ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ; `ಜಯ ಸಿ.ಸುವರ್ಣ’ ಪುಸ್ತಕ ಬಿಡುಗಡೆ
Kemmannu News Network, 15-12-2021 10:56:57
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ; `ಜಯ ಸಿ.ಸುವರ್ಣ’ ಪುಸ್ತಕ ಬಿಡುಗಡೆ
ಕನ್ನಡಿಗರಲ್ಲಿ ಮಾತೃಭಾಷಾಭಿಮಾನ ಹೆಚ್ಚಾಗಿರುತ್ತದೆ : ಡಾ| ಶಿವರಾಮ ಕೆ.ಭಂಡಾರಿ
ಮುಂಬಯಿ (ಆರ್ಬಿಐ), ಡಿ.01: ಕನ್ನಡಿಗರಲ್ಲಿ ಮಾತೃಭಾಷಾಭಿಮಾನ ಹೆಚ್ಚಾಗಿರುತ್ತದೆ ಅನ್ನುವುದನ್ನು ಈ ಕನ್ನಡ ವಿಭಾಗ ಜಾಗತಿಕವಾಗಿ ಸಿದ್ಧಿಸಿ ತೋರಿಸಿದೆ. ನಿತ್ಯಾನಂದರು ರಚಿಸಿದ ಈ ಅದು ಸಾಹಿತ್ಯ ಕೃತಿ ಅಲ್ಲವಾಗಿದ್ದರೂ ಸಾಹಿತ್ಯವನ್ನು ಪೆÇೀಷಿಸಿ ಬೆಳೆಸಿದ ದಿವ್ಯಚೇತನ ಜಯ ಸುವರ್ಣರ ಜೀವನಶೈಲಿಯನ್ನು ಕೃತಿ ರೂಪವಾಗಿಸಿ ಸಾಹಿತ್ಯಲೋಕಕ್ಕೆ ಅರ್ಪಿಸಿರುವುದು ಪ್ರಶಂಸನೀಯ ಎಂದು ಹೇರ್ ಸ್ಟೈಲೋ ಪ್ರಸಿದ್ಧ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ, ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ ತಿಳಿಸಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್ನಲ್ಲಿರುವ ಮುಂಬಯಿ ವಿವಿ ವಿದ್ಯಾನಗರಿಯ ಕನ್ನಡ ವಿಭಾಗದ ಸಭಾಗೃಹದಲ್ಲಿ ಇಂದಿಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಇವರ ಅಧ್ಯಕ್ಷತೆಯಲ್ಲಿ ನಡೆಸಲಾದ ಕೃತಿ ಬಿಡುಗಡೆ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮದ ಲ್ಲಿ ಮುಖ್ಯ ಅತಿಥಿüಯಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಅತಿಥಿü ಅಭ್ಯಾಗತರಾಗಿ ಹಿರಿಯ ಸಾಹಿತಿ ಕೊಲ್ಯಾರು ರಾಜು ಶೆಟ್ಟಿ ಉಪಸ್ಥಿತರಿದ್ದು ಬಿಲ್ಲವರ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಆಂಗ್ಲ ಭಾಷೆಯಲ್ಲಿ ರಚಿಸಿದ `ಜಯ ಸಿ.ಸುವರ್ಣ’ ಪುಸ್ತಕ ಬಿಡುಗಡೆ ಗೊಳಿಸಿ ಶಿವರಾಮ ಭಂಡಾರಿ ಮಾತನಾಡಿ ಮುಂಬಯಿ ವಿಶ್ವವಿದ್ಯಾಲಯದ ಮರಾಠಿ ಭವನದಲ್ಲಿ ಅವರ ಕೃತಿ ಬಿಡುಗಡೆ ಗೊಂಡಿರುವುದನ್ನು ನೆನಪಿಸಿಕೊಂಡÀು ತನ್ನ ಕೃತಿಗೆ ಎಲ್ಲಡೆ ಆದ್ಯತೆ ಸಿಕ್ಕಿರುವುದು ಖುಷಿ ತಂದಿದೆ ಎಂದರು. ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವರ್ಗೀಯ ಎಂ.ಬಿ ಕುಕ್ಯಾನ್ ಚಿನ್ನದ ಪದಕಕ್ಕೆ ಆಯ್ಕೆಯಾದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ ರ್ಯಾಂಕ್ ವಿಜೇತ ವಿದ್ಯಾಥಿರ್üನಿ ಪಾರ್ವತಿ ಸುಧಾಕರ್ ಪೂಜಾರಿ (ತೆಕ್ಕಟ್ಟೆ- ಕುಂದಾಪುರ) ರಚಿತ ಕೊಲ್ಯಾರು ರಾಜು ಶೆಟ್ಟಿ ಅವರ ಬದುಕು ಬರಹದ ಬಗ್ಗೆ ಶೋಧ ಸಂಪ್ರಬಂಧವನ್ನು ವಿಭಾಗಕ್ಕೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಡಾ| ಜಿ.ಎನ್ ಉಪಾಧ್ಯ ರಚಿತ ಅಯ್ದ ಲೇಖನಗಳ ಸಂಗ್ರಹ ಸಾಹಿತ್ಯ ಮಾರ್ಗ ಕೃತಿಯನ್ನು ಡಾ| ಭಂಡಾರಿ ಅನಾವರಣ ಗೊಳಿಸಿ ಶುಭಾರೈಸಿದರು.
ರೋನ್ಸ್ ಬಂಟ್ವಾಳ್ ಮಾತನಾಡಿ ಕನ್ನಡ ವಿಭಾಗದ ಕಾರ್ಯವೈಖರಿ ಮತ್ತು ವಿದ್ಯಾಥಿರ್üಗಳ ಪೆÇ್ರೀತ್ಸಾಹ ಹಾಗೂ ಕನ್ನಡದ ಕಾಯಕವನ್ನು ಕೊಂಡಾಡಿದರು. ಸಾಮಾಜಿಕವಾಗಿ ತಮ್ಮ ಕರ್ತವ್ಯವನ್ನು ಹಾಗೂ ಶಿವರಾಮ ಭಂಡಾರಿ ಅವರ ಸಾಧನೆಯನ್ನು ಉಲ್ಲೇಖಿಸಿ ಪ್ರಶಂಸಿಸಿದರು.
ಯಕ್ಷಗಾನದಲ್ಲಿ ವಿಶೇಷ ಅಭಿರುಚಿಯನ್ನು ಹೊಂದಿರುವ ನನ್ನಲ್ಲಿ ತಾಳಮದ್ದಲೆಗೆ ವಿಶೇಷ ಅಧ್ಯಯನ ಮಾಡಬೇಕು ಅಂದುಕೊಂಡಿದ್ದು ಅದಕ್ಕಾಗಿ ಅಗಾಧ ಸ್ಮರಣಶಕ್ತಿ ಬೇಕು ಎಂದು ಕೊಲ್ಯಾರು ರಾಜು ಶೆಟ್ಟಿ ಕಳೆದ ಆರು ದಶಕಗಳ ಮುಂಬಯಿ ಮಾಯಾನಗರಿಯ ಜೀವನದ ತಮ್ಮ ಅನುಭವವನ್ನು ತೆರೆದಿಟ್ಟರು.
ಕೃತಿಕರ್ತ ನಿತ್ಯಾನಂದ ಕೋಟ್ಯಾನ್ ಅವರು ಜಯ ಸುವರ್ಣ ಹಾಗೂ ಅವರ ಬಾಂಧವ್ಯದ ಕುರಿತು ಕೆಲವೊಂದು ಮನದಾಳದ ಮಾತುಗಳನ್ನು ಭಾವನಾತ್ಮಕವಾಗಿ ತೆರೆದಿಟ್ಟರು. ಸುವರ್ಣರ ಪ್ರಥಮ ಪುಣ್ಯತಿಥಿüಯ ದಿನ ಅವರ ಒಡನಾಟದ ನೆನಪಿನ ಸಲುವಾಗಿ ಅರ್ಪಣೆ ಮಾಡುವ ಉದ್ದೇಶದಿಂದ ಈ ಕೃತಿ ಸಿದ್ಧಪಡಿಸಿದೆ. ಅದೇ ದಿನ ಬಿಎಂಸಿ ಗೋರೆಗಾಂವ್ ಪೂರ್ವದ ರಸ್ತೆಗೆ ಜಯ ಸಿ.ಸುವರ್ಣ ಮಾರ್ಗ ಎಂದು ಘೋಷಣೆ ಮಾಡಿರುವುದು ಹರ್ಷತಂದಿದೆ. ಈ ಕೃತಿ ಕನ್ನಡ ವಿಭಾಗದಲ್ಲಿ ಲೋಕಾರ್ಪಣೆಗೊಂಡಿರುವು ಸಂತಸ ತಂದಿದೆ ಎಂದರು.
ಡಾ| ಜಿ ಎನ್ ಉಪಾಧ್ಯ ಅವರಿಂದಾಗಿ ಸಾಮಾನ್ಯ ಜನರೂ ವಿವಿಗೆ ಹತ್ತಿರ ಆದರು ಉಪಾಧ್ಯ ಅವರಿಂದಾಗಿ ವಿವಿ ಮಟ್ಟದಲ್ಲಿ ಗುರುತಿಸಿ ನನ್ನ ಕುರಿತು ಪುಸ್ತಕ ಹೊರತರುವಂತಾಯ್ತು. ಅವರ ಬದುಕು ಬರಹದ ಕುರಿತು ಕೃತಿಯನ್ನು ರಚಿಸಿದ ಪಾರ್ವತಿ ಪೂಜಾರಿ ಅವರ ಅವರ ಶ್ರಮ ಸಾಧನೆ ಪ್ರಶಂಸನೀಯ ಎಂದÀು ಕೊಲ್ಯಾರು ತಿಳಿಸಿದರು.
ಸಂಘಟನೆಯಿಂದ ಬಲಯುತರಾಗಿರಿ, ವಿದ್ಯೆಯಿಂದ ಸ್ವತಂತ್ರರಾಗಿರಿ ಎಂಬ ನಾರಾಯಣ ಗುರುಗಳ ತತ್ವವನ್ನು ನೆನಪಿಸಿಕೊಂಡರು. ಮುಂಬಯಿಯನ್ನು ಬೆಳೆಸುವುದರಲ್ಲಿ ತುಳು ಕನ್ನಡಿಗರ ಪಾತ್ರ ಮಹತ್ತರವಾದುದು. ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾಥಿರ್üಗಳಿಗೆ ಸಹಕಾರದ ಅಗತ್ಯತೆಯನ್ನು ಗಮನಕ್ಕೆ ತಂದರು. ಜಯ ಸುವರ್ಣರ ಕುರಿತಾದ ಕೃತಿ ಕನ್ನಡ ವಿಭಾಗದಲ್ಲಿ ಬಿಡುಗಡೆಗೊಳಿಸಿದಕ್ಕೆ ಸಂಭ್ರಮದ ತಂದಿದೆ ಎಂದÀು ಅಧ್ಯಕ್ಷೀಯ ಭಾಷ್ಣದಲ್ಲಿ ಡಾ| ಉಪಾಧ್ಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಸಂಶೋಧನಾ ವಿದ್ಯಾಥಿರ್üಗಳ ವಿದ್ಯಾಚೇತನ ಪುರಸ್ಕಾರ ನಾಮಾಂಕಿತ ಶಿಷ್ಯವೇತನವಾಗಿಸಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ವಿಶ್ವಸ್ಥೆ ಅನುಶ್ರೀ ಶಿವರಾಮ ಭಂಡಾರಿ ಇವರು ಕನ್ನಡ ವಿಭಾಗದ ಸಂಶೋಧನ ವಿದ್ಯಾಥಿರ್ü ಜಯ ಸಿ.ಸಾಲ್ಯಾನ್ ಅವರಿಗೆ ಮತ್ತು ಉದ್ಯಮಿ ರಮಾನಂದ ಸಾಲ್ಯಾನ್ ಅಳಿಯೂರು (ಮೂಡಬಿದ್ರೆ) ಇವರು ಅನಿತಾ ಪಿ.ತಾಕೊಡೆ ಅವರಿಗೆ ಕೊಡಮಾಡಿದ ಮೊತ್ತವನ್ನು ರೋನ್ಸ್ ಬಂಟ್ವಾಳ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಪಾರ್ವತಿ ಪೂಜಾರಿ ಅವರು ಕೊಲ್ಯಾರು ರಾಜು ಶೆಟ್ಟಿ ಅವರ ಬದುಕು ಬರಹ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಗ್ರಂಥ ಗೌರವ ಸಮರ್ಪಣೆ ಮಾಡಿದರು. ಎಂ. ಬಿ ಕುಕ್ಯಾನ್ ಬಂಗಾರದ ಪದಕ ಪಡೆದಿರುವ ಪಾರ್ವತಿ ಪೂಜಾರಿ ಹಾಗೂ ಕಲಾ ಭಾಗ್ವತ್, ಸಂಶೋಧನ ವಿದ್ಯಾಥಿರ್üಗಳಾದ ನಳಿನಾ ಪ್ರಸಾದ್ ಹಾಗೂ ಅನಿತಾ ಪಿ.ತಾಕೊಡೆ ಅವರಿಗೆ ಡಾ| ಉಪಾಧ್ಯ ಗ್ರಂಥ ಗೌರವ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಮೀಲ ಬಾನು, ಸವಿತಾ ಆರುಣ್ ಶೆಟ್ಟಿ, ಲಕ್ಷ್ಮೀ ರಾಥೋಡ್ ಉಪಸ್ಥಿತರಿದ್ದು ಕಲಾಭಾಗ್ವತ್ ಸ್ವಾಗತ ಗೀತೆ ಹಾಡಿದರು. ಪ್ರತಿಭಾ ರಾವ್ ವಂದನಾರ್ಪಣೆಗೈದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link