ಗೋಕುಲ ಬ್ರಹ್ಮ ಕಲಶೋತ್ಸವದ ದ್ವಿತೀಯ ದಿನದ ಸಂಭ್ರಮ


Rons Bantwal
Kemmannu News Network, 10-05-2022 19:48:54


Write Comment     |     E-Mail To a Friend     |     Facebook     |     Twitter     |     Print


ಬಿಎಸ್‍ಕೆಬಿಎ-ಗೋಪಾಲಕೃಷ್ಣ ಟ್ರಸ್ಟ್ ; ಗೋಕುಲ ಬ್ರಹ್ಮ ಕಲಶೋತ್ಸವದ ದ್ವಿತೀಯ ದಿನದ ಸಂಭ್ರಮ - ಸಂಸ್ಕೃತವು ಭಗವದ್ ಭಾಷಾವಾಗಿದೆ : ಪುತ್ತಿಗೆ ಸುಗುಣೇಂದ್ರ ಶ್ರೀ

ಮುಂ¨ಯಿ, ಮೇ.09: ಸಂಸ್ಕೃತವು ಭಗವದ್ ಭಾಷಾವಾಗಿದೆ. ಆದುದರಿಂದ ಸಂಸ್ಕೃತವು ಪರ ಲೋಕಿಯ ಭಾಷೆಯೂ ಆಗಿದ್ದು ಪಾವನ ಭಾಷೆಯಾಗಿದೆ. ಇದೀಗ ಮುಂಬಯಿಯ ಹೃದಯ ಭಾಗದಲ್ಲಿ ಸ್ಥಾನಿತನಾದ ಶ್ರೀ ಕೃಷ್ಣನನ್ನು ಓಲೈಸಲು ಸಂಸ್ಕಾರವುಳ್ಳ ಸಂಸ್ಕೃತ ಭಾಷೆ ಪೂರಕವಾಗಿದೆ. ಕಾರಣ ಶ್ರೀಕೃಷ್ಣನ ಹೃದಯ ಭಾಷೆಯೇ ಸಂಸ್ಕೃತವಾಗಿದೆ. ಉಡುಪಿ ಶ್ರೀ ಕೃಷ್ಣನು ಅನ್ನ ಬ್ರಾಹ್ಮಣನಾಗಿದ್ದು ಇಂದು ಉಡುಪಿಯ ಉಪಹಾರವು ವಿಶ್ವ ಪ್ರಸಿದ್ಧಿಯಾಗಿವೆ. ಭಗವಂತನ ಭಕ್ತಿ ಪ್ರಚಾರಕ್ಕೆ ಬ್ರಾಹ್ಮಣರು ಸೇವಾಕರ್ತರಾಗಿದ್ದು ಇವೆಲ್ಲವುಗಳ ಫಲವೂ ಈ ಗೋಕುಲ ಆಗಿದೆ. ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಇಂದಿಲ್ಲಿ ಸೋಮವಾರ ಸಾಯನ್ ಪೂರ್ವದ ಗೋಕುಲ ನೂತನ ಸಭಾಗೃಹದಲ್ಲಿ ಗೋಕುಲದ ಬ್ರಹ್ಮಕಲಶೋತ್ಸವ ಸಮಾರಂಭದ ದ್ವಿತೀಯ ದಿನದ ಸಭಾ ಕಾರ್ಯಕ್ರಮ ಉದ್ದೇಶಿಸಿ ಸುಗುಣೇಂದ್ರ  ಶ್ರೀಪಾದರು ಮಾತನಾಡಿದರು.

ಪ್ರಧಾನ ಅಭ್ಯಾಗತರಾಗಿ ಇಸ್ಕಾನ್ ಜುಹೂ ಮುಂಬಯಿ ಮುಖ್ಯಸ್ಥ ಗುರು ಗೌರಂಗ್‍ದಾಸ್ ಸ್ವಾಮೀಜಿ, ಶ್ರೀ ಷಣ್ಮುಖಾನಂದ ಫೈನ್ ಆರ್ಟ್ಸ್ ಮತ್ತು ಸಂಗೀತ ಸಭಾ (ಕಿಂಗ್ ಸರ್ಕಲ್) ಇದರ ಅಧ್ಯಕ್ಷ ಡಾ| ವಿ.ಶಂಕರ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಶಂಸನಗೈದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಿಗ್ಗೆ ಸಾಮಾನ್ಯ ಶಾಂತಿ ಪ್ರಾಯಶಿತ ಹೋಮ, ಸಂಜೆವಾಣಿ ಮಹಾ ಮೃತ್ಯುಂಜಯ ಯಾಗ, ಬಿಂಬ ಶುದ್ಧಿ ಪ್ರಕ್ರಿಯೆ, ಮಹಾಪೂಜೆ, ಸಂಜೆ ಅಕ್ಷತೆ ಹೋಮ, ಅಷ್ಠ ಹೋಮ ನೆರವೇರಿಸಲ್ಪಟ್ಟವು. ಗೋಕುಲದ ಹಿರಿಯ ಪುರೋಹಿತ ವಿದ್ವಾನ್ ವೇ| ಮೂ| ಎಡಪದವು ಮುರಳೀಧರ ತಂತ್ರಿ,
ಕೃಷ್ಣರಾಜ ಉಪಾಧ್ಯಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದರು. ವಿವಿಧ ಭಜನಾ  ಮಂಡಳಿಗಳು ಭಜನೆ ನಡೆಸಿದವು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಧ್ಯಾಹ್ನ ವಿದುಷಿ ವಿನಿತಾ ಆಚಾರ್ಯ ಮತ್ತು ವಿದುಷಿ ವಿದ್ಯಾ ತಂತ್ರಿ ಇವರು ಭಕ್ತಿ ರಸಮಂಜರಿ, ಸಂಜೆ ಕಲಾಜಗತ್ತು ಚಿಣ್ಣರಬಿಂಬದ ಕಲಾವಿದ ಮಕ್ಕಳು ಸಾಂಸ್ಕೃತಿಕ ನೃತ್ಯ ವೈಭವ, ಕು| ಪ್ರಿಯಾಂಜಲಿ ರಾವ್ (ಭರತ ನಾಟ್ಯಂ), ಕು| ಹರ್ಷದಾ ಜಂಬೇಕರ್ (ಕಥಾಕ್) ನೃತ್ಯಗಳನ್ನು ಹಾಗೂ ಸಹನಾ ಸ್ಕೂಲ್ ಆಫ್ ಪಪೆರ್Çಮಿಂಗ್ ಆರ್ಟ್ಸ್ ತಂಡವು ವಿದುಷಿ ಸಹನಾ ಭಾರದ್ವಾಜ್ ರಚಿಸಿ ನಿರ್ದೇಶಿತ ಗೋಪಿ ಗೀತಾಂ ವಂಶಿಕ ನೃತ್ಯ ಪ್ರಸ್ತುತ ಪಡಿಸಿದರು.  ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್ ಮತ್ತು ಸ್ಮೀತಾ ಭಟ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ,  ಬಿ.ರಮಾನಂದ ರಾವ್, ಸುಧೀರ್ ಆರ್.ಎಲ್ ಶೆಟ್ಟಿ, ಸಹನಾ ಎ.ಪೆÇೀತಿ, ಕೆ.ಸುಬ್ಬಣ್ಣ ರಾವ್, ಡಾ| ಸುರೇಂದ್ರಕುಮಾರ್ ಹೆಗ್ಡೆ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಶ್ಯಾಮಲ ಶಾಸ್ತ್ರಿ ಪ್ರಾರ್ಥನೆಯನ್ನಾಡಿದರು. ಬಿಎಸ್‍ಕೆಬಿ ಉಪಾಧ್ಯಕ್ಷ ವಾಮನ ಹೊಳ್ಳ  ಸ್ವಾಗತಿಸಿದರು. ನವನೀತ ರಾವ್ ಅತಿಥಿüಗಳನ್ನು ಪರಿಚಯಿಸಿದರು. ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಿಎಸ್‍ಕೆಬಿ ಉಪಾಧ್ಯಕ್ಷೆ ಶೈಲಿನಿ ರಾವ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕೋಶಾಧಿಕಾರಿ ಸಿಎ| ಹರಿದಾಸ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi: Traffic congestion and dangers to pedestria
View More

Inter Parish Football Tounament on 29th May at Milagres Ground.Inter Parish Football Tounament on 29th May at Milagres Ground.
Final Journey Of Mark Martis (63 Years) | LIVE from ShankarpuraFinal Journey Of Mark Martis (63 Years) | LIVE from Shankarpura
Final Journey Of Robert William Aranha (57 Years) | LIVE from MoodubelleFinal Journey Of Robert William Aranha (57 Years) | LIVE from Moodubelle
Final Journey Of Rocky D’silva (60 Years) | LIVE from MukamarFinal Journey Of Rocky D’silva (60 Years) | LIVE from Mukamar
Final Journey Of Clement Fernandes ( 56 Years ) | LIVE from ThottamFinal Journey Of Clement Fernandes ( 56 Years ) | LIVE from Thottam
Fr. Harold Pereira 27th Priesthood Day Celebration in KemmannuFr. Harold Pereira 27th Priesthood Day Celebration in Kemmannu
Milarchi Lara Souvenir - Ester Issue, April 2022Milarchi Lara Souvenir - Ester Issue, April 2022
FERNANDES GROUP inaugurates its Overseas office at Deira, Dubai, UAEFERNANDES GROUP inaugurates its Overseas office at Deira, Dubai, UAE
Radhakrishna computers under Navodaya education Trust (R) in Kemmannu.Radhakrishna computers under Navodaya education Trust (R) in Kemmannu.
Sites for Sale in Santhekatte, Thottam, Alevoor and many other places, Please contact...Sites for Sale in Santhekatte, Thottam, Alevoor and many other places, Please contact...
Land for sale in KemmannuLand for sale in Kemmannu
Milarchi Lara - Milagres Cathedral - January 2022Milarchi Lara - Milagres Cathedral - January 2022
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi