Brief Mumbai Managalore news with pictures.


Rons Bantwal
Kemmannu News Newtwork, 05-03-2020 14:16:35


Write Comment     |     E-Mail To a Friend     |     Facebook     |     Twitter     |     Print


ಕೆನರಾ ಪಿಂಟೋ ಟ್ರಾವೆಲ್ಸ್‍ನ ಮಲ್ಟಿಎಕ್ಸೆಲ್ ಸ್ಲೀಪರ್ ಎಸಿ ಐ-ಶಿಫ್ಟ್ ನೂತನ ಐಷಾರಾಮಿ ಬಸ್‍ಗಳ ಮುಂಬಯಿ-ಮಂಗಳೂರು ಸಂಚಾರ ಆರಂಭÀ

ಮುಂಬಯಿ, ಮಾ.05: ಪ್ರಾದೇಶಿಕ ಮತ್ತು ಅಂತರ್‍ರಾಜ್ಯ ಪ್ರಯಾಣ ಸೇವೆಯಲ್ಲಿ ಸುಮಾರು ಏಳು ದಶಕಗಳ ನಿರಂತರ ಸೇವೆಯಲ್ಲಿ ತೊಡಗಿಸಿ ಕೊಂಡು ಪ್ರವಾಸಿಗರ ಸಂಚಾರಕ್ಕೆ ಹೆಸರಾಂತ ಕೆನರಾ ಪಿಂಟೋ ಟ್ರಾವೆಲ್ಸ್ ಇದೀಗ ಅತ್ಯಾಧುನಿಕ ದ ಸ್ಟಾರ್ಝ್ ಪ್ರೀಮಿಯಂ ವೊಲ್ವೋ ಬಿ11ಆರ್-14.95 ಮೀಟರ್ ಮಲ್ಟಿಎಕ್ಸೆಲ್ ಸ್ಲೀಪರ್ ಎಸಿ ಐ-ಶಿಫ್ಟ್ ಪ್ರತ್ಯೇಕ ಎಲ್‍ಸಿಡಿಗಳುಳ್ಳ 42-ಸ್ಲೀಪರ್ ಬರ್ತ್ ಐಷಾರಾಮಿ ಬಸ್‍ಗಳನ್ನು ಪ್ರಯಾಣಿಕರ ಸೇವೆಗೆ ಸಿದ್ಧಪಡಿಸಿದೆ. ಮಂಗಳೂರು ಮುಂಬಯಿ ಮಂಗಳೂರು ಮಾರ್ಗವಾಗಿ ಈ ನೂತನ ಐಷಾರಾಮಿ ಬಸ್‍ಗಳು ಸೇವೆಗೆ ಸಜ್ಜಾಗಿದ್ದು ಇಂದು ಮಂಗಳೂರುನಿಂದ ಮೊದಲ ಸಂಚಾರ ಆರಂಭಿಸಲಿದೆ.

ಕಳೆದ ಸುಮಾರು ಏಳು ದಶಕಗಳಿಂದ  ಪ್ರಯಾಣಿಕರ ವಿಶ್ವಾಸರ್ಹ ಸೇವೆಯಲ್ಲಿ ಕೆನರಾ ಪಿಂಟೊ ಟ್ರಾವೆಲ್ಸ್ ಸಂಸ್ಥೆ ಪ್ರಯಾಣಿಕರ ಭರವಸೆಗೆ ಪಾತ್ರವಾಗಿದ್ದು ಇದೀಗ ಗ್ರಾಹಕ ಪ್ರಾಯಣಿಕರ ಅನುಕೂಲಕ್ಕಾಗಿ ಮಂಗಳೂರು ಮಿಲಾಗ್ರಿಸ್‍ನಿಂದ ಪ್ರತೀದಿನ ಅಪರಾಹ್ನ1.45 ಗಂಟೆಗೆ ಪ್ರಯಾಣ ಬೆಳೆಸಿ ಉಡುಪಿ, ಕುಂದಾಪುರ, ಭಟ್ಕಳ, ಬೆಳಗಾಂ ಮಾರ್ಗವಾಗಿ ಪುಣೆ, ಚೆಂಬೂರು, ಸಯಾನ್, ಅಂಧೇರಿ, ಬೋರಿವಿಲಿ, ದಹಿಸರ್ ಮಾರ್ಗವಾಗಿ ವಿೂರಾರೋಡ್ (ಸೀತಲ್‍ನಗರ್) ಸೇರಲಿದೆ. ಅಂತೆಯೇ   ದಿನಾ ಮಧ್ಯಾಹ್ನ 12.15 ಗಂಟೆಗೆ ವಿೂರಾರೋಡ್‍ನಿಂದ (ಸೀತಲ್‍ನಗರ್) ಹೊರಟು ಅದೇ ಮಾರ್ಗವಾಗಿ ಮಂಗಳೂರು ಸೇರಲಿದೆ.

ನೂತನ ಬಸ್ಸುಗಳು ಇದೀಗಲೇ ಸೇವೆಯಲ್ಲಿ ಲಭ್ಯವಿದ್ದು ಅತ್ಯಾಧುನಿಕ ಈ ಬಸ್ಸ್‍ಗಳು ಎಂದಿನಂತೆಯೇ ಪ್ರಯಾಣಿಕರ ಸೇವೆಯಲ್ಲಿವೆ. ಕೆನರಾ ಪಿಂಟೊ ದೈನಂದಿನ ಸರ್ವಿಸ್‍ಗಳು ನಿಮ್ಮ ಸೇವೆಯಲ್ಲಿದ್ದು ಟಿಕೇಟು ಬುಕ್ಕಿಂಗ್‍ಗಾಗಿ ತಮ್ಮ ಸಮೀಪದ ಬಸ್ ಏಜೆಂಟರನ್ನು ಅಥವಾ ಮಂಗಳೂರು ಯಾ ಮುಂಬಯಿ ಇಲ್ಲಿನ ಕೆನರಾ ಪಿಂಟೊ ಕಛೇರಿಗಳನ್ನು ಸಂಪರ್ಕಿಸುವಂತೆ ಅಥವಾ WWW.ಅಂಓಂಖಂPIಓಖಿಔ.ಅಔಒ ಇದಕ್ಕೆ ಲಾಗೀನ್ ಮಾಡಿ ತಮಗೆ ಅನುಕೂಲಕರವಾದ ಸೀಟುಗಳನ್ನು ಕಾಯ್ದಿರಿಸಿ ಸುಖಕರ ಪ್ರಯಾಣ ನಡೆಸುವಂತೆ ಕೆನರಾ ಪಿಂಟೊ ಸಂಸ್ಥೆಯ ಮಾಲೀಕ ಸುನೀಲ್ ಪಾಯ್ಸ್ ತಿಳಿಸಿದ್ದಾರೆ.

ಮಳ್ಲ್‍ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕದ 5ನೇ ಸ್ವಲಾತ್ ವಾರ್ಷಿಕೋತ್ಸವ
ಸಯ್ಯದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ ಕುರಿತ `ನೆರಳು’ ಕೃತಿ ಬಿಡುಗಡೆ

ಮುಂಬಯಿ, ಮಾ.02: ಕೇರಳದ ಕಾಸರಗೋಡುವಿನಲ್ಲಿ ಕಾರ್ಯಚಾರಿಸುತ್ತಿರುವ ಮಳ್ಲ್ ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕದ 5ನೇ ಸ್ವಲಾತ್ ವಾರ್ಷಿಕೋತ್ಸವ ಮುಂಬಯಿಯ ದಾದರ್ ಪೂರ್ವದ ಲತೀಫಿಯ್ಯ ಸುನ್ನಿ  ಮಸೀದಿಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ  ಸಯ್ಯದ್ ಶಹೀರ್ ಅಲ್- ಬುಖಾರಿ ಮತ್ತು ಕಾರ್ಯದರ್ಶಿ  ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್-ಬುಖಾರಿ  ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣಗೈದರು.

ಈ ಸಂದರ್ಭ ಮಳ್ಲ್‍ಹರ್ ವಿದ್ಯಾಸಂಸ್ಥೆ ಶಿಲ್ಪಿ ಸಯ್ಯದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ ಅವರ ಕುರಿತು ಬರೆದ `ನೆರಳು’ ಕೃತಿಯನ್ನು ಸಯ್ಯದ್ ಶಹೀರ್ ಬಿಡುಗಡೆ ಗೊಳಿಸಿದರು.

ಮಳ್ಲ್‍ಹರ್ ಮುದರ್ರಿಸ್ ಝುಬೈರ್ ಸಖಾಫಿ, ಹಸನ್ ಮುಸ್ಲಿಯಾರ್ ಮುಂಬ್ರಾ, ಲತೀಫಿಯ್ಯ ಸುನ್ನಿ  ಮಸೀದಿಯ ಖತೀಬ್ ಹಾಫಿಳ್  ಅಬ್ದುಲ್ ಕರೀಂ ಅಶ್ರಫಿ, ಎಐಟಿಯುಸಿ ಕೇರಳ ಉಪಾಧ್ಯಕ್ಷ  ಮುಸ್ತಫ್ ಎಂ.ಡಿ ಕಡಂಬಾರ್,  ಟೆಂಕರ್ ಮೂಲೆ ಮಸೀದಿ ಖತೀಬ್ ಇಸ್ಮಾಯಿಲ್ ಅಂಜಾದಿ, ಪ್ರಬಂಧಕ ಸಿದ್ದೀಕ್ ಮೌಲಾನಾ ಮಳ್ಲ್ ಹರ್, ಅಬ್ದುಲ್ ಹಕೀಂ ಅಂಜಾದಿ,  ಮಳ್ಲ್ ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕ ಅಧ್ಯಕ್ಷ ಅಬ್ದುಲ್ ಸತ್ತಾರ್ ಬದ್ರಿಯ್ಯಾ, ಉಪಾಧ್ಯಕ್ಷ ಮುಸ್ತಾಫ ಕೆ.ಪಿ, ಕೋಶಾಧಿಕಾರಿ ಅಶ್ರಫ್ ಬೋಳ್ಮಾರ್, ಸಂಘಟನಾ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್ ಕಿನ್ಯಾ, ಸ್ವಾಗತ ಸಮಿತಿ ಅಧ್ಯಕ್ಷ ಝಕರಿಯ್ಯಾ ಸಿ.ಎಂ, ಮುಂಬಯಿ ಕೇರಳ ಮುಸ್ಲಿಂ ಜಮಾಅತ್, ಸದಸ್ಯರಾದ ಅಶ್ರಫ್ ಫೌಟೆಂಟ್, ಅಶ್ರಫ್ ಜೋಗಿಶ್ವರಿ ಮುಂತಾದವರು ಉಪಸ್ಥಿತರಿದರು.

ಮಳ್ಲ್‍ಹರ್ ವಿದ್ಯಾ ಸಂಸ್ಥೆಯ ಮುಂಬಯಿ ವ್ಯವಸ್ಥಾಪಕ ಸಿದ್ದೀಕ್ ಮೌಲಾನಾ ಮಳ್ಲ್‍ಹರ್ ಸ್ವಾಗತಿಸಿದರು. ಅಹ್ಮದ್ ಶಿಹಾನ್ ಉಳ್ಳಾಲ್ ನಾತ್ ಪಠಿಸಿದರು. ಸಂಘಟನಾ ಕಾರ್ಯದರ್ಶಿ  ಇಲ್ಯಾಸ್ ಟಿ.ಎಂ ತೌಡುಗೋಳಿ ವಂದಿಸಿದರು.

ತಮಿಳು ಭಾಷಾ ಪಟ್ಟಾಸ್ ಚಿತ್ರದಲ್ಲಿ ಮೆರೆಯಲಿರುವ - ತೌಳವ ಸೂಪರ್‍ಸ್ಟಾರ್ ಸೌರಭ್ ಸುರೇಶ್ ಭಂಡಾರಿ

ಮುಂಬಯಿ, ಮಾ.04: ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನ (ಬ್ಯಾನರ್)ನಲ್ಲಿ ರಚಿತ ಹಾಸ್ಯ ರಸಪ್ರಧಾನ `ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾ ಮೂಲಕ ಕರಾವಳಿ ಜನತೆಯಲ್ಲಿ ಮನೆಮಾತಾಗಿರುವ ತೌಳವ ಸೂಪರ್‍ಸ್ಟಾರ್ ಸೌರಭ್ ಭಂಡಾರಿ ಇದೀಗ ತುಳುವಿನಿಂದ ತಮಿಳು ಚಲನಚಿತ್ರದತ್ತ ಹೆಜ್ಜೆ ಮೂಡಿಸಿದ್ದಾರೆ. ಎತಿರ್ ನೀಚಲ್, ಕಾಕಿ ಸತ್ತÉೈ, ಕೋಡಿ ಸಿನೆಮಾ ಮೂಲಕ  ವಿಶ್ವಖ್ಯಾತಿ ಪಡೆದ ಸುಮಾರು 39ರ ಹರೆಯದ ಯುವ ಬರಹಗಾರ, ಗೀತರಚನೆಕಾರ, ವಿಜಯ್ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಮಾನ್ಯತಾ ತಮಿಳು ಭಾಷೆಯಲ್ಲಿನ ಶಿಖರಾಗ್ರ ಚಲನಚಿತ್ರ ನಿರ್ದೇಶಕ ಆರ್.ಎಸ್ ದೊರೈ ಸೆಂಥಿüಲ್ ಕುಮಾರ್ ಇವರಿಂದಲೇ ಪ್ರಶಂಸೆಗೆ ಪಾತ್ರರಾದ ಸೌರಭ್ ತಮಿಳು ಸಿನೆಮಾದತ್ತ ಕ್ರಮಿಸಿದ ಮೊದಲ ತುಳುವ (ಮುಂಬಯಿವಾಸಿ) ಚಿತ್ರನಟರೆಣಿಸಿದ್ದಾರೆ.

ತಮಿಳು ಚಿತ್ರಲೋಕದ ಹೆಸರಾಂತ ನಿರ್ಮಾಪಕ ಕಲೈಪುಲಿ ಎಸ್.ಥನು ಅವರೇ ಖುದ್ಧಾಗಿ ಸೌರಭ್ ಭಂಡಾರಿ ಅವರ ನಟನೆಯನ್ನು ಕಂಡು ಆಶಿರ್ವದಿಸಿ ತಮಿಳು ಭಾಷಾ ಚಿತ್ರದಲ್ಲಿ ನಟಿಸುವಂತೆ ಪ್ರೇರಪಿಸಿ ಪಟ್ಟಾಸ್ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಧನುಷ್ ಜೊತೆ ಮಾರ್ಶಲ್ ಆರ್ಟ್‍ನಲ್ಲಿ ಸೌರಭ್ ಅಭಿನಯಿಸಿದ್ದಾರೆ.

2016ರಲ್ಲಿ ಸೆಂಥಿüಲ್ ಕುಮಾರ್ ತನ್ನ ಸಿನೆಮಾದಲ್ಲಿ ಧನುಷ್, ತ್ರಿಶಾ ಮತ್ತು ಅನುಪಮಾ ಪರಮೇಶ್ವರನ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಕೋಡಿ ಚಿತ್ರದಲ್ಲಿ ರಜನಿಕಾಂತ್ ಅವರ ಅಳಿಯ ಧನುಷ್ ಅವರ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ದ್ವಿಪಾತ್ರಗಳನ್ನು ನಿಭಾಯಿಸಿದ್ದು, ಈ ಚಿತ್ರವು ವಿಮರ್ಶಕರಿಂದ ಧನಾತ್ಮಕÀವಾಗಿ ಪ್ರಶಂಸೆಗೊಳಪಟ್ಟಿತ್ತು. ಇದೀಗ ಧನುಷ್ ಅವರ ಪ್ರಧಾನ ಭೂಮಿಕೆ ಮತ್ತು ಮತ್ತೆ ದ್ವಂದ್ವ ಪಾತ್ರಗಳಲ್ಲಿ ಪಟ್ಟಾಸ್ ಚಿತ್ರ ಚಿತ್ರೀಕರಣ ಗೊಂಡಿದೆ. ಸ್ನೇಹ ಮತ್ತು ಮೆಹ್ರೀನ್ ಅವರೊಂದಿಗೆ ಸೌರಭ್ ಭಂಡಾರಿ ಕೂಡಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲ್ಯದಿಂದಲೇ ಕರಾಟೆ ಮಾರ್ಶಲ್ ಆರ್ಟ್‍ನಲ್ಲಿ ಪಳಗಿದ ಸೌರಭ್, ಸ್ವರ್ಣ ಪದಕದೊಂದಿಗೆ `ಬ್ಲಾ ್ಯಕ್ ಬೆಲ್ಟ್’ ಚ್ಯಾಂಪಿಯನ್ ತನ್ನದಾಗಿಸಿದ ಅಪ್ರತಿಮ ಪ್ರತಿಭೆ. ಸುಮಾರು ಎರಡು ದಶಕಗಳಿಂದ ಕರಾಟೆ ಅಭ್ಯಾಸಿಸಿ ಡ್ಯಾನ್ ಬ್ಲ್ಯಾಕ್‍ಬೆಲ್ಟ್ ಕರಾಟೆ ಚ್ಯಾಂಪಿಯನ್‍ಶಿಪ್ ವಿಜೇತರೆಣಿಸಿ ಸಿಂಗಾಪುರ, ಕೆನಡಾ, ಆಸ್ಟ್ರೇಲಿಯಾ, ದುಬಾಯಿ, ಹಾಂಕ್‍ಕಾಂಗ್, ಮಲೇಷಿಯಾ ಹೀಗೆ ವಿವಿಧ ದೇಶಗಳಲ್ಲಿ ಭಾರತೀಯ ಪ್ರತಿನಿಧಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ ಕರಾಟೆಪಟು. ಇದೀಗಲೇ 17 ಚಿನ್ನದ ಪದಕಗಳು ಸೇರಿದಂತೆ ಇತರ ನೂರಾರು ಪದಕ, ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.  

ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ವಿತರಕರಾಗಿ ಪ್ರಸಿದ್ಧಿಯ ಕಲೈಪುಲಿ ಎಸ್.ಥನು ತನ್ನ ವಿ ಕ್ರಿಯೇಷನ್ಸ್ ಮತ್ತು ಕಲೈಪುಲಿ ಫಿಲ್ಮ್ಸ್ ಇಂಟರ್‍ನೇಶÀನಲ್ ಈ ಎರಡು ಚಿತ್ರ ನಿರ್ಮಾಣ ಕಂಪನಿಗಳ ಮೂಲಕ ತಮಿಳು ಚಿತ್ರರಂಗದಲ್ಲಿ ನಿರ್ಮಿಸಿದ ಚಿತ್ರಗಳಿಗೆ ಅಂತರಾಷ್ಟ್ರೀಯ ಹೆಸರುವಾಸಿ ಆಗಿದ್ದಾರೆ. ಇವರೋರ್ವ  ಎ ಕಮರ್ಷಿಯಲ್ ಎಂಟರ್ಟೈನರ್ ಎಂದೇ ಪ್ರಸಿದ್ಧ ಇವರ ಚಲನಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿವೆ. 2016ರ ಹೊತ್ತಿಗೆ ಅವರ ನಿವ್ವಳ ಮೌಲ್ಯ ಅಂದಾಜು 65 ಮಿಲಿಯನ್ ದಾಟಿದ್ದೇ ಇವರ ಮಹತ್ಸಾಧನೆ ಆಗಿದೆ. ಅವರ ಅನೇಕ ಸಿನೆಮಾಗಳಲ್ಲಿ ಮೂರು ಚಲನಚಿತ್ರಗಳು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರಗಳಾಗಿದ್ದು ಆ ಪೈಕಿ ಪಟ್ಟಾಸ್ ಚಿತ್ರದಲ್ಲಿ ಸೌರಭ್ ಭಂಡಾರಿ ಕಲೈಪುಲಿ ಇವರ ನಿರ್ಮಾಪಕತ್ವದ ಸಿನೆಮಾದಲ್ಲಿ ನಟಿಸುತ್ತಿರುವುದು ತುಳು-ಕನ್ನಡಿಗರ ಹಿರಿಮೆಯಾಗಿದೆ.

ಪಟ್ಟಾಸ್ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದ ನನಗೆ ಸ್ಥೈರ್ಯದೊಂದಿಗೆ ಕಾದಾಡುವ (ಕರಾಟೆ) ಕ್ರಮಾಗತಿಗೆ ಮತ್ತಷ್ಟು ವಿಫುಲ ಅವಕಾಶ ಪಡೆದಂತಾಗಿದೆ. ಕರಾಟೆಯಲ್ಲಿನ ಸುಮಾರು 20 ವರ್ಷಗಳ ಪರಿಶ್ರಮ, ಅಭ್ಯಾಸವೇ ಈ ಚಿತ್ರದಲ್ಲಿ ನಟಿಸಲು ಸುಲಭಸಾಧ್ಯವಾಗಿದೆ. ನನ್ನ ಜೀವನದಲ್ಲೇ ಇದೊಂದು ಸೋಜಿಗದ ವಿಸ್ಮಯಕಾರಿ ಪರಮ ಅನುಭವ ಇದಾಗಿದೆ. ಇನ್ನಷ್ಟು ಖುಷಿ ಅಂದರೆ ಈ ಸಿನೆಮಾವು ಧನುಷ್ ಅವರಷ್ಟೇ ನನಗೂ ಅನಾವರಣ ನನ್ನ ಪಾಲಿಗೂ ಧಕ್ಕಿದೆ. ತುಳುವಿನ ಗಬ್ಬರ್‍ಸಿಂಗ್ ಸಿನೆಮಾ ಚಿತ್ರೀಕರಣದಲ್ಲಿದ್ದು, ಓರ್ವ ಪೆÇೀಲಿಸ್ ಅಧಿಕಾರಿಯಾಗಿ ಪಾತ್ರ ನಿಭಾಯಿಸಿರುವೆ. ಶೀಘ್ರವೇ ಕನ್ನಡದ ಸಿನೆಮಾ ಒಂದರಲ್ಲಿ ಪ್ರಧಾನಭೂಮಿಕೆ ಯಲ್ಲಿ ಅಭಿನಯಿಸಲಿದ್ದೇನೆ. ಇದೀಗಲೇ ಕೋಸ್ಟಲ್‍ವುಡ್ (ತುಳು ಚಿತ್ರರಂಗ), ಸ್ಯಾಂಡಲ್‍ವುಡ್ (ಕನ್ನಡ ಚಿತ್ರರಂಗ), ಟಾಲಿವುಡ್ (ತಮಿಳ್ ಚಿತ್ರರಂಗ)ನಲ್ಲಿ ನಟಿಸಿರುವ ಸೌರಭ್ ಭಂಡಾರಿ ಹಿಂದಿ ಚಿತ್ರರಂಗ ಬಾಲಿವುಡ್‍ನತ್ತ ಹೆಜ್ಜೆಯನ್ನೂರಲು ಆಶಯವ್ಯಕ್ತಪಡಿಸಿದ್ದಾರೆ.

ಡಾಕ್ಟರೇಟ್ ಪದವಿಗೆ ಭಾಜನರಾದ ರೇಶ್ಮಾ ಉಳ್ಳಾಲ್

ಮುಂಬಯಿ, ಮಾ.03: ಸುಯೇಝ್ ಪ್ರಾಜೆಕ್ಟ್‍ಸ್‍ನಲ್ಲಿ ಎಕ್ಸಿಕ್ಯೂಟಿವ್ ಕಾಪೆರ್Çೀರೇಟ್ ಕಮ್ಯುನಿಕೇಶನ್ (ಪಿಆರ್) ಆಗಿರುವ ರೇಶ್ಮಾ ಜಿ.ಉಳ್ಳಾಲ್ ಇವರು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ| ಜೋಗನ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಕರಾವಳಿಯಲ್ಲಿ ತೃತೀಯ ಲಿಂಗಿಗಳ ಬದುಕು ಮತ್ತು ಜೀವನ ಸಂಗ್ರಾಮ ಸಾಮಾಜಿಕ ಅಧ್ಯಯನ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಪತ್ರಕರ್ತ ರಾಮಕೃಷ್ಣ ಆರ್ ಅವರ ಪತ್ನಿ ಮತ್ತು ಗಂಗಾಧರ ಶೆಟ್ಟಿ ಮತ್ತು ನಳಿನಾಕ್ಷಿ ದಂಪತಿ ಪುತ್ರಿ


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಾಮ ನಿರ್ದೇಶನ - ಸದಸ್ಯರಾಗಿ ಕಡಂದಲೆ ಸುರೇಶ್ ಎಸ್.ಭಂಡಾರಿ ನೇಮಕ 

ಮುಂಬಯಿ, ಮಾ.03: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಾಮ ನಿರ್ದೇಶನ ಸದಸ್ಯರಾಗಿ ಕಡಂದಲೆ ಸುರೇಶ್ ಎಸ್.ಭಂಡಾರಿ ನೇಮಕ ಗೊಂಡಿದ್ದಾರೆ. ಕರ್ನಾಟಕ ಸರಕಾರದ ನಿರ್ದೇಶನದ ಮೇರೆಗೆ ನಾಮ ನಿರ್ದೇಶನ ಸದಸ್ಯರನ್ನು ತುಳು ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ನೇಮಕ ಗೊಳಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ತಿಳಿಸಿದ್ದಾರೆ.


ಮುಂಬಯಿಯಲ್ಲಿನ ತುಳು-ಕನ್ನಡಿಗರ ರಾಯಭಾರಿ ಎಂದೇ ಹೆಸರಾಂತ ಕಡಂದಲೆ ಸುರೇಶ್ ಭಂಡಾರಿ ಅವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯರಾಗಿದ್ದು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ, ಅಧ್ಯಕ್ಷರಾಗಿ, ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷರಾಗಿರುವರು. ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕರಾಗಿ, ಅನಘಾ ಇಂಟರ್‍ನೇಶನಲ್ ಸಂಸ್ಥೆಯ ಮಾಲೀಕರು. ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ (ನೋ.) ಕಪ್‍ಪರೇಡ್ ಮುಂಬಯಿ ಇದರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ನಾಗೇಶ್ವರ ಸಿನಿ ಕ್ರಿಯೇಷನ್ಸ್‍ನ ಆಡಳಿತ ನಿರ್ದೇಶಕ, ಚಲನಚಿತ್ರ ನಿಮಾಪಕ, ಉದಾರ ದಾನಿ, ಸಮಾಜ ಸೇವಕರೆಣಿಸಿ ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತದ ನೂರಾರು ತುಳು-ಕನ್ನಡ ಸಂಘಸಂಸ್ಥೆಗಳ ಪೆÇೀಷಕರಾಗಿಯೂ ಶ್ರಮಿಸುತ್ತಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

A Letter to CM Yediyurappa from Jaya Shreekrishna Parisara Premi SamitiA Letter to CM Yediyurappa from Jaya Shreekrishna Parisara Premi Samiti
Udupi BasketUdupi Basket
Veez Konkani Issue # 129Veez Konkani Issue # 129
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Our ABBA will never be forgotten - A TributeOur ABBA will never be forgotten - A Tribute
Hotte Thumba Tiffin Services at Kallianpura, Santhekatte and Kemmannu.Hotte Thumba Tiffin Services at  Kallianpura, Santhekatte and Kemmannu.
Smparka Feb 2020Smparka Feb 2020
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Kemmann.com Face Book

Click here for Kemmannu Knn Facebook Link

Sponsored Albums