ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ `ಅನುಪಮ’ ವಿಶೇಷಾಂಕ ಬಿಡುಗಡೆ - ಎಂ.ಬಿ ಕುಕ್ಯಾನ್ ಸಂಸ್ಮರಣೆ
Kemmannu News Network, 13-01-2021 14:40:40
ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ `ಅನುಪಮ’ ವಿಶೇಷಾಂಕ ಬಿಡುಗಡೆ - ಎಂ.ಬಿ ಕುಕ್ಯಾನ್ ಸಂಸ್ಮರಣೆ
ಜನಮನ ತಿದ್ದುವುದೇ ಪತ್ರಿಕೋದ್ಯಮದ ಕಾಯಕ : ಡಾ| ಜಿ.ಎನ್ ಉಪಾಧ್ಯ
ಮುಂಬಯಿ (ಆರ್ಬಿಐ), ಜ.12: ಪತ್ರಿಕೆ ಎನ್ನುವುದು ಬರೆಯುವವರಿಗೆ ಒಂದು ವೇದಿಕೆ. ಕಳೆದ ಎರಡು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಅನುಪಮ ಕನ್ನಡ ಮಾಸಿಕ ಹಲವು ಬರಹಗಾರರನ್ನು ಬೆಳಕಿಗೆ ತಂದ ಕೌಟುಂಬಿಕ ಪತ್ರಿಕೆ. ಈ ಪತ್ರಿಕೆ ಜನಮನ ತಿದ್ದುವ ಕೆಲಸದ ಜೊತೆಗೆ ಸಮುದಾಯದ ಎಚ್ಚರವನ್ನೂ ಮಾಡುತ್ತ ಬಂದಿದೆ. ಮುಂಬಯಿಯಲ್ಲಿ ಕನ್ನಡದ ಮೊದಲ ಪತ್ರಿಕೆಯಾದ ಹವ್ಯಕ ಸುಬೋಧದ ಮೂಲಕ ಕರ್ಕಿ ಸೂರಿ ವೆಂಕಟರಮಣ ಶಾಸ್ತ್ರಿ ಅವರು ಕನ್ನಡ ಪತ್ರಿಕಾರಂಗವನ್ನು ಮುಂಬಯಿಯಲ್ಲಿ ಬೆಳೆಸಿದವರು. ಪತ್ರಿಕೋದ್ಯಮದ ದೊಡ್ಡ ಕೆಲಸ ಅಂದರೆ ಜನಮನ ತಿದ್ದುವುದು. ಇಂದು ಪತ್ರಿಕೋದ್ಯಮಕ್ಕೆ ರಾಜಕಾರಣಿಗಳ ದೊಡ್ಡ ಗ್ರಹಣ ಬಡಿದಿದೆ .ಅದನ್ನು ಮೀರಿ ಪ್ರಾಮಾಣಿಕವಾಗಿ ಅನುಪಮದಂತಹ ಪತ್ರಿಕೆಗಳು ಕನ್ನಡದ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.
ಮಂಗಳೂರು ಅಲ್ಲಿನ ಕನ್ನಡ ಮಾಸಿಕ ಅನುಪಮ ಪತ್ರಿಕೆಯ 20ನೇ ವರ್ಷದ ವಿಶೇಷಾಂಕವನ್ನು ಇಂದಿಲ್ಲಿ ಮಂಗಳವಾರ ಸಾಂತಕ್ರೂಜ್ ಇಲ್ಲಿನ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಿಸಿ ಉಪಾಧ್ಯ ಮಾತನಾಡಿದರು.
ಅನುಪಮ ಮಾಸಿಕದ ಆರಂಭದ ದಿನಗಳಿಂದಲೂ ಅದರ ಓದುಗನಾಗಿ ಲೇಖಕನಾಗಿ ಗುರುತಿಸಿ ಕೊಂಡಿರುವ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆ ಪತ್ರಿಕೆಯ ಪರಿಚಯ ಮಾಡುತ್ತಾ ಅನುಪಮ ಮಾಸಿಕವನ್ನು 2000ರಲ್ಲಿ ಮಂಗಳೂರಲ್ಲಿ ನಾಮಾಂಕಿತ ಬಂಡಾಯ ಸಾಹಿತಿ ಬಿ.ಟಿ ಲಲಿತಾ ನಾಯ್ಕ್ ಬಿಡುಗಡೆ ಮಾಡಿದ್ದರು. ಅಂದಿನಿಂದ ಇಪ್ಪತ್ತು ವರ್ಷಗಳಿಂದಲೂ ಅದರ ಪ್ರಧಾನ ಸಂಪಾದಕಿಯಾಗಿ ಪ್ರಗತಿಪರ ಲೇಖಕಿ ಶಹನಾಝ್ ಎಂ. ಪತ್ರಿಕೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಪ್ರತೀ ತಿಂಗಳು ಅವರ ಸಂಪಾದಕೀಯ ಬರಹಗಳು ಅನುಪಮದ ಘನತೆ ಹೆಚ್ಚಿಸಿದೆ. ಮುಖಪುಟದ ಲೇಖನಗಳು, ಕಥೆ-ಕವನ, ಸ್ತ್ರೀಶಕ್ತಿ ಬಿಂಬಿಸುವ ಲೇಖನಗಳು, ಸಾಂದರ್ಭಿಕ ವಿಶೇಷ ಲೇಖನಗಳು ಹೀಗೆ ಸಮರ್ಥ ಕೌಟುಂಬಿಕ ಪತ್ರಿಕೆಯಾಗಿ ಅನುಪಮ ಹೊರಬರುತ್ತಿದೆ. ಆರೋಗ್ಯಪೂರ್ಣ ಉತ್ತಮ ವಿಚಾರಗಳ ಪತ್ರಿಕೆಯ ಹೂರಣದಿಂದ ಅತ್ಯತ್ತಮ ಕೌಟುಂಬಿಕ ಪತ್ರಿಕೆಯಾಗಿ ತನ್ನದೇ ಆದ ಛಾಪು ಮೂಡಿಸಿದೆ. ಅನುಪಮದ ವಿಶೇಷಾಂಕ ಮುಂಬಯಿಯಲ್ಲಿ ಬಿಡುಗಡೆ ಗೊಳ್ಳುತ್ತಿರುವುದು ಇಲ್ಲಿನ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದರು.
ಎಂ.ಬಿ.ಕುಕ್ಯಾನ್ ಸಂಸ್ಮರಣೆ:
ಇತ್ತೀಚೆಗೆ ನಮ್ಮನ್ನಗಲಿದ ಮುಂಬಯಿಯ ಪ್ರಮುಖ ಕನ್ನಡ ಮಾಸಿಕ ಅಕ್ಷಯ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಎಂ.ಬಿ ಕುಕ್ಯಾನ್ರ ಸಂಸ್ಮರಣೆ ಮಹತ್ವವುಳ್ಳದ್ದು. ಮುಂಬಯಿ ಕನ್ನಡಿಗರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಬಂದ ಸಾಂಸ್ಕೃತಿಕ ನೇತಾರರಾಗಿದ್ದರು ಎಂ.ಬಿ ಕುಕ್ಯಾನ್ ಈ ಕನ್ನಡ ವಿಭಾಗದಲ್ಲಿ ಸ್ಥಾಪಿಸಿದ ಸ್ವರ್ಣ ಪದಕ ಶಾಶ್ವತವಾದ ಯೋಜನೆ ಅವರ ಶಿಕ್ಷಣ ಪ್ರೇಮಕ್ಕೆ ಸಾಕ್ಷಿ. ಸಮುದಾಯ, ಸಮಾಜವನ್ನು ಸರಿದಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಅವರು ಬಹುವಿಧ ಸಾಹಿತ್ಯ ರಚಿಸಿದರು. ಅವರು ಶ್ರಮಸಂಸ್ಕೃತಿಯ ಹಿನ್ನೆಲೆಯಿಂದ ಬಂದಿರುವವರು ಎಂದು ಎಂ.ಬಿ. ಕುಕ್ಯಾನ್ ಅವರಿಗೆ ನುಡಿನಮನ ಸಲ್ಲಿಸಿ ಡಾ| ಜಿ.ಎನ್.ಉಪಾಧ್ಯ ನುಡಿದರು.
ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಮಾತನಾಡಿ ಅಕ್ಷಯ ಮತ್ತು ಅನುಪಮ ಈ ಎರಡೂ ಪತ್ರಿಕೆಗಳು ಒಂದೇ ವೇದಿಕೆಯಲ್ಲಿ ಇಂದು ಕಾರ್ಯಕ್ರಮ ನಡೆಸುತ್ತಿರುವುದು ಕನ್ನಡಿಗರ ಅಭಿಮಾನ. ಎಂ.ಬಿ ಕುಕ್ಯಾನ್ ಮೌಲಿಕವಾದ ಸಾಹಿತ್ಯವನ್ನು ನೀಡಿದ್ದು, ಅವರ ಬಗ್ಗೆ ಮೂರು ಗ್ರಂಥಗಳು ಬಂದಿವೆ. ಅವರು ತುಂಬಾ ಬಡತನದಿಂದ ಮೇಲೆ ಬಂದವರು. ಆದರೆ ಸಾಹಿತ್ಯ, ಶಿಕ್ಷಣ ಪ್ರೇಮಿಯಾಗಿ ಬದುಕಿನಲ್ಲಿ ಸಂತಸ ಕಂಡರು. ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ 5ಲಕ್ಷ ರೂಪಾಯಿ ಮೊತ್ತ ನೀಡಿ ಎಂ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದವರಿಗೆ ಸ್ವರ್ಣಪದಕ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಗಲಿದ ಎಂ.ಬಿ ಕುಕ್ಯಾನ್ ಅವರಿಗೆ ಆರಂಭದಲ್ಲಿ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ವಿಭಾಗದ ಶಾಂತಲಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು ರಾಷ್ಟ್ರ ಪ್ರಸಿದ್ಧ ಚಿತ್ರಕಲಾವಿದ ಜಯಾ ಸಾಲಿಯಾನ್ ರಚಿಸಿದ ಎಂ.ಬಿ ಕುಕ್ಯಾನ್ ರ ರೇಖಾಚಿತ್ರವನ್ನು ಕನ್ನಡ ವಿಭಾಗಕ್ಕೆ ಹಸ್ತಾಂತರಿಸಿದರು. ಮುಂಬಯಿ ವಿ.ವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ ಸಮಿತಿಯ ಶಶಿಕಲಾ ಹೆಗಡೆ ವಂದಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Bernard G D’Souza | LIVE from Moodubelle

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..
