ಬಿಗ್‌ ಲೇಡಿ ಚಂದ್ರಿಕಾ


ಉದಯವಾಣಿ, 20-11-2013 08:38:49


Write Comment     |     E-Mail To a Friend     |     Facebook     |     Twitter     |     Print


ಸುಮಾರು ಎರಡು ದಶಕದ ಹಿಂದಿನ ಮಾತು. ಒಳ್ಳೇ ಹೈಟು, ಸಖತ್‌ ಪರ್ಸನಾಲಿಟಿ, ಆಗಿನ ಕಾಲದ ಪಡ್ಡೆಗಳ ಕನಸು ಕಂಗಳ ಚೆಲುವೆಯಾಕೆ. ಕನ್ನಡ ಚಿತ್ರರಂಗದ ಖ್ಯಾತನಟರೊಂದಿಗೆ ಮರಸುತ್ತಿದ ಬೆಡಗಿ. ಡಾ.ವಿಷ್ಣುವರ್ಧನ್‌, ಶಂಕರ್‌ನಾಗ್‌, ಅನಂತ್‌ನಾಗ್‌ ಹೀಗೆ ಒಂದಷ್ಟು ನಟರ ಜತೆ ಡ್ಯುಯೆಟ್‌ ಆಡಿದ್ದ ಅಪ್ಪಟ ಕನ್ನಡತಿ. ನಟಿಯಷ್ಟೇ ಅಲ್ಲ, ನಿರ್ಮಾಣಕ್ಕೂ ಇಳಿದು ನಿರ್ಮಾಪಕಿ ಎನಿಸಿಕೊಂಡಾಕೆ. ಕಳೆದ ಒಂದೂವರೆ ದಶಕಗಳಿಂದ ಕಲರ್‌ಫ‌ುಲ್‌ ಜಗತ್ತಿನಿಂದಲೇ ದೂರವಿದ್ದವಳು. ಈಗ ಇದ್ದಕ್ಕಿದ್ದಂತೆ ಸರ್ರನೆ ಸುದ್ದಿಯಾದವಳು. ಅದು ’ಬಿಗ್‌ಬಾಸ್‌’ ಎಂಬ ಬಿಗ್‌ ರಿಯಾಲಿಟಿ ಶೋ ಮೂಲಕ. ಆ ಬಿಗ್‌ಬಾಸ್‌ ಮನೆಯಲ್ಲಿ ಸದಾ ಹಾಟ್‌ ಆಗಿ ಕಣ್‌ಕುಕ್ಕುತ್ತಿದ್ದ ಬೆಡಗಿಯೆಂದರೆ ತಪ್ಪಿಲ್ಲ ಬಿಡಿ. ಅಂದಹಾಗೆ, ಆಕೆ ಬೇರಾರೂ ಅಲ್ಲ, ಒನ್‌ ಅÂಂಡ್‌ ಓನ್ಲಿ ಚಂದ್ರಿಕಾ. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ‌ಲ್ಲಿ ಮಿಂದೆದ್ದು, ಹದಿನಾಲ್ಕು ವರ್ಷ ಸಿನಿಜಗತ್ತಿನಿಂದಲೇ ದೂರ ಉಳಿದಿದ್ದ ಚಂದ್ರಿಕಾಗೆ ಮತ್ತೆ ಗುರುತಿಸಿಕೊಳ್ಳುವಂತೆ ಮಾಡಿದ್ದು ’ಬಿಗ್‌ಬಾಸ್‌’ ರಿಯಾಲಿಟಿ ಶೋ. ಚಂದ್ರಿಕಾ ಆ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕ ಇನ್ನಷ್ಟು ಸುದ್ದಿಯಾಗಿದ್ದಾರೆ. ಈಗ ಪುನಃ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಸಿನಿಮಾಗಳು ಮತ್ತು ನಿರ್ಮಾಣ ಯೋಜನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಒಂದಷ್ಟು ಪ್ರಶ್ನೆಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ. ಚಂದ್ರಿಕಾ ಜತೆಗಿನ ಒಂದಷ್ಟು ಮಾತುಕತೆ ...

* ’ಬಿಗ್‌ಬಾಸ್‌’ ಅನುಭವ ಹೇಗಿತ್ತು?
ನೈಸ್‌. ಅದನ್ನು ಜೀವನದಲ್ಲಿ ಮರೆಯುವಂತಿಲ್ಲ. ಅದೊಂಥರಾ ಹೊಸ ಅನುಭವ. ಅಲ್ಲಿ ಫೋನ್‌ ಇರಲಿಲ್ಲ. ಟಿವಿ ವ್ಯವಸ್ಥೆಯೂ ಇರಲಿಲ್ಲ. ನನಗೋ ಫೋನ್‌ ಇಲ್ಲವೆಂದರೆ, ಸಖತ್‌ ಬೋರು. ರಾತ್ರಿ ಮಲಗುವಾಗ ಟಿವಿ ನೋಡದಿದ್ದರೆ ಸಮಾಧಾನವಿರುತ್ತಿರಲಿಲ್ಲ. ಬೆಳಗ್ಗೆ ಏಳುವಾಗ ಟಿವಿ ನೋಡಿಯೇ ನಿತ್ಯದ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಆದರೆ, ಬಿಗ್‌ಬಾಸ್‌ ಮನೆಯಲ್ಲಿ ಅವೆಲ್ಲದ್ದಕ್ಕೂ ಬ್ರೇಕ್‌ ಬಿದ್ದಿತ್ತು. ಫ್ರೆಂಡ್ಸ್‌ ಜತೆ ಮಾತುಕತೆ ಇಲ್ಲ. ಮನಬಿಚ್ಚಿ ಮಾತಾಡಲು ಮನೆಯವರ್ಯಾರೂ ಅಲ್ಲಿರಲಿಲ್ಲ. ಜಗತ್ತೇ ದೂರವಾಗಿತ್ತು. ಆ ಮನೆಯಲ್ಲಿ ಹೇಗಿದ್ದರೂ ಭಯವಾಗುತ್ತಿತ್ತು. ಎಲ್ಲಾ ಕಡೆ ಕ್ಯಾಮೆರಾ ಕಣ್ಣುಗಳು. ಏನು ಮಾಡಿದರೂ ತಪ್ಪಾಗುತ್ತಾ ಅನ್ನೋ ಭಯವಿರುತ್ತಿತ್ತು. ಅಷ್ಟೂ ದಿನಗಳ ಕಾಲ ಅದೊಂದು ಬೇರೆಯದ್ದೇ ಜಗತ್ತಾಗಿತ್ತು. ನನ್ನ ಲೈಫ್ನಲ್ಲೊಂದು ಡಿಫ‌ರೆಂಟ್‌ ಅನುಭವ ಅಲ್ಲಾಯ್ತು. ಅಲ್ಲಿ ಎಲ್ಲವನ್ನೂ ಕಲಿತೆ ಅನ್ನುವುದಕ್ಕಿಂತ ರಿಯಲೈಸ್‌ ಆಯ್ತು. ಜೀವನದ ವ್ಯಾಲ್ಯು ಬಗ್ಗೆ ತಿಳಿದುಕೊಂಡೆ. ನಾನು ಯಾರು ಅನ್ನುವುದನ್ನು ಅರಿತುಕೊಳ್ಳಲು ಸಾಧ್ಯವಾಯ್ತು. ನಿಜವಾಗಲೂ ಆ ಮನೆಗೆ ಹೋಗಿದ್ದು ನನ್ನ ಅದೃಷ್ಟ ಅಂದುಕೊಳ್ತೀನಿ. ನನ್ನಂತಹ ಅದೃಷ್ಟವಂತೆ ಇಲ್ಲವೆಂದುಕೊಳ್ತೀನಿ.

* ’ಬಿಗ್‌ಬಾಸ್‌’ನಿಂದ ಪ್ಲಸ್‌ ಆಯೊ¤à, ಮೈನಸ್‌ ಆಯೊ¤à?
ನಿಜ ಹೇಳುವುದಾದರೆ, ನನಗೆ ಪ್ಲಸ್‌ ಪಾಯಿಂಟ್‌ ಆಗಿದ್ದೇ ಹೆಚ್ಚು. ತುಂಬಾ ವರ್ಷಗಳಿಂದಲೂ ನಾನು ಇಂಡಸ್ಟ್ರಿಯಿಂದ ಹೊರಗೆ ಇದ್ದೆ. ನಾನು ’ಬಿಗ್‌ಬಾಸ್‌’ಗೆ ಹೋಗ್ತಿàನಿ ಅನ್ನುವ ಯಾವುದೇ ಯೋಚನೆಯೂ ಇರಲಿಲ್ಲ. ಈಟಿವಿಯ ರಾಘವ್‌ ಅವರು ನೀವು ’ಬಿಗ್‌ಬಾಸ್‌’ ಸ್ಪರ್ಧಿ ಆಗಬೇಕು. ಬಿಗ್‌ಬಾಸ್‌ ಮನೆಗೆ ಬರಲೇಬೇಕು ಅಂತ ಬಹಳ ಫೋರ್ಸ್‌ ಮಾಡಿದರು. ಎಲ್ಲೋ ಒಂದು ಕಡೆ ನಾನು ಪಾಸಿಟಿವ್‌ ಆಗಿದ್ದೆ. ಎರಡು ದಿನ ಟೈಮ್‌ ತೆಗೆದುಕೊಂಡೆ. ನನ್ನ ಮಗ ಜತೆ ಮಾತನಾಡಿ, ’ಪುಟ್ಟ ’ಬಿಗ್‌ಬಾಸ್‌’ ರಿಯಾಲಿಟಿ ಶೋಗೆ ಅವಕಾಶ ಬಂದಿದೆ. ಏನ್ಮಾಡ್ಲಿ’ ಅಂತ ಕೇಳಿದೆ. ನನ್ನ ಮಗ ಹಿಂದೆ ಮುಂದೆ ನೋಡದೆ, ’ನೀನು ಹೋಗು ಮಮ್ಮಿ’ ಅಂತ ಹೇಳಿದ. ಎಂಟು ವರ್ಷದ ಮಗ ಹೇಳಿದ ಮೇಲೆ ನಾನೇಕೆ ಹೋಗಬಾರದು ಅಂದುಕೊಂಡು ಹೋದೆ. ಅಲ್ಲಿಗೆ ಹೋಗಿದ್ದು ನನಗೆ ಪ್ಲಸ್‌ ಆಯ್ತು. ನನ್ನನ್ನು ಮರೆತಿದ್ದ ಜನರು ಗುರುತಿಸುವಂತಾಯ್ತು. ಪುನಃ ಜನರು ನನ್ನ ಬಗ್ಗೆ ಮಾತಾಡಿಕೊಳ್ಳುವಂತಾಯ್ತು. ನಾನು ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಒಂದೊಂದು ಸಿನಿಮಾದಲ್ಲಿ ಒಂದೊಂದು ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅದು ತೆರೆಯ ಮೇಲೆ ಕಾಣಿಸಿಕೊಂಡ ರೀತಿ. ಆದರೆ, ಬಿಗ್‌ಬಾಸ್‌ ಮನೆಯಲ್ಲಿ ಕಂಡದ್ದು ರಿಯಲ್‌ ಚಂದ್ರಿಕಾ. ಅಲ್ಲಿ ವೈಯಕ್ತಿಕವಾಗಿ ಚಂದ್ರಿಕಾ ಹೇಗೆ ಅನ್ನೋದನ್ನು ತೋರಿಸಿಕೊಳ್ಳಲು ಸಾಧ್ಯವಾಯ್ತು. ಅಲ್ಟ್ರಾ ಪಾಸಿಟಿವ್‌ ಸಿಕು¤. ಯಾವ ನಟಿಗೂ ಸಿಗದಂತಹ ಅವಕಾಶ ನನ್ನ ಪಾಲಾಯ್ತು. ಅದನ್ನು ನೋಡಿದ ಅದೆಷ್ಟೋ ಜನ ನನ್ನನ್ನು ರಿಯಲ್‌ ಚಂದ್ರಿಕಾ ಇಷ್ಟ ಅಂತಾರೆ. ಹಾಗಾಗಿ ಅದೊಂದು Ã Â²Â²Ã Â²ÂµÃ Â²Â¿É Ã Â²â€¦Ã Â²Â¨Ã Â³ÂÃ Â²Â­Ã Â²Âµ. ಮೈನಸ್‌ ಮಾತೇ ಇಲ್ಲ. ಎಲ್ಲವೂ ಪ್ಲಸ್ಸೇ ಅನ್ನೋದಂತೂ ಹಂಡ್ರೆಡ್‌ ಪರ್ಸೆಂಟ್‌ ದಿಟ.

* ’ಬಿಗ್‌ಬಾಸ್‌’ನಲ್ಲಿ ಚಂದ್ರಿಕಾ ಒಂಥರಾ ಜಗಳಗಂಟಿ ಅಂತಾನೇ ಪ್ರೊಜೆಕ್ಟ್ ಆಗಿಬಿಟ್ಟಿದ್ದರಲ್ಲಾ?
ಇರಬಹುದು. ಇಲ್ಲದೆಯೂ ಇರಬಹುದು. ಆದರೆ, ಆ ಬಿಗ್‌ಬಾಸ್‌ ಮನೆಯಲ್ಲಿ ಫೋಕಸ್‌ ಆಗಿದ್ದನ್ನಷ್ಟೇ ನಂಬಿದರೆ ಹ್ಯಾಗೆ? ದಿನದ 24 ಗಂಟೆಗಳಲ್ಲಿ ನಡೆದ ಘಟನೆಯನ್ನು ಕೇವಲ ನಲವತ್ತೈದು ನಿಮಿಷಗಳಲ್ಲಿ ಮಾತ್ರ ತೋರಿಸಲಾಗುತ್ತಿತ್ತು. ಅದರಲ್ಲಿ ಎಷ್ಟು ಬೇಕೋ, ಏನು ಬೇಕೋ ಅದನ್ನಷ್ಟೇ ತೋರಿಸಲಾಗುತ್ತಿತ್ತು. ನಾನು ಜಗಳ ಆಡಿದ್ದಷ್ಟೇ ಹೈಲೈಟ್‌ ಆಗಿದೆ. ಆದರೆ, ಸಮಾಧಾನವಾಗಿ ಮಾತಾಡಿದ್ದು ಹೈಲೈಟ್‌ ಆಗಿಲ್ಲವೇಕೆ? ಒಂದು ಫ್ಯಾಮಿಲಿಯಲ್ಲಿ ಜಗಳ ಕಾಮನ್‌. ಅಂತಹ ಜಗಳ ಮತ್ತು ಸಣ್ಣಪುಟ್ಟ ತಪ್ಪುಗಳು ಬಿಗ್‌ಬಾಸ್‌ ಮನೆಯಲ್ಲೂ ನಡೆಯುತ್ತಿತ್ತು. ನಾನು ಎಷ್ಟೋ ಸಲ ಸಮಾಧಾನವಾಗಿಯೇ ಹೇಳಿದ್ದುಂಟು. ಅದಕ್ಕೂ ಮಾತು ಕೇಳದಿದ್ದ ಮೇಲೆ ಒಂದಷ್ಟು ಜೋರಾಗಿ ಹೇಳುತ್ತಿದ್ದೆ. ಜಗಳವನ್ನೂ ಮಾಡುತ್ತಿದ್ದೆ. ಅದನ್ನೇ ಜಗಳಗಂಟಿ ಅಂತ ಬಿಂಬಿಸಿದರೆ ಹೇಗೆ? ಆ ಮನೆಯಲ್ಲಿ ತಪ್ಪು ನಡೆದಾಗಿ ಸುಮಾರು ಹತ್ತು ಸಲ ಸಮಾಧಾನವಾಗಿ ಹೇಳಿದ್ದುಂಟು. ಹನ್ನೊಂದನೆ ಸಲ ಜಗಳ ಆಡಿದ್ದುಂಟು. ಜನರ ಮನಸ್ಸಿಗೆ ಅದು ಜಗಳಗಂಟಿ ಅನ್ನುವಂತಾಗಿದೆ. ಐದಾರು ವಾರಗಳು ಈ ರೀತಿ ಆಯ್ತು. ಆಮೇಲೆ ನಾನೇ ಸುಮ್ಮನಾಗಿಬಿಡುತ್ತಿದ್ದೆ. ನಾನು ಯಾರ ಮೇಲೂ ವೈಯಕ್ತಿಕವಾಗಿ ಜಗಳ ಆಡಿದ್ದಲ್ಲ. ಅದು ಟಾಸ್ಕ್ ಆಗಿರುತ್ತಿತ್ತು. ಅದರಂತೆ ನಾನು ನಡೆದುಕೊಳ್ಳುತ್ತಿದ್ದೆ ಅಷ್ಟೇ.

* ನಿಖೀತಾ ಕಂಡರೆ ಯಾಕೆ ಅಷ್ಟೊಂದು ಬೇಸರವಾಗುತ್ತಿತ್ತು?
ನೋಡಿ, ಐದು ಬೆರಳುಗಳು ಒಂದೇ ಸಮ ಇರೋದಿಲ್ಲ ತಾನೇ. ಒಂದು ಮನೆ ಅಂದಮೇಲೆ ಎಲ್ಲರೂ ಒಂದೇ ರೀತಿ ಇರೋಕ್ಕಾಗಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಮೆಂಟಾಲಿಟಿ ಇರುತ್ತೆ. ಬಿಗ್‌ಬಾಸ್‌ ಮನೆಯಲ್ಲೂ ಅದೇ ಆಯ್ತು. ಅಲ್ಲಿ ಬಂದವರೆಲ್ಲರೂ ಬೇರೆ ಬೇರೆ ಯೋಚನೆ ಮಾಡುತ್ತಿದ್ದವರು. ನಿಖೀತಾ ಕೂಡ ಅಷ್ಟೇ. ನಾನು ಮೊದಲಿನಿಂದಲೂ ತುಂಬಾ ಶಿಸ್ತು. ಅಶಿಸ್ತು ನನಗಾಲ್ಲ. ನಾನು ಬೆಳೆದು ಬಂದ ರೀತಿಯೇ ಹಾಗೆ. ನಿಖೀತಾ ಬೆಳೆದು ಬಂದ ರೀತಿಯೇ ಬೇರೆ. ನಾನು ಆ ಮನೆಯಲ್ಲಿ ಸದಾ ಕ್ಲೀನ್‌ ಮಾಡಿಕೊಂಡಿದ್ದರೂ, ನಿಖೀತಾ ಗಲೀಜು ಮಾಡಿಬಿಡುತ್ತಿದ್ದಳು. ಕ್ಲೀನ್‌ ಮಾಡು ಅಂತ ಹೇಳುತ್ತಿದ್ದಂತೆಯೇ ರೇಗಾಡುತ್ತಿದ್ದಳು. ನನಗೂ ಒಂದು ರೀತಿಯ ಬೇಸರ ಆಗುತ್ತಿತ್ತು. ಹಾಗಾಗಿ, ಆಕೆಯ ಮೇಲೆ ರೇಗಾಡುತ್ತಿದ್ದೆ. ಅವಳನ್ನೊಬ್ಬಳನ್ನು ಬಿಟ್ಟು, ಬೇರೆ ಯಾರೂ ಆ ಮನೆಯಲ್ಲಿ ಅಷ್ಟೊಂದು ಬೇಸರ ತರಿಸಿಲ್ಲ. ಹೀಗಾಗಿ ನಾನು ನಿಖೀತಾ ಕಂಡರೆ ತುಂಬಾ ಬೇಸರಿಸಿಕೊಳ್ಳುತ್ತಿದ್ದದ್ದು ನಿಜ.

* ಒಂದು ಹಂತದಲ್ಲಿ ನಿಮ್ಮ ಮಗ ಕೂಡ ನಿಮ್ಮ ಬಗ್ಗೆ ಬೇಸರಿಸಿಕೊಂಡಿದ್ದ. ಆ ಬಗ್ಗೆ ಏನಂತೀರಿ?
ಅವನಿಗೆ ಕೇವಲ ಎಂಟು ವರ್ಷವಷ್ಟೇ. ಪ್ರಶ್ನೆ ಕೇಳುವಾಗ ಏನು ಕೇಳಬೇಕು. ಅವನು ಆ ಪ್ರಶ್ನೆಗೆ ಉತ್ತರ ಕೊಡಬಲ್ಲನೆ ಅಂತ ತಿಳಿದುಕೊಳ್ಳಬೇಕಿತ್ತು. ದೊಡ್ಡವರಿಗೆ ಕೇಳುವಂತಹ ಪ್ರಶ್ನೆಯನ್ನು ಚಿಕ್ಕವರಿಗೆ ಕೇಳಿದರೆ ಹೇಗೆ? ನಿನ್ನಮ್ಮ ಸದಾ ಜಗಳವಾಡ್ತಾರಲ್ವಾ? ಅಂದಾಗ, ಆ ಮಗು ಹೌದು ಅಂತ ಹೇಳಿದೆ. ಅದು ಅವನ ತಪ್ಪಲ್ಲ. ಅಷ್ಟಕ್ಕೂ ಆ ಮಗುವಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗಿಲ್ಲ. ನಾನು ಬಿಗ್‌ಬಾಸ್‌ ಮನೆಯಿಂದ ಹೊರಬಂದ ಕೂಡಲೇ ಯಾಕೋ ಪುಟ್ಟ ಹಾಗೆ ಹೇಳಿದೆ ಅಂದಿದ್ದಕ್ಕೆ, ನನಗೇನೂ ಗೊತ್ತಿಲ್ಲ. ನಿಮ್ಮಮ್ಮ ಜಗಳ ಮಾಡುತ್ತಲ್ವಾ ಅಂದ್ರು. ನಾನು ಹೌದು ಅಂದೆ ಅಂತ ಮುಗ್ಧತೆಯಿಂದ ಹೇಳಿದ. ಮಗ ಏನೇ ಹೇಳಿದರೂ ನನಗೆ ಹೆಮ್ಮೆ. ಅವನು ನನ್ನನ್ನು ತುಂಬಾ ಪ್ರೀತಿ ಮಾಡ್ತಾನೆ. ನಾನೂ ಕೂಡ ಅಷ್ಟೇ. ನನ್ನ ಬಗ್ಗೆ ಅವನಿಗೆ ಗೊತ್ತಿದೆ. ಅಮ್ಮ ಎಂಥವಳೆಂದು. ಪ್ರಶ್ನೆ ಕೇಳುವ ರೀತಿ ಸರಿಯಾಗಿದ್ದರೆ ಹೀಗಾಗುತ್ತಿರಲಿಲ್ಲ.

* ನೀವು ಮತ್ತೂಂದು ದೊಡ್ಡ ಚಿತ್ರದ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡ್ತಾರೆ ಅಂತ ಎಲ್ಲರೂ ಭಾವಿಸಿರುವಾಗ, ಐಟಂ ಸಾಂಗ್‌ ಮೂಲಕ ಎಂಟ್ರಿ ಕೊಟ್ಟಿದ್ದು ಯಾಕೆ?
ನಾನೊಬ್ಬ ನಟಿ. ಎಲ್ಲಾ ತರಹದ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕು. ಇಂಥದ್ದೇ ಪಾತ್ರಗಳು ಬೇಕು ಅಂತ ಜೋತುಬೀಳಬಾರದು. ನಿಜ ಹೇಳ್ತೀನಿ. ನಾನು ’ಬಿಗ್‌ಬಾಸ್‌’ ಮನೆಯಿಂದ ಹೊರಬಂದಾಗ ಸಿಕ್ಕ ಪ್ರೀತಿ, ವಿಶ್ವಾಸ ಮೊದಲು ಸಿಕ್ಕಿರಲಿಲ್ಲ. ವಿಶೇಷವೆಂದರೆ, ನನಗೆ ಲೇಡಿಸ್‌ ಅಭಿಮಾನಿಗಳೇ ಜಾಸ್ತಿ. ಅದರಲ್ಲೂ ಮಕ್ಕಳ ಸಂಖ್ಯೆಯೇ ಹೆಚ್ಚು. ಇಷ್ಟೆಲ್ಲಾ ಪ್ರೀತಿ, ವಿಶ್ವಾಸ ಇದೆ ಅಂದ ಮೇಲೆ ರೀ ಎಂಟ್ರಿ ಕೊಡದಿದ್ದರೆ ಹೇಗೆ? ಅದು ಪಾತ್ರವೋ ಅಥವಾ ಸಾಂಗೋ ಅದು ಮುಖ್ಯ ಆಗೋದಿಲ್ಲ. ಬರೋದು ಮುಖ್ಯವಾಗುತ್ತೆ. ನಾನು ದೊಡ್ಡ ಪಾತ್ರದ ಮೂಲಕವೇ ರೀ ಎಂಟ್ರಿ ಕೊಡಬೇಕು ಅಂತ ಭಾವಿಸಿರಲಿಲ್ಲ. ಯಾವುದಾದರೂ ಸರಿ ಪಾತ್ರ ನನಗೆ ಸೂಟ್‌ ಆಗಬೇಕಷ್ಟೇ ಅಂದುಕೊಂಡಿದ್ದೆ. ಅದು ಸ್ಪೆಷಲ್‌ ಸಾಂಗ್‌ ಚೆನ್ನಾಗಿತ್ತು. ನನಗೂ ಡಾನ್ಸ್‌ ಅಂದ್ರೆ ತುಂಬಾನೇ ಇಷ್ಟ. ಒಪ್ಪಿಕೊಂಡೆ. ನಾನು ಓಪನ್‌ ಆಗಿದೀನಿ. ನನಗೆ ಆ ಪಾತ್ರ ಇಷ್ಟವಾಗಬೇಕು. ಬಿಡಬಾರದು ಅಂತೆನಿಸಬೇಕು. ಆಗ ಮಾತ್ರ ಒಪ್ಪಿಕೊಳ್ತೀನಿ. ಸದ್ಯಕ್ಕೆ ಅಂತಹ ಒಳ್ಳೆಯ ಪ್ರಯತ್ನದಲ್ಲಿದ್ದೇನೆ.

* ಈವರೆಗಿನ ವೃತ್ತಿಯ ಬಗ್ಗೆ ನಿಮ್ಮ ಅಭಿಪ್ರಾಯ?
ಸಿನಿಮಾ ಬಿಟ್ಟು ತುಂಬಾ ವರ್ಷಗಳೇ ಆಗಿವೆ. ಸಿನಿಮಾದಿಂದ ಹೊರಬಂದ ಬಳಿಕ ರಿಯಲ್‌ಎಸ್ಟೇಟ್‌ ಬ್ಯುಸಿನೆಸ್‌ಗಿಳಿದೆ. ಅಪಾರ್ಟ್‌ಮೆಂಟ್‌ ಕಂಟ್ರಕ್ಷನ್‌ ಶುರುಮಾಡಿದೆ. ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ. ಒಳ್ಳೆಯ ಬದುಕು ರೂಪಿಸಿಕೊಂಡಿದ್ದೇನೆ. ಸಿನಿಮಾ ಬಿಟ್ಟ ಬಳಿಕ ಒಂದಷ್ಟು ಏರುಪೇರಾದರೂ, ಲೈಫ್ಗೇನೂ ತೊಂದರೆ ಆಗಿಲ್ಲ. ಬಿಂದಾಸ್‌ ಆಗಿಯೇ ದಿನಗಳನ್ನು ಕಳೆದಿದ್ದೇನೆ. ’ಬಿಗ್‌ಬಾಸ್‌’ ನಂತರ ಪುನಃ ನಟನೆ ಬಗ್ಗೆ ಒಲವು ಮೂಡಿದೆ. ಇದುವರೆಗಿನ ವೃತ್ತಿ ಮೇಲೆ ನನಗೆ ಅತ್ಯಂತ ಹೆಮ್ಮೆ ಇದೆ. ಇಷ್ಟು ವರ್ಷಗಳ ಕಾಲವೂ ನಾನು ಎಂಜಾಯ್‌ ಮಾಡಿಕೊಂಡೇ ದಿನಗಳನ್ನು ಸವೆಸಿದ್ದೇನೆ. ಮುಂದೆಯೂ ಹಾಗೆಯೇ ಇರಿ¤àನಿ. ನಾನು ಮಾಡುವ ಕೆಲಸ ನನಗೆ ಇಷ್ಟವಾಗುತ್ತೆ. ಹಾಗಾಗಿಯೇ ನನ್ನ ವೃತ್ತಿ ಬಗ್ಗೆ ತೃಪ್ತಿ ಇದೆ.

* ಸುಮಾರು 20 ವರ್ಷಗಳ ಗ್ಯಾಪ್‌ನಲ್ಲಿ ಚಂದ್ರಿಕಾ ಹೇಗಿದ್ದರು? ಏನು ಮಾಡುತ್ತಿದ್ದರು?
ನಾನು ಕಳೆದ 14 ವರ್ಷಗಳಿಂದ ಇಂಡಸ್ಟ್ರಿಯಿಂದ ದೂರವಾಗಿದ್ದೇನೆ. ಫಿಜಿಕಲಿ ಚೇಂಜ್‌ ಆಗಿರಬಹುದು. ಆದರೆ, ಮೆಂಟಲಿ ಚೇಂಜ್‌ ಆಗಿಲ್ಲ. ಆಗ ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ತಾಳ್ಮೆಯಿಂದಲೇ ಬದುಕು ಸವೆಸುತ್ತಿದ್ದೇನೆ. ಮುಂದೆಯೂ ಹಾಗೆಯೇ ಇರುತ್ತೇನೆ. ಸಿನಿಮಾದಲ್ಲಿ ನಟನೆಯಾಯ್ತು. ನಿರ್ಮಾಣವಾಯ್ತು. ನಡುವೆ ಬ್ಯುಸಿನೆಸ್‌ ಶುರುಮಾಡಿದೆ. ನಂತರ ಬಿಗ್‌ಬಾಸ್‌ ಮನೆಗೆ ಹೋದೆ. ಈಗ ಪುನಃ ಸಿನಿಮಾ ಕಡೆ ಮುಖ ಮಾಡುತ್ತಿದ್ದೇನೆ. ಮುಂದೆ ಏನಾಗುತ್ತೋ ಅನ್ನೋ ಕುತೂಹಲ ನನಗೂ ಇದೆ.

* ನೀವು ಪ್ರೀತಿಯಿಂದ ನಿರ್ಮಿಸಿದ ’ಶ್ರೀ ನಾಗಶಕ್ತಿ’ ಯಶಸ್ಸು ಕಾಣಲಿಲ್ಲ. ಈ ಬಗ್ಗೆ?
ನಾನು ಸಿನಿಮಾರಂಗದಿಂದ ದೂರವಿದ್ದೆ. ಆದರೆ, ಮತ್ತೆ ಸಿನಿಮಾ ನಿರ್ಮಾಣ ಮಾಡೋಕೆ ಕಾರಣವಾಗಿದ್ದು ನಿರ್ದೇಶಕ ಓಂ ಸಾಯಿಪ್ರಕಾಶ್‌. ಅವರಿಗಾಗಿಯೇ ನಾನು ಆ ಸಿನಿಮಾ ನಿರ್ಮಿಸಿದೆ. ಇಂಡಸ್ಟ್ರಿ ಬಿಟ್ಟಾಗಿನಿಂದಲೂ ಅವರ ಜತೆ ಒಡನಾಟವಿಟ್ಟುಕೊಂಡಿದ್ದೇನೆ. ಅವರ ಪರಿಸ್ಥಿತಿ ನೋಡಿ, ಅವರಿಗಾಗಿಯೇ ನಿರ್ಮಿಸಿದ ಚಿತ್ರವದು. ನಾನು ಅವರಿಂದಲೇ ಈ ಸಿನಿಮಾ ಇಂಡಸ್ಟ್ರಿಗೆ ಬಂದವಳು. ಅವರೇ ನಾನೊಬ್ಬ ನಟಿಯಾಗಲು ಕಾರಣವಾಗಿದ್ದು, ಅವರ ಶಿಷ್ಯೆಯಾಗಿ, ಸಾಕು ಮಗಳಾಗಿ ಸಿನಿಮಾ ನಿರ್ಮಿಸಿದೆ. ಸಿನಿಮಾ ಯಶಸ್ಸು ಕಾಣಲಿಲ್ಲ ಅನ್ನೋದು ಮುಖ್ಯವಲ್ಲ. ಅದರಿಂದ ಅವರಿಗೆ ಎಷ್ಟು ಉಪಯೋಗವಾಯ್ತು ಅನ್ನೋದು ಮುಖ್ಯ. ಉಪಯೋಗವಾಗಿದೆ ಅಂದುಕೊಳ್ತೀನಿ. ಆ ಸಿನಿಮಾ ಬಳಿಕ ಅವರು ಚೇತರಿಸಿಕೊಂಡರಲ್ಲ ಅನ್ನೋದೇ ನನಗೆ ತೃಪ್ತಿ.

* ಹಾಗಾದರೆ ಚಂದ್ರಿಕಾ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಲು ರೆಡಿಯಾಗಿದ್ದಾರಾ?
ಖಂಡಿತವಾಗಲೂ ನಾನು ರೆಡಿಯಾಗಿದ್ದೇನೆ. ಆದರೆ, ಒಳ್ಳೆಯ ಕಥೆ ಮತ್ತು ಪಾತ್ರ ಬಂದರೆ ಮಾತ್ರ. ನಾನು ಮಿಡ್ಲ್ ಏಜ್‌ನವಳು. ನನಗೆ ಸೂಕ್ತ ಪಾತ್ರ ಬಂದರೆ ಬಿಡಲಾರೆ. ನನ್ನಿಂದ ನಿರ್ದೇಶಕರೂ ಒಳ್ಳೆಯ ಕೆಲಸ ತೆಗೆಸಬೇಕು. ಇಂಥದ್ದೇ ಪಾತ್ರ ಬೇಕು ಅಂತ ಕೇಳ್ಳೋದಿಲ್ಲ. ಅದು ನನಗೆ ಸರಿಹೊಂದುತ್ತಾ ಅನ್ನೋದೇ ಮುಖ್ಯ.

* ನಾಯಕಿಯಾಗಿದ್ದಾಗ ಹೆಚ್ಚು ಗ್ಲಾಮರಸ್‌ ರೋಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ, ಆದರೆ, ಇತ್ತೀಚಿನ ಹೊಸ ಫೋಟೋ ಶೂಟ್‌ ನೋಡಿದರೆ, ಚಂದ್ರಿಕಾ ಗ್ಲಾಮರಸ್‌ ಪಾತ್ರಕ್ಕೆ ಸೈ ಎನ್ನುವಂತಿದೆಯಲ್ಲಾ?
ಹಾಗೇನೂ ಇಲ್ಲ. ಆಗ ನಾನು ವಿಲೇಜ್‌ ಹುಡುಗಿಯಾಗಿಯೂ ಕಾಣಿಸಿಕೊಂಡಿದ್ದೇನೆ. ಗ್ಲಾಮರಸ್‌ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಅವತ್ತಿನ ಕಾಲಕ್ಕೆ ಬೋಲ್ಡ್‌ ಆಗಿಯೂ ಕಾಣಿಸಿಕೊಂಡಿದ್ದುಂಟು. ಇದರಲ್ಲಿ ಯಾವುದೇ ಚೇಂಜ ಇಲ್ಲ. ಫೋಟೋ ಶೂಟ್‌ ಕೇವಲ ಗ್ಲಾಮರಸ್‌ ಪಾತ್ರಕ್ಕಷ್ಟೇ ಅಲ್ಲ, ನಾನಿನ್ನೂ ಆ್ಯಕ್ಟೀವ್‌ ಆಗಿದ್ದೇನೆ ಅಂತ ತೋರಿಸಿಕೊಳ್ಳೋಕೆ!

* ಮುಂದಿನ ನಿಮ್ಮ ನಿರ್ಮಾಣದ ಯೋಚನೆಗಳು?
ಸಾಕಷ್ಟು ಕೆಲಸವಿದೆ. ನನ್ನ ಹೋಮ್‌ ಬ್ಯಾನರ್‌ನಲ್ಲಿ ಒಳ್ಳೆಯ ಸಿನಿಮಾ ನಿರ್ಮಿಸುವ ಯೋಚನೆ ಇದೆ. ಹೊಸಬರಿಗೆ ಅವಕಾಶ ಕೊಡ್ತೀನಿ. ಕಥೆ ಇಷ್ಟವಾಗಬೇಕು. ನಾನೂ ನಟಿಸೋಕೆ ರೆಡಿ. ಶ್ರೀದೇವಿ ನಟಿಸಿದ ’ಇಂಗ್ಲೀಷ್‌ ವಿಂಗ್ಲೀಷ್‌’ನಂತರಹ ಸಬೆjಕ್ಟ್ ಇದ್ದರೆ ಖಂಡಿತವಾಗಿಯೂ ಐ ಯಾಮ್‌ ರೆಡಿ.

* ನಿಮ್ಮ ಚಂದ್ರಿಕಾ ಹೌಸ್‌ ಕಥೆ ಏನಾಯ್ತು?
ಇಲ್ಲಿಯವರೆಗೂ ಚಂದ್ರಿಕಾ ಹೌಸ್‌ ಶೂಟಿಂಗ್‌ ಮನೆಯಾಗಿತ್ತು. ಇನ್ನು ಮುಂದೆ ಅದು ಶೂಟಿಂಗ್‌ ಮನೆ ಆಗಿರೋದಿಲ್ಲ. ಯಾಕೆಂದರೆ, ಅಲ್ಲಿ ಅಪಾರ್ಟ್‌ಮೆಂಟ್ಸ್‌ ಕಟ್ಟಿಸುತ್ತಿದ್ದೇನೆ. ರಾಜರಾಜೇಶ್ವರಿ ನಗರದಲ್ಲೊಂದು ಹೌಸ್‌ ಇದೆ. ಅದನ್ನು ಶೂಟಿಂಗ್‌ ಬಾಡಿಗೆ ಕೊಡುತ್ತಿದ್ದೇನೆ.

* ಬಿಗ್‌ಬಾಸ್‌ ಬಳಿಕ ಚಂದ್ರಿಕಾ ಫ‌ುಲ್‌ ಬ್ಯುಝಿನಾ?
ಅಷ್ಟೇನೂ ಇಲ್ಲ. ಆದರೆ, ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿರುವುದಂತೂ ನಿಜ.

* ಮಗನನ್ನೂ ಈ ಕಲರ್‌ಫ‌ುಲ್‌ ಜಗತ್ತಿಗೆ ಎಂಟ್ರಿ ಕೊಡಿಸುವ ಐಡಿಯಾ ಏನಾದ್ರೂ?
ನೋ ನೋ, ಅಂತಹ ಐಡಿಯಾಗಳೇನೂ ಇಲ್ಲ. ನಾನು ಅವನಿಗೆ ಒಳ್ಳೆಯ ಅಮ್ಮನಾಗಿ ಅವನಿಗೆ ಗುಡ್‌ ಎಜುಕೇಷನ್‌ ಕೊಡಿಸಿ, ಒಳ್ಳೆಯ ಮನುಷ್ಯನನ್ನಾಗಿ ಬೆಳೆಸೋದಷ್ಟೇ ನನ್ನ ಕೆಲಸ. ದೊಡ್ಡವನಾದ ಮೇಲೆ ಅದು ಅವನಿಷ್ಟ.

ಬರಹ: ವಿಜಯ್‌ ಭರಮಸಾಗರ

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Good Friday 2025 | St. Theresa Church, KemmannuGood Friday 2025 | St. Theresa Church, Kemmannu
Way of Cross | St. Theresa Church, KemmannuWay of Cross | St. Theresa Church, Kemmannu
Maundy Thursday | St. Theresa Church, KemmannuMaundy Thursday | St. Theresa Church, Kemmannu
Palm Sunday | St. Theresa Church, KemmannuPalm Sunday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Gregory D’Souza (79 years) | LIVE from KemmannuFinal Journey of Gregory D’Souza (79 years) | LIVE from Kemmannu
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Final Journey of Jacintha Serrao (66 years) | LIVE From SasthanFinal Journey of Jacintha Serrao (66 years) | LIVE From Sasthan
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್
Final Journey of Leo J. Crasto (97 years) | LIVE from Kemmannu, UdupiFinal Journey of Leo J. Crasto (97 years) | LIVE from Kemmannu, Udupi
Final Journey of Fedrick Lewis (67 years) | LIVE from SanthekatteFinal Journey of Fedrick Lewis (67 years) | LIVE from Santhekatte
Final Journey of Mr. Charles D’Souza (63 years) | LIVE from UdyavarFinal Journey of Mr. Charles D’Souza (63 years) | LIVE from Udyavar
Final Journey Of Richard Sequeira | Live From Barkur || Kemmannu channelFinal Journey Of Richard Sequeira | Live From Barkur || Kemmannu channel
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
0:24 / 2:30:40 NEW YEAR MASS 2025 | LIVE from Kemmannu | Diocese of Udupi0:24 / 2:30:40 NEW YEAR MASS 2025 | LIVE from Kemmannu | Diocese of Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi