ಹೈಕೋರ್ಟ್‌ ವಾರ್ತೆಗಳು,ಹೋಂಸ್ಟೇ ದಾಳಿ : ಸರ್ಕಾರಗಳಿಗೆ ನೋಟಿಸ್‌


Udayavani, 17-09-2012 20:01:13


Write Comment     |     E-Mail To a Friend     |     Facebook     |     Twitter     |     Print




ಹೈಕೋರ್ಟ್‌ ವಾರ್ತೆ : 1

ಬೆಂಗಳೂರು : ಪಬ್‌ ದಾಳಿ, ಹೋಂಸ್ಟೇ ದಾಳಿ ಸೇರಿದಂತೆ ಮಂಗಳೂರಿನಲ್ಲಿ 2006ರಿಂದ 2012ರವರೆಗೆ ನಡೆದಿರುವ ಹಲವು ದಾಳಿ ಪ್ರಕರಣಗಳ ಬಗ್ಗೆ ವಿದ್ಯುನ್ಮಾನ ಮಾಧ್ಯಮಗಳು ವೈಭವೀಕರಿಸಿ ಪ್ರಸಾರ ಮಾಡಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸೋಮವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಲೂಯಿಸ್‌ ಜೆ.ಪಿಂಟೋ ಸೇರಿದಂತೆ 23 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್‌ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಮಹಿಳಾ ಆಯೋಗ, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ, ಮಂಗಳೂರು ಪೊಲೀಸ್‌ ಕಮಿಷನರ್‌ಗೆ ನೋಟಿಸ್‌ ಜಾರಿ ಮಾಡಿತು.

ಅಲ್ಲದೇ, ಪ್ರಕರಣವನ್ನು ಮಾಧ್ಯಮ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ಜತೆಗೆ, ಈ ಅರ್ಜಿಯನ್ನು ಸೇರ್ಪಡೆಗೊಳಿಸಿ ವಿಚಾರಣೆ ನಡೆಸುವುದಾಗಿ ಆದೇಶಿಸಿತು.

ಏನದು ಪ್ರಕರಣ?: ಮಂಗಳೂರಿನಲ್ಲಿ 2006ರಲ್ಲಿ ನಡೆದ ಸ್ಯಾರಿ ಪ್ಯಾಲೇಸ್‌ ಘಟನೆ, 2009ರಲ್ಲಿನ ಪಬ್‌ ದಾಳಿ ಹಾಗೂ ಈಚೆಗೆ ಸಂಭವಿಸಿದ ಹೋಂ ಸ್ಟೇ ದಾಳಿ ಪ್ರಕರಣವನ್ನು ಚಿತ್ರೀಕರಿಸಿದ ವಿದ್ಯುನ್ಮಾನ ಮಾಧ್ಯಮಗಳ, ವೈಭವೀಕರಿಸಿ ಅತಿ ರಂಜಿಗವಾಗಿ ಪ್ರಸಾರ ಮಾಡಿವೆ. ಅಲ್ಲದೆ, ಇಂತಹ ದಾಳಿಗಳು ನಡೆಯುವ ಬಗ್ಗೆ ಮುಂಚಿತವಾಗಿ ತಿಳಿದಿದ್ದರೂ, ಪೋಲೀಸರಿಗೆ ಮಾಹಿತಿ ನೀಡುವುದಿಲ್ಲ. ವೀಕ್ಷಕರನ್ನು ಸೆಳೆಯುವ ಉದ್ದೇಶದಿಂದ ವಿದ್ಯುನ್ಮಾನ ಮಾಧ್ಯಮಗಳು ಈ ರೀತಿ ಕಾರ್ಯ ನಿರ್ವಹಿಸುತ್ತಿದೆ. ಇದು ಕೂಡ ಅಪರಾಧ ಎಂದು ಆರೋಪಿಸಿದ್ದ ಅರ್ಜಿದಾರರು, ಮಾಧ್ಯಮಗಳ ಕಾರ್ಯ ವೈಖರಿ ಕುರಿತು ನಿರ್ದಿಷ್ಟ ಮಾರ್ಗಸೂಚಿಗಳನ್ನು ರಚಿಸುವಂತೆ ಕೋರಿದ್ದರು.

ಹೈಕೋರ್ಟ್‌ ವಾರ್ತೆ : 2

ಬೆಂಗಳೂರು : ’ಕೇಂದ್ರ ರೈಲ್ವೇ ಇಲಾಖೆಯು ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದ್ದು, ಅದರಲ್ಲೂ ಕರ್ನಾಟಕ ರಾಜ್ಯದ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. ಕರ್ನಾಟಕ ಜನತೆ ಹಿತಾಸಕ್ತಿಯನ್ನು ಇಲಾಖೆ ಪರಿಗಣಿಸುತ್ತಿಲ್ಲ. ಆದರೆ, ನೆರೆ-ಹೊರೆ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಜನರಿಗಾಗಿ ರೈಲ್ವೇ ಇಲಾಖೆ ಇದೆಯೋ ಅಥವಾ ರೈಲ್ವೆ ಇಲಾಖೆಗಾಗಿ ಜನರು ಇದ್ದಾರೋ ಎಂಬುದು ನಮಗೆ ತಿಳಿಯುತ್ತಿಲ್ಲ...!’

ಕರಾವಳಿಯ ಜನತೆಯ ದಶಕಗಳ ಕಾಲದ ಬೇಡಿಕೆ ಹಾಗೂ ಆಗ್ರಹದ ಹೊರತಾಗಿಯೂ ಬೆಂಗಳೂರು- ಮಂಗಳೂರು ರೈಲು ಸೇವೆಯನ್ನು ಕಾರಾವಾರಕ್ಕೆ ವಿಸ್ತರಿಸದ ರೈಲ್ವೇ ಇಲಾಖೆಯನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಪರಿಯಿದು.

ಅಲ್ಲದೆ, ರಾತ್ರಿ ವೇಳೆ ಬೆಂಗಳೂರಿನ ಯಶವಂತಪುರದಿಂದ ಮಂಗಳೂರಿಗೆ ಒಂದೇ ರೈಲು ಸೇವೆ ಕಲ್ಪಿಸಬೇಕು. ನಂತರ ಮಂಗಳೂರಿನಿಂದ ಅದೇ ರೈಲಿನ ಕೆಲ ಬೋಗಿಗಳನ್ನು ಕಾರವಾರಕ್ಕೆ ಹಾಗೂ ಉಳಿದ ಬೋಗಿಗಳನ್ನು ಕಣ್ಣೂರು ಕಡೆಗೆ ತೆರಳುವ ರೈಲುಗಳಿಗೆ ಜೋಡಣೆ ಮಾಡಬೇಕು. ಇಲ್ಲವೆಂದರೆ ಹಗಲು ವೇಳೆ ಕಲ್ಪಿಸಲಾಗುತ್ತಿರುವ ಬೆಂಗಳೂರು ಮಂಗಳೂರು-ಕಣ್ಣೂರು ರೈಲು ಸೇವೆಯನ್ನು ನಿಲ್ಲಿಸಿ, ರಾತ್ರಿ ವೇಳೆ ಆ ರೈಲಿನ ಸೇವೆ ಕಲ್ಪಿಸಬೇಕು ಎಂದು ಹೈಕೋರ್ಟ್‌ ಸೋಮವಾರ ಕೇಂದ್ರ ರೈಲ್ವೇ ಇಲಾಖೆಗೆ ಆದೇಶಿಸಿದೆ.

ಬೆಂಗಳೂರು-ಮಂಗಳೂರು ರೈಲು ಸಂಚಾರವನ್ನು ಕಾರವಾರದವರೆಗೆ ವಿಸ್ತರಿಸಬೇಕೆಂಬ ಮನಿವಿಯನ್ನು ಪರಿಗಣಿಸದೆ ಕೇವಲ ಕಣ್ಣೂರಿನವರೆಗೆ ವಿಸ್ತರಿಸಿ ಕೇಂದ್ರ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ. ಮಂಗಳೂರಿನಿಂದ ಕಾರವಾರಕ್ಕೆ 270 ಕೀ.ಮೀ.ಅಂತರವಿದ್ದು, ಹಾಗೆಯೇ ಮಂಗಳೂರಿಂದ ಕಣ್ಣೂರಿಗೆ 230 ಕೀ.ಮೀ.ದೂರವಿದೆ. ಹಗಲು ವೇಳೆ ಮಂಗಳೂರಿನಿಂದ ಉಡುಪಿಗೆ ಯಾವುದೆ ರೈಲು ಸೌಲಭ್ಯವಿಲ್ಲ. ಇದರಿಂದ ಕಾರವಳಿ ಜನತೆಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗಿತ್ತು. ಅಲ್ಲದೆ, ಬೆಂಗಳೂರು-ಮಂಗಳೂರು ರೈಲು ಸಂಚಾರವನ್ನು ಕಾರವಾರದವರೆಗೆ ವಿಸ್ತರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾಗಳಿಗೆ ಆದೇಶಿಸುವಂತೆ ಕೋರಲಾಗಿತ್ತು.

ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹಗಲು ವೇಳೆಯಲ್ಲಿ ಬೆಂಗಳೂರಿನಿಂದ ಕಣ್ಣೂರಿಗೆ ರೈಲು ಸೇವೆ ಕಲ್ಪಿಸಲಾಗಿದೆ, ಆದರೆ, ರಾತ್ರಿ ವೇಳೆಯಲ್ಲಿ ರೈಲು ಸೇವೆ ಕಲ್ಪಿಸಲಾಗಿಲ್ಲ ಎಂದು ಸರ್ಕಾರಿ ವಕೀಲರು ಕೋರ್ಟ್‌ ಗಮನಕ್ಕೆ ತಂದರು. ಇದರಿಂದ ಆಕ್ರೋಶಗೊಂಡ ಮುಖ್ಯ ನ್ಯಾಯಮೂರ್ತಿ ವಿ.ಜೆ.ಸೇನ್‌ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಹಗಲು ವೇಳೆಯಲ್ಲಿ ರೈಲು ಸೇವೆ ಕಲ್ಪಿಸಿದಲ್ಲಿ ಹೆಚ್ಚಿನ ಜನರಿಗೆ ಪ್ರಯೋಜವಾಗುವುದಿಲ್ಲ. ಕೇಂದ್ರ ರೈಲ್ವೇ ಇಲಾಖೆ ಕರ್ನಾಟದ ಜನತೆಯ ಆಶಯಗಳಿಗೆ ಸ್ಪಂದಿಸುತ್ತಿಲ್ಲ. ಆದರೆ, ನೆರೆ-ಹೊರೆ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ರೈಲು ಯೋಜನೆ ಕಲ್ಪಿಸುವ ವಿಷಯದಲ್ಲಿ ಕರ್ನಾಟಕಕ್ಕೆ ಪ್ರತಿವರ್ಷವೂ ಅನ್ಯಾಯವಾಗುತ್ತಿದೆ ಎಂದು ಚಾಟಿ ಬೀಸಿತು.

ಅಷ್ಟೇ ಅಲ್ಲದೆ, ರೈಲ್ವೆ ಇಲಾಖೆ ರಾಜ್ಯದ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಸಮರ್ಪಕ ಸೇವೆ ಕಲ್ಪಿಸಬೇಕು. ಹಗಲು ಸಮಯದಲ್ಲಿ ಎಷ್ಟು ಜನರು ಕಾರವಾರಕ್ಕೆ ಹೋಗುತ್ತಾರೆ. ಆ ಬಗ್ಗೆ ಇಲಾಖೆಯಲ್ಲಿ ಅಂಕಿ-ಅಂಶಗಳಿದೆಯೇ ಎಂದು ಪ್ರಶ್ನಿಸಿತು. ನಂತರ, ರಾತ್ರಿ ವೇಳೆ ಕಾರವಾರಕ್ಕೆ ರೈಲು ಸೇವೆಯನ್ನು ಕಲ್ಪಿಸಿದಲ್ಲಿ ಸಾಕಷ್ಟು ಜನರಿಗೆ ಉಪಯೋಗವಾಗುತ್ತದೆ. ವ್ಯಾಪಾರಿಗಳು, ಉದ್ಯೋಗಿಗಳು ಹಗಲಿನಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ರಾತಿ Åವೇಳೆ ಪ್ರಯಾಣಿಸಬಹುದು. ಒಂದೊಮ್ಮೆ, ಹಗಲಿನಲ್ಲಿ ಪ್ರಯಾಣಿಸಿದರೆ ಇಡೀ ದಿನ ವ್ಯರ್ಥವಾಗುತ್ತದ ಎಂದು ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಎಕ್ಸ್‌ಪ್ರೆಸ್‌ ಮಾದರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಒಂದೇ ರೈಲು ಸೇವೆ ಕಲ್ಪಿಸಬೇಕು. ನಂತರ ಅಲ್ಲಿಂದ ಕಣ್ಣೂರು ಮತ್ತು ಕಾರವಾರ ಹೋಗುವ ರೈಲುಗಳಿಗೆ ಬೋಗಿಗಳನ್ನು ಹೆಚ್ಚುವರಿಯಾಗಿ ಲಿಂಕ್‌ ಮೂಲಕ ಕಾರವಾರ ಹಾಗೂ ಕಣ್ಣೂರಿಗೆ ಸೇವೆ ಕಲ್ಪಿಸಬೇಕು. ಇದರಿಂದ ಕೇವಲ ಒಂದು ಎಂಜಿನ್‌ ಮಾತ್ರ ಹೆಚ್ಚುವರಿಯಾಗಿ ಉಪಯೋಗಿಸಬೇಕಾಗುತ್ತದೆ ಹೊರತು, ಇಲಾಖೆಗೆ ಹೆಚ್ಚಿನ ಹೊರಬೀಳುವುದಿಲ್ಲ ಎಂದು ನ್ಯಾಯಾಲಯ ಸೂಚಿಸಿತು.

ಹೈಕೋರ್ಟ್‌ ವಾರ್ತೆ : 3

ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಜೀವನವನ್ನಾಧರಿಸಿದ ಸತ್ಯಾನಂದ ಚಿತ್ರದ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ, ಯು/ಎ ಪ್ರಮಾಣ ಪತ್ರ ನೀಡಲಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಸೋಮವಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ನಿತ್ಯಾನಂದ ಸ್ವಾಮೀಜಿ ಮತ್ತು ನಟಿ ರಂಜಿತಾ ರಾಸಲೀಲೆ ಪ್ರಕರಣ ಬಹಿರಂಗ ಗೊಂಡ ನಂತರ, ಆ ಘಟನೆಯನ್ನಾಧರಿಸಿ ನಿರ್ಮಾಪಕ ಹಾಗೂ ನಿರ್ದೇಶಕ ಮದನ್‌ ಪಟೇಲ್‌ ಸತ್ಯಾನಂದ ಚಿತ್ರವನ್ನು ನಿರ್ಮಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ನಿತ್ಯಾನಂದ ಸ್ವಾಮೀಜಿಯು, ಸತ್ಯಾನಂದ ಚಿತ್ರ ತಮ್ಮ ಜೀವನ ಕಥೆಯನ್ನಾಧರಿಸಿದೆ. ಚಿತ್ರದಲ್ಲಿ ತಮ್ಮ ಬಗ್ಗೆ ಅವಹೇಳಕಾರಿ ಬಿಂಬಿಸಲಾಗಿದ್ದು, ಇದರಿಂದ ತಮ್ಮ ತೇಜೋವಧೆಯಾಗಲಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಚಿತ್ರವನ್ನು ವೀಕ್ಷಿಸಿ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿ ವರದಿ ಸಲ್ಲಿಸುವಂತೆ ಹೈಕೋರ್ಟ್‌, ಸೆನ್ಸಾರ್‌ ಮಂಡಳಿಗೆ ನಿರ್ದೇಶಿಸಿತ್ತು. ಅದರಂತೆ ಚಿತ್ರ ವೀಕ್ಷಿಸಿದ ಸೆನ್ಸಾರ್‌ ಮಂಡಳಿ ಕೆಲ ದೃಸ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ, ಯು/ಎ ಪ್ರಮಾಣ ಪತ್ರ ನೀಡಿತ್ತು. ಈ ಸಂಬಂಧ ಸೋಮವಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತು. ಅಲ್ಲದೆ, ಚಿತ್ರ ಬಿಡುಗಡೆ ಕುರಿತು ತೀರ್ಮಾನ ನ್ಯಾಯಾಲಯಕ್ಕೆ ಒಳಪಟ್ಟಿದ್ದು, ಈ ಸಂಬಂಧ ಅಂತಿಮ ತೀರ್ಪು ಹೊರಡಿಸಬೇಕು ಎಂದು ಕೋರಿದೆ. ಪ್ರಮಾಣ ಪತ್ರ ಅಂಗೀಕರಿಸಿದ ನ್ಯಾ.ಎನ್‌. ಆನಂದ್‌ ಅವರು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.

ಹೈಕೋರ್ಟ್‌ ವಾರ್ತೆ : 4

ಬೆಂಗಳೂರು : ಕೆಐಎಡಿಬಿ ಭೂಮಿ ಅಕ್ರಮ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮರುಗೇಶ್‌ ನಿರಾಣಿಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ಇತ್ಯರ್ಥ ಪಡಿಸಿದೆ.

ಪ್ರಕರಣದಲ್ಲಿ ಸಚಿವ ನಿರಾಣಿ ಅವರನ್ನು ಬಂಧಿಸುವ ಅಗತ್ಯ ಸದ್ಯಕ್ಕಿಲ್ಲ ಎಂದು ಲೋಕಾಯುಕ್ತ ಪೋಲೀಸರು ನೀಡಿದ ಹೇಳಿಕೆಯನ್ನು ಅಧರಿಸಿದ ನ್ಯಾ.ಎಚ್‌.ಎನ್‌. ನಾಗಮೋಹನ ದಾಸ್‌ ಅವರು, ಒಂದೊಮ್ಮೆ ಬಂಧನ ಭೀತಿ ಎದುರಾದಾಗ ಲೋಕಾಯುಕ್ತ ಕೋರ್ಟ್‌ನಲ್ಲಿ ಪರಿಹರಿಸಿಕೊಳ್ಳುವಂತೆ ಸಚಿವ ನಿರಾಣಿ ಅವರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದರು.

ಪ್ರಕರಣವೇನು?: 2010ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ, ಸ್ವಂತ ಲಾಭಕ್ಕಾಗಿ ಸಚಿವ ಮುರುಗೇಶ್‌ ನಿರಾಣಿ ತಮ್ಮ ಸಹೋದರ ಸಂಬಂದಿ ಹಾಗೂ ಆಪ್ತರೊಂದಿಗೆ ಸೇರಿ ಅಸ್ತಿತ್ವವಿಲ್ಲದ ಕಂಪೆನಿಗಳಿಗೆ ಹೆಸರಿಸಿದ್ದು, ಅವುಗಳಿಗೆ ಕೆಐಎಡಿಬಿ ಮೂಲಕ 1,690ಕ್ಕೂ ಹೆಚ್ಚು ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಹಾರ್ಡ್‌ವೇರ್‌ ಪಾರ್ಕ್‌ ಸ್ಥಾಪನೆಗಾಗಿ ದೇವನಹಳ್ಳಿಯ ಬಳಿ ಕೆಐಎಡಿಬಿಯು ವಶಪಡಿಸಿಕೊಂಡ 27 ಎಕರೆ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಷನ್‌ ಮಾಡಿಸಿದ್ದಾರೆ. ಇದರಿಂದ ರಾಜ್ಯ ಬೊಕ್ಕಸಕ್ಕೆ 130 ಕೋಟಿ ರೂ.ನಷ್ಟ ಉಂಟಾಗಿದೆ ಎಂದು ಆರೋಪಿಸಿ ಉದ್ಯಮಿ ಆಲಂ ಪಾಷಾ ಲೋಕಾಯುಕ್ತ ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಚಿವರು ಹೈಕೋರ್ಟ್‌ ಮೋರೆ ಹೋಗಿದ್ದರು.

ಹೈಕೋರ್ಟ್‌ ವಾರ್ತೆ : 5

ಬೆಂಗಳೂರು: ಮರಣದಂಡನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ವಿಲೇವಾರಿ ಮಾಡಬೇಕು ಎಂದು ಹೈಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳು ಕನ್ನಡ ಭಾಷೆಯಲ್ಲಿ ಇದ್ದ ಸಂದರ್ಭದಲ್ಲಿ ಕನ್ನಡ ಭಾಷೆಯ ಜ್ಞಾನವುಳ್ಳ ನ್ಯಾಯಮೂರ್ತಿಗಳ ವಿಶೇಷ ಪೀಠ ರಚನೆ ಮಾಡುವುದು ಅಗತ್ಯವಿದೆ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾ.ಡಿ.ಬಿ. ಬೋಸ್ಲೆ ಹಾಗೂ ನ್ಯಾ.ಎಸ್‌.ಎನ್‌. ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಚರ್ಚ್‌ ಬಾಂಬ್‌ ಸ್ಫೋಟದ ಆರೋಪಿಗಳಾದ ದೀನ್‌ದಾರ್‌ ಅಂಜುಮಾನ್‌ ಸಂಘಟನೆಯ ಸದಸ್ಯರು ಮತ್ತು ದಂಡುಪಾಳ್ಯ ಹಂತಕರು ಸೇರಿದಂತೆ ಮರಣ ದಂಡನೆಗೆ ಒಳಪಟ್ಟ ಹಲವು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯು ಪೀಠ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ 50 ಸಾವಿರ ಪುಟಗಳ ದಾಖಲಾತಿಗಳನ್ನು ಕನ್ನಡದಲ್ಲಿದ್ದವು. ಆದರೆ, ನ್ಯಾಯಮೂರ್ತಿ ಬೋಸ್ಲೆ ಅವರಿಗೆ ಕನ್ನಡ ತಿಳಿಯದ ಹಿನ್ನೆಲೆಯಲ್ಲಿ, ಎಲ್ಲಾ ದಾಖಲೆಗಳನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡುವಂತೆ ಆರೋಪಿಗಳ ವಕೀಲರಿಗೆ ಸೂಚಿಸಿದರು.

ಇದಕ್ಕೆ ಸಮ್ಮತಿ ಸೂಚಿಸದ ಆರೋಪಿ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿತ ಕಡತ ಹಾಗೂ ವಿಷಯಗಳು ಸುಮಾರು 50 ಸಾವಿರ ಪುಟಗಳಷ್ಟಿದ್ದು, ಎಲ್ಲವೂ ಕನ್ನಡ ಭಾಷೆಯಲ್ಲಿವೆ. ಹೀಗಾಗಿ, ಎಲ್ಲವನ್ನೂ ಇಂಗ್ಲೀಷ್‌ಗೆ ತರ್ಜುಮೆ ಮಾಡಲು ಕಷ್ಟಸಾಧ್ಯ. ಆಲ್ಲದೆ, ತುರ್ಜಮೆ ಕಾರ್ಯ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು ಮತ್ತು ಈ ಕುರಿತು ವಿಚಾರಣೆ ನಡೆಸಲು ವಿಶೇಷ ನ್ಯಾಯಪೀಠ ರಚನೆ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಅವರಿಗೆ ಪ್ರಕರಣವನ್ನು ವರ್ಗಾಯಿಸಿತು.

ಹೈಕೋರ್ಟ್‌ ವಾರ್ತೆ : 5

ಬೆಂಗಳೂರು : ತನ್ನ ಮೂರು ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೆಂಚ್‌ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಪ್ರಕರಣದ ಸಂಬಂಧ ಜಾಮೀನು ಕೋರಿ ಪಾಸ್ಕಲ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಪರ ವಕೀಲರು ಪಾಸ್ಕಲ್‌ ಅವರ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಅಲ್ಲದೆ, ಆರೋಪಿಗೆ ಜಾಮೀನು ನೀಡುವ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಎಚ್‌.ಎನ್‌. ನಾಗಮೋಹನ ದಾಸ್‌ ಅವರು ಸರ್ಕಾರ ವಕೀಲರ ಹೇಳಿಕೆಯನು ದಾಖಲಿಸಿಕೊಂಡು, ನಾಲ್ಕುದಿನಗಳಲ್ಲಿ ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಸೆ.21ಕ್ಕೆ ಮುಂದೂಡಿದರು.

ಚಾರ್ಜ್‌ ಶೀಟ್‌ನಲ್ಲಿ ಏನಿದೆ?:

ಅತ್ಯಾಚಾರ ಪ್ರಕರಣದ ಆರೋಪಿ ಪಾಸ್ಕಲ್‌ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಗ್ರೌಂಡ್ಸ್‌ ಠಾಣಾ ಪೋಲೀಸರು ಸೆ.12ರಂದು ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ರಾಜತಾಂತ್ರಿಕ ಅಧಿಕಾರಿಯು ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಧೃಡಪಡಿಸಿದ್ದಾರೆ. ದೋಷಾರೋ ಪಟ್ಟಿಯಲ್ಲಿ 60 ಜನರ ಸಾಕ್ಷಿಗಳ ದೂರುದಾರ ಪಾಸ್ಕಲ್‌ ಪತ್ನಿ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೆ, ಪಾಸ್ಕಲ್‌ನ ಡಿಎನ್‌ಎ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸೇರಿದಂತೆ ಮತ್ತಿತರ ಸಾಕ್ಷ್ಯಾಧಾರಗಳನ್ನು ಒಳಗೊಂಡ 150 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್‌. ರವಿಕಾಂತೇಗೌಡ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ತನ್ನ ಮೂರು ವರ್ಷದ ಪುತ್ರಿಯ ಮೇಲೆ ತಮ್ಮ ಪತಿ ಪಾಸ್ಕಲ್‌ ಫ್ರೆಂಚ್‌ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್‌ ಅತ್ಯಾಚಾರ ಎಸಗಿದ್ದಾರೆ ಎಂದು ಪಾಸ್ಕಲ್‌ ಪತ್ನಿ ಸುಜಾ ಜೋನ್ಸ್‌ ಜು.14ರಂದು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಜು.20ರಂದು ಆರೋಪಿಯನ್ನು ಪೊಲೀಸರು ಬಂಧಿಸಿದರು. ನಂತರ ಪ್ರಕರಣದಲ್ಲಿ ಪಾಸ್ಕಲ್‌ಗೆ ಅಧೀನ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಆರೋಪಿಯು ಮೇಲ್ಮನವಿ ಸಲ್ಲಿಸಿದ್ದ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi, Santhekatte Junction: Snap protest over inc [1 Comments]
View More

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Final Journey of Emilian Bridget D’Souza (80 years) | LIVE from Kemmannu | Udupi |Final Journey of Emilian Bridget D’Souza (80 years) | LIVE from Kemmannu | Udupi |
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Agricultural Land at Alevoor and Malpe (UDUPI) for Sale - Contact Direct to 9008199430.Agricultural Land at Alevoor and Malpe (UDUPI) for Sale - Contact Direct to 9008199430.
Final Journey of Judith Lewis (91 years) | LIVE From KallianpurFinal Journey of Judith Lewis (91 years) | LIVE From Kallianpur
Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi