ಲೆನೊವಾದಿಂದ `ಲೆನೊವಾ ಅವೇರ್’ ಸಾಫ್ಟ್ವೇರ್ ಬಿಡುಗಡೆ


Media Release, 02-09-2021 17:02:55


Write Comment     |     E-Mail To a Friend     |     Facebook     |     Twitter     |     Print


ಜಾಗತಿಕ ತಂತ್ರಜ್ಞಾನ ನಾಯಕ ಸ್ಥಾನದಲ್ಲಿರುವ ಲೆನೊವಾ ತನ್ನ ಸ್ಮಾರ್ಟ್ ಕಲಿಕಾ ಪರಿಹಾರವಾದ `ಲೆನೊವಾ ಅವೇರ್’ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಐಡಿಯಾಪ್ಯಾಡ್ ಸ್ಲಿಮ್ ೩ಐ ಮತ್ತು ಐಡಿಯಾಪ್ಯಾಡ್ ಸ್ಲಿಮ್ ೫ಐ ಲ್ಯಾಪ್‌ಟಾಪ್‌ಗಳ ಜೊತೆಯಲ್ಲಿ ಈ ಸ್ಮಾರ್ಟ್ ಕಲಿಕಾ ಪರಿಹಾರ ಗ್ರಾಹಕರಿಗೆ ಲಭ್ಯವಿದೆ. ಕಲಿಕೆಯಲ್ಲಿ ಯುವ ವಿದ್ಯಾರ್ಥಿಗಳನ್ನು ಗಮನಹರಿಸುವಂತೆ ಮಾಡುವುದು ಹೇಗೆ ಮತ್ತು ಆನ್‌ಲೈನ್ ತರಗತಿಗಳಲ್ಲಿ ಇದ್ದಾಗ ಅವರನ್ನು ಹೇಗೆ ಪ್ರೇರೇಪಿಸಬೇಕು ಹಾಗೂ ಅವರಲ್ಲಿನ ಡಿಜಿಟಲ್ ಯೋಗ ಕ್ಷೇಮವನ್ನು ಹೇಗೆ ಸುಧಾರಣೆ ಮಾಡಬೇಕೆಂಬುದು ಸೇರಿದಂತೆ ಈ ವರ್ಷದ ಆರಂಭದಲ್ಲಿನ ಲಾಕ್‌ಡೌನ್ ಸಂದರ್ಭದಲ್ಲಿ ಎದುರಾದ ಇನ್ನೂ ಹಲವಾರು ಡಿಜಿಟಲ್ ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ  ಲೆನೊವಾ ಅವೇರ್ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

Lenovo launches 'Lenovo Aware' smart learning solution to provide students  with superior remote learning experience | Zee Business

ಲೆನೊವಾದ ಬ್ಯಾಕ್-ಟು-ಚಾಲೆಂಜ್ ಕೊಡುಗೆಯ ಭಾಗವಾಗಿ ಲೆನೊವಾ ಶ್ರೇಣಿಯ ಪಿಸಿಗಳು ಹೆಚ್ಚುವರಿಯಾಗಿ ೧ ವರ್ಷದ ವಾರಂಟಿ, ೩ ವರ್ಷದ ಪ್ರೀಮಿಯಂ ಕೇರ್ ಮತ್ತು ಲೆನೊವಾ ೧೦೦ ಸ್ಟೀರಿಯೋ ಅನಾಲಾಗ್ ಹೆಡ್‌ಸೆಟ್ ಲಭ್ಯವಾಗಲಿದೆ. ಈ ಕೊಡುಗೆ ಕೇವಲ ೨೦೯೯ ರೂಪಾಯಿಗಳಲ್ಲಿ ೧೧,೦೮೯ ರೂಪಾಯಿಗಳವರೆಗಿನ ಪ್ರಯೋಜನಗಳನ್ನು ಹೊಂದಿದೆ.

ಕೋವಿಡ್-೧೯ ಸಾಂಕ್ರಾಮಿಕವು ಸಾಮಾಜಿಕ ಅಂತರ ಮತ್ತು ಆನ್‌ಲೈನ್‌ನಲ್ಲಿ ಶಿಕ್ಷಣ ವಿಧಾನ ಹಾಗೂ ಮೌಲ್ಯಮಾಪನವನ್ನು ಹೇರುವಂತೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಡ್ಡಿಯನ್ನು ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಲೆನೊವಾ ವರ್ಚುವಲ್ ಶಿಕ್ಷಣದಿಂದ ಪೋಷಕರಿಗೆ ಎದುರಾಗಿರುವ ಮುಖ್ಯ ಸವಾಲುಗಳ ಬಗ್ಗೆ ಸಮೀಕ್ಷೆಯನ್ನು ನಡೆಸಿದೆ:

ಇದಕ್ಕೆ ಲೆನೊವಾ ಅವೇರ್ ಪರಿಹಾರಗಳನ್ನು ನೀಡುತ್ತಿದೆ. ವ್ಯಕ್ತಿಯ ದೇಹ ಭಾಷೆ ಮತ್ತು ಸಾಧನದೊಂದಿಗೆ ಕಣ್ಣಿನ ಸಂಪರ್ಕವನ್ನು ಪತ್ತೆ ಮಾಡಲು ಬಿಲ್ಟ್-ಇನ್ ಕ್ಯಾಮೆರಾ ಇರುವ ಪಿಸಿಗಳನ್ನು ಬಳಸುವ ಮೂಲಕ ಲೆನೊವಾ ಅವೇರ್ ಈ ಸಮಸ್ಯೆಗಳನ್ನು ಪರಿಹರಿಸುತ್ತದೆ. ಸಾಫ್ಟ್ವೇರ್ ಅನ್ನು ಲೆನೊವಾ ವೆಂಟೇಜ್‌ನೊಳಗೇ ಆ್ಯಕ್ಟಿವೇಟ್ ಮಾಡಬಹುದಾಗಿದೆ. ಲೆನೊವಾ ಅವೇರ್‌ನಲ್ಲಿನ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲಾ ಫೀಚರ್‌ಗಳನ್ನು ಸಕ್ರಿಯಗೊಳಿಸಬಹುದಾಗಿದೆ. ಸ್ಕಿçÃನ್‌ನಿಂದ ಹಿಂದೆ ಕುಳಿತುಕೊಳ್ಳುವಂತೆ, ನೇರವಾಗಿ ಕುಳಿತುಕೊಳ್ಳುವಂತೆ, ಕಣ್ಣುಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ ಸ್ಕಿçÃನ್‌ನಿಂದ ಒಂದು ಬ್ರೇಕ್ ತೆಗೆದುಕೊಳ್ಳುವಂತೆ ಸೇರಿದಂತೆ ಹಲವು ಪಾಪ್-ಅಪ್ ಸೂಚನೆಗಳು ಮತ್ತು ಆಡಿಯೋ ಅಲರ್ಟ್ಗಳ ಮೂಲಕ ಈ ಸಾಫ್ಟ್ವೇರ್ ಸೂಚನೆಗಳನ್ನು ನೀಡುತ್ತದೆ.

ಲೆನೊವಾದ ಗ್ರಾಹಕ ವ್ಯವಹಾರ ವಿಭಾಗದ ಮುಖ್ಯಸ್ಥ ದಿನೇಶ್ ನಾಯರ್ ಅವರು ಮಾತನಾಡಿ, ``ಲೆನೊವಾ ಸ್ಮಾರ್ಟರ್ ಟೆಕ್ನಾಲಜಿಯ ಸಹಾಯದಿಂದ ಶಿಕ್ಷಣಕ್ಕೆ ಬದ್ಧವಾಗಿದೆ ಮತ್ತು ಹೊಸ ಹಾರ್ಡ್ವೇರ್, ಸಾಫ್ಟ್ವೇರ್ ಪರಿಹಾರಗಳು, ಸಿಎಸ್‌ಆರ್ ವ್ಯಾಪ್ತಿ ಮತ್ತು ನಮ್ಮ ಗ್ರಾಹಕರಿಗಾಗಿ ಹಲವು ವರ್ಷಗಳಿಂದ ಪ್ರಗತಿಯನ್ನು ಸಾಧಿಸುತ್ತಿದೆ. ಸಾಂಕ್ರಾಮಿಕದ ನಂತರ ಕಲಿಕಾ ಕ್ಷೇತ್ರದಲ್ಲಿನ ಮೂಲಸೌಕರ್ಯಗಳಿಗೆ ಅಗತ್ಯತೆ ಹೆಚ್ಚಾಗಿದೆ. ಮನೆಯಿಂದಲೇ ಕಲಿಯುವ ವ್ಯವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರಗಳನ್ನು ಪೂರೈಸುವ ಅಗತ್ಯತೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಮಕ್ಕಳು ತಮ್ಮ ಡಿಜಿಟಲ್ ಯೋಗಕ್ಷೇಮ ಮತ್ತು ಕಲಿಕೆಯತ್ತ ಗಮನಹರಿಸಲು ಪೂರಕವಾದ ಪರಿಹಾರಗಳನ್ನು ನಾವು ಖಾತ್ರಿಗೊಳಿಸುತ್ತಿದ್ದೇವೆ. ಈ ಮೂಲಕ ಪೋಷಕರಿಗೂ ನೆಮ್ಮದಿ ತರಲಿದ್ದೇವೆ. ನಮ್ಮ `ಲೆನೊವಾ ಅವೇರ್’ ಸಾಫ್ಟ್ವೇರ್’ ಅನ್ನು ಪೋಷಕರು ಮತ್ತು ಮಾರ್ಗದರ್ಶಕರಿಗೆ ತಮ್ಮ ಮಗುವಿನ ಆನ್‌ಲೈನ್‌ನಲ್ಲಿ ತೊಡಗುವಿಕೆ, ತರಗತಿಯಲ್ಲಿ ಕಲಿಯುವುದು ಮತ್ತು ಡಿಜಿಟಲ್ ಯೋಗಕ್ಷೇಮದ ಬಗ್ಗೆ ಒಳನೋಟಗಳನ್ನು ನೀಡಲು ಸಹಾಯ ಮಾಡಲಿದೆ’’ ಎಂದರು.

ಲೆನೊವಾ ಅವೇರ್ ಸಾಫ್ಟ್ವೇರ್ ಬಳಕೆದಾರ-ವ್ಯಾಖ್ಯಾನಿತ ಅಗತ್ಯತೆಗಳನ್ನು ಪೂರೈಸಲು ಹೊಂದಿಕೊಳ್ಳುವ ಸೆಟ್ಟಿಂಗ್ ಆಯ್ಕೆಗಳನ್ನು ಒದಗಿಸುತ್ತದೆ. ಇದು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ವಿಭಿನ್ನ ವಿಧಾನಗಳನ್ನು ಒಳಗೊಂಡಿದೆ, ವಿಭಿನ್ನ ಕಟ್ಟುನಿಟ್ಟಿನ ಸೆಟ್ಟಿಂಗ್‌ಗಳು, ಜ್ಞಾಪನೆ ಸಂವೇದನೆ ಮತ್ತು ಮಿತಿಗಳು ಇರುತ್ತವೆ. ಈ ಸಾಫ್ಟ್ವೇರ್ ಮಕ್ಕಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಸ್ಕೋರ್ ಸಿಸ್ಟಂ ಸಹಾಯದಿಂದ ಪೋಷಕರೊಂದಿಗೆ ಸಂವಹನವನ್ನು ಸುಲಭಗೊಳಿಸುತ್ತದೆ. ಅದು ಸುಲಭವಾಗಿ ಅರ್ಥ ಮಾಡಿಕೊಳ್ಳುವ ವರದಿಗಳನ್ನು ನೀಡುತ್ತದೆ. ಮಗುವಿನ ಸರಾಸರಿ ಪಿಸಿ ಬಳಕೆಯ ಸಂಚಿತ ಗುರಿಗಳನ್ನು ತೋರಿಸುತ್ತದೆ.


Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
New NH 66 Highway: Life at risk in Santhekatte, Ka [3 Comments]
View More

Final Journey Of Peter Xavier D’souza (94 Years) | LIVE From SanthekatteFinal Journey Of Peter Xavier D’souza (94 Years) | LIVE From Santhekatte
Obituary : Peter Xavier D’Souza(94), Mount Rosary, KallianpurObituary : Peter Xavier D’Souza(94), Mount Rosary, Kallianpur
Tribute to Nithyananda Kemmannu | ಶ್ರಧಾಂಜಲಿ ಸಭೆ |Tribute to Nithyananda Kemmannu | ಶ್ರಧಾಂಜಲಿ ಸಭೆ |
Two plots for Sale Near Nejar Water Tank, 1 km to Santhekatte, Kallianpura.Two plots for Sale Near Nejar Water Tank, 1 km to Santhekatte, Kallianpura
Rozaricho Gaanch September Issue 2021Rozaricho Gaanch September Issue 2021
Milarchi Laram - Issue Monthi Fest, 2021Milarchi Laram - Issue Monthi Fest, 2021
Mount Rosary, Santhekatte: ‘Rozaricho Gaanch’ Special Decennial Year 2011-2021Mount Rosary, Santhekatte: ‘Rozaricho Gaanch’ Special Decennial Year 2011-2021
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi