸೇವಾದಳದ ದಳಪತಿ (ಜಿಒಸಿ) ಗಣೇಶ್ ಕೆ.ಪೂಜಾರಿ, ಬಿಲ್ಲವರ ಭವನದÀ ವ್ಯವಸ್ಥಾಪಕರುಗಳಾದ ಬಿ.ಚಂದ್ರಶೇಖರ್ ಸಾಲ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ಇನ್ನಿತರ ಪದಾಧಿಕಾರಿಗಳು, ಅಸೋಸಿಯೇಶನ್‍ನ ಎಲ್ಲಾ ಸ್ಥಳೀಯ ಸಮಿತಿಗಳ ಪ್ರಮುಖರು, ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡÀರು. ಗಂಗಾಧರ್ ಕಲ್ಲಡಿ ಪ್ರಸಾದ ವಿತರಿಸಿದರು.

 

ಕನ್ನಡ ವೆಲ್ಫೇರ್ ಸೊಸೈಟಿ (ರಿ.) ಘಾಟ್ಕೋಪರ್ ಸಂಭ್ರಮಿಸಿದ 52ನೇ ವಾರ್ಷಿಕೋತ್ಸವ -ಪ್ರಭಾ ಕೋಡು ಭೋಜ ಶೆಟ್ಟಿ ಸಾಹಿತ್ಯ ಪ್ರಶಸ್ತಿ-ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

ಮುಂಬಯಿ, ಫೆ.15: ಭಾವೀ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ರೂಪಿಸುವ ಉದ್ದೇಶವೇ ಸಂಘ ಸಂಸ್ಥೆಗಳದ್ದಾಗಿದೆ. ಇದನ್ನು ಕಾರ್ಯಗತವಾಗಿಸುವಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ ಯಶ ಕಂಡಿದೆ. ಈ ಸಂಸ್ಥೆ ನನ್ನ ಪರಿವಾರ ಇದ್ದಂತೆ ಅನ್ನಲು ಅಭಿಮಾನವಾಗುತ್ತಿದೆ. ಕಳೆದ ಸುಮಾರು ಐದುವರೆ ದಶಕಗಳಿಂದ ಈ ಸಂಸ್ಥೆ ಸಮಾಜ ಮತ್ತು ಜನಪರ ಸೇವೆಗೈದು ಸಂಸ್ಕಾರ, ಸಂಸ್ಕೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದು ನಿಜವಾಗಿಯೂ ಅಭಿನಂದನೀಯ ಮತ್ತು ಸ್ವಾಗತಾರ್ಹ. ಓರ್ವ ನಗರ ಸೇವಕಿಯಾಗಿ ನನಗೆ ಬಹಳಷ್ಟು ಜವಾಬ್ದಾರಿ ಇದೆ. ಈ ಎಲ್ಲಾ ಜವಾಬ್ದಾರಿಯ ಜೊತೆಗೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಸಂಸ್ಥೆಯ ಬಗ್ಗೆಯೂ ಕಾಳಜಿ ವಹಿಸುವುದು ನನ್ನ ಕರ್ತವ್ಯವಾಗಿದೆ ಎಂದು ಬಿಎಂಸಿ ಪಂತ್‍ನಗರ ವಾರ್ಡ್‍ನ ನಗರ ಸೇವಕಿ ರಾಖಿ ಜಾಧವ್ ಸಾಲ್ಯಾನ್ ತಿಳಿಸಿದರು.

ಇಂದಿಲ್ಲಿ ಶನಿವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಿರ್ಮಿತ ಮಧ್ಯಗುತ್ತು ಲೀಲಾವತಿ ಶ್ಯಾಮ ಶೆಟ್ಟಿ ವೇದಿಕೆಯಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ (ರಿ.) ಘಾಟ್ಕೋಪರ್ ಸಂಸ್ಥೆ ತನ್ನ 52ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು ಸೊಸೈಟಿಯ್ ನಾಮಫಲಕ ಅನಾವರಣಗೈದು ಸಮಾರಂಭ ಉದ್ಘಾಟಿಸಿ ರಾಖಿ ಜಾಧವ್ ಮಾತನಾಡಿದರು.

ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ  ಮುಖ್ಯ ಅತಿಥಿüಯಾಗಿ ಬಂಟ್ಸ್ ಸಂಘ ಮುಂಬಯಿ ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಗೌರವ ಅತಿಥಿüಗಳಾಗಿ ಬಂಟ್ಸ್ ಸಂಘದ ಮಹಾವಿಷ್ಣು ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಬಂಟ್ಸ್ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಬಂಟ್ಸ್ ಸಂಘದ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಸಿಎ| ವಿಶ್ವನಾಥ್ ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ  ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ನಗರ ಸೇವಕಿ ಮನೀಷಾ ರಹಟೆ ಉಪಸ್ಥಿತರಿದ್ದು ಅತಿಥಿüವರ್ಯರು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಕನ್ನಡ ವೆಲ್ಫೇರ್‍ನ ಉಪಾಧ್ಯಕ್ಷ ಜಯರಾಜ್ ಜೈನ್, ಗೌ| ಪ್ರ| ಕಾರ್ಯದರ್ಶಿ ಸುಧಾಕರ್ ಎಲ್ಲೂರು, ಗೌ| ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ್ ಶೆಟ್ಟಿ, ಜತೆ ಕೋಶಾಧಿಕಾರಿ ತಿಮ್ಮ ಎಸ್. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎನ್.ಶೆಟ್ಟಿ ಉಪಸ್ಥಿತರಿದ್ದು ಪ್ರಭಾ ಕೋಡು ಭೋಜ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ರಾಮಮೋಹನ್ ಶೆಟ್ಟಿ ಬಳ್ಕುಜೆ ಇವರಿಗೆ ಪ್ರದಾನಿಸಿದರು ಹಾಗೂ ಶಾಂತ ನಾರಾಯಣ ಶೆಟ್ಟಿ ರಂಗ ಪ್ರಶಸ್ತಿಯನ್ನು ಶ್ರೀನಾಥ್ ಮೂಲ್ಕಿ ಇವರಿಗೆ ಪ್ರಕಟಿಸಿದರು. ಬಳಿಕ ಪ್ರತಿಷ್ಠಿತ ಉದ್ಯಮಿ ಕೆ.ಎಂ ಶೆಟ್ಟಿ (ಮೆಕಾೈ ಸಮೂಹ), ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ ಡಾ| ಆರ್.ಕೆ ಶೆಟ್ಟಿ, ಸಂಘದ ಹಿರಿಯ ಸದಸ್ಯ ಎಸ್.ಎ ಮೆಂಡನ್ ಇವರನ್ನು ಅತಿಥಿüಗಳು ಸನ್ಮಾನಿಸಿ ಶುಭಾರೈಸಿದರು. ಪದಾಧಿಕಾರಿಗಳು ಕಲಾವಿದರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿವಂದಿಸಿದರು.

ಸಂಘದ ಸದಸ್ಯೆಯರು, ಮಕ್ಕಳು ನೃತ್ಯಾವಳಿ, ಭಕ್ತಿಭಾವ ಲಹರಿ, ವಿವಿಧ ಮನೋರಂಜನಾ ಮತ್ತು ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾದರ ಪಡಿಸಿದ್ದು, ಕನ್ನಡ ವೆಲ್ಫೇರ್‍ನ ಕಲಾವಿದರು ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ `ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶಿಸಿದರು.

ವೀಣಾ ಶೆಟ್ಟಿ ಬಳಗವು ಪ್ರಾರ್ಥನೆಯನ್ನಾಡಿದರು. ಸುಧಾಕರ್ ಎಲ್ಲೂರು ಸ್ವಾಗತಿಸಿದರು. ನವೀನ್ ಶೆಟ್ಟಿ ಇನ್ನಾಬಾಳಿಕೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಜಯ ಎ.ಶೆಟ್ಟಿ ಅತಿಥಿü ಪರಿಚಯಗೈದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಅಶೋಕ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Monti Fest - 2025 | Nativity of Mother Mary | St.
View More

Final Journey of Dulcine Cecilia Mathias (89 years) | LIVE from Shirva | UdupiFinal Journey of Dulcine Cecilia Mathias (89 years) | LIVE from Shirva | Udupi
Titular Feast of St. Theresa Church, Kemmannu, UdupiTitular Feast of St. Theresa Church, Kemmannu, Udupi
Final Journey of Dolphy Louis Suares (61 years) | LIVE from Katapady | UdupiFinal Journey of Dolphy Louis Suares (61 years) | LIVE from Katapady | Udupi
Final Journey Of Mrs. Lenny Machado (74 Years) | LIVE From Kemmannu | UdupiFinal Journey Of Mrs. Lenny Machado (74 Years) | LIVE From Kemmannu | Udupi
Mount Rosary Church - Rozaricho Gaanch Sep, 2025 IssueMount Rosary Church - Rozaricho Gaanch Sep, 2025 Issue
Final Journey Of Mrs. Lilly D Souza (68Years) | LIVE From Mount Rosary, Santhekatte, UdupiFinal Journey Of Mrs. Lilly D Souza (68Years) | LIVE From Mount Rosary, Santhekatte, Udupi
ಅನ್-ಡು (UNDO) | A Konkani Short Film | ICYM Kallianpur Deaneryಅನ್-ಡು (UNDO) | A Konkani Short Film | ICYM Kallianpur Deanery
THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi DeaneryTHEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery
Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi