ಸಚಿನ್‌ ವಿದಾಯ ಗೀತೆ


ಉದಯವಾಣಿ, 17-11-2013 18:14:44


Write Comment     |     E-Mail To a Friend     |     Facebook     |     Twitter     |     Print


 

ವೃತ್ತಿಜೀವನದ 200ನೇ ಟೆಸ್ಟ್‌ ಮುಗಿಸಿ ನಿವೃತ್ತಿ ಹೇಳಿದ ಸಚಿನ್‌ ವಿದಾಯ ಭಾಷಣ

ಇಡೀ ವಾಂಖೇಡೆ ಕ್ರೀಡಾಂಗಣ ಮಾರ್ದನಿಸುತ್ತಿತ್ತು, ಅದರಲ್ಲಿ ಅಳುವಿತ್ತು, ಸಚಿನ್‌, ಸಚಿನ್‌ ಎಂಬ ಅಬ್ಬರವಿತ್ತು. ವಿಂಡೀಸ್‌ ವಿರುದ್ಧ z2-0ಯಿಂದ ಟೆಸ್ಟ್‌ ಸರಣಿ ಗೆದ್ದನಂತರ ತುಳುಕಾಡುತ್ತಿದ್ದ ಪ್ರೇಕ್ಷಕರೆದುರು ಸಚಿನ್‌ ತಮ್ಮ ವಿದಾಯಗೀತೆ ಹೇಳಲು ಸಜ್ಜಾದರು. ನಿರ್ವಹಣೆ ಮಾಡುತ್ತಿದ್ದ ರವಿಶಾಸಿŒ ’ಸಚಿನ್‌ ಮೈಕ್‌ ಈಸ್‌ ಆಲ್‌ ಯುವರ್ಸ್‌’ ಎಂದಾಗ ಮೈದಾನದಲ್ಲಿ ಅಬ್ಬರ ಇನ್ನೂ ಜಾಸ್ತಿಯಾಯ್ತು. ತಮ್ಮ 24 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ ಸಂದರ್ಭದಲ್ಲಿ ಸಚಿನ್‌ ಹತ್ತಾರು ಮಂದಿಯನ್ನು ಸ್ಮರಿಸಿಕೊಂಡರು. ಅದರ ವಿವರ ಇಲ್ಲಿದೆ.

ತಂದೆಯ ಸ್ಮರಣೆ: ನನ್ನ ಜೀವನದ ಅತಿಮುಖ್ಯ ವ್ಯಕ್ತಿ ತಂದೆ. 1999ರಲ್ಲಿ ಅವರು ತೀರಿಕೊಂಡಲ್ಲಿಂದ ಅವರಿರದ ನೋವನ್ನು ಅನುಭವಿಸಿದ್ದೇನೆ. ಅವರ ಮಾರ್ಗದರ್ಶನದ ಬೆಂಬಲವಿಲ್ಲದೇ ನಾನಿಲ್ಲಿ ನಿಮ್ಮೆದುರು ನಿಂತಿದ್ದೇನೆ ಅನ್ನುವುದನ್ನು ನಂಬುವುದಕ್ಕೇ ಆಗುತ್ತಿಲ್ಲ. 11ನೇ ವಯಸ್ಸಿಂದಲೇ ನನಗವರು ಸ್ವಾತಂತ್ರ್ಯ ನೀಡಿದರು. ಕನಸಿನ ಬೆನ್ನತ್ತಿ ಹೋಗು ಎಂದು ನನಗೆ ತಾಕೀತು ಮಾಡಿದ್ದರು, ಯಶಸ್ಸಿಗಾಗಿ ಸುಲಭದ ಹಾದಿ ಹಿಡಿಯಬೇಡ ಎಂದೂ ಹೇಳಿದ್ದರು. ಸಾಧನೆಯ ಹಾದಿ ಕಠಿಣವಾಗಿರಬಹುದು, ಎಂದೂ ಹಿಂತೆಗೆಯ
ಬೇಡ ಎಂದಿದ್ದರು. ಅವರ ಸಲಹೆಗಳನ್ನು ಪಾಲಿಸಿದೆ. ಪ್ರತಿಬಾರಿ ಬ್ಯಾಟ್‌ ಮೂಲಕ ನಾನೇನಾದರೂ ವಿಶೇಷವನ್ನು ಸಾಧಿಸಿದ್ದರೆ ಅದೆಲ್ಲ ನನ್ನ ತಂದೆಗಾಗಿ.

ತಾಳ್ಮೆಯ ಮೂರ್ತಿ ತಾಯಿ: ನನ್ನಂತಹ ತರಲೆ ಹುಡುಗನೊಂದಿಗೆ ಅದು ಹೇಗೆ ನನ್ನ ತಾಯಿ ಹೆಣಗಿದರೋ ಗೊತ್ತಿಲ್ಲ. ಅವರಿಗೆ ತುಂಬ ತಾಳ್ಮೆ ಇದ್ದಿರಲೇಬೇಕು. ನಾನು ಕ್ರಿಕೆಟ್‌ ಆಡಲು ಶುರು ಮಾಡುವುದಕ್ಕಿಂತ ಮುನ್ನವೇ ಅವರು ನನಗಾಗಿ ಪ್ರಾರ್ಥಿಸಲು ಶುರು ಮಾಡಿದರು. ಇಂದಿಗೂ ಪ್ರಾರ್ಥನೆ ಮಾಡುತ್ತಲೇ ಇದ್ದಾರೆ. ಆಕೆ ಮಾಡಿದ ತ್ಯಾಗಕ್ಕೆ ಅತಿಶಯ ಧನ್ಯವಾದಗಳು.

ಜೀವನ ಅರ್ಪಿಸಿದ ಸೋದರರು: ಹಿರಿಯಣ್ಣ ನಿತಿನ್‌ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನೀನು ಏನೇ ಮಾಡಿದರೂ ಅದರಲ್ಲಿ ಶೇ.100ರಷ್ಟು ಬೆಂಬಲವಿರುತ್ತದೆ ಎಂದು ಸದಾ ಹೇಳುತ್ತಿರುತ್ತಾನೆ. ಸೋದರಿ ಸವಿತಾ ನಾನು ಬ್ಯಾಟಿಂಗ್‌ ಮಾಡುವಾಗೆಲ್ಲ ಉಪವಾಸ ಮಾಡುತ್ತಿದ್ದಳು. ನನಗೆ ಮೊದಲ ಕ್ರಿಕೆಟ್‌ ಬ್ಯಾಟ್‌ (ಕಾಶ್ಮೀರದ ಮರದಿಂದ ಮಾಡಿದ್ದು) ನೀಡಿದ್ದೇ ಆಕೆ. ಅಲ್ಲಿಂದಲೇ ನನ್ನ ಕ್ರಿಕೆಟ್‌ ಯಾನ ಶುರುವಾಗಿದ್ದು. ಅವಳಿಗೂ ಧನ್ಯವಾದ.
ಅಜಿತ್‌ ಬಗ್ಗೆ ಏನನ್ನು ಹೇಳುವುದು? ಈ ಕನಸಿನ ಬಾಳನ್ನು ಇಬ್ಬರೂ ಒಟ್ಟಿಗೆ ಬದುಕಿದೆವು. ನನಗಾಗಿ ಆತ ತನ್ನ ಜೀವನ ತ್ಯಾಗ ಮಾಡಿ, ನನ್ನಲ್ಲಿ ಮಿಂಚು ಹೊತ್ತಿಸಿದ. ಗುರು ಅಚೆÅàಕರ್‌ಗೆ ನನ್ನನ್ನು ಪರಿಚಯಿಸಿದ, ಅಲ್ಲಿಂದ ಬದುಕೇ ಬದಲಾಯಿತು. ಶುಕ್ರವಾರ ರಾತ್ರಿ ಆತ ನನ್ನನ್ನು ಕರೆದ. ಇಬ್ಬರೂ ಕಡೆಯ ಇನಿಂಗÕಲ್ಲಿ ನಾನು ಔಟಾದ ರೀತಿಯನ್ನು ಚರ್ಚಿಸಿದೆವು. ನಾನು ಹುಟ್ಟಿದಾಗಿಂದಲೂ ಇಂತಹದೊಂದು ಬಾಂಧವ್ಯ ಇಬ್ಬರ ಮಧ್ಯೆ ಇದೆ. ನನ್ನ ಬ್ಯಾಟಿಂಗ್‌ ತಂತ್ರಗಳ ಕುರಿತ ಹಲವು ಸಂಗತಿಗಳನ್ನು ನಾವಿಬ್ಬರು ಒಪ್ಪಿಕೊಂಡಿದ್ದೇವೆ. ಹಲವು ಬಾರಿ ಭಿನ್ನಾಭಿಪ್ರಾಯ ಕೂಡ ಇತ್ತು. ಅಜಿತ್‌ ಇಲ್ಲದಿದ್ದರೆ ನಾನೊಬ್ಬ ಅಪರಿಪೂರ್ಣ ಕ್ರಿಕೆಟಿಗನಾಗುತ್ತಿದ್ದೆ.

ಗುರು ಅಚೆÅàಕರ್‌: 11ನೇ ವರ್ಷವಿದ್ದಾಗ ನನ್ನ ಕ್ರಿಕೆಟ್‌ ಜೀವನ ಶುರುವಾ ಯಿತು. ಸೋದರ ಅಜಿತ್‌ ನನ್ನನ್ನು ಅಚೆÅàಕರ್‌ ಸರ್‌ಗೆ ಪರಿಚಯಿಸಿದ್ದು ಜೀವನದ ದಿಕ್ಸೂಚಿಯಂತಾಯಿತು ಇವತ್ತು ಅವರು ಇಲ್ಲಿರುವುದರಿಂದ ನನ್ನಲ್ಲಿ ಭಾವೋದ್ವೇಗವಾಗಿದೆ. ಕಳೆದ 29 ವರ್ಷಗಳಲ್ಲಿ ಅವರೆಂದಿಗೂ ’ಚೆನ್ನಾಗಿ ಆಡಿದೆ’ ಎನ್ನಲಿಲ್ಲ. ಸರ್‌, ಇವತ್ತು ನನ್ನ ಜೀವನದ ಕೊನೆ ಪಂದ್ಯ ಆಡಿದ್ದೇನೆ, ಆದರೂ ಕ್ರಿಕೆಟ್‌ ನನ್ನ ಹೃದಯದಲ್ಲಿ ಚಿರಸ್ಥಾಯಿ
ಯಾಗಿರುತ್ತದೆ.

ಕಷ್ಟದಲ್ಲಿ ಜತೆಗಿದ್ದ ಗೆಳೆಯರು: ನನ್ನ ಬಾಲ್ಯದ ಸ್ನೇಹಿತರು ನನ್ನ ಜೀವನದಲ್ಲಿ ಅತಿಮುಖ್ಯ ಪಾತ್ರವಹಿಸಿದ್ದಾರೆ. ನೆಟ್‌ನಲ್ಲಿ ನನಗೆ ಬೌಲಿಂಗ್‌ ಮಾಡಿ ಅಂತ ಕೇಳಿದಾಗ, ಅವರ ಎಲ್ಲ ಕೆಲಸವನ್ನೂ ಬಿಟ್ಟು ಓಡಿ ಬರುತ್ತಿದ್ದರು. ರಜಾ ದಿನಗಳಲ್ಲಿ ನನ್ನೊಂದಿಗಿರುತ್ತಿದ್ದರು. ನಾನು ಗಾಯಗೊಂಡಿದ್ದಾಗ, ಬೆಳಗ್ಗೆ 3 ಗಂಟೆಗೆ ಎದ್ದು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಗಾಯಗೊಂಡು ವೃತ್ತಿಜೀವನ ಆತಂಕದಲ್ಲಿದ್ದಾಗಲೆಲ್ಲಾ ಬೆನ್ನುತಟ್ಟಿ ಬೆಂಬಲಿಸಿದರು. ಅವರಿಲ್ಲದಿದ್ದರೆ ಜೀವನ ಅಪೂರ್ಣವಾಗುತ್ತಿತ್ತು.

ಸಹಕ್ರಿಕೆಟಿಗರು: ಸಹ ಆಟಗಾರರಾ
ಗಿದ್ದ ಸೌರವ್‌, ರಾಹುಲ್‌, ವಿವಿಎಸ್‌ ಜತೆಯಾಟಗಳು ಅದ್ಭುತ. ಇಲ್ಲಿ ಅನಿಲ್‌ ಇಲ್ಲದೇ ಇರಬಹುದು. ಆದರೆ ದೊಡ್ಡ ಪರದೆಯಲ್ಲಿ ನೋಡುತ್ತಿರಬಹುದು. ಅವರೀಗ ಜೊತೆಯ ಲ್ಲಿಲ್ಲ. ನಿಮ್ಮೆಲ್ಲರ ಜೊತೆ ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ನಿಮ್ಮೊಂದಿಗೆ ಡ್ರೆಸ್ಸಿಂಗ್‌ ಕೋಣೆಯನ್ನು ಹಂಚಿಕೊಳ್ಳಲಾಗದಿ ರುವುದನ್ನು ನಂಬುವುದು ತುಂಬಾ ಕಷ್ಟ. ಭಾರತ ಕ್ರಿಕೆಟ್‌ ತಂಡದ ಭಾಗವಾಗಿ, ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯ. ಮೊದಲನೆ ದಿನ ನಾನು ಮೈದಾನಕ್ಕಿಳಿಯುವಾಗ ಧೋನಿ ನನಗೆ 200ನೇ ಟೆಸ್ಟ್‌ ಪಂದ್ಯದ ಕ್ಯಾಪ್‌ ನೀಡಿದರು, ಆಗ ತಂಡದ ಆಟಗಾರರೆಲ್ಲರಿಗೂ ನಾನು ಮಾತು ಹೇಳಿದೆ. ಅದನ್ನು ಮತ್ತಿಲ್ಲಿ ಹೇಳುತ್ತಿದ್ದೇನೆ: ’ಈ ಕ್ರೀಡೆಗೆ ಸೇವೆ ಸಲ್ಲಿಸಲು ಭಗವಂತ ನಮಗೆ ಅವಕಾಶ ಕೊಟ್ಟಿದ್ದಾನೆ, ಅದು ನಮ್ಮ ಅದೃಷ್ಟ ಎಂದು ಭಾವಿಸುತ್ತೇನೆ. ಉತ್ತಮ ಮೌಲ್ಯದೊಂದಿಗೆ, ಉತ್ತಮ ರೀತಿಯಲ್ಲಿ ನೀವೆಲ್ಲ ಈ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೀರಿ ಎನ್ನುವ ವಿಶ್ವಾಸವಿದೆ’.

ಹಿರಿಯ ಕ್ರಿಕೆಟಿಗರು: ಕಳೆದ 24 ವರ್ಷಗಳಲ್ಲಿ ನಾನು ಹಲವು ಹಿರಿಯ ಕ್ರಿಕೆಟಿಗರೊಂದಿಗೆ ಆಡಿ
ದ್ದೇನೆ. ಅದಕ್ಕಿಂತ ಮುನ್ನ ಆಡಿದ ಇನ್ನಷ್ಟು ಹಿರಿಯರ ಆಟವನ್ನು ಟೀವಿಯಲ್ಲಿ ನೋಡಿದ್ದೇನೆ. ಅವರು ನನ್ನಲ್ಲಿ ಆಡುವ ಹುಚ್ಚನ್ನು ಹೊತ್ತಿಸಿದರು. ಸರಿಯಾಗಿ ಆಡುವ ಪ್ರೇರಣೆ ನೀಡಿದರು. ಅವರೆಲ್ಲರೊಂದಿಗೆ ಆಡುವ ಯೋಗ ನನಗೆ ಸಿಗಲಿಲ್ಲ, ಆದರೆ ಅವರೆಲ್ಲರ ಸಾಧನೆ ಬಗ್ಗೆ ಗೌರವವಿದೆ.

ಗುಡ್‌ಬೈ: ನನ್ನ ಮಾತು ಗಳು ತುಸು ಜಾಸ್ತಿಯಾಗಿದೆ ಎಂಬ ಅರಿವಿದೆ. ಜಗತ್ತಿನ ಎಲ್ಲೆಡೆಯಿಂದ ಇಲ್ಲಿಗೆ ಬಂದು ನನ್ನನ್ನು ಎಣೆಯಿಲ್ಲದಂತೆ ಬೆಂಬಲಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಾನು 0 ಬಾರಿಸಲಿ, 100ಕ್ಕೂ ಜಾಸ್ತಿ ರನ್‌ ಗಳಿಸಲಿ ನೀವೆಲ್ಲ ನನಗಾಗಿ ಪ್ರಾರ್ಥನೆ ಮಾಡಿದ್ದೀರಿ. ಇನ್ನೂ ಏನೇನೋ ಮಾಡಿದ್ದಾರೆ. ಈ ಹಾರೈಕೆ ಗಳೆಲ್ಲ ಜೊತೆಗಿಲ್ಲದಿದ್ದರೆ ಜೀವನ ಈ ಎತ್ತರದಲ್ಲಿರುತ್ತಿ ರಲಿಲ್ಲ. ನನ್ನ ಹೃದಯಾಂತ ರಾಳದಿಂದ ನಿಮಗೆ ಧನ್ಯವಾದ ಸಲ್ಲಿ ಸುತ್ತೇನೆ. ಈ ಸಮಯ ಇಷ್ಟು ಬೇಗ ಸರಿದು ಹೋಗಿದೆ. ಆದರೆ ಆ ನೆನಪುಗಳು ಎಂದಿಗೂ, ಎಂದಿಂಗೂ ಸ್ಥಾಯಿಯಾಗಿ ರುತ್ತವೆ. ಅದರಲ್ಲೂ ’ಸಚಿನ್‌..’ ಎಂಬ ಭೋರ್ಗರೆತ ಕಿವಿಯಲ್ಲಿ ನನ್ನುಸಿರು ನಿಲ್ಲುವವರೆಗೂ ರಿಂಗಣಿಸುತ್ತಲೇ ಇರುತ್ತದೆ. ನಾನೇನಾದರೂ ಹೇಳುವುದನ್ನು ಮರೆತಿದ್ದರೆ, ನೀವದನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂಬ ಭರವಸೆಯಿದೆ ಎಂದು ತಮ್ಮ ಮಾತು ಮುಗಿಸಿದರು.

ನನ್ನ ವಜ್ರಗಳು
ನನಗೆ ಸಾರಾ, ಅರ್ಜುನ್‌ ಜೊತೆ ಸಾಕಷ್ಟು ಸಮಯ ಕಳೆಯಬೇಕೆಂಬ ಆಸೆಯಿತ್ತು. ಹುಟ್ಟಿದ ಹಬ್ಬ, ಶಾಲಾ ವಾರ್ಷಿಕೋತ್ಸವ, ಕ್ರೀಡಾದಿನಾಚರಣೆಯಲ್ಲಿ ಅವರೊಂದಿಗಿರಬೇಕಿತ್ತು. ಈ ಎಲ್ಲ ವೇಳೆ ನಾನಲ್ಲಿರಲಿಲ್ಲ. ಕಳೆದ 16 ವರ್ಷ ನಾನು ಹೀಗೆ ಕಳೆದುಬಿಟ್ಟೆ. ಆದರೂ ನನ್ನನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದ. ಮುಂದಿನ ಎಲ್ಲಾ ದಿನಗಳಲ್ಲೂ ನಿಮ್ಮೊಂದಿಗೆ ಇರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ಸರಿ ಮಾಡುತ್ತೀನಿ ಎಂದು ನಾನು ನಿಮಗೆ ಪ್ರಾಮಿಸ್‌ ಮಾಡ್ತೀನಿ.

ದೈಹಿಕ ತರಬೇತುದಾರರು
ನಾನು ಇಷ್ಟು ವರ್ಷ ಆಡುವಹಿಂದೆ ವೈದ್ಯರು ಮತ್ತು ದೈಹಿಕ ತರಬೇತುದಾರರ ಶ್ರಮವೂ ಇದೆ. ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ಎಷ್ಟೆಷ್ಟೊತ್ತಿಗೋ ಅವರಿಗೆ ಕರೆ ಮಾಡಿದ್ದೇನೆ, ಅವರು ಯಾವಾಗೆಂದರೆ ಆಗ ವಿಮಾನ ಹತ್ತಿ ಬಂದು ನಾನು ಸಕ್ಷಮನಾಗಿರಲು ಸಹಕರಿಸಿದ್ದಾರೆ

ಜವಾಬ್ದಾರಿ ಹೊತ್ತ ಅಂಜಲಿ
1990ರಲ್ಲಿ ನನ್ನ ಜೀವನದ ಸುಂದರ ಕ್ಷಣ ಅಂಜಲಿಯನ್ನು ಭೇಟಿ ಮಾಡಿದ್ದು. ವೈದ್ಯಳಾಗಿ ಅವಳ ಮುಂದೆ ಉತ್ತಮ ಭವಿಷ್ಯವಿತ್ತು. ಆದರೆ ವಿವಾಹದ ನಂತರ ’ನೀನು ಕ್ರಿಕೆಟ್‌ ಬಗ್ಗೆ ಗಮನ ಕೇಂದ್ರೀಕರಿಸು, ಉಳಿದಿದ್ದೆಲ್ಲದರ ಜವಬ್ದಾರಿ ನಾನು ಹೊತ್ತುಕೊಳ್ಳುತ್ತೇನೆ’ ಎಂದಳು. ನೀನು ಇಲ್ಲಿದ್ದೀಯ, ನಿನಗೆ ಧನ್ಯವಾದ. ನಿನ್ನೊಂದಿಗಿನ ಬದುಕೇ ನನ್ನ ಜೀವನದ ಅತ್ಯುತ್ತಮ ’ಜೊತೆಯಾಟ’.

ಆಟ ಮುಗಿಸಿದ ದೇವರು

ಲೆಕ್ಕವಿಲ್ಲದಷ್ಟು ಮನರಂಜನೆ, ಅಗಣಿತ ದಾಖಲೆ ಬರೆದ ಕ್ರಿಕೆಟ್‌ ಕಲಿಗೆ ಸಲಾಂ, ವಂದನೆ, ವಂದನೆ... ಸಾವಿರ ವಂದನೆ... ಸಾಧನೆ ತೋರಿದ ಜಾಣಗೆ ವಂದನೆ...
ಸಚಿನ್‌ ಅವರ ನೂರಾರು ದಾಖಲೆಗಳಲ್ಲಿ ಒಂದೆಡರನ್ನು ಯಾರಾದರೂ ಹಿಂದಿಕ್ಕಬಹುದು. ಆದರೆ, ಎಲ್ಲಾ ದಾಖಲೆಗಳನ್ನು ಮುರಿಯಬಲ್ಲ ಕ್ರಿಕೆಟಿಗ ಹುಟ್ಟುವುದು ಕಲ್ಪನೆಗೂ ನಿಲುಕದ್ದು. ಸಚಿನ್‌ ದಾಖಲೆಗಳಷ್ಟೇ ಅಲ್ಲ, ಆಟವೂ ಮನಮೋಹಕ. ಕ್ರಿಕೆಟ್‌ ಪಠ್ಯವಿದ್ದಂತೆ. ಅದಕ್ಕೆ ಸ್ವದೇಶಿ-ವಿದೇಶಿ ಪಿಚ್‌ ಎಂಬ ಭೇದವಿಲ್ಲ. ಸಚಿನ್‌ ಡ್ರೈವ್‌ಗಳು, ಪುಲ್‌ಗ‌ಳು, ಹುಕ್‌ ಶಾಟ್‌ಗಳು, ಲೇಟ್‌ ಕಟ್‌ಗಳು, ಗ್ಲ್ಯಾನ್ಸ್‌ಗಳು... ಬ್ಯಾಟಿಂಗ್‌ ವಿಭಾಗದ ಶೈಲಿಗಳಿಗೇ ಸವಾಲೆಸೆಯುವಂಥವು. ಬೌಲರುಗಳಂತೂ ಸಚಿನ್‌ ವಿಕೆಟ್‌ ಪಡೆಯುವುದೇ ಸಾಧನೆ ಎಂದು ಭಾವಿಸುತ್ತಿದ್ದರು. ಇದೆಲ್ಲ ಕಾರಣಗಳಿಗಾಗಿಯೇ ಅವರು ಸಚಿನ್ನ, ಕ್ರಿಕೆಟ್‌ ರಂಗದ ಮಟ್ಟಿಗೆ ದೇವರು. ಈಗ ಆ ದೇವರಿಗೂ ನಿವೃತ್ತಿ!

ಅವನೊಬ್ಬ ದೇವರ ಪುತ್ರ. ಆಕಸ್ಮಿಕವಾಗಿ ಭೂಮಿಯಲ್ಲಿ ಜನಿಸುತ್ತಾನೆ. ದೇವರ ಮೇಲಿನ ಸಿಟ್ಟೋ ಅಥವಾ ತನ್ನ ಮೇಲೆಯೇ ಅವನಿಗಿದ್ದ ನಂಬಿಕೆಯೋ ಏನೋ ಊಹೆಗೂ ನಿಲುಕದ ಸಾಹಸಗಳನ್ನು ದೇವರ ನೆರವಿಲ್ಲದೇ ಸಾಮಾನ್ಯ ಮನುಷ್ಯನಾಗಿಯೇ ಸಾಧಿಸುತ್ತಾ ಹೋಗುತ್ತಾನೆ. ಕೊನೆಗೆ ಊರ ಜನರೇ ಅವನನ್ನು ದೇವರಂತೆ ಪೂಜಿಸತೊಡಗುತ್ತಾರೆ...ಇದು ಜನಪ್ರಿಯ ’ಕ್ಲಾéಷ್‌ ಆಫ್ ಟೈಟಾನ್ಸ್‌’ ಎಂಬ ಗ್ರೀಕ್‌ನ ಜಾನಪದ ಕಥೆ.

ಈ ಕಥೆ ಕೇಳ್ಳೋದಿಕಷ್ಟೇ ಚೆನ್ನ, ನಿಜ ಜೀವನದಲ್ಲಿ ಸಾಧ್ಯವೇ ಇಲ್ಲ ಎಂದು ಭಾವಿಸುವಂತಿಲ್ಲ. ಏಕೆಂದರೆ ಕ್ರಿಕೆಟ್‌ ಮೈದಾನದಲ್ಲಿ ಅಸಾಧ್ಯವಾದ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಸಾಧಿಸಿದ ಸಚಿನ್‌ ತೆಂಡುಲ್ಕರ್‌ ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿದ್ದಾರೆ. ಅಭಿಮಾನಿಗಳ ಪಾಲಿಗೆ ಅವರು ’ಕ್ರಿಕೆಟ್‌ ದೇವರು’!

ಸಚಿನ್‌ ದಾಖಲೆ ಮುರಿಯಲಾಗುತ್ತಾ?: ಅತಿ ಹೆಚ್ಚು ಏಕದಿನ ಪಂದ್ಯ ಆಡಿದ್ದು... ಅತಿ ಹೆಚ್ಚು ಟೆಸ್ಟ್‌ ಆಡಿದ್ದು... ಅತಿ ಹೆಚ್ಚು ಶತಕ ಬಾರಿಸಿದ್ದು.. ಅತಿ ಹೆಚ್ಚು ಜತೆಯಾಟಗಳನ್ನು ಕಟ್ಟಿದ್ದು... ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ... ಹೀಗೆ ಮೈದಾನದಲ್ಲಿ ಸಚಿನ್‌ ಮಾಡಿದ ಸಾಧನೆಗಳಿಗೆಲ್ಲ ’ಅತೀ ಹೆಚ್ಚು’ಗಳ ಶ್ರೇಯ ಸಂದಿದೆ. ಇವುಗಳನ್ನು ನೋಡಿದರೆ ಯಾವುದೇ ಒಬ್ಬ ವ್ಯಕ್ತಿಯಿಂದ ಆಗುವ ಸಾಧನೆಗಳಲ್ಲ ಎಂದು ಅನಿಸದೇ ಇರದು. ಹಾಗೆ ನೋಡಿದರೆ ಸಚಿನ್‌ ಈ ರೀತಿ ಸಾಧನೆಗಳನ್ನು ಮಾಡಿ ಕ್ರಿಕೆಟ್‌ಗೆ ಬೆನ್ನು ತೋರಿಸಲು ಆರಂಭಿಸಿದಾಗ ಸಚಿನ್‌ ದಾಖಲೆ ಮುರಿಯಲೂ ಬಹುದು ಎಂಬ ಚರ್ಚೆಗಳು ಹುಟ್ಟುಕೊಳ್ಳತೊಡಗಿವೆ. ಆದರೆ ಸಚಿನ್‌ ದಾಖಲೆ ಯಾರೂ ಬೇಕಾದರೂ ಮುರಿಯಬಹುದು. ಆದರೆ ಅದು ಒಬ್ಬನಿಂದ ಸಾಧ್ಯವಿಲ್ಲ ಎಂಬ ಮಾತನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ವಾಮನ ತ್ರಿವಿಕ್ರಮನಾದ: ವಾಮನನಾಗಿ 16 ವರ್ಷ ವಯಸ್ಸಿಗೇ ಜಾಗತಿಕ ಕ್ರಿಕೆಟ್‌ ರಂಗಕ್ಕೆ ಕಾಲಿಟ್ಟಾಗ ಸಚಿನ್‌ ತೆಂಡುಲ್ಕರ್‌ ಮುಖದ ಮೇಲೆ ಇನ್ನೂ ಮೀಸೆ ಕೂಡ ಮೂಡಿರಲಿಲ್ಲ. ಈಗ ಸಚಿನ್‌ ಕ್ರಿಕೆಟ್‌ಗೆ ತ್ರಿವಿಕ್ರಮವಾಗಿ ವಿದಾಯ ಹೇಳುತ್ತಿದ್ದಾರೆ.

ಬ್ಯಾಟ್‌ ಹಿಡಿದು ಮೈದಾನಕ್ಕೆ ಬಂದಾಗಲೆಲ್ಲಾ ’ಹಾಯ್‌ ಕಿಡ್‌’, ’ಗೋ ಆ್ಯಂಡ್‌ ಡ್ರಿಂಕ್‌ ಕಿಡ್‌’ ಎಂದು ರೇಗಿಸುತ್ತಿದ್ದವರೇ ಹೆಚ್ಚು. ಆದರೆ ಸುಮಾರು ಎರಡೂವರೆ ದಶಕಗಳಲ್ಲಿ ಒಂದೊಂದೇ ಸಾಹಸಗಳನ್ನು ಮಾಡಿದ ಸಚಿನ್‌ ಅದಕ್ಕೊಂದು ಕಲೆಯ ರಂಗು ತುಂಬಿ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದು ಇದೆಯಲ್ಲ ಅದಕ್ಕಾಗಿ ಅವರಿಗೆ ಹ್ಯಾಟ್ಸ್‌ ಆಫ್ ಹೇಳಲೇಬೇಕು.

ತಮ್ಮ ವಯಸ್ಸಿನವರೆಲ್ಲ ಹೆಚ್ಚೆಂದರೆ ಕಿರಿಯರ ತಂಡ ಸೇರುವ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಲಗ್ಗೆಯಿಟ್ಟ ಸಚಿನ್‌ ಇಂದು ಬಹುತೇಕ ದಾಖಲೆಗಳ ಒಡೆಯ. ಭಾರತದ ಸರ್ವಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ’ಭಾರತ ರತ್ನ’ ಹೊರತುಪಡಿಸಿದರೆ ದೇಶ ಹಾಗೂ ವಿದೇಶದ ಬಹುತೇಕ ಪ್ರಶಸ್ತಿಗಳು ಬಗಲಿಗೆ ಬಿದ್ದಾಗಿದೆ. ಸಚಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿರುವ 24 ವಸಂತಗಳ ಅವಧಿಯಲ್ಲಿ ಸುಮಾರು 60 ಕ್ರಿಕೆಟಿಗರು ನಿವೃತ್ತಿಯಾಗಿದ್ದಾರೆ ಅಂದರೆ ಅವರ ಸಾಧನೆಯ ಒಂದು ಅಂದಾಜು ಸಿಕ್ಕೀತು.

ಪಾದಾರ್ಪಣೆ ದಿನವೇ ನಿವೃತ್ತಿ!: 1989 ನವೆಂಬರ್‌ 15ರಂದು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಚಿನ್‌, ಅದೇ ದಿನ ಅಂದರೆ 2013 ನವೆಂಬರ್‌ 14ರಿಂದ 18ರವರೆಗೆ ನಡೆಯಲಿರುವ ಟೆಸ್ಟ್‌ನಲ್ಲಿ ಆಡಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಾರೆ. ಇದೊಂದಿಗೆ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 24 ವರ್ಷದ ಸಾಧನೆ ಮೆರೆಯಲಿದ್ದಾರೆ.

ಮುಂಬೈನಲ್ಲಿ ಅವರು ಆಡುತ್ತಿರುವ ಕೊನೆಯ ಪಂದ್ಯ ಸಚಿನ್‌ ಜೀವನದ 200ನೇ ಟೆಸ್ಟ್‌. ಈ ಸಾಧನೆ ಮಾಡಿಗ ವಿಶ್ವದ ಮೊದಲಿಗ ಎಂಬ ಖ್ಯಾತಿಯೂ ಸಚಿನ್‌ ಮುಡಿಗೆ. ಇದೀಗ 15837 ರನ್‌ ಗಳಿಸಿರುವ ಸಚಿನ್‌ ನಾಲ್ಕು ಇನಿಂಗ್ಸ್‌ಗಳಲ್ಲಿ 173 ರನ್‌ ಗಳಿಸಿದರೆ 16 ಸಾವಿರ್‌ ರನ್‌ಗಳ ಮತ್ತೂಂದು ಮೈಲುಗಲ್ಲು ನೆಡಲಿದ್ದಾರೆ. ಸದ್ಯದ ಮಟ್ಟಿಗೆ ಟೆಸ್ಟ್‌ನಲ್ಲಿ ಈ ಸಾಧನೆ ಯಾರಿಂದ ಹೊಮ್ಮುವುದು ಅಸಾಧ್ಯ. ಸಚಿನ್‌ ದಾಖಲೆ ಸಮೀಪಕ್ಕೆ ಬಂದಿದ್ದ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್‌ ಮಂಡಿಯೂರಿದರೆ, ವೆಸ್ಟ್‌ ಇಂಡೀಸ್‌ನ ಬ್ರಿಯಾನ್‌ ಲಾರಾ ಎಂದೋ ನಿರ್ಗಮಿಸಿದ್ದಾರೆ. ಈಗಿನ ಹುಡುಗರು ಅಷ್ಟು ದೀರ್ಘ‌ಕಾಲ ಫಿಟ್‌ನೆಸ್‌, ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವುದು ಬಹುಶಃ ಅಸಾಧ್ಯ ಎನ್ನಬಹುದು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರಾರು ಪಂದ್ಯಗಳು, ಸಾವಿರಾರು ರನ್‌ಗಳು, ಶತಕಗಳ ಶತಕಗಳನ್ನು ಬಾರಿಸಿರುವ ಸಚಿನ್‌ ತೆಂಡುಲ್ಕರ್‌ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿರಬಹುದು. ಆದರೆ, ಅದೆಲ್ಲಕ್ಕಿಂತ ಮಿಗಿಲಾದದ್ದು ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಗೆದ್ದುಕೊಂಡಿರುವುದು. ಸಚಿನ್‌ ಆಟ ಒಂದಕ್ಕಿಂತ ಒಂದು ಸೂಪರ್‌. ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ ಶತಕ ಯಾರಾದರೂ ಮರೆಯಲು ಸಾಧ್ಯವೇ? ಮೀಸೆಯೂ ಮೂಡದ ಹೊತ್ತಿನಲ್ಲಿ ವೇಗಕ್ಕೆ ಮತ್ತೂಂದು ಹೆಸರಾಗಿದ್ದ ಪಾಕಿಸ್ತಾನ ವಿರುದ್ಧ ಸೆಟೆದು ನಿಂತು ಆಡಿ ಸೈ ಎನಿಸಿಕೊಂಡಿದ್ದು ಮೆಚ್ಚಲು ಆಗದೇ ಇರಲಾಗುತ್ತದೆಯೇ?

ಸಚಿನ್‌ ಇಂದು ದಾಖಲೆಗಳಿಂದ ಮಾತ್ರ ಖ್ಯಾತರಾಗಿಲ್ಲ. ವ್ಯಕ್ತಿತ್ವದಲ್ಲೂ ಸ’ಚಿನ್ನ’. ಆಟದಲ್ಲಿ ಅಪರಂಜಿ. ಸಚಿನ್‌ ಬದಲು ಇನ್ಯಾರಾದರೂ ಅವರ ಎತ್ತರಕ್ಕೆ ಏರಿದ್ದರೆ ಏನೆಲ್ಲಾ ಅವಾಂತರಗಳನ್ನು ಮಾಡಿಕೊಳ್ಳುತ್ತಿದ್ದರೋ ’ಆ ದೇವರಿ’ಗೇ ಗೊತ್ತು!

ಟಿ20ಯಲ್ಲೂ ಸೆಂಚುರಿ!: ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇರಬಹುದು. ಆದರೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಚಿನ್‌ ಮಾಡದ ದಾಖಲೆಗಳಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಬಾರಿಸಬಹದು ಎಂಬ ಕಲ್ಪನೆ ಯಾರಾದರೂ ಮಾಡಿದ್ದರೆ? ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಬಹುದು ಎಂದು ಯಾರಾದರೂ ಕನಸು ಕಂಡಿದ್ದರೆ? ಹಿರಿಯ ಕ್ರಿಕೆಟಿಗರು ಟೆಸ್ಟ್‌ಗೆ ಮಾತ್ರ ಲಾಯಕ್ಕು ಎಂಬ ವ್ಯಂಗ್ಯ ಕೇಳಿ ಬಂದಾಗ ನಿವೃತ್ತಿ ಅಂಚಿನಲ್ಲಿದ್ದ ಆಟಗಾರನೊಬ್ಬ ಟಿ-20 ಕ್ರಿಕೆಟ್‌ನಲ್ಲಿ ಶತಕ ಬಾರಿಸಬಹುದು ಊಹಿಸಲು ಸಾಧ್ಯವಿತ್ತೇ?
ಉಹೂnಂ, ಯಾರೂ ಕನಸು ಕೂಡ ಕಾಣದ ದಾಖಲೆಗಳನ್ನು ಸಾಮಾನ್ಯನಂತೆ ನಿರ್ಮಿಸಿದ ಸಚಿನ್‌ ಅವರ ಆಟವನ್ನು ಕಂಡ ವಿಂಡೀಸ್‌ ದೈತ್ಯರೇ ಬೆಚ್ಚಿಬಿದ್ದಿದ್ದರು. ಕ್ರೀಡೆಯ ಮಟ್ಟಿಗೆ ಗಿಡ್ಡನೆಯ ಎನಿಸುವ ಐದಡಿ ನಾಲ್ಕಿಂಚು ಎತ್ತರದ ಈ ಹುಡುಗ ಅದು ಹೇಗೆ ಪುಟಿಯುವ ಚೆಂಡುಗಳನ್ನು ಎದುರಿಸುತ್ತಾನೆ ಎಂದು ಮೂಗಿನ ಮೇಲೆ ಬೆರಳಿಟ್ಟರು. ಫಿಟ್‌ನೆಸ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ಆಟಗಾರರನ್ನು ಸೈಡು ಹೊಡೆದ ಸಚಿನ್‌ ಸುದೀರ್ಘ‌ 24 ವಸಂತಗಳನ್ನು ಮೈದಾನದಲ್ಲಿ ಕಳೆದರು.

ಹೋಲಿಕೆಗೆ ನಿಲುಕದ ಸಾಧನೆ: ಸಚಿನ್‌ ಮಿಂಚಲು ಆರಂಭಿಸಿದಾಗಿನಿಂದಲೂ ಪ್ರತಿಯೊಂದು ತಂಡಗಳು ನಮ್ಮಲ್ಲೊಬ್ಬ ಸಚಿನ್‌ ಅನ್ನು ರೂಪಿಸಬೇಕು ಎಂದು ಪಣ ತೊಟ್ಟವು. ಅದರಲ್ಲೂ ಮೈದಾನದ ಬದ್ಧವೈರಿ ಪಾಕಿಸ್ತಾನ ಇದರಲ್ಲಿ ಶತಪ್ರಯತ್ನ ಮಾಡಿತು. ಇಂಜಮಾಮ್‌ ಉಲ್‌ ಹಕ್‌ ಭವಿಷ್ಯದ ಸಚಿನ್‌ ಎಂದರು. ಶಾಹಿದ್‌ ಅಫ್ರಿದಿ ಪಾಕ್‌ನ ಸಚಿನ್‌ ಎಂದು ಹೊಗಳಿದರು. ಆದರೆ ಅವರಾರೂ ಸಚಿನ್‌ ಆಗಲೇ ಇಲ್ಲ. ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ವಿಷಯ ಬಂದಾಗ ಡಾನ್‌ ಬ್ರಾಡ್ಮನ್‌ಗೆ ಹೋಲಿಸಿದರು. ಸ್ವತಃ ಬ್ರಾಡ್ಮನ್‌, ಸಚಿನ್‌ ಆಟ ನೋಡಿದಾಗ ನನ್ನ ಆಟದ ನೆನಪಾಗುತ್ತದೆ ಎಂದಿದ್ದರು. ನಂತರ ವಿಂಡೀಸ್‌ನ ಬ್ರಿಯಾನ್‌ ಲಾರಾ ಮತ್ತು ರಿಕಿ ಪಾಂಟಿಂಗ್‌ಗೆ ಹೋಲಿಸಲು ಆರಂಭಿಸಲಾಯಿತು. ಆದರೆ ಈ ಇಬ್ಬರು ದಿಗ್ಗಜರೂ ಸಚಿನ್‌ ಸಾಹಸದ ಮುಂದೆ ಮಂಕಾದರು.

ಪ್ರತಿ ಸರಣಿಗೂ ಭಿನ್ನ ತಯಾರಿ: ಪ್ರತಿ ಸರಣಿಗೂ ತನ್ನದೇ ಆದ ರೀತಿಯಲ್ಲಿ ಸಚಿನ್‌ ಸಜ್ಜಾಗುತ್ತಿದ್ದ ರೀತಿ ಅಚ್ಚರಿ ಮೂಡಿಸುವಂತದ್ದು. ಯಾವುದೇ ಪ್ರಮುಖ ಪಂದ್ಯ ಇದ್ದಾಗ ಅಭ್ಯಾಸದ ವೇಳೆ ಸಚಿನ್‌ ನಿರ್ದಿಷ್ಟ ಎಸೆತಗಳನ್ನು ಹಾಕುವಂತೆ ಬೌಲರ್‌ಗಳಿಗೆ ಸೂಚಿಸುತ್ತಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಂತು ಎಂದರೆ ಶಾರ್ಟ್‌ಬಾಲ್‌, ನಿರ್ದಿಷ್ಟ ಸ್ಥಳಕ್ಕೆ ಚೆಂಡು ಬಿದ್ದು ವಿಕೆಟ್‌ನಿಂದ ಹೊರಹೋಗುವಂತೆ ಮಾಡುವುದು, ಬೌನ್ಸರ್‌ಗಳನ್ನು ಹಾಕುವಂತೆ ಸಲಹೆಗಳನ್ನು ನೀಡುತ್ತಿದ್ದರು. ಅಂತಹ ಎಸೆತಗಳನ್ನು ಎದುರಿಸಿ ಪಂದ್ಯಕ್ಕೆ ಸಜ್ಜಾಗುತ್ತಿದ್ದರು. ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಸರಣಿ ಬಂದರೆ ವಿಕೆಟ್‌ನಿಂದ ಒಂದು ಹೆಜ್ಜೆ ಪಕ್ಕಕ್ಕೆ ಸರಿದು ಚೆಂಡಿನ ಮೇಲೆ ಸವಾರಿ ಮಾಡುವುದು. ಸಾಮಾನ್ಯವಾಗಿ ವಾರೆಯಾಗಿ ಬ್ಯಾಟ್‌ ಬಳಸುವ ಸಚಿನ್‌ ವಿದೇಶೀ ಪಿಚ್‌ಗಳಲ್ಲಿ ನೇರವಾಗಿ ಆಡುವ ಮೂಲಕ ಇತರರಿಗೆ ಮಾದರಿ¿ Þಗುತ್ತಿದ್ದರು. ಸಚಿನ್‌ ಮಾಡಿದ ನೂರಾರು ದಾಖಲೆಗಳ ಪೈಕಿ ಒಂದೆರಡನ್ನು ಯಾರಾದರೂ ಮುಂದಿನ ದಿನಗಳಲ್ಲಿ ಹಿಂದಿಕ್ಕಬಹುದು.

ಸಚಿಧಿನ್‌ಗೆ ತಪ್ಪಿದ ದಾಖಲೆಗಳು
ಕ್ರಿಕೆಟ್‌ ಮತ್ತು ಬ್ಯಾಟಿಂಗ್‌ ವಿಭಾಗದ ಬಹುತೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಸಚಿನ್‌ಗೆ ಟೆಸ್ಟ್‌
ಕ್ರಿಕೆಟ್‌ನಲ್ಲಿ ಕೆಲವು ಪ್ರಮುಖ ದಾಖಲೆಗಳು ತಪ್ಪಿ ಹೋಗಿವೆ. ಅವುಗಳಲ್ಲಿ ಆಯ್ದ ಐದು ಇಂತಿವೆ.

ಟೆಸ್ಟ್‌ ತ್ರಿಶತಕ: ಸಚಿನ್‌ ಸಮಕಾಲೀನರಾದ ಲಾರಾ, ಗೇಲ್‌, ಸೆಹ್ವಾಗ್‌ ಎರಡೆರಡು ತ್ರಿಶತಕ ದಾಖಲಿಸಿದ್ದಾರೆ. ಜಯಸೂರ್ಯ, ಇಂಜಮಾಮ್‌, ಹೇಡನ್‌, ಕ್ಲಾರ್ಕ್‌, ಜಯವರ್ದನೆ, ಯೂನಿಸ್‌ ಖಾನ್‌, ಹಶೀಮ್‌ ಆಮ್ಲಾ ಕೂಡ ತ್ರಿಶತಕ ಗಳಿಸಿದ್ದಾರೆ. ಆದರೆ, ಸಚಿನ್‌ಗೆ ಮಾತ್ರ ಇದು ನಿಲುಕಲಾಗದ ದಾಖಲೆ. ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ಹೊಡೆದ ಅಜೇಯ 248 ರನ್‌ ಸಚಿನ್‌ ಟೆಸ್ಟ್‌ ಜೀವನದ ಅತಿ ದೊಡ್ಡ ಟೆಸ್ಟ್‌ ಸ್ಕೋರ್‌.
ಎರಡು ಶತಕ: ಒಂದೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸುವ ದಾಖಲೆಯೂ ಸಚಿನ್‌ ಪಾಲಿಗೆ ಬರಲಿಲ್ಲ. ಸುನಿಲ್‌ ಗಾವಸ್ಕರ್‌, ರಿಕಿ ಪಾಂಟಿಂಗ್‌ ಅವರುಗಳು ತಲಾ ಮೂರು ಬಾರಿ ಈ ದಾಖಲೆ ಬರೆದಿದ್ದಾರೆ. ಜಾರ್ಜ್‌ ಹೆಡ್ಲಿ, ಸರ್‌ ಕ್ಲೈಡ್‌ ವಾಲ್ಕಾಟ್‌, ಅಲನ್‌ ಬಾರ್ಡರ್‌, ಗ್ರೆಗ್‌ ಚಾಪೆಲ್‌, ಮ್ಯಾಥ್ಯೂ ಹೇಡನ್‌ ಅವರುಗಳೆಲ್ಲ ತಲಾ ಎರಡು ಬಾರಿ ಇಂತಹ ಸಾಧನೆ ಮೆರೆದಿದ್ದಾರೆ.
ಸರಾಸರಿ ನಂ.12: ಅತಿ ಹೆಚ್ಚು ಟೆಸ್ಟ್‌ ಸರಾಸರಿಯಲ್ಲಿ (ಕನಿಷ್ಠ 40 ಪಂದ್ಯ ಆಡಿರುವವರು) ಸಚಿನ್‌ 12ನೇ ಸ್ಥಾನದಲ್ಲಿ ಇದ್ದಾರೆ. ಸಚಿನ್‌ ಸರಾಸರಿ ಸುಮಾರು 54ರ ಆಸುಪಾಸು ಇದ್ದರೆ, ಕುಮಾರ ಸಂಗಕ್ಕಾರ (ಶೇ.57), ಜಾಕ್‌ ಕಾಲಿಸ್‌ (ಶೇ.56) ಇಬ್ಬರೂ ಸಚಿನ್‌ಗಿಂತ ಮುಂದಿದ್ದಾರೆ.
ವಾರ್ಷಿಕ ಸಾಧನೆಯಲ್ಲಿ ನಂ.5: ಟೆಸ್ಟ್‌ನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಸಚಿನ್‌ ತೆಂಡುಲ್ಕರ್‌ 5ನೇ ಸ್ಥಾನದಲ್ಲಿದ್ದಾರೆ. 2010ರಲ್ಲಿ 23 ಇನಿಂಗ್ಸ್‌ಗಳಲ್ಲಿ 1562 ರನ್‌ ಗಳಿಸಿದ್ದು ಅವರ ಶ್ರೇಷ್ಠ ವಾರ್ಷಿಕ ಸಾಧನೆ. 19 ಇನಿಂಗ್ಸ್‌ಗಳಲ್ಲಿ 1788 ರನ್‌ ಗಳಿಸಿದ್ದ ಮೊಹಮದ್‌ ಯೂಸುಫ್ (ಯೂಸುಫ್ ಯುಹಾನಾ) ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌ ಹಾಗೂ ಆಸ್ಟ್ರೇಲಿಯಾದ ಮೈಕೆಲ್‌ ಕ್ಲಾರ್ಕ್‌ ಅವರುಗಳ ಸಚಿನ್‌ಗಿಂತ ಮುಂದಿದ್ದಾರೆ.
ನಾಯಕತ್ವದಲ್ಲೂ ಕಳಪೆ ಸಾಧನೆ: ಸಚಿನ್‌ ನಾಯಕತ್ವ ವಹಿಸಿದ 26 ಟೆಸ್ಟ್‌ ಪಂದ್ಯಗಳಲ್ಲಿ ಗೆದ್ದದ್ದು ನಾಲ್ಕೇ ಬಾರಿ. ಗೆಲುವಿನ ಸರಾಸರಿ ಶೇ.16. ರಿಕಿ ಪಾಂಟಿಂಗ್‌ (77 ಪಂದ್ಯ, ಶೇ.62.3 ಸರಾಸರಿ) ಹಾಗೂ ಗ್ರೇಮ್‌ ಸ್ಮಿತ್‌ (102 ಪಂದ್ಯ, ಶೇ.49 ಸರಾಸರಿ) ಅಗ್ರಸ್ಥಾನದಲ್ಲಿದ್ದಾರೆ. ಸೌರವ್‌ ಗಂಗೂಲಿ (ಶೇ.43), ಧೋನಿ (ಶೇ.51), ಅಜರುದ್ದೀನ್‌ (ಶೇ.30) ಹಾಗೂ ದ್ರಾವಿಡ್‌ (ಶೇ.32) ಅವರುಗಳೂ ನಾಯಕತ್ವದ ವಿಷಯದಲ್ಲಿ ಸಚಿನ್‌ಗಿಂತ ಮುಂದಿದ್ದಾರೆ.

ಸಚಿಧಿನ್‌ ಮುಡಿಧಿಗೇಧಿರಿಧಿದ ಕಿಧಿರೀಧಿಟಧಿಗಧಿಳು
ಜಾಧಿಗತಿಕ ಕ್ರಿಕೆಟ್‌ನಲ್ಲಿ ಒಂದೆರಡು ದಾಖಲೆಗಳನ್ನು ಹೊರತುಪಡಿಸಿದರೆ ಬಹುತೇಕ ದಾಖಲೆಗಳು ಸಚಿನ್‌ ಹೆಸರಿನಲ್ಲಿವೆ. ಅವರು ತಮ್ಮ 24 ವಸಂತಗಳಲ್ಲಿ ತಂಡದ ಹಲವಾರು ಸಾಧನೆಗಳಲ್ಲಿ ಭಾಗಿಯಾಗಿದ್ದಾರೆ. ಅದರ ಕಿರು ವಿವರ ಇಲ್ಲಿದೆ.

ವಿಶ್ವಕಪ್‌: ವೃತ್ತಿಜೀವನದಲ್ಲಿ ಒಮ್ಮೆಯಾದರೂ ಭಾರತ ವಿಶ್ವಕಪ್‌ ಗೆಲ್ಲಬೇಕು ಎಂಬುದು ಸಚಿನ್‌ ಕನಸಾಗಿತ್ತು. ಈ ಕನಸು ಈಡೇರಿಸಿಕೊಳ್ಳಲು ಸಚಿನ್‌ ಸುಮಾರು 22 ವರ್ಷಗಳು ಕಾಯಬೇಕಾಯಿತು. 2003ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಭಾರತ ಪ್ರಶಸ್ತಿ ಹಂತದಲ್ಲಿ ಎಡವಿತ್ತು. 2011ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತದಲ್ಲೇ ಭಾರತ ವಿಶ್ವಕಪ್‌ ಗೆದ್ದೇಬಿಟ್ಟಿತು.

ಹೀರೋ ಕಪ್‌: 1993ರ ನವೆಂಬರ್‌ನಲ್ಲಿ ಕೋಲ್ಕತಾದಲ್ಲಿ ನಡೆದ ಹೀರೋ ಕಪ್‌ ಅನ್ನು ಭಾರತ ತಂಡ ಗೆದ್ದಿದ್ದು ಸಚಿನ್‌ ಸಾಧನೆಗಳಲ್ಲಿ ಒಂದು. ತಮ್ಮ ಬೌಲಿಂಗ್‌ ಮೂಲಕ ಅವರಂದು ಭಾರತವನ್ನು ಗೆಲ್ಲಿಸಿದ್ದರು.
ಶಾರ್ಜಾ ಕಪ್‌: 1998ರಂದು ಶಾರ್ಜಾದಲ್ಲಿ ನಡೆದ ಆಸೀಸ್‌ ವಿರುದ್ಧ ತ್ರಿಕೋನ ಏಕದಿನ ಸರಣಿ ಫೈನಲ್‌ನಲ್ಲಿ 134 ರನ್‌ ಗಳಿಸಿ ಭಾರತವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದರು. ಈ ಆಟದ ನಂತರ ಲೆಗ್‌ಸ್ಪಿನ್ನರ್‌ ಶೇನ್‌ವಾರ್ನ್ ನಿದ್ದೆಯಲ್ಲೂ ನನಗೆ ಸಚಿನ್‌ ಸಿಕ್ಸರ್‌ ಹೊಡೆಯುವ ಕನಸು ಬೀಳುತ್ತಿದೆ ಎಂದಿದ್ದರು.

ಚಾಂಪಿಯನ್ಸ್‌ ಆಫ್ ಚಾಂಪಿಯನ್‌: ಸಚಿನ್‌ ಇದ್ದ ಮುಂಬೈ ಇಂಡಿಯನ್ಸ್‌, ರೋಹಿತ್‌ ಶರ್ಮ ಸಾರಥ್ಯದಲ್ಲಿ ಐಪಿಎಲ್‌ 6ನೇ ಆವೃತ್ತಿಯಲ್ಲಿ ಚಾಂಪಿಯನ್‌ ಆಯಿತು. ಅದರ ಬೆನ್ನಲ್ಲೇ ಚಾಂಪಿಯನ್ಸ್‌ ಲೀಗ್‌ ಟಿ20ಯಲ್ಲೂ ಗೆಲುವು ಸಾಧಿಸಿತು.

ಸಚಿನ್‌ ಕ್ರಿಕೆಟ್‌ ಬದುಕಿನ ಅಂಕಿ ಅಂಶಗಳು
ಬ್ಯಾಟಿಂಗ್‌ ಪಂದ್ಯ ಇನಿಂಗ್ಸ್‌ ರನ್‌ ಅತಿಹೆಚ್ಚು ರನ್‌ ಸರಾಸರಿ ಶತಕ ಅರ್ಧ ಶತಕ ಕ್ಯಾಚ್‌
ಟೆಸ್ಟ್‌ 200 329 15921 248* 53.78 51 68 115
ಏಕದಿನ 463 452 18426 200* 44.83 49 96 140
ಅಂ.ಟಿ20 1 1 10 10 10.0 0 0 1
ಪ್ರ.ದರ್ಜೆ 310 490 25396 248* 57.84 81 116 186
ಲಿಸ್ಟ್‌ ಎ 551 538 21999 200* 45.54 60 114 175
ಟಿ20 96 96 2797 100* 32.90 1 16 28
ಬೌಲಿಂಗ್‌ ಪಂದ್ಯ ಇನಿಂಗ್ಸ್‌ ಎಸೆತ ರನ್‌ ವಿಕೆಟ್‌ ಗರಿಷ್ಠ ಸರಾಸರಿ
ಟೆಸ್ಟ್‌ 200 145 4240 2492 46 3/10 54.17
ಏಕದಿನ 463 270 8054 6850 154 5/32 44.48
ಅಂ.ಟಿ20 1 1 15 12 1 1/12 12.00
ಪ್ರಥಮ ದರ್ಜೆ 310 - 7605 4384 71 3/10 61.74
ಲಿಸ್ಟ್‌ಎ 551 - 10230 8478 201 5/32 42.17
ಟಿ20 96 8 93 123 2 1/12 61.50

ಸಚಿನ್‌ ದಾಖಲೆಗಳು
200 ಪಂದ್ಯ
ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಪಂದ್ಯ ಆಡಿದ ಖ್ಯಾತಿ
463 ಪಂದ್ಯ
ವಿಶ್ವದಲ್ಲೇ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಆಟಗಾರ
15921 ರನ್‌
ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ
18426 ರನ್‌
ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ
34357 ರನ್‌
ಏಕದಿನ, ಟ್ವೆಂಟಿ 20, ಟೆಸ್ಟ್‌ಗಳಲ್ಲಿ ಎಲ್ಲಾ ರನ್‌ಗಳನ್ನು ಸೇರಿಸಿದರೆ ಸಚಿನ್‌ ಪೇರಿಸಿದ ರನ್‌ಗಳ ಒಟ್ಟು ಮೊತ್ತ 34,357. ಇದು ಯಾವುದೇ ಆಟಗಾರನೊಬ್ಬ ಸಂಪಾದಿಸಿದ ಗರಿಷ್ಠ ರನ್‌
50192 ರನ್‌
ಪ್ರಥಮ ದರ್ಜೆ, ಲಿಸ್ಟ್‌ ಎ ಸೇರಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಸಚಿನ್‌ ಗಳಿಸಿದ ರನ್‌
90 ಸ್ಟೇಡಿಧಿಯಂ
ಇಷ್ಟೊಂದು ಕ್ರೀಡಾಂಗಣಗಳಲ್ಲಿ ಆಡಿದ ವಿಶ್ವದ ಏಕೈಕ
ಆಟಗಾರ
51 ಶತಧಿಕ
ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ಶತಕ ಗಳಿಸಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ
49 ಶತಧಿಕ
ಏಕದಿನ ಪಂದ್ಯಗಳಲ್ಲಿ ಅತಿ
ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ
10 ದೇಶ
ಟೆಸ್ಟ್‌ ಆಡುವ ಎಲ್ಲಾ ರಾಷ್ಟ್ರಗಳ ವಿರುದ್ಧವೂ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಏಕೈಕ ಆಟಗಾರ
17 ಸರಧಿಣಿ ಶ್ರೇಷ್ಠ
ಏಕದಿನ ಪಂದ್ಯಗಳಲ್ಲಿ ಅತಿ
ಹೆಚ್ಚು ಬಾರಿ ಸರಣಿ
ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದ ಆಟಗಾರ
62 ಪಂದ್ಯ ಶ್ರೇಷ್ಠ
ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ ಕ್ರಿಕೆಟಿಗ
2278 ರನ್‌
ಏಕದಿನ ವಿಶ್ವಕಪ್‌ನಲ್ಲಿ ಶೇ.56.95ರ ಸರಾಸರಿಯಲ್ಲಿ ಒಟ್ಟಾರೆ ಗಳಿಸಿದ ರನ್‌. ಇದು ಯಾವುದೇ ಆಟಗಾರ ಗಳಿಸಿದ ಸರ್ವಾಧಿಕ ರನ್‌.
9 ಧಿಬಾಧಿರಿ
ಏಕದಿನ ವಿಶ್ವಕಪ್‌ನಲ್ಲಿ ಆಡಿದ 45 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಪಂದ್ಯಶ್ರೇಷ್ಠ ಗೌರವ
96 ಅರ್ಧಧಿಶಧಿತಧಿಕ
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಗೌರವ
200 ರನ್‌
ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರ. ನಂತರ ಸೆಹ್ವಾಗ್‌, ರೋಹಿತ್‌ ಶರ್ಮಾ ಸಾಧನೆ
145 ಸಲ
ಏಕದಿನ ಪಂದ್ಯಗಳಲ್ಲಿ ಶತಕ, ಅರ್ಧಶತಕ ಸೇರಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ ಗಳಿಕೆ
129 ಬಾರಿ
ಏಕದಿನ ಪಂದ್ಯಗಳಲ್ಲಿ
ಭಾರತ ತಂಡದ ಇತರೆ ಆಟಗಾರರಿಗಿಂತ ಹೆಚ್ಚು ರನ್‌ ಗಳಿಸಿದ ದಾಖಲೆ
3 ವಿಶೇಧಿಷ
ಏಕದಿನ ಪಂದ್ಯಗಳಲ್ಲಿ 10000 ರನ್‌, 100 ವಿಕೆಟ್‌ ಮತ್ತು 100 ಕ್ಯಾಚ್‌ ಸಂಪಾದಿಸಿದ ವಿಶ್ವದ ಏಕೈಕ ಕ್ರಿಕೆಟಿಗ
3 ಬಾರಿ
ಏಕದಿನ ಪಂದ್ಯಗಳಲ್ಲಿ 175ಕ್ಕಿಂತ ಹೆಚ್ಚಿನ ರನ್‌ ಗಳಿಕೆ
5 ಬಾರಿ
ಏಕದಿನ ಪಂದ್ಯಗಳಲ್ಲಿ 150ಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌
7 ಬಾರಿ
ಏಕದಿನ ಪಂದ್ಯಗಳಲ್ಲಿ ಒಂದು ಕ್ರಿಕೆಟ್‌ ಋತುವಿನಲ್ಲಿ 1000ಕ್ಕೂ ಹೆಚ್ಚು ರನ್‌ ಗಳಿಸಿದ ಆಟಗಾರ
866 ಆಟಧಿಗಾಧಿರಧಿರು
ಏಕದಿನ ಪಂದ್ಯಗಳಲ್ಲಿ ಇಷ್ಟು ಆಟಗಾರರ ವಿರುದ್ಧ ಆಡಿದ ದಾಖಲೆ
99 ಬಾರಿ
ಏಕದಿನ ಪಂದ್ಯಗಳಲ್ಲಿ ಶತಕದ ಜತೆಯಾಟ ಗಳಿಸಿದ್ದು ಏಕದಿನ ಪಂದ್ಯಗಳ ಮಟ್ಟಿಗೆ ದಾಖಲೆ
3000 ರನ್‌
ಏಕದಿನಗಳಲ್ಲಿ ಒಂದೇ ದೇಶದ ವಿರುದ್ಧ 3000ಕ್ಕಿಂತಲೂ ಹೆಚ್ಚಿನ್‌ ರನ್‌ಗಳಿಸಿದ ಸಾಧನೆ (ಲಂಕಾ ವಿರುದ್ಧ 3113, ಆಸ್ಟ್ರೇಲಿಯಾ ವಿರುದ್ಧ 3077 ರನ್‌)
ಕ್ಯಾಪ್ಟಧಿನ್‌ ನಂ.1
ಏಕದಿನ ಪಂದ್ಯಗಳ ನಾಯಕನಾಗಿ ಹೊಣೆ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶತಕಗಳಿಸಿದ ಏಕೈಕ ಭಾರತೀಯ
ಶೇ.11.27
ಒನ್‌ಡೇಯಲ್ಲಿ ಇದುವರೆಗೆ ಎಲ್ಲಾ ಭಾರತೀಯ ಆಟಗಾರರು ಏಕದಿನ ಪಂದ್ಯಗಳಲ್ಲಿ ಗಳಿಸಿದ ಒಟ್ಟು ರನ್‌ ಗಳ ಪೈಕಿ ತೆಂಡುಲ್ಕರ್‌ ಬ್ಯಾಟ್‌ನಿಂದ ಸಿಡಿದ ರನ್‌ಗಳ ಪ್ರಮಾಣ
ಶೇ.24.50
ಒನ್‌ಡೇಯಲ್ಲಿ ಇದುವರೆಗೆ ಎಲ್ಲಾ ಭಾರತೀಯ ಆಟಗಾರರು ಏಕದಿನ ಪಂದ್ಯಗಳಲ್ಲಿ ಗಳಿಸಿದ ಒಟ್ಟು ಶತಕಗಳ ಪೈಕಿ ತೆಂಡುಲ್ಕರ್‌ ಗಳಿಸಿದ ಶತಕಗಳ ಪ್ರಮಾಣ
6609 ರನ್‌
ಒನ್‌ಡೇಯಲ್ಲಿ ಸೌರವ್‌ ಗಂಗೂಲಿ ಮತ್ತು ಸಚಿನ್‌ ಆರಂಭಿಕ ಆಟಗಾರರಾಗಿ ಒಟ್ಟು ಗಳಿಸಿದ ರನ್‌ಗಳು. ಇದು ಯಾವುದೇ ತಂಡದ, ಯಾವುದೇ ಆರಂಭಿಕ ಜೋಡಿಯ ಗರಿಷ್ಠ ರನ್‌ ಸಂಪಾದನೆ
331 ರನ್‌
ಒನ್‌ಡೇಯಲ್ಲಿ ದ್ರಾವಿಡ್‌ ಜತೆ 1999ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಹೆಣೆದ ಜತೆಯಾಟ ಈಗಲೂ ವಿಶ್ವದಾಖಲೆ
6 ವಿಶ್ವಧಿಕಧಿಪ್‌
ಆಡುವ (1992ರಿಂದ 2011) ಮೂಲಕ ಪಾಕಿಸ್ತಾನದ ಜಾವೇದ್‌ ಮಿಯಾಂದಾದ್‌ ದಾಖಲೆ ಸರಿಗಟ್ಟಿದ ಸಚಿನ್‌
1894 ರನ್‌
ಒನ್‌ಡೇಯಲ್ಲಿ ಒಂದೇ ಕ್ರಿಕೆಟ್‌ ಋತುವಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ರನ್‌ ಗಳಿಕೆ (1998ರಲ್ಲಿ)
9 ಶತಧಿಕ
ಒನ್‌ಡೇಯಲ್ಲಿ ಒಂದೇ ವರ್ಷದಲ್ಲಿ (1998) ಗರಿಷ್ಠ ಏಕದಿನ ಶತಕ ಗಳಿಸಿದ ದಾಖಲೆ
185 ಪಂದ್ಯ
1990-98ರ ಅವಧಿಯಲ್ಲಿ ಒಂದೂ ಏಕದಿನ ಪಂದ್ಯ
ಬಿಡದೆ ಸತತವಾಗಿ ಆಡಿದ್ದೂ ದಾಖಲೆ
ಶತಧಿಕ ನಂ.1
ದೇಶೀಯ ಕ್ರಿಕೆಟ್‌ ಪಂದ್ಯಾವಳಿಗಳಾದ ರಣಜಿ, ದುಲೀಪ್‌ ಮತ್ತು ಇರಾನಿ ಟ್ರೋಫಿ ಪಂದ್ಯಾವಳಿಗಳಲ್ಲಿ, ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಏಕೈಕ ಆಟಗಾರ
5 ಪ್ರಧಿಶಧಿಸ್ತಿ
ಭಾರಧಿತ ಧಿರಧಿತ್ನ, ರಾಜೀವ್‌ಗಾಂಧಿ ಖೇಲ್‌ ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳೆಲ್ಲವನ್ನೂ ಗೆದ್ದ ಏಕೈಕ ಆಟಗಾರ.

ಸ್ಮರಣೀಯ ಇನಿಂಗ್ಸ್‌ಗಳು
1989 ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ
ಪಾಕ್‌ನ ವೇಗಿಗಳಾದ ವಖಾರ್‌, ಅಕ್ರಂ, ಇಮ್ರಾನ್‌ ಖಾನ್‌ ದಾಳಿಗೆ ತಂಡ 13ಕ್ಕೆ 3ಕ್ಕೆ ಕುಸಿದಿತ್ತು. ಪ್ರಭಾಕರ್‌ 4ನೆಯವರಾಗಿ ಔಟಾದ ಬೆನ್ನಲ್ಲೇ ಬಂದ 16 ವರ್ಷದ ಸಚಿನ್‌ ಗಳಿಸಿದ್ದು 15 ರನ್‌ ಆದರೂ ದಿಗ್ಗಜ ವೇಗಿಗಳನ್ನೆದುರಿಸಿದ ನೆನಪು ಸದಾ ಹಸಿರು.
1990 ಓಲ್ಡ್‌ ಟ್ರಫೋರ್ಡ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ
ಸಚಿನ್‌ಗಾಗ 17 ವರ್ಷ. ಭಾರತ 186ಕ್ಕೆ 6 ವಿಕೆಟ್‌ ಕಳಕೊಂಡಿದ್ದಾಗ ಬಂದು 119 ರನ್‌
ಸಿಡಿಸಿ ಸೋಲು ತಪ್ಪಿಸಿದರು. ಗಾವಸ್ಕರ್‌ ಸಚಿನ್‌ರನ್ನು ’ಲಿಟ್ಲ ಮಾಸ್ಟರ್‌’ ಎಂದರು.
1992 ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ
ಆಸ್ಟ್ರೇಲಿಯಾದ ವೇಗದ ಪಿಚ್‌ನಲ್ಲಿ ಭಾರತೀಯರು ಪರದಾಡುತ್ತಿದ್ದರೆ, ಸಚಿನ್‌ ಸರಾಗವಾಗಿ ಆಡಿದರು. ಭಾರತದ 272 ರನ್‌ಗಳಲ್ಲಿ ಸಚಿನ್‌ ಕೊಡುಗೆ 114. ಅವರ ಬಹುತೇಕ ರನ್‌ಗಳು ಸ್ಕ್ವಾರ್‌ ಮತ್ತು ಸ್ಟ್ರೈಟ್‌ ಡ್ರೈವ್‌ಗಳಿಂದ ಬಂದವು.
1999 ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧ
ಸಚಿನ್‌ ದುರಂತದ ಆರಂಭ ಇದು ಎನ್ನಬಹುದು. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಸಚಿನ್‌ ಬೆನ್ನುನೋವಿನ ನಡುವೆಯೂ ಏಕಾಂಗಿ ಹೋರಾಟ ನಡೆಸಿದರು. ಭಾರತ ಗೆಲುವಿಗೆ 17 ರನ್‌ ಬೇಕಿದ್ದಾಗ ಸಚಿನ್‌ ಔಟಾದರು. ನಂತರ ಗೆಲುವಿಗೆ ಕೇವಲ 5 ರನ್‌ ಬೇಕಿದ್ದಾಗ ತಂಡ ಆಲೌಟಾಯಿತು. ಸಚಿನ್‌ ವೃತ್ತಿಜೀವನದಲ್ಲಿ ಅತ್ಯಂತ ದುಃಖಕರ ಸೋಲು ಇದಾಗಿದ್ದು, ಪಂದ್ಯದ ನಂತರ ಸಚಿನ್‌ ಕಣ್ಣೀರಿಟ್ಟಿದ್ದರು.

ಸಚಿನ್‌ ಕಿರೀಟದ ಗರಿಗಳು
201ಧಿ0
ವರ್ಷದ ವಿಸ್ಡನ್‌ ಕ್ರಿಕೆಟಿಗ
ಇಂಗ್ಲೆಂಧಿಡ್‌ನ‌ ಕ್ರಿಕೆಧಿಟ್‌ ವಾಧಿರ್ಷಿಧಿಕ ಮ್ಯಾಧಿಗಧಿಜಿಧಿನ್‌ನಲ್ಲಿ ಗೌರಧಿವ
ವರ್ಷದ ಸರ್‌ ಗ್ಯಾರಿ ಸೋಬರ್ಸ್‌ ಟ್ರೋಫಿ
ಐಸಿಧಿಸಿ ನೀಡುಧಿವ ವರ್ಷಧಿಧಿದ ಕ್ರಿಧಿಕೆಧಿಟಿಧಿಧಿಗ ಪ್ರಶಧಿಸ್ತಿ
ಎಲ್‌ಜಿ ಪೀಪಲ್ಸ್‌ ಚಾಯ್ಸ ಅವಾರ್ಡ್‌
ಐಧಿಸಿಧಿಸಿ ಸಾರ್ವಧಿಧಿಜಧಿಧಿನಿಧಿಕಧಿರ ಧಿಮಧಿತಧಿದಾಧಿನಧಿದ ಮೂಲಧಿಕ ಆಯ್ಕೆ ಮಾಡುಧಿವ ಪ್ರಶಧಿಸ್ತಿ

2009
ಐಸಿಸಿ ವಿಶ್ವ ಇಲೆವೆನ್‌ ತಂಡದಲ್ಲಿ ಸ್ಥಾನ
ಐಧಿಸಿಧಿಸಿ ಪ್ರಕಧಿಟಿಧಿಸಿಧಿದ ತಂಡಧಿದಧಿಲ್ಲಿ ಸಚಿಧಿನ್‌ಧಿಗೆ ಸ್ಥಾನ
2004
ಐಸಿಸಿ ವಿಶ್ವ ಏಕದಿನ ಇಲೆವೆನ್‌ ತಂಡದಲ್ಲಿ ಸ್ಥಾನ
ಐಧಿಸಿಧಿಸಿ ಪ್ರಕಧಿಟಿಧಿಸಿಧಿದ ತಂಡಧಿದಧಿಲ್ಲಿ ಸಚಿಧಿನ್‌ಧಿಗೆ ಸ್ಥಾನ
2003
ವಿಶ್ವಕಪ್‌ ಪಂದ್ಯಾವಳಿಯ ಸರಣಿ ಶ್ರೇಷ್ಠ
ವಿಶ್ವಧಿಕಧಿಪ್‌ಧಿನಧಿಲ್ಲಿಧಿ ಅತಿ ಹೆಚ್ಚು ರನ್‌ ಬಾರಿಧಿಸಿಧಿ ಈ ಪ್ರಧಿಶಧಿಸ್ತಿಧಿಗೆ ಪಾತ್ರಧಿರಾಧಿದ ಮೊದಧಿಲ ಭಾರಧಿತೀಧಿಯ
2011
ಲಂಡನ್‌ನಲ್ಲಿ ನಡೆದ ಕ್ರೀಡೆಯಲ್ಲಿ ಸಾಧನೆ ಮತ್ತು ಪೀಪಲ್‌ ಚಾಯ್ಸ ಏಷ್ಯಾ ಪ್ರಶಸ್ತಿ
ಕ್ಯಾಸ್ಟ್ರಾಲ್‌ ವರ್ಷದ ಕ್ರಿಕೆಟಿಗ ಪ್ರಶಸ್ತಿ
ಕ್ಯಾಸ್ಟ್ರಾಲ್‌ ಸಂಸ್ಥೆ ಕ್ರಿಕೆಧಿಟಿಧಿಗಧಿಧಿರಿಧಿಗೆ ಮೀಸಧಿಲಿಧಿಧಿರಿಧಿಸಿಧಿದ ಪ್ರಶಧಿಸ್ತಿ
ಬಿಸಿಸಿಐ ವರ್ಷದ ಕ್ರಿಕೆಟಿಗ ಪ್ರಶಸ್ತಿ
ರಾಷ್ಟ್ರೀಧಿಯ ಮತ್ತು ಅಂತಾಧಿರಾಧಿಷ್ಟ್ರೀಧಿಯ ಮಟ್ಟಧಿದಧಿಲ್ಲಿ ಪ್ರದಧಿರ್ಶಧಿನ ಆಧಧಿರಿಧಿಸಿ ಬಿಧಿಸಿಧಿಸಿಧಿಐ ಪ್ರತಿಧಿವಧಿರ್ಷ ನೀಡುಧಿವ ಪ್ರಶಧಿಸ್ತಿ
2010
ಗ್ರೂಪ್‌ ಕ್ಯಾಪ್ಟನ್‌ ಹುದ್ದೆ
ಕ್ರೀಡಾ ಕ್ಷೇತ್ರಧಿದಧಿಲ್ಲಿ ಅಧಿದ್ಭುಧಿತ ಧಿಸಾಧಿಧಧಿನೆಧಿಗಾಧಿಗಿ ಧಿಭಾಧಿರಧಿತ ವಾಯುಧಿಪಧಿಡೆ ನೀಡಿಧಿದ ಗೌರಧಿವ
2013
ಕ್ಯಾಸ್ಟ್ರಾಲ್‌ ವರ್ಷದ ಕ್ರಿಕೆಟಿಗ ಪ್ರಶಸ್ತಿ
ಕ್ಯಾಸ್ಟ್ರಾಲ್‌ ಸಂಸ್ಥೆ ಕ್ರಿಕೆಧಿಟಿಧಿಗಧಿಧಿರಿಧಿಗೆ ಮೀಸಧಿಲಿಧಿಧಿರಿಧಿಸಿಧಿದ ಪ್ರಶಧಿಸ್ತಿ
ಬಿಸಿಸಿಐ ವರ್ಷದ ಕ್ರಿಕೆಟಿಗ ಪ್ರಶಸ್ತಿ
ರಾಷ್ಟ್ರೀಧಿಯ ಮತ್ತು ಅಂತಾಧಿರಾಧಿಷ್ಟ್ರೀಧಿಯ ಮಟ್ಟಧಿದಧಿಲ್ಲಿ ಪ್ರದಧಿರ್ಶಧಿನ ಆಧಧಿರಿಧಿಸಿ ಬಿಧಿಸಿಧಿಸಿಧಿಐ ಪ್ರತಿಧಿವಧಿರ್ಷ ನೀಡುಧಿವ ಪ್ರಶಧಿಸ್ತಿ
ಗ್ರೂಪ್‌ ಕ್ಯಾಪ್ಟನ್‌ ಹುದ್ದೆ
ಕ್ರೀಡಾ ಕ್ಷೇತ್ರಧಿದಧಿಲ್ಲಿ ಅಧಿದ್ಭುಧಿತ ಧಿಸಾಧಿಧಧಿನೆಧಿಗಾಧಿಗಿ ಧಿಭಾಧಿರಧಿತ ವಾಯುಧಿಪಧಿಡೆ ನೀಡಿಧಿದ ಗೌರಧಿವ
ವಿಸ್ಡನ್‌ ಇಂಡಿಯಾ ಅದ್ಭುತ ಸಾಧನೆ ಪ್ರಶಸ್ತಿ
ಇಂಗ್ಲಂಧಿಡ್‌ನ‌ ಕ್ರಿಕೆಧಿಟ್‌ ವಾಧಿರ್ಷಿಧಿಕ ಮ್ಯಾಧಿಗಧಿಜಿಧಿನ್‌ನಲ್ಲಿ ಗೌರಧಿವ
ಆಸ್ಟ್ರೇಲಿಯಾದ ಸರಕಾರದ ಗೌರವ ಆರ್ಡರ್‌ ಆಫ್ ಆಸ್ಟ್ರೇಲಿಯಾ ಪ್ರಶಸ್ತಿ
ವಿಸ್ಡನ್‌ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಸ್ಥಾನ
ಇಂಗ್ಲಂಧಿಡ್‌ನ‌ ಕ್ರಿಕೆಧಿಟ್‌ ವಾಧಿರ್ಷಿಧಿಕ ಮ್ಯಾಧಿಗಧಿಜಿಧಿನ್‌ 150ನೇ ವಧಿರ್ಷಧಿದ ಪ್ರಯುಧಿಕ್ತ ಪ್ರಕಧಿಟಿಧಿಸಿಧಿದ ಧಿಸಾಧಿರ್ವಧಿಕಾಧಿಲಿಧಿಕ ವಿಧಿಶ್ವ ಟೆಧಿಸ್ಟ್‌ ಇಲೆಧಿವೆಧಿನ್‌ ತಂಡಧಿದಧಿಲ್ಲಿ ಸಚಿಧಿನ್‌ಧಿಗೆ ಗೌರಧಿವ

ಸರಕಾರದ ಪ್ರಶಸ್ತಿಗಳು
2013 ಭಾಧಿರಧಿತ ರತ್ನ
ಧಿಧಿದೇಶದ ಅತ್ಯುಧಿನ್ನಧಿತ ನಾಗಧಿರೀಧಿಕ ಪ್ರಧಿಶಧಿಸ್ತಿ
2008 ಧಿ ಪದ್ಮವಿಭೂಷಣ
ರಾಧಿಷ್ಟ್ರಧಿಪಧಿತಿಧಿಗಧಿಳು ನೀಡುಧಿವ ದೇಶಧಿದ ಎರಧಿಡಧಿನೇ ಅತ್ಯುಧಿನ್ನಧಿತಧಿ ನಾಧಿಗಧಿರೀಧಿಕ ಪ್ರಶಧಿಸ್ತಿ
2001 ಮಹಾರಾಷ್ಟ್ರ ಭೂಷಣ
ಮಹಾಧಿರಾಧಿಷ್ಟ್ರ ಸರಧಿಕಾಧಿರ ಧಿಪ್ರಧಿತಿಧಿವಧಿರ್ಷ ನೀಡುಧಿವ ಅಧಿತ್ಯುಧಿನ್ನಧಿತ ಗೌರಧಿವ
1999 ಧಿ ಪದ್ಮಶ್ರೀ
ರಾಧಿಷ್ಟ್ರಧಿಪಧಿತಿಧಿಗಧಿಳು ನೀಡುಧಿವ ದೇಶಧಿದ ನಾಲ್ಕಧಿನೇ ಅತ್ಯುಧಿನ್ನಧಿತಧಿ ನಾಧಿಗಧಿರೀಧಿಕ ಪ್ರಶಧಿಸ್ತಿ
1997 1998 ರಾಜೀವ್‌ಗಾಂಧಿ ಖೇಲ್‌ರತ್ನ
ಪ್ರಧಿಧಾಧಿನ ಮಂತ್ರಿಧಿಗಧಿಳು ನೀಡುಧಿವ ದೇಶಧಿಧಿದ ಅಧಿತ್ಯುಧಿನ್ನಧಿತ ಕ್ರೀಡಾ ಪ್ರಶಧಿಸ್ತಿ
1994 ಧಿ ಅರ್ಜುನ ಪ್ರಶಸ್ತಿ
ಕ್ರೀಧಿಡಾ ಕ್ಷೇತ್ರಧಿದಧಿಧಿಲ್ಲಿ ಆ ವರ್ಷಧಿದಧಿಲ್ಲಿ ನೀಡಿಧಿದ ಸಾಧಧಿನೆಧಿಯಧಿನ್ನು ಗುರುಧಿತಿಧಿಸಿ ನೀಡುಧಿವ ಧಿಕ್ರೀಧಿಡಾ ಪ್ರಶಧಿಸ್ತಿ

 

ಕ್ರಿಕೆಟ್‌ ಆಡದ ಸಚಿನ್‌ ಊಹಿಸಲು ಆಗದು

ಮುಂಬೈ: ಕ್ರಿಕೆಟ್‌ ಆಡದ ನನ್ನ ಗಂಡ ಸಚಿನ್‌ ತೆಂಡುಲ್ಕರ್‌ ಅವರನ್ನು ಊಹಿಸಲು ಕಷ್ಟವಾಗುತ್ತಿದೆ. ಅವರು ಇನ್ನೆಂದೂ ಕ್ರಿಕೆಟ್‌ ಆಡುವುದಿಲ್ಲ ಎಂಬ ನೋವು ನನಗೆ ಮಾತ್ರವಲ್ಲ ಕುಟುಂಬ ಸದಸ್ಯರನ್ನು ಕಾಡುತ್ತಿದೆ ಎಂದು ಅಂಜಲಿ ತೆಂಡುಲ್ಕರ್‌ ಹೇಳಿಕೊಂಡಿದ್ದಾರೆ.

ಶನಿವಾರ ಸಚಿನ್‌ ವಿದಾಯಕ್ಕೂ ಮುನ್ನ ಭಾವೋದ್ವೇಗಕ್ಕೆ ಒಳಗಾದರೂ ಅದನ್ನು ಅದುಮಿಟ್ಟುಕೊಂಡು ಮಾತನಾಡಿದ ಅಂಜಲಿ, ಕ್ರಿಕೆಟ್‌ ಇಲ್ಲದ ಸಚಿನ್‌ ಅವರನ್ನು ಊಹಿಸಲು ನನ್ನಿಂದ ಸಾಧ್ಯವಿಲ್ಲ. ಸಚಿನ್‌ ಇಲ್ಲದ ಕ್ರಿಕೆಟ್‌ ಅನ್ನು ಊಹಿಸಬಹುದು. ಆದರೆ ಕ್ರಿಕೆಟ್‌ ಆಡದೇ ಇರುವುದು ಸಚಿನ್‌ ಕಷ್ಟ ಎಂದರು.

ಸಚಿನ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವ ಕಾರಣ ಮನೆಯ ವಾತಾವರಣ ಸಂಪೂರ್ಣ ಬದಲಾಗಲಿದೆ. ಮನೆಯಲ್ಲಿ ನಾವೆಲ್ಲರೂ ಅವರ ಜತೆ ಇರಬಹುದು ಮತ್ತು ಎಲ್ಲದ್ದಕ್ಕೂ ಅವರ ನೆರವು ಪಡೆಯಬಹುದು. ನನಗೆ ಇನ್ನಷ್ಟು ಸಂತೋಷವಾಗುತ್ತಿದೆ ಯಾಕೆಂದರೆ ಇನ್ನು ಕೆಲವು ಜವಾಬ್ದಾರಿಯನ್ನು ಅವರಿಗೆ ಹಸ್ತಾಂತರ ಮಾಡಬಹುದು ಎಂದು ಅಂಜಲಿ ಹೇಳಿದರು.

ಸಚಿನ್‌ ಯಾವತ್ತೂ ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ತೋರಿಸಿದರವಲ್ಲ. ಆದರೆ ವೆಸ್ಟ್‌ಇಂಡೀಸ್‌ ವಿರುದ್ದ ಗೆಲುವು ಸಾಧಿಸಿದ ಬಳಿಕ ಧೋನಿ ಮತ್ತು ಅವರ ತಂಡದ ಸದಸ್ಯರು ಗೌರವ ವಂದನೆ ನೀಡಿದಾಗ ಭಾವೋದ್ವೇಗಕ್ಕೆ ಒಳಗಾದ ಸಚಿನ್‌ ಅವರ ಕಣ್ಣುಗಳಲ್ಲಿ ನೀರು ಬಂದಿತ್ತು ಎಂದು ಅಂಜಲಿ ತಿಳಿಸಿದರು.

ಸುದೀರ್ಘ‌ ಕ್ರಿಕೆಟ್‌ ಬಾಳ್ವೆಯಲ್ಲಿ ಅವರ ನಡತೆಯನ್ನು ನಾನು ಚೆನ್ನಾಗಿ ಬಲ್ಲೆ. ಭಾವನೆಗಳನ್ನು ಅವರು ಅದುಮಿ ಟ್ಟುಕೊಳ್ಳುತ್ತಿದ್ದರು. ಪಂದ್ಯದ ಮೊದಲು ಅಥವಾ ನಿರೀಕ್ಷಿತ ನಿರ್ವಹಣೆ ನೀಡಲು ಸಾಧ್ಯವಾಗದ ವೇಳೆ ಅಥವಾ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದಾಗ ಅವರು ಎಂದೂ ಉದ್ವೇಗಕ್ಕೆ ಒಳಗಾದವರಲ್ಲ ಎಂದು ಅಂಜಲಿ ವಿವರಿಸಿದರು.

ಅವರ ಹಾಗೇ ನಾನು ಭಾವನೆಗಳನ್ನು ಮುಚ್ಚಿಟ್ಟುಕೊಂಡಿಲ್ಲ. ಆದರೆ ಕಳೆದ ತಿಂಗಳು ನಿವೃತ್ತಿ ಬಗ್ಗೆ ಆಲೋಚನೆ ಮಾಡುವಾಗ ನನ್ನ ಕಣ್ಣುಗಳಲ್ಲಿ ನೀರು ಬಂದಿತ್ತು. ಇಂದು ಅಥವಾ ನಾಳೆ ನಿವೃತ್ತಿಯಾಗಲೇಬೇಕು. ಇದು ಖಂಡಿತವಾಗಿಯೂ ಭಾವೋದ್ವೇಗಕ್ಕೆ ಒಳಗಾಗುವ ವಿಷಯ ಎಂದು ಅಂಜಲಿ ತಿಳಿಸಿದರು.

ಸಚಿನ್‌ ಬ್ಯಾಟಿಂಗ್‌ ಮಾತ್ರವಲ್ಲ ಅಡುಗೆ ಕೂಡ ಮಾಡ್ತಾರೆ!

ಈ ಕ್ರಿಕೆಟಿಗನಿಗೆ ಕ್ರಿಕೆಟ್ಟೇ ಮೊದಲನೇ ಹವ್ಯಾಸ, ಅದೇ ಜೀವನ! ಅಂತಹ ಸಚಿನ್‌ಗೆ ಒಂದಷ್ಟು ವಿಶೇಷ ಹವ್ಯಾಸಗಳಿದ್ದಾವೆ.

ಅಡುಗೆ ಮಾಡ್ತಾರೆ: ಅವರು ತುಂಬಾ ಚೆನ್ನಾಗಿ ಅಡುಗೆ ಮಾಡಬಲ್ಲರು. ಸಚಿನ್‌ ಮಾಡಿಕೊಟ್ಟಿದ್ದ ಫಿಶ್‌ ಕರಿ ತಿಂದ ಮೇಲೆ ಹೆಂಡತಿ ಅಂಜಲಿ ತೆಂಡುಲ್ಕರ್‌, ನನ್ನ ಜೀವನದಲ್ಲೇ ಅಷ್ಟು ರುಚಿಯಾದ ಕರಿ ತಿಂದಿರಲಿಲ್ಲ ಎಂದಿದ್ದರು.

ಧ್ಯಾನ, ಪ್ರಾಣಾಯಾಮ: ಸಚಿನ್‌ ಪ್ರಾಣಾಯಾಮ ಮಾಡುತ್ತಿ ದ್ದರು. ಕ್ರಿಕೆಟ್‌ ಪಂದ್ಯಗಳನ್ನಾಡಿ ಅತ್ಯಂತ ಒತ್ತಡವೆನಿಸಿದಾಗ ಒಂದಷ್ಟು ಹೊತ್ತು ಉಸಿರಾಟ ನಿಯಂತ್ರಣದ ಕಡೆ ಗಮನ ಕೊಡುತ್ತಿದ್ದರು. ಧ್ಯಾನವನ್ನು ಕೂಡಾ ರೂಢಿಸಿಕೊಂಡಿದ್ದರು. ಅವರು ಸಾಯಿಬಾಬಾ ಮತ್ತು ಗಣಪತಿ ಭಕ್ತರಾಗಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸಂಗೀತ ಪ್ರೇಮಿ: ಅವರೇ ಹೇಳಿಕೊಳ್ಳುವಂತೆ ವಿರಾಮದ ವೇಳೆಯಲ್ಲಿ ಅವರು ತುಂಬಾ ಸಂಗೀತ ಕೇಳುತ್ತಾರೆ. ಮಾರ್ಕ್‌ ನಾಫ್ಲರ್‌ ಎಂಬ ಗಿಟಾರ್‌ ವಾದಕನನ್ನು ತುಂಬಾ ಹಚ್ಚಿಕೊಂಡಿ ದ್ದರು. ಈ ಸಂಗೀತ ಒತ್ತಡದಿಂದ ಮುಕ್ತಗೊಳ್ಳಲು ನೆರವು ನೀಡುತ್ತದಂತೆ.

ವಾಚು, ಪರ್ಫ್ಯೂಮು: ಇಷ್ಟಲ್ಲದೇ ಅವರಿಗೆ ವಾಚು ಮತ್ತು ಪರ್ಫ್ಯೂಮ್‌ಗಳನ್ನು ಸಂಗ್ರಹಿಸುವುದೆಂದರೆ ತುಂಬಾ ಇಷ್ಟ. ವಿವಿಧ ದೇಶಗಳಿಗೆ ಭೇಟಿ ನೀಡಿದಾಗಲೂ ಇದರತ್ತಲೂ ಒಂದು ಕಣ್ಣು ಇಟ್ಟಿರುತ್ತಿದ್ದರು.

ಕಾರುಪ್ರಿಯ: ಸಚಿನ್‌ಗೆ ಕಾರು ತುಂಬಾ ಇಷ್ಟ. ಜತೆಗೆ ಕಾರುಗ ಳನ್ನು ವೇಗವಾಗಿ ಚಾಲನೆ ಮಾಡುವುದೆಂದರೂ ಇಷ್ಟ. ಫೆರಾರಿ ಕಾರಿನ ಸ್ಪರ್ಧೆಯಲ್ಲೂ ಅವರು ಸ್ಟೀವ್‌ವಾರೊಂದಿಗೆ ಪಾಲ್ಗೊಂಡಿ ದ್ದರು. ವಿಶ್ವಶ್ರೇಷ್ಠ ಕಾರು ಚಾಲಕ ಮೈಕೇಲ್‌ ಶುಮ್ಯಾಕರ್‌, ಫೆರಾರಿ360 ಮೊಡೆನಾ ಕಾರನ್ನು ಸಚಿನ್‌ಗೆ ಕೊಡುಗೆ ನೀಡಿದ್ದರು.

ಸಚಿನ್‌ ಕುಟುಂಬದತ್ತ ಕಿರುನೋಟ
ತಂದೆ: ಪ್ರೊ. ರಮೇಶ್‌ ತೆಂಡುಲ್ಕರ್‌, ಮರಾಠಿ
ಕಾದಂಬರಿಕಾರ. ಸಂಗೀತ ನಿರ್ದೇಶಕ ಸಚಿನ್‌ ದೇವ್‌ ಬರ್ಮನ್‌ ಅಭಿಮಾನಿ. 1999ರ ವಿಶ್ವಕಪ್‌ ವೇಳೆ ಮೃತರಾದರು.
ತಾಯಿ: ರಜನಿ ತೆಂಡುಲ್ಕರ್‌, ಇನ್ಶೂರೆನ್ಸ್‌ ಕಂಪನಿಯಲ್ಲಿ ವೃತ್ತಿ ನಿರ್ವಹಿಸಿದ್ದರು. ತೀವ್ರ ವಯಸ್ಸಾಗಿರುವ ಅವರು ಬಹುತೇಕ ವ್ಹೀಲ್‌ಚೇರ್‌ ಆಶ್ರಯಿಸಿರುತ್ತಾರೆ.
ಅಣ್ಣ: ಅಜಿತ್‌ ತೆಂಡುಲ್ಕರ್‌. ತೆಂಡುಲ್ಕರ್‌ರನ್ನು ಕ್ರಿಕೆಟ್‌ನಲ್ಲಿ ಪ್ರೋತ್ಸಾಹಿಸಿದ್ದು, ಗುರು ರಮಾಕಾಂತ್‌ ಅಚೆÅàಕರ್‌ಗೆ ಪರಿಚಯಿಸಿದ್ದು ಇವರೇ.
ತಮ್ಮ, ತಂಗಿ: ನಿತಿನ್‌ ತೆಂಡುಲ್ಕರ್‌, ಸವಿತಾ ತೆಂಡುಲ್ಕರ್‌.
ರಮೇಶ್‌ ತೆಂಡುಲ್ಕರ್‌ ಅವರ ಎರಡನೇ ಪತ್ನಿ ರಜನಿಗೆ ಸಚಿನ್‌ ಹುಟ್ಟಿದರು. ಅಜಿತ್‌, ನಿತಿನ್‌, ಸವಿತಾ ಮೂವರು ರಮೇಶ್‌ ಅವರ ಮೊದಲ ಪತ್ನಿಯ ಮಕ್ಕಳು!
ಪತ್ನಿ: ಅಂಜಲಿ. ತೆಂಡುಲ್ಕರ್‌ಗಿಂತ 6 ವರ್ಷ ದೊಡ್ಡವರು. ಮಕ್ಕಳ ವೈದ್ಯೆ. ಗುಜರಾತ್‌ ಉದ್ಯಮಿಯೊಬ್ಬರ ಪುತ್ರಿ.
ಪುತ್ರ: ಅರ್ಜುನ್‌ಗೆ ಈಗ 14 ವರ್ಷ. ಭರವಸೆಯ ಕ್ರಿಕೆಟರ್‌ ಆಗುವ ಹಾದಿಯಲ್ಲಿ ದ್ದಾರೆ. ವೇಗದ ಬೌಲರ್‌, ಫೀಲ್ಡಿಂಗ್‌ ಇನ್ನೂ ಸುಧಾರಿಸಿಲ್ಲವೆನ್ನುತ್ತಾರೆ ಆಯ್ಕೆದಾರರು.
ಪುತ್ರಿ: ಸಾರಾ, ಈಕೆ ಅರ್ಜುನ್‌ ಅಕ್ಕ, 16 ವರ್ಷ, ಮುಂಬೈನ ಧೀರುಭಾಯ್‌ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಸಚಿನ್‌ ಇಷ್ಟಗಳು
ಮೈದಾನ ಸಿಡ್ನಿ
ಸಿನಿಮಾ ಕಮಿಂಗ್‌ ಟು ಅಮೆರಿಕ
ಸಂಗೀತ ಪಾಪ್‌
ಹವ್ಯಾಸ ಸಿಡಿಗಳ ಸಂಗ್ರಹ
ಕಾರು ಫೆರಾರಿ ಎನೊj, Ã Â²Â¬Ã Â²Â¿Ã Â²Å½Ã Â²â€šÃ Â²Â¡Ã Â³â€šÉ Ã Â²Å½Ã Â²â€¢Ã Â³ÂÃ Â²Â¸Ã Â³Â‌5
ನಟರು ಅಮಿತಾಭ್‌ ಬಚ್ಚನ್‌, ನಾನಾ ಪಾಟೇಕರ್‌
ನಟಿ ಮಾಧುರಿ ದೀಕ್ಷಿತ್‌
ಕ್ರಿಕೆಟಿಗರು ಗಾವಸ್ಕರ್‌, ವಿವಿಯನ್‌ ರಿಚರ್ಡ್ಸ್‌, ಇಮ್ರಾನ್‌ಖಾನ್‌ ಮತ್ತು ಸಂದೀಪ್‌ ಪಾಟೀಲ್‌
ಇತರೆ ಕ್ರೀಡಾಪಟುಗಳು ಮರಡೋನ, ಬೋರಿಸ್‌ ಬೆಕರ್‌
ಪಾನೀಯ ಕಿತ್ತಳೆ/ಸೇಬು ರಸ ಮತ್ತು ನೀರು
ಆಹಾರ ಸ್ಟೀಕ್‌ (ಮಾಂಸವನ್ನು ರೋಸ್ಟ್‌ ಮಾಡಿದ ಒಂದು ಬಗೆಯ ಆಹಾರ)
ಸ್ಮರಣೀಯ ನೆನಪು ಸ್ನೇಹಿತರ ಜತೆ ಹಾಡು ಕೇಳಿದ್ದು
ವಸ್ತ್ರ ಜಾಕೆಟ್‌ ಮತ್ತು ಟೈ, ಜೀನ್ಸ್‌ ಮತ್ತು ಟಿ-ಶರ್ಟ್‌
ಮ್ಯಾಗಜಿನ್‌ ನ್ಪೋರ್ಟ್ಸ್ಸ್ಟಾರ್‌
ಪತ್ರಿಕೆಗಳು ಟೈಮ್ಸ್‌ ಆಫ್‌ ಇಂಡಿಯಾ, ಮಿಡ್‌-ಡೇ, ಆಫ್ಟರ್‌ನೂನ್‌ ಡಿಸ್‌ಪ್ಯಾಚ್‌
ರೆಸ್ಟೋರೆಂಟ್‌ ಬುಖಾರಾ, ಮೌರ್ಯ ಶೆರ್ಟನ್‌
ರೆಸಾರ್ಟ್‌ ಯಾರ್ಕ್‌ಶೈರ್‌, ಹೆಡಿಂಗ್ಲೆ
ಹೋಟೆಲ್‌ ಪಾರ್ಕ್‌ ರಾಯಲ್‌ ಡಾರ್ಲಿಂಗ್‌ ಮತ್ತು ಸಿಡ್ನಿ
ಇತರೆ ಕ್ರೀಡೆ ಟೆನಿಸ್‌

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi hosts its first ever national level dragon b
View More

Now Open - Namma Minimart, Santhekatte - Kemmanunu Cross, - Call for Home Delivery 9611175167Now Open - Namma Minimart, Santhekatte - Kemmanunu Cross, - Call for Home Delivery 9611175167
Final Journey of Rosy Fernandes (85 years) | LIVE From KallianpuraFinal Journey of Rosy Fernandes (85 years) | LIVE From Kallianpura
Final Journey of Juliana Rodrigues (81 Years) | LIVE From ThottamFinal Journey of Juliana Rodrigues (81 Years) | LIVE From Thottam
Wee Care Play Home Badanidiyoor | 3rd Annual day CelebrationWee Care Play Home Badanidiyoor | 3rd Annual day Celebration
Lourdsachi Zar - December Issue from Our Lady of Lourdes church, Kanajar, Udupi.Lourdsachi Zar - December Issue from Our Lady of Lourdes church, Kanajar, Udupi.
Milarchi-Lara-from-Milagres-Cathedral-Kallianpur-January-2023-IssueMilarchi-Lara-from-Milagres-Cathedral-Kallianpur-January-2023-Issue
KPL Super League • Cricket | LIVE from KemmannuKPL Super League • Cricket | LIVE from Kemmannu
Milarchi Lara Bulletin - Monthi Fest Issue, September 2022Milarchi Lara Bulletin - Monthi Fest Issue, September 2022
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi