Brief Mumbai - Mangalore news with pictures


Rons Bantwal
Kemmannu News Network, 06-09-2020 11:07:36


Write Comment     |     E-Mail To a Friend     |     Facebook     |     Twitter     |     Print


ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳದ ನೆರವು

ಉಜಿರೆ: ವಿದ್ಯಾಕ್ಷೇತ್ರಕ್ಕೆ ಧರ್ಮಸ್ಥಳದಿಂದ ಸತತವಾಗಿ ಸಹಕಾರ ಮತ್ತು ಪೆÇ್ರೀತ್ಸಾಹ ನೀಡುತ್ತಾ ಬರಲಾಗಿದೆ. ವಿದ್ಯಾಸಂಸ್ಥೆಗಳಿಗೆ ಕೊಡುವ ಸಹಕಾರದಲ್ಲಿ ವಿಶೇಷವಾಗಿ ಬೆಂಚು-ಡೆಸ್ಕ್‍ಗಳನ್ನು ಸಿಮೆಂಟ್‍ನಿಂದಲೇ ತಯಾರಿಸಿ ಕೊಡಲಾಗುತ್ತಿದೆ.

ಮರದ ಬಳಕೆ ಇಲ್ಲದೆ ಸಿಮೆಂಟ್ ಮತ್ತು ತೆಂಗಿನ ಮರದ ಕಾಂಡದಿಂದ ತಯಾರಿಸಲಾದ ಪರಿಸರ ಸ್ನೇಹಿ ಬೆಂಚು-ಡೆಸ್ಕ್‍ಗಳನ್ನು 1990 ನೇ ಇಸವಿಯಿಂದ ಇದುವರೆಗೆ ಕರ್ನಾಟಕ ರಾಜ್ಯದ 9645 ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಫಾರಸಿನೊಂದಿಗೆ ರೂ. 17 ಕೋಟಿ ಮೌಲ್ಯದ ಬೆಂಚು-ಡೆಸ್ಕ್‍ಗಳನ್ನು ನೀಡಲಾಗಿದೆ.
ಈ ವರ್ಷದ ಬಜೆಟ್‍ನಲ್ಲಿ ಇದಕ್ಕಾಗಿ ರೂ. ಒಂದು ಕೋಟಿ ನಿಗದಿಪಡಿಸಲಾಗಿದೆ.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅಧ್ಯಾಪಕರಿಗೆ ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದನೆಗಳನ್ನು ತಿಳಿಸುತ್ತಾ, ಕೊರೊನಾ ಮುಕ್ತ ಮುಂದಿನ ದಿನಗಳಲ್ಲಿ ಹೆಚ್ಚಿನ ಶ್ರದ್ಧೆಯಿಂದ ವಿದ್ಯಾದಾನ ಮಾಡುವಂತೆ ಸಂದೇಶವನ್ನು ನೀಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.

 

ಪಠ್ಯಪುಸ್ತಕದಲ್ಲಿ ಮಹಾವೀರ ಸ್ವಾಮಿ ಇತಿಹಾಸ-ಸಂದೇಶ ತಪ್ಪು ಸರಿ ಪಡಿಸಲು - ಕರ್ನಾಟಕ ಶಿಕ್ಷಣ ಸಚಿವರಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಕೆ

ಮುಂಬಯಿ (ಆರ್‍ಬಿಐ), ಸೆ.04: ನಮ್ಮ ದೇಶದ ಭಾರತಿ ಯ ಪ್ರಾಚೀನ ಧರ್ಮ ಗಳಲ್ಲಿ ಒಂದಾದ ಜೈನ ಧರ್ಮ ಮೂಲ ಭಾರತ ದೇಶದ ಅನಾದಿನಿದನ ಪ್ರಾಚೀನ ಧರ್ಮ ವೆಂದು ಚಿರ ಪರಿಚಿತ ವಾಗಿದೆ ಭಗವಾನ್ ವೃಷಭ ವಿಷ್ಣು ವಿನ ಅವತಾರ  ಎಂದು ಸಹೋದರ ಧರ್ಮ  ವೈದಿಕ ಹಿಂದೂ ಧರ್ಮ  ಗ್ರಂಥ ಗಳಲ್ಲಿ ಉಲ್ಲೀಖಿ ತ ಗೊಂಡಿದೆ ಇದೀಗ ಶಿಕ್ಷಣ ಇಲಾಖೆ ಪಠ್ಯ ರಚನೆ ಸಮಿತಿ ಎಡವಟ್ಟಿ ನಿಂದ ಮಹಾವೀರ ಸ್ವಾಮಿ ಚರಿತ್ರೆ ಹಾಗೂ ಸಂದೇಶ ತಪ್ಪು ತಪ್ಪಾಗಿ ಮುದ್ರಿಸಲಾಗಿದೆ ಆದ್ದರಿಂದ ರಾಜ್ಯದ ದ್ವಿತೀಯ ಪಿಯುಸಿ ಚರಿತ್ರೆಯ  ಪಠ್ಯದ  (ಕನ್ನಡ  ಭಾಷೆ) ಪುಸ್ತಕದಲ್ಲಿ  ಮಹಾವೀರ ಸ್ವಾಮಿ ಇತಿಹಾಸ ಹಾಗೂ ಸಂದೇಶ ತಪ್ಪು ಸರಿ ಪಡಿಸಲು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಶ್ರೀ ಜೈನ ಮಠ ಮೂಡುಬಿದಿರೆ ಇದರ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅರಿಕೆ ಮಾಡಿದ್ದಾರೆ.

ಜೈನ ಧರ್ಮದ ಅದೆಷ್ಟೋ ಶಿಲ್ಪ ಕಲೆ ಸಾಹಿತ್ಯ ಸಂಸ್ಕೃತಿ ಕಲೆ ತನ್ನ ಸ್ವಂತಿಕೆ ಯ ಮೂಲಕ ಜನಪ್ರಿಯವಾಗಿದೆ  ಇದೀಗ ಚರಿತ್ರೆ ಹಾಗೂ ಜೈನ ಧರ್ಮ ದ  ಸಂದೇಶ ತಿರುಚಿ  ನಮ್ಮ ಧರ್ಮ ಕ್ಕೆ  ಅವಮಾನ, ಮಾಡಲಾಗಿದೆ  ತಪ್ಪುಗ್ರಹಿಕೆ, ನಿಜ ವಿಚಾರಗಳ ತಿರುಚುವಿಕೆ ಮುಂತಾದವುಗಳ ಮೇಲೆ ಅಹಿಂಸಾತ್ಮಕ ಹೋರಾಟ ಮಾಡಿ ಎಚ್ಚೆತ್ತು ಕೊಳ್ಳಬೇಕಿದೆ ಎಂಬ ಅಭಿಪ್ರಾಯ ಸಮಾಜದಲ್ಲಿ ಮೂಡಿದೆ. ಪಠ್ಯದಲ್ಲಿರುವ ತಪ್ಪು ಮಾಹಿತಿಗಳನ್ನು ಸರಿ ಪಡಿಸಲೇಬೇಕು ಎಂಬ ಆಗ್ರಹವನ್ನು ರಾಜ್ಯದಾದ್ಯಂತ ವಿವಿಧ ಜೈನ ಸಂಘಟನೆಗಳು ಮಾಡಿದ್ದು ಮಠಾಧಿಪತಿಗಳಾದ ನಮಗೆಲ್ಲ ಸಮಾಜಕ್ಕೆ ಉತ್ತರಿಸಬೇಕಾಗಿ ಇರುದರಿಂದ ಸಜ್ಜನ ರಾಜಕಾರಣಿ ಯಾದ ತಾವು ಸೂಕ್ತ ನಿರ್ಧಾರ ಕೈಗೊಂಡು ಸಮಾಜ ದ ಮನವಿ ಯನ್ನು ಪುರಸ್ಕರಿಸಿ  ತಪ್ಪು ಮಾಹಿತಿ ಉಳ್ಳ ಪಿಯುಸಿ  ಕನ್ನಡ ಪುಸ್ತಕ ತಡೆ ಹಿಡಿಯಬೇಕು ಇದರಲ್ಲಿ ಇರುವ ತಪ್ಪುಗಳನ್ನು ಸಚಿವರ ಗಮನಕ್ಕೆ ಶ್ರೀಗಳು ತಂದಿದ್ದಾರೆ.
ಪಿಯುಸಿ 2ನೇ ವರ್ಷದ  ಚರಿತ್ರೆ ಪುಸ್ತಕದಲ್ಲಿ ಕೆಲವು ವಾಕ್ಯಗಳು  ಪಠ್ಯ ರಚನೆ ಸಮಿತಿಯಲ್ಲಿ ತಪ್ಪು ವಿಚಾರ ಅಳವಡಿಸಿ  ಅಜ್ಞಾನ ತೋರಿಸಿದೆ ಪಠ್ಯ ರಚನಾ ಸಮಿತಿ ಪೂರ್ತಿಯಾಗಿ ವಿಷಯ ತಿಳಿಯದೇ ಕೆಲವೇ ಕೆಲವರ ವಿಚಾರಗಳನ್ನು ಒಟ್ಟುಗೂಡಿಸಿ ಪಠ್ಯಗಳನ್ನು ತಯಾರು ಮಾಡಿ ಭಾರತದ ಮುಂದಿನ ಪ್ರಜೆಗಳಾಗುವ ಮಕ್ಕಳ ತಲೆಗೆ  ತಪ್ಪು ಸಂದೇಶಗಳನ್ನು ನೀಡುತ್ತಿದೆ ಎಂಬುದನ್ನು ಇಲ್ಲಿ ನೋಡಬಹುದು.  ದ್ವಿತೀಯ ಪಿಯುಸಿ ಕನ್ನಡ ಪಠ್ಯದಲ್ಲಿ ಭಾರತದ ಇತಿಹಾಸ ಎಂಬ ವಿಚಾರದಲ್ಲಿ ಭಗವಾನ್ ಮಹಾವೀರರ ಬಗ್ಗೆ ಬಹಳ ತಪ್ಪು ವಿಚಾರದ ಪಠ್ಯ ಸಿದ್ಧವಾಗಿದೆ.

ಮಹಾವೀರರ ಜನ್ಮವು ಹಿಂದಿನ ಬಿಹಾರದ ವೈಶಾಲಿ, ಕುಂಡಲಪುರದಲ್ಲಿ ಆಯಿತು.  30ನೇ ವರ್ಷದಲ್ಲಿ ಮುನಿ ದೀಕ್ಷೆಯನ್ನು ಸ್ವೀಕರಿಸಿದರು. ಇವರಿಗೆ ಮದುವೆಯಾಗಿರಲಿಲ್ಲ. ಜಾತಿ ಸ್ಮರಣೆಯ ನಿಮಿತ್ತದಿಂದ ವೈರಾಗ್ಯ ಹೊಂದಿ ಮುನಿ ದೀಕ್ಷೆಯನ್ನು ಸ್ವೀಕರಿಸಿದರು. ತಂದೆ ತಾಯಿ ಇಬ್ಬರೂ ಮಹಾವೀರರ ದೀಕ್ಷಾ ಸಮಯದಲ್ಲಿ ಜೀವಂತವಾಗಿದ್ದರು. 12ವರ್ಷಗಳ ಕಾಲ ತಪಸ್ಸನ್ನು ಮಾಡಿದರು. ತದನಂತರ ಕೇವಲಜ್ಞಾನ ಪ್ರಾಪ್ತಿಯಾಯಿ ತು. 30 ವರ್ಷಗಳ ಕಾಲ ಧರ್ಮೋಪದೇಶ ಮಾಡುತ್ತಾ ಕ್ರಿ.ಪೂ 527 ರಲ್ಲಿ ನಿರ್ವಾಣ ಹೊಂದಿದರು. ಶ್ರಮಣ ಪರಂಪರೆ ಯ  ಮುಂದುವರಿದ ಭಾಗವೇ ದಿಗಂಬರ ಹಾಗೂ  ಶ್ವೇತಾಂಬರ ಪಂಥವಾಗಿದೆ. ಎರಡೂ ಪಂಗಡ ಏಕತೆಯಿಂದ ವಿಶ್ವದಾದ್ಯಂತ ಸುಮಾರು 60ಲಕ್ಷ ಸಂಖ್ಯೆ ಸಮುದಾಯವಿದೆ  ಶ್ವೇತಾಂಬರರು. ಇವರು ಮೂಲತಃ ಉತ್ತರ ಭಾರತ ದ ಕೆಲವು ಪ್ರಾಂತ್ಯ ದಲ್ಲಿ ಹೆಚ್ಚಾಗಿ ಇರುವರು ದಿಗಂಬರ ರು ಮಹಾರಾಷ್ಟ್ರ ಕರ್ನಾಟಕ,  ಮಧ್ಯ ಪ್ರದೇಶ, ಗುಜರಾತ್,ಉ. ಪ್ರ, ಅಸ್ಸಾಂ,  ರಾಜಸ್ತಾನ್, ತಮಿಳು ನಾಡು, ಕೇರಳ ದಲ್ಲಿ ಹೆಚ್ಚಾಗಿ ಇರುವರು

ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ, ಅಪರಿಗ್ರಹ  ವ್ರತ ಇವುಗಳು ಅಣುವ್ರತಗಳು ಆರಂಭ ದಲ್ಲಿ ಜೈನ ಧರ್ಮ ಕೋಸಲ, ವಂಗ ಮಗಧದಲ್ಲಿ ಸೀಮಿತವಾಗಿತ್ತು ಎಂಬ ತಪ್ಪು ಕಲ್ಪನೆ ಪ್ರಕಟಿಸಿದ್ದಾರೆ. ಹೀಗೆ ಸರಿಯಾಗಿ ಪ್ರಕಟಿಸ ಬೇಕಾಗಿದೆ. ಅಖಂಡ ಭಾರತದಾದ್ಯಂತ ಜೈನ ಧರ್ಮ ಅಸ್ತಿತ್ತ್ವದಲ್ಲಿದ್ದ ಅನಾದಿಕಾಲಿನ ಮೂಲ ಭಾರತೀಯ ಧರ್ಮ ಇದು ಕೇವಲ ಜೈನರ ನಂಬಿಕೆ ಅಲ್ಲ ಭಾರತೀಯ ಚರಿತ್ರೆಯ ವಾಸ್ತವ ಅರಿವು ಮಹಾವೀರ ಸ್ವಾಮಿ ತಮಗಿಂತ ಪೂರ್ವದಲ್ಲಿದ್ದ ಪಾರ್ಶ್ವನಾಥ ಸ್ವಾಮಿ ಹಾಗೂ ಒಟ್ಟು 23 ತಮಗಿಂತ  ಪೂರ್ವದ  ತೀರ್ಥಂಕರರ ಧರ್ಮವನ್ನು ಬೋಧಿಸಿ ಹೆಚ್ಚು ವ್ಯಾಪಕ ಗೊಳಿಸಿದರು ಬ್ರಹ್ಮ ಚರ್ಯ ಎನ್ನುವ 5ನೇ ಯ ಅಣು ವ್ರತ  ಸೇರಿಸಿ ಪಂಚ ಅಣುವ್ರತ  ಬೋಧಿಸಿದವರು. ಹಾಗಾಗಿ ನಮ್ಮ ಜೈನ ವಿದ್ವಾಂಸ ರ ಮುಖೆನ ಸರಿಯಾದ ಮಾಹಿತಿ ತಮಗೆ ಒದಗಿಸಿ ಕೊಡುವ ವ್ಯೆವಸ್ಥೆ ಮಾಡುತ್ತೇವೆ ಆದ್ದರಿಂದ ಮುಂದಿನ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಆಗುವ ಮೊದಲು  ಪಠ್ಯಪುಸ್ತಕ ಸರಿಪಡಿಸಿ ಪ್ರಕಟ ಮಾಡಬೇಕಾಗಿ ಸಚಿವರಿಗೆ ಲಿಖಿತವಾಗಿ ಚಾರುಕೀರ್ತಿ ಮನವಿ ಮಾಡಿದ್ದಾರೆ

ಶುಭದಾ ಶಾಲೆಯಲ್ಲಿ ನಾರಾಯಣಗುರು ಜಯಂತಿ

ಕಿರಿಮಂಜೇಶ್ವರ:- ಶುಭದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯ ಸಲಹೆಗಾರರಾದ ಕೆ.ಪುಂಡಲೀಕ ನಾಯಕರವರು ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸಿ ಶ್ರೀ ನಾರಾಯಣ ಗುರುಗಳು ಧರ್ಮಗಳ ವಿಚಾರದಲ್ಲಿ ಆಧ್ಯಾತ್ಮಿಕ ಜಗತ್ತಿನ ಓರ್ವ ಪ್ರಜ್ಞಾವಂತ ಚಿಂತಕರಾಗಿದ್ದರು, ಸ್ಪಷ್ಟಮಾತುಗಳ ಕ್ರೀಯಾಶೀಲ ಸಮಾಜ ಸುಧಾರಕರಾಗಿದ್ದರು.ಅವರ ಚಿಂತನೆಗಳು ಇಡೀ ಮಾನವ ಜನಾಂಗಕ್ಕೆ ಸಾರ್ವಕಾಲಿಕ ಸತ್ಯವನ್ನು ಬೋಧಿಸುವ ಕೈದಿವಿಗೆಗಳಾಗಿದ್ದರಿಂದಲೇ ನಾರಾಯಣ ಗುರುಗಳು ವಿಶ್ವಮಾನವರಾಗಿರುತ್ತಾರೆ ಎಂದು ಹೇಳಿದರು. ಸಂಚಾಲಕರಾದ ಶಂಕರ ಎಸ್ ಪೂಜಾರಿ, ಮುಖ್ಯಶಿಕ್ಷಕರಾದ ರವಿದಾಸ ಶೆಟ್ಟಿ, ಶಾಲಾ ಸಮಿತಿಯ ಸದಸ್ಯರಾದ ರಾಮಕೃಷ್ಣ ಬಿಲ್ಲವ, ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Obituary: Mercine Lewis (94). Baligere Kudru, KemmannuObituary: Mercine Lewis (94). Baligere Kudru, Kemmannu
Unbelievable Stunts on Beach by local boys| Freestyle Jumps | India | Udupi | KemmannuUnbelievable Stunts on Beach by local boys| Freestyle Jumps | India | Udupi | Kemmannu
The Tablet - International Catholic WeeklyThe Tablet - International Catholic Weekly
GSB delicacies at Hotte Thumba Fish Court UdupiGSB delicacies at Hotte Thumba Fish Court Udupi
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Computerised Clinical Laboratory, Kemmannu.Computerised Clinical Laboratory, Kemmannu.
Milarchi Lara - Bulletin Issue July 2020.Milarchi Lara - Bulletin Issue July 2020.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India