ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ


Guruprasad T N
Kemmannu News Network, 26-05-2023 19:36:40


Write Comment     |     E-Mail To a Friend     |     Facebook     |     Twitter     |     Print


ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿಸುವುದೇ ಎನ್‌ಇಪಿ ಗುರಿ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ
ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ- 2020 ಯ ಅನುಷ್ಠಾನದಲ್ಲಿ ಸವಾಲುಗಳಿವೆ. ಅವುಗಳನ್ನು ಮೆಟ್ಟಿ ನಿಂತು ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿಸುವುದೇ ಎಲ್ಲರ ಗುರಿಯಾಗಿದೆ.  ದೇಶ ಮೊದಲು, ನಂತರ ವ್ಯಕ್ತಿತ್ವ ಮತ್ತು ಶಿಕ್ಷಕ ಎಂಬ ಚಿಂತನೆ ಎಲ್ಲಾ ವಿದ್ಯಾರ್ಥಿಗಳಲ್ಲಿರಬೇಕು, ಎಂದು  ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ ನಡೆದ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜುಗಳ ಸಹಯೋಗದಲ್ಲಿ ‘ರಾಷ್ಟ್ರೀಯ ಶಿಕ್ಷಣ ಪದ್ಧತಿ 2020 ರ ಅನುಷ್ಠಾನ: ಸವಾಲುಗಳು ಮತ್ತು ಭವಿಷ್ಯ- ಪಠ್ಯಕ್ರಮ, ಮೌಲ್ಯಮಾಪನ, ಫಲಿತಾಂಶʼ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಬಿಆರ್‌ಎಸ್‌ಎಂ ನ ಮಧ್ಯ ಕ್ಷೇತ್ರೀಯ ಪ್ರಮುಖ್‌ ಡಾ. ರಘು ಅಕಮಂಚಿ ಮಾತನಾಡಿ, ಶಿಕ್ಷಕರು ಎನ್‌ಇಪಿಯ ಸಾಧಕ-ಬಾಧಕಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಬುದ್ಧಿಯ ಜೊತೆಗೆ ಹೃದಯಕ್ಕೂ ಶಿಕ್ಷಣ ನೀಡಿ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಬೆಳೆಯುವಂತೆ ಮಾಡುವ ಉದ್ದೇಶ ಈ ಶಿಕ್ಷಣ ನೀತಿಗಿದೆ, ಎಂದರು. ಮುಖ್ಯ ಅತಿಥಿ, ಎಬಿಆರ್‌ಎಸ್‌ಎಂ ರಾಷ್ಟ್ರೀಯ ಸಂಘಟನಾ ಜೊತೆ ಕಾರ್ಯದರ್ಶಿ ಜಿ. ಲಕ್ಷ್ಮಣ್‌ ಅವರು ಮಾತನಾಡಿ, ಹೊಸ ಶಿಕ್ಷಣ ನೀತಿ ಹೊಸ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತದೆ, ಎಂದರು.

ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಕಾರ್ಯದರ್ಶಿ ಪ್ರೊ. ಮನೀಶ್‌ ಆರ್‌. ಜೋಷಿ ದಿಕ್ಸೂಚಿ ಭಾಷಣ ಮಾಡಿದರು. ಬೆಂಗಳೂರು ಕೆಆರ್‌ಎಂಎಸ್‌ಎಸ್‌ ರಾಜ್ಯಾಧ್ಯಕ್ಷ ಡಾ.ಗುರುನಾಥ್ ಬಡಿಗೇರ್, ಸಲಹಾ ಸಮಿತಿಯ ಮುಖ್ಯಸ್ಥ, ಮಂಗಳೂರು ವಿಶ್ವವಿದ್ಯಾನಿಲಯದ ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಡಾ. ಮಂಜಯ್ಯ, ಮಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ರಮೇಶ್‌ ಕುಮಾರ್‌ ಮೊದಲಾದವರು ವೇದಿಕೆಯಲ್ಲಿದ್ದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಭೇಟಿ ನೀಡಿದರು. ಕೆಆರ್‌ಎಂಎಸ್‌ಎಸ್‌ ಮಂಗಳೂರು ವಿಭಾಗದ ಮುಖ್ಯಸ್ಥೆ ಡಾ.ಸುಧಾ ಎನ್‌ ವೈದ್ಯ, ಕಾರ್ಯದರ್ಶಿ ವೆಂಕಟೇಶ್‌ ನಾಯಕ್‌, ಕೋಶಾಧಿಕಾರಿ ಆಶಾಲತಾ, ಸಂಚಾಲಕಿ ಡಾ. ಶೋಭಾ, ಸಹ-ಸಂಯೋಜಕಿ ಡಾ. ಜ್ಯೋತಿ ಪ್ರಿಯಾ, ಸಂಘಟನಾ ಕಾರ್ಯದರ್ಶಿ ಡಾ. ಸುಭಾಷಿಣಿ ಶ್ರೀವತ್ಸ ಮೊದಲಾದವರು ಉಪಸ್ಥಿತರಿದ್ದರು. ಕೇರಳದ ಕೇಂದ್ರೀಯ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಕಾವ್ಯ ಹೆಗ್ಡೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜಿ. ಲಕ್ಷ್ಮಣ್‌ ಹಾಗೂ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರನ್ನು ಸನ್ಮಾನಿಸಲಾಯಿತು.

ಸಂವಾದ, ಪ್ರಶ್ನೋತ್ತರ…
ಈ ಸಂದರ್ಭ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ನಡೆದ ಸಂವಾದದಲ್ಲಿ ಯುಜಿಸಿಯ ಸಹ ಕಾರ್ಯದರ್ಶಿ ಡಾ. ಎನ್‌ ಗೋಪು ಕುಮಾರ್‌, ಚಾಣಕ್ಯ ವಿಶ್ವವಿದ್ಯಾನಿಲಯದ ಕಲೆ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಜೋಷಿ  ವಿಚಾರ ಮಂಡಿಸಿದರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಕಾರ್ಯಕಾರಿ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಷಿ ಚರ್ಚೆಯ ನೇತೃತ್ವ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ನಿಖಾಯದ ಡೀನ್‌ ಪ್ರೊ.ಮಂಜುನಾಥ್ ಪಟ್ಟಾಭಿ ಸಂವಾದದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಪ್ರಶ್ನೋತ್ತರ ಕಾರ್ಯಕ್ರಮ ಗಮನ ಸೆಳೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಲತಾ ಎ. ಪಂಡಿತ್‌ ವಹಿಸಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi hosts its first ever national level dragon b
View More

Jayashree Krishna Parisara Premi Samiti to celebrate 93rd Birth Anniversary of Late George Fernandes with award ceremonyJayashree Krishna Parisara Premi Samiti to celebrate 93rd Birth Anniversary of Late George Fernandes with award ceremony
Thanksgiving Mass & Farewell Ceremony | Fr Victor D’Souza || kemmannu ChannelThanksgiving Mass & Farewell Ceremony | Fr Victor D’Souza || kemmannu Channel
Final Journey Of Lily Serrao | Live From Kemmannu || Kemmannu ChannelFinal Journey Of Lily Serrao | Live From Kemmannu || Kemmannu Channel
St Anthony the wonder worker of Dornahalli feast on 13th June 2023 - All ae invited.St Anthony the wonder worker of Dornahalli feast on 13th June 2023 - All ae invited.
Rozaricho Gaanch June, 2023 Issue from Mount Rosary Church, Kallianpur,Rozaricho Gaanch June, 2023 Issue from Mount Rosary Church, Kallianpur,
Importance of the need for an ambulance with oxygen:Importance of the need for an ambulance with oxygen:
Final Journey of Jacob DMello || kemmannu channelFinal Journey of Jacob DMello || kemmannu channel
ICYM Kemmannu Presents Badminton Tournament | ICYM || Live From KallianpurICYM Kemmannu Presents Badminton Tournament | ICYM || Live From Kallianpur
Final Journey Of Ileen D’ Lima | Live From Kemmannu || Kemmannu ChannelFinal Journey Of Ileen D’ Lima | Live From Kemmannu || Kemmannu Channel
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Now Open - Namma Minimart, Santhekatte - Kemmanunu Cross, - Call for Home Delivery 9611175167Now Open - Namma Minimart, Santhekatte - Kemmanunu Cross, - Call for Home Delivery 9611175167
Wee Care Play Home Badanidiyoor | 3rd Annual day CelebrationWee Care Play Home Badanidiyoor | 3rd Annual day Celebration
Lourdsachi Zar - December Issue from Our Lady of Lourdes church, Kanajar, Udupi.Lourdsachi Zar - December Issue from Our Lady of Lourdes church, Kanajar, Udupi.
Milarchi-Lara-from-Milagres-Cathedral-Kallianpur-January-2023-IssueMilarchi-Lara-from-Milagres-Cathedral-Kallianpur-January-2023-Issue
KPL Super League • Cricket | LIVE from KemmannuKPL Super League • Cricket | LIVE from Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi