ಕರ್ನಾಟಕ ಸಂಘ ಮುಂಬಯಿ ಇದರ ಮೂವರು ಸಾಧಕರಿಗೆ ಸಾಧನ ಶಿಖರ ಗೌರವ ಪುರಸ್ಕಾರ


Rons Bantwal
Kemmannu News Network, 24-03-2012 11:18:55


Write Comment     |     E-Mail To a Friend     |     Facebook     |     Twitter     |     Print


ಮುಂಬಯಿ:ಕರ್ನಾಟಕ ಸಂಘ,ಮುಂಬಯಿ ಕಳೆದ ೭೯ ವರ್ಷಗಳಲ್ಲಿ ಮುಂಬಯಿ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಭಾಷೆ, ಕಲೆ,ಸಾಹಿತ್ಯ-ಸಂಸ್ಕೃತಿಯ ಸೇವೆಗೈಯುತ್ತಾ ಬಂದಿದ್ದು, ಕಳೆದ ಆರು ವರ್ಷಗಳಿಂದ ಸಂಘವು‘ಸಾಹಿತ್ಯ ಸಂಸ್ಕೃತಿ ಸಮಾವೇಶ’ ಕಾರ್ಯಕ್ರಮವನ್ನು ಹಮ್ಮಿ ಕೊಂಡು ಬಂದಿರುತ್ತದೆ ಈ ಸಂದರ್ಭದಲ್ಲಿ ಸಂಘವು ಹೊರನಾಡಿನಲ್ಲಿ ಕನ್ನಡದ ನಾಡು-ನುಡಿ ಸಾಹಿತ್ಯ ಸಂಸ್ಕೃತಿ-ಸಂಘಟನೆ, ಶಿಕ್ಷಣ, ರಂಗಭೂಮಿ, ಪತ್ರಿಕೋದ್ಯಮ ಇತ್ಯಾದಿ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಮೂವರು ಸಾಧಕರಿಗೆ ಸಂಘದ ‘ಸಾಧನ ಶಿಖರ ಗೌರವ ಪುರಸ್ಕಾರ’ ನೀಡಲಾಗುವುದು.

ಈ ವರ್ಷ ಮಾರ್ಚ್ ಶನಿವಾರ ದಿನಾಂಕ ೨೪ ಮತ್ತು ರವಿವಾರ ೨೫ ೨೦೧೨ ರಂದು ಸಂಘದ ಡಾ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಜರಗುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ| ಸಂಜೀವ ಕೆ. ಶೆಟ್ಟಿ, ಡಾ| ಬಿ.ಆರ್ ಮಂಜುನಾಥ್ ಮತ್ತು ಶ್ರೀಮತಿ ಉಮಾ ನಾಗಭೂಷಣ್ ರವರಿಗೆ ನೀಡಲಾಗುವದು. ಈ ಪುರಸ್ಕಾರವು ಸ್ಮರಣಿಕೆ, ಪ್ರಶಸ್ತಿ ಪತ್ರ, ಶಾಲು ಫಲಪುಷ್ಪ ಹಾಗೂ ರೂ.೧೦,೦೦೦/= ನಗದನ್ನು ಹೊಂದಿರುತ್ತದೆ ಎಂದು ಸಂಘದ ಗೌರವ ಕಾರ್ಯದರ್ಶಿ ಭರತ್ ಕುಮಾರ್ ಪೊಲಿಪು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

 

ಸಾಧಕರು

ಡಾ|ಸಂಜೀವ ಶೆಟ್ಟಿ

ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾಗಿರುವ ಡಾ|ಸಂಜೀವ ಶೆಟ್ಟಿಯವರು ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವೊಂದನ್ನು ಗಳಿಸಿದ್ದಾರೆ.ಖ್ಯಾತ ಕವಿ ಲೇಖಕ, ಕತೆಗಾರ, ವಿಮರ್ಶಕ ಜೊತೆಗೆ ಸಮಾಜ ಸೇವಕರೂ ಆಗಿರುವರು. ನೇರ ನುಡಿ, ಸಾಮಾಜಿಕ ಅನ್ಯಾಯದ ವಿರುದ್ದ ಹೋರಾಡುವ ದಿಟ್ಟತನ ಶ್ರೀ ಶೆಟ್ಟಿಯವರ ಜೀವನದ ಕೆಲವು ವೈಶಿಷ್ಟ್ಯಗಳು. ಇವರು ಸೊಮೈಯ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಗೈದಿದ್ದಾರೆ.ವಿವಿಧ ಸಂಘ ಸಂಸ್ಥೆಗಳ ಜೊತೆ ನಿಕಟ ಸಂಪರ್ಕವಿರಿಸಿದ್ದಾರೆ.ಕನ್ನಡ ಪ್ರಚಾರ ಸಮಿತಿಯ ಸಂಚಾಲಕರಾಗಿ ಮುಂಬಯಿಯ ಕನ್ನಡ ಕಂಪನ್ನು ಒಳನಾಡಿನಲ್ಲೂ ಪರಿಚಯಿಸುತ್ತಾ ಬಂದಿದ್ದಾರೆ. ಮನಪಾ ಕನ್ನಡ ಶಾಲಾ ಮಕ್ಕಳು ಶಿಕ್ಷಕರ ಕುರಿತಂತೆ ಕಾಳಜಿ ಇರಿಸಿ ಸ್ಥಾಪನೆಯಾದ ಕನ್ನಡ ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಒಕ್ಕೂಟದಲ್ಲೂ ಸಕ್ರಿಯರಾಗಿದ್ದಾರೆ.

ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೆಲವು ಕೃತಿಗಳು ಹೀಗಿವೆ :
೧. ಮನ ಮಿಡಿಯುತ್ತಿದೆ ೨.ತರಂಗ ೩.ಚುಟುಕು ಮಲ್ಲಿಗೆ ೪.ಹಸಿದವರು
೫. ಕೃತಿ ರಶ್ಮಿ ೬. ಸ್ನೇಹದ ನೆಲದಲ್ಲಿ ೭. ಬರೆ ನೆರಳು ೮. ಅಭಿವ್ಯಕ್ತಿ

ಇತ್ಯಾದಿ. ಇವರ ಇಂಗ್ಲೀಷ್ ಕವನಗಳ ಸಂಕಲನವೂ ಬಂದಿರುತ್ತದೆ.

ಡಾ| ಬಿ. ಆರ್.ಮಂಜುನಾಥ್

ವೃತ್ತಿಯಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ|ಬಿ.ಆರ್.ಮಂಜುನಾಥ ಅವರ ಪ್ರವೃತ್ತಿಯಲ್ಲಿ ನಟ, ನಿರ್ದೇಶಕ,ನಾಟಕಕಾರ,ಸಂಗೀತ, ಚಿತ್ರಕಲೆಯಲ್ಲಿಯೂ ಪರಿಣಿತಿಯನ್ನು ಸಾಧಿಸಿರುವ ಅವರು ಕವಿ ಮನಸ್ಸಿನ ವಿಜ್ಞಾನಿ,ಸೃಜನಶೀಲ ನಾಟಕಕಾರ ಎಂಬ ಹೆಗ್ಗಳಿಕೆದೂ ಪಾತ್ರರಾಗಿದ್ದಾರೆ. ಮುಂಬೈಯ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾಗಿರುವ ಮೈಸೂರು ಅಸೋಸಿಯೇಶನ್ ಇದರ ಸಕ್ರಿಯ ಸದಸ್ಯರಾಗಿ ಅದರ ಉನ್ನತಿಗೆ ಶ್ರಮಿಸುತ್ತಾ ಬಂದಿದ್ದಾರೆ.

ಮುಂಬೈ ಕನ್ನಡ ರಂಗಭೂಮಿಗೆ ಹೊಸತನವನ್ನು ನೀಡಲು ಪ್ರಯತ್ನಿಸಿ ಯಶಸ್ವಿಯಾದ ಡಾ|ಮಂಜುನಾಥ ಮೊದ ಮೊದಲು ನಾಟಕಗಳನ್ನು ನಿರ್ದೇಶನ ಮಾಡಿ ಒಳ್ಳೆಯ ರಂಗಕೃತಿಗಳ ರಚನೆಗೆ ಮುಂದಾದರು.ತ್ರಿವೇಣಿಯವರ ಪ್ರಸಿದ್ಧ ಕಾದಂಬರಿ ‘ಅಪಸ್ವರ ಅಪಜಯ’ವನ್ನು ಬಿಸಿಲ್ಗುದುರೆ ಎಂಬುದಾಗಿ ರೂಪಾಂತರ ಮಾಡಿ ನಾಟಕವಾಡಿಸಿದರು. ಮಾಸ್ತಿ ಅವರ ‘ಚೆನ್ನಮ್ಮ’ಕಥೆ ‘ಬೆಂದಕಾಳೂರು’ ನಾಟಕವಾಯಿತು.‘ ನಾ ದ್ಯಾವ್ರುನ್ನೋಡು ಬ್ಯಾಕು’ ಅವರ ಜಾನಪದ ಶೈಲಿಯ ಪ್ರಕಟಿತ ನಾಟಕ. ರಂಗೋಲಿ ನ್ಯಾಯ, ಬೆಳ್ಳಿ ಬೈಲು, ಹೋಗಿಡದಲಿ ಹೂ ಅರಳಿಹುದು,ಹೀರಾ,ಬೋನು,ಸಾಕಾರ ಮೊದಲಾದ ನಾಟಕಗಳನ್ನು ಬರೆದು ಆಡಿಸಿ ಜನಪ್ರಿಯರಾಗಿದ್ದಾರೆ.ಅವರ ಪ್ರತಿಭೆಗೆ ಮೆಚ್ಚಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.ನೃತ್ಯ,ಸಂಗೀತ,ಜಾನಪದ,ಚಿತ್ರಕಲೆ,ಶಿಲ್ಪದಲ್ಲಿಯೂ ಆಸಕ್ತಿ.ಡಾ|ಮಂಜುನಾಥ ಉತ್ತಮ ವಾಗ್ಮಿಯೂ ಆಗಿದ್ದಾರೆ.

ಪಾಶ್ಚಾತ್ಯ ರಂಗಭೂಮಿಯನ್ನು ಹತ್ತಿರದಿಂದ ಅಧ್ಯಯನ ಮಾಡಿ ಬಂದು ಕನ್ನಡದಲ್ಲಿ ನಾಟಕಗಳನ್ನು ಬರೆದು ಆಡಿಸಿ ಕನ್ನಡ ರಂಗಭೂಮಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದ ವಿಜ್ಞಾನಿ ಡಾ| ಮಂಜುನಾಥರ ಸಾಧನೆ ನಾಡಿಗೆ ಮಾದರಿಯಾಗಿದೆ.

ಶ್ರೀಮತಿ ಉಮಾ ನಾಗಭೂಷಣ

ಸಂಗೀತಕ್ಕೆ ಹೆಸರಾದ ಕುಟುಂಬಕ್ಕೆ ಸೇರಿದ ಶ್ರೀಮತಿ ಉಮಾ ನಾಗಭೂಷಣ ಅವರು ಮೂಲತಃ ತುಮಕೂರಿರವರು.ಮೈಸೂರು ವಿಶ್ವ ವಿದ್ಯಾಲಯದಿಂದ ಬಿ.ಎ ಮುಗಿಸಿ ಇವರು ಸೀನಿಯರ್ ದರ್ಜೆ ಕಾಲೇಜಿನ ಸಂಗೀತ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ರ್‍ಯಾಂಕ್ ಪಡೆದವರು. ಸಂಗೀತ ಪ್ರೇಮಿಗಳಿಂದಲೂ ಮತ್ತು ಪತ್ರಿಕಾ ವಿಮರ್ಶಕರಿಂದಲೂ ಅಪಾರ ಪ್ರಶಂಸೆ ಗಳಿಸಿದ್ದಾರೆ. ೧೯೮೨ರಿಂದ ಮುಂಬಯಿಯಲ್ಲಿ ನೆಲೆಸಿ ಡೊಂಬಿವಲಿಯಲ್ಲಿ ಮೈಸೂರು ಸಂಗೀತ ವಿದ್ಯಾಲಯ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.ಅದರ ಪ್ರಾಂಶುಪಾಲರೂ ಆಗಿರುವ ಪ್ರಸಿದ್ಧ ಸಂಗೀತ ಕಲಾವಿದೆ ಉಮಾ ಅವರು ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ಇವರ ಪ್ರತಿಭೆಯನ್ನು ಗುರುತಿಸಿ ಡೊಂಬಿವಲಿಯ ರೋಟರಿ ಕ್ಲಬ್,ಬೆಂಗಳೂರಿನ ಹೆಚ್ಚಿನ ಸಂಗೀತ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

Happy Birthday dear Rev Fr. Lancy Fernandes, SJ.Happy Birthday dear Rev Fr. Lancy Fernandes, SJ.
Milagres cup at Kallianpur on Jan 22nd.Milagres cup at Kallianpur on Jan 22nd.
Mass offered for the soul of ALICE BARBOZAMass offered for the soul of ALICE BARBOZA
Veez Konkani Issuel # 53Veez Konkani Issuel # 53
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Veez Konkani WeeklyVeez Konkani Weekly
Newly constructed House for sale at Nejar near Santhekatte.Newly constructed House for sale at Nejar near Santhekatte.
Maria TravelsMaria Travels
Rozarich Gaanch September- 2018Rozarich Gaanch September- 2018
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India