ನಾಳೆಯಿಂದ ಆಳ್ವಾಸ್‌ ನುಡಿಸಿರಿ -2012


Udayavani

Write Comment     |     E-Mail To a Friend     |     Facebook     |     Twitter     |     Print


ಮೂಡಬಿದಿರೆ : ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನ. 16ರಿಂದ 18ರ ವರೆಗೆ ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ’ಕನ್ನಡ ಮನಸ್ಸು: ಜನಪರ ಚಳವಳಿಗಳು’ ಎಂಬ ಪರಿಕಲ್ಪನೆಯಲ್ಲಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಶುಭ ಸೇಸೆಯೊಂದಿಗೆ 9ನೇ ವರುಷದ ಆಳ್ವಾಸ್‌ ನುಡಿಸಿರಿ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಜರಗಲಿದೆ.

ಶುಕ್ರವಾರ ಮುಂಜಾನೆ 9ಕ್ಕೆ ಸಾಂಸ್ಕೃತಿಕ ಮೆರವಣಿಗೆ. 9.30ಕ್ಕೆ ಉದ್ಘಾಟನಾ ಸಮಾರಂಭ. ಪದ್ಮಶ್ರೀ ನಾಡೋಜ ಪ್ರೊ| ಕೆ.ಎಸ್‌. ನಿಸಾರ್‌ ಅಹಮದ್‌ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ| ಯು.ಆರ್‌. ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಶಾಸಕರಾದ ಕೆ. ಅಭಯಚಂದ್ರ ಹಾಗೂ ಕ್ಯಾ| ಗಣೇಶ್‌ ಕಾರ್ಣಿಕ್‌ ಉಪಸ್ಥಿತರಿರುವರು. ಅನಂತಮೂರ್ತಿ ಅವರು ’ಕನ್ನಡ ಮನಸ್ಸು: ಸಂಘರ್ಷ ಮತ್ತು ಸಾಮರಸ್ಯ’ ಕಳೆದ ಸಾಲಿನ ನುಡಿಸಿರಿ ನೆನಪಿನ ಸಂಚಿಕೆ ಅನಾವರಣಗೈಯುವರು.

ಶತಾಯುಷಿ ವಿದ್ವಾಂಸ ಪ್ರೊ| ಜಿ. ವೆಂಕಟಸುಬ್ಬಯ್ಯ ಅವರನ್ನು ಡಾ| ಪಿ.ವಿ. ನಾರಾಯಣ ಅವರ ಅಭಿವಂದನೆಯೊಂದಿಗೆ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಗೌರವಿಸುವರು.

ಕನಕಗಿರಿ ಹುಸೇನ್‌ ಸಾಬ್‌ ಅವರಿಂದ ದಾಸವಾಣಿ, ಜಿನದತ್ತ ದೇಸಾಯಿ ಅವರಿಂದ ಕವಿ ಸಮಯ- ಕವಿನಮನ 2.20ರ ವರೆಗೆ ನಡೆಯಲಿದೆ.

ಅಪರಾಹ್ನ 2.20ರಿಂದ 4ರ ವರೆಗೆ ನಡೆಯುವ ’ಕನ್ನಡ ಸಾಹಿತ್ಯಕ ಚಳವಳಿಗಳು’ ಶೀರ್ಷಿಕೆಯ ಮೊದಲ ವಿಚಾರಗೋಷ್ಠಿಯಲ್ಲಿ ಡಾ| ರಂಜಾನ್‌ ದರ್ಗಾ (ಹಳೆಗನ್ನಡಾನಂತರ ಚಳವಳಿಗಳು), ಡಾ| ನಿತ್ಯಾನಂದ ಬಿ. ಶೆಟ್ಟಿ ( ಅಚ್ಚಗನ್ನಡದ ಎಚ್ಚರ) ಹಾಗೂ ಡಾ| ಸಿ.ಆರ್‌. ಗೋವಿಂದ ರಾಜು ( ಕನ್ನಡ ಭಾಷಾ ಚಳವಳಿಗಳು) ಭಾಗವಹಿಸುವರು.

ಡಾ| ಪಾದೆಕಲ್ಲು ವಿಷ್ಣು ಭಟ್ಟರು ಡಾ| ವೆಂಕಟರಾಜ ಪುಣಿಂಚಿತ್ತಾಯ ನೆನಪು ಕಟ್ಟಿಕೊಡುವರು. ಎಸ್‌. ದಿವಾಕರ್‌ ಅವರಿಂದ ಕಥಾ ಸಮಯ, ನಾಗತಿ ಹಳ್ಳಿ ಚಂದ್ರಶೇಖರ್‌ ಅವರಿಂದ ’ನಮ್ಮ ಹಳ್ಳಿ ನಮ್ಮ ಜಗತ್ತು’ ವಿಶೇಷ ಉಪನ್ಯಾಸ, ವಿನಯಾ ವಕ್ಕುಂದ ಅವರಿಂದ ಕವಿಸಮಯ - ಕವಿನಮನ, ಸಂಜೆ 6.05ಕ್ಕೆ ಡಾ| ಕೃಷ್ಣೇ ಗೌಡರಿಂದ ಮಾತಿನ ಮಂಟಪ ಕಾರ್ಯಕ್ರಮಗಳಿರುತ್ತವೆ.

ಶನಿವಾರ

ಮುಂಜಾನೆ ರತ್ನಾಕರ ವರ್ಣಿ ವೇದಿಕೆಯಲ್ಲಿ ಪಂಡಿತ್‌ ಜಯತೀರ್ಥ ಮೇವುಂಡಿ ಅವರ ಉದಯರಾಗ, ರಾಯಚೂರು ಶೇಷಗಿರಿ ದಾಸ್‌ ಬಳಗದವರಿಂದ ದಾಸರ ಪದಗಳು, 9.30ರಿಂದ ಕೆ.ಪಿ. ಮೃತ್ಯುಂಜಯ ಅವರಿಂದ ಕವಿ ಸಮಯ-ಕವಿ ನಮನ

9.50ರಿಂದ ಎರಡನೇ ವಿಚಾರಗೋಷ್ಠಿ. ’ಸಾಮುದಾಯಿಕ ಚಳವಳಿಗಳು’ ಶೀರ್ಷಿಕೆಯ ಈ ಗೋಷ್ಠಿಯಲ್ಲಿ ಚುಕ್ಕಿ ನಂಜುಂಡ ಸ್ವಾಮಿ (ರೈತ ಚಳವಳಿ), ಧರಣೀ ದೇವಿ ಮಾಲಗತ್ತಿ (ಮಹಿಳಾ ಚಳವಳಿ) ಹಾಗೂ ಸುರೇಶ್‌ ಹೆಬ್ಳೀಕರ್‌ (ಪರಿಸರ ಚಳವಳಿ) ಭಾಗವಹಿಸುವರು.

11.40ಕ್ಕೆ ಡಾ| ಭಾಳಾ ಸಾಹೇಬ್‌ ಲೋಕಾಪುರ ಅವರಿಂದ ಕಥಾ ಸಮಯ. 12ಕ್ಕೆ ಡಾ| ಎಂ. ಮೋಹನ ಆಳ್ವರು ಡಾ| ವಿ.ಎಸ್‌. ಆಚಾರ್ಯರ ನೆನಪು ಕಟ್ಟಿಕೊಡುವರು. ನಾಗೇಶ್‌ ಜೆ. ನಾಯಕ್‌ ಅವರಿಂದ ಕವಿ ಸಮಯ - ಕವಿ ನಮನ, 1.15ಕ್ಕೆ ಸುಳ್ಯದ ಕೆ. ಆರ್‌. ಗೋಪಾಲಕೃಷ್ಣ ಭಾವನಾ ಬಳಗದವರಿಂದ ಕನ್ನಡ ಗಝಲ್ಸ್‌, ಬಸು ಬೇವಿನ ಗಿಡದ ಅವರಿಂದ ಕವಿ ಸಮಯ - ಕವಿ ನಮನ.

2.20ರಿಂದ 4ರ ವರೆಗೆ ಸಮ್ಮೇಳನದ ಮೂರನೇ ಗೋಷ್ಠಿ- ಅಖಂಡ ಕರ್ನಾಟಕದ ಅಸ್ತಿತ್ವ - ಹೋರಾಟ. ಡಾ| ಮಹಾಬಲೇಶ್ವರ ರಾವ್‌ (ಶಿಕ್ಷಣದಲ್ಲಿ ಕನ್ನಡ), ಅಡೂxರು ಕೃಷ್ಣರಾವ್‌ (ನೆಲ ಜಲ ಹೋರಾಟ) ಮತ್ತು ಸ.ರ. ಸುದರ್ಶನ (ಕನ್ನಡ ಸಂಘ ಸಂಸ್ಥೆಗಳು ಮತ್ತು ಹೋರಾಟ) ಗೋಷ್ಠಿಯಲ್ಲಿ ಭಾಗವಹಿಸುವರು.

4.10ರಿಂದ ಅಮರೇಶ ನುಗಡೋಣಿ ಅವರಿಂದ ಕಥಾ ಸಮಯ, ಡಾ| ಕುಂ. ವೀರಭದ್ರಪ್ಪ ಅವರಿಂದ ವಿಶೇಷ ಉಪನ್ಯಾಸ, 5.20ಕ್ಕೆ ಬಾಲಕೃಷ್ಣ ಕಂಜರ್ಪಣೆ ಅವರಿಂದ ಕವಿ ಸಮಯ-ಕವಿನಮನ, 5.50ರಿಂದ 6.50ರ ವರೆಗೆ ಮಿಮಿಕ್ರಿ ದಯಾನಂದ ಅವರಿಂದ ಮಾತಿನ ಮಂಟಪ ಕಾರ್ಯಕ್ರಮ.

ರವಿವಾರ

ಮುಂಜಾನೆ 5ಕ್ಕೆ ಪಂಡಿತ ಕೈವಲ್ಯ ಕುಮಾರ್‌ ಗುರವ್‌ ಅವರಿಂದ ಉದಯರಾಗ, ವಿಜಾಪುರದ ಶಶಿಕಲಾ ಶ್ರೀಕಾಂತ್‌ ಕುಲಹಳ್ಳಿ ಅವರಿಂದ ವಚನ ಸಮೃದ್ಧಿ ಗಾಯನ, 9.30ಕ್ಕೆ ಪುತ್ತೂರಿನ ಸಂಧ್ಯಾದೇವಿ ಅವರಿಂದ ಕವಿಸಮಯ-ಕವಿನಮನ ಕಾರ್ಯಕ್ರಮ.

9.50ಕ್ಕೆ ಸಮ್ಮೇಳನದ ನಾಲ್ಕನೇ ಗೋಷ್ಠಿ

ಕಲೆ - ಮಾಧ್ಯಮ ಚಳವಳಿಗಳು. ರಘುನಂದನ (ರಂಗಭೂಮಿ ಚಳವಳಿ), ಗಿರೀಶ್‌ ಕಾಸರವಳ್ಳಿ (ಚಲನಚಿತ್ರ-ಕಿರುತೆರೆ ಚಳವಳಿ) ಹಾಗೂ ಡಾ| ನಿರಂಜನ ವಾನಳ್ಳಿ (ಪತ್ರಿಕಾ ವಿದ್ಯುನ್ಮಾನ ಚಳವಳಿ) ಗೋಷ್ಠಿಯಲ್ಲಿ ಭಾಗವಹಿಸಲಿರುವರು. 11.40ಕ್ಕೆ ಬಿ. ಸುರೇಶ್‌ ಬೆಂಗಳೂರು ಅವರು ’ಏಣಗಿ ನಟರಾಜ ನೆನಪು’ ಕಟ್ಟಿ ಕೊಡುವರು. ಡಾ| ವಿಷ್ಣು ನಾಯ್ಕ ಅಂಕೋಲಾ ಅವರಿಂದ ಕವಿ ಸಮಯ - ಕವಿನಮನ 12.40ರ ವರೆಗೆ. ಡಾ. ವೀಣಾ ಶಾಂತೇಶ್ವರ ಅವರಿಂದ ಕಥಾಸಮಯ, ಭೋಜನ ವಿರಾಮದ ಬಳಿಕ 2ರವರೆಗೆ ಉಡುಪಿಯ ಚಂದ್ರಶೇಖರ ಕೆದ್ಲಾಯರಿಂದ ಭಾವಗೀತೆ, 2.20ರವರೆಗೆ ಡಾ| ಸಯ್ಯದ್‌ ಜಮೀರುಲ್ಲಾ ಷರೀಫ್‌ ಅವರಿಂದ ಕವಿ ಸಮಯ, ವಲ್ಲಿ ವಗ್ಗ ಅವರಿಂದ ಕಥಾಸಮಯ, ಬಳ್ಳಾರಿಯ ಸುಭದ್ರಮ್ಮ ಮನ್ಸೂರು ಅವರಿಂದ ರಂಗಗೀತೆಗಳ ಕಾರ್ಯಕ್ರಮ ಗಂ. 3.20ರವರೆಗೆ ನಡೆಯಲಿವೆ. ಕವಿಸಮಯ ಕವಿ ನಮನದ ಕವನಗಳಿಗೆ ಕೆ.ವಿ. ರಮಣ ಅವರು ರಾಗ ಸಂಯೋಜಿಸಿ ಸಂಗೀತ ನಿರ್ದೇಶನ ಮಾಡಲಿರುವರು.

ರವಿವಾರ ಅಪರಾಹ್ನ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈ|ರೆ| ಡಾ| ಅಲೋಶಿಯಸ್‌ ಪಾವ್‌É Ã Â²Â¡Ã Â²Â¿’ಸೋಜಾ, ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ| ಸಿ.ಪಿ. ಕೃಷ್ಣ ಕುಮಾರ್‌, ಗಿರೀಶ್‌ ಕಾಸರವಳ್ಳಿ, ಡಾ| ಸಿದ್ಧಲಿಂಗಯ್ಯ, ವೈಜಯಂತಿ ಕಾಶಿ, ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ, ಡಾ| ವಿಷ್ಣು ನಾಯ್ಕ ಅಂಕೋಲಾ, ಸುಭದ್ರಮ್ಮ ಮನ್ಸೂರು ಅವರಿಗೆ ಹಾಗೂ ’ಲೋಕ ಶಿಕ್ಷಣ ಟ್ರಸ್ಟ್‌ ಬೆಂಗಳೂರು - ಹುಬ್ಬಳ್ಳಿ’ ಸಂಸ್ಥೆಗೆ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಸಮಾರೋಪ ಭಾಷಣ ಮಾಡುವರು.

ಸಾಂಸ್ಕೃತಿಕ : ಹಗಲಿನ ಬಿಡುವೇಳೆಯಲ್ಲಿ ಆಳ್ವಾಸ್‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾಪಗಳಿರುತ್ತವೆ.

ಸಂಜೆಯಿಂದ 1. ರತ್ನಾಕರ ವರ್ಣಿ ವೇದಿಕೆ, 2. ಕೆ.ವಿ. ಸುಬ್ಬಣ್ಣ ರಂಗಮಂದಿರ, 3. ಕು.ಶಿ. ಹರಿದಾಸ ಭಟ್ಟ ವೇದಿಕೆ, 4.ಕಾರ್ಕಳ ಬಿ. ಗಣಪತಿ ಪೈ ವೇದಿಕೆ (ಆಯುರ್ವೇದ ಮುಖಮಂಟಪ) ಹಾಗೂ 5. ಡಾ| ಕೊಯಿರಾ ಎನ್‌. ಬಾಳೆಪುಣಿ ವೇದಿಕೆ (ಸೆಮಿನಾರ್‌ ಹಾಲ್‌) ಈ ಐದು ವೇದಿಕೆಗಳಲ್ಲಿ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಲಾಪಗಳು ನಡೆಯಲಿವೆ.

ಶುಕ್ರವಾರ 1. ಮೈಸೂರಿನ ವಿ| ಕೃಪಾ ಪಡೆR ಬಳಗದಿಂದ ವಂದೇ ಮಾತರಂ ನೃತ್ಯರೂಪಕ, ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿಯವರಿಂದ ಭರತನಾಟ್ಯ, 2. ನಾಡಿನ ಪ್ರಸಿದ್ಧ ಗಾಯಕರಿಂದ ಸುಗಮ ಸಂಗೀತ, ’ಪ್ರಸಂಗ ಬೆಂಗಳೂರು’ ತಂಡದಿಂದ ’ಅನಭಿಜ್ಞ ಶಾಕುಂತಲ’ ನಾಟಕ, 3. ಉಡುಪಿ ಯಕ್ಷ ರಂಗದವರಿಂದ ’ನಳ ಕಾರ್ಕೋಟಕ’. ರಾಧಾಕೃಷ್ಣ ನೃತ್ಯನಿಕೇತನದವರಿಂದ ಕೂಚಿಪುಡಿ, ಭಕ್ತ ಕನಕ ನೃತ್ಯ ರೂಪಕ, 4. ಮಂಗಳೂರಿನ ಪ್ರಿಯಾಂಕ ಕೆ.ಪಿ. ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಬಿ.ಎಚ್‌. ತನ್ವಿರಾವ್‌ ಅವರಿಂದ ಭರತನಾಟ್ಯ, ಪ್ರಕ್ಷಿಲಾ ಜೈನ್‌ ಅವರಿಂದ ಭರತಾಂಜಲಿ, 5. ನಯನ ಗೌರಿ ಸೇರಾಜೆ ಅವರಿಂದ ಹರಿಕಥೆ, ಕಾಸರಗೋಡು ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದಿಂದ ಬೊಂಬೆಯಾಟ ಏರ್ಪಡಿಸಲಾಗಿದೆ.

ಶನಿವಾರ 1. ಮುಂಬೈಯ ಪವಿತ್ರ ಭಟ್‌, ಸೋನಿಯಾ ಮಾಲ್‌ಗ‌ನ್‌ಕರ್‌ ಅವರಿಂದ ಭರತನಾಟ್ಯ, ಮಂಗಳೂರಿನ ಸನಾತನ ನಾಟ್ಯಾಲಯದವರಿಂದ ’ರಾಷ್ಟ್ರದೇವೋಭವ ’ ನೃತ್ಯ ರೂಪಕ, 2.ಪ್ರಸಿದ್ದ ಗಾಯಕರಿಂದ ಜನಪದ ಗೀತೆಗಳು, ಉಡುಪಿ ಪ್ರಹ್ಲಾದ್‌ ಆಚಾರ್ಯರಿಂದ ಶ್ಯಾಡೋ ಪ್ಲೇ, ಆಳ್ವಾಸ್‌ ವಿದ್ಯಾರ್ಥಿಗಳಿಂದ ದೇಶ ವಿದೇಶಗಳ ಸಾಂಸ್ಕೃತಿಕ ವೈಭವ, 3.ಪುತ್ತೂರಿನ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯವರಿಂದ ನೃತ್ಯ, ಮಂಗಳೂರಿನ ನೃತ್ಯ ಭಾರತಿಯವರಿಂದ ’ನವದುರ್ಗಾ ನಮ:’ ಸಮೂಹ ನೃತ್ಯ, 4. ಸಮೀರಾ ಆತ್ರೇಯ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಅರ್ಥಾ ಪೆರ್ಲ-ಅಯನಾ ಪೆರ್ಲ ಸಹೋದರಿಯರಿಂದ ಯುಗಲ ಭರತನಾಟ್ಯ, ಧಾರವಾಡದ ಸೃಷ್ಟಿ ಎಸ್‌. ಕುಲಕರ್ಣಿ ಅವರಿಂದ ಭರತನಾಟ್ಯ, 5. ಮೈಸೂರು ವೀಣಾ-ವಾಣಿ ಸಹೋದರಿಯರಿಂದ ಹರಿಕಥೆ, ಗದಗದ ಬೊಂಬೆ ಮನೆ ಯಿಂದ ಬೊಂಬೆ ನಾಟಕ ಗಾರ್ದಭ ಪ್ರಹಸನ ಹಮ್ಮಿಕೊಳ್ಳಲಾಗಿದೆ.

ರವಿವಾರ 1.ಉಡುಪಿ ಕೊಡವೂರು ನೃತ್ಯ ನಿಕೇತನದವರಿಂದ ನಂದಗೋಕುಲ -ನೃತ್ಯ ರೂಪಕ, ನಾಟ್ಯ ನಿಲಯಂ ಮಂಜೇಶ್ವರ ಅವರಿಂದ ನಾಟ್ಯ ಸಮ್ಮೊàಹನಂ, 2.ಬಿ.ಆರ್‌. ಛಾಯಾ ಬಳಗದವರಿಂದ ಸುಗಮ ಸಂಗೀತ, ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದವರಿಂದ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಭಾಸನ ದೂತ ವಾಕ್ಯ ಏಕಾಂಕ ನಾಟಕ, ಮಂಡ್ಯ ರಮೇಶ ನಿರ್ದೇಶನದಲ್ಲಿ ಚೋರ ಚರಣದಾಸ ನಾಟಕ, 3.ಕಲಾನಿಕೇತನ ಬೆಳ್ತಂಗಡಿ ಇವರಿಂದ ಭರತನಾಟ್ಯ, ಪಂಚಭೂತ ನೃತ್ಯ ರೂಪಕ, ಕಾರ್ಕಳದ ಶ್ರೀ ನೃತ್ಯಾಲಯದಿಂದ ಭರತನೃತ್ಯ, 4.ಸಂಜನಾ ವಿ. ಮರಾಠೆ- ಅರ್ಚನಾ ವಿ. ಮರಾಠೆ ಸಹೋದರಿಯರಿಂದ ಶಾಸ್ತ್ರೀಯ ಸಂಗೀತ, ಗದಗ್‌ನ ಸಮರ್ಥ ಡಿ. ದೇಸಾಯಿ ಅವರಿಂದ ಹಿಂದೂಸ್ತಾನಿ ಗಿಟಾರ್‌ ವಾದನ, ಬೆಂಗಳೂರು ಸಂಗೀತ ಪನೀಶ್‌ ಅವರಿಂದ ಕೂಚಿಪುಡಿ, 5. ಶಾಂತೇರಿ ಕಾಮತ್‌ ತೀರ್ಥಹಳ್ಳಿ ಅವರಿಂದ ವಚನ ಗಾಯನ, ಉಪ್ಪಿನ ಕುದ್ರು ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ಮಂಡಳಿಯಿಂದ ಗೊಂಬೆಯಾಟ ಕಾರ್ಯಕ್ರಮ.

ವಿನಂತಿ: ಈ ಬಾರಿ ಕಳೆದ ಸಾಲಿಗಿಂತಲೂ ಅಧಿಕ ಸಂಖ್ಯೆಯಲ್ಲಿ ದೂರದೂರುಗಳಿಂದ ಪ್ರತಿನಿಧಿಗಳ ನೋಂದಣಿ ನಡೆದಿದ್ದು ಕನ್ನಡ ನಾಡು ನುಡಿಯ ಅಭಿಮಾನಿಗಳೆಲ್ಲರೂ 9ನೇ ಆಳ್ವಾಸ್‌ ನುಡಿಸಿರಿ -2012ರ ಸರ್ವ ಕಲಾಪಗಳಲ್ಲಿ ಪಾಲ್ಗೊಳ್ಳಬೇಕಾಗಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ವಿನಂತಿಸಿದ್ದಾರೆ.

ಶಾಶ್ವತ ಚಪ್ಪರ: ಮುಂದಿನ ವರ್ಷ ನಡೆಯುವ ಆಳ್ವಾಸ್‌ ನುಡಿಸಿರಿ ದಶಮಾನೋತ್ಸವ - ಆಳ್ವಾಸ್‌ ವಿಶ್ವ ನುಡಿಸಿರಿಯನ್ನು ಗಮನದಲ್ಲಿರಿಸಿಕೊಂಡು ಈ ವರ್ಷವೇ 12,000 ಆಸನ ವ್ಯವಸ್ಥೆಗಳ, 310 ಅಡಿ ಉದ್ದ , 160 ಅಡಿ ಅಗಲ ಹಾಗೂ 28 ಅಡಿ ಎತ್ತರದ ಭಾರೀ ಶಾಶ್ವತ ಚಪ್ಪರವನ್ನು ವೇದಿಕೆ ಸಹಿತ ನಿರ್ಮಿಸಲಾಗಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi, Santhekatte Junction: Snap protest over inc [1 Comments]
View More

2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Obituary: Emilian Bridget D’Souza (80), Gudiyam, KemmannuObituary: Emilian Bridget D’Souza (80), Gudiyam, Kemmannu
Agricultural Land at Alevoor and Malpe (UDUPI) for Sale - Contact Direct to 9008199430.Agricultural Land at Alevoor and Malpe (UDUPI) for Sale - Contact Direct to 9008199430.
Final Journey of Judith Lewis (91 years) | LIVE From KallianpurFinal Journey of Judith Lewis (91 years) | LIVE From Kallianpur
Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi