R.N Utchil, Our Great Athletic Legend


Rons Bantwal
Kemmannu News Network, 25-01-2018 19:46:30


Write Comment     |     E-Mail To a Friend     |     Facebook     |     Twitter     |     Print


R.N Utchil, Our Great Athletic Legend

He was the Legend, R.N.Utchil, who shown like a star, in the Indian Athletic field, during the earlier decades of the last century. Present year is the birth centenary year of this great athlete from Mumbai, who held his ranks for fourteen long years and created wonderful records in the athletic field.

Born in Mangalore, on the 6th of October, 1916, R.N.Utchil took to athletics with the ease of fish swimming in the waters. Though he part took in sports, successfully during his school and college days, he earned his fame, when he participated in an open event, in Bombay, in the year, 1938. Then on, Mr. Utchil’s name was always seen in the cover pages of news papers, throughout his athletic career.

1940, turned out to mark his achievements, when he covered his favorite distance of 800 meters, in 2 minutes and 1 second, creating a Record and this Record remained unbeaten for the next 8 years.  It was his own pupil,  Benson Proud foot ,who  broke this Record after 8 long years.  Mr. Utchil’s achievement and success, reached its peak, in the year, 1945. It was a memorable year, marking his great feat, when he covered the distance of 400 Meters in  50 .2 seconds. This Record stood unbeaten for many successive years.

From 1938 to 1951, Mr. R.N.Utchil was active in the Bombay Athletic team and was chosen Captian of the Team in 1942. He led the Team in the All India Games, held in Ludhiana, in the year 1951.  He also represented India, in the Indo–Cylone Meet, held at Cylone and Bangalore

Mr. Utchil had read widely and had a great knowledge of Athletics and was rightly called the Walking Encyclopedia of Athletics. All his contemporary athletes had gained wide knowledge from him and were indebted to him for his valuable advice in the field. They had all learnt a lot from this great teacher. Budding athletes all gathered round him for his teachings and training by him. He happily took up the responsibility of being a Coach for the students of Grant Medical College and Siddhartha College. He wished that the boys and girls of Bombay may do something worthwhile for the nation. Just as he taught his students to march towards success, he also taught them to regard success and failure in the same light.  He also had the responsibility of training the University team in athletics.

Mr. R.N.Utchil was always seen at Athletics Meets either as a competitor or as an active member. He rejoiced in teaching others whatever he knew concerning Athletics. He had a wide knowledge in this respect. Being well versed in the style and technique of the   game he knew by heart all the Records established so far in the field.

 

Mr. Utchil led a happy contented life with his wife Sheela R.Utchil and little Raja, his three year old  son at Zaveri Nivas, near Opera House. Who ever dreamt that this vibrant life would come to an end so soon? He was seen as a spectator at the Annual Athletics Meet of the Tata Sports Club at the Brebourne Stadium. Affected by a severe attack  of Typhoid, the year before, he still maintained his enthusiasm in life. When the Bombay Presidency Olympic Association, failed to conduct the Olympic Meet, Mr. Utchil, along with his comrades, established the Olympic Athletes Union and held the Olympic Athletic Meet successfully.

On the morn of 9th March 1952, Mr. Utchil suffered an ache in his chest. But he did not give much importance to it and went on with his routine as usual. While at a game of Carrom, with his neighbors after lunch, he suddenly felt sick.  Due to severe pain in the chest, he fell unconscious. The family doctor tried to revive him with injections, but in vain and Mr. Utchil breathed his last.   

The sudden departure of this great athlete was reported as an irreversible loss to the field of athletics by all newspapers that day.   A great soul who loved athletics with all his heart, who could speak on athletics authoritatively, who rendered his knowledge to one and all freely, had suddenly departed to the unknown world.  When the sudden death was announced at the Tata Sports Meet at the Brebourne Stadium, it was received with utter shock and grief.   Gloom and despair hung heavy on the hearts of his followers and a great number of athletes and fans attended the legend’s last journey. The body was draped with the National colours and accompanied with a large number of mourners, and people who came to pay their last respects, left the residence at 9 P.M.. He was a real great soul who dedicated his life to the sports he loved and to the honor of the nation.  The Jai Hind Sports Club, has been conducting the R.N.Utchil Memorial Sports Meet, in his memory in Mumbai, every year, paying due homage to the great legend .  

It is only apt that the present generation should know the legend born a century ago and created history in the field of athletics in Mumbai.

ಮಂಗಳೂರುನಲ್ಲಿ ಜನಿಸಿ ಭಾರತೀಯ ಕ್ರೀಡಾಂಗಣ ಬೆಳಗಿದ ಅಂತರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ಆರ್.ಎನ್ ಉಚ್ಚಿಲ್

ಮುಂಬಯಿ, ಜ.15: ಕರ್ನಾಟಕದ ಮಂಗಳೂರುನಲ್ಲಿ 1916ರ ಅಕ್ಟೋಬರ್ 6ರಂದು ಜನಿಸಿದ ಆರ್.ಎನ್.ಉಚ್ಚಿಲ್ ಕಳೆದ ಶತಮಾನದ ಮೂವತ್ತು ನಲ್ವತ್ತರ ದಶಕದಲ್ಲಿ ಭಾರತದ ಅಥ್ಲೆಟಿಕ್ಸ್ ರಂಗದಲ್ಲಿ ಮಿಂಚಿದ ತಾರೆ. ಮುಂಬಯಿನ  ಅಥ್ಲೀಟ್. ಕ್ರೀಡಾರಂಗದ ಮಿನುಗುತಾರೆಯಾಗಿ ರಾಷ್ಟ್ರಕಂಡ  ಅಪ್ರತಿಮ ಓಟಗಾರನ ಜನ್ಮಶತಮಾನೋತ್ಸವ ವರ್ಷವಿದು. ಹದಿನಾಲ್ಕು ವರ್ಷಗಳ ಕಾಲ ಮುಂಬಯಿ ಕ್ರೀಡಾರಂಗದ ಮುಂಚೂಣಿಯಲ್ಲಿದ್ದು, ಅದ್ಭುತ ಸಾಮಥ್ರ್ಯವನ್ನು ಮೆರೆದವರವರು.

ಆರ್.ಎನ್.ಉಚ್ಚಿಲ್ ನೀರಿನಲ್ಲಿ ಈಜುವ ಮೀನಿನಷ್ಟೇ ಸಹಜವಾಗಿ ಅಥ್ಲೆಟಿಕ್ ಕ್ಷೇತ್ರವನ್ನು ಹೊಕ್ಕವರು. ಶಾಲಾ, ಕಾಲೇಜ್ ದಿನಗಳಲ್ಲೇ ಓಟದ ಸ್ಪರ್ಧೆಗಳಲ್ಲಿ ಮಿಂಚಿದರೂ, ಅವರು ಪ್ರಸಿಧ್ಧಿಗೆ ಬಂದುದು, 1938ರಲ್ಲಿ ತಾನು ಮುಂಬೈಯಲ್ಲಿ ಭಾಗವಹಿಸಿದ ಮುಕ್ತ ಸ್ಪರ್ಧೆಯೊಂದರಲ್ಲಿ. ಅಂದಿನಿಂದ ಸದಾ ಪತ್ರಿಕೆಗಳ ತಲೆಬರಹದಲ್ಲಿ ಅವರ ಹೆಸರು ಕಾಣಿಸಿ ಕೊಳ್ಳುತ್ತಿತ್ತು.1940 ಅವರ ಕ್ರೀಡಾ ಜೀವನದ ಪರ್ವಕಾಲ. ತಮಗೆ ಪ್ರಿಯವಾದ 800 ಮೀಟರ್ ಓಟದ ಸ್ಪರ್ಧೆಯಲ್ಲಿ 2 ನಿಮಿಷ, 1 ಸೆಕೆಂಡಿನ ವಿಜಯದ ದಾಖಲೆಯನ್ನು ನಿರ್ಮಿಸಿ ಬೆಳಗಿದ ಉಚ್ಚಿಲ್‍ರ ಸಾಧನೆ, ಎಂಟು ವರ್ಷಗಳುದ್ದಕ್ಕೂ ಅಜೇಯವಾಗಿತ್ತು. ಅದನ್ನು ಮತ್ತೆ ಮುರಿದವರು, ಅವರ ಪ್ರಿಯ ಶಿಷ್ಯನೇ ಆದ ಬೆನ್ಸನ್ ಪ್ರೌಡ್‍ಫೂಟ್ ಅವರು.

1945ರಲ್ಲಿ ಓಟದ ಸ್ಪರ್ಧೆಯಲ್ಲಿ ಉಚ್ಚಿಲ್‍ರ ಸಾಧನೆ ಹಾಗೂ ಯಶಸ್ಸು, ಅವರ ಪಾಲಿಗೆ ಶಿಖರಪ್ರಾಯವಾಗಿ ತ್ತು. ಆ ಸ್ಮರಣೀಯ ವರ್ಷ, 400 ಮೀಟರ್ ಓಟವನ್ನು 20.2 ಸೆಕೆಂಡ್‍ಗಳಲ್ಲಿ ಕ್ರಮಿಸಿ ಅವರು ಸ್ಥಾಪಿಸಿದ ದಾಖಲೆ, ಸಾಧಿಸಿದ ಯಶಸ್ಸು, ಹಲವು ವರ್ಷಗಳ ವರೆಗೆ ಅಬಾಧಿತವಾಗಿತ್ತು. 1938ರಿಂದ 1951ರ ವರೆಗೆ ಬಾಂಬೆ ತಂಡದಲ್ಲಿ ಸಕ್ರಿಯರಾಗಿದ್ದ ಆರ್‍ಎನ್‍ಯು 1942ರಲ್ಲಿ ತಂಡದ ಕ್ಯಾಪ್ಟನ್ ಆಗಿ ಚುನಾಯಿತರಾದಂತೆ, 1951ರಲ್ಲಿ ಲೂಧಿಯಾನಾದಲ್ಲಿ ನಡೆದ ಆಲ್-ಇಂಡಿಯಾ ಗೇಮ್ಸ್‍ನಲ್ಲೂ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದರು. ಹಾಗೂ ಸಿಲೋನ್ ಮತ್ತು ಬೆಂಗಳೂರಲ್ಲಿ ನಡೆದ ಇಂಡೋ-ಸಿಲೋನ್ ಮೀಟ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದರು.

ಅಥ್ಲೆಟಿಕ್ಸ್ ಬಗ್ಗೆ ಬಹಳಷ್ಟು ಅಧ್ಯಯನಗೈದು ಎಲ್ಲವನ್ನೂ ಅರಿತಿದ್ದ ಉಚ್ಚಿಲ್‍ರನ್ನು ಅಥ್ಲೆಟಿಕ್ಸ್‍ನ ವಾಕಿಂಗ್ ಎನ್ಸೈಕ್ಲೊಪೀಡಿಯಾ ಎಂದೇ ಹೇಳಲಾಗುತ್ತಿತ್ತು. ನಗರದ ಸಮಕಾಲೀನ ಅಥ್ಲೀಟ್ಸ್‍ಗಳೆಲ್ಲ ಅವರಿಂದ ಪಡೆವ ಸಲಹೆ, ಸೂಚನೆಗಳಿಗಾಗಿ ಅವರಿಗೆ ಆಭಾರಿ  ಆಗಿದ್ದರು. ಎಲ್ಲರೂ ಈ ಗುರುವಿನಿಂದ ಕಲಿತವರೇ ಆಗಿದ್ದರು. ಅವರ ಉಚಿತ ಸಲಹೆ ಪಡೆಯಲು ಸಾಧನೆಯ ಹಾದಿಯಲ್ಲಿದ್ದ ಕ್ರೀಡಾಳುಗಳು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದರು.

ಗ್ರಾಂಟ್ ಮೆಡಿಕಲ್ ಕಾಲೇಜ್ ಮತ್ತು ಸಿಧ್ಧಾರ್ಥ ಕಾಲೇಜ್ ವಿದ್ಯಾರ್ಥಿಗಳಿಗೆ ಕೋಚ್ ಆಗಿ ಹೋಗುವ ಪ್ರಸ್ತಾಪವನ್ನು ಸಂತೋಷದಿಂದಲೇ ಸ್ವೀಕರಿಸಿದ ಆರ್.ಎನ್.ಉಚ್ಚಿಲ್ ಅವರು, ಬಾಂಬೆ ಹುಡುಗ, ಹುಡುಗಿಯರು ದೇಶಕ್ಕಾಗಿ ಏನಾದರೂ ಮಾಡುವಂತಾಗಲೆಂದೇ ಬಯಸಿದ್ದರು. ವಿಜಯದೆಡೆಗೆ ಸಾಗುವುÀದನ್ನು ಕ್ರೀಡಾಕಾಂಕ್ಷಿಗಳಿಗೆ ಕಲಿಸಿದಂತೆಯೇ, ಸೋಲುಗೆಲುವುಗಳನ್ನು ಸಮಾನವಾಗಿ ಕಾಣುವ ಮಾರ್ಗವನ್ನೂ ಬೋಧಿಸಿದವರವರು. ಯೂನಿವರ್ಸಿಟಿ ತಂಡವನ್ನು ತರಬೇತುಗೊಳಿಸುವ ಹೊಣೆಯೂ ಅವರ ಮೇಲಿತ್ತು.

ಅಥ್ಲೆಟಿಕ್ ಕೂಟಗಳಲೆಲ್ಲ ಸ್ಪರ್ಧಾಳುವಾಗಿಯೋ, ಇಲ್ಲಾ, ಕಾರ್ಯಕರ್ತರಾಗಿಯೋ ಕಾಣಿಸಿ ಕೊಳ್ಳುತ್ತಿದ್ದವರು, ಆರ್.ಎನ್.ಉಚ್ಚಿಲ್ ಅವರು. ಅಥ್ಲೆಟಿಕ್ಸ್‍ನಲ್ಲಿ ತಾನರಿತಿದ್ದುದನ್ನು ಇತರರಿಗೆ ಕಲಿಸುವುದು ಅವರ ನೆಚ್ಚಿನ ಕಾಯಕವಾಗಿತ್ತು. ಈ ದಿಸೆಯಲ್ಲಿ ಅವರ ಜ್ಞಾನವೂ ಅಪಾರವಾಗಿತ್ತು. ಓಟದ ಶೈಲಿ, ತಂತ್ರಗಳಲ್ಲಿ ಪಾರಂಗತರಾದ ಅವರಿಗೆ, ಇದುವರೆಗೆ ಲೋಕದಲ್ಲಿ ಸ್ಥಾಪಿತವಾದ ಎಲ್ಲ ದಾಖಲೆಗಳೂ ಕಂಠಸ್ಥವಿದ್ದುವು.

ಒಪೆರಾ ಹೌಸ್‍ನ ಝವೇರಿ ನಿವಾಸದಲ್ಲಿ ಪತ್ನಿ ಶೀಲಾ ಹಾಗೂ ಮೂರು ವರ್ಷದ ಎಳೆಯ ಮಗು ರಾಜನೊಡನೆ ಸುಖ ಸಂಸಾರ ನಡೆಸಿದ್ದ ಆರ್.ಎನ್.ಉಚ್ಚಿಲ್‍ರ ಯಶಸ್ವೀ ಜೀವನ ಮೂವತ್ತೈದರ ಎಳೆ ಹರೆಯದಲ್ಲೇ ಕೊನೆಗಾಣುವುದೆಂದು ಯಾರು ಅರಿತಿದ್ದರು? ಹಿಂದಿನ ದಿನ ಬ್ರೆಬೋರ್ನ್ ಸ್ಟೇಡಿಯಮ್‍ನಲ್ಲಿ ಟಾಟಾ ಸ್ಪೋಟ್ರ್ಸ್ ಕ್ಲಬ್‍ನ ವಾರ್ಷಿಕ ಅಥ್ಲೆಟಿಕ್ ಮೀಟ್‍ನಲ್ಲಿ ಪ್ರೇಕ್ಷಕರಾಗಿ ಅವರಿದ್ದರು.

ವರ್ಷದ ಹಿಂದೆ ಅವರನ್ನು ತೀವ್ರವಾಗಿ ಬಾಧಿಸಿದ ಟೈಫಾಯಿಡ್, ಅವರನ್ನು ಹಣ್ಣಾಗಿಸಿತ್ತು. ಆದರೂ ಜೀವನದಲ್ಲಿನ ಎಂದಿನ ಉತ್ಸಾಹವನ್ನು ಅವರು ಕಳಕೊಂಡಿರಲಿಲ್ಲ. ಬಾಂಬೆ ಪ್ರೆಸಿಡೆನ್ಸಿ ಒಲಿಂಪಿಕ್ ಅಸೋಸಿಯೇಶನ್, ಒಲಿಂಪಿಕ್ ಗೇಮ್ಸ್ ಏರ್ಪಡಿಸುವಲ್ಲಿ ವಿಫಲವಾದಾಗ, ಸಹವರ್ತಿಗಳೊಡನೆ ಒಲಿಂಪಿಕ್ ಅಥ್ಲೀಟ್ಸ್ ಯೂನಿಯನ್ ಸ್ಥಾಪಿಸಿ, ಒಲಿಂಪಿಕ್ ಯೂನಿಯನ್‍ನ ಅಥ್ಲೆಟಿಕ್ ಮೀಟ್ ಹಮ್ಮಿಕೊಂಡ ಉತ್ಸಾಹಿ.
1952 ಮಾರ್ಚ್ 9ರ ರವಿವಾರ ಬೆಳಿಗ್ಗೆ, ಉಚ್ಚಿಲ್ ಅವರಿಗೆ ಎದೆ ನೋವು ಕಾಣಿಸಿ ಕೊಂಡಿತು. ಅದಕ್ಕೆ ಮಹತ್ವವೇನೂ ನೀಡದೆ, ಎಂದಿನಂತೆ ಕಾರ್ಯಮಗ್ನರಾದರು. ಮಧ್ಯಾಹ್ನ ಊಟದ ಬಳಿಕ, ನೆರೆಯವರೊಡನೆ ಕ್ಯಾರಮ್ ಆಟದ ಸಂತಸವನ್ನು ಅನುಭವಿಸುತ್ತಿದ್ದವರು, ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ಮಲಗಿದರೆ ಸರಿ ಹೋಗಬಹುದು, ಎಂದಂದು ಕೊಂಡರೂ, ನೋವು ಏರಿ, ಪ್ರಜ್ಞಾಹೀನರಾದರು. ಕುಟುಂಬ ವೈದ್ಯರು ಬಂದು ಇಂಜೆಕ್ಷನ್‍ಗಳಿಂದ ಚೇತರಿಸಲು ಯತ್ನಿಸಿದರೂ ಸಾಧ್ಯವಾಗದೆ ಉಚ್ಚಿಲ್ ಕೊನೆಯುಸಿರೆಳೆದರು.

ಈ ಅತ್ಯಂತ ಜನಪ್ರಿಯ ಕ್ರೀಡಾಳುವಿನ ಆಕಸ್ಮಿಕ ಅಗಲಿಕೆ, ಅಥ್ಲೆಟಿಕ್ಸ್ ಪಾಲಿಗೆ ತುಂಬಲಾರದ ನಷ್ಟವೆಂದು ಅಂದಿನ ದಿನಪತ್ರಿಕೆಗಳೆಲ್ಲ ಭಾರವಾದ ಮನದಿಂದ ವರದಿ ಮಾಡಿದುವು. ಅಥ್ಲೆಟಿಕ್ಸ್ ಬಗ್ಗೆ ಅಧಿಕಾರಯುತವಾ ಗಿ ಮಾತನಾಡಬಲ್ಲ, ಆ ಕ್ಷೇತ್ರವನ್ನು ಹೃತ್ಪೂರ್ವಕ ಪ್ರೀತಿಸಿದ,  ತಾನು ಗಳಿಸಿದ ಜ್ಞಾನವನ್ನು ಇತರರಿಗೆ ನಿರ್ವಂಚನೆಯಿಂದ ದಾನ ಮಾಡಿದ ಪ್ರತಿಭಾಪೂರ್ಣ ಚೇತನವೊಂದು ಅಕಾಲಿಕವಾಗಿ ತನ್ನ ಕರ್ಮಭೂಮಿ ಯನ್ನಗಲಿತು. ಜೊತೆಗೆ ನೂರಾರು ಅಭಿಮಾನಿಗಳ, ಶಿಷ್ಯರ ಮನದಲ್ಲಿ ಅಂಧಕಾರ ಕವಿಯಿತು. ಈ ಅಕಾಲಿಕ ಆಕಸ್ಮಿಕ ಮರಣವಾರ್ತೆ ಕಾಳ್ಗಿಚ್ಚಿನಂತೆ ನಗರದಲ್ಲಿ ಹಬ್ಬಿ, ಕ್ರೀಡಾಳುಗಳೆಲ್ಲ ಅಪಾರ ಸಂಖ್ಯೆಯಲ್ಲಿ ತಮ್ಮ ನೆಚ್ಚಿನ ಶ್ರೇಷ್ಠ ಓಟಗಾರನ ಅಂತಿಮ ದರ್ಶನಕ್ಕಾಗಿ ಬಂದು ನೆರೆದರು. ಬ್ರೆಬೋರ್ನ್ ಸ್ಟೇಡಿಯಮ್‍ನಲ್ಲಿ ನಡೆದಿದ್ದ ಟಾಟಾ ಸ್ಪೋಟ್ರ್ಸ್ ಕ್ಲಬ್ ಮೀಟ್‍ನಲ್ಲಿ ಅವರ ಮರಣವಾರ್ತೆ ಬಿತ್ತರಿಸಲ್ಪಟ್ಟಾಗ, ಅಲ್ಲಿ ದುಃಖ ಕವಿಯಿತು. ರಾತ್ರಿ ಒಂಬತ್ತು ಗಂಟೆಗೆ ಹೊರಟು ಸಾಗಿದ ಅಂತಿಮ ಯಾತ್ರೆಯಲ್ಲಿ ಅವರ ಪಾಥಿರ್üೀವ ಶರೀರವನ್ನು ಭಾರತ ತ್ರಿವರ್ಣ ಧ್ವಜದಿಂದ ಆಚ್ಛಾದಿಸಲಾಯ್ತು. ತಾನು ನೆಚ್ಚಿದ ಕ್ರೀಡೆಗೆ, ದೇಶದ ಗೌರವಕ್ಕೆ ತನ್ನ ಬಾಳನ್ನೇ ಮುಡಿಪಾಗಿಟ್ಟ ಸ್ಮರಣೀಯ ಚೇತನವದು. ಅವರ ನೆನಪಿನಲ್ಲಿ ಮುಂಬೈಯ ಜೈಹಿಂದ್ ಸ್ಪೋಟ್ರ್ಸ್ ಕ್ಲಬ್, ವರ್ಷವರ್ಷವೂ ಆರ್.ಎನ್ ಉಚ್ಚಿಲ್ ಸ್ಪೋಟ್ರ್ಸ್‍ಮೀಟ್ ನಡೆಸುತ್ತಿದೆ. ಕ್ರೀಡಾರಂಗದಲ್ಲಿ ಉದಯಿಸಿ ಮಿನುಗುವ ಹೊಸ ಹೊಸ ಪ್ರತಿಭೆಗಳೇ ಅಂತಹ ಚೈತನ್ಯಕ್ಕೆ ಸಲುವ ಶ್ರಧ್ಧಾಸುಮಗಳು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi