Brief Mumbai - Mangalore news with pictures
Kemmannu News Network, 23-06-2020 15:25:09

ಸಾಹಿತ್ಯದ ಬಯಲ ಬೆಟ್ಟ ಡಾ. ನಾ. ಮೊಗಸಾಲೆ ಕೃತಿ ಬಿಡುಗಡೆ
ಬೆಳ್ತಂಗಡಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡ ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರ ವ್ಯಕ್ತಿ-ಸಾಧನೆಗಳ ಪರಿಚಯದ ‘ಸಾಹಿತ್ಯದ ಬಯಲ ಬೆಟ್ಟ ಡಾ. ನಾ. ಮೊಗಸಾಲೆ’ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಶುಕ್ರವಾರ ಬಿಡುಗಡೆಗೊಂಡಿತು.
ಈ ಕೃತಿಯನ್ನು ಖ್ಯಾತ ವಿಮರ್ಶಕರೂ ಬರಹಗಾರರೂ ಆದ ಡಾ. ಬಿ. ಜನಾರ್ದನ ಭಟ್‍ರವರು ಬರೆದಿದ್ದರು. ಕನ್ನಡ ಸ್ವಾರಸ್ವತ ಲೋಕದಲ್ಲಿ ವಿಶಿಷ್ಟ ಸಾಧನೆ ಮಾಡಿದ ನಾ. ಮೊಗಸಾಲೆಯವರು ಸಂಘಟಕರೂ, ಬರಹಗಾರರೂ ಆಗಿದ್ದಾರೆ. ಮೊಗಸಾಲೆಯವರ ಪರಿಚಯ ಕೃತಿಯನ್ನು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವುದು ಸಂತಸದ ವಿಚಾರ. ಇವರಿಂದ ಸಾಹಿತ್ಯ ಸೇವೆ ನಿರಂತರವಾಗಿ ನಡೆಯಲಿ ಎಂದು ಕೃತಿಯನ್ನು ಅನಾವರಣಗೊಳಿಸಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಹೇಮಾವತಿ ವೀ ಹೆಗ್ಗಡೆಯವರು ಡಾ. ನಾ. ಮೊಗಸಾಲೆ ದಂಪತಿಯವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಕಾಂತಾವರ ಕನ್ನಡ ಸಂಘದ ಮೂಲಕ ನಾಡಿಗೆ ನಮಸ್ಕಾರ ಎಂದು ಈಗಾಗಲೇ 299 ಸರಣಿ ಪುಸ್ತಕಗಳನ್ನು ಪ್ರಕಟಿಸಿ ನಾಡಿಗೆ ಸಮರ್ಪಿಸಿರುವ ಡಾ. ನಾ. ಮೊಗಸಾಲೆಯವರ ವ್ಯಕ್ತಿತ್ವ ಸಾಧನೆಗಳ ಬಗ್ಗೆ ಪರಿಚಯ ಪುಸ್ತಕ ಪ್ರಕಟವಾಗುತ್ತಿರುವುದು ಬಹಳ ವಿಶೇಷ. ಈ ಮೂಲಕ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಡಾ. ನಾ. ಮೊಗಸಾಲೆಯವರಿಗೆ ವಿಶೇಷ ಗೌರವವನ್ನು ಸಲ್ಲಿಸುವುದರ ಮೂಲಕ ವಿಶಿಷ್ಟ ಕಾರ್ಯವನ್ನು ಮಾಡಿ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ. ಯಶೋವರ್ಮರವರು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಲೇಖಕರಾದ ಡಾ. ಬಿ. ಜನಾರ್ದನ ಭಟ್, ಪ್ರೇಮಾ ಮೊಗಸಾಲೆ, ಸುಧಾ ಜೆ. ಭಟ್, ಉಜಿರೆ ಶ್ರೀ ಧ.ಮಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಪಿ. ಸಂಪತ್ ಕುಮಾರ್, ಡಾ. ವಿಘ್ನರಾಜ್ ಧರ್ಮಸ್ಥಳ ಮತ್ತು ಕಾರ್ಯಕ್ರಮದ ಸಂಯೋಜಕರಾದ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕಿನ ಕ.ಸಾ.ಪ.ದ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು.

ಧರ್ಮಸ್ಥಳದಲ್ಲಿ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಮತ್ತು ತರಬೇತಿ ಕಾರ್ಯಾಗಾರದ ಉದ್ಘಾಟನೆ: ವಿಪತ್ತು ನಿರ್ವಹಣೆ ಸಾಮಾಜಿಕ ಹೊಣೆಗಾರಿಕೆಯಾಗಿದೆ.
ಉಜಿರೆ: ಸ್ವಯಂ ಸೇವಕರು ಧೈರ್ಯ, ತ್ಯಾಗ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವ ಹೊಂದಿದ್ದು, ಸ್ವಯಂ ಸ್ಪೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು ಹಾಗೂ ಸಿದ್ಧರಾಗಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಆಯೋಜಿಸಿದ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಮತ್ತು ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ತಕ್ಷಣ ಸ್ಪಂದಿಸಬೇಕು. ಮೊದಲು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಬಳಿಕ ಇತರರ ರಕ್ಷಣೆಗೆ ನೆರವಾಗಬೇಕು. ಪ್ರಜ್ಞಾವಂತರಾಗಿ ತಾವೂ ಬದುಕಿ, ಇತರರೂ ಬದುಕಲು ನೆರವಾಗುವುದು ಮಾನವಧರ್ಮವಾಗಿದೆ. ಆಪತ್ತು ನಿರ್ವಹಣೆ ಮಾಡಲು ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ವೈಜ್ಞಾನಿಕವಾಗಿ ಶಿಸ್ತು ಬದ್ಧವಾಗಿ ವಿಪತ್ತು ನಿರ್ವಹಣೆ ಸ್ವಯಂ ಸೇವಕರಿಗೆ ಮಾಹಿತಿ, ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯವಾಗಿದೆ. ರಕ್ಷಣಾ ಪರಿಕರಗಳ ಸಮರ್ಪಕ ಬಳಕೆ ಬಗ್ಯೆಯೂ ಅವರಿಗೆ ಮಾಹಿತಿ ನೀಡಲಾಗುವುದು. ಸ್ವಯಂ ಸೇವಕರು ತಮ್ಮ ಮನೆಯವರಿಗೂ, ನೆರೆಕರೆಯವರಿಗೂ ವಿಪತ್ತು ನಿರ್ವಹಣೆ ಬಗ್ಯೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ರಾಜ್ಯದ 55 ಸೂಕ್ಷ್ಮ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗುವುದು.
ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಸೂಕ್ತ ತರಬೇತಿಯಿಂದ ಸ್ವಯಂ ಸೇವಕರು ಉತ್ತಮ ರೀತಿಯ ಸೇವೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು. ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಕೊಡುಗೆ ಮತ್ತು ಸಹಕಾರವನ್ನು ಧನ್ಯತೆಯಿಂದ ಅವರು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ, ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ಜನರ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ಡಿ. ಸುರೇಂದ್ರ ಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್‍ಲಾಲ್ ಮೀನಾ, ಮಂಗಳೂರು ಘಟಕದ ಅಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್. ಮಂಜುನಾಥ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿರ್ದೇಶಕ ಬೂದಪ್ಪ ಗೌಡ ಧನ್ಯವಾದವಿತ್ತರು.
ಮುಖ್ಯಾಂಶಗಳು:
• ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ 55 ಸೂಕ್ಷ್ಮ ಪ್ರದೇಶಗಳಲ್ಲಿ ಸ್ವಯಂ ಸೇವಕರ ತಂಡಗಳನ್ನು ರಚಿಸಿ ತರಬೇತಿ ನೀಡಲಾಗುವುದು.
• ಪ್ರಥಮವಾಗಿ ಬೆಳ್ತಂಗಡಿ ತಾಲ್ಲೂಕಿನ 200 ಸ್ವಯಂ ಸೇವಕರ ತಂಡ ಸೋಮವಾರ ಧರ್ಮಸ್ಥಳದಲ್ಲಿ ಉದ್ಘಾಟನೆಗೊಂಡಿತು.
• ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್‍ಲಾಲ್ ಮೀನಾ ವಿಪತ್ತು ನಿರ್ವಹಣೆ ಹಾಗೂ ಪರಿಕರಗಳ ಬಳಕೆ ಬಗ್ಯೆ ತರಬೇತಿ ನೀಡಿದರು.
• ತಮ್ಮನ್ನು ಮೊದಲು ರಕ್ಷಣೆ ಮಾಡಿಕೊಂಡು ಬಳಿಕ ಇತರರ ರಕ್ಷಣೆ ಮಾಡಬೇಕು.
• ಸ್ವಯಂ ಸೇವಕರಿಗೆ ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು.
• ಸ್ವಯಂ ಸೇವಕರ ತಂಡ ಕೊಡೆಯಂತೆ ಆಪತ್ಕಾಲದಲ್ಲಿ ರಕ್ಷಣೆಗಾಗಿ
• ನೇತ್ರಾವತಿ ಸ್ನಾನಘಟ್ಟದಲ್ಲಿ ವಿಪತ್ತು ನಿರ್ವಹಣೆ ಬಗ್ಯೆ ಪ್ರಾತ್ಯಕ್ಷಿಕೆ ನಡೆಯಿತು.
ಯಾಂತ್ರೀಕೃತ ಕೃಷಿ ಪ್ರಾತ್ಯಕ್ಷಿಕೆ
ಉಜಿರೆ: ಧರ್ಮಸ್ಥಳದಲ್ಲಿ ಸಹ್ಯಾದ್ರಿ ವಸತಿ ಗೃಹದ ಬಳಿ ಹತ್ತು ಎಕ್ರೆ ಪ್ರದೇಶದಲ್ಲಿ ಸೋಮವಾರ ಯಾಂತ್ರೀಕೃತ ಕೃಷಿ ಬಗ್ಯೆ ಪ್ರಾತ್ಯಕ್ಷಿಕೆ ನಡೆಯಿತು.
ಕೂಲಿ ಕಾರ್ಮಿಕರ ಕೊರತೆ ಹಾಗೂ ಅಧಿಕ ವೆಚ್ಚದಿಂದಾಗಿ ರೈತರು ಇಂದು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದು ಯಾಂತ್ರೀಕೃತ ಕೃಷಿಯಿಂದ ಅಧಿಕ ಇಳುವರಿ ಹಾಗೂ ಲಾಭ ಪಡೆಯಬಹುದು ಎಂದು ರೈತರಿಗೆ ತಿಳುವಳಿಕೆ ನೀಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಸಕ್ತ ವರ್ಷದಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಬೇಸಾಯ ಮಾಡಲು ಉದ್ದೇಶೀಸಲಾಗಿದೆ ಎಂದು ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.





ಕಡಲ್ಕೊರೆತದ ಪ್ರದೇಶಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಮುಂಬಯಿ (ಉಳ್ಳಾಲ), ಜೂ.21: ಮಂಗಳೂರು ಇಲ್ಲಿನ ಉಳ್ಳಾಲ, ಸೋಮೇಶ್ವರದಲ್ಲಿ ಕಡಲ್ಕೊರೆತದ ಪ್ರದೇಶಗಳಿಗೆ ಇಂದಿಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯದ ಮುಜರಯಿ, ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.
ಸೋಮೇಶ್ವರದಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದ್ದು ಸಾರ್ವಜನಿಕರ ಮತ್ತು ಮೀನುಗಾರರ ದೂರಿನ ಹಿನ್ನಲೆಯಲ್ಲಿ ತಾನು ಅಧಿಕಾರಿಗಳೊಂದಿಗೆ ಈ ಭೇಟಿ ನೀಡಿದ್ದು ಸ್ಥಾನೀಯರ ಮತ್ತು ಮೀನುಗಾರರ ಮನೆಗಳನ್ನು ರಕ್ಷಣೆ ಮಾಡುವ ಅನಿವಾರ್ಯತೆ ಇದೆ ಎಂದೂ ಸಚಿವ ಪೂಜಾರಿ ತಿಳಿಸಿದರು.
ನಾಡಿನ ಭವಿಷ್ಯತ್ ಸಾಮಾಜಿಕ ಕಳಕಳಿ ಹಾಗೂ ಜಾಗೃತಿಗಾಗಿ - ಧ್ವನಿ ಎತ್ತುವರೇ ಸಂಪಾದಕರುಗಳ ಜಿಲ್ಲಾ ಒಕ್ಕೂಟ ರಚನೆ
ಮುಂಬಯಿ, ಜೂ. 21: ದ.ಕ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಾದ ಸಾಪ್ತಾಹಿಕ, ಮಾಸಪತ್ರಿಕೆ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆಒಟ್ಟು ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ. ಪ್ರಸಕ್ತ ಈ ಪತ್ರಿಕೆಗಳ ಸಂಪಾದಕರುಗಳು ಪತ್ರಿಕೆ ನಡೆಸಲು ಪಡುವ ಪಾಡು ಬಹಳಷ್ಟು. ಅಲ್ಲದೆ ನಾಡಿನ ಭವಿಷ್ಯತ್ ಸಾಮಾಜಿಕ ಕಳಕಳಿ ಹಾಗೂ ಜಾಗೃತಿಯನ್ನು ಮೂಡಿಸುತ್ತಿರುವ ಈ ಪತ್ರಿಕೆಗಳ ಸಂಪಾದಕರುಗಳಿಗೆ ಸರಕಾರದ ಯಾವುದೇ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದೆ.
ಈ ಬಗ್ಗೆ ಧ್ವನಿ ಎತ್ತುವರೇ ಸಂಪಾದಕರುಗಳ ಜಿಲ್ಲಾ ಒಕ್ಕೂಟ ರಚನೆ ಮಾಡಿ ಮಾಧ್ಯಮಕ್ಕೆ ಸರಕಾರದಿಂದ ನೀಡಲ್ಪಡುವ ಸಹಕಾರ ಹಾಗೂ ಪೆÇ್ರೀತ್ಸಾಹವನ್ನು ಪಡೆಯಲು ಶ್ರಮಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಾಡಿನ ಭವಿಷ್ಯತ್, ಸಾಮಾಜಿಕ ಕಳಕಳಿ ಜಾಗೃತಿ ಮೂಡಿಸುವ ಸದುದ್ದೇಶದೊಂದಿಗೆ ಕಾರ್ಯಾಚರಿಸುವ ಮೇಲ್ಕಾಣಿಸಿದ ಪತ್ರಿಕೆಗಳ ಸಂಪಾದಕರು ತಮ್ಮ ವಿಳಾಸವನ್ನು ಈ ಕೆಳಗೆ ಕಾಣಿಸಿದ ವಿಳಾಸಕ್ಕೆ ಕಳುಹಿಸಿ ಕೊಡಬೇಕಾಗಿ ಈ ಮೂಲಕ ಕೋರಿಕೆ. ಇ-ಮೇಲ್: ಠಿoovಚಿಡಿiಣuಟumಚಿgಚಿziಟಿe@gmಚಿiಟ.ಛಿom ಸಂಪಾದಕರು, ಪೂವರಿ ಕರೆ: 9448177400, ಸಂಪಾದಕರು, ಗಡಿನಾಡಧ್ವನಿ ಕರೆ : 9901726144 ಇವರನ್ನು ಸಂಪರ್ಕಿಸಬಹುದು ಎಂದು ಪೂವರಿ ಸಂಪಾದಕರು ವಿಜಯ್‍ಕುಮಾರ್ ಹೆಬ್ಬಾರಬೈಲು ಈ ಮೂಲಕ ತಿಳಿಸಿದ್ದಾರೆ.

ಕರ್ನಾಟಕ ಪತ್ರಕರ್ತರಕ್ಷೇಮಾಭಿವೃದ್ಧಿ ಸಂಘ ಪುತ್ತೂರುತಾ | ಅಧ್ಯಕ್ಷರಾಗಿ ವಿಜಯಕುಮಾರ್ ಹೆಬ್ಬಾರಬೈಲು ನೇಮಕ
ಪುತ್ತೂರುಕರ್ನಾಟಕ ಪತ್ರಕರ್ತರಕ್ಷೇಮಾಭಿವೃದ್ಧಿ ಸಂಘದ ಪುತ್ತೂರುತಾಲೂಕುಘಟಕದ ನೂತನ, ಪ್ರಥಮಅಧ್ಯಕ್ಷರಾಗಿ ಪೂವರಿ ತುಳು ಮಾಸಿಕ ಪತ್ರಿಕೆ ಪ್ರಧಾನ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲುಇವರನ್ನು ನಿಯುಕ್ತಿಗೊಳಿಸಿದೆ ಎಂದುಕರ್ನಾಟಕ ಪತ್ರಕರ್ತರಕ್ಷೇಮಾಭಿವೃದ್ಧಿ ಸಂಘದರಾಜ್ಯಾಧ್ಯಕ್ಷಎಂ.ಟಿಪ್ಪುವರ್ಧನ ಬೆಂಗಳೂರು ಇವರು ಪ್ರಕಟಣೆ ಹೊರಡಿಸಿದ್ದಾರೆ.
1992ರಲ್ಲಿ ‘ತುಳುವೆರೆ ತುಡರ್’ ಪತ್ರಿಕಾ ಮಂಡಳಿ ಸದಸ್ಯರಾಗಿ, 1999ರಲ್ಲಿ ಕೆನರಾಟೈಮ್ಸ್ ಪತ್ರಿಕಾ ಬಳಗದಲ್ಲಿ ಪ್ರತಿನಿಧಿಯಾಗಿ ಸೇರ್ಪಡೆಗೊಳ್ಳುವ ಮೂಲಕ ಪತ್ರಿಕಾಕ್ಷೇತ್ರಕ್ಕೆ ಕಾಲಿರಿಸಿದ ವಿಜಯಕುಮಾರ್ ಭಂಡಾರಿಯವರು ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ, ಪುತ್ತೂರುತಾಲೂಕು ಪತ್ರಕರ್ತರ ಸಂಘದ ಸದಸ್ಯ, ಜನಾಂತರಂಗ, ಕರಾವಳಿ ಅಲೆ, ಕರಾವಳಿ ಮಾರುತ, ಕಾರವಲ್, ಉತ್ತರದೇಶ ಮುಂತಾದ ಪತ್ರಿಕೆಯ ವರದಿಗಾರರಾಗಿ ದಿ ಟೈಮ್ಸ್‍ಆಫ್‍ಕುಡ್ಲ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಸವಿತಾವಾಣಿ, ಕಚ್ಚೂರುವಾಣಿ, ತುಳುಬೊಳ್ಳಿ, ಮದಿಪು ಸಹಿತ ಅನೇಕ ಕನ್ನಡ-ತುಳು, ಮಾಸಿಕ ಪತ್ರಿಕೆಗಳ ಹವ್ಯಾಸಿ ಬರಹಗಾರರಾದ ಹೆಬ್ಬಾರಬೈಲುರವರು ಕಳೆದ ಹಲವಾರು ವರ್ಷಗಳಿಂದ ಪೂವರಿ ಪತ್ರಿಕೆಯಲ್ಲಿ ಸಂಪಾದಕರಾಗಿ ಅನುಪಮ ಸೇವೆ ಸಲ್ಲಿಸುತ್ತಿರುವುದನ್ನು ಮನಗಂಡು 2020-22ನೇ ಸಾಲಿಗೆ ಪುತ್ತೂರುತಾಲೂಕು ಶಾಖೆಯಅಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿಆಯ್ಕೆ ಮಾಡಲಾಗಿದೆಎಂದುಕರ್ನಾಟಕ ಪತ್ರಕರ್ತರಕ್ಷೇಮಾಭಿವೃದ್ಧಿ ಸಂಘ (ರಿ.), ಬೆಂಗಳೂರು ಕೇಂದ್ರ ಸಮಿತಿ ಪ್ರಕಟಣೆ ತಿಳಿಸಿದೆ.
ಗಲ್ಫ್‍ನ ಅಬುಧಾಬಿಯಲ್ಲಿ ಕರಾವಳಿಯ ಯುವಕ ಯಶವಂತ್ ಪೂಜಾರಿ ಮೃತ - ಪಾಥಿರ್üೀವ ಶರೀರ ತವರೂರಿಗೆ ರವಾನಿಸಿದ ಕನ್ನಡಿಗಾಸ್ ಹೆಲ್ಪ್‍ಲೈನ್ ತಂಡ
ಮುಂಬಯಿ (ದುಬಾಯಿ), ಜೂ.21: ಅಬುಧಾಬಿಯಲ್ಲಿ ಇತ್ತೀಚೆಗೆ ಮೃತರಾಗಿದ್ದ ಕರಾವಳಿಯ ಮಂಗಳೂರು ಅಡ್ಡೂರು (ಪೆÇಳಲಿ) ಮೂಲದ ಯುವಕ ಯಶವಂತ್ ಪೂಜಾರಿ ಅಪಘಾಟದಲ್ಲಿ ಮೃತ್ಯುವಶವಾಗಿದ್ದು, ಕನ್ನಡಿಗಾಸ್ ಹೆಲ್ಪ್‍ಲೈನ್ ಮತ್ತು ಯುಎಇ ಕನ್ನಡಿಗರು ತಂಡ ಪಾಥಿರ್üೀವ ಶರೀರವನ್ನು ತವರೂರಿಗೆ ರವಾನಿಸಿದ್ದು ಕುಟುಂಬಸ್ಥರು ಹುಟ್ಟುರಲ್ಲಿ ಇಂದು ಹಿಂದು ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿ ಕೊರೋನ ಸಂಕಷ್ಟದ ಸಮಯದಲ್ಲೂ ಮಾನವೀಯತೆ ಮೆರೆದು ಸೌಹಾರ್ದತೆ ಎತ್ತಿ ಹಿಡಿಯುವಂತಹ ಶ್ಲಾಘನೀಯ ಕಾರ್ಯಕ್ಕೆ ಸ್ಪಂದಿಸಿದ ಸರ್ವರ ಉಪಕಾರ ಸ್ಮರಿಸಿದರು.



ಯುಎಇ ಕನ್ನಡಿಗರು ಯುಎಇ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ಹಲವಾರು ಪರವಾನಗಿಗಳನ್ನು ಪಡೆದು ತಾಯ್ನಾಡಿಗೆ ರವಾನಿಸಲು ಯಶಸ್ವಿಯಾಗಿದ್ದು, ಈ ಹಿಂದೆ ಸತತ 13 ದಿನಗಳು ನಡೆಸಿದ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ. ಅಬುಧಾಬಿಯಲ್ಲಿ ನಮ್ಮೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತವಾಗಿದೆ ಎಂದು ಮುಝಮ್ಮಿಲ್ ಎಂಬವರು ಕನ್ನಡಿಗಾಸ್ ಹೆಲ್ಪ್‍ಲೈನ್ ತಂಡದ ಹಿದಾಯತ್ ಅಡ್ಡೂರ್ ಅವರಿಗೆ ಮುಂಜಾನೆ ಕರೆಮಾಡಿ ತಿಳಿಸಿದಾಗ, ಅವನ ವಿವರ ನೀಡಿ ಎಂದಾಗ ಯಶವಂತನ ಒಂದು ಫೆÇೀಟೋ ಮತ್ತು ಆಧಾರ್ ಕಾರ್ಡ್ ಮಾತ್ರವಿರುವುದು, ಪಾಸ್‍ಪೆÇೀರ್ಟ್ ಪ್ರತಿ, ಮೊಬೈಲ್ ನಂಬರ್ ಅಥವಾ ಬೇರೆ ಯಾವುದೇ ದಾಖಲೆಗಳಿಲ್ಲ, ಅಪಘಾತದ ಸುದ್ದಿ ತಿಳಿದು ಅವರ ಕುಟುಂಬದವರ ಸ್ಥಿತಿ ಶೋಚನೀಯವಾಗಿದೆ, ಸ್ವಲ್ಪ ಸಹಾಯ ಮಾಡಿ ಎಂದಾಗ ಇದನ್ನು ಸವಾಲಾಗಿ ಸ್ವೀಕರಿಸಿ ಹಿದಾಯತ್ ಮತ್ತು ತಂಡ ಕಾರ್ಯಪ್ರವೃತ್ತರಾಗಿದ್ದರು.
ಯಶವಂತ್ ಕುರಿತು ಮಾಹಿತಿ ಕಲೆ ಹಾಕಲು ಹೊರಟಾಗ ಆತ ಮೃತಪಟ್ಟಿದ್ದು, ಅನಾಥ ಶವವಾಗಿ ಶವಾಗಾರದಲ್ಲಿ ಇರುವುದು ತಿಳಿದು ಬಂದಾಗ ಮೃತರ ಹೆತ್ತವರು ತಮ್ಮ ಮಗನ ಮುಖವನ್ನು ಕೊನೆಯ ಬಾರಿಗೆ ನೋಡಬೇಕು ಹೇಗಾದರೂ ಮಾಡಿ ಮೃತದೇಹ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೊಂಡಾಗ, ಇದನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಲು ಹಿದಾಯತ್ ಅವರು ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ ಕನ್ನಡಿಗಾಸ್ ಹೆಲ್ಪ್‍ಲೈನ್ ಇದರ ಸಿರಾಜ್ ಪರ್ಲಡ್ಕ, ದಯಾ ಕಿರೋಡಿಯನ್, ನವೀದ್ ಮಾಗುಂಡಿ, ಅನಿವಾಸಿ ಕನ್ನಡಿಗರ ಒಕ್ಕೂಟದ ರಶೀದ್ ಬಿಜೈ, ಶರೀಫ್ ಸರ್ವೆ, ಬಶೀರ್ ಕೊಡ್ಲಿಪೇಟೆ, ಅಬುಧಾಬಿಯ ಪ್ರದೀಪ್ ಕಿರೋಡಿಯನ್, ಶ್ರೀಧರ್, ದೀಪಾ ಹಾಗೂ ಊರಿನಿಂದ ಆಸಿಫ್, ಮುಝಮ್ಮಿಲ್, ಭಾಗ್ಯರಾಜ್, ದೀಪಕ್, ರಾಜೇಶ್ ಮರೋಳಿ ಮತ್ತಿತರನ್ನು ಸೇರಿಸಿ ಮುನ್ನಡೆದರು.
ಕೊರೋನ ಸಂಕಷ್ಟದ ಈ ಸೂಕ್ಷ್ಮ ಸಮಯದಲ್ಲಿ ಪೆÇೀಸ್ಟ್‍ಮಾರ್ಟಂ ನಡೆಸಿ ಸಹಜ ಸಾವು ಎಂದು ಖಚಿತಪಡಿಸಿ, ಕೋವಿಡ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದ ನಂತರವೂ ಯಶವಂತರ ಪಾಸ್‍ಪೆÇೀರ್ಟ್, ವಿಸಾ, ಎಮಿರೇಟ್ಸ್ ಕಾರ್ಡ್ ಯಾವುದೂ ಇರದೇ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲು ಪರವಾನಗಿ ಪಡೆಯುವುದು ಅಸಾಧ್ಯ ಎಂಬಂತಿದ್ದಾಗ ಭಾರತೀಯ ರಾಯಭಾರಿ ಕಚೇರಿಯಲ್ಲಿ ರಶೀದ್ ಬಿಜೈ ನೇತೃತ್ವದಲ್ಲಿ ತಾತ್ಕಾಲಿಕ ಪಾಸ್‍ಪೆÇೀರ್ಟ್ ಮತ್ತು ಎಲ್ಲಾ ಪರವಾನಗಿ ಕೆಲಸ ತ್ವರಿತವಾಗಿ ನಡೆಯಿತು. ಈ ಸಂದರ್ಭದಲ್ಲಿ ದುಬೈ ಕಾನ್ಸುಲೇಟ್ ಮತ್ತು ಕಾರ್ಗೋ ಸಂಬಂಧಿಸಿದ ಎಲ್ಲಾ ಕೆಲಸಕ್ಕೂ ಕನ್ನಡಿಗಾಸ್ ಹೆಲ್ಪ್‍ಲೈನ್ ತಂಡ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರವೀಣ್ ಶೆಟ್ಟಿ ವಕ್ವಾಡಿ ಅವರೂ ಭರವಸೆ ನೀಡಿದ್ದರು. ಅದೇ ರೀತಿ ಊರಿನಲ್ಲಿ ಬೇಕಾದ ಎಲ್ಲಾ ಕಾನೂನಾತ್ಮಕ ಕೆಲಸವನ್ನು ನ್ಯಾಯವಾದಿ ಉಲ್ಲಾಸ್ ಪಿಂಟೋ ಮಾಡಿದರೆ, ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಅವರಿಂದ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ನೀಡಿ ಸಹಕರಿಸಿದ ಅಥಾವುಲ್ಲಾ ಜೋಕಟ್ಟೆ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಸಹಕರಿಸಿದ ಅಧಿಕಾರಿಗಳಾದ ಯತೀಶ್ ಉಳ್ಳಾಲ, ಪ್ರವೀಣ್ ಕುಮಾರ್ ಸರ್ ಸೇವೆ ಅನನ್ಯ.
ಯಶವಂತ್ ಕುಟುಂಬದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ದೈನಂದಿನ ಚಟುವಟಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದ ಹಿದಾಯತ್ ಅವರು ಮೃತದೇಹ ರವಾನಿಸಲು ಉಂಟಾಗುವ ಖರ್ಚುನ್ನು ಕನ್ನಡಿಗರ ತಂಡವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಭರವಸೆ ನೀಡಿದರು, ಅಬುಧಾಬಿಯಲ್ಲಿದ್ದ ಮೃತದೇಹ ದುಬೈ ಮೂಲಕ ತಾಯ್ನಾಡಿಗೆ ತಲುಪಬೇಕೆಂದು ಅಂತಿಮವಾದಾಗ ದುಬೈನಲ್ಲಿ ಪೆÇಲೀಸ್ ಮತ್ತು ಇತರ ಪರವಾನಗಿ ಕೆಲಸವನ್ನು ಹಮೀದ್ ಸತ್ತಿಕಲ್ಲ್ ನಡೆಸಿಕೊಟ್ಟು ಪೂರ್ತಿಗೊಂಡ ನಂತರ ಮೃತದೇಹದೊಂದಿಗೆ ಅಂಬ್ಯುಲೆನ್ಸ್‍ನಲ್ಲಿ ಸಿರಾಜ್ ಪರ್ಲಡ್ಕ, ಅಬುಧಾಬಿಯಿಂದ ದುಬೈ ತಲುಪಿ ದುಬೈನಲ್ಲಿ ನವೀದ್ ಮಾಗುಂಡಿ, ದಯಾ ಕಿರೋಡಿಯನ್, ಇಮ್ರಾನ್ ಖಾನ್, ಯಶವಂತ್ ಕರ್ಕೇರಾರವರು ಜೊತೆಗೂಡಿ ವಿಮಾನದಲ್ಲಿ ರವಾನಿಸುವ ಅಂತಿಮ ಕೆಲಸದಲ್ಲಿ ಪಾಲ್ಗೊಂಡು ಸಹಕರಿಸಿದರು. ಅದೇರೀತಿ ಮೃತದೇಹ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಸ್ವೀಕರಿಸಲು ಸಹಕರಿಸಿದ ಖಲೀಲ್ ತಂಡದ ಸೇವೆ ಸ್ತುತ್ಯರ್ಹ.
ಈ ಕುರಿತು ಕನ್ನಡಿಗಾಸ್ ಹೆಲ್ಪ್‍ಲೈನ್ ಇದರ ಹಿದಾಯತ್ ಅಡ್ಡೂರ್ ಮಾತನಾಡಿ ಈ ಸೇವೆಯ ಹಿಂದೆ ಎಲ್ಲಕ್ಕಿಂತಲೂ ಮಿಗಿಲಾದದ್ದು ಮಾನವಧರ್ಮ, ಯಶವಂತ್ ನಮ್ಮೂರ ಹುಡುಗ ಮತ್ತು ಕನ್ನಡಿಗ ಹಾಗಾಗಿ ಇದು ನಮ್ಮ ಕರ್ತವ್ಯ, ಕೊನೆಗೂ ಯಶವಂತನ ತಾಯಿಗೆ ಆತನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿದೆ ಎಂಬ ಖುಷಿ ಇದೆ. ಈ ಕೆಲಸದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಸಹೃದಯಿ ಸಹೋದರರು ಸಹಕಾರ ನೀಡಿದ್ದಾರೆ, ವಿಶೇಷವಾಗಿ ರಶೀದ್ ಬಿಜೈ ಹಾಗೂ ಇತರ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಅಲ್ಲದೇ ಯಶವಂತ್ ಕುಟುಂಬಕ್ಕೆ ಆಥಿರ್üಕವಾಗಿ ಸಹಾಯ ಮಾಡಲು ಅನಿವಾಸಿ ಕನ್ನಡಿಗರು ಮುಂದೆಬಂದಿದ್ದು, ಅದನ್ನೂ ಶೀಘ್ರದಲ್ಲೇ ತಲುಪಿಸಲಾಗುವುದು ಎಂದರು.

Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of Cecilia Menezes( 88 Years ) | LIVE From Kemmannu | Udupi

New year Mass | St. Theresa Church, Kemmannu | Udupi

Christman Mass | St. Theresa Church, Kemmannu | Udupi

Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi

Annual Day Calebration 2025 | Carmel English School, Kemmannu

Final Journey Of Francis Paul Quadros (59 Years) | LIVE From Udupi

Final Journey of Sudeep Sebastian Gordon Martis (55 years) | LIVE from Kalmady

Final Journey of Tyron Pereira (57 years) | LIVE from Kalmady, Udupi

Final Journey of Lawrence M Lewis (82 years) | LIVE from Milagres, Kallianpur, Udupi

Final Journey of Salvadore Fernandes (76 Years) | LIVE from Shirva | Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Focus Studio, Near Hotel Kidiyoor, Udupi

Earth Angels - Kemmannu Since 2023

Kemmannu Channel - Ktv Live Stream - To Book - Contact Here

Click here for Kemmannu Knn Facebook Link
Sponsored Albums
Exclusive
Annual Day Celebrated at Carmel English School, Kemmannu
Save Swarna River By Dr Gerald Pinto, Kallianpur
Udupi: Cooking without fire competition at Kemmannu Church [Video]
A ‘Wisdom Home of Memories’, a heritage Museum in Suratkal, Mangaluru
Celebrating 50 Years of Devotion: Iconic Konkani Hymn Moriye Krista Maye Marks Golden Jubilee
Arrest of Nuns’ at Chhattisgarh - Massive Protest Rally in Udupi Echoes a Unified Call for Justice and Harmony [Video]
MCC Bank Inaugurates Its 20th Branch in Byndoor
Mog Ani Balidan’ – A Touching Konkani Novel Released at Anugraha, Udupi [Photographs updated]
Milagres Cathedral celebrates Sacerdotal Ruby Jubilee of Mngr Ferdinand Gonsalves and Parish Community Day with grandeur
TODAY -
Write Comment
E-Mail To a Friend
Facebook
Twitter
Print 



