Brief Mumbai Managalore news with pictures.


Rons Bantwal
Kemmannu News Newtwork, 21-02-2020 10:28:53


Write Comment     |     E-Mail To a Friend     |     Facebook     |     Twitter     |     Print


 

 

ಫೆ.23-28: ಶ್ರೀ ದುರ್ಗಾಪರಮೇಶ್ವರೀ ಮಂದಿರ ಕುರಾರ್ (ಮಲಾಡ್) ಬ್ರಹ್ಮಕಲಶೋತ್ಸವ
ಶ್ರೀ ಗಣಪತಿ ದೇವರ-ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಪುನಃರ್ ಪ್ರತಿಷ್ಠಾಪನೆ
ಮುಂಬಯಿ, ಫೆ.16: ಮಲಾಡ್ ಪೂರ್ವದ ಕುರಾರ್ ವಿಲೇಜ್‍ನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಪುನಃರ್‍ನಿರ್ಮಾಣ ನಿಮಿತ್ತ ಶ್ರೀ ಗಣಪತಿ ದೇವರ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಪುನಃರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ತಂತ್ರಿಗಳಾದ ಡೊಂಬಿವಲಿಯ ಶ್ರೀ ಶಂಕರನಾರಾಯಣ ತಂತ್ರಿ ಇವರ ನೇತೃತ್ವ ಮತ್ತು ಮಂದಿರದ ಪ್ರಧಾನ ಅರ್ಚಕರಾದ ಸೂಡ ರಾಘವೇಂದ್ರ ಭಟ್ ಇವರ ಸಹಭಾಗಿತ್ವದಲ್ಲಿ ಇದೇ ಫೆ.23ನೇ ರವಿವಾರದಿಂದ ಫೆ.28ನೇ ಶುಕ್ರವಾರ ತನಕ ನಡೆಯಲಿರುವುದು.

ಆ ನಿಮಿತ್ತ ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶಾಭಿಷೇಕವು ಆ ಪ್ರಯುಕ್ತ ಫೆ.23ನೇ ರವಿವಾರ ಬೆಳಿಗ್ಗೆ 8.00 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ರಿತ್ವಿಕ್ ವರಣಿ, ದೇವ ನಾಂದೀ ಕಂಕಣ ಬಂಧ, ತೋರಣ ಸ್ಥಾಪನೆ, ಅರಣಿ ಮಥನ, ಭದ್ರ ದೀಪ ಪ್ರಜ್ವಲನೆ, ಮಹಾಗಣಪತಿ ಹೋಮ, ಸುಕೃತ ಹೋಮ, ಅಂಕುರ ಪೂಜೆ, ಪಂಚಗವ್ಯ ಹೋಮ. ಸಂಜೆ 5.00 ಗಂಟೆಗೆ ಶ್ರೀ ಮೋಹನ್‍ದಾಸ್ ಸ್ವಾಮಿ ಮಾಣಿಲ ಚಿತ್ತೈಸಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 6.00 ಗಂಟೆಯಿಂದ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಭೂಶುದ್ಧಿ ಹೋಮ, ವಾಸ್ತು ಪೂಜೆ,  ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲ ಬಲಿ, ಅಸ್ತ್ರ ಕಲಶ ಸ್ಥಾಪನೆ, ಸಾಯಂಕಾಲ 6.30 ಗಂಟೆಯಿಂದ ಮಾರನೇ ದಿನ ಬೆಳಿಗ್ಗೆ 7.00 ಗಂಟೆಯ ವರೆಗೆ ವಿವಿಧ ಭಜನಾ ಮಂಡಳಿಯಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಸಲಾಗುವುದು.


ಫೆ.24ನೇ ಸೋಮವಾರ ಬೆಳಿಗ್ಗೆ 5.00 ಗಂಟೆಯಿಂದ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬಶುದ್ಧಿ ಪ್ರಕ್ರಿಯೆ, ಅವಗಾಹ ಹೋಮ, ಪವಮಾನ ಹೋಮ, ಕುಷ್ಠಾಂಡ ಹೋಮ, ಗಾಯತ್ರಿ ಮಂತ್ರ ಹೋಮ. ಸಾಯಂಕಾಲ 6.00 ಗಂಟೆಯಿಂದ ಅಧಿವಾಸ ಹೋಮ, ಶಕ್ತಿ ಹೋಮ, ಅಕ್ಷತ ಹೋಮ, ಅಷ್ಠಬಂಧ ಪೂಜೆ, 7.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಧಾಕೃಷ್ಣ ನೃತ್ಯ ಅಕಾಡೆಮಿ ಇವರಿಂದ ವೈಷ್ಣವಿ ದೇವಿ ಮಹಿಮೆ ಎಂಬ ನೃತ್ಯರೂಪಕ ಪ್ರದರ್ಶಿಸಲಿದ್ದಾರೆ.

ಫೆ.25ನೇ ಮಂಗಳವಾರ ಬೆಳಿಗ್ಗೆ 6.00 ಗಂಟೆಯಿಂದ ಶ್ರೀ ಗಣಪತಿ ದೇವರಿಗೆ ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಸಂಜೀವಿನೀ ಮಹಾಮೃತ್ಯುಂಜಯ ಹೋಮ, ನವಗ್ರಹ ಶಾಂತಿ. ಸಾಯಂಕಾಲ 6.00 ಗಂಟೆಯಿಂದ ಶಕ್ತಿ ದಂಡಕ ಮಂಡಲ ಪೂಜೆ.  ಸಾಯಂಕಾಲ 5.00 ಗಂಟೆಯಿಂದ 7.00 ಗಂಟೆಗೆ ವರೆಗೆ ಮಹಿಳೆಯರಿಂದ ಹಳದಿ ಕುಂಕಮ ಕಾರ್ಯಕ್ರಮ. ಸಾಯಂಕಾಲ 7.00 ಗಂಟೆಯಿಂದ ಮಾತಾ ಕೀ ಚೌಕಿ ನಡೆಯಲಿದೆ.

ಫೆ.26ನೇ ಬುಧವಾರ ಬೆಳಿಗ್ಗೆ 5.00 ಗಂಟೆಯಿಂದ ಪ್ರತಿಷ್ಠಾ ಹೋಮಾದಿಗಳು, ಬೆಳಿಗ್ಗೆ 9.15 ಗಂಟೆಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಬಿಂಬಪ್ರತಿಷ್ಠೆ, ಅಷ್ಠಬಂಧ ಲೇಪನ, ಜೀವನ ಕುಂಭಾಭಿಷೇಕ, ನ್ಯಾಸಾದಿಗಳು, ಮಹಾಗಣಪತಿ ದೇವರಿಗೆ 25 ಕಲಶಾಭಿಷೇಕ, ಮಹಾಪೂಜೆ, ಶ್ರೀ ದೇವಿ ಸನ್ನಿಧಿಯಲ್ಲಿ ಅಗ್ನಿ ಜನನ ಪೂರ್ವಕ ತತ್ತ ಹೋಮ, ತತ್ತ ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ 1.00 ಗಂಟೆಯಿಂದ 3.00 ಗಂಟೆಯ ವರೆಗೆ ಅನ್ನ ಸಂತರ್ಪಣೆ. ಸಾಯಂಕಾಲ 6.00 ಗಂಟೆಯಿಂದ 108 ಕಲಶದ ಮಂಡಲ ರಚನೆ, ಕಲಶಾಧಿವಾಸ, ಅಧಿವಾಸ ಹೋಮ, ಪ್ರಸನ್ನ ಪೂಜೆ, ಮಂಡಲ ಪೂಜೆ. ಸಂಜೆ 5.00 ಗಂಟೆಯಿಂದ ಶ್ರೀ ಗೀತಾಂಬಿಕಾ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಅಸಲ್ಫಾ ಘಾಟ್‍ಕೋಪರ್ ಇವರು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶಿಸುವರು. ರಾತ್ರಿ 8.00 ಗಂಟೆಗೆ  ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ ಪಲಿಮಾರು ಆಗಮಿಸಿ ಅನುಗ್ರಹಿಸಲಿದ್ದಾರೆ.


ಫೆ.27ನೇ ಗುರುವಾರ ಬೆಳಿಗ್ಗೆ 6.00 ಗಂಟೆಯಿಂದ ಪ್ರಧಾನ ಹೋಮ, ಬೆಳಿಗ್ಗೆ 9.15 ಗಂಟೆಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವೀ ಸನ್ನಿಧಿಯಲ್ಲಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಕಟೀಲು ಇವರ ದಿವ್ಯೋಪಸ್ಥಿತಿಯಲ್ಲಿ 108 ಕಲಶಾಭಿಷೇಕ, 8.00 ಗಂಟೆಯಿಂದ ಚಂಡಿಕಾ ಯಾಗ ಪ್ರಾರಂಭ. ಪೂರ್ಣಾಹುರಿ ಮಹಾಪೂಜೆ, ಪ್ರತಿಜ್ಝಾ ಸ್ವೀಕಾರ, ಪಲ್ಲಪೂಜೆ, ಬ್ರಾಹ್ಮಣ ಸುವಾಸಿನೀ ಆರಾಧನೆ, ಮಧ್ಯಾಹ್ನ 1.00 ಗಂಟೆಯಿಂದ 2.00 ಗಂಟೆಯ ವರೆಗೆ ದಿನೇಶ್ ಕೋಟ್ಯಾನ್ ಇವರಿಂದ ಸೆಕ್ಸೋಪೆÇೀನ್, ಚೆಂಡೆ, ಗೊಂಬೆ, ಹುಲಿವೇಷ ಹಾಗೂ ವಿವಿಧ ವಾದ್ಯ ಘೋಷಣೆಗಳೊಂದಿಗೆ ವೈಭವ ಪೂರಿತ ಮೆರವಣಿಗೆ. ಕುಮಾರಿ ಕೌಶಿಕ ಕರುಣಾಕರ ಪೂಜಾರಿ ಅಸಲ್ಪಾ ಇವರಿಂದ ಸೆಕ್ಸೊಪೆÇೀನ್ ವಾದ್ಯ ಕಛೇರಿ ನಡೆಯಲಿದೆ. ಮಧ್ಯಾಹ್ನ 1.00 ಗಂಟೆಯಿಂದ 4.00 ವರೆಗೆ ಮಹಾ ಅನ್ನ ಸಂತರ್ಪಣೆ. 2.00 ಗಂಟೆಯಿಂದ 5.00 ಗಂಟೆ ವರೆಗೆ ಸದ್ಗುರು ಭಜನಾ ಮಂಡಳಿಯ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ಸಂಗೀತ ರಸಮಂಜರಿ. ಸಾಯಂಕಾಲ 6.00 ಗಂಟೆಯಿಂದ ಲಲಿತ ಸಹಸ್ರ ನಾಮಾರ್ಚನೆ, ಕುಂಕುಮಾರ್ಚನೆ, ಪ್ರಸನ್ನ ಪೂಜೆ, ರಂಗಪೂಜೆ, ಉತ್ಸವ ಬಲಿ, ಕಟ್ಟೆ ಪೂಜೆ, ಪ್ರಸಾದ ವಿತರಣೆ. 5.00 ಗಂಟೆಯಿಂದ 6.00 ಯ ವರೆಗೆ ಧಾರ್ಮಿಕ ಸಭೆ, ನಂತರ ಹುಲಿವೇಷ ಹಾಗೂ ವಿವಿಧ ವೇಷಭೂಷಣಗಳೊಂದಿಗೆ ಶ್ರೀ ದೇವರುಗಳ ವೈಭವಪೂರಿತ ಬಲಿ ಉತ್ಸವ ನಡೆಯಲಿದೆ. ಫೆ.28ನೇ ಶುಕ್ರವಾರ ಬೆಳಿಗ್ಗೆ 9.00 ಗಂಟೆಯಿಂದ ಸಂಪೆÇ್ರೀಕ್ಷಣೆ, ನವಕಲಶಾರಾಧನೆ, ಮಹಾಪೂಜೆ, ರಿತ್ವಿಕ್ ಸಂಭಾವನೆ, ಮಹಾ ಮಂತ್ರಾಕ್ಷತೆ. ದಿನಂಪತ್ರಿ ರಾತ್ರಿ 8.00 ಗಂಟೆಯಿಂದ 9.00 ಗಂಟೆಯ ವರೆಗೆ ಆಶಿರ್ವಚನ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಫೆ.27ನೇ ಗುರುವಾರ ಸಂಜೆ 4.30 ಗಂಟೆಯಿಂದ ಭವ್ಯ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿಸಲಾಗುತ್ತಿದ್ದು, ಮುಖ್ಯ ಅತಿಥಿsಯಾಗಿ  ಶ್ರೀ ಛಗನ್ ಭುಜಬಲ್ (ಸಚಿವರು ಮಹಾರಾಷ್ಟ್ರ ಸರಕಾರ), ಅತಿಥಿs ಅಭ್ಯಾಗತರುಗಳಾಗಿ ಜಿತೇಂದ್ರ ಅಹ್ವಾಡ್ (ಸಚಿವರು ಮಹಾರಾಷ್ಟ್ರ ಸರಕಾರ), ಸಂಸದರುಗಳಾದ ಗೋಪಾಲ ಸಿ.ಶೆಟ್ಟಿ, ಗಜನನ್ ಕೀರ್ತಿಕಾರ್, ಶಾಸಕ  ಸುನೀಲ್ ಪ್ರಭು, ಗೌರವ ಅತಿಥಿsಗಳಾಗಿ ಶಾಸಕರುಗಳಾದ ವಿದ್ಯಾ ಚವ್ಹಾಣ್, ಕಿರಣ್ ಪವಸ್ಕರ್, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಮಹಿಳಾ ವಿಭಾಗಧ್ಯಕೆ ರಂಜನಿ ಸುಧಾಕರ ಹೆಗ್ಡೆ, ಉಪ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,  ಬಿಲ್ಲವರ ಅಸೋಸಿಯೆಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಉದ್ಯಮಿಗಳಾದ ಕೆ.ಡಿ ಶೆಟ್ಟಿ, ಬಾಬು ಶೆಟ್ಟಿ ಮಲಾಡ್, ಸಿಎ| ಸುರೇಂದ್ರ ಕೆ.ಶೆಟ್ಟಿ, ರಂಗಪ್ಪ ಸಿ.ಗೌಡ, ಗೋಪಾಲ್ ಪುತ್ರನ್, ಅರುಣ್‍ಕುಮಾರ್ ಕೋಟ್ಯಾನ್, ಡಾ| ಹರೀಶ್ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಮುನ್ನಲಾಯಿಗುತ್ತು, ಶಿವಾಜಿ ಠಾಕೂರ್, ಬಿಎಂಸಿಯ ಉಪ ಮೇಯರ್ ಸುಹಾಸ್ ವಾಡ್ಕರ್, ನಗರ ಸೇವಕರುಗಳಾದ ಪ್ರತಿಭಾ ಹೇಮಂತ್ ಶಿಂಧೆ, ಗ್ಯಾನಮೂರ್ತಿ ಶರ್ಮಾ, ವಿನೋದ್ ಮಿಶ್ರಾ, ತುಳಸಿರಾಮ್ ಶಿಂಧೆ, ಧನಶ್ರೀ ಭರಡ್ಕರ್, ದೀಕ್ಷಾ ಪಟೇಲ್, ರಾಜಕೀಯ ಧುರೀಣರಾದ ಲಕ್ಷ್ಮಣ್ ಸಿ.ಪೂಜಾರಿ, ಅಜೀತ್ ರಾವ್‍ರಾನೆ (ಎನ್‍ಸಿಪಿ) ಮುಂಬಯಿ, ಶನಿ ಮಹಾತ್ಮಾ ಸೇವಾ ಸಮಿತಿ ಕುರಾರ್ ಮಲಾಡ್ ಇದರ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ, ಮಹಾಮ್ಮಯಿ ದುರ್ಗಾಪರಮೇಶ್ವರೀ ಮಂದಿರ ಮಲಾಡ್ ಇದರ ಧರ್ಮದರ್ಶಿ ಶ್ರೀ ರವಿ ಸ್ವಾಮೀಜಿ,  ಕಲ್ಲಂಜೆ  ರಾಧಾಕೃಷ್ಣ ಶ್ರೀಪತಿ ಭಟ್ (ಪಲಿಮಾರ್) ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.


ಮಹಾನಗರದಲ್ಲಿನ ಸದ್ಭಕ್ತ ಬಾಂಧವರಾದ ತಾವೆಲ್ಲರೂ ತಲ್ಲ ಬಂಧು-ಬಾಂಧವರೊಡಗೂಡಿ ಚಿತ್ತೈಸಿ, ತನು, ಮನ, ಧನಗಳ ಸಹಕಾರಗಳನ್ನಿತ್ತು ್ರೀ ಗಣಪತಿ ದೇವರ ಹಾಗೂ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ, ಉಪಾಧ್ಯಕ್ಷರುಗಳಾದ ಪದ್ಮನಾಭ ಟಿ.ಶೆಟ್ಟಿ, ಗಣೇಶ್ ಎಲ್.ಕುಂದರ್, ನರೇಶ್ ಆರ್.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಸೋಮಪ್ಪ ಬಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಗೋಪಾಲ್ ಬಿ.ಕೋಟ್ಯಾನ್, ಮುರಳೀಧರ ಬಿ. ಪೂಜಾರಿ, ರಮೇಶ್ ಟಿ.ಶೆಟ್ಟಿ, ಗೌ| ಕೋಶಾಧಿಕಾರಿ ಬಾಬು ಎಂ.ಸುವರ್ಣ, ಜೊತೆ ಕೋಶಾಧಿಕಾರಿಗಳಾದ ದೇವ್ ಬಿ.ಕೋಟ್ಯಾನ್, ಸುರೇಶ್ ಎಂ.ಕೋಟ್ಯಾನ್, ಗೀತಾ ಸಿ.ಜತ್ತನ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರೇಮನಾಥ ಎಸ್.ಸಾಲಿಯಾನ್, ಅಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕಾರ್ಯದರ್ಶಿ ಆನಂದ ಕೆ.ಕೋಟ್ಯಾನ್, ಉಪಾಧ್ಯಕ್ಷರು ಗಳಾದ ಡಾ| ಶೈಲೇಸ್ ಗೌಡ, ರಮೇಶ್ ಪೂಂಜ, ನ್ಯಾ| ಜಗನ್ನಾಥ ಎನ್.ಶೆಟ್ಟಿ, ನ್ಯಾ| ಸೋಮನಾಥ ಬಿ.ಅಮೀನ್, ಕುಮಾರೇಶ್ ಆಚಾರ್ಯ ಮತ್ತು ಸರ್ವ ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

Pratishtah BrahmakalaShotsava of Shree Kshetra Gejjegiri Nandana Bittil
Mumbai, Feb.18: Shree Kshetra Gejjegiri Nandana Bitthil gigantic restoration project comprising of  Satya Dharma Chaavadi, Moolasthana Garadi, as well as other idols of ritually worshipped karnika shaktis is nearing substantial completion.  To ensure uninterrupted progress of this masterpiece at work, scores of selfless workers offering Seva Voluntary Services and other sub committees work relentlessly leaving no stone unturned.

Even in Mumbai,  under the leadership of Shri. Jaya C. Suvarna, in line with his guidance, Deyi Baidethi-Koti Chennaya Moolasthana Kshetraadalitha Samiti ® Gejjegiri Nandana Bitthl, Padumale, Badagannur Grama, Puttur Taluk having a  total 46 Founder Members, where Mumbai Entity account for 11 Founder Members, viz. Sanmanya Shri. Jaya C.Suvarna, Nityanand D.Kotian, N.T Poojary, Harish G.Amin, Surendra A.Poojary, Bhaskar M.Salian, Dayanand R.Poojary, Dinesh S.Amin, Nilesh B.Poojary, Suresh Poojary Aladangadi and Rajshekar Kotian involve actively with significant contribution.  Many enthusiastic devotees have donated generously to this noble cause. There are many who are keen may be waiting for opportune time to  come forward and its time they join us contributing their might to realize the dream come true and be part of  mega celebrations to follow.


In this context, Mumbai activists have already held a joint meeting in consultation with Shri. Jaya C.Suvarna with The Billawar Association, Mumbai prominent members, President, Shri. Chandrashekar S.Poojary, Former President, Shri. L.V Amin, Vice President, Shri. Shrinivas R.Karkera, Youth Welfare Sub Committee Chairman Nagesh M.Kotian, Ashok Kuckiyan Sashihitlu, The Bharat Bank Board Directors, Gangadhar J.Poojary, Premnath P.Kotian, Mohandas Poojary Bhiwandi, Sadashiv Suvarna Kalyan and others, viz.

Prominent donors like Rajesh Poojary, Ratnakar Poojary, Sanjeeva Poojary Those, Leela Ganesh, Suresh Kumar and other Associatio’s Central Office & Local Offices’ Representatives in attendance.  Fund raising for this sacred work in progress at different places in Mumbai.  And Association’s Thane Local Office have already organized a Film Show which proceeds will be donated to the cause.  Every billawa community member is now aware of the proposed Brahmakalashotsav to mark the completion and inauguration of Billawa Pride–Shree Kshetra Gejjegiri Nandana Bitthl which celebration will be billed as mother of all celebrations welcoming generous donors to donate wholeheartedly and handsomely. Its an one time Lifetime opportunity to not to miss–an appeal is made to one and all to come forward immediately since we are left with little time at our disposal.  Contact for more details, the undermentioned Mumbai Organising Committee will be too pleased to assisit you  or even come to your door (if required) to ensure that you are part of this sacred journey and be recipient of blessings of Mother Deyi Baidethi and Shree Koti Chennayya and other revered deities.

Chief Organiser: Nityanand D. Kotian (9821194072), Nilesh Poojary Palimar                       (9819868999), Ashok Sasihitlu (9892821404), Sanjeeva Poojary Thonse (9891869128), Leela Ganesh (9870717397), Sadashiv Suvarna Kalyan (9224399943), Harish Salian Kalwa (7738852777), Dharmapal G.Anchan (9820429475), Dharmesh S.Salian  (9833676406), Prabhakar Belvai  (9594867979), And Billawar Association, Mumbai–Central and all Local Office Office Bearers.


Gejjegiri Deyi Baidethi Nandanagigi
The Gejjegiri gigantic sacred project comprising of Moolasthana Garadi and Mother Deyi Baidethi Satya-Dharma Chavadi is progressing for substantial completion applying final touches.  Already scores of devotees/pilgrims of international repute and locals like have extended generous helping hand and many other have come forward with firm commitment. A joint appeal is being sent out by the Kshetra Organising Samithi. Brahmakalashotsav Samithi and Gejjegiri Mumbai Samithi to all those devotees to display act of generosity which  would definitely result in  joy-filled generosity of believers who  will fully  fund God’s work here on earth.

Shree Kshetra Gejjegiri Nandana Bitthl once complete in all respects will have,
* In the backdrop of Koti Chennayya, the newly constructed moolasthana of Deyi 
   Baidethi & Sayana Baida reflects a synthesis of arts, the ideals of dharma, beliefs,
   values and the Chavadi will be known as Satya Dharma Chavadi which will have
   garba gudi (sanctum sanctorum) where Deyi Baidethi’s Murti (Idol) resides and
   Guru Sarvajna Peetha (Spiritual Seat of Knowledge) on the North-East for Sayana
   Baida after performing pratishthapana vidhi.
* Revered ancestral deities Dharma Daiva Dhoomavati & Kuppe Panjurli Sanidya
   who were being worshipped right from the days of Sayana Guru ancestors were
   also restored.
* Mother Deyi Baidethi Samadhi originally surrounded by cluster of trees got a
   facelift duly upgraded  in the form of Smarak (Memorial)
* King Ballala sent Royal Palanquin (Dandige) to bring Deyi Baidethi protected in
   Saroli Saimanja Katte (elevated rectangular platform) has now been beautifully
   reconditioned.
* Koti Chennayya Moolasthana Garadi at the  Gejjegiri higher elevation is at the
   finishing stage and facing in front is Bermer Gunda(Gudi)

Brahmakalashotsav - Programme details:
26,Feb-2020: Morning-Kodimara (wooden pillar) inaugural ceremony followed by Dhoomavati, Kuppe Panjurli, Kallaldaya and Korathi daivas Punar Pratishtapana
27,Feb-2020: Naga Pratishte-Vastu Homa with host of other religious rituals.    28,Feb-2020: Morning-Satya Dharma Chavadi and Moolasthana Garadi Murti (Idols) Pratishtapana, Brahmakalashotsav, Maha Annasantharpane
29,Feb-2020: Morning-Flag Hoisting followed by Dharmadaiva  Dhoomavati Nemotsav (day time).  In the night, Nemotstav for Panjurli and other Parivara daivas
01, March-2020: Late in the evening-Nemotsav at  Moolasthana Garadi, Deyi Baidethi Darshana Seva at Satya Dharma Chavadi, and mega meet utsav of mother & twin sons (Koti & Chennayya)
02, March-2020: Morning till afternoon  -  Devi Baidethi Nemotsav at Satya Dharma Chavadi. Along with all the above rituals/programme, will hold Sabha Karyakram and other Variety of cultural programme will be in progress.

Note:  It is pertinent to highlight here that the above Brahmakalashotsava to be termed as festival of the century writing history of Nandana Bittl in golden letters – Generation Now and Generation Next will cherish.

ಫೆ.23: ಬಿಎಸ್‍ಕೆಬಿ ಅಸೋಸಿಯೇಶನ್‍ನಿಂದ ಕಿಂಗ್‍ಸರ್ಕಲ್‍ನ ಷಣ್ಮುಖಾನಂದ ಸಭಾಗೃಹದಲ್ಲಿ- `ಏಕ್ ಶಾಮ್ ಪಂಚಮ್ ದಾ ಕೆ ನಾಮ್’ ಹಿಂದಿ ರಸಮಂಜರಿ

ಮುಂಬಯಿ,ಫೆ.18: ಬಿಎಸ್‍ಕೆಬಿ ಅಸೋಸಿಯೇಶನ್ ಸಾಯನ್ (ಗೋಕುಲ) ಯೋಜನೆಗಳು `ವಿಷನ್ 2020’ರ  ಸಹಾಯಾರ್ಥವಾಗಿ  ರವಿವಾರ ದಿನಾಂಕ  23.2.2020ರ ಭಾನುಆರ ಸಂಜೆ   ಹಿಂದಿ ಚಲನಚಿತ್ರ ರಂಗದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಸಂಗೀತ  ಸಂಯೋಜಕ,  ಪಂಚಮ್ ದಾ ಎಂದೇ ನಾಮಾಂಕಿತ ರಾಹುಲ್ ದೇವ್ ಬರ್ಮನ್ (ಆರ್. ಡಿ. ಬರ್ಮನ್ ) ರವರು ಸಂಯೋಜಿಸಿದ,  ಚಿತ್ರಗೀತೆ ಪ್ರೇಮಿಗಳ ನೆನಪಿನಲ್ಲಿ ಸದಾ ಹಸಿರಾಗಿರುವ ಹಿಂದಿ ಚಿತ್ರಗೀತೆಗಳ ರಸಮಂಜರಿ `ಏಕ್ ಶಾಮ್ ಪಂಚಮ್ ದಾ ಕೆ ನಾಮ್’   ಕಾರ್ಯಕ್ರಮವನ್ನು  ಷಣ್ಮುಖಾನಂದ ಚಂದ್ರಶೇಖರೆಂದ್ರ ಸರಸ್ವತಿ ಸಭಾಗೃಹ, ಸಾಯನ್ ಇಲ್ಲಿ  ಆಯೋಜಿಸಿದೆ.

ಸುಧೇಶ್ ಭೋಸ್ಲೆ, ಶ್ರೀಕಾಂತ್ ನಾರಾಯಣ್, ಶೈಲಜಾ ಸುಬ್ರಮಣಿಯನ್ ಅಲೋಕ್ ಕಟ್ದಾರೆ, ಸೋನಾಲಿ ಕಾರ್ನಿಕ್ ಮುಂತಾದ ಖ್ಯಾತ ಹಿನ್ನೆಲೆ ಗಾಯಕ ಗಾಯಕಿಯರು  ಹಾಗೂ ಸುಮಾರು 25  ವೈವಿಧ್ಯಮಯ ಸಂಗೀತೋಪಕರಣ ವಾದಕರು  ಆಗಮಿಸಿ ಅಂದು ಸಂಜೆ 7.00 ಗಂಟೆಯಿಂದ ರಾತ್ರಿ 10.00  ಗಂಟೆಯ ವರೆಗೆ ಸಂಗೀತಾಸಕ್ತರ ಮನ ರಂಜಿಸಲಿದ್ದಾರೆ. ಸಂಗೀತಾಸಕ್ತರು ದೇಣಿಗೆ ಪ್ರವೇಶ ಪತ್ರವನ್ನು ಸಭಾಗೃಹದಲ್ಲಿ, ಗೋಕುಲದ ಕಚೇರಿಯಲ್ಲಿ ಅಥವಾ  ತಿತಿತಿ.bsಞbಚಿ.ಛಿom  oಟಿಟiಟಿe ಮೂಲಕ ಕೂಡಾ ಪಡೆಯಬಹುದು ಎಂದು ಸಂಘದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದಲ್ಲಿ ಅನುವಾದ ಕಮ್ಮಟ ಕಾರ್ಯಕ್ರಮ
ಹಿರಿಯ ಪತ್ರಕರ್ತ-ಯಕ್ಷಗಾನ ಕಲಾವಿದ ರಮೇಶ್ ಬಿರ್ತಿ ಅವರಿಗೆ ಸನ್ಮಾನ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ,ಫೆ.18: ಸಾಂತಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಇಲ್ಲಿನ ಡಬ್ಲೂ ್ಯಆರ್‍ಐಸಿ ಸಭಾ ಭವನದಲ್ಲಿ ಇಂದಿಲ್ಲಿ ಮಂಗಳವಾರ ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಬರವಣಿಗೆಯನ್ನು ರೂಢಿಸಿ ಕೊಳ್ಳುವ ಕ್ರಮ-4 ಮತ್ತು ಅನುವಾದ ಕಮ್ಮಟ ಕಾರ್ಯಕ್ರಮ ನಡೆಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಕಾರ್ಯಕಾರಿ ಸಮಿತಿ ಸದಸ್ಯ, ಡಾ| ದಿನೇಶ್ ಶೆಟ್ಟಿ ರೆಂಜಾಳ ಮತ್ತು ವಿಶೇಷ ಆಮಂತ್ರಿತ ಸದಸ್ಯ ಗೋಪಾಲ್ ತ್ರಾಸಿ ಸಂಪನ್ಮೂಲ ವಕ್ತಿಗಳಾಗಿದ್ದು ಬರವಣಿಗೆಯನ್ನು ರೂಢಿಸಿ ಕೊಳ್ಳುವ ಕ್ರಮದ ಬಗ್ಗೆ ಮಾಹಿತಿಯನ್ನಿತ್ತರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡದ ವಿಭಾಗ ಅತಿಥಿü ಉಪನ್ಯಾಸಕ ಡಾ| ವಿಶ್ವನಾಥ್ ಕಾರ್ನಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಪತ್ರಿಕೋದ್ಯಮದ ಅನುಪಮ ಸೇವೆಗಾಗಿ ಮಹಾನಗರದಲ್ಲಿನ ಹಿರಿಯ ಪತ್ರಕರ್ತ, ಯಕ್ಷಗಾನ ಕಲಾವಿದ, ಕಪಸಮ ಸದಸ್ಯ ರಮೇಶ್ ಎನ್.ಬಿರ್ತಿ ಇವರಿಗೆ ಶಾಲು ಹೊದಿಸಿ, ಸ್ವರ್ಣ ಪದಕವನ್ನಿತ್ತು ಸತ್ಕರಿಸಿ ಅಭಿನಂದಿಸಿದರು.

ಕನ್ನಡ ಮರಾಠಿ ಅನುವಾದ ಸಾಹಿತ್ಯ ಕಮ್ಮಟ ನಡೆಸಲಾಗಿದ್ದು  ಹಿರಿಯ ಪತ್ರಕರ್ತ ರತ್ನಾಕರ ಆರ್.ಶೆಟ್ಟಿ, ಅರವಿಂದ ಹೆಬ್ಬಾರ್, ಡಾ| ಜಿ.ವಿ ಕುಲ್ಕರ್ಣಿ, ಡಾ| ಕೆ.ರಘುನಾಥ್, ಸರೋಜಿನಿತರೆ ಸಾಹಿತ್ಯ ಕಮ್ಮಟ ಪಾಲ್ಗೊಂಡರು.   ಶ್ಯಾಮಲಾ ರಾಧೇಶ್ ಕನ್ನಡ ಸಾಹಿತ್ಯ ಸಂಗೀತ ಸಾದರ ಪಡಿಸಿದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ, ಬಿರ್ತಿ ಅವರಿಗೆ ಅಭಿನಂದನಾ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.ತನುಜಾ ಹೆಗಡೆ ಧನ್ಯವದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi