ಹಾಲಾಡಿ ಶ್ರೀನಿವಾಸ ಶೆಟ್ಟಿ ಜಯಭೇರಿ


Udayavani, 09-05-2013 04:15:03


Write Comment     |     E-Mail To a Friend     |     Facebook     |     Twitter     |     Print


ಹಾಲಾಡಿ ಶ್ರೀನಿವಾಸ ಶೆಟ್ಟಿಯವರು 40,611 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಕುಂದಾಪುರ: ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕುಂದಾಪುರ ಕ್ಷೇತ್ರವನ್ನು ಬಿಜೆಪಿ ವಶಕ್ಕೆ ತಂದುಕೊಟ್ಟ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸತತ ಮೂರು ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದು ಇತಿಹಾಸವಾದರೆ ಈಗ ಸತತ ನಾಲ್ಕನೇ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೂಮ್ಮೆ ಆಗಾಧ ಅಂತರದ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

1999ರ ಚುನಾವಣೆಯಲ್ಲಿ ಮೊದಲ ಬಾರಿಗೆ 1,021 ಮತಗಳಿಂದ ಜಯಗಳಿಸಿದ್ದ ಹಾಲಾಡಿ ಅವರು 2004ರಲ್ಲಿ 19,865 ಮತಗಳಿಂದ ಜಯದ ಅಂತರ ಕಾಯ್ದುಕೊಂಡಿದ್ದರು. 2008ರಲ್ಲಿ 25,083 ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದು, ಕರ್ನಾಟಕದಲ್ಲಿ ಗೆದ್ದ 224 ಶಾಸಕರಲ್ಲಿ ಅತೀ ಹೆಚ್ಚು ಮತ ಗಳಿಸಿದವರಲ್ಲಿ 11ನೇ ಶಾಸಕರಾಗಿದ್ದರು. ಆದರೆ ಇಂದು ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಅಂತರದ ಗೆಲುವು ಸಾಧಿಸಿದ ಕೆಲವೇ ಕೆಲವು ಅಭ್ಯರ್ಥಿಗಳ ಸಾಲಿನಲ್ಲಿ ಅವರು ಇದ್ದಾರೆ.

ಕುಂದಾಪುರದ ವಾಜಪೇಯಿ ಎಂದೇ ಜನರಿಂದ ಕರೆಸಿಕೊಂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮತದಾರರೇ ಹೇಳುವಂತೆ ಓರ್ವ ಸಜ್ಜನ ರಾಜಕಾರಣಿ. ಚುನಾವಣೆಯಿಂದ ಚುನಾವಣೆಗೆ ಮತಗಳ ಅಂತರ ಹೆಚ್ಚಿಸಿಕೊಳ್ಳುತ್ತಾ ಹೋದ ಹಾಲಾಡಿ ಅವರು 2013ರ ಚುನಾವಣೆಯಲ್ಲಿ ಗೆದ್ದ ಅಂತರಕ್ಕೆ ಅವರ ಅಭಿಮಾನಿಗಳೇ ಚಕಿತರಾಗಿದ್ದಾರೆ.

ಮನನೊಂದ ಹಾಲಾಡಿ: ರಾಜ್ಯದಲ್ಲಿ ಜಗದೀಶ್‌ ಶೆಟ್ಟರ್‌ ಅವರ ಸರಕಾರದಲ್ಲಿ ಹಾಲಾಡಿಯವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮೊದಲೇ ಘೋಷಣೆ ಮಾಡಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ನೀಡದೇ ಅವಮಾನ ಮಾಡಿದ ಬಗ್ಗೆ ಹಾಲಾಡಿ ಅವರು ಮನ ನೊಂದಿದ್ದರು. ಶಾಸಕ ಸ್ಥಾನಕ್ಕೆ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅನಂತರ ಈ ಬಾರಿಯ ಚುನಾವಣೆಯಲ್ಲಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.

ಕ್ಷಣಕ್ಷಣಕ್ಕೂ ಕಾತರ:

ಕುಂದಾಪುರ ವಿಧಾನ ಸಭಾ ಕ್ಷೇತ್ರದ ಫಲಿತಾಂಶವನ್ನು ರಾಜ್ಯದ ಜನತೆ ಕುತೂಹಲದಿಂದ ಬುಧವಾರ ಬೆಳಗ್ಗಿನಿಂದಲೇ ವೀಕ್ಷಿಸುತ್ತಿದ್ದರು. ಹಾಲಾಡಿ ಅವರು ಮೊದಲ ಸುತ್ತಿನಿಂದಲೇ ಅಂತರ ಕಾಯ್ದುಕೊಂಡು ಬಂದರು. ಒಂದೊಂದು ಸುತ್ತಿನಲ್ಲಿ ಅಂತರ ಹೆಚ್ಚುತ್ತಾ ಹೋದಂತೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು.

ಹಾಲಾಡಿ ಪರಿಚಯ:

ಬಿಎಸ್ಸಿ ಪದವೀಧರರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅವಿವಾಹಿತರು. ಕೃಷಿ ಮುಖ್ಯ ಉದ್ಯೋಗವಾದರೂ ಜನಸೇವೆ ಅವರ ಕಾಯಕ.

ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಪ್ರಸ್ತುತ ಹಾಲಾಡಿಯಲ್ಲಿ ನೆಲೆಸಿರುವ ಅವರಿಗೆ ಸಹೋದರನ ಅಗಲುವಿಕೆ ಬಹಳಷ್ಟು ನೋವು ತಂದಿತ್ತು.

ಕ್ಷೇತ್ರಾಭಿವೃದ್ಧಿ ನಿಧಿಯಿಂದ, ನಬಾರ್ಡ್‌ ಯೋಜನೆಯಿಂದ ವಿವಿಧ ಲೋಕೋಪಯೋಗಿ ರಸ್ತೆ ಅಭಿವೃದ್ಧಿ, ಮುಖ್ಯಮಂತ್ರಿ ವಿಶೇಷ ಅನುದಾನದ ಮೂಲಕ ಮೀನುಗಾರಿಕಾ ರಸ್ತೆ, ಆರ್‌.ಡಿ.ಪಿ.ಆರ್‌. ರಸ್ತೆಗಳಿಗೆ ರೂ. 6.45 ಕೋಟಿ, ಲೋಕೋಪಯೋಗಿ ಇಲಾಖೆ ರಸ್ತೆ, ಮಿನಿ ವಿದಾನಸೌಧ ನಿರ್ಮಾಣ, ಕೋಡಿ ಸೇತುವೆಗೆ ವಿಶೇಷ ಅನುದಾನ, ಮೀನುಗಾರಿಕಾ ಜಟ್ಟಿಗಳ ನಿರ್ಮಾಣ, ಸುವರ್ಣ ಗ್ರಾಮೋದಯ ಯೋಜನೆಯಡಿ 17 ಗ್ರಾಮಗಳ ಆಯ್ಕೆ, ಹೊಸ ಸರಕಾರಿ ಪ್ರೌಢಶಾಲೆಗಳ ನಿರ್ಮಾಣ, ಬಸವ ಕಲ್ಯಾಣ ವಸತಿ ಯೋಜನೆಯಡಿ 4 ಸಾವಿರ ಫಲಾನುಭವಿಗಳ ಆಯ್ಕೆ, ಮೀನುಗಾರಿಕಾ ಮನೆ, ಸಣ್ಣ ನೀರಾವರಿ ಇಲಾಖೆಯಿಂದ ನದಿ ದಂಡೆ ಸಂರಕ್ಷಣೆ, ಕೋಡಿ ಕನ್ಯಾಣ - ಹಂಗಾರಕಟ್ಟೆ ಅಳಿವೆ ಹೂಳೆತ್ತುವಿಕೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ನೆರವು ಹೀಗೆ ಕ್ಷೇತ್ರದಲ್ಲಿ ಹಲಾವಾರು ಯೋಜನೆಗಳ ಮೂಲಕ ಜನ ಮನ್ನಣೆ ಪಡೆದಿರುವ ಹಾಲಾಡಿ ಅವರು ಮತ್ತೆ ಜನರಿಂದ ಆಯ್ಕೆ ಆಗಿದ್ದಾರೆ.

ಕುಂದಾಪುರ ಕ್ಷೇತ್ರ

ಗೆಲುವಿನ ಅಂತರ 40,611

9448381341

ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರ 80,563

ಮಲ್ಯಾಡಿ ಶಿವರಾಮ ಶೆಟ್ಟಿ ಕಾಂಗ್ರೆಸ್‌ 39,952

ಕಿಶೋರ್‌ ಕುಮಾರ್‌ ಬಿಜೆಪಿ 14,524

ಶ್ರೀನಿವಾಸ ಎಚ್‌. ಪಕ್ಷೇತರ 2,442

ಮಂಜುನಾಥ ಪಕ್ಷೇತರ 764

ಕೃಷ್ಣ ಭರತ್‌ಕಲ್‌ ಜೆಡಿಯು 738

 

ದಾಖಲೆ ಅಂತರದಲ್ಲಿ ಗೆದ್ದ ಪ್ರಮೋದ್‌

ಕಾಂಗ್ರೆಸ್‌ ಅಭ್ಯರ್ಥಿ ಮಧ್ವರಾಜ್‌ ತಮ್ಮ ಚೊಚ್ಚಲ ಆಯ್ಕೆಯಲ್ಲಿಯೇ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ತಮ್ಮ ಚೊಚ್ಚಲ ಆಯ್ಕೆಯಲ್ಲಿಯೇ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಆರಂಭದಿಂದಲೇ ಮುನ್ನಡೆ ಸಾಧಿಸಿಕೊಂಡು ಬಂದ ಪ್ರಮೋದ್‌ ಮಧ್ವರಾಜ್‌ ಅವರು ಅಂತಿಮ ಸುತ್ತಿನಲ್ಲಿ ಒಟ್ಟು 39,524 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರಮೋದ್‌ ಅವರು 86,868 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸುಧಾಕರ ಶೆಟ್ಟಿಯವರು 47,344 ಮತಗಳನ್ನು ಗಳಿಸಿದರು. ಇದುವರೆಗೆ ಈ ಕ್ಷೇತ್ರದಲ್ಲಿ ಇಷ್ಟೊಂದು ಪ್ರಮಾಣದ ಅಂತರದಿಂದ ಯಾರೂ ಗೆಲುವು ಸಾಧಿಸಿಲ್ಲ.

ಪ್ರಮೋದ್‌ ಅವರ ತಂದೆ ಮಲ್ಪೆ ಮಧ್ವರಾಜರು 1962ರಲ್ಲಿ, ತಾಯಿ ಮನೋರಮಾ ಮಧ್ವರಾಜರು 1972, 1978, 1985, 1989ರಲ್ಲಿ ನಾಲ್ಕು ಶಾಸಕರಾಗಿ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದರು. ಮನೋರಮಾ ಅವರು 2004ರಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಮೋದ್‌ ಅವರು ಬ್ರಹ್ಮಾವರ ಕ್ಷೇತ್ರದಿಂದ 2004ರಲ್ಲಿ, ಉಡುಪಿ ಕ್ಷೇತ್ರದಿಂದ 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.

ಲಕ್ಕಿ ನಂಬರ್‌ 8

ಪ್ರಮೋದ್‌ ಮಧ್ವರಾಜರ ಲಕ್ಕಿ ನಂಬರ್‌ 8. ಇವರ ಕಾರುಗಳ ನೋಂದಣಿ ಸಂಖ್ಯೆಯೂ 8, ಮತ ಎಣಿಕೆ ನಡೆದ ದಿನಾಂಕವೂ 8. ಅವರಿಗೆ ದೊರಕಿದ ಮತಗಳಲ್ಲಿಯೂ 8 ಸಂಖ್ಯೆ ಮೂರು ಬಾರಿ ಬಂದಿದೆ.

ಪ್ರಮೋದ್‌ ಮಧ್ವರಾಜ್‌ ವ್ಯಕ್ತಿ ಪರಿಚಯ

ಮಲ್ಪೆ: ಮಲ್ಪೆ ಮಧ್ವರಾಜ್‌ ಮತ್ತು ರಾಜ್ಯ ಮಾಜಿ ಸಚಿವೆ ಮನೋರಮಾ ಮಧ್ವರಾಜ್‌ ಅವರ ಸುಪುತ್ರನಾಗಿ 1968 ರಲ್ಲಿ ಜನಿಸಿದ ಪ್ರಮೋದ್‌ ಮಧ್ವರಾಜ್‌ ರಾಜಕೀಯ ನಾಯಕನ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದು ಬಂದಿರುವ ಒಬ್ಬ ಸಮರ್ಥ ವ್ಯಕ್ತಿ. ತನ್ನ ಆರಂಭಿಕ ಶಿಕ್ಷಣವನ್ನು ಉಡುಪಿ ಸೈಂಟ್‌ ಸಿಸಿಲಿಯಲ್ಲೂ, ಹೈಸ್ಕೂಲ್‌ ಶಿಕ್ಷಣವನ್ನು ಉಡುಪಿ ಕ್ರಿಶ್ಚಿಯನ್‌ ಹೈಸ್ಕೂಲ್‌ನಲ್ಲಿಯೂ, ಪಿಯುಸಿಯನ್ನು ಎಂಜಿಎಂ ಕಾಲೇಜಿನಲ್ಲಿ ಮುಗಿಸಿ ಬಳಿಕ ಸುರತ್ಕಲ್‌ನ ಕರ್ನಾಟಕ ರೀಜನಲ್‌ ಇಂಜಿನಿಯರ್‌ ಕಾಲೇಜಿನಲ್ಲಿ ಇಂಜಿನಿಯರ್‌ ಅಧ್ಯಯನ ನಡೆಸಿದರು.

ದಕ್ಷಿಣ ಕನ್ನಡ ಎನ್‌ಎಸ್‌ಯುಐ ಘಟಕದ ಉಪಾಧ್ಯಕ್ಷರಾಗಿ, ರಾಜ್ಯ ಯುವಕಾಂಗ್ರೆಸಿನ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯನ್ನು ಆರಂಭಿಸಿದ ಪ್ರಮೋದ್‌ ತನ್ನ 28 ರ ಅತೀ ಕಿರಿಯ ವಯಸ್ಸಿನಲ್ಲಿಯೇ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 55 ಅಂಗ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕ ಕರಾವಳಿಯ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿ, ಡಿಸೆಲ್‌ ಸಬ್ಸಡಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2010ರಲ್ಲಿ ಉಡುಪಿ ಶೀÅಕೃಷ್ಣಮಠದ ಪರ್ಯಾಯಾ ಸಮಿತಿಯ ಅಧ್ಯಕ್ಷ , ಡಾ ವಿರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆದ ವಿಶ್ವತುಳು ಸಮೇ¾Ã Â²Â³Ã Â²Â¦ ಸಮತಿಯ ಅಧ್ಯಕ್ಷರಾಗಿ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ಕೇÒತ್ರಗಳಲ್ಲಿ ತೊಡಿಗಿಸಿಕೊಂಡಿದ್ದಾರೆ.

1992ರಲ್ಲಿ ಮಲ್ಪೆಯಲ್ಲಿ 1ಲಕ್ಷಕ್ಕೂ ಅಧಿಕ ಪೇÅಕ್ಷಕರನ್ನು ಆಕರ್ಷಸಿದ್ದ ಬೋಟ್‌ರೇಸ್‌ ಸಂಯೋಜನೆ ದೇಶದಲ್ಲೇ ಪ್ರಥಮ ಎಂಬಂತೆ ರೂಪುಗೊಂಡಿದೆ. ಇವರ ಒಡೆತನದಲ್ಲಿರುವ ರಾಜ್‌ ಫಿಶ್‌ಮೀಲ್‌ ಮತ್ತು ಆಯಿಲ್‌ ಕಂಪೆನಿ ಉತ್ಪನ್ನದ ದೃಷ್ಟಿಯಿಂದ ಬೃಹತ್‌ ಕಂಪೆನಿಯಾಗಿ ಬೆಳೆದಿದೆ. ಕೋರೊನೆಟ್‌ ಫಿಶ್‌ ಪ್ರೋಡೆಕ್ಟನ ಆಡಳಿತ ಪಾಲುದಾರರಾದ ಪ್ರಮೋದ್‌ ತನ್ನ ತಂದೆಯ ಹೆಸರಿನಲ್ಲಿ ಮಧ್ವರಾಜ್‌ ಚಾರಿಟೇಬಲ್‌ ಟ್ರಸ್ಟ್‌ನ್ನು ಸ್ಥಾಪಿಸಿ ಬಡ ಜನರಿಗೆ ಬಡರೋಗಿಗಳಿಗೆ ನಿರಂತರ ನೆರವಾಗುವ ಮೂಲಕ ಸಾಮಾಜಿಕ ಬದುಕಿನ ವಿವಿಧ ಅಂಗಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ಇವರ ಮೊಬೈಲ್‌ ದೂರವಾಣಿ: 9845243833

ಉಡುಪಿ ಕ್ಷೇತ್ರ

ಗೆಲುವಿನ ಅಂತರ 39,524

9845243833

ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ 86,868

ಸುಧಾಕರ ಶೆಟ್ಟಿ ಬಿಜೆಪಿ 47,344

ಅಲೆವೂರು ಯೋಗೀಶ ಆಚಾರ್ಯ ಪಕ್ಷೇತರ 1,472

ಬಾರಕೂರು ಸತೀಶ ಪೂಜಾರಿ  ಜೆಡಿಎಸ್‌ 1,017

ಮಂಜುನಾಥ ಎಚ್‌.ವಿ. ಬಿಎಸ್ಪಿ 986

ತುಕಾರಾಮ ಕೋಟ್ಯಾನ್‌ ಪಕ್ಷೇತರ 498

ನಾಸಿರ್‌ ಹುಸೇನ್‌ ಪಕ್ಷೇತರ 245


ಕೈವಶವಾಯಿತು ದಕ್ಷಿಣ ಕನ್ನಡ ಕೋಟೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತೆ ಆಧಿಪತ್ಯ ಸಾಧಿಸಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತೆ ಆಧಿಪತ್ಯ ಸಾಧಿಸಿದೆ. ಒಂದು ಕಾಲದ ತನ್ನ ಭದ್ರಕೋಟೆಯನ್ನು ಮರುಸ್ವಾಧೀನ ಮಾಡಿಕೊಂಡಿದೆ. 8ರಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತದಾರರು ಆರಿಸಿದ್ದಾರೆ.

ಪ್ರಥಮ ಸಾರ್ವತ್ರಿಕ ಚುನಾವಣೆಯ ಸಂದರ್ಭದಿಂದಲೂ ಕರಾವಳಿಯ ಈ ಪ್ರದೇಶ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾ ಬಂದಿತ್ತು. 1983ರಲ್ಲಿ ಬಿಜೆಪಿ ಇಲ್ಲಿ ಪ್ರಥಮ ಯಶಸ್ಸು ಗಳಿಸಿದ ಬಳಿಕ 90ರ ದಶಕದ ಮಧ್ಯಭಾಗದಿಂದ ಕಾಂಗ್ರೆಸ್‌ನ ಕೋಟೆಯನ್ನು ಶಿಥಿಲಗೊಳಿಸಿ ಮುನ್ನಡೆದಿತ್ತು. ಆದರೆ, 2008ರಲ್ಲಿ ಎರಡೂ ಪಕ್ಷಗಳು ತಲಾ 4ರ ಸಮಬಲ ಸಾಧಿಸಿದವು.

ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ಆಹ್ಲಾದಕರವಾಗಿದ್ದರೆ, ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿತ್ತು. ನಗರ ಪ್ರದೇಶಗಳ ಜನತೆ ಸೂಕ್ಷ ¾Ã Â²ÂµÃ Â²Â¾Ã Â²â€”ಿ ತಮ್ಮ ಒಲವನ್ನು ಸೂಚಿಸಿದ್ದರು. ಈಗ ನಗರ ಪ್ರದೇಶಗಳ ಜನತೆಯ ಜತೆ ಗ್ರಾಮೀಣ ಜನತೆ ಕೂಡ ತಮ್ಮ ಒಲವನ್ನು ಸೂಚಿಸಿದ್ದಾರೆ: ಅದು ಕಾಂಗ್ರೆಸ್‌ ಪರವಾಗಿ ಮತ ಚಲಾಯಿಸುವ ಮೂಲಕ. ಕಾಂಗ್ರೆಸ್‌ನ 7 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ.

ಸ್ಪಷ್ಟವಾದ ತೀರ್ಪು

ಕಾಂಗ್ರೆಸ್‌ ಪರವಾಗಿ ಸ್ಪಷ್ಟವಾದ ತೀರ್ಪನ್ನು ಮತದಾರರು ನೀಡಿದ್ದಾರೆ. ಕಾಂಗ್ರೆಸ್‌ ಗೆದ್ದ 7 ಅಭ್ಯರ್ಥಿಗಳಲ್ಲಿ 4 ಮಂದಿಯ ಗೆಲುವಿನ ಅಂತರ 10,000 ದಾಟಿದೆ! ಬಿಜೆಪಿ ಗೆದ್ದ ಏಕೈಕ ಸ್ಥಾನದಲ್ಲಿ ಗೆಲುವಿನ ಅಂತರ ಕನಿಷ್ಠ.

ಕಾಂಗ್ರೆಸ್‌ ಪರವಾದ ಅಲೆ ರಾಜ್ಯಾದ್ಯಂತ ಇದೆ. ಈ ಅಲೆಯ ಪ್ರಭಾವ ಜಿಲ್ಲೆಯಲ್ಲೂ ಕಾಣಿಸಿದೆ ಎಂಬ ಮಾತಿದೆ. ಆದರೆ, ಕರಾವಳಿಯಲ್ಲಿ ಈ ತೀವ್ರತೆ ಹೆಚ್ಚಿದೆ ಅನ್ನುವುದು ವಾಸ್ತವ. ಮತದಾರರು ತಳೆದಿರುವ ಖಚಿತವಾದ ನಿರ್ಧಾರವನ್ನು ಈ ಫಲಿತಾಂಶಗಳು ಸೂಚಿಸುತ್ತಿವೆ. ಆದ್ದರಿಂದಲೇ ಕಾಂಗ್ರೆಸ್‌ ಪರವಾಗಿ ಈ ರೀತಿಯ ಜನಾಭಿಪ್ರಾಯ ರೂಪುಗೊಂಡಿದೆ.

ಕಾಂಗ್ರೆಸ್‌ ಪಕ್ಷ ಕೆಲವು ಕ್ಷೇತ್ರಗಳಲ್ಲಿನ ಚುನಾವಣಾಪೂರ್ವ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಚಾರಕಾರ್ಯ ನಿರತವಾದದ್ದು ಪಕ್ಷಕ್ಕೆ ಲಾಭದಾಯಕವಾಯಿತು. ಜನಾರ್ದನ ಪೂಜಾರಿ, ಆಸ್ಕರ್‌ ಫೆರ್ನಾಂಡಿಸ್‌, ವೀರಪ್ಪ ಮೊಲಿ ಅವರು ವಿವಿಧೆಡೆ ಪ್ರಚಾರ ನಡೆಸಿದರು. ಪೂಜಾರಿ ಅವರು ಸತತವಾಗಿ ಪಾದಯಾತ್ರೆ, ಕಾರ್ನರ್‌ ಮೀಟಿಂಗ್‌ ಇತ್ಯಾದಿಗಳಲ್ಲಿ ಸಕ್ರಿಯರಾಗಿದ್ದರು. ಹೀಗೆ ಜಿಲ್ಲೆಯಲ್ಲಿ ಪಕ್ಷ ಚೈತನ್ಯ ಪಡೆಯಲು ಸಾಧ್ಯವಾಯಿತು. ಇದರ ಫಲವಾಗಿ ಕಾಂಗ್ರೆಸ್‌ ಪಕ್ಷ 1994ರ 4, 1999 ರ 9ರಲ್ಲಿ 5, 2004ರ 2, 2008ರ 4ರಿಂದ ಈ ಬಾರಿ 8ರಲ್ಲಿ 7ಕ್ಕೇರುವಂತಾಯಿತು.

ಮತದಾರ ಪ್ರಭು

ಜಿಲ್ಲೆಯಲ್ಲಿ ಬಹುಸ್ಥಾನ ಪಡೆದ ಪಕ್ಷ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಅಥವಾ ಆಡಳಿತ ಸ್ವರೂಪವನ್ನು ಪ್ರಭಾವಿಸುವ ಪಾತ್ರ ವಹಿಸುತ್ತದೆ ಅನ್ನುವುದು ಇತ್ತೀಚೆಗಿನ ಚುನಾವಣೆಗಳ ಸಂದರ್ಭದ ಬೆಳವಣಿಗೆ. ಈ ಬಾರಿಯೂ ಇದು ಪುನರಾವರ್ತಿಸಿದೆ ಅನ್ನುವುದು ಕೂಡಾ ಗಮನಾರ್ಹ.

ಜಿಲ್ಲೆಯ ಮತದಾರರು ಸಾಂದರ್ಭಿಕವಾಗಿ ತಮ್ಮ ತೀರ್ಪನ್ನು ನೀಡುತ್ತಾರೆ. ಆ ತೀರ್ಪು ನಿರ್ಣಾಯಕವೇ ಆಗಿರುತ್ತದೆ.

ಅಂದಹಾಗೆ...

ದಕ್ಷಿಣ ಕನ್ನಡದ ಚುನಾವಣಾ ಫಲಿತಾಂಶ ಅನೇಕ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಇಲ್ಲಿ ಅನುಭವಿಗಳನ್ನು ಮೊದಲ ಬಾರಿ ಸ್ಪರ್ಧಿಸಿದವರು ಸೋಲಿಸಿದರು (ಉದಾ: ಯೋಗೀಶ್‌ ಭಟ್‌ ಅವರನ್ನು ಲೋಬೋ ಅಥವಾ ಮೂರನೇ ಬಾರಿ ಸ್ಪರ್ಧಿಸಿದ ಪಾಲೆಮಾರ್‌ ಅವರನ್ನು ಎರಡನೇ ಬಾರಿಯ ಸ್ಪರ್ಧಿ ಬಾವ). ಅಂತೆಯೇ ಮೊದಲ ಬಾರಿ ಸ್ಪರ್ಧಿಸಿದ ಹೊಸಬರನ್ನು ಅನುಭವಿಗಳು ಸೋಲಿಸಿದರು: ಉದಾ- ರಾಜೇಶ್‌ ನಾೖಕ್‌ರನ್ನು ರೈ, ರಂಜನ್‌ ಗೌಡರನ್ನು ಬಂಗೇರಾ, ಉಚ್ಚಿಲ್‌ರನ್ನು ಖಾದರ್‌.

ದ.ಕ.: ಗರಿಷ್ಠ - ಕನಿಷ್ಠ

* ಈ ಬಾರಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಯು.ಟಿ. ಖಾದರ್‌ ಗರಿಷ್ಠ ಅಂತರದ (29,111) ಗೆಲುವು ಸಾಧಿಸಿದರು. ಸುಳ್ಯದಲ್ಲಿ ಬಿಜೆಪಿಯ ಎಸ್‌. ಅಂಗಾರ ಕನಿಷ್ಠ ಅಂತರದ (1,373) ಗೆಲುವು ಪಡೆದರು.

* ಅತೀ ಹೆಚ್ಚು ಮತ ಪಡೆದವರು: ಬಂಟ್ವಾಳದಲ್ಲಿ ಕಾಂಗ್ರೆಸ್‌ನ ಬಿ. ರಮಾನಾಥ ರೈ (81,665). ಕನಿಷ್ಠ ಮತ: ಮಂಗಳೂರು ದಕ್ಷಿಣದಲ್ಲಿ ಜೆಡಿಯುನ ಹರೀಶ್‌ ಆಳ್ವ (96).

* ಯು. ಟಿ. ಖಾದರ್‌, ಬಿ. ರಮಾನಾಥ ರೈ, ಕೆ. ವಸಂತ ಬಂಗೇರ, ಜೆ. ಆರ್‌. ಲೋಬೋ ಅವರ ಗೆಲುವಿನ ಅಂತರ 10,000ಕ್ಕೂ ಅಧಿಕ ಮತ.

54 ಅಭ್ಯರ್ಥಿಗಳ

ಠೇವಣಿ ನಷ್ಟ

ದ.ಕ. ಜಿಲ್ಲೆಯ 8 ಕ್ಷೇತ್ರಗಳಲ್ಲಿ ಈ ಬಾರಿ ಒಟ್ಟು 71 ಮಂದಿ ಕಣದಲ್ಲಿದ್ದರು. ಅವರಲ್ಲಿ ಗೆದ್ದವರು, ನಿಕಟಸ್ಪರ್ಧಿಗಳ ಸಹಿತ 16 ಮಂದಿ ಹಾಗೂ ಅಮರನಾಥ ಶೆಟ್ಟಿ ಅವರ ಹೊರತಾಗಿ ಇತರ ಎಲ್ಲಾ 54 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.


ಮೊದಿನ್‌ ಬಾವಾ ಬೆಂಬಲಿಗರ ಕಾರಿಗೆ ಹಾನಿ

ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನ ಕ್ಷೇತ್ರದ ವಿಜೇತ ಅಭ್ಯರ್ಥಿ ಬಿ,ಎ. ಮೊದಿನ್‌ ಬಾವಾ ಅವರ ಬೆಂಬಲಿಗರ ಕಾರಿಗೆ ನಗರದ ಕೊಡಿಯಾಲ್‌ ಗುತ್ತುವಿನಲ್ಲಿ ಕೆಲವು ಮಂದಿ ಅಪರಿಚಿತ ಯುವಕರು ಹಾರಿ ಮಾಡಿದ ಘಟನೆ ಬುಧವಾರ ಸಂಭವಿಸಿದೆ.

ಮಧ್ಯಾಹ್ನ 1.30ರ ವೇಳೆಗೆ ಮೊದಿನ್‌ ಬಾವಾ ಬೆಂಬಲಿಗರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಾ ಕೊಡಿಯಾಲ್‌ಗ‌ುತ್ತು ಕಡೆಗೆ ಸಾಗಿ ಅಲ್ಲಿ ಪರಾಜಿತ ಅಭ್ಯರ್ಥಿ ಕೃಷ್ಣ ಜೆ. ಪಾಲೆಮಾರ್‌ ಮನೆಯ ಎದುರುಗಡೆ ಘೋಷಣೆ ಕೂಗುತ್ತಿದ್ದ ಸಂದರ್ಭದಲ್ಲಿ ಕೆಲವು ಮಂದಿ ಯುವಕರು ಧ್ವಜಕ್ಕೆ ಅಳವಡಿಸಿದ್ದ ಪೈಪ್‌ನಿಂದ ಕಾರಿನ ಗಾಜು ಪುಡಿ ಗೈದಿದ್ದಾರೆ.

ಈ ಸಂದರ್ಭದಲ್ಲಿ ತನ್ನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಕಾರಿನ ಚಾಲಕ ಶರಣ ಬಸಪ್ಪ ಅವರು ಆರೋಪಿಸಿದ್ದಾರೆ. ಬರ್ಕೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿದೆ.


ತಾನೇ ತೋಡಿದ ಹೊಂಡಕ್ಕೆ ತಾನೇ ಬಿದ್ದ ಬಿಜೆಪಿ

ಮಂಗಳೂರು: ಬಿಜೆಪಿ ತಾನೇ ತೋಡಿದ ಹೊಂಡಕ್ಕೆ ತಾನೇ ಬಿದ್ದಿದೆ. ಕಳೆದ ವರ್ಷಗಳ ದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ನೀತಿಗಳೇ ಬಿಜೆಪಿಗೆ ಸೋಲುಂಟಾಗಲು ಕಾರಣ ಎಂದು ಹಿರಿಯ ಕಾಂಗ್ರೆಸ್‌ ನಾಯಕ, ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಉಸ್ತುವಾರಿ ಬಿ. ಜನಾರ್ದನ ಪೂಜಾರಿ ಅವರು ವಿಶ್ಲೇಷಿಸಿದ್ದಾರೆ.

ಅವರು ಚುನಾವಣಾ ಫಲಿತಾಂಶ ಪ್ರಕಟನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸೋನಿಯಾ ಗಾಂಧಿ ಅವರು 5 ತಿಂಗಳಲ್ಲಿ ಎರಡು ಬಾರಿ ಮಂಗಳೂರಿಗೆ ಆಗಮಿಸಿದ್ದು, ಕಾಂಗ್ರೆಸ್‌ ಗೆಲುವಿನಲ್ಲಿ ಅವರ ಭೇಟಿಯ ಪ್ರತಿಪಲವೂ ಇದೆ. ಕರಾವಳಿಯನ್ನು ಕೇಸರಿಮಯ ಮಾಡದಂತೆ ಹಾಗೂ ಕೋಮುದ್ವೇಷ ಹರಡದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯಬೇಕು ಎಂದು ಸೋನಿಯಾ ಸಲಹೆ ನೀಡಿದ್ದರು ಎಂದು ಪೂಜಾರಿ ನೆನಪಿಸಿದರು.

ನರೇಂದ್ರ ಮೋದಿ ಬಂದರೆ ನಮಗೆ ಒಳ್ಳೆಯದಾಗುತ್ತದೆ ಎಂದು ತಾನು ಮೊದಲೇ ಹೇಳಿದ್ದು, ಆ ಮಾತು ನಿಜವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿ ಪ್ರಿಯರು ಎನ್ನುವುದನ್ನು ಮತ್ತೂಮ್ಮೆ ತೋರಿಸಿ ಕೊಟ್ಟಿದ್ದಾರೆ. ಮೋದಿ ಅವರು ಗೋಮಾಂಸ ರಫ್ತು, ಪಿಂಕ್‌ ರೆವೊಲ್ಯೂಶನ್‌ ಆಗುತ್ತೆ ಎಂದೆಲ್ಲ ಹೇಳಿ ದ್ವೇಷ ಹರಡಲು ಯತ್ನಿಸಿದ್ದರು. ಆದರೆ ಜನರು ಅದಕ್ಕೆ ಸೊಪ್ಪು ಹಾಕಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುವುದು ಹಾಗೂ ಶಾಂತಿಯುತ ಬಾಳ್ವೆ ನಡೆಸುವುದೇ ಕರಾವಳಿಯ ಹಿಂದುತ್ವ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೋದ ಕಡೆ ಕಾಂಗ್ರೆಸ್‌ ಸೋಲುತ್ತದೆ ಎಂಬ ಮೋದಿ ಅವರ ಮಾತು ಕೂಡ ಸುಳ್ಳಾಗಿದೆ. ಅವರ ವರ್ತನೆ ಏನಿದ್ದರೂ ಗುಜರಾತ್‌ಗೆ ಮಾತ್ರ ಸೀಮಿತವಾಗಿದ್ದು, ಬೇರೆ ರಾಜ್ಯಗಳಿಗೆ ಮತ್ತು ಇಡೀ ದೇಶಕ್ಕೆ ಅನ್ವಯಿಸುವುದಿಲ್ಲ ಎನ್ನುವುದನ್ನು ಈ ಚುನಾವಣೆ ಶ್ರುತ ಪಡಿಸಿದೆ. ಈ ಮೂಲಕ ಮೋದಿ ಅವರಿಗೆ ಪ್ರಧಾನಿಯಾಗುವ ಯೋಗ್ಯತೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಪ್ರಜೆಗಳೇ ಯಜಮಾನರು:

ಪ್ರಧಾನಿ/ಮುಖ್ಯಮಂತ್ರಿ/ಶಾಸಕ/ ಸಂಸದರು ಯಜಮಾನರಲ್ಲ; ಪ್ರಜೆಗಳೇ ಯಜಮಾನರು ಎನ್ನುವುದನ್ನು ಮತದಾರರು ಈ ಚುನಾವಣೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ. ಅವರ ತೀರ್ಪನ್ನು ನಾವು ವಿನಯ ಪೂರ್ವಕವಾಗಿ ಸ್ವೀಕರಿಸುತ್ತೇವೆ ಎಂದ ಜನಾರ್ದನ ಪೂಜಾರಿ, ಇದೇ ವೇಳೆ ಗೆದ್ದವರಿಗೆ ದುರಹಂಕಾರ ಬೇಡ, ಅವರು ಈ ಹಿಂದಿನ ಬಿಜೆಪಿ ಸರಕಾರದಂತೆ ದುರಾಡಳಿತ, ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ ಎಸಗದೆ ಉತ್ತಮ ಆಡಳಿತ ನೀಡಬೇಕು. ಬಿಜೆಪಿಗಾದ ಸೋಲು ಗೆದ್ದಿರುವ ಕಾಂಗ್ರೆಸಿಗರಿಗೂ ಒಂದು ಪಾಠ. ಆದ್ದರಿಂದ ಎಚ್ಚರಿಕೆಯಿಂದಿರಬೇಕು. ಜನರ ಆಶೀರ್ವಾದ ದುರುಪಯೋಗ ಪಡಿಸಿಕೊಂಡು ನಾವೇ ದೊಡ್ಡವರು ಎಂದು ಭಾವಿಸಿದರೆ ಬಿಜೆಪಿಗಾದ ಅನುಭವ ನಿಮಗೂ ಆಗಬಹುದು. ಜನರೇ ಯಜಮಾನರು ಎಂದು ಭಾವಿಸಿ ಅವರ ಸೇವೆ ಮಾಡಿಕೊಂಡು ಹೋಗಬೇಕು ಎಂದರು.

ಒಂದೊಮ್ಮೆ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿದರೆ ಅಂತಹವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಡಿ ಎಂದು ನಾನೇ ಹೇಳುತ್ತೇನೆ ಎಂದು ಪೂಜಾರಿ ತಿಳಿಸಿದರು.

ಕೇಂದ್ರದಲ್ಲಿ ಪ್ರತಿಪಕ್ಷ ಬಿಜೆಪಿ ಸಂಸತ್‌ ಅಧಿವೇಶನ ನಡೆಯಲು ಬಿಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಪಕ್ಷಕ್ಕೆ ನಂಬಿಕೆ ಇಲ್ಲ ಎನ್ನುವುದರ ಸಂಕೇತ ಎಂದ ಜನಾರ್ದನ ಪೂಜಾರಿ, ಅಂದರೆ ತಾನು ಸಚಿವರಾದ ಬನ್ಸಾಲ್‌ ಮತ್ತು ಅಶ್ವಿ‌ನಿ ಪರ ಮಾತನಾಡುತ್ತೇನೆ ಎಂದರ್ಥವಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಏನು ಹೇಳುತ್ತದೆ ಎನ್ನುವುದನ್ನು ಪರಿಶೀಲಿಸಬೇಕು ಎಂದರು.

ಆಹಾರ ಭದ್ರತಾ ಕಾಯ್ದೆ ದೇಶದಲ್ಲಿ ಶೇ. 67ರಷ್ಟಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಪ್ರಯೋಜನ ಒದಗಿಸುವಂತದ್ದಾಗಿದೆ. ಎಲ್ಲರಿಗೂ ಆಹಾರ ಒದಗಿಸುವ ಈ ಮಸೂದೆಗೆ ಅಡ್ಡಿ ಯಾಕೆ ? ಇದು ಕಾಂಗ್ರೆಸ್‌ನ ಅಗ್ಗದ ಪ್ರಚಾರ ಎನ್ನುವುದು ಬಿಜೆಪಿಯ ಅತಿ ಬುದ್ಧಿವಂತಿಕೆ ಎಂದು ಅವರು ಟೀಕಿಸಿದರು.

ಸುಳ್ಯದ ಕಾಂಗ್ರೆಸ್‌ ಅಭ್ಯರ್ಥಿ ರಘು ಅವರು ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದು, ಇದನ್ನು ಸೋಲು ಎಂದು ನಾವು ಭಾವಿಸುವುದಿಲ್ಲ. ಅವರಿಗೆ ಇನ್ನೂ ಅವಕಾಶಗಳು ಬಹಳಷ್ಟಿವೆ. ಉಳ್ಳಾಲದಲ್ಲಿ ಯು.ಟಿ. ಖಾದರ್‌ ದೊಡ್ಡ ಅಂತರದಲ್ಲಿ ಜಯಿಸಿದ್ದು, ಇದು ಚಾರಿತ್ರಿಕ ಜಯವಾಗಿದೆ. ತಾನು ಎಂ.ಪಿ. ಚುನಾವಣೆಯಲ್ಲಿ 32,000 ಮತಗಳ ಅಂತರದಿಂದ ಗೆದ್ದಿದ್ದೆ ಎಂದು ನೆನಪಿಸಿದರು. ಯಾವುದೇ ಪಕ್ಷದ ಬೆಂಬಲವಿಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 40,000 ಮತಗಳ ಅಂತರದಿಂದ ಗೆದ್ದ ಕುಂದಾಪುರದ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರನ್ನು ಜನಾರ್ದನ ಪೂಜಾರಿ ಅಭಿನಂದಿಸಿದರು.

ಕಾಂಗ್ರೆಸ್‌ ಗೆಲುವಿಗೆ ಕಾರಣರಾದ ಎಲ್ಲರಿಗೂ ಪೂಜಾರಿ ಅಭಿನಂದನೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ನಾಯಕರಾದ ಕಳ್ಳಿಗೆ ತಾರನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್‌, ಐವನ್‌ ಡಿ’ಸೋಜಾ, ಬಲರಾಜ ರೈ, ನಾಗೇಂದ್ರ ಕುಮಾರ್‌, ಅಶ್ರಫ್‌, ಅರುಣ್‌ ಕುವೆಲ್ಲೊ, ವಿಶ್ವಾಸ್‌ ಕುಮಾರ್‌ ದಾಸ್‌, ಅಪ್ಪಿ, ರೋಹನ್‌ ಮೊಂತೇರೊ ಮೊದಲಾದವರು ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi