ಗೋರೆಗಾಂವ್ ಪೂರ್ವದ ರೈಲ್ವೇ ನಿಲ್ದಾಣ ಮಾರ್ಗಕ್ಕೆ ದಿ| ಜಯ ಸುವರ್ಣ ರಸ್ತೆ ನಾಮಕಾರಣ


Rons Bantwal
Kemmannu News Network, 22-10-2021 09:49:21


Write Comment     |     E-Mail To a Friend     |     Facebook     |     Twitter     |     Print


ಗೋರೆಗಾಂವ್ ಪೂರ್ವದ ರೈಲ್ವೇ ನಿಲ್ದಾಣ ಮಾರ್ಗಕ್ಕೆ ದಿ| ಜಯ ಸುವರ್ಣ ರಸ್ತೆ ನಾಮಕಾರಣ
ಕೀರ್ತಿಶೇಷರಾದರೂ ಚಿರಂಜೀವಿಯಾದ ಜಯ ಸುವರ್ಣ : ಸಚಿವ ಸುಭಾಷ್ ದೇಸಾಯಿ  

ಮುಂಬಯಿ, ಅ.21: ಜಯಣ್ಣ ನನ್ನ ಪರಮಾಪ್ತರಾಗಿದ್ದು ಒಳ್ಳೆಯ ವ್ಯಕ್ತಿ. ಸರಳ ಸಜ್ಜನ ವ್ಯಕ್ತಿತ್ವದ ಆದರ್ಶನಿಕರು. ಎಲ್ಲರ ಮಿತ್ರತ್ವವುಳ್ಳ ಸದ್ಗುಣ ಸಂಪನ್ನರು. ಅಗತ್ಯವುಳ್ಳವರ ಆಸರೆಯಾದ ಅವಶ್ಯಕರ ಕಲ್ಪವೃಕ್ಷ ಎಂದೇಳಬಹುದು. ಆಯುಷ್ಯದುದ್ದಕ್ಕೂ ಎಲ್ಲರನ್ನು ಒಗ್ಗೂಡಿಸುವಲ್ಲೇ ಸಕ್ರೀಯರಾಗಿ ಜನಸಾಮಾನ್ಯರನ್ನು ಜನಮಾನ್ಯರನ್ನಾಗಿಸಿದ ಜಯ ಸುವರ್ಣರು ಎಲ್ಲರನ್ನೂ ಎತ್ತರಕ್ಕೆ ಬೆಳೆಸಿದ್ದಾರೆ. ಈ ಮೂಲಕ ಜಯ ಸುವರ್ಣರು ಕೀರ್ತಿಶೇಷರಾದರೂ ಚಿರಂಜೀವಿಯಾಗಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯದ ಕೈಗಾರಿಕಾ ಮತ್ತು ಗಣಿಗಾರಿಕೆ ಸಚಿವ ಸುಭಾಷ್ ರಾಜರಾಮ್ ದೇಸಾಯಿ ತಿಳಿಸಿದರು.

`ಬಿಲ್ಲವಶ್ರೀ’, `ಬಿಲ್ಲವ ರತ್ನ’,`ಬಿಲ್ಲವ ಕುಲ ಶಿರೋಮಣಿ’ ಎಂದೆಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ.ಸುವರ್ಣ ಅವರ ಸ್ಮರಣಾರ್ಥ ಗೋರೆಗಾಂವ್ ಪೂರ್ವ ಇಲ್ಲಿನ ಪಿ-ದಕ್ಷಿಣ ವಾರ್ಡ್‍ನಲ್ಲಿರುವ ಶ್ರೀ ದತ್ತಾ ಮಂದಿರ ಚೌಕ್‍ನಿಂದ (ರಿಂಗ್ ರೋಡ್) ಗೋರೆಗಾಂವ್ ರೈಲ್ವೆ ಸ್ಟೇಷನ್ ಮಾರ್ಗಕ್ಕೆ `ದಿ| ಜಯ ಸುವರ್ಣ ರಸ್ತೆ’ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ನಾಮಕರಣ ಮಾಡಿದ್ದು ಮಾರ್ಗದ ನಾಮಫಲಕ ಅನಾವರಣಗೊಳಿಸಿ ದೀಪಹಚ್ಚಿ, ನಾಮಫಲಕಕ್ಕ್ಕೆ ಪುಷ್ಪವೃಷ್ಠಿಗೈದು ಅಧಿಕೃತವಾಗಿ ನಾಮಕರಣ ಘೋಷಿಸಿದರು.

ಜಯಲೀಲಾ ಬಾಂಕ್ವೇಟ್ ಸಭಾಗೃಹದಲ್ಲಿ ಬಳಿಕ ನಡೆಸಲ್ಪಟ್ಟ ಸ್ವರ್ಗೀಯ ಜಯ ಸಿ.ಸುವರ್ಣ ಅವರ ವಾರ್ಷಿಕ `ಪುಣ್ಯಸ್ಮರಣೆ’ ನಿಮಿತ್ತ ಆಯೋಜಿಸಿದ್ದ `ಪ್ರಥಮ ಸ್ಮೃತಿದಿನ’ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ರಚಿತ `ಜಯ ಸಿ.ಸುವರ್ಣ’ ಪುಸ್ತಕ ಬಿಡುಗಡೆ ಗೊಳಿಸಿ ಸಚಿವ ದೇಸಾಯಿ ಮಾತನಾಡಿದರು.

ತನ್ನ ಹೊಟೇಲು ಉದ್ಯಮದಲ್ಲೂ ಪ್ರಾಮಾಣಿಕÀರಾಗಿದ್ದು ಇತರರನ್ನೂ ಉದ್ಯಮಿಗಳನ್ನಾಗಿಸಿದ ಹಿರಿಮೆ ಇವರದ್ದು. ಭಾರತ್ ಬ್ಯಾಂಕನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ ಕೀರ್ತಿವಂತರು. ವಿವಾದಗಳನ್ನು ಸಮಾಧಾನಕರವಾಗಿ ಇತ್ಯಾರ್ಥ ಮಾಡುವ ಚತುರÀರಾಗಿದ್ದ ಜಯ ಸುವರ್ಣ ಅವರ ದೂರದೃಷ್ಟಿತ್ವದ ಚಿಂತನೆ ಆದರನೀಯ. ಇದಕ್ಕೆ ಇಂದಿನ ಸಭೆ ಸಾಕ್ಷಿಯಾಗಿದೆ. ಜಯಣ್ಣನ ಇದೆಲ್ಲಾ ಸಾಧನೆಗಳು ಭೂಪಟದಲ್ಲಿ ಸ್ಥಾನಗಳಿಸುವಲ್ಲಿ ಕಾರಣವಾಗಿವೆ. ಅವರ ಸಾಧನಾ ವೈಶಿಷ್ಟ ್ಯತೆ ಸೂರ್ಯ ಅವರ ಮುನ್ನಡೆಯೊಂದಿಗೆ ಪ್ರಕಾಶಮಾನವಾಗಲಿ ಎಂದೂ ಸಚಿವ ದೇಸಾಯಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಂಬಯಿ ಉತ್ತರ ಪಶ್ಚಿಮ ಲೋಕಸಭಾ ಕ್ಷೇತ್ರದ ಸಂಸದ ಸಂಸದ ಗಜಾನನ ಸಿ.ಕೀರ್ತಿಕರ್, ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಅತಿಥಿü ಅಭ್ಯಾಗತರಾಗಿ, ನಗರ ಸೇವಕರಾದ ಸ್ವಪ್ನಿಲ್ ಎಂ.ತೆಂಬ್ವಾಳ್ಕರ್, ಸಾಧನಾ ಮಾಣೆ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ, ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಕುಲಾಲ ಸುಧಾರಕ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್.ಕುಲಾಲ್, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಸದಾನಂದ ಆಚಾರ್ಯ ಕಲ್ಯಾಣ್ಪುರ, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾ| ಆರ್.ಎಂ.ಭಂಡಾರಿ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ, ಒಕ್ಕಲಿಗರ ಸೇವಾ ಸಂಘ ಮುಂಬಯಿ ಅಧ್ಯಕ್ಷ ಜಿತೇಂದ್ರ ಎಲ್.ಗೌಡ, ಭಾರತ್ ಬ್ಯಾಂಕ್‍ನ ಆಡಳಿತ ನಿರ್ದೇಶಕ ಯು.ಶಿವಾಜಿ ಪೂಜಾರಿ, ಗೌರವ ಅತಿಥಿüಗಳಾಗಿ ಮತ್ತು ಜಯ ಸುವರ್ಣರ ಹಿರಿಯ ಸುಪುತ್ರ, ಭಾರತ್ ಬ್ಯಾಂಕ್‍ನ ನಿರ್ದೇಶಕ ಸೂರ್ಯಕಾಂತ್ ಜೆ.ಸುವರ್ಣ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಾಧನಾ ಮಾಣೆ ಮಾತನಾಡಿ ಸುಶಿಕ್ಷಿತರ ಮತ್ತು ಸಂಸ್ಕಾರವುಳ್ಳವರಿಂದ ತುಂಬಿದ ಈ ಸಭಾಗೃಹ ಜಯಣ್ಣರ ಬಾಂಧವ್ಯತೆಯನ್ನು ಸಾರುತ್ತದೆ. ಸುವರ್ಣರ ಪರವಾಗಿ ನಾನು ತಮ್ಮೆಲ್ಲರಿಗೂ ಸ್ಥಾನೀಯ ನಗರ ಸೇವಕಿಯಾಗಿ ನಿಜವಾಗಿಯೂ ನಮಸ್ಕರಿಸುತ್ತೇನೆ. ಸುವರ್ಣ ಅಂದರೆ ಚಿನ್ನ. ಆದರೆ ಮರೆಯಾದ ಚಿನ್ನವನ್ನು ನೆನೆಸುತ್ತಾ ಸ್ಮರಣೀಯರಾದ ಜಯ ಸುವರ್ಣರು ಮುಂಬಯಿಯನ್ನೇ ಹೊಳೆಯುವಂತೆ ಮಾಡಿರುವುದು ನಮ್ಮ ಭಾಗ್ಯವಾಗಿದೆ ಎಂದÀರು.

ಕಳೆದ ವರ್ಷ ಜಯ ಅಣ್ಣನ ನಿಧನ ದುಃಖಕರವಾದುದು. ಅವರ ಜೀವನ ಶೈಲಿ ಮತ್ತು ಪೆÇ್ರೀತ್ಸಾಹ, ಪ್ರೇರಣೆ ನಮಗೆ ಮಾದರಿ ಆಗಿದೆ. ಅವರ ಹೆಸರಿನ ರಸ್ತೆಯ ಪ್ರಸ್ತಾವವೇ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಸ್ವಪ್ನಿಲ್ ತೆಂಬ್ವಾಳ್ಕರ್ ತಿಳಿಸಿದರು.

ಜಯ ಸುವರ್ಣರ ಸರಳ, ಸಜ್ಜನ, ಸಹನಾಶೀಲ ಮತ್ತು ಸಭ್ಯತಾ ಜೀವನದ ಪ್ರಯಾಸದ ಪ್ರವಾಸವೇ ಅವರ ಅಮರತ್ವಕ್ಕೆ ಸಾಕ್ಷಿಯಾಗಿದೆ. ಜೀವನುದ್ದದ ಆಖ್ಯಾನ ಇಂದು ಸಾರ್ವಜನಿಕವಾಗಿ ನಾಮಫಲಕ ಮೂಲಕ ರಾರಾಜಿಸುವಂತಾಗಿದೆ. ಚೌಕಟ್ಟು ಮೀರಿ ಪೆÇ್ರೀತ್ಸಾಹಿಸುವ  ಸದ್ಗುಣಗಳಿಂದ ಎಲ್ಲರನ್ನೂ ತಮ್ಮವರನ್ನಾಗಿಸಿ ಸಮಾಜ ಕಟ್ಟಿದ ಧೀಮಂತರು. ಇವೆಲ್ಲವುಗಳಿಂದ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ್ದರು. ಓರ್ವ ಬ್ಯಾಂಕರ್ ಆಗಿದ್ದರೂ ಪೈಸೆಯನ್ನು ಪ್ರತಿಷ್ಠೆವಾಗಿಸದೆ ಮನುಕುಲದ ಮಮತೆಯನ್ನು ಘನತೆಯಾಗಿಸಿ ಮೆರೆದು ನಿಂತ ನಾಯಕನ ಬದುಕು ಮಾದರಿ.  ಇವರ ಜೀವನಶೈಲಿಯಿಂದಲೇ ಅಜರಾಮರರಾಗಿದ್ದ ಕಾರಣ ಈ ಸಮಾರಂಭ ರಾಜಕಾರಿಣಿಗಳಿಗೂ ಮಾದರಿಯ ವೇದಿಕೆಯಾಗಿದೆ ಎಂದು ಗೋಪಾಲ ಶೆಟ್ಟಿ ತಿಳಿಸಿದರು.

ಸಂಸದ ಕೀರ್ತಿಕರ್ ಮಾತನಾಡಿ ಜಯ ಗೋರೆಗಾಂ ಪರಿಸರದ ಬಹಳ ಪ್ರಭಾವಿ ವ್ಯಕ್ತಿಯಾಗಿದ್ದ ಜಯ ಅವರ ವ್ಯಕ್ತಿತ್ವವೂ ಪ್ರಜ್ವಲವಾಗಿತ್ತು. ಅಖಂಡ ಸಮಾಜವನ್ನು ಒಗ್ಗೂಡಿಸಿ ಮುನ್ನಡೆದ ಧುರೀಣ. ಸೇವೆ ಮೂಲಕವೇ ಜಯ ನಿಜಾರ್ಥದ ಭೂಷಣರಾಗಿದ್ದಾರೆ. ಗೋರೆಗಾಂನ ಮಾಣಿಕ್ಯರಾಗಿ ಬಾಳಿದ ಇವರು ನಮಗೂ ಹಿರಿಮೆಯನ್ನು ತಂದ ಸ್ನೇಹಿತರಾಗಿ ಮರೆಯಾಗಿರುವುದು ಬೇಸರವೆಣಿಸಿದೆ. ಇಂತಹ ಮೇರು ವ್ಯಕ್ತಿತ್ವದ ಜಯ ಅಮರರಾಗಿದ್ದು ದಂತಕಥೆಯಾದ ಅವರನ್ನು ಮರಣೋತ್ತರವಾಗಿಯೂ ಗೌರವಿಸುವುದು ನಮ್ಮ ಧರ್ಮವಾಗಿದೆ ಎಂದರು.

ಎಂ.ವೇದಕುಮಾರ್ ಬೆಂಗಳೂರು, ಹರಿಕೃಷ್ಣ ಬಂಟ್ವಾಳ್, ಭಾರತ್ ಬ್ಯಾಂಕ್‍ನ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಮತ್ತಿತರ ಗಣ್ಯರು, ಜಯ ಸುವರ್ಣರ ಸುಪುತ್ರರಾದ ಸುಭಾಷ್ ಜೆ.ಸುವರ್ಣ, ದಿನೇಶ್ ಜೆ.ಸುವರ್ಣ, ಯೋಗೇಶ್ ಜೆ. ಸುವರ್ಣ, ಸೊಸೆಯಂದಿರಾದ ನಿಶಿತಾ ಸೂರ್ಯಕಾಂತ್, ಸೌಮ್ಯ ಸುಭಾಷ್, ದೀಪ್ತಿ ದಿನೇಶ್, ದೀಪ್ತಿ ಯೋಗೇಶ್, ಮೊಮ್ಮಕ್ಕಳು, ಬಂಧು-ಮಿತ್ರರು, ನಿಕಟವರ್ತಿಗಳು, ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಬಿಲ್ಲವರ ಅಸೋಸಿಯೇ ಶನ್ ಮುಂಬಯಿ ಮತ್ತು ಇದರ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಾರತ್ ಬ್ಯಾಂಕ್‍ನ ನಿರ್ದೇಶಕರು, ಉನ್ನತಾಧಿಕಾರಿಗಳು ಸೇರಿದಂತೆ ಸುವರ್ಣರ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಜರಿದ್ದರು.

ಆದಿಯಲ್ಲಿ ಅಗಲಿದ ದಿವ್ಯಚೇತನ ಜಯ ಸುವರ್ಣರಿಗೆ ಮೌನ ಪ್ರಾರ್ಥನೆಯೊಂದಿಗೆ ಬಾಷ್ಪಾಂಜಲಿ ಕೋರಲಾಯಿತು. ಬಳಿಕ ನಮ್ಮ ಕುಡ್ಲ ನಿರ್ಮಿತ ಸುವರ್ಣರ ಜೀವನ ಶೈಲಿಯ ಸಾಕ್ಷ ್ಯಚಿತ್ರ ಪ್ರದರ್ಶಿಸಲಾಯಿತು. ಸೂರ್ಯಕಾಂತ್ ಜೆ.ಸುವರ್ಣ ಸ್ವಾಗತಿಸಿ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ ನೀಡಿ ಗೌರವಿಸಿದರು. ನಿತ್ಯಾನಂದ ಡಿ.ಕೋಟ್ಯಾನ್ ಅತಿಥಿüಗಳನ್ನು ಪರಿಚಯಿಸಿದರು. ಲತೇಶ್ ಎಂ.ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಸಾಲ್ಯಾನ್ ವಂದನಾರ್ಪಣೆಗೈದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Traffic chaos in Santhekatee-Kallianpura-Nejar Roa [2 Comments]
View More

Final Journey Of Peter Xavier D’souza (94 Years) | LIVE From SanthekatteFinal Journey Of Peter Xavier D’souza (94 Years) | LIVE From Santhekatte
Obituary : Peter Xavier D’Souza(94), Mount Rosary, KallianpurObituary : Peter Xavier D’Souza(94), Mount Rosary, Kallianpur
Tribute to Nithyananda Kemmannu | ಶ್ರಧಾಂಜಲಿ ಸಭೆ |Tribute to Nithyananda Kemmannu | ಶ್ರಧಾಂಜಲಿ ಸಭೆ |
Two plots for Sale Near Nejar Water Tank, 1 km to Santhekatte, Kallianpura.Two plots for Sale Near Nejar Water Tank, 1 km to Santhekatte, Kallianpura
Rozaricho Gaanch September Issue 2021Rozaricho Gaanch September Issue 2021
Milarchi Laram - Issue Monthi Fest, 2021Milarchi Laram - Issue Monthi Fest, 2021
Mount Rosary, Santhekatte: ‘Rozaricho Gaanch’ Special Decennial Year 2011-2021Mount Rosary, Santhekatte: ‘Rozaricho Gaanch’ Special Decennial Year 2011-2021
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi