Brief Mumbai - Mangalore news with pictures


Rons Bantwal
Kemmannu News Network, 08-07-2020 14:38:38


Write Comment     |     E-Mail To a Friend     |     Facebook     |     Twitter     |     Print


ಶ್ರೀ ಮಠ ಮೂಡುಬಿದಿರೆಯಲ್ಲಿ  ಸ್ವಸ್ತಿಶ್ರೀಚಾರುಕೀರ್ತಿ ಸ್ವಾಮೀಜಿ ಚಾತುರ್ಮಾಸ  - ಕಲಶ ಸ್ಥಾಪನೆ-ಪೂರ್ವಾಚಾರ್ಯರ ಪೂಜೆ-ವೀರ ಶಾಶನ ಜಯಂತಿ ಆಚರಣೆ

ಮುಂಬಯಿ (ಆರ್‍ಬಿಐ), ಜು.06: ಮೂಡುಬಿದಿರೆಯಲ್ಲಿ ಶ್ರೀ ಜೈನಮಠದಲ್ಲಿ ಡಾ| ಸ್ವಸ್ತಿಶ್ರೀಚಾರುಕೀರ್ತಿ ಸ್ವಾಮೀಜಿ ಇವರ ಚಾತುರ್ಮಾಸ ಕಲಶ ಸ್ಥಾಪನೆ ಹಾಗೂ ವೀರ ಶಾಶನ ಜಯಂತಿ ಆಚರಣೆ ಇಂದಿಲ್ಲಿ ಮಂಗಳವಾರ ಮೂಡುಬಿದಿರೆ ಇಲ್ಲಿನ ಶ್ರೀಮಠದಲ್ಲಿ ಆಚರಿಸಲಾಯಿತು.

ಕಳೆದ ಭಾನುವಾರ ಗುರು ಪೂರ್ಣಿಮಾ ಪರ್ವ  ಪೂರ್ವಾಚಾರ್ಯರ ಪೂಜೆ ಸಲ್ಲಿಸಿ  ಶ್ರೀ ಜೈನ ಮಠದಲ್ಲಿ ಆಚರಿಸಲಾಗಿತ್ತು. ಗ್ರಹಣ ನಿಮಿತ್ತ ಚಾತುರ್ಮಾಸ ಕಲಶ ಸ್ಥಾಪಿಸದೆ ಇಂದು ಸೋಮವಾರ ಪ್ರಾತಃ ಕಾಲ ಅಭಿಷೇಕ, ಭಕ್ತಿ ಮೊದಲಾದ ಧಾರ್ಮಿಕ   ಕ್ರಿಯೆ ನಡೆಸಿದ ಶ್ರೀ ಗಳವರು ಅಪರಾಹ್ನ ಕಲಶ  ಸ್ಥಾಪಿಸಲಾಯಿತು.  ಪಟ್ಟದ ಪುರೋಹಿತ ಪಾರ್ಶ್ವನಾಥ್ ಇಂದ್ರ  ಶ್ರೀಗಳವರ ಮಾರ್ಗದರ್ಶನದಲ್ಲಿ ಪೂಜೆ ನೆರವೇರಿಸಿದರು. ಇದೇ ಪರ್ವಕಾಲದಲ್ಲಿ ಶ್ರೀ ಮಠದಲ್ಲಿ  ಸ್ವಸ್ತಿಶ್ರೀಚಾರುಕೀರ್ತಿಯರು ಚಾತುರ್ಮಾಸ ವ್ರತ ಕೈಗೊಂಡರು. ಈ ಸಂದರ್ಭದಲ್ಲಿ ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್, ಸುಧಾಕರ್ ಉಪಸ್ಥಿತರಿದ್ದರು.

ಪಟ್ಟಾಭಿಷೇಕ ಅದ ನಂತರ ಇದೇ ಪ್ರಥಮ ಬಾರಿ ದೇಶದಲ್ಲಿ  ಚಾತುರ್ಮಾಸ ವ್ರತ  ಕೈಗೊಂಡಿದ್ದು ಈ ಬಾರಿ ಸ್ವಸ್ತಿಶ್ರೀಯರು ವಿದೇಶ ಪ್ರಯಾಣ ಕೈಗೊಳ್ಳುವುದಿಲ್ಲ ಎಂದು ಶ್ರೀ ಜೈನಮಠ ಮೂಡುಬಿದಿರೆ ಇದರ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಈ ಸಂದರ್ಭ ಡಾ| ಸ್ವಸ್ತಿಶ್ರೀಚಾರುಕೀರ್ತಿ ಸ್ವಾಮೀಜಿಗಳು ಉಪದೇಶ ನೀಡಿ ಮಹಾವೀರರು ಸರಳವಾದ, ಸುಲಭವಾದ ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಅರ್ದ ಮಾಗಧಿ ಎನ್ನುವ ಪ್ರಾಕೃತ ಭಾಷೆಯಲ್ಲಿ ಕೇವಲಜ್ಞಾನವಾದ ನಂತರ ತಮ್ಮ 30ನೇ ವಯಸ್ಸಿನಿಂದ 32 ವರ್ಷಗಳ ಕಾಲ ಧರ್ಮೋಪದೇಶವನ್ನು ನಿರಂತರ ನೀಡಿದರು. ಅವರ ಒಟ್ಟು ಜೀವಿತಾವಧಿ 72 ವರ್ಷಗಳು ಅವರ ತತ್ತ್ವಗಳು, ಬೋಧನೆಗಳು ಸಾರ್ವಕಾಲಿಕ ಸತ್ಯ ಹಿತಕಾರಿಗಳಾಗಿತ್ತು. ಅವರ ಧರ್ಮ ಬೋದನೆಗಳನ್ನು ಅವರ ಗಣಧರರಾದ ವೈದಿಕ ಶ್ರೇಷ್ಠ ಗೌತಮರು ಸರ್ವರಿಗೂ ತಿಳಿಸುತ್ತಿದ್ದರು.  ಕ್ಷತ್ರಿಯ ರಾಜರು ಮೌರ್ಯರು, ಜ್ಞಾತೃ ವಂಶದವರು, ಶ್ರೇಣಿಕ, ಬಿಂಬಸಾರ, ಸಿಂಧು ದೇಶದ ಉದಯನ್, ಪರ್ಷಿಯಾದ ದಾರಾ ಶಾಹ  ಆಕರ್ಷಿತರಾಗಿದ್ದರು. ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ ಎಂಬ ಪಂಚ ಶೀಲಗಳನ್ನು ಬೋಧಿಸಿದರು. ಇವು ಮಾನವೀಯ ಗುಣಮೌಲ್ಯಗಳೆಂದು ತಿಳಿಸಿ ಸ್ವಕಲ್ಯಾಣ ಪರಕಲ್ಯಾಣದ ಆತ್ಮಸಾಧನೆಯು ಸರ್ವರಿಗೂ ಸುಖ ಮತ್ತು ಶಾಂತಿಯನ್ನು ನೀಡುತ್ತದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ನುಡಿದರು. ಪ್ರಾಣಿದಯೆ, ಕರುಣೆ, ಸಹಬಾಳ್ವೆ, ಕ್ಷಮೆ, ಮೃದು ಸ್ವಭಾವ, ಸರಳ ಸಾತ್ವಿಕ ಜೀವನ, ಶ್ರದ್ಧಾವಂತ, ವಿವೇಕವಂತ ಸಾಧಕರ ಲಕ್ಷಣ ಎಂದರು. ಧರ್ಮದಲ್ಲಿ ಒಳಸುಳಿದಿದ್ದ ಶಿಥಿಲಾಚಾರವನ್ನು ಹೋಗಲಾಡಿಸಿದರು. ಭಕ್ತ ಹಾಗೂ ಭಗವಂತನ ನಡುವೆ ಕಂದರ ಸಲ್ಲದು ಎಂದರು. ಜೀವಹಿಂಸೆಯಿಂದ, ರಕ್ತಪಾತದಿಂದ, ಪ್ರಾಣಿಗಳನ್ನು ನೋಯಿಸುವುದರಿಂದ, ಅತಿ ಭಾರಾರೋಪಣೆ ಮಾಡುವುದರಿಂದ, ಮೂಕಪ್ರಾಣಿಗಳ ವೇದನೆಯು ಭವ ಭವದಲ್ಲಿ ನಮ್ಮ ದುಃಖವನ್ನು ಹೆಚ್ಚಿಸುತ್ತದೆ. ಜೀವದಯಾಪರವಾದ ಅಹಿಂಸೆಯೇ ಪರಮಧರ್ಮವೆಂದು ಬೋಧಿಸಿದರು. ನೀವೂ ಬದುಕಿ, ಇತರರನ್ನೂ ಬದುಕಗೊಡಿ ಎಂದು ಹರಸಿದರು.

 

ನಾವುಂದ ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯಿಂದಲ್ಲಿ ಗುರುವಂದನೆ

ಮುಂಬಯಿ (ಆರ್‍ಬಿಐ), ಜು.07: ಕುಂದಾಪುರ ನಾವುಂದ ಇಲ್ಲಿನ ಸೌಹಾರ್ದ ಸಹಕಾರಿಯ ಕಛೇರಿಯಲ್ಲಿ ಕಳೆದ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ  ಗುರುವಂದನೆ ಕಾರ್ಯಕ್ರಮ ಜರುಗಿಸಲ್ಪಟ್ಟಿತು.  ಪುಷ್ಪಾಲಂಕಾರ ಮಾಡಿ, ದೀಪ ಬೆಳಗಿಸಿ ಅವಧೂತ ಭಗವಾನ್ ಶ್ರೀಗುರು ನಿತ್ಯಾನಂದ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುರುವಂದನೆ ನೆರವೇರಿಸಲಾಯಿತು.

ಭಗವಾನ್ ವ್ಯಾಸರ ಸ್ಮರಣೆಯೊಂದಿಗೆ ಗುರುಪೂರ್ಣಿಮೆ ಆಚರಿಸಲಾಗಿದ್ದು, ಸಹಕಾರಿಯ ನಿರ್ದೇಶಕರು
ಸಿಬ್ಬಂದಿಯವರು, ಶುಭದಾ ಶಾಲೆಯ ನಿರ್ದೇಶಕ ಆರ್ ಕೆ ಬಿಲ್ಲವ, ಸಂಚಾಲಕ ಶಂಕರ ನಾವುಂದ, ಸಹಕಾರಿಯ ಸಲಹೆಗಾರ ಕೆ.ಪುಂಡಲೀಕ ನಾಯಕ್, ಸಿಇಒ ಪೂಜಾ ಉಪಸ್ಥಿತರಿದ್ದು ನಮನ ಸಲ್ಲಿಸಿ ಗುರುವಂದನೆ ನೆರವೇರಿಸಿದರು.

ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ

ಮುಂಬಯಿ-ಕಿರಿಮಂಜೇಶ್ವರ (ಆರ್‍ಬಿಐ), ಜು.08: ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ ಮತ್ತು ಮಹತ್ವವಿದೆಯೆಂದು ಶುಭದಾ ಶಾಲೆಯ ಸಂಚಾಲಕರಾದ ಶಂಕರ ಪೂಜಾರಿ ಹೇಳಿದರು.

ಕುಂದಾಪುರ ನಾವುಂದ ಇಲ್ಲಿನ ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರು ಪೂರ್ಣಿಮೆಯ ಆಚರಿಸಿದ್ದು, ಶ್ರೀ ಗುರು ನಿತ್ಯಾನಂದ ಸ್ವಾಮಿ ಇವರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ನಮನ ಸಲ್ಲಿಸಿ ಶಂಕರ ಪೂಜಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯ ಆರ್.ಕೆ ಬಿಲ್ಲವ, ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಡಾ| ಕಲ್ಲಡ್ಕ ಪ್ರಭಾಕರ್ ಭಟ್ - ಎರ್ಮಾಳ್ ಹರೀಶ್ ಗುರುಭ್ಯೋ ನಮಃ

ಮುಂಬಯಿ, ಜು.06: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಣಿ ಸದಸ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಇವರನ್ನು ಇಂದಿಲ್ಲಿ ಸೋಮವಾರ ಮುಂಬಯಿ ಮಹಾನಗರದ ಹೆಸರಾಂತ ಸಂಘಟಕ, ಸಮಾಜ ಸೇವಕ, ಉತ್ತರ ಮುಂಬಯಿಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಗೋಪಾಲ್ ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ  ಎರ್ಮಾಳ್ ಹರೀಶ್ ಶೆಟ್ಟಿ ಭೇಟಿ ನೀಡಿ ಗುರುವಂದನೆ ಸಲ್ಲಿಸಿದರು.


ಶ್ರೀ ರಾಮ ವಿದ್ಯಾ ಕೇಂದ್ರ ಟ್ರಸ್ಟ್ ಕಲ್ಲಡ್ಕ ಇಲ್ಲಿನ ರಾಜೇಂದ್ರ ಸೌಧಕ್ಕೆ ಭೇಟಿಯನ್ನೀಡಿದ ಹರೀಶ್ ಶೆಟ್ಟಿ ಅವರು ಡಾ| ಪ್ರಭಾಕರ್ ಭಟ್ ಜೊತೆ ಕೊರೋನ ಮಹಾಮಾರಿಯ ಸಂಧಿಗ್ಧ ಪರಿಸ್ಥಿತಿಯಲ್ಲಿ ಭಾರತೀಯರ ಜೀವನ, ವ್ಯಪಾರ ವಹಿವಾಟು ಮತ್ತು ಜೀವನೋಪಾಯದ ಭವಿಷ್ಯತ್ತಿನ ನಡೆ ಇತ್ಯಾದಿ ವಿಷಯಗಳೊಂದಿಗೆ ಕುಶಲೋಪರಿ ನಡೆಸಿದರು.

ಜಾಗತಿಕವಾಗಿ ಪಸರಿಸಿದ್ದ ಕೋವಿಡ್ ಸಾಂಕ್ರಮಿಕ ರೋಗದಿಂದಾಗಿ ಕಳೆದ ಸುಮಾರು ಮೂರುವರೆ ತಿಂಗಳಿಂದ ದೇಶ-ವಿದೇಶಗಳಲ್ಲಿ (ವಿಶೇಷವಾಗಿ ಮುಂಬಯಿನಲ್ಲಿ) ಸಿಲುಕಿ ತೊಂದರೆಗೆ ಒಳಗಾಗಿದ್ದ ಅನಿವಾಸಿ ಕನ್ನಡಿಗರನ್ನು ತವರೂರ ತಮ್ಮತಮ್ಮ ಮನೆಗೆ (ತವರು ಮನೆಗೆ) ಕರೆಸಿಕೊಳ್ಳುವರೇ ಕರ್ನಾಟಕ ಸರಕಾರ, ಜಿಲ್ಲಾಡಳಿತಗಳಿಗೆ ಸಲಹಿ ಅನಿವಾಸಿಗರ ಮನೋಸ್ಥೈರ್ಯ ತುಂಬಿ ಧನತ್ಮಕ ಹೇಳಿಕೆಯನ್ನಿತ್ತು ನಾವೂ ತಮ್ಮೊಂದಿಗೆ ಇರುವುದಾಗಿ ಭರವಸೆಯನ್ನಿತ್ತು ಅನಿವಾಸಿ ಕನ್ನಡಿಗರಿಗೆ ಆದರದಿಂದ ಬರಮಾಡಿಕೊಂಡ ಪ್ರಭಾಕರ್ ಭಟ್ ಅವರ  ಸಮಯೋಚಿತ ಕಾರ್ಯವೈಖರಿಗೆ ಎರ್ಮಾಳ್ ಹರೀಶ್ ಪ್ರಶಂಸಿಸಿ ಅಭಿವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Obituary: Natalia Dsouza, 82yrs, Chikmaglore, Funeral Kemmannu.Obituary: Natalia Dsouza, 82yrs, Chikmaglore, Funeral Kemmannu.
All Contacts Numbers for Any Help related to CoronaAll Contacts Numbers for Any Help related to Corona
Land/Houses for Sale in Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kallianpur, Santhekatte, Uppor, Nejar, Kemmannu, Malpe, Ambalpady.
Milarchi Lara from Milagres Cathedral, KallianpurMilarchi Lara from Milagres Cathedral, Kallianpur
HotteTumba Fish Court - UdupiHotteTumba Fish Court - Udupi
Rozaricho Gaanch - December 2020Rozaricho Gaanch - December 2020
Milarchi Lara December 2020Milarchi Lara December 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi