ಖಾಸಗಿ ಬಸ್‌ಗಳಲ್ಲಿ 2 ಡ್ರೈವರ್‌ ಕಡ್ಡಾಯ?


Udayavani, 04-11-2013 17:12:41


Write Comment     |     E-Mail To a Friend     |     Facebook     |     Twitter     |     Print


- ಆಂಧ್ರ ದುರಂತ ಹಿನ್ನೆಲೆ: ಕ್ರಮಕ್ಕೆ ಸಾರಿಗೆ ಇಲಾಖೆ ಸಜ್ಜು

ಏನೇನು ಕ್ರಮ?

1. ಖಾಸಗಿ ಬಸ್‌ಗಳಲ್ಲಿ ಇಬ್ಬರು ಚಾಲಕರ ನಿಯೋಜನೆಯನ್ನು ಕಡ್ಡಾಯಗೊಳಿಸುವುದು.

2. ಬಸ್‌ಗಳಲ್ಲಿ ಸರಕು ಸಾಗಣೆ ಪ್ರಮಾಣಕ್ಕೆ ಸ್ಪಷ್ಟ ಮಿತಿ ಹೇರುವುದು.

3. ಸರಕು ಸಾಗಣೆ ತಪಾಸಣೆಗೆ ವಿಶೇಷ ದಳ ರಚಿಸುವುದು. ಅಗತ್ಯಬಿದ್ದರೆ ಪೊಲೀಸರ ಸಹಾಯ ತೆಗೆದುಕೊಳ್ಳುವುದು.

4. ವೇಗವಾಗಿ ಸಾಗುವ ಸಲುವಾಗಿ ವೇಗ ನಿಯಂತ್ರಕ ಸಂಪರ್ಕ ಕಡಿತಗೊಳಿಸುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳವುದು.

ಬೆಂಗಳೂರು: ಆಂಧ್ರಪ್ರದೇಶದ ಪಾಲೆಂ ಬಳಿ ಸಂಭವಿಸಿದ ಜಬ್ಟಾರ್‌ ಟ್ರಾವೆಲ್ಸ್‌ನ ವೋಲ್ವೋ ಬಸ್‌ ದುರಂತದ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ನಂತರ ಖಾಸಗಿ ಬಸ್‌ಗಳಿಗೆ ಹೊಸ ನಿಯಮಗಳನ್ನು ಪ್ರಯೋಗಿಸುವ ಮೂಲಕ ದುರಂತಗಳಿಗೆ ಬ್ರೇಕ್‌ ಹಾಕಲು ರಾಜ್ಯದ ಸಾರಿಗೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

’ಆಂಧ್ರ ದುರಂತ’ ಮರುಕಳಿಸದಂತೆ ಮಾಡಲು ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ಆಟಾಟೋಪಕ್ಕೆ ತಡೆ ಒಡ್ಡುವ ಸಲುವಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವರು ಸಮಾಲೋಚನೆ ನಡೆಸಿದ್ದಾರೆ.

ಹಬ್ಬದ ನಂತರ ಜಾರಿ: ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿರುವುದನ್ನು ’ಉದಯವಾಣಿ’ಗೆ ಖಚಿತಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹಬ್ಬದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇಂಥ ದುರಂತಗಳು ಮರುಕಳಿಸುವುದನ್ನು ತಡೆಗಟ್ಟಲು ಸರ್ಕಾರದ ವತಿಯಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಂತರರಾಜ್ಯವೂ ಸೇರಿದಂತೆ ದೂರದ ಊರುಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಪ್ರಸ್ತುತ ಒಬ್ಬ ಚಾಲಕ ಇರುತ್ತಾರೆ. ಕನಿಷ್ಠ ಸಾವಿರ ಕಿ.ಮೀ. ದೂರವನ್ನು ಆ ಒಬ್ಬ ಚಾಲಕನೇ ಚಾಲನೆ ಮಾಡಬೇಕಾಗುತ್ತದೆ. ಇದರಿಂದ ಕೆಲವೊಮ್ಮೆ ಮಾನಸಿಕ ಮತ್ತು ದೈಹಿಕವಾಗಿ ಸುಸ್ತಾಗಿ ಚಾಲಕ ಎಚ್ಚರ ತಪ್ಪಿ, ನಿಯಂತ್ರಣ ತಪ್ಪುವ ಸಾಧ್ಯತೆಗಳಿವೆ. ಈ ರೀತಿಯ ಅನಾಹುತಗಳನ್ನು ತಪ್ಪಿಸಲು ಇಬ್ಬರು ಚಾಲಕರನ್ನು ನಿಯೋಜಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ.

ಆಂಧ್ರ ಬಸ್‌ ದುರಂತಕ್ಕೆ ರಾಸಾಯನಿಕದಂತಹ ಸರಕು ಸಾಮಗ್ರಿಗಳೇ ಕಾರಣ ಇರಬಹುದು ಎಂಬ ಸಂಶಯ ಮೂಡಿದೆ. ಇದೇ ಕಾರಣಕ್ಕೆ ಖಾಸಗಿ ಬಸ್‌ಗಳಲ್ಲಿ ಸರಕು ಸಾಗಣೆ ನಿರ್ದಿಷ್ಟಗೊಳಿಸಿ, ಅದರ ನಿರ್ವಹಣೆಗೆ ತಪಾಸಣಾ ಅಧಿಕಾರಿಗಳನ್ನು ನಿಯೋಜಿಸಲು ಚಿಂತನೆ ನಡೆಸಿದೆ. ಪ್ರಸ್ತುತ ಬಸ್‌ಗಳಲ್ಲಿ ಬೇಕಾಬಿಟ್ಟಿ ಸರಕು ಸಾಗಣೆ ಮಾಡುವ ಪದ್ಧತಿ ಇದೆ. ನಿಯಮವಿದ್ದರೂ ಅದರ ಪಾಲನೆ ಇಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಮುಖ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಆದರೆ, ಸಾರಿಗೆ ಇಲಾಖೆಗೆ ಈ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಯೊಂದು ಎದುರಾಗಿದೆ. ಅದು ಸಿಬ್ಬಂದಿ ಕೊರತೆ. ಬೆಂಗಳೂರಿನಲ್ಲೇ ಸಾವಿರಾರು ಬಸ್‌ಗಳಿದ್ದು, ಅವೆಲ್ಲವುಗಳ ತಪಾಸಣೆ ಕಷ್ಟಸಾಧ್ಯ. ಹಾಗಾಗಿ, ಈ ವಿಚಾರದಲ್ಲಿ ಸಾಧ್ಯವಾದರೆ ಪೊಲೀಸರ ನೆರವು ಪಡೆಯುವ ಚಿಂತನೆಯೂ ನಡೆದಿದೆ ಎಂದು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಬಸ್‌ಗಳಲ್ಲಿ ವೇಗ ನಿಯಂತ್ರಕಗಳನ್ನು (ಸ್ಪೀಡ್‌ ಗವರ್ನರ್‌) ಅಳವಡಿಸಿದ್ದರೂ, ದೂರವನ್ನು ಇತರರಿಗಿಂತ ಬೇಗ ಕ್ರಮಿಸಬೇಕು ಎಂಬ ಆತುರದಲ್ಲಿ ವೇಗ ನಿಯಂತ್ರಕಗಳ ಸಂಪರ್ಕವನ್ನು ಕಡಿತಗೊಳಿಸುವುದು ಗಮನಕ್ಕೆ ಬಂದಿದೆ. ಇದರ ತಪಾಸಣೆಯನ್ನೂ ನಡೆಸಲಾಗುತ್ತದೆ. ಈ ಸಂಬಂಧ ಈಗಾಗಲೇ ಸಾರಿಗೆ ಆಯುಕ್ತರಿಗೆ ಸಾರಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ಕ್ರಮಗಳನ್ನು ದೀಪಾವಳಿ ನಂತರ ಹಂತ-ಹಂತವಾಗಿ ಜಾರಿಗೊಳಿಸಲು ಸಾರಿಗೆ ಇಲಾಖೆ ಉದ್ದೇಶಿಸಿದೆ.

ಖಾಸಗಿ ಬಸ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಲವು ನಿಯಮಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ದೀಪಾವಳಿ ನಂತರ ಈ ಕ್ರಮಗಳಿಗೆ ಸಾರಿಗೆ ಇಲಾಖೆ ಮುಂದಾಗಲಿದೆ.

- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ನಿಯಮ ಉಲ್ಲಂಘನೆ: 400 ಬಸ್‌ ಮೇಲೆ ಕೇಸ್‌

ಕಳೆದ ನಾಲ್ಕು ದಿನಗಳಲ್ಲಿ ನಿಯಮ ಉಲ್ಲಂ ಸಿ ಬಸ್‌ಗಳಲ್ಲಿ ಸರಕು ಸಾಗಣೆ ಮಾಡುತ್ತಿದ್ದ 400 ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ಗಳಲ್ಲಿ ವೈಯಕ್ತಿಕ ಸಾಮಗ್ರಿಗಳನ್ನು ಹೊರತುಪಡಿಸಿ, ಬೇರಾವುದೇ ಸಾಮಗ್ರಿಗಳನ್ನು ಒಯ್ಯುವುದು ನಿರ್ಬಂಧಿತ. ಆದರೂ ರಾಜಾರೋಷವಾಗಿ ಸರಕು ಸಾಗಿಸಲಾಗುತ್ತಿದೆ. ಮೆಹಬೂಬ್‌ ನಗರ ಬಸ್‌ ದುರಂತದ ಹಿನ್ನೆಲೆಯಲ್ಲಿ ಸರಕುಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದ್ದು, ಕೇವಲ ನಾಲ್ಕು ದಿನಗಳಲ್ಲೇ ನಿಯಮ ಉಲ್ಲಂ ಸಿದ 400 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಬಸ್‌ಗಳ ಗುಣಮಟ್ಟ, ದಾಖಲೆ ತಪಾಸಣೆ


ಬೆಂಗಳೂರು: ಮೆಹಬೂಬ್‌ ನಗರ ಬಸ್‌ ದುರಂತ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಟೂರಿಸ್ಟ್‌ ಬಸ್ಸು, ಒಪ್ಪಂದದ ವಾಹನ, ಪ್ರಯಾಣಿಕರ ಬಸ್ಸುಗಳ ದಾಖಲೆ, ವಾಹನಗಳ ಗುಣಮಟ್ಟ ಹಾಗೂ ಸಾಗಣೆ ಮಾಡುತ್ತಿರುವ ಸರಕುಗಳನ್ನು ಪರಿಶೀಲನೆ ನಡೆಸಿತು. ಅ.31 ಹಾಗೂ ನ.1ರಂದು ಒಟ್ಟು 139 ವಾಹನಗಳನ್ನು ತಪಾಸಣೆ ನಡೆಸಿದ ಸಿಬ್ಬಂದಿ 68 ಪ್ರಕರಣಗಳನ್ನು ದಾಖಲಿಸಿ ತೆರಿಗೆ ಮತ್ತು ದಂಡ ರೂಪದಲ್ಲಿ ಒಟ್ಟು 24,800 ರೂ. ವಸೂಲಿ ಮಾಡಿದೆ. ವಾಹನಗಳ ತಪಾಸಣೆ ಮುಂದುವರೆಯಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ಸಾಲಿಗ್ರಾಮ ಕೂಟ ಮಹಾಜಗತ್ತು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ. ಶೇ.85ಕ್ಕೂ ಹೆಚ್ಚು ಅಂಕ ಪಡೆದಿರುವ ಅಭ್ಯರ್ಥಿಗಳು ನ.30ರೊಳಗೆ ಕಾರ್ಯದರ್ಶಿ, ಕೂಟ ಮಹಾಜಗತ್ತು ಸಾಲಿಗ್ರಾಮ, ಬೆಂಗಳೂರು ಅಂಗ ಸಂಸ್ಥೆ. ನಂ.77, 2ನೇ ಮಹಡಿ, ಕಾವೇರಿ ನಿಲಯ, ಗಾಂಧಿ ಬಜಾರ್‌ ಮುಖ್ಯ ರಸ್ತೆ, ಬೆಂಗಳೂರು -04. ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ದೂ. 080-32980263 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಟಪಾಡಿ: ಮನೆಗೆ ನುಗ್ಗಿ ಕಳವು; ಬೈಕ್‌ ವಶಕ್ಕೆ

ಕಾಪು: ಕಟಪಾಡಿ ಏಣಗುಡ್ಡೆ ಗ್ರಾಮದ ಅಗ್ರಹಾರದ ಮನ್ಸೂರ್‌ ಆಲಿ ಫ‌ಕೀರ್‌ ಸಾಹೇಬ್‌ ಅವರ ಮನೆಯಲ್ಲಿ ಶನಿವಾರ ಮಧ್ಯರಾತ್ರಿ ನಗ, ನಗದು ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬೈಕೊಂದನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಶನಿವಾರ ರಾತ್ರಿ 12ರ ಬಳಿಕ ಫ‌ಕೀರ್‌ ಸಾಹೇಬ್‌ ಅವರ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ್ದ ಕಳ್ಳ ಬೆಡ್‌ರೂಮ್‌ ಒಂದರ ಕಪಾಟುಗಳನ್ನು ತೆರೆದು ಅದರಲ್ಲಿದ್ದ 5 ಸಾವಿರ ನಗದು ಹಾಗೂ 31 ಗ್ರಾಂ. ಚಿನ್ನಾಭರಣ ಎಗರಿಸಿದ್ದ. 12.45ರ ಸುಮಾರಿಗೆ ಮನೆಯ ಮಹಿಳೆಯೊಬ್ಬರು ಎಚ್ಚರಗೊಂಡು ದೀಪ ಉರಿಸಿದಾಗ ಹಿಂಬಾಗಿಲ ಮೂಲಕ ಯಾರೋ ಪರಾರಿಯಾಗುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಮಹಿಳೆ ಮನೆಮಂದಿಯನ್ನೆಲ್ಲ ಎಬ್ಬಿಸಿದ್ದಾರೆ. ಬಳಿಕ ಅವರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಟಪಾಡಿಯ ಸರಕಾರಿ ಗುಡ್ಡೆಯಲ್ಲಿ ಬೈಕೊಂದನ್ನು ಪತ್ತೆ ಮಾಡಿದ್ದಾರೆ. ಆ ಬೈಕು ಕಳವು ನಡೆದ ಮನೆಯ ಅನತಿ ದೂರದ ಅಚ್ಚಡ ಎನ್ನುವಲ್ಲಿನ ನಿವಾಸಿ ನಾಸೀರ್‌ ಅವರಿಗೆ ಸೇರಿದ್ದಾಗಿತ್ತು. ತನ್ನ ಮನೆಯಲ್ಲಿಟ್ಟಿದ್ದ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ ಎಂದು ನಾಸೀರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಡುತ್ತಿದೆ ಹಲವು ಸಂಶಯ

ಮಾಹಿತಿ ತಿಳಿದಾಕ್ಷಣ ಅಲ್ಲಲ್ಲಿ ನಾಕಾಬಂಧಿ ನಡೆಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬೈಕೊಂದನ್ನು ಬೆನ್ನಟ್ಟಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಾಪು ಪೊಲೀಸರು ಹೇಳುತ್ತಾರೆ. ಹಾಗಾದರೆ ಬೈಕ್‌ ಸವಾರಿ ಮಾಡುತ್ತಿದ್ದಾತ ಎಲ್ಲಿ ಹೋದ? ನಾಸೀರ್‌ ಮನೆಯಿಂದ ಬೈಕನ್ನು ಹೇಗೆ ಕದ್ದ? ಬೈಕು ಕದ್ದಾತ ಹಾಗೂ ಮನೆಯಲ್ಲಿ ಕಳವು ನಡೆಸಿದಾತ ಒಬ್ಬನೇ? ಅಥವಾ ಇಲ್ಲಿ ಏನೋ ಒಳಮರ್ಮ ಇದೆಯೇ? ಎನ್ನುವ ಹಲವು ಸಂಶಯಗಳಿಗೆ ಪೊಲೀಸರಿಂದ ಉತ್ತರ ಸಿಕ್ಕಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ದೀಪಾವಳಿ : 25ಕ್ಕೂ ಅಧಿಕ ಮಂದಿಗೆ ಪೆಟ್ಟು

ಅವಲಹಳ್ಳಿಯ ಬಸವಲಿಂಗ ಭೂಚಕ್ರ ಹೊತ್ತಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದು ಗಾಯಗೊಂಡಿದ್ದಾರೆ.


ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಈ ಬಾರಿಯೂ ಹಲವು ಮಂದಿಗೆ ಹಾನಿ ಉಂಟುಮಾಡಿದ್ದು, ವ್ಯಕ್ತಿಯೊಬ್ಬರು ಒಂದು ಕಣ್ಣನ್ನು ಶಾಶ್ವತವಾಗಿ ಕಳೆದುಕೊಳ್ಳುವಂತಾಗಿದೆ.

ಈ ಬಾರಿ ಪಟಾಕಿ ಸಿಡಿತದಿಂದ ಮಕ್ಕಳಿಗಿಂತ ಹಿರಿಯರೇ ಹೆಚ್ಚು ಗಾಯಾಳುವಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡೂ ದಿನ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಏಳು ಮಂದಿ ಚಿಕಿತ್ಸೆ ಪಡೆದಿದ್ದರೆ, ನಾರಾಯಣ ನೇತ್ರಾಲಯದಲ್ಲಿ 17 ಮಂದಿ ಮತ್ತು ಸಂಪ್ರತಿ ಕಣ್ಣಿನ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆಗೊಳಗಾಗಿದ್ದಾರೆ.

25ಕ್ಕೂ ಹೆಚ್ಚು ಗಾಯಾಳುಗಳ ಪೈಕಿ ಮಾಗಡಿ ರಸ್ತೆಯ ನಿವಾಸಿ ಸತೀಶ್‌(31) ತೀವ್ರವಾಗಿ ಗಾಯಗೊಂಡು ಬಲಗಣ್ಣಿ ದೃಷ್ಟಿ ಕಳೆದುಕೊಂಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಸತೀಶ್‌ ಮತ್ತು ನಂದನ್‌ (9) ಮಿಂಟೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರೆ, ಇನ್ನುಳಿದವರು ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಭಾನುವಾರ ರಾತ್ರಿ ಆರು ವರ್ಷದ ಮಗುವಿನ ಕಣ್ಣಿಗೆ ಪಟಾಕಿ ಸಿಡಿದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣಿಗೆ ಪೆಟ್ಟಾಗಿದ್ದರೂ ಕಣ್ಣು ಕಳೆದುಕೊಳ್ಳುವಂತಹ ಸಮಸ್ಯೆ ಇಲ್ಲ. ಸೋಮವಾರದೊಳಗೆ ಸುಧಾರಣೆ ಕಾಣಲಿದೆ ಎಂದು ಮಿಂಟೋ ಆಸ್ಟತ್ರೆ ವೆÂದ್ಯೆ ಎಸ್‌. ಕಲ್ಪನಾ ತಿಳಿಸಿದ್ದಾರೆ.

ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಭಾನುವಾರ ಮಧ್ಯಾಹ್ನ ಮನೆಯ ಮುಂದೆ ಬೈಕ್‌ ನಿಲ್ಲಿಸುತ್ತಿದ್ದ ವೇಳೆ ಮಕ್ಕಳು ಹೊಡೆಯುತ್ತಿದ್ದ ಪಟಾಕಿ ಒಂದು ಕಣ್ಣಿಗೆ ತಗುಲಿದ್ದು, ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆಪಡೆದಿದ್ದೇನೆ ಎಂದು ಸತೀಶ್‌ ಹೇಳಿದರು.

ಅವಲಹಳ್ಳಿಯ ಬಸವಲಿಂಗ (12) ಭೂಚಕ್ರ ಹೊತ್ತಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದು ಗಾಯಗೊಂಡಿದ್ದಾರೆ. ರಸ್ತೆ ಬದಿ ನಡೆದು ಹೋಗುತ್ತಿದ್ದ ಯಶವಂತ (10), ಸುಂದರ್‌ (59) ಅವರಿಗೆ ಪಟಾಕಿಯ ಕಿಡಿ ಕಾರ್ನಿಯಾ ಭಾಗಕ್ಕೆ ಬಿದ್ದು ಗಾಯವಾಗಿದೆ.

ನಾರಾಯಣ ನೇತ್ರಾಲಯದಲ್ಲಿ ಎರಡು ದಿನಗಳಲ್ಲಿ 17 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ ಹೊಡೆಯುವಾಗ ಮಾಗಡಿ ರಸ್ತೆಯ ಹರ್ಷಿತ್‌(9)ನ ಎರಡೂ ಕಣ್ಣುಗಳಿಗೂ ಹಾನಿಯಾಗಿದೆ. ತರಗುಪೇಟೆಯ ಇಚ್ಚಾ (2) ಕಣ್ಣಿಗೆ ಗಾಯವಾಗಿದೆ. ರಾಜಾಜಿ ನಗರದ ವೆಂಕಟೇಶ್‌(30), ನಂದಿನಿ ಲೇಔಟ್‌ನ ಹೇಮಂತ್‌ಕುಮಾರ್‌ (30), ಲಗ್ಗೆರೆಯ ಪ್ರತಾಪ್‌(22) ಎಂಬುವವರಿಗೆ ಪಟಾಕಿ ಮದ್ದು ಬಿದ್ದು ಕಣ್ಣಿನಲ್ಲಿ ಉರಿ ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ.

ಯಶವಂತಪುರದ ಸತೀಶ್‌(8), ರಾಮಮೂರ್ತಿ ನಗರದ ರೇವತಿಪ್ರಿಯ (30), ಭುವನೇಶ್ವರಿನಗರದ ಆನಂದ್‌(40), ಕಲ್ಯಾಣ ನಗರದ ರಾಧಿಕಾದೇವಿ, ಜೈಕುಮಾರ್‌ (23), ದೀಪಕ್‌ (16) ಎಂಬುವರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ.

ಕೃಷ್ಣನಗರದ ಮಣಿಕಂಠ (16) ಎಂಬಾತನಿಗೆ ಹೂಕುಂಡದ ಬೆಂಕಿ ತಗುಲಿ ಕಣ್ಣಿಗೆ ಸಣ್ಣ ಗಾಯವಾಗಿದೆ. ಯಶವಂತಪುರದ ಯಶಸ್‌Õ (4) ಕಣ್ಣಿಗೆ ಮದ್ದಿನ ಪುಡಿ ತಗುಲಿ ಉರಿ ಕಾಣಿಸಿಕೊಂಡಿತ್ತು. ನಂತರ ಕಣ್ಣನ್ನು ಸ್ವತ್ಛ ಮಾಡಲಾಯಿತು. ಮತ್ತಿಕೆರೆಯ ಶಶಿ ಎಂ.ಶರ್ಮಾ (7)ನಿಗೆ ಎಡಗಣ್ಣಿನ ಕಾರ್ನಿಯಾ ಹರಿದಿದ್ದು ಸೋಮವಾರ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ತಿಳಿಸಿದ್ದಾರೆ.

ಸಂಪ್ರತಿ ಕಣ್ಣಿನ ಆಸ್ಪತ್ರೆಯಲ್ಲಿ ಶೇಷಾದ್ರಿಪುರಂ ನಿವಾಸಿ 25 ವರ್ಷದ ಹೇಮಾ ಎಂಬುವರಿಗೆ ಸಿಡಿದ ಪಟಾಕಿ ಕಣ್ಣಿಗೆ ಬಿದ್ದು ಕಾರ್ನಿಯಾ ಭಾಗಕ್ಕೆ ಹಾನಿಯಾಗಿದೆ. ಶಂಕರ್‌ ಕಣ್ಣಿನ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಮತ್ತು ರಂಗಾಲಕ್ಷ್ಮೀ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ.

ಈ ಬಾರಿ ಪಟಾಕಿ ಸಿಡಿತದಿಂದ ಮಕ್ಕಳಿಗಿಂತ ಹಿರಿಯರೇ ಹೆಚ್ಚು ಗಾಯಾಳುವಾಗಿದ್ದಾರೆ.

ದೀಪಾವಳಿ : ಪ್ರಾಣಿಗಳಿಗೂ ಮಾರಕ

ಬೆಂಗಳೂರು : ದೀಪಾವಳಿಯ ಪಟಾಕಿ ಮನುಷ್ಯರಿಗಷ್ಟೇ ಅಲ್ಲ. ಪಶು-ಪಕ್ಷಿಗಳಿಗೂ ಮಾರಕ. ಆದರೆ, ಈ ಬಗ್ಗೆ ಮುನ್ನೆಚ್ಚರಿಕೆವಹಿಸದ ಪರಿಣಾಮ ಪ್ರತಿ ವರ್ಷ ನೂರಾರು ಸಾಕುಪ್ರಾಣಿಗಳು ಶಾಶ್ವತ ಅಂಗ ಊನಕ್ಕೆ ಒಳಗಾಗುತ್ತಿವೆ.

ಪಟಾಕಿಯ ಶಬ್ದಕ್ಕೆ ಅಂಜಿ ಮುದ್ದಿನ ಸಾಕುಪ್ರಾಣಿಗಳಾದ ಬೆಕ್ಕು,ನಾಯಿ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತವೆ. ಅದರಲ್ಲೂ ಪಟಾಕಿಯ ಶಬ್ದ ಸಾಕುಪ್ರಾಣಿಗಳ ಕಣ್ಣುಗಳಿಗಿಂತ ಕಿವಿಗಳಿಗೆ ಹಾನಿ ಹೆಚ್ಚು ಉಂಟುಮಾಡಲಿದೆ. ಅದರಲ್ಲೂ ಬೇರೆಲ್ಲಾ ಪ್ರಾಣಿಗಳಿಗೆ ಹೋಲಿಸಿದರೆ ನಾಯಿ ಮತ್ತು ಬೆಕ್ಕು ಅತಿ ಸೂಕ್ಷ್ಮ ಪ್ರಾಣಿಗಳು. ಇವುಗಳ ಕಿವಿಗಳು ಮನುಷ್ಯನ ಕಿವಿಗಳಿಗಿಂತ ಆರು ಪಟ್ಟು ಚುರುಕಾಗಿರುತ್ತವೆ. ರಸ್ತೆಯ ಮೂಲೆಯಲ್ಲಿ ಪಟಾಕಿ ಸಿಡಿದರೂ ಅವುಗಳಿಗೆ ’ಬಾಂಬ್‌’ ಸಿಡಿದ ಅನುಭವವಾಗುತ್ತದೆ.

ಪಟಾಕಿಯಿಂದ ಪೆಟ್ಟಾದರೆ ಮನುಷ್ಯ ತನ್ನ ನೋವನ್ನು ಹೇಳಿಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಾನೆ. ಆದರೆ, ಮೂಕ ಪ್ರಾಣಿಗಳು ತಮ್ಮ ವೇದನೆಯನ್ನು ಹೇಳಿಕೊಳ್ಳಲಾಗದಿದ್ದರೂ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತವೆ. ಭಾರೀ ಶಬ್ದದಿಂದ ಹಾನಿಗೊಳಗಾಗುವ ನಾಯಿಗಳು ಬೆದರಿ ಮನೆಯ ಮೂಲೆ ಸೇರುತ್ತವೆ. ಬೀದಿನಾಯಿಗಳು ಬೀದಿಯ ಬದಿಯ ಮೂಲೆಯಲ್ಲಿ ಅಡಗಿಕೊಳ್ಳುತ್ತವೆ. ಕಿವಿಯ ತಮಟೆಯಲ್ಲಿ ಏರುಪೇರಾದರೆ ಗಾಬರಿಯಿಂದ ಮನಬಂದಂತೆ ಅಡ್ಡಾಡುವುದರ ಜತೆಗೆ ಸರಿಯಾಗಿ ಆಹಾರವನ್ನೂ ತಿನ್ನುವುದಿಲ್ಲ.

ನಾಯಿಗಳ ವರ್ತನೆಯಲ್ಲಿ ಬದಲಾವಣೆಯ ಜತೆಗೆ ರೋಗ ಪೀಡಿತವಾಗುತ್ತವೆ. ವಾಂತಿ-ಬೇಧಿ, ಹೃದಯ ಬಡಿತದಲ್ಲಿ ಏರುಪೇರಾಗಿ ಹೃದಯಾಘಾತಕ್ಕೆ ಬಲಿಯಾಗುವ ಸಾಧ್ಯತೆಯೂ ಇದೆ. ಸಿಡಿಮದ್ದುಗಳ ಶಬ್ದವನ್ನು ಮನುಷ್ಯ ತಡೆದುಕೊಳ್ಳುವ ಪ್ರಮಾಣ ಎಷ್ಟೆಂಬುದರ ಬಗ್ಗೆ ಅಧ್ಯಯನ ಶಬ್ದ ಮಾನಕ ಮಾಡಲಾಗಿರುತ್ತದೆ. ಆದರೆ, ಪ್ರಾಣಿಗಳು ತಡೆದುಕೊಳ್ಳುವ ಶಬ್ದದ ಪ್ರಮಾಣಕ್ಕೆ ತಕ್ಕಂತೆ ಈವರೆವಿಗೂ ಯಾರೂ ಮಾನಕ ನಿಗದಿ ಮಾಡಿಲ್ಲ ಎನ್ನುತ್ತಾರೆ ಪಶು ವೈದ್ಯ ಡಾ. ಶಿವಶರಣ್‌ ಜಿ.ಯಲಗೋಡ್‌.

ಬೆಂಗಳೂರಿನಲ್ಲಿ ಶ್ವಾನಪ್ರೇಮಿಗಳು ಹೆಚ್ಚಾಗಿದ್ದು, ಅದರಲ್ಲೂ ಪಮೋರಿಯನ್‌ ಸೇರಿದಂತೆ ವಿದೇಶಿ ತಳಿಯ ನಾಯಿ ಸಾಕುವವರ ಸಂಖ್ಯೆಯೇ ಹೆಚ್ಚು. ಮಗುವಿಗಿಂತ ಹೆಚ್ಚಾಗಿ ಅದರ ಲಾಲನೆ-ಪಾಲನೆ ಮಾಡುವ ಶ್ರೀಮಂತ ವರ್ಗದವರು ದೀಪಾವಳಿ ವೇಳೆ ಅವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪಶುವೈದ್ಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಬೇಕು ಎಂಬ ಅರಿವು ಕಡಿಮೆ ಇರುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ದಾಖಲಿಸುವ ವ್ಯವಸ್ಥೆ ಇಲ್ಲ

ಬೆಂಗಳೂರು ಮಹಾನಗರದಲ್ಲಿ 200ಕ್ಕೂ ಹೆಚ್ಚು ಖಾಸಗಿ ನಾಯಿ, ಬೆಕ್ಕುಗಳಿಗೆ ಚಿಕಿತ್ಸೆ ನೀಡುವ ಪಶು ಆಸ್ಪತ್ರೆಗಳಿವೆ. ಶ್ರೀಮಂತ ವರ್ಗದವರು ಸರ್ಕಾರಿ ಆಸ್ಪತ್ರೆಗಿಂತ ಹೆಚ್ಚಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಖಾಸಗಿ ವೈದ್ಯರು ಚಿಕಿತ್ಸೆ ನೀಡುತ್ತಾರೆಯೇ ವಿನಾ ಚಿಕಿತ್ಸೆ ನೀಡಿರುವ ದಾಖಲೆ ಮಾಡುವುದಿಲ್ಲ. ಪಶು ವೈದ್ಯಕೀಯ ಇಲಾಖೆಯು ಸಹ ಈವರೆಗೂ ಪಟಾಕಿ ಶಬ್ದದಿಂದ ಹಾನಿಗೊಳಗಾಗುವ ಪ್ರಾಣಿಗಳ ವಿವರವನ್ನು ದಾಖಲಿಸುವ ವ್ಯವಸ್ಥೆ ಮಾಡಿಲ್ಲ ಎಂದು ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ.

ಸುರಕ್ಷತೆಗೆ ಏನು ಮಾಡಬಹುದು

- ಪಶು ವೈದ್ಯರ ಸಲಹೆ ಮೇರೆಗೆ ಬೆಕ್ಕು,ನಾಯಿಗಳಿಗೆ ನಿದ್ದೆ ಮಾತ್ರೆಗಳನ್ನು ನೀಡುವುದು

- ಕಿವಿಗಳಿಗೆ ಬಟ್ಟೆ ಸುತ್ತಿ ಜಾಗೃತೆವಹಿಸುವುದು

- ಪಟಾಕಿ ಹೊಡೆಯುವ ವೇಳೆ ಸಾಕುಪ್ರಾಣಿಗಳು ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳುವುದು

ಬಿಗ್‌ಬಜಾರ್‌ ಗೋದಾಮು ಕುಸಿತ

ಹಲವು ಕೋಟಿ ರೂ.ನಷ್ಟ

ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಮಾಕಳಿಯಲ್ಲಿ ಬೃಹತ್‌ ಗೋದಾಮು ಕಟ್ಟಡ ನೆಲಕ್ಕುರುಳಿರುವುದು.


 Ã Â²â€ Ã Â²Â°Ã Â³Â ಮಂದಿ ಕಾರ್ಮಿಕರಿಗೆ ಗಾಯ, ಅವಶೇಷದಡಿ ಹಲವರು ಸಿಲುಕಿರುವ ಶಂಕೆ, ಕೋಟ್ಯಂತರ ರೂ. ನಷ್ಟ

ನೆಲಮಂಗಲ: ಕೆಂಗೇರಿ ಬಳಿ ಬಂಡೇಮಠಕ್ಕೆ ಸೇರಿದ್ದ ಕಲ್ಯಾಣ ಮಂಟಪ ಕುಸಿದು ಬಿದ್ದು 4 ಕಾರ್ಮಿಕರು ಪ್ರಾಣ ಕಳೆದುಕೊಂಡಿರುವ ಪ್ರಕರಣ ನಡೆದು 3 ತಿಂಗಳು ಕಳೆಯುವ ಮುನ್ನ ಅಂತಹದ್ದೇ ಘಟನೆಯೊಂದು ನೆಲಮಂಗಲದ ಮಾಕಳಿ ಬಳಿ ಭಾನುವಾರ ಸಂಭವಿಸಿದೆ.

ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಮಾಕಳಿಯಲ್ಲಿ ಬೃಹತ್‌ ಗೋದಾಮೊಂದು ನೆಲಕ್ಕುರುಳಿ ಆರು ಮಂದಿ ಗಾಯಗೊಂಡಿದ್ದಾರೆ. ಲಾರಿಯ ಜೊತೆ ಬಂದಿದ್ದ ಲಾರಿ ಕ್ಲೀನರ್‌ ಒಬ್ಬ ಘಟನೆ ಸಂಭವಿಸಿದ್ದಾಗಿನಿಂದಲೂ ಕಣ್ಮರೆಯಾಗಿರುವುದು ಸೇರಿದಂತೆ ಇನ್ನು ಕೆಲವು ಕೂಲಿ ಕಾರ್ಮಿಕರು ಕುಸಿದುಬಿದ್ದಿರುವ ಕಟ್ಟಡದ ಅವಶೇಷದಡಿ ಸಿಲುಕಿರಬಹುದೆಂದು ಶಂಕಿಸಲಾಗಿದೆ. ಘಟನೆಯಲ್ಲಿ ಕೋಟ್ಯಂತರ ಮೌಲ್ಯದ ವಸ್ತುಗಳು ಹಾಳಾಗಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ರಮೇಶ್‌, ಅಂಗ್ರೋಜ್‌ ಸಿಂಗ್‌, ಬ್ರಿಜೇಶ್‌, ಸರ್‌ಪಾಲ್‌ಸಿಂಗ್‌, ಓಂಪ್ರಕಾಶ್‌,ಜಸ್‌ಪಾಲ್‌ ಎಂದು ಗುರುತಿಸಲಾಗಿದ್ದು, ಈ 6 ಮಂದಿಯನ್ನು ಮಾದನಾಯಕನಹಳ್ಳಿ ಲೈಫ್ಲೈನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ,

ಎಲ್ಲಿದೆ ಈ ಗೋದಾಮು?: ರಾಷ್ಟ್ರೀಯ ಹೆದ್ದಾರಿಯಿಂದ ಗೋಲ್ಡನ್‌ ಪಾಮ್ಸ್‌ ಹೋಟೆಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗ ಮಧ್ಯೆ ಸುಮಾರು 46 ಸಾವಿರ ಚದರಡಿ( ಸುಮಾರು 1 ಎಕರೆಗಿಂತ ಹೆಚ್ಚು ಅಳತೆ)ಯ ಈ ಗೋದಾಮಿದೆ. ಇದರಲ್ಲಿ ನೆಲಮಹಡಿ ಮತ್ತು ಮೇಲ್ಮಹಡಿಯಲ್ಲಿ ಗೋದಾಮು ನಿರ್ಮಿಸಲಾಗಿತ್ತು, ನೆಲಮಹಡಿಯನ್ನು ಬಿಗ್‌ಬಜಾರ್‌ ಕಂಪನಿಯವರು ಬಾಡಿಗೆಗೆ ಪಡೆದು ಬೆಂಗಳೂರಿನಲ್ಲಿರುವ ತಮ್ಮ ಕಂಪನಿ ವ್ಯಾಪಾರ ಮಳಿಗೆಗಳಲ್ಲಿ ಮಾರಾಟಕ್ಕೆಂದು ಕೋಟ್ಯಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಶೇಖರಿಸಿಡಲಾಗಿತ್ತು. ಮೊದಲನೇ ಮಹಡಿಯಲ್ಲಿರುವ ಗೋದಾಮನ್ನು ಸುಪ್ರಿಂ ಕ್ರಯಾನ್ಸ್‌ ಎಂಬ ಕಂಪನಿ ಕೆಲದಿನಗಳ ಹಿಂದೆಯೆಷ್ಟೇ ಬಾಡಿಗೆಗೆ ಪಡೆದಿತ್ತು ಎಂದು ಸ್ಥಳದಲ್ಲಿದ್ದ ಕೆಲ ಕಾರ್ಮಿಕರು ತಿಳಿಸಿದ್ದಾರೆ.

ನಾಲ್ಕೈದು ದಿನಗಳ ಹಿಂದೆಯಷ್ಟೇ ತಮ್ಮ ಸುಪರ್ದಿಗೆ ಗೋದಾಮು ಪಡೆದ ಸುಪ್ರಿಂ ಕಂಪನಿ ಗೋದಾಮಿಗೆ ಇದೇ ಮೊದಲ ಬಾರಿಗೆ ಬಟ್ಟೆಗಳನ್ನು ತುಂಬಿಕೊಂಡು ಅಹಮದಾಬಾದ್‌ನಿಂದ 8 ಲಾರಿಗಳು ಬಂದಿದ್ದವು. ಗೋದಾಮಿನ ರೈಟರ್‌ಗಳು, ಲಾರಿ ಚಾಲಕರು, ಸಹಾಯಕರು ಸೇರಿದಂತೆ ಕೂಲಿ ಕಾರ್ಮಿಕರು ಒಳಗೊಂಡಂತೆ ಸುಮಾರು 25 ಮಂದಿ ಘಟನೆ ನಡೆದ ವೇಳೆ ಸ್ಥಳದಲ್ಲಿದ್ದರು. ಸುಮಾರು 25 ಮಂದಿ ಕಾರ್ಮಿಕರು ಹಬ್ಬದ ದಿನವಾದ ಭಾನುವಾರವೂ ಗೋದಾಮಿಗೆ ಸರಕುಗಳನ್ನು ಸಾಗಿಸುತ್ತಿದ್ದು ಅಹಮದಾಬಾದ್‌ನಿಂದ ತರಲಾಗಿದ್ದ ಸಿಯಾರಾಮ್ಸ್‌ ಕಂಪನಿ ಬಟ್ಟೆ ರೋಲ್‌ಗ‌ಳನ್ನು ಗೋದಾಮಿನಲ್ಲಿ ಇಳಿಸುವಾಗ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗದೇ 6 ಮಂದಿ ಗಾಯಗೊಂಡಿದ್ದಾರೆ.

ನಡೆದಿದ್ದೇನು?: ಮಧ್ಯಾಹ್ನ ಸುಮಾರು 12.50 ಗಂಟೆಯಲ್ಲಿ ನೆಲ ಅಂತಸ್ತು ಮತ್ತು ಮೊದಲ ಮಹಡಿಯ ಕಟ್ಟಡ ಇದ್ದಕ್ಕಿಂದ್ದಂತೆ ಕುಸಿದು ಬೀಳಲಾರಂಭಿಸುತ್ತಿದ್ದಂತೆ ಗೋದಾಮಿನ ಒಳಗೆ ಮತ್ತು ಹೊರಭಾಗದಲ್ಲಿ ನಿಂತಿದ್ದ ಎಲ್ಲರೂ ಕಿರುಚಿಕೊಂಡು ಓಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಲಾರಿಯ ಸಹಾಯಕರು, ಕೂಲಿ ಕಾರ್ಮಿಕರು ಸೇರಿದಂತೆ ಲಾರಿಯ ಜೊತೆಯಲ್ಲಿ ಬಂದಿದ್ದವರು ಎನ್ನಲಾಗಿದೆ. ಆದರೆ ಬಟ್ಟೆ ತುಂಬಿಕೊಂಡು ಲಾರಿಯ ಜೊತೆ ಬಂದಿದ್ದ ಲಾರಿ ಕ್ಲೀನರ್‌ ಮುಖೇಶ್‌(25) ಎಂಬಾತ ಘಟನೆ ಸಂಭವಿಸಿದ್ದಾಗಿನಿಂದಲೂ ಕಣ್ಮರೆಯಾಗಿರುವುದು ಸೇರಿದಂತೆ ಇನ್ನು ಕೆಲವು ಕೂಲಿ ಕಾರ್ಮಿಕರು ಕುಸಿದುಬಿದ್ದಿರುವ ಕಟ್ಟಡದ ಅವಶೇಷದಡಿ ಸಿಲುಕಿರಬಹುದೆಂದು ಶಂಕಿಸಲಾಗಿದೆ.

ಧರೆಗುರುಳಿದ ಕಟ್ಟಡ: ಕೈಗಾರಿಕೋದ್ಯಮಿ ಮಾಕಳಿ ರವಿ ಎಂಬುವವರು ಸುಮಾರು 46 ಸಾವಿರ ಚದರಡಿ ಸ್ಥಳದಲ್ಲಿ ನೆಲ ಅಂತಸ್ತು ಮತ್ತು ಮೊದಲ ಮಹಡಿಯನ್ನು ಒಳಗೊಂಡಂತೆ ಇರುವ ಬೃಹತ್‌ ಗೋದಾಮು ಕಟ್ಟಡವನ್ನು ಸುಮಾರು 7 ವರ್ಷಗಳ ಹಿಂದೆಯಷ್ಟೆ ನಿರ್ಮಾಣ ಮಾಡಿದ್ದರು. ಈ ಘಟನೆಯಲ್ಲಿ ಗೋದಾಮಿನ ಶೇ.70ರಷ್ಟು ಕಟ್ಟಡ ಕುಸಿದು ಬಿದ್ದಿದೆ. ಬಿಗ್‌ ಬಜಾರ್‌ನ ವಸ್ತುಗಳು ಕಟ್ಟಡ ಅವಶೇಷದಡಿ ಸಿಲುಕಿದ್ದು ಬಹುತೇಕ ನಾಶವಾಗಿವೆ.

ಸಚಿವರು, ಎಸ್ಪಿಸ್ಥಳ ಪರಿಶೀಲನೆ: ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಆಗಮಿಸಿ ಪರಿಶೀಲನೆ ನಡೆಸಿದರು. ಅವಘಡದ ಮಾಹಿತಿ ಹರಡುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌ ಬಾನೂತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಸ್ಥಳದಲ್ಲಿ ಹಾಜರಿದ್ದ ಪೊಲೀಸ್‌ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಅವರೊಂದಿಗೆ ಪೊಲೀಸ್‌ ಉಪಾಧೀಕ್ಷಕ ಆರ್‌.ಮÇÉೇಶ್‌, ವೃತ್ತ ನಿರೀಕ್ಷಕ ಪರಮೇಶ್ವರ್‌, ಪೊಲೀಸ್‌ ಸಬ್‌ಇನ್ಸ್‌ಪೆಕ್ಟ್ರ್‌ಗಳಾದ ಬಾಲಕೃಷ್ಣ, ಲೋಹಿತ್‌, ನವೀನ್‌ಕುಮಾರ್‌, ಬಾಲಾಜಿ ಬಾಬು ಸೇರಿದಂತೆ ಪೊಲೀ ಸ್‌ ಸಿಬ್ಬಂದಿ ಇದ್ದು, ಘಟನಾ ಸ್ಥಳಕ್ಕೆ ಆಗಮಿಸಿದ್ದ ಜನರನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ವಿಧಾನಪರಿಷತ್‌ ಸದಸ್ಯ ಇ.ಕೃಷ್ಣಪ್ಪಸ್ಥಳಕ್ಕೆ ಭೇಟಿ ನೀಡಿದ್ದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಮಾರ್ಕಂಡೇಯ, ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿಗಳಾದ ರವಿಶಂಕರ್‌ ಶಶಿಧರ್‌ ನೇತೃತ್ವ ವಹಿಸಿದ್ದರು.

ಅವಶೇಷದಡಿ ಯಾರೂ ಪತ್ತೆಯಾಗಲಿಲ್ಲ...

ಗೋದಾಮು ಕುಸಿದ ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ, ಪೀಣ್ಯ,ರಾಜಾಜಿನಗರ ಸೇರಿದಂತೆ ಹೆಬ್ಟಾಳದಿಂದ ಸುಮಾರು 5 ತಂಡ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಕಟ್ಟಡದ ಅವಶೇಷದಡಿ ಸಿಲುಕಿ¨ªÃ Â²Â¾Ã Â²Â°Ã Â³â€ Ã Â²â€šÃ Â²Â¦Ã Â³Â ಶಂಕಿಸಲಾದ ವ್ಯಕ್ತಿಗಳನ್ನು ಹುಡುಕುವ ಪ್ರಯತ್ನ ಮಾಡಲಾಯಿತು. ಆದರೆ ಯಾವೊಬ್ಬ ವ್ಯಕ್ತಿಯೂ ಕುಸಿದಿರುವ ಕಟ್ಟಡದ ಅವಶೇಷದಡಿ ಸಿಲುಕಿಲ್ಲ ಎನ್ನಲಾಗಿದೆ. ಇನ್ನೂ ಶೋಧ ಕಾರ್ಯ ಮುಂದುವರೆಸಿ¨ªÃ Â²Â¾Ã Â²Â°Ã Â³â€ .

ದೀಪಾವಳಿ ಹಬ್ಬ ಪಾರು ಮಾಡಿತು!

ಕುಸಿದು ಬಿದ್ದಿರುವ ಗೋದಾಮಿನ ನೆಲ ಅಂತಸ್ತಿನಲ್ಲಿ ಬಿಗ್‌ ಬಜಾರ್‌ಗೆ ಸೇರಿದ್ದ ಗೋದಾಮಿದು, ಪ್ರತಿನಿತ್ಯ ವಿವಿಧ ಪಾಳಿಗಳಲ್ಲಿ ಸ್ಥಳೀಯ ಸುಮಾರು 125ರಿಂದ 150 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ದೀಪಾವಳಿ ಹಬ್ಬವಿದ್ದ ಕಾರಣ ಭಾನುವಾರ ಗೋದಾಮಿನ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. ಆದ್ದರಿಂದ ನೆಲ ಅಂತಸ್ತಿನಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದೆ.

ಘಟನೆಗೆ ಮಾಲಿಕರೆ ಹೊಣೆ

’ಘಟನೆಗೆ ಕಟ್ಟಡದ ಕಳಪೆ ಕಾಮಗಾರಿಯೇ ಕಾರಣ. ಕಟ್ಟಡ ನಿರ್ಮಿಸಿ ಕೇವಲ 7 ವರ್ಷಗಳಲ್ಲಿಯೇ ಕುಸಿದಿರುವುದು ಕಾಮಗಾರಿ ಬಗ್ಗೆ ಅನುಮಾನಗಳು ಮೂಡುತ್ತವೆ. ಘಟನೆ ಸಂಪೂರ್ಣ ಹೊಣೆಗಾರಿಕೆ ಕಟ್ಟಡ ಮಾಲಿಕರಾಗಿದ್ದು ಸಾವು ನೋವುಗಳಿಗೆ ಅವರೇ ಕಾರಣಕರ್ತರು. ಕಟ್ಟಡ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗುವುದು’.

- ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ

ಕೆಂಗೇರಿಯಲ್ಲಿ ಕಟ್ಟಡ ಕುಸಿದು ಸಾವು

ಆ.5,2013ರಂದು ಬಂಡೆ ಮಠಕ್ಕೆ ಸೇರಿದ್ದ ಕಲ್ಯಾಣ ಮಂಟಪದ ನಿರ್ಮಾಣ ಹಂತದ ಕಟ್ಟಡ ಕುಸಿದು 4 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 12ಕ್ಕೂ ಹೆಚ್ಚು ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು.

ಇದೇ ವರ್ಷ ಕೆಂಗೇರಿ ಸಮೀಪದ ಶಾರದಾಂಬಾ ದೇಗುಲದ ಬಳಿಯ ಕಟ್ಟಡವೊಂದು ಕುಸಿದು 3 ಮಂದಿ ಸಾವನ್ನಪ್ಪಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Good Friday 2025 | St. Theresa Church, KemmannuGood Friday 2025 | St. Theresa Church, Kemmannu
Way of Cross | St. Theresa Church, KemmannuWay of Cross | St. Theresa Church, Kemmannu
Maundy Thursday | St. Theresa Church, KemmannuMaundy Thursday | St. Theresa Church, Kemmannu
Palm Sunday | St. Theresa Church, KemmannuPalm Sunday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Gregory D’Souza (79 years) | LIVE from KemmannuFinal Journey of Gregory D’Souza (79 years) | LIVE from Kemmannu
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Final Journey of Jacintha Serrao (66 years) | LIVE From SasthanFinal Journey of Jacintha Serrao (66 years) | LIVE From Sasthan
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್
Final Journey of Leo J. Crasto (97 years) | LIVE from Kemmannu, UdupiFinal Journey of Leo J. Crasto (97 years) | LIVE from Kemmannu, Udupi
Final Journey of Fedrick Lewis (67 years) | LIVE from SanthekatteFinal Journey of Fedrick Lewis (67 years) | LIVE from Santhekatte
Final Journey of Mr. Charles D’Souza (63 years) | LIVE from UdyavarFinal Journey of Mr. Charles D’Souza (63 years) | LIVE from Udyavar
Final Journey Of Richard Sequeira | Live From Barkur || Kemmannu channelFinal Journey Of Richard Sequeira | Live From Barkur || Kemmannu channel
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
0:24 / 2:30:40 NEW YEAR MASS 2025 | LIVE from Kemmannu | Diocese of Udupi0:24 / 2:30:40 NEW YEAR MASS 2025 | LIVE from Kemmannu | Diocese of Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi