ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಗಾಳಿ, ಕೆಜೆಪಿ ಬಿರುಗಾಳಿ!


Udayavani, 23-04-2013 04:33:52


Write Comment     |     E-Mail To a Friend     |     Facebook     |     Twitter     |     Print


ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಲೆ ಇದ್ದರೂ, ಬಿಜೆಪಿಗೆ ಕೆಜೆಪಿಯ ’ಬಿರುಗಾಳಿ’ ಮಾರಕವಾಗುವ ಸಾಧ್ಯತೆ ಇದೆ. ಮತ ವಿಭಜನೆ ಭೀತಿ ಬಿಜೆಪಿಗಿದೆ.

ಶಿವಮೊಗ್ಗ ನಗರದಲ್ಲಿ ಈಶ್ವರಪ್ಪಗೆ ಕಾಂಗ್ರೆಸ್‌ನಿಂದ ಕಠಿಣ ಪೈಪೋಟಿ ಎದುರಿಸುತ್ತಿದ್ದಾರೆ.

ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರಿಗೆ ಸರಿಸಮನಾಗಿ ಪೈಪೋಟಿ ನೀಡಬಲ್ಲಂಥವರು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿಲ್ಲ

ಸಾಗರದಲ್ಲಿ ಮಾವ- ಅಳಿಯರಾದ ಕಾಗೋಡು ತಿಮ್ಮಪ್ಪ, ಬೇಳೂರು ಗೆಲುವಿಗಾಗಿ ಹೋರಾಡುತ್ತಿದ್ದಾರೆ.

ಸೊರಬದಲ್ಲಿ ಅಣ್ಣ- ತಮ್ಮಂದಿರಾದ ಕುಮಾರ್‌, ಮಧು ಬಂಗಾರಪ್ಪ ಸೆಣಸುತ್ತಿದ್ದಾರೆ. ಈ ಜಗಳದಿಂದ ಹರತಾಳು ಹಾಲಪ್ಪ ಲಾಭ ನಿರೀಕ್ಷಿಸುತ್ತಿದ್ದಾರೆ.

ಶಿವಮೊಗ್ಗ: ಸಮಾಜವಾದಿ ಚಳವಳಿಗಳಿಗೆ ತವರೂರಾಗಿ ನಂತರ ಕಾಂಗ್ರೆಸ್‌ನತ್ತ ಹೊರಳಿ ಬಳಿಕ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದ್ದ ’ಮಲೆನಾಡ ಹೆಬ್ಟಾಗಿಲು’ ಶಿವಮೊಗ್ಗದಲ್ಲಿ ಐದೇ ವರ್ಷದಲ್ಲಿ ರಾಜಕೀಯ ವಾತಾವರಣ ಸಂಪೂರ್ಣ ಬದಲಾಗಿ ಹೋಗಿದೆ. ಸ್ನೇಹಿತರಾಗಿದ್ದವರು ಈಗ ಪರಸ್ಪರ ತೊಡೆ ತಟ್ಟುತ್ತಿದ್ದಾರೆ. ಅಣ್ಣ- ತಮ್ಮಂದಿರು ತೋಳೇರಿಸಿದ್ದಾರೆ. ಇಳಿವಯಸ್ಸಲ್ಲೂ ಅದೃಷ್ಟ ಪರೀಕ್ಷೆಗೆ ರಾಜಕಾರಣಿಗಳು ಇಳಿದಿದ್ದಾರೆ.

ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶಿವಮೊಗ್ಗದವರೇ ಆಗಿರುವುದರಿಂದ ಈ ಜಿಲ್ಲೆಯ ಫ‌ಲಿತಾಂಶದ ಬಗ್ಗೆ ರಾಜ್ಯಾದ್ಯಂತ ಕುತೂಹಲ ಮನೆ ಮಾಡಿದೆ. ಅಬ್ಬರದ ಭಾಷಣಗಳಿಗೆ ಹೆಸರಾದ ಉಪಮುಖ್ಯಮಂತ್ರಿ ಈಶ್ವರಪ್ಪ ಕೂಡ ಶಿವಮೊಗ್ಗದವರೇ ಆಗಿರುವುದರಿಂದ ಅವರ ಸಾಧನೆಯ ಪರಾಮರ್ಶೆಗೂ ಸಿದ್ಧತೆ ನಡೆದಿದೆ. ಈ ಎಲ್ಲದರ ನಡುವೆ ರಾಜ್ಯಾದ್ಯಂತ ಬೀಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿರುವ ಕಾಂಗ್ರೆಸ್‌ ಅಲೆ ಯಾವ ಪಕ್ಷಗಳನ್ನು ಹೇಗೆ ಕೊಚ್ಚಿಕೊಂಡು ಹೋಗಲಿದೆ ಎಂಬ ಬಗ್ಗೆ ಅತಿಯಾದ ಚರ್ಚೆಗಳು ನಡೆಯುತ್ತಿವೆ. ಕೆಜೆಪಿ ಸ್ಪರ್ಧೆ ಬಿಜೆಪಿ ಪಾಲಿಗೆ ಮತ ಒಯ್ಯುವ ಬಿರುಗಾಳಿಯಾಗುವ ಸಂಭವವೂ ಇದೆ.

ಶಿವಮೊಗ್ಗ ನಗರ

- ಈಶ್ವರಪ್ಪಗೆ ಸುಲಭ ಗೆಲುವು ಕಷ್ಟ ಕಷ್ಟ

- ಕಾಂಗ್ರೆಸ್ಸಿಂದ ಬ್ರಾಹ್ಮಣ ಅಭ್ಯರ್ಥಿ ಕಣಕ್ಕೆ

- ಬಿಜೆಪಿಗೆ ಮತ ವಿಭಜನೆ ಭೀತಿ

ಈಶ್ವರಪ್ಪ ಅವರು 1989ರಿಂದಲೂ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಭೀಮಬಲದಿಂದಾಗಿ ಸುಲಭವಾಗಿ ಗೆಲ್ಲುತ್ತಿದ್ದ ಈಶ್ವರಪ್ಪ ಇದೀಗ ಬಿಎಸ್‌ವೈ ಇಲ್ಲದೆ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯದ ಕೆ.ಬಿ. ಪ್ರಸನ್ನಕುಮಾರ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದರಿಂದ ಬ್ರಾಹ್ಮಣರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವುದು ಶತಃಸಿದ್ಧ ಎಂಬ ಮಾತುಗಳು ಕ್ಷೇತ್ರದಾದ್ಯಂತ ಕೇಳಿಬರುತ್ತಿವೆ. ಆದರೆ ಈಶ್ವರಪ್ಪ ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಬ್ರಾಹ್ಮಣ ಸಮುದಾಯದ ಮತಗಳಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್‌- ಬಿಜೆಪಿ ತಿಕ್ಕಾಟದಲ್ಲಿ ಜೆಡಿಎಸ್‌ ಹಾಗೂ ಕೆಜೆಪಿಯಂತಹ ಪಕ್ಷಗಳು ವಿಜಯಲಕ್ಷ್ಮಿ ಒಲಿಸಿಕೊಂಡರೂ ಅಚ್ಚರಿ ಪಡುವಂತಿಲ್ಲ.

ಶಿಕಾರಿಪುರ:

- ಬಿಎಸ್‌ವೈ ಮಣಿಸುವುದು ಸುಲಭವಿಲ್ಲ

- ಅವರಿಗೆ ಸರಿಸಮನಾದ ನಾಯಕರಿಲ್ಲ

- ಬಿಎಸ್‌ವೈ ಕ್ಷೇತ್ರ ವಿಪಕ್ಷಗಳಿಗೆ ಕಬ್ಬಿಣದ ಕಡಲೆ

1983ರಿಂದಲೂ ಯಡಿಯೂರಪ್ಪ ಪ್ರತಿನಿಧಿಸುತ್ತಿದ್ದಾರೆ. ಒಂದು ಬಾರಿ ಹೊರತುಪಡಿಸಿ ಉಳಿದೆಲ್ಲಾ ಅವಧಿಯಲ್ಲೂ ಜನ ಅವರಿಗೆ ಜೈ ಎಂದಿದ್ದಾರೆ. ದಶಕಗಳ ಕಾಲ ಬಿಜೆಪಿ ಪರವಾಗಿ ಮತ ಕೇಳಿದ ಯಡಿಯೂರಪ್ಪ ಈಗ ಕೆಜೆಪಿ ಎಂಬ ಹೊಸ ಪಕ್ಷಕ್ಕೆ ಓಟು ಕೊಡಿ ಎನ್ನುತ್ತಿದ್ದಾರೆ. ಕ್ಷೇತ್ರದಲ್ಲಿ ಅವರಿಗೆ ಸರಿಸಮನಾಗಿ ನಿಲ್ಲಬಲ್ಲ ನಾಯಕರಿಲ್ಲ. ಕಾಂಗ್ರೆಸ್‌ನಿಂದ ಶಾಂತವೀರಪ್ಪಗೌಡ ಕಣಕ್ಕಿಳಿದಿದ್ದಾರೆ. ಅವರು ಪೈಪೋಟಿ ಒಡ್ಡಬಹುದು ಎಂಬ ನಿರೀಕ್ಷೆ ಇದ್ದರೂ ಅದು ಸುಲಭದಂತೆ ಕಾಣುತ್ತಿಲ್ಲ. ಭಾರೀ ಪ್ರಮಾಣದ ಅಭಿವೃದ್ಧಿ ಕೆಲಸಗಳ ಮೂಲಕ ಯಡಿಯೂರಪ್ಪ ಜನರಿಗೆ ಹತ್ತಿರವಾಗಿದ್ದಾರೆ.

ಭದ್ರಾವತಿ:

- ಕಾಂಗ್ರೆಸ್‌ಗೆ ಮತ ವಿಭಜನೆ ಸಂಕಷ್ಟ

- ಇಬ್ರಾಹಿಂಗೆ ಸಂಗಮೇಶ್‌ ಬಂಡಾಯ ಬಿಸಿ

- ಲಾಭ ನಿರೀಕ್ಷೆಯಲ್ಲಿ ಅಪ್ಪಾಜಿಗೌಡ

ಕಾಂಗ್ರೆಸ್‌ನ 71 ಹಾಲಿ ಶಾಸಕರ ಪೈಕಿ ಟಿಕೆಟ್‌ ತಪ್ಪಿಸಿಕೊಂಡವರು ಭದ್ರಾವತಿಯ ಸಂಗಮೇಶ್‌ ಮಾತ್ರ. ಸಿದ್ದರಾಮಯ್ಯ ಆಪ್ತ ಸಿ.ಎಂ. ಇಬ್ರಾಹಿಂಗೆ ಟಿಕೆಟ್‌ ಕೊಡಬೇಕು ಎಂಬ ಏಕೈಕ ಕಾರಣಕ್ಕೆ ಸಂಗಮೇಶ್‌ ಅವರನ್ನು ಕಾಂಗ್ರೆಸ್‌ ಕಡೆಗಣಿಸಿತು. ಈಗ ಸಂಗಮೇಶ್‌ ಪಕ್ಷೇತರರಾಗಿ ಸ್ಪರ್ಧಿಸಿರುವುದರಿಂದ ಇಬ್ರಾಹಿಂಗೆ ಭಾರೀ ತೊಡಕಾಗಿದೆ. ಕಾಂಗ್ರೆಸ್‌ಗೆ ಮತಗಳ ವಿಭಜನೆ ಭೀತಿ ಎದುರಾಗಿದೆ. ಸಂಗಮೇಶ್‌ ಅವರ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್‌ನ ಅಪ್ಪಾಜಿಗೌಡ ಒಳಗೊಳಗೇ ಖುಷಿಪಡುತ್ತಿದ್ದಾರೆ.

ಸಾಗರ:

- ಕಾಂಗ್ರೆಸ್‌ ಅಲೆಯಲ್ಲಿ ಕಾಗೋಡು ಅಬ್ಬರ

- ಬೇಳೂರು ಕಡೆಗಣಿಸುವಂತಿಲ್ಲ

- ಇಬ್ಬರ ಜಗಳದಲ್ಲಿ 3ನೆಯವರಿಗೆ ಲಾಭ?

ಹಿರಿಯ ಕಾಂಗ್ರೆಸ್ಸಿಗ ಕಾಗೋಡು ತಿಮ್ಮಪ್ಪ ಅವರು ಈ ಬಾರಿ ಗೆಲ್ಲಲೇಬೇಕು ಎಂದು ಹಟಕ್ಕೆ ಬಿದ್ದವರಂತೆ ಕಣಕ್ಕೆ ಧುಮುಕಿದ್ದಾರೆ. ಈ ರಾಜ್ಯದ ಚುನಾವಣಾ ಅಖಾಡದಲ್ಲಿರುವ ಅತ್ಯಂತ ಹಿರಿಯ ವ್ಯಕ್ತಿ ಅವರು. 82 ವರ್ಷದ ಕಾಗೋಡು ಅವರಿಗೆ ಸೋದರಳಿಯ ಬೇಳೂರು ಗೋಪಾಲಕೃಷ್ಣ ಜೆಡಿಎಸ್‌ನಿಂದ ಸ್ಪರ್ಧೆ ಒಡ್ಡಿದ್ದಾರೆ. 2008ರಲ್ಲಿ ಬೇಳೂರು ಅವರಿಂದಲೇ ಕಾಗೋಡು ಪರಾಭವಗೊಂಡಿದ್ದರು. ಈ ಬಾರಿ ಕಾಂಗ್ರೆಸ್‌ ಅಲೆ ಬೀಸುತ್ತಿರುವುದರಿಂದ ಬೇಳೂರು ನಾಪತ್ತೆಯಾಗುತ್ತಾರೆ ಎಂದೇ ಕಾಗೋಡು ನಂಬಿದ್ದಾರೆ. ಆದರೆ ಯುವಕರ ಗುಂಪು ಹೊಂದಿರುವ ಬೇಳೂರು ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗದು. ಮಾವ- ಅಳಿಯ ನಡುವಿನ ಜಿದ್ದಾಜಿದ್ದಿಯಲ್ಲಿ ಕೆಜೆಪಿ ಅಚ್ಚರಿಯ ಜಯ ಸಾಧಿಸಿದರೂ ಆಶ್ಚರ್ಯವಿಲ್ಲ.

ಸೊರಬ:

- ಯಾರೇ ಗೆದ್ದರೂ ಅಂತರ ಕಡಮೆ ಸಂಭವ

- ಬಂಗಾರಪ್ಪ ಪುತ್ರರ ನಡುವೆಯೇ ಕಾದಾಟ

- ಲಾಭದ ನಿರೀಕ್ಷೆಯಲ್ಲಿ ಹಾಲಪ್ಪ

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರಾದ ಕುಮಾರ್‌ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರು ಪರಸ್ಪರ ತೊಡೆ ತಟ್ಟಿದ್ದಾರೆ. ಈ ಇಬ್ಬರ ಜಗಳದಲ್ಲಿ ಬಂಗಾರಪ್ಪ ಅವರ ಶಿಷ್ಯ ಹರತಾಳು ಹಾಲಪ್ಪ 2008ರಲ್ಲಿ ಲಾಭ ಮಾಡಿಕೊಂಡಿದ್ದರು. ಈ ಬಾರಿ ಕೆಜೆಪಿಯಿಂದ ಕಣಕ್ಕಿಳಿದಿರುವ ಹಾಲಪ್ಪ, ಅದೇ ರೀತಿಯ ಲಾಭದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ ಅಲೆಯನ್ನು ಕುಮಾರ್‌ ನೆಚ್ಚಿಕೊಂಡಿದ್ದರೆ, ತಂದೆಯ ಅನುಕಂಪ- ಕುಮಾರಸ್ವಾಮಿ ವರ್ಚಸ್ಸಿನ ಮೇಲೆ ಮಧು ಕಣದಲ್ಲಿದ್ದಾರೆ. ಯಾರೇ ಗೆದ್ದರೂ ಅಂತರ ಕಡಮೆ ಎಂಬ ವಾತಾವರಣವಿದೆ.

ತೀರ್ಥಹಳ್ಳಿ:

- ತ್ರಿಕೋನ ಸ್ಪರ್ಧೆ ಸಂಭವ

- ಒಕ್ಕಲಿಗರ ನಡುವೆಯೇ ಪೈಪೋಟಿ

- ಅಭ್ಯರ್ಥಿಗಳಿಗೆಲ್ಲಾ ಮತ ವಿಭಜನೆ ಚಿಂತೆ

ಸಮಾಜವಾದಿ ಚಳವಳಿಯ ತವರೂರಾದ ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲೋದೇ ಇಲ್ಲ ಎಂಬ ದಾಖಲೆ ಇತ್ತು. ಬಿಜೆಪಿಯ ಆರಗ ಜ್ಞಾನೇಂದ್ರ ಅದನ್ನು ಹುಸಿ ಮಾಡಿ ಮೂರು ಬಾರಿ ಗೆದ್ದಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ 2008ರಲ್ಲಿ ಆರಗ ಅವರನ್ನು ಮಣಿಸಿದ್ದರು. ಇದೀಗ ಮತ್ತೂಮ್ಮೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಯಡಿಯೂರಪ್ಪ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡರನ್ನು ಕಣಕ್ಕೆ ದೂಡಿದ್ದಾರೆ. ತ್ರಿಕೋನ ಸ್ಪರ್ಧೆಯಿದೆ. ಮೂವರೂ ಒಕ್ಕಲಿಗರೇ ಆಗಿರುವುದರಿಂದ ಮತ ವಿಭಜನೆ ಗ್ಯಾರಂಟಿ.

ಶಿವಮೊಗ್ಗ ಗ್ರಾಮೀಣ:

- ಬಿಜೆಪಿ ಗೆಲುವು ಸುಲಭವಿಲ್ಲ

- ಕೆಜೆಪಿಗೆ ಲಾಭದ ನಿರೀಕ್ಷೆ

- ಜೆಡಿಎಸ್‌ ಅಭ್ಯರ್ಥಿಯಿಂದ ತುರುಸಿನ ಪೈಪೋಟಿ

2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಅಧಿಕ. ಹೀಗಾಗಿ ಯಡಿಯೂರಪ್ಪ ಯಾರನ್ನೇ ನಿಲ್ಲಿಸಿದರೂ ಗೆಲುವು ಸಿದ್ಧ ಎಂಬ ವಾದವಿದೆ. ಕೆಜೆಪಿಯಿಂದ ವಯೋವೃದ್ಧ ರಾಜಕಾರಣಿ ಜಿ. ಬಸವಣ್ಯಪ್ಪ ಅವರನ್ನು ಯಡಿಯೂರಪ್ಪ ಕಣಕ್ಕಿಳಿಸಿದ್ದಾರೆ. ಆದರೆ ಕಳೆದ ಚುನಾವಣೆಯಿಂದಲೂ ಕ್ಷೇತ್ರದಾದ್ಯಂತ ವರ್ಚಸ್ಸು ವೃದ್ಧಿಸಿಕೊಂಡು ಇನ್ನಿಲ್ಲದ ಯತ್ನ ನಡೆಸುತ್ತಿರುವ ಜೆಡಿಎಸ್‌ನ ಶಾರದಾಪೂರ್ಯಾನಾಯ್ಕ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಹಾಲಿ ಶಾಸಕ ಕುಮಾರಸ್ವಾಮಿ ಕೆಡಿಸಿಕೊಂಡಿದ್ದಾರೆ. ಅವರಿಗೆ ಈ ಚುನಾವಣೆ ಮುಳುವಾಗುವ ಸಾಧ್ಯತೆ ಇದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi