Brief University college news with pictures.


Guruprasad T N
Kemmannu News Newtwork, 21-02-2020 10:05:51


Write Comment     |     E-Mail To a Friend     |     Facebook     |     Twitter     |     Print


ಸಹಕಾರಿ ತತ್ವದಿಂದ ಉದ್ಯೋಗಸೃಷ್ಠಿ ಸಾಧ್ಯ: ಸತೀಶ್ ಮರಾಠೆ
ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ರಿಸರ್ವ್ ಬ್ಯಾಂಕ್ನ ನಿರ್ದೇಶಕ ಸತೀಶ್ ಮರಾಠೆ ಕಿವಿಮಾತು

ಮಂಗಳೂರು: ನಮ್ಮ ದೇಶದಲ್ಲಿ ಸುಮಾರು 65,000 ಕ್ಕೂ ಹೆಚ್ಚು ಸಹಕಾರಿ ಸೊಸೈಟಿಗಳು ಲಾಭದಾಯಕವಾಗಿ ನಡೆಯುತ್ತಿವೆ. ಸಹಕಾರಿ ರಂಗದಲ್ಲಿ ಲಾಭ ಸಾಧ್ಯ ಆದರೆ ಲಾಭಕ್ಕಾಗಿ ಸಹಕಾರಿ ಸಂಘ ನಡೆಸಬಾರದು, ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ನಿರ್ದೇಶಕ ಸತೀಶ್ ಮರಾಠೆ ಕಿವಿಮಾತು ಹೇಳಿದ್ದಾರೆ.

ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ “ಪರಿವರ್ತನೆಯ ಪಥದಲ್ಲಿ ಭಾರತದ ಅರ್ಥವ್ಯವಸ್ಥೆ: ಸಹಕಾರಿ ಸಂಘಗಳ ಮುಂದಿರುವ ಸವಾಲುಗಳು ಮತ್ತು ಅವಕಾಶಗಳು” ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಶಿಖರೋಪನ್ಯಾಸ ನೀಡಿದ ಅವರು ಗ್ರಾಮೀಣ ಭಾಗದ 65% ದಷ್ಟು ಆದಾಯ ಕೃಷಿಯೇತರ ಚಟುವಟಿಕೆಗಳಿಂದ ಬರುತ್ತಿದೆ. ಆಹಾರ ಸಂಸ್ಕರಣೆ ಅಭಿವೃದ್ಧಿ ಮತ್ತು ಇನ್ನಷ್ಟು ಕ್ಷೇತ್ರಗಳಲ್ಲಿ ಸಹಕಾರಿ ತತ್ವ ವಿಸ್ತರಿಸುವ  ಮೂಲಕ ಯುವಕರಿಗೆ ಅದ್ಭುತ ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯ, ಎಂದರು.

ಉದ್ಘಾಟನಾ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎ ಎಮ್ ಖಾನ್, ಸಹಕಾರಿ ರಂಗದ ಜೊತೆಗೆ ಸಾಗೋಣ, ಜೊತೆಗೆ ಬೆಳೆಯೋಣ ಎಂಬ ತತ್ವ, ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಸಂಜೀವಿನಿಯಾಗಬಹುದು, ಎಂದರು. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗಳನ್ನು ನೆನಪಿಸಿದ ಅವರು ಸಹಕಾರಿ ರಂಗದಲ್ಲಿ ಕಾರ್ಪೊರೇಟ್ ಶೈಲಿ ನೆಲೆಯೂರಬಾರದು, ಎಂದರು. ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಮಾತನಾಡಿ, ಸಹಕಾರಿ ತತ್ವ ಒಂದು ಜೀವನ ಪದ್ಧತಿ. ದೇಶದಲ್ಲೆಡೆ ಇರುವ ಪ್ರಾಥಮಿಕ ಸಹಕಾರಿ ವ್ಯವಸ್ಥೆ ಪ್ರಜಾಪ್ರಭುತ್ವದ ತೊಟ್ಟಿಲಿದ್ದಂತೆ. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮತ್ತು ಜ್ಞಾನದ ಕ್ರಾಂತಿಗಳು ಭಾರತವನ್ನು ಸೂಪರ್ ಪವರ್ ದೇಶವಾಗಿಸಿವೆ. ಇದರಲ್ಲಿ ಸಹಕಾರಿ ರಂಗದ ಪಾಲು ದೊಡ್ಡದು, ಎಂದರು.

ಸಹಕಾರ ಭಾರತಿಯ ರಾಷ್ಟೀಯ ಕಾರ್ಯದರ್ಶಿ ಉದಯ ವಾಸುದೇವ ಜೋಷಿ, ದೇಶದಲ್ಲಿ 25 ಕೋಟಿ, ಅಂದರೆ ಸುಮಾರು ಜನಸಂಖ್ಯೆಯ ಸುಮಾರು 20 ಶೇಕಡಾ ಸಹಕಾರಿಗಳಿದ್ದಾರೆ. ಸಹಕಾರ ಭಾರತಿಯು ಸಹಕಾರಿ ತತ್ವದ ಮೂಲಕ ದೀನರ ಸುಸ್ಥಿರ ಬೆಳವಣಿಗೆಯಲ್ಲಿ ನಂಬಿಕೆಯಿಟ್ಟಿದೆ. ಈ ತತ್ವ ರಾಜಕೀಯ ಹಸ್ತಕ್ಷೇಪವನ್ನು ಮೀರಿರಬೇಕು, ಎಂದರು. ನಗರದ ವಿಶ್ವಕರ್ಮ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಅಧ್ಯಕ್ಷ ಹರೀಶ್ ಆಚಾರ್, ಸಹಕಾರಿ ಬ್ಯಾಂಕ್ಗಳು ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಖಾಸಗೀ ಲೇವಾದೇವಿಗಾರರ ಕಾಟ, ಮೀಟರ್ ಬಡ್ಡಿ ದಂಧೆಗೆ ಸಹಕಾರಿ ತತ್ವ ಕಡಿವಾಣ ಹಾಕಿದೆ. ಈ ಯಶಸ್ಸಿನ ಕುರಿತಾಗಿ ಸಂಶೋಧನೆ ನಡೆಯಬೇಕಿದೆ, ಎಂದರು. ಇದಕ್ಕೆ ದನಿಗೂಡಿಸಿದ ಪ್ರಾಂಶುಪಾಲ ಡಾ. ಉದಯ್ ಕುಮಅರ್ ಎಂ.ಎ, ಸಹಕಾರಿ ರಂಗದ ಯಶಸ್ಸನ್ನು ಬೇರೆಗೆ ರೂಢಿಸಿಕೊಳ್ಳಬೇಕಿದೆ, ಎಂದರು.
ಎಸ್ಸಿಡಿಸಿಸಿ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ ಬಿ ಉಪಸ್ಥಿತರಿದ್ದರು. ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರೂಪಿಸಿದರು.

ಸಹಕಾರಿ ತತ್ವಗಳನ್ನು ನಂಬಿ ಕೆಲಸ ಮಾಡಿದರೆ 5 ಟ್ರಿಲಿಯನ್ ಆರ್ಥಿಕತೆ ಸಾಧ್ಯ: ಪ್ರೊ. ಶ್ರೀಪತಿ ಕಲ್ಲೂರಾಯ

ಮಂಗಳೂರು: ಭಾರತದ ಆರ್ಥಿಕತೆಯ ಬೆನ್ನೆಲುಬು ಸಹಕಾರಿ ತತ್ವಗಳನ್ನು ನಂಬಿ ಕೆಲಸ ಮಾಡಿದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಭಾರತದ ಕನಸು ನನಸಾಗುವುದು ಕಷ್ಟವಲ್ಲ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಮತ್ತು ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದ್ದಾರೆ.
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ “ಪರಿವರ್ತನೆಯ ಪಥದಲ್ಲಿ ಭಾರತದ ಅರ್ಥವ್ಯವಸ್ಥೆ: ಸಹಕಾರಿ ಸಂಘಗಳ ಮುಂದಿರುವ ಸವಾಲುಗಳು ಮತ್ತು ಅವಕಾಶಗಳು” ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರಣ ಸಂಕಿರಣದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಅಗಿ ಮಾತನಾಡಿದ ಅವರು, ಭಾರತದ ಈಗಿನ ಆರ್ಥಿಕತೆ 2.3 ಟ್ರಿಲಿಯನ್ ಡಾಲರ್ ಮತ್ತು ಇದನ್ನು ತಲುಪಲು 13 ವರ್ಷಗಳು ತಗುಲಿವೆ. ಆದರೆ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಸರಿಯಾದ ಬಳಕೆಯಿಂದ ಯಾವುದೂ ಅಸಾಧ್ಯವಲ್ಲ, ಎಂದರು.
ಇದೇ ವೇಳೆ, ಅಮಿಟಿ ವಿಶ್ವವಿದ್ಯಾನಿಲಯದಿಂದ “ಗ್ರಾಮೀಣ ಅಭಿವೃದ್ಧಿಯ ಅತ್ಯುತ್ತಮ ಪ್ರಾಧ್ಯಾಪಕ” ಪ್ರಶಸ್ತಿ ಪಡೆದ ಕಲ್ಲೂರಾಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಕುರಿತು ಮಾತನಾಡಿದ ಪ್ರಾಧ್ಯಾಪಕನಿಗೆ ಸಿಟ್ಟಿದ್ದರೆ, ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಸಾಧ್ಯವಾಗುವುದಿಲ್ಲ. ಹೊಸದರ ಕಲಿಕೆ ಕಷ್ಟ ಎಂದರು. ಅಧ್ಯಕ್ಷೀಯ ಭಾಷಣ ಮಾಡಿದ, ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ, ವಿಚಾರ ಸಂಕಿರಣಗಳು, ಸಂಶೋಧನೆಗಳಿಂದ ಪಡೆದ ಜ್ಞಾನವನ್ನು ನಾವು ಸಮಾಜದ ಏಳಿಗೆಗೆ ಬಳಸಿಕೊಳ್ಳಬೇಕು, ಎಂದರು.
ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ ಸ್ವಾಗತ ಕೋರಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ವಿಚಾರ ಸಂಕಿರಣದ ವರದಿ ವಾಚಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರೂಪಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Obituary: Wilson Lewis, Milagres, KallianpurObituary: Wilson Lewis, Milagres, Kallianpur
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Veez Konkani Issue #122Veez Konkani Issue #122
Veez Konkani Weekly - Issue # 121Veez Konkani Weekly - Issue # 121
Smparka Feb 2020Smparka Feb 2020
Land for Sale at Neelavara, Udupi District.Land for Sale at Neelavara, Udupi District.
Milagres English Medium, School, KallianpurMilagres English Medium, School, Kallianpur
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India