Brief Mumbai - Mangalore news with pictures
Kemmannu News Network, 22-11-2020 17:32:39
ಮರೆಯಾದ ‘ರವಿ’ಯಣ್ಣ !ರವಿ ಬೆಳಗರೆ ಸ್ಮøತಿ
ಮಾಧ್ಯಮ ಲೋಕದ ದೈತ್ಯ:
‘ರವಿ’ ಮರೆಯಾದ, ಕತ್ತಲಾವರಿಸಿದಂತೆ ಆಗಿದೆ. ನಿಜಾರ್ಥದ ‘ರವಿ’, ಬೆಳಕು ಹರಿಸುವ ರವಿ, ಇನ್ನು ನೆನೆಪು ಮಾತ್ರ. ರವಿ ಮರೆಯಾದದ್ದು ದೀಪಾವಳಿಯ ಬೆಳಕನ್ನು ಸಂಭ್ರಮಿಸುವ ದಿನಗಳಲ್ಲಿ. ‘ರವಿ’ ನೀನೇಕೆ ಹೋದೆ? ದೂರಾಗಿಬಿಟ್ಟೆಯಲ್ವ? ನೀನಿಲ್ಲವೆನ್ನುವುದನ್ನು ಜೀರ್ಣಿಸಿಕೊಳ್ಳಲು ಕಷ್ಟ. ರವಿ ಬೆಳಗರೆ ಎಂಬ ಹೆಸರೇ ಚುಂಬಕ ಶಕ್ತಿ. ಮಾಧ್ಯಮ ಲೋಕದ ದೈತ್ಯ ಪ್ರತಿಭೆ. ಸಾಹಿತ್ಯದ ಕಣಜ, ಜ್ಞಾನದ ಗಣಿ, ನೇರ ನುಡಿ, ದಿಟ್ಟ ನಡೆಯ ಬರಹಗಾರ. ಕಳೆದ ವಾರದ ಅಂಕಣದ ತನಕ ನಮ್ಮ ಜೊತೆ ಮಾತನಾಡಿದ ರವಿ ಮೌನಕ್ಕೆ ಜಾರಿದ ಎಂದರೆ ನಂಬಲಸಾಧ್ಯ.
ಸುದ್ದಿಮನೆಯ ಗೆಳೆಯ:
ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ 1992 ರಲ್ಲಿ ಉಪಸಂಪಾದಕನಾಗಿದ್ದಾಗ ನಮ್ಮದು ಜಿಗರ್‍ದೋಸ್ತ್. ಅವರು ಕರ್ಮವೀರದಲ್ಲಿ ನಾನು ಸಂಯುಕ್ತ ಕರ್ನಾಟಕದಲ್ಲಿ. ನಿತ್ಯ ಒಟ್ಟಿಗೆ ಒಡನಾಟ. ‘ರವಿಯಣ್ಣ’ ಎಂದೇ ಕರೆಯುತ್ತಿದ್ದೆ. ‘ಏ ಪೆರ್ಲ’ಎಂದರೆ ಅದೇನೋ ಪ್ರೀತಿ-ವಿಶ್ವಾಸ. ಪ್ರೀತಿಕೊಟ್ಟು ಬೆಳೆಸಿದರು. ಮಾರ್ಗದರ್ಶನ ನೀಡಿದರು. ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದರು. ಸಂಯುಕ್ತ ಕರ್ನಾಟಕದ ಬೆಂಗಳೂರಿನ ರೆಸಿಡೆನ್ಸಿ ಕಚೇರಿಯ ಹಿಂದಿನ ಹಾಸ್ಟಲ್ ಎಂಬ ಬರಾಕ್‍ನಲ್ಲಿ ನಮ್ಮಿಬ್ಬರ ಜೀವನ. ಅಲ್ಲೇ ವಾಸ್ತವ್ಯ. ಮಂಗಳೂರಿನ ಕುಚ್ಚಲು ಅಕ್ಕಿ ಊಟ ಅಂದರೆ ರವಿಯಣ್ಣನಿಗೆ ಪಂಚಪ್ರಾಣ. ಬೇಕೆಂದಾಗ ಊಟಕ್ಕೆ ಹಾಜರ್. ಒಟ್ಟಿಗೆ ಊಟ, ಕುಶಲೋಪರಿ,ನಿದ್ರೆ ಎಲ್ಲವೂ, ಹಿರಿಯರಾದ ಶ್ಯಾಮರಾಯರು ಪತ್ರಿಕೆಯ ಸಂಪಾದಕರಾಗಿದ್ದರು. ಅವರದು ಮಿಲಿಟರಿ ಪದ್ಧತಿಯ ಶಿಸ್ತು, ಕಚೇರಿ, ಸುದ್ದಿಮನೆ ಒಡಾಟ ಎಲ್ಲದಕ್ಕೂ ಬಿಗು ಕ್ರಮ. ಕೆಲಸದ ನಂತರ ಜೊತೆಯಾಗಿ ಹರಟೆ, ಚಿಂತನೆ ವಾಗ್ಯುದ್ಧ, ಯೋಜನೆ ಯೋಚನೆ ನಡೆಯುತ್ತಿತ್ತು. ಗಣೇಶ ಕಾಸರಗೋಡು, ಉದಯ ಮರಕ್ಕಿಣಿ, ಸನತ್ ಬೆಳಗಲಿ ಜೊತೆ ನಮ್ಮದು ಒಂದು ಅನುಭವ ಮಂಟಪ. ಶೂನ್ಯ ಸಿಂಹಾಸನ ರವಿಯಣ್ಣನಿಗೆ ಮಾತಿನ ವೈಖರಿ, ಸಮಯದ ಮಿತಿಯಿಲ್ಲದೆ ಹರಿದದ್ದೂ ಇದೆ. ಜನಾರ್ಧನ ಪೂಜಾರಿಯವರ ಸಾಲಮೇಳದ ‘ರಾಜದೂತ್’ ಬೈಕ್ ರವಿಯಣ್ಣನ ಕುದುರೆ. ‘ ಏ ಪೆರ್ಲ ಬಾರೋ ಕೂಡು, ನಡಿಯೋಣ’ ಅಂದರೆ ಸಾಕು ಕುದುರೆ ಹತ್ತಲೇ ಬೇಕು.ರೆಸಿಡೆನ್ಸಿ ರಸ್ತೆ , ಕಬ್ಬನ್‍ಪಾರ್ಕ್ ದಾಟಿ ಪ್ರೆಸ್‍ಕ್ಲಬ್ ದಾರಿ ಹಿಡಿಯುತ್ತದೆ. ಸವಾರಿಗೆ ಒಂದೇ ಸ್ಟಾಪ್. ಪ್ರೆಸ್‍ಕ್ಲಬ್‍ನಲ್ಲಿ ದಿಗ್ಗಜರ ಸಮಾಗಮ. ಲಂಕೇಶ್ ಆದಿಯಾಗಿ ಹಿರಿಯರ ಜೊತೆ ಕೂಡುವ ಭಾಗ್ಯ ಕಲ್ಪಿಸಿದ ನಿಷ್ಕಲ್ಮಶ ಪ್ರೀತಿಯ ರವಿಯಣ್ಣ. ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ದಿಗ್ಗಜರ ಜೊತೆ ಭೇಟಿ ಮಾಡಿಸಿ ಬೆಂಗಳೂರಿನ ಭಯ ಓಡಿಸಿದ ರವಿಯಣ್ಣ. ತನ್ನಂತೆ ಇತರರೂ ಬೆಳೆಯಬೇಕು ಎಂಬ ಏಕೈಕ ಆಸೆ. ಗುಂಪಿನೊಳಗೆ ಕೂತಾಗ ಸಮಯದ ಪರಿವೆಯೇ ಇಲ್ಲ. ಸ್ಮೋಕ್ ಮತ್ತು ಗ್ಲಾಸ್ ಜೊತೆ ಕಾಲಕಳೆದದ್ದೇ ಗೊತ್ತಾಗದು. ನಾನು ಮಾತ್ರ ‘ಡ್ರೈ’. ರವಿಯಣ್ಣನ ಭಾಷೆಯಲ್ಲಿ ‘ಪ್ರಯೋಜನ ಇಲ್ಲ ಈ ಮಾರಾಯ’ ಎಂಬುದಾಗಿ ಮಂಗಳೂರು ಶೈಲಿಯಲ್ಲಿ ಉದ್ಗಾರವೆತ್ತಿ ತಬ್ಬಿಕೊಂಡು ಇತರರಿಗೆ ಪರಿಚಯಿಸುವ ಮುಕ್ತ ಮನಸ್ಸಿನ ಅಣ್ಣ. ಕೈ ಹಿಡಿದುಕೊಂಡು ನಮ್ಮ ರೆಸಿಡೆನ್ಸಿ ರಸ್ತೆಯ ವಾಸ್ತವ್ಯದ ಮನೆಗೆ ಬರುವಾಗ ರಾತ್ರಿ 12 ಗಂಟೆ. ಎಷ್ಟೇ ಆದರೂ ‘ರಾಜದೂತ್’ ಏರಿದರೆ ರಾಜ ಸವಾರಿಯೇ. ಧೈರ್ಯದಿಂದ ಹಿಂದೆ ಕೂತು ಸೇಫ್ ರಿಟರ್ನ್. ರಾತ್ರಿ 12 ಕ್ಕೆ ಬಂದರೂ ಬೆಳ್ಳಿಗ್ಗೆ 3 ರಿಂದ 5 ರೊಳಗೆ ಕರ್ಮವೀರ ಸಂಪಾದಕೀಯ ರೆಡಿ. ಅದರ ಮೊದಲ ಓದುಗ ನಾನೇ. ರವಿಯಣ್ಣನ ಲೇಖನಿಯಿಂದ ಹೊರಸೂಸುವುದು ಅಕ್ಷರಗಳಲ್ಲ ಮುತ್ತುಗಳು. ಅಷ್ಟು ಸುಂದರ. ವಿಚಾರ ಪ್ರತಿಪಾದನೆಯಲ್ಲಿ ಎರಡು ಮಾತಿಲ್ಲ. ‘ಏ ಪೆರ್ಲ ಓದೋ’ ಎಂದು ಕೈಗಿಟ್ಟು ಓದಿಸಿಕೊಂಡು ‘ಹ್ಯಾಗಿದೆಯೋ?’ ಅನ್ನುವಷ್ಟು ಸಹೃದಯ. ದೊಡ್ಡ ಬರಹಗಾರ, ಜ್ಞಾನದ ಗಣಿ, ವಿಚಾರಗಳು ಸರಣಿಯಾಗಿ ಹರಿಯಬಲ್ಲ, ಹಾಗೆ ಸೃಷ್ಟಿಸÀಬಲ್ಲ ಅಕ್ಷರಬ್ರಹ್ಮ. ಆದರೂ ನಿಗರ್ವಿ. ಓದಿ ಮೆಚ್ಚಿ ಚರ್ಚಿಸಿ ಮುದ್ರಣಕ್ಕೆ ಕಳುಹಿಸುವ ಜಾಯಮಾನ. ಕರ್ಮವೀರ ಪ್ರತಿಕೆ ಸಿನಿಮಾಂಕಣಕ್ಕೆ ಉದಯ ಮರಕ್ಕಿಣಿಯವರಿಗೆ ನಾನೊಬ್ಬ ಸ್ಟೆಪ್ಪಿನ್ ಇದ್ದ ಹಾಗೆ. ಮರಕ್ಕಿಣಿ ಶೂಟಿಂಗ್‍ಗೆ ಹೋದಾಗಲೆಲ್ಲ ರವಿಯಣ್ಣನ ಬುಲಾವ್ “ಏ ಪೆರ್ಲ ಮರಕ್ಕಿಣಿ ಇಲ್ಲ- ಈ ವಾರ ಸಿನಿಮಾ ಪೇಜ್‍ಗೆ ಏನ್ಮಾಡುತ್ತಿಯಾ?” ಎಂದರೆ ಬರೆದುಕೊಡೋ ಜವಾಬ್ದಾರಿ ನನಗೆ. ಹಾಗೆಲ್ಲ ನನ್ನನ್ನು ಬರಹಕ್ಕೆ ಹಚ್ಚಿದ ಪ್ರೀತಿಯ ರವಿಯಣ್ಣ ಸಿನಿಮಾ ಸುದ್ದಿ ಬರಹಗಾರÀನಾಗಿ ಮಾಡಿದರು. ತಿದ್ದಿ ತೀಡಿ ಪತ್ರಕರ್ತನೆಂಬ ನನ್ನನ್ನು ಸಾಗಣೆಗೆ ಹಿಡಿದ ಸುದ್ದಿ ಮನೆಯ ಗೆಳೆಯನಾದರು.
ಕರ್ಮವೀರ ರವಿ :
ನಿಜಕ್ಕೂ ರವಿಯಣ್ಣ ‘ಕರ್ಮವೀರ’ನೇ. ಪತ್ರಿಕೆಯ ಸಂಪಾದಕನ ಹೊಣೆಗಾರಿಕೆಯ ಮುನ್ನ ಏಜೆಂಟ್, ಉಪನ್ಯಾಸಕ ನಂತರ ಕಸ್ತೂರಿ ಮ್ಯಾಗಜಿನ್ ಹೀಗೆ ಹಲವು ಹೆಜ್ಜೆಗಳನ್ನು ದಾಟಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದವರು. ಕರ್ಮವೀರದ ‘ಪಾಪಿಗಳ ಲೋಕದಲ್ಲಿ’ ಸರಣಿ ಲೇಖನವು ಪತ್ರಿಕೆಯನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸಿತು. ಅದು ಕನ್ನಡಿಗರ ಮನೆ ಮಾತಾಯಿತು. ಬಿಸಿದೋಸೆಯಂತೆ ಪತ್ರಿಕೆ ಮಾರಾಟವಾಯಿತು. ಅದಕ್ಕಾಗಿ ಹಗಲಿರುಳು ದುಡಿದರು. ಪರಪ್ಪನಹಳ್ಳಿ ಅಗ್ರಹಾರಕ್ಕೆ ಹೋಗುವಾಗಲೆಲ್ಲ ‘ಏ ಪೆರ್ಲ ಬರ್ತಿಯಾ?’ ಎಂದು ಬುಲಾವ್ ಕೊಡುತ್ತಿದ್ದವರು.
ಸೋದರ ಭಾವ :
ಒಡಹುಟ್ಟದಿದ್ದರೂ, ಸೋದರ ಭಾವ ತೋರಿದ ನಿಜಾರ್ಥದ ಅಣ್ಣ. ತನ್ನ ಎಲ್ಲ ಚಟುವಟಿಕೆಗಳನ್ನು ಮುಕ್ತವಾಗಿ ಹೇಳಿ ಬಿಡುವ ಜಾಯಮಾನ ಸಂಯುಕ್ತ ಕರ್ನಾಟಕ ಬಿಟ್ಟು ಕನ್ನಡಪ್ರಭ ಪತ್ರಿಕೆಯ ಸಂದರ್ಶನಕ್ಕೆ ಹೋದಾಗಲೂ ಒಟ್ಟಿಗೆ ಇದ್ದವರು.
ನಾನು 1994 ರಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟಾಗ ರವಿಯಣ್ಣ ಆಗಲೇ ಗುಡ್‍ಬೈ ಹೇಳಿ ಆಗಿತ್ತು. “ಹಾಯ್ ಬೆಂಗಳೂರು” ಪತ್ರಿಕೆ ಆರಂಭಕ್ಕೆ ಬುನಾದಿ ಹಾಕಿ ಬಿಟ್ಟಿದ್ದರು. ನಾನು ಆಕಾಶವಾಣಿ ಸೇರಿ ಕಲಬುರಗಿ ಮಂಗಳೂರು ಇದ್ದಾಗಲೂ ಸ್ನೇಹ ಮುಂದುವರಿದಿತ್ತು. ಅವರ ದಿಢೀರ್ ಬೆಳವೆಣಿಗೆ, ಜನಪ್ರಿಯತೆ, ಸಾಹಿತ್ಯ, ಪತ್ರಿಕೆಯಲ್ಲಿ ಮಾಡಿದ ಅದ್ವಿತೀಯ ಸಾಧನೆ ಛಲದಂಕ ಮಲ್ಲನಾಗಿ ಏರಿದ ಎತ್ತರ ಅದ್ಭುತ ಅಚ್ಚರಿಕೂಡ. ಇಷ್ಟೆಲ್ಲ ಎತ್ತರಕ್ಕೇರಿದರೂ ಫೋನ್ ಕರೆಗೆ ‘ಓ’ ಎನ್ನುವ ಮನಸ್ಸು. ಒಂದು ಸಲ ಬೆಂಗಳೂರಿಗೆ ಹೋದಾಗ ಅವರ ಕಚೇರಿಯಲ್ಲಿ ಭೇಟಿ ಮಾಡಲು ಹೋಗಿದ್ದೆನು. ಆಗ ಅವರು ತೋರಿದ ಪ್ರೀತಿಯನ್ನು ಕಂಡು ಜೊತೆಗಿದ್ದ ನನ್ನ ಹಿರಿಯ ಅಧಿಕಾರಿ ಎಚ್. ಶ್ರೀನಿವಾಸ್ ಮೈಸೂರು ಹೇಳಿದರು “ರವಿ ಬೆಳಗರೆಯನ್ನು ನೋಡಲು ಮಾತನಾಡಲು ಭಾಗ್ಯ ಒದಗಿಸಿಕೊಟ್ಟೆ, ನಿನ್ನ ಅವರ ಜೊತೆಗಿನ ಪ್ರೀತಿಗೆ ದಂಗಾದೆ’ ಎಂದಾಗ ನನಗೂ ಅಚ್ಚರಿ. ಆ ಟೇಬಲ್ ಮುಂದೆ ಮೊದಲಿನ ದಿನ ಮುಂಜಾವದ ವರೆಗೆ ಬರºಕ್ಕಾಗಿ ಹರಡಿದ ಪುಸ್ತಕ, ಪೆನುÀ್ನ , ಕಾಗದಗಳಿದ್ದÀವು. ಆದರೂ ತಮ್ಮನೆಂಬ ಆದರದಿಂದ ಬರಮಾಡಿಕೊಂಡ ಮತ್ತು ಆತಿಥ್ಯ ನೀಡಿದ ದಿನ ಅಚ್ಚಳಿಯದೆ ಉಳಿದಿದೆ. ಆಗಷ್ಟೆ ‘ಪ್ರಾರ್ಥನಾ’ ಶಾಲೆ ಆರಂಭಿಸಿದ ಬಗ್ಗೆ ಚರ್ಚೆ, ಅವರ ಯೋಚನೆ, ಯೋಜನೆ ಸಾಕಾರಗಳÀ ಬಗ್ಗೆ ಹೃದಯತುಂಬಿ ಮಾತನಾಡಿದರು. ಎರಡು ವರ್ಷಗಳ ಹಿಂದೆ ಮಂಗಳೂರು ಕಾರ್ಯಕ್ರಮಕ್ಕೆ ಬಂದಾಗ “ರವಿಯಣ್ಣ ಇಲ್ಲಿ ವರೆಗೆ ಬಂದೆ, ಮನೆಗೆ ‘ಬಾ’ ಎಂದಾಗ “ಇನ್ನೊಮ್ಮೆ ನಿನ್ನ ಮನೆಗೆ ಬರುತ್ತೇನೆ” ಎಂದು ಹೇಳಿ ಹೋದ ರವಿಯಣ್ಣ ಬಾರದೊರಿಗೆ ನಡೆದೇ ಬಿಟ್ಟರು. ನೀವು ಕಲಿಸಿದ ಪಾಠ, ನಿಮ್ಮ ಒಡನಾಟ ಮರೆಯಲುಂಟೆ. ಹೃದಯ ಭಾರವಾಗುತ್ತಿದೆ, ಕಣ್ಣು ತೇವಗೊಳ್ಳುತ್ತಿದೆ.
ರವಿಗೆ ರವಿಯೆ ಸಾಟಿ, ನಿಮ್ಮ ಪ್ರೀತಿ, ವಿಶ್ವಾಸ ಆದರ್ಶ, ರವಿಯ ನೆರಳಲಲ್ಲಿ ಕಳೆದ ಆ ಮಧುರ ಸ್ಮøತಿ ಎಂದೆಂದೂ ಅಮರ............. ರವಿ ಅಮರ್ ರಹೇ............
ಡಾ.ಸದಾನಂದ ಪೆರ್ಲ
ಕಾರ್ಯಕ್ರಮ ನಿರ್ವಾಹಕರು
ಆಕಾಶವಾಣಿ ಕಲಬುರಗಿ.
ಮೊಬೈಲ್: 9448127672
ಹೆಚ್.ಶಾಂತರಾಜ ಐತಾಳ ಅವರ `ಸಾಮಾನ್ಯರಾಗಬೇಡಿ, ಶ್ರೇಷ್ಠರಾಗಿ’ ಸಂಕಲನ ಕೃತಿ ಬಿಡುಗಡೆ
ಸಾಹಿತ್ಯದಲ್ಲಿ ಭಾಷಾ ಶುದ್ಧತೆ ಅತೀ ಮುಖ್ಯ- ಪೇಜಾವರ ವಿಶ್ವಪ್ರಸನ್ನತೀರ್ಥಶ್ರೀ
ಮುಂಬಯಿ (ಆರ್‍ಬಿಐ), ನ.19: ಸಂಭೋದನೆಅಥವಾ ಸಂವಹನ ಅಲ್ಲದೆ ಸಾಹಿತ್ಯಕೃತಿರಚನೆಯಲ್ಲೂ ವ್ಯಾಕರಣಬದ್ಧವಾದ ಭಾಷಾ ಶುದ್ಧತೆಅತ್ಯಂತ ಪ್ರಮುಖವಾದುದು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ತಿಳಿಸಿದರು.
ಇತ್ತೀಚೆಗೆ ಮಂಗಳೂರುನಲ್ಲಿ ನಡೆದ ಹೆಚ್.ಶಾಂತರಾಜ ಐತಾಳ ಅವರ `ಸಾಮಾನ್ಯರಾಗಬೇಡಿ, ಶ್ರೇಷ್ಠರಾಗಿ’ ಸಂಕಲನ ಕೃತಿ ಬಿಡುಗಡೆ ಗೊಳಿಸಿ ಶುಭಾರೈಸಿ ಪೇಜಾವರಶ್ರೀ ನುಡಿದು ಇತ್ತೀಚಿನ ದಿನಗಳಲ್ಲಿ ಭಾಷಾ ಶುದ್ಧತೆಯ ಕೊರತೆ ಎದ್ದುಕಾಣುತ್ತಿದೆ. ಇದು ಖೇದನೀಯ ಎಂದರು. ಐತಾಳರು ತನ್ನ ನಿವೃತ್ತಿ ಜೀವನವನ್ನು ಸಾಹಿತ್ಯ ಕೃತಿ ರಚನೆಗೆ ಅದರಲ್ಲೂ ಪ್ರಮುಖವಾಗಿ ಪರಿಸರ, ಬಳಕೆದಾರರ ಜಾಗೃತಿ, ಪ್ರವಾಸಕಥನ ಆಡಳಿತಾತ್ಮಕ ಲೋಪಗಳು ಮತ್ತುಅಭಿವೃದ್ಧಿ ಪರಚಿಂತನೆಗೆ ತೊಡಗಿಸಿಕೊಂಡು ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದನ್ನು ಶ್ಲಾಘಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ| ಪಿ.ಎಸ್ ಎಡಪಡಿತ್ತಾಯ ಕೃತಿ ಬಿಡುಗಡೆ ಗೊಳಿಸಿ ಮಾತನಾಡುತ್ತಾ ತುಂಬಾ ಮೌಲ್ಯಯುತ ಚಿಂತನೆಯುಳ್ಳ ಬರಹಗಾರರಾದ ಶಾಂತರಾಜ ಐತಾಳರ ಸಾಹಿತ್ಯವು ಶಾಲಾ ಕಾಲೇಜು ವಿದ್ಯಾಥಿರ್üಗಳಿಗೆ ಅಧ್ಯಯನ ಯೋಗ್ಯವಾಗಿವೆ. ವೈಜ್ಞಾನಿಕ ಹಾಗೂ ವಿಮರ್ಶಾತ್ಮಕ ಬರಹಗಳು ಅಧಿಕೃತ ದಾಖಲೆ ಸಹಿತ ಒಳಗೊಂಡಿದ್ದು ಅವರಚಿಂತನೆ ಶ್ರೇಷ್ಠ ಮಟ್ಟದ್ದಾಗಿದೆ ಎಂದರು.
ದ.ಕ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಂತರಾಜ ಐತಾಳರು ಅನೇಕ ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ ತನ್ನ ಚಿಕಿತ್ಸಕ ಮತ್ತು ಹಾಸ್ಯ ಮನೋಭೂಮಿಕೆಯ ಲೇಖನಗಳನ್ನು ಪ್ರಕಟಿಸಿ ಸಮಾಜಮುಖಿ ಜಾಗೃತಿ ಸಂದೇಶಗಳನ್ನು ನೀಡಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲೂ ಪ್ರತಿನಿತ್ಯ ಹಸ್ತಲೇಖನಗಳನ್ನು ಬರೆದು ವಾಟ್ಸಪ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ. ನಿವೃತ್ತ ಜೀವನವನ್ನು ಸಾಹಿತ್ಯ ರಚನೆಗಾಗಿ ಮುಡಿಪಾಗಿಟ್ಟಿರುವ ಅವರ ಜೀವನ ಸಾಧನೆ ಅನನ್ಯವಾದುದು ಎಂದರು.
ಕೃತಿಕಾರ ಶಾಂತರಾಜ ಐತಾಳ ಮತ್ತು ಕುಟುಂಬಸ್ಥರು ಈ ಸಂಧರ್ಭಉಡುಪಿ ನೀಲಾವರದ ಗೋಶಾಲೆಗೆ ರೂ.25000 ನೀಡುವ ಮೂಲಕ ಧನ್ಯತೆ ಸೂಚಿಸಿದರು. ಸಂಸ್ಕಾರ ಭಾರತಿ ಉಡುಪಿ ಇಲ್ಲಿನ ವಾಸುದೇವ ಭಟ್ ಪೆರಂಪಳ್ಳಿ ಕೃತಿ ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪೆÇ್ರ| ಎಂ.ಬಿ ಪುರಾಣಿಕ್, ಕಾಪೆರ್Çೀರೇಟರ್ ಶ್ರೀಮತಿ ಶಕಿಲಾ ಕಾವ, ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ, ರಜನಿ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ದಯಾನಂದ ಕಟೀಲು ನಿರೂಪಿಸಿದರು. ಡಾ| ಸಪ್ನಾ ಉಕ್ಕಿನಡ್ಕ ವಂದನಾರ್ಪನೆಗೈದರು.
ಒಂದು ದೀಪ ಸೈನಿಕರಿಗಾಗಿ-ಒಂದು ದೀಪ ಲೋಕದ ಸಮಸ್ತರ ಅರೋಗ್ಯ ಕಲ್ಯಾಣಕ್ಕಾಗಿ ಹಚ್ಚಿ ಮೂಡುಬಿದಿರೆ ಜೈನ ಕಾಶಿಯಲ್ಲಿ ಹೊಸ ವರ್ಷ ಹಾಗೂ ದೀಪಾವಳಿ ಆಚರಣೆ
ಮುಂಬಯಿ (ಆರ್‍ಬಿಐ),ನ.17: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಜೈನಕಾಶಿಯಲ್ಲಿ ದಿಗಂಬರ ಜೈನ ಸಂಸ್ಥಾನ ಮಠದ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರ ಅನುಗ್ರಹಗಳೊಂದಿಗೆ ಕಳೆದ ರವಿವಾರ ಕಾರ್ತಿಕ ಮಾಸದ ಅಮಾವಾಸ್ಯೆಯಂದು (ದೀಪಾವಳಿಯ ಅಮಾವಾಸ್ಯೆ) ಬೆಳಗಿನ ಜಾವ ಭಗವನ್ ಮಹಾವೀರ ಸ್ವಾಮಿಯು ನಿರ್ವಾಣ(ಮುಕ್ತ)ರಾದ ಸಮಯಕ್ಕೆ ಸರಿಯಾಗಿ ಚತುರ್ದಶಿ ಮುಂಜಾನೆ ಜೈನ ಕಾಶಿಯ ಬಸದಿಗಳಲ್ಲಿ ದೀಪಾವಳಿ ಮತ್ತು ಹೊಸ ವರ್ಷ ಆಚರಿಸಲಾಯಿತು.
ಅರ್ಗ್ಯ ಎತ್ತೊಣ ಅವರ ಸಮವಸರಣದಲ್ಲಿ ಪ್ರಮುಖರಾಗಿದ್ದ ಗೌತಮ ಗಣಧರರು ಕೇವಲಜ್ಞಾನ (ಸರ್ವಜ್ಞತ್ವ) ಪಡೆದರು. ಈ ಜ್ಞಾನಜ್ಯೋತಿಯ ಪ್ರತೀಕವಾಗಿ ಜೈನಬಾಂಧವರು ಬೆಳಗಿನ ಜಾವ ವಿವಿಧ ಮೂಡುಬಿದಿರೆ ಯ ಬಸದಿಗಳಲ್ಲಿ ಭಗವಾನ್ ಮಹಾವೀರ ಸ್ವಾಮಿ ಮುಕ್ತಿ ಪಡೆದ ದಿನವಾದ ದೀಪಾವಳಿ ಚತುರ್ದಶಿ ಯಂದು ಪ್ರಥಮ ತೀರ್ಥಂಕರ ವೃಷಭನಾಥ ರಿಂದ ಕೊನೆಯ ತೀರ್ಥಂಕರ ಮಹಾವೀರ ಸ್ವಾಮಿ ನಾಮ ಉಚ್ಚರಿಸಿ ಶ್ರೀ ಮಠದಲ್ಲಿ ಪೀಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕಪಂಡಿತಾಚಾರ್ಯರು ಅರ್ಗ್ಯಯೆತ್ತಿ ನಂತರ ಬೆಟ್ಟ ಕೇರಿ, ಬಸದಿ ಶೆಟ್ರ ಬಸದಿಗಳಲ್ಲೂ ಅರ್ಗ್ಯ ಎತ್ತಿ ಬಸದಿ ದರ್ಶನ ಮಾಡಿದರು.
ಈ ಶುಭಾವಸರದಲ್ಲಿ ಮೂಡುಬಿದಿರೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಬಂದ ಸಮಾಜ ಬಾಂಧವರು, ಪೇಟೆಯ ಭಕ್ತಾದಿಗಳು ಸಂಖ್ಯೆಯಲ್ಲಿ ಶ್ರೀ ಮಠ ಹಾಗೂ ಬಸದಿ ನಿರ್ವಾಣ ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರಾವಿಕೆಯರು ದೀಪವನ್ನು ಬೆಳಗಿ ಅರ್ಗ್ಯ ಎತ್ತಿ ಸಂಭ್ರಮಿಸಿದರು. ಸಾವಿರ ಕಂಬ ಬಸದಿಯಲ್ಲಿ ಸಂಜೆ ಶ್ರೀ ಜೈನ ಮಠದ ಶ್ರೀಗಳ ವತಿಯಿಂದ ಭಗವಾನ್ ಚಂದ್ರಪ್ರಭ ಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಸೋಮವಾರ ಬಲಿಪ್ರತಿಪದ, ದೀಪವಳಿ ಪಾಡ್ವ ದಿನ ಹೊಸ ದೀಪಹಚ್ಚಿ 2547 ಮಹಾವೀರ ಸ0ವತ್ಸರ ಹೊಸ ವರ್ಷ ಆಚರಿಸಲಾಯಿತು. ಜೈನ ಪೇಟೆಯಲ್ಲಿ ಶ್ರಾವಕರು ಮನೆ ಮನೆ ಭೇಟಿ ನೀಡಿದ ಬಸದಿ ಅರ್ಚಕರಿಗೆ ಸಂಪ್ರದಾಯನುಸಾರ ದಾನ ಕರ್ತವ್ಯದಂತೆ ಪಂಚಾಮೃತ ಸಾಮಗ್ರಿ ವಿತರಣೆ ಮಾಡಲಾಯಿತು.
ಈ ವರ್ಷ ವಿಶಿಷ್ಟವಾಗಿ ದೀಪಾವಳಿ ಆಚರಿಸಿ ಒಂದು ದೀಪ ಸೈನಿಕರಿಗಾಗಿ ಒಂದು ದೀಪ ಸ್ವ ಧರ್ಮದ ರಕ್ಷಣೆ ಗಾಗಿ ಒಂದು ದೀಪ ಲೋಕದ ಸಮಸ್ತರ ಅರೋಗ್ಯ ಹಾಗೂ ಕಲ್ಯಾಣಕ್ಕಾಗಿ ಹಚ್ಚಿ ಸರ್ವರಿಗೂ ಭಗವಾನ್ ಮಹಾವೀರ ಸ್ವಾಮಿ ಮೋಕ್ಷ ಕಲ್ಯಾಣ ನೂತನ ವರ್ಷ ದೀಪಾವಳಿ ಹಬ್ಬದ ಶುಭಾಶಯಗಳನ್ನು ಪರಸ್ಪರ ಹಂಚಿಕೊಳ್ಳ ಲಾಯಿತು. ಈ ಸಂದರ್ಭಲ್ಲಿ ಮಠದ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ ಮತ್ತು ಅಪಾರ ಸಂಖ್ಯೆಯ ಶ್ರಾವಕ, ಶ್ರಾವಿಕೆಯರು ಉಪಸ್ಥಿತರಿದ್ದು ದೀಪಾವಳಿ ಸಂಭ್ರಮಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Obituary:Francis Fernandes, Gopalpura, Mount Rosary, Kallianpur

Rozaricho Gaanch - December 2020

Congratulations to Prathiksha Shetty, Kemmannu

Congratulations to the winners of Panchayat Elections from Kemmannu Parish.

Milarchi Lara December 2020

Flat for Rent at Gopalpura, Santhekatte, Udupi.

Autobiography of Richard Carvalho, Barkur/Mumbai.

Contact on Going Residential ProjectAl Nayaab Residency, Udupi

Choice Furniture vast household showroom opens at Santhekatte, Kallianpur

Focus Studio, Near Hotel Kidiyoor, Udupi

Canara Beach Restaurant, Hoode/Bengre, Udupi.

Delite Catering, Santhekatte


Kemmannu Channel -YouTube Click Here

Click here for Kemmannu Knn Facebook Link
Sponsored Albums
Exclusive
Kodi-Bengre @ CNN News: Ishita Malaviya, India’s first female surfer, is changing her country’s perception of the ocean

Obituary: Augustine Saldanha (90), Kambla Thotta, Kemmannu

Heavy rains continue to lash Udupi, 3 fishing boats capsize, water entered several houses. [Watch Video’s ]

Monthi Fest Konkani Mass and Celebration Live from St. Theresa’s Church, Kemmannu

Last Journey of Benedict P. D Souza (Benna Master)

Revisiting the lost cricketing glory of Kemmannu

Brahmakalabisheka, Maha Anna Santarpane and Religious meet at Bhadrakali Temple, Gudiyam Kemmannu.

Brief History of Christians in Kallianpur Varado:

Great Relief: Kemmannu road completed
