ನನ್ನ ಸ್ನೇಹಿತರಲ್ಲಿ ನನ್ನದೊಂದು ಅರಿಕೆ.


Dear All :

Our Hon. Chief minister  Yedyurappa ji  has given the very good statement  in this video  clipping.

However  some sections  of the HINDU SOCIETY  are unhappy  with the CMs statement  and as per my few Hindu friends  CM is wrong  in supporting Muslim community.

I want to clarify here as below:

It is true that  TABLIGI  MARKAZ  prayer and gathering  was very very wrong  when Highest  HOLY places of  HINDUS,MUSLIMS & CHRISTIANS are closed .ie . TIRUPATI ,CABA-MECCA & VATICAN CHURCH 

At their  respective  countries  INDIA ,SAUDI ARABIBIA & ITALY.

Then MARKAZ PRAYER  has taken place is totally wrong  & against HUMANITY  when CARONA VIRUS  was on RAPID SPREADING  and STERN ACTION has to be taken by the respective state governments AT ANY COST.

It is true that there  are few Muslims  are playing ANTI HINDU CARD in INDIA  and in our own district  UNDIVIDED  DAKSHINA  KANNADA.

In turn few Hindus also started the  ANTI MUSLIM  statements and they are right  also.

But these things has to come to AN END  for the PEACE ,PROSPERITY  & PROGRESS of our districts, state and our India.

Hon.Yedyurappaji is  KING OF OUR STATE.

Once election  is fought  on certain IDEOLOGY  and same person becomes KING OF THE STATE  then for the KING all the HUMANS are equal  and the KING can’t discriminate  CAST ,CREED & RELIGION  for the total COMMUNAL HARMONY  and maintaining  LAW & ORDER of the state.

Although  LOT OF CRITICS for the PRO MUSLIM  STATEMENTS has been made against the RULING KING OF OUR STATE  , I Thonse Jayakrishna  Shetty  founder  of Jayashreekrishna  Parisara  premi  samiti  firmly  CONDEMN SUCH CRITICS on the  KING OF THE STATE by our hindu brothers .

At the same time our MUSLIM BROTHERS in our Undivided Dakshina  Kannada  also has to change their mindset  towards  HINDU’S for the  UNIVERSAL BROTHERHOOD.

I firmly say as a NON POLITICAL  PERSON & SOCIAL ACTIVIST  things are NOT GOING OK in our twin districts  as far as the COMMUNAL HARMONY  is considered.

I APPEAL  to the learned people  of all the communities  to come forward & give your positive  statements from time to time to come out of the above FACTS and to contribute to RESLOVE  the most DIFFICULT  BURNING FIRE.

My above FEARLESS statement  has to be accepted  by the people  of our districts  with POSITIVE  NOTE  for the betterment  of our districts for development  and growth  of our twin districts, state and in turn whole INDIA


In this difficult  time of CARONA  and CLOSE DOWN  I APPRECIATE  &  ADMIRE our Hon.chief minister  YEDYURAPPAJI. GOD BLESS U SIR .

My relatives  and friends  also don’t  feel bad about my above  statement  and it is MY PERSONAL  VIEWS ONLY.

THANKS TO ONE & ALL.
Thonse jayakrishna  Shetty

Founder  of  Jayashreekrishna  Parisara  premi  samiti.
Mumbai & undivided dakshina  kannada.

Date : 8.4.2020
Time  : 10.50 am.

ನನ್ನ ಸ್ನೇಹಿತರಲ್ಲಿ ನನ್ನದೊಂದು ಅರಿಕೆ.

ಈ ಮೇಲಿನ ವೀಡಿಯೋ ತುಣುಕೊಂದರಲ್ಲಿ ನಮ್ಮ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಉತ್ತಮ ಸಂದೇಶವೊಂದನ್ನು ನೀಡಿದ್ದಾರೆ. ಸಮಾಜದ ಶಾಂತಿ ಕಾಪಾಡುವ ಉದ್ದೇಶದಿಂದ ಜವಾಬ್ದಾರಿ ಸ್ಥಾನದಲ್ಲಿದ್ದು ಅದರಂತೆ ನಡೆದಿದ್ದಾರೆ.

ಆದರೆ ಹಿಂದೂ ಸಮಾಜದ ಕೆಲವರು ಮುಖ್ಯಮಂತ್ರಿಗಳ ಈ ಸಂದೇಶದಿಂದ ಅತೃಪ್ತರಾಗಿದ್ದಾರೆ. ಅಷ್ಟೇ ಅಲ್ಲ ನನ್ನ ಸ್ನೇಹಿತರಲ್ಲೂ ಕೆಲವರು ಮುಖ್ಯಮಂತ್ರಿಗಳು ಮುಸ್ಲಿಂ ಜನಾಂಗವನ್ನು ಬೆಂಬಲಿಸಿ ತಪ್ಪೆಸಗಿದ್ದಾರೆಂದೇ ಅಭಿಪ್ರಾಯ ಪಡುತ್ತಿದ್ದಾರೆ.

ಈ ಎಲ್ಲ ಚರ್ಚೆಗಳಿಗೆ ನಾನು ಈ ಕೆಳಗಿನಂತೆ ಸ್ಪಷ್ಟೀಕರಣವನ್ನು ನೀಡಲು ಬಯಸುತ್ತೇನೆ.

ಕೋವಿದ್ ೧೯ ವೈರಸ್ ಹರಡುವಿಕೆಯ ಭಯದಿಂದ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳು ಸೇರಿದಂತೆ ಎಲ್ಲಾ  ಧರ್ಮಗಳ ಪವಿತ್ರಕ್ಷೇತ್ರಗಳು ಬಾಗಿಲು ಮುಚ್ಚಿವೆ. ಅದು ತಿರುಪತಿಯೇ ಇರಲಿ, ಕಾಬಾ-ಮಕ್ಕಾ ಇರಲಿ ವ್ಯಾಟಿಕನ್ ಚರ್ಚ್ ಆಗಿರಲಿ ಎಲ್ಲ ಕಡೆಗಳಲ್ಲೂ ಭಕ್ತರಿಗೆ ಪ್ರಾರ್ಥನೆಯ ಅವಕಾಶವನ್ನು ನಿರ್ಬಂಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ  ತಬ್ಲಿಘಿ ಮರ್ಕಜ್ ಪ್ರಾರ್ಥನೆ ಹಾಗೂ ತಬ್ಲಿಘಿ ಧರ್ಮಗುರುಗಳ ಒಟ್ಟುಸೇರುವಿಕೆ ಖಂಡಿತವಾಗಿಯೂ ಅಕ್ಷಮ್ಯ ಅಪರಾಧ. ನಿಜವಾಗಿಯೂ ಇದು ಮಾನವತೆಯ ವಿರುದ್ಧ ನಡೆದ ದ್ರೋಹ.

ಈ ಕಾರ್ಯಕ್ರಮವನ್ನು ಸಂಯೋಜಿಸಿದವರ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಆಯಾ ರಾಜ್ಯಸರಕಾರಗಳು ಕಠಿನ ಕಾನೂನು ಕ್ರಮವನ್ನು ಕೈಗೊಳ್ಳಲೇ ಬೇಕು. ಅವರಿಂದಾಗಿ ವೈರಸ್ ಹರಡುವಿಕೆಯನ್ನು ತಡೆಯಲೇ ಬೇಕು.

ಇಷ್ಟೇ ಅಲ್ಲ ನಮ್ಮ ಕರಾವಳಿ ಜಿಲ್ಲೆಗಳೂ ಸೇರಿದಂತೆ ನಮ್ಮ ದೇಶದಲ್ಲಿ ಕೆಲವು ಮುಸ್ಲಿಮ್ ಬಾಂಧವರು ಹಿಂದೂಗಳ ವಿರುದ್ಧ ಸಂಚನ್ನು ಹೂಡುತ್ತಿರುವುದೂ ಸತ್ಯ. ಇದಕ್ಕೆ ಪ್ರತಿಕ್ರಿಯೆಯೆಂಬಂತೆ ಕೆಲವು ಹಿಂದೂ ಸಂಘಟನೆಗಳವರೂ ಮುಸ್ಲಿಂ ಸಮುದಾಯದ ವಿರುದ್ಧ ಚಟುವಟಿಕೆಗಳಲ್ಲಿ ನಿರತರಾಗಿರುವುದೂ ಅಷ್ಟೇ ಸತ್ಯ. ಎರಡೂ ಕೋಮುಗಳವರೂ ಅವರವರ ದೃಷ್ಟಿಯಲ್ಲಿ ಸರಿಯೇ ಆಗಿರುತ್ತಾರೆ. ತಮ್ಮನು ಸಮರ್ಥಿಸಿಕೊಳ್ಳುತ್ತಾರೆ.

ಆದರೆ ನಮ್ಮ ಜಿಲ್ಲೆಗಳ ಶಾಂತಿ, ಸಮೃದ್ಧಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಈ ಎಲ್ಲ ವೈಮನಸ್ಸುಗಳು, ಪರಸ್ಪರ ಆರೋಪ ಪ್ರತ್ಯಾರೋಪಗಳು ಒಂದು ಬಾರಿ ಕೊನೆಗೊಳ್ಳಲೇಬೇಕು. ಇದು ದೇಶದ ಶಾಂತಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದಲೂ ಅಗತ್ಯವೇ ಹೌದು. ಇಲ್ಲಿಯ ಜನರು ತಮ್ಮ ಜಾತಿ, ಕೋಮು, ಧರ್ಮ ಭೇದ ಮರೆತು ಪರಸ್ಪರ ಸಹಕಾರದಿಂದ ಒಗ್ಗಟ್ಟಿನಿಂದ ಬಾಳಬೇಕು.

ಗೌರವಾನ್ವಿತ ಯಡಿಯೂರಪ್ಪ ಅವರು ನಮ್ಮ ರಾಜ್ಯದ ರಾಜನಿದ್ದಂತೆ.

ಚುನಾವಣೆಯಲ್ಲಿ ಒಂದು ಸಿದ್ಧಾಂತದ ಆಧಾರದ ಹಿನ್ನೆಲೆಯಲ್ಲಿ ಸ್ಪರ್ಧಿಸಿ ಗೆದ್ದು ಆಡಳಿತದ ಚುಕ್ಕಾಣಿ ಹಿಡಿದರೂ ರಾಜ್ಯದ ಮುಖ್ಯಸ್ಥನಾದ ಮೇಲೆ ಅವನಿಗೆ ರಾಜ್ಯದ ಎಲ್ಲ ಪ್ರಜೆಗಳೂ ಸಮಾನರು. ರಾಜನಾದವನು ಪ್ರಜೆಗಳ ಜಾತಿ, ಮತ, ಧರ್ಮಗಳ ಆಧಾರದಲ್ಲಿ ಭೇದಭಾವ ತೋರುವಂತಿಲ್ಲ. ಸಮಾಜದಲ್ಲಿ ಕೋಮುಸೌಹಾರ್ದತೆ-ಮತೀಯ ಸೌಹಾರ್ದತೆಯನ್ನು ಕಾಪಾಡುವುದು, ಶಾಂತಿಯನ್ನು ಕಾಪಾಡುವುದು ಆತನ ಹೊಣೆಯಾಗಿರುತ್ತದೆ.

ಮಾನ್ಯ ಮುಖ್ಯಮಂತ್ರಿಯವರು ಮುಸ್ಲಿಮರ ಪರವಾಗಿ ನೀಡಿದ್ದಾರೆಂದು ಹೇಳುವ ಹೇಳಿಕೆಗಳು ರಾಜ್ಯದ ನಾಯಕನಾಗಿ ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಂತಿ ಕಾಪಾಡುವ ದೃಷ್ಟಿಯಿಂದ ನೀಡಿದ ಹೇಳಿಕೆಗಳೇ ಹೊರತು ಒಂದು ಕೋಮಿನ ಜನರ ಓಲೈಕೆಗಾಗಿ ನೀಡಿದವುಗಳಲ್ಲ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಖ್ಯಸ್ಥನಾದ ನಾನು ಮುಖ್ಯಮಂತ್ರಿಗಳ ವಿರುದ್ಧದ ಟೀಕೆ-ಟಿಪ್ಪಣಿಗಳನ್ನು ಬಲವಾಗಿ ಖಂಡಿಸುತ್ತೇನೆ.

ಇದೇ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ಮುಸ್ಲಿಂ ಸಹೋದರರಲ್ಲಿ ಒಂದು ವಿನಂತಿ. ದಯವಿಟ್ಟು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಹಿಂದೂ ಸಮಾಜದವರೊಂದಿಗೆ ಸಹೋದರಭಾವವನ್ನು ಬೆಳೆಸಿಕೊಳ್ಳಿ.

ನಾನೊಬ್ಬ ರಾಜಕೀಯೇತರ ವ್ಯಕ್ತಿಯಾಗಿ ಸಮಾಜದ ಮೇಲಿನ ಕಳಕಳಿಯಿಂದ ಹೇಳುತ್ತಿರುವುದೇನೆಂದರೆ ನಮ್ಮ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯ ದೃಷ್ಟಿಯಿಂದ ಗಮನಿಸಿದರೆ ಎಲ್ಲವೂ ಸರಿಯಿಲ್ಲ ಎಂಬುದು ಸುಸ್ಪಷ್ಟ. ಬೂದಿ ಮುಚ್ಚಿದ ಕೆಂಡದಂತೆ ಹೊರಗಿಂದ ತಣ್ಣಗಿದ್ದರೂ ಒಳಗಿಂದ ಬಿಸಿ ಆರಿರುವುದಿಲ್ಲ.

ಹಾಗಾಗಿ ಸಮಾಜದ ಎಲ್ಲ ಮತಗಳವರಲ್ಲಿ ನನ್ನ ಕೋರಿಕೆ ಏನೆಂದರೆ ದಯವಿಟ್ಟು ಎಲ್ಲರೂ ತಾವಾಗಿ ಮುಂದೆ ಬಂದು ಸಕಾರಾತ್ಮಕ ಹೇಳಿಕೆಗಳನ್ನು ನೀಡಿ. ಅವಶ್ಯ ಬಿದ್ದಲ್ಲಿ ದನಿಯೆತ್ತಿ. ಒಳಗಿಂದೊಳಗೇ ಕುದಿಯುತ್ತಿರುವ ಅಗ್ನಿಯನ್ನು ತಣ್ಣಗಾಗಿಸುವ ಪ್ರಯತ್ನವನ್ನು ಮಾಡಿ.

ನನ್ನ ಈ ಮೇಲಿನ ನಿರ್ಭೀತ ಹೇಳಿಕೆಗಳು ಎರಡೂ ಜಿಲ್ಲೆಗಳ ಸಮೃದ್ಧಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಹೇಳಿದವುಗಳು ಹಾಗೂ ಇದನ್ನು ಸಕಾರಾತ್ಮಕ ದೃಷ್ಟಿಯಿಂದಲೇ ಸ್ವೀಕರಿಸಬೇಕು ಎಂಬುದು ನನ್ನ ಕೋರಿಕೆ.

ಈ ಕೊರೋನ ವೈರಸ್‌ನ ಹರಡುವಿಕೆಯ ಭೀತಿ ಹಾಗೂ ಲಾಕ್‌ಡೌನ್‌ನ ಕಠಿನ ಪರಿಸ್ಥಿತಿಯಲ್ಲಿ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ನಮ್ಮ ಮುಖ್ಯಮಂತ್ರಿಗಳ ಶ್ರಮ ಶ್ಲಾಘನೀಯ ಹಾಗೂ ಅವರ ನಡೆಯನ್ನು ನಾನು ಬೆಂಬಲಿಸುತ್ತೇನೆ. ಭಗವಂತನು ನಿಮಗೆ ಶ್ರೇಯಸ್ಸನ್ನುಂಟುಮಾಡಲಿ ಸರ್.

ಮೇಲಿನ ಎಲ್ಲಾ ಹೇಳಿಕೆಗಳು ನನ್ನ ವೈಯಕ್ತಿಕ ನೆಲೆಯವು ಹಾಗೂ ನನ್ನ ಎಲ್ಲ ಮಾತುಗಳಿಗೂ ನಾನು ಬದ್ಧನಾಗಿದ್ದೇನೆ.

ಎಲ್ಲರಿಗೂ ಧನ್ಯವಾದಗಳು. ನನ್ನ ಚಿಂತನೆ ದೋಷಪೂರಿತವೆನಿಸಿದರೆ ನನಗೆ ತಿಳಿಸಿ. ಹೌದೆನ್ನಿಸಿದರೆ ತಿದ್ದಿಕೊಳ್ಳಲು ನಾನು ಸಿದ್ಧನಿದ್ದೇನೆ.

ತಮ್ಮ ಪ್ರೀತಿಯ

- ತೋನ್ಸೆ ಜಯಕೃಷ್ಣ ಶೆಟ್ಟಿ

ಸ್ಥಾಪಕರು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
ಮುಂಬಯಿ ಮತ್ತು ಅವಿಭಜಿತ ದಕ್ಷಿಣ ಕನ್ನಡ
8-4-2020

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.

The drinking water for Udupi ??
View More

Obituary: Dennis Joseph Dsouza (72), Mount Rosary, KallianpurObituary: Dennis Joseph Dsouza (72), Mount Rosary, Kallianpur
Veez Konkani Issue # 130Veez Konkani Issue # 130
A Letter to CM Yediyurappa from Jaya Shreekrishna Parisara Premi SamitiA Letter to CM Yediyurappa from Jaya Shreekrishna Parisara Premi Samiti
Udupi BasketUdupi Basket
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Smparka Feb 2020Smparka Feb 2020
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Kemmann.com Face Book

Click here for Kemmannu Knn Facebook Link

Sponsored Albums