ರೋಟರಿ ಕಲ್ಯಾಣಪುರ ಶ್ರೀಮತಿ ನಾಜಿಯ, ಇವರ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಸಹಾಯಧನ ಹಸ್ತಾಂತರ.


BN/KNN
Kemmannu News Network, 31-12-2018 13:35:17


Write Comment     |     E-Mail To a Friend     |     Facebook     |     Twitter     |     Print


December 30, 2018: ರೋಟರಿ ಕಲ್ಯಾಣಪುರ ಶ್ರೀಮತಿ ನಾಜಿಯ, ಯೋಗ ಪಟು ಕಾರ್ಕಳ ಇವರಿಗೆ, ಥಾಯ್ಲೆಂಡ್ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ರೂಪಾಯಿ 40,000/- ಸಹಾಯಧನವನ್ನು ರೋಟರಿ ಕಲ್ಯಾಣಪುರ ಅಧ್ಯಕ್ಷರಾದ ಬ್ರಾನ್ ಡಿಸೋಜ ಹಸ್ತಾಂತರಿಸಲಾಯಿತು. ದಿವಾಕರ್, ಅಲೆನ್ ಲೂಯಿಸ್, ಆನಂದ್ ಶೆಟ್ಟಿ, ಇಕ್ಬಾಲ್ ಹೆಮ್ಮಾಜಿ ಹಾಗೂ ಇತರರು ಹಾಜರಿದ್ದರು.

ನಾಝಿಯಾ. ನಾಲ್ಕು ಮಕ್ಕಳ ತಾಯಿ. ಎರಡು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿರುವ ಇವರದು ಟೈಲರಿಂಗ್ ವೃತ್ತಿ. ಮೊದಲ ಮಗನದು ಫೋಟೋಗ್ರಫಿ ಉದ್ಯೋಗ. ಉಳಿದವರು ಬಿ.ಕಾಂ, ನರ್ಸಿಂಗ್ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳು.

41 ವರ್ಷದ ನಾಝಿಯಾ ಅವರಿಗೆ ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲು. ಅದರ ನಡುವೆಯೂ ಅವರ ಸಾಧನೆಯ ಕನಸು ಯಾರನ್ನೂ ಬೆರಗುಗೊಳಿಸುವಂತದ್ದು. ಯೋಗಾಸನ ಸ್ಪರ್ಧೆಗಳಲ್ಲಿ ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅವರೀಗ 2019ರ ಮೇ ತಿಂಗಳಲ್ಲಿ ಥಾಯ್ಲೆಂಡಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

"ಕಳೆದ ಸಲವೂ ಆಯ್ಕೆಯಾಗಿದ್ದೆ. ಹಣ ಹೊಂದಿಸೋಕೆ ಆಗಿರಲಿಲ್ಲ. ಸಾಲ ತೆಗೆಯೋಣವೆಂದರೆ ಮಕ್ಕಳ ಶಿಕ್ಷಣಕ್ಕಾಗಿ ಈಗಲೇ ಹಣ ಪಡೆದಿದ್ದೇನೆ. ಈಸಲ ಸಿಕ್ಕ ಅವಕಾಶ ಕಳೆದುಕೊಳ್ಳೋಕೆ ಮನಸ್ಸಿಲ್ಲ. ಒಟ್ಟು ₹80,000 ಕಟ್ಟಬೇಕು. ಅರ್ಧ ಹಣ ಡಿಸೆಂಬರ್ 31 ರೊಳಗೆ, ಮತ್ತರ್ಧ ಜನವರಿ. ಯಾರಾದರೂ ಪ್ರೋತ್ಸಾಹ ನೀಡುವವರಿದ್ದರೆ ನನಗದು ದೊಡ್ಡ ಉಪಕಾರ" ಎನ್ನುತ್ತಾರೆ ನಾಝಿಯಾ.

ಕಾರ್ಕಳದ ನರೇಂದ್ರ ಕಾಮತ್ ಹಾಗೂ ಅಶೋಕ್ ಕುಮಾರ್ ಇವರ ಗುರುಗಳು. ನಿಟ್ಟೆ ರೋಟರಿ ಭವನದಲ್ಲಿ 10 ದಿನಗಳ ತರಬೇತಿಗೆ ಸೇರಿದ್ದ ನಾಝಿಯಾರಿಗೆ ಆ ಹತ್ತೇ ದಿನದಲ್ಲಿ ವರ್ಷದಿಂದ ಕಾಡುತ್ತಿದ್ದ ತಲೆಶೂಲೆಯ ಸಮಸ್ಯೆ ಮಾಯವಾಯ್ತಂತೆ. ಅದರಿಂದ ಚಕಿತಗೊಂಡ ಆಕೆ ನಿರಂತರ ಅಭ್ಯಾಸದಲ್ಲಿ ತೊಡಗಿದರು. ಕಾರ್ಕಳಕ್ಕೆ ಹೋಗಿ ಮತ್ತಷ್ಟೂ ಕಲಿತರು. ಆಸಕ್ತಿ ಸ್ಪರ್ಧೆಗಳ ಕಡೆ ತಿರುಗಿತು. ಪ್ರಶಸ್ತಿಗಳಿಸಿದರು. ಕಲಿತದ್ದನ್ನು ಕಲಿಸಲು ಶುರು ಮಾಡಿದರು. ಪ್ರತೀದಿನ ಬೆಳಿಗ್ಗೆ ಆರರಿಂದ ಏಳು ಗಂಟೆಯವರೆಗೆ ನಿಟ್ಟೆಯ ರೋಟರಿ ಭವನದಲ್ಲಿ ತರಬೇತಿ ನೀಡುತ್ತಿದ್ದಾರೆ.

"ಯೋಗ" ಭಾರತ ದೇಶದ ಐಡೆಂಟಿಟಿ. ಅದಕ್ಕೆ ಹಿಂದೂ ಮುಸ್ಲಿಂ ಕ್ರೈಸ್ತರೆಂಬ ಬೇಧವಿಲ್ಲ. ಇಡೀ ವಿಶ್ವವೇ ಅದಕ್ಕೀಗ ಮನ್ನಣೆ ನೀಡಿದೆ. ಎಸ್.ಜಿ.ಎಸ್ ಇಂಟರ್ನ್ಯಾಷನಲ್ ಯೋಗ ಫೌಂಡೇಷನ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರವು ಥಾಯ್ಲೆಂಡಿನಲ್ಲಿ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸನ್ನು ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲಿನ ನಿವಾಸಿ ನಾಝಿಯಾ ಕಾಣುತ್ತಿದ್ದಾರೆ. ಅದರ ನನಸಿಗೆ ನಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ.

ಹನಿ ಹನಿ ಕೂಡಿದರೆ ಹಳ್ಳ. ಸಾಧ್ಯವಿರುವಷ್ಟು ಸಹಾಯ ಅವರಿಗೆ ನೀಡಿದರೆ ಅವರ ಸಾಧನೆಯ ಕನಸಿಗೆ ರೆಕ್ಕೆಗಳು ಹುಟ್ಟಿಕೊಳ್ಳುತ್ತವೆ. ನಾಲ್ಕು ಮಕ್ಕಳ ತಾಯಿಯ ಈ ಜೀವನ ಪ್ರೀತಿ ಎಲ್ಲರಿಗೂ ಮಾದರಿಯಾಗುತ್ತದೆ.


ಅವರ ಅಕೌಂಟ್ ನಂಬರ್

Nazia
Vijaya Bank
IFSC : VIJB0001166
Account No. 116601010004852
Mobile No. +919035587346


Mrs. Nazia, adkadakatte, Nitte, Karkal a yoga competitor will be competing international yoga competition to be held at Bankong on 15th May 2019. Rotary Kallianpur contributed 40k of her initial expenses. The last day to pay the fees/ ticket was today 31-12-18.

Comments on this Article
ಮಂಜುನಾಥ್ ಕಾಮತ್, Udupi Tue, January-1-2019, 12:01
ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಹೋಗಲು ಕನಸು ಕಾಣುತ್ತಿರುವ ನಾಝಿಯಾ ಎಂಬ ತಾಯಿಯ ಬಗ್ಗೆ ಇತ್ತೀಚೆಗೆ ಬರೆದಿದ್ದೆ. ಅದನ್ನು ನೋಡಿ ಕೆಲವರು, "ಅವರಿಗೆ ಲಕ್ಷಗಟ್ಟಲೆ ಹರಿದುಬಂತು" ಎಂದೇ ಹೇಳುತ್ತಿದ್ದರು. December 31 ಅಂದ್ರೆ ಇವತ್ತು. ಅರ್ಧ ಫೀಸು ಕಟ್ಟಲೇ ಬೇಕಿತ್ತು. ₹40,000. ಆದ್ರೆ ಅವರ ಅಕೌಂಟಿಗೆ ಬಂದ ಹಣ ಕೇವಲ ₹700. ನಾನು ಬರೆದ ಸಂಜೆಯೊಳಗೆ ದೇಶ ವಿದೇಶದಿಂದ ಪ್ರತಿಕ್ರಿಯೆ ಬಂತು. ಆದರೆ ಎರಡು ದಿನವಾದ್ರೂ ಯಾರಿಂದಲೂ ಹಣ ಬಂದಿಲ್ಲ. ಡಿಸೆಂಬರ್ 31ರ ಒಳಗೆ ಹಣ ಬೇಕಾಗಿದ್ದರಿಂದ ಭರವಸೆ ನೀಡಿದ್ದವರ ಬಳಿ ಮಾತಾಡಿದೆ. ಅವರ ಉತ್ತರ ನಿಜಕ್ಕೂ ಬಲು ಬೇಸರ ಮೂಡಿಸಿತು. ಹಿಂದೂಗಳಿಗೆ ನಾಝಿಯಾ ಮುಸ್ಲಿಂ ಅಂತ ಅಡ್ಡಿ. ಮುಸ್ಲಿಮರಿಗೆ ನಾಝಿಯಾ ಯೋಗಪಟುವಾಗಿರೋದಕ್ಕೆ ನಿರ್ಲಕ್ಷ್ಯ. ಅದು ಹಿಂದುಗಳದ್ದು‌ ಎಂಬ ಭಾವನೆ. ರಾಜಕೀಯ ಪಕ್ಷವೊಂದು ಅದು ತನ್ನ ಪೇಟೆಂಟು ಎಂಬಂತೆ ಹೊತ್ತುಕೊಂಡಿದೆಯಂತೆ. ಆದರೆ ನಾಝಿಯಾ "ಯೋಗಕ್ಕೆ ಧರ್ಮದ ಹಂಗು ಇಲ್ಪ. ನಾವಿವತ್ತು ಉಸಿರಾಡೋ ಗಾಳಿ ಕಲುಷಿತ. ಆಹಾರದಲ್ಲಿ ವಿಷ. ಅವಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಯೋಗ ಅತ್ಯಂತ ಅಗತ್ಯ. ಯೋಗಾಸನ ಮಾಡುವಾಗ ಓಂಕಾರ ಹೇಳೋದಕ್ಕಿದೆ. ಅದೂ ಒಂದು ಪ್ರಾಣಾಯಾಮವೇ ಹೊರತು ನನ್ನ ಧರ್ಮ, ನಂಬಿಕೆಗಳಿಗೆ ಯಾವತ್ತೂ ಅಡ್ಡಿ ಮಾಡಿಲ್ಲ" ಎನ್ನುತ್ತಾರೆ. ಜನ ಸುಲಭಕ್ಕೆ ಇದನ್ನು ಸ್ವೀಕರಿಸುತ್ತಿಲ್ಲ. ಕಳೆದ ವರ್ಷವೂ ಹಣ ಇಲ್ಲದೆ ಸಿಕ್ಕ ಅವಕಾಶ ಕಳೆದುಕೊಂಡಿದ್ದರು. ಈ ವರ್ಷ ಹಾಗಾಗಬಾರದೆಂದು ಅವರು ನನಗೆ ತಿಳಿಸಿದ್ದು. ಈ ವರೆಗೆ ಯಾರಲ್ಲೂ ಕೈಚಾಚಿದವರಲ್ಲ. ರಾಜ್ಯ ಪ್ರಶಸ್ತಿಯೊಂದು ಸಿಗುವವರೆಗೆ ಯಾರಿಗೂ ಆಕೆಯ ಸಾಧನೆಯ ಕುರಿತೂ ತಿಳಿದಿರಲಿಲ್ಲ. ಆದರೀಗ ವಿದೇಶಕ್ಕೆ ಹೋಗಬೇಕು. ₹80,000 ಖರ್ಚು. ಎರಡನೇ ಬಾರಿ ಸಿಕ್ಕ ಅವಕಾಶ. ಕೈ ಚೆಲ್ಲಬಾರದೆಂದು ನೆರವಿಗಾಗಿ ಕಾಯುತ್ತಿದ್ದ ನಾಝಿಯಾಗೂ, ನನಗೂ ನಿರಾಸೆ. ಆಗ ವಿಶ್ವಾಸ ತುಂಬಿದವರು ಸ್ನೇಹಿತರಾದ ಶಿಶಿರ್ ಶೆಟ್ಟಿ( Shishir Shetty) ಅವರ ಕೆಲಸ ಬಿಟ್ಟು ಅದೆಷ್ಟು ಜನರನ್ನು ಸಂಪರ್ಕಿಸಿದರೆಂದಿಲ್ಲ. ಕೆಲವರಿಂದ ಮತ್ತದೇ ನೀರಸ ಪ್ರತಿಕ್ರಿಯೆ. ಆದರೆ ಅವರು ಹಠ ಬಿಡಲಿಲ್ಲ. ರೋಟರೀ ಸಂಸ್ಥೆಯ ಸ್ನೇಹಿತರಿಗೆ ತಿಳಿಸಿದರು. ಕಲ್ಯಾಣಪುರ ರೋಟರಿಯವರು ಕೂಡಲೇ ಸ್ಪಂಧಿಸಿ ಇಂದು ಬೆಳಿಗ್ಗೆ 9 ಗಂಟೆಗೆ ನಾಝಿಯಾ ಅವರನ್ನು ಕರೆ ತರಲು ಹೇಳಿದರು. ಇಬ್ಬರೂ ಹೋಗಿದ್ದೆವು. ನಿಜಕ್ಕೂ ಆಶ್ಚರ್ಯ. ಕೇವಲ 10 ನಿಮಿಷದ ಸಣ್ಣ ಕಾರ್ಯಕ್ರಮ. ಆರೇಳು ಜನರಿದ್ದ ಸಭೆ. ₹20,000 ನೀಡುತ್ತೇವೆ ಎಂದು ನಿನ್ನೆ ಹೇಳಿದ್ದರು. ಆದರೆ ಇಂದು ₹28,000 ವನ್ನು ಕವರಿನಲ್ಲಿಟ್ಟು ನೀಡಿದ್ದರು. ಅಷ್ಟಕ್ಕೇ ಅವರು ಸುಮ್ಮನಾಗಲಿಲ್ಲ. ನಾಝಿಯಾ ಅವರ ಜೀವನ ಪ್ರೀತಿಯ ಕಥೆ ಅವರ ಬಾಯಲ್ಲೇ ಕೇಳಿ ಆ ಕ್ಷಣವೇ ಒಬ್ಬರು 12,000 ಕೊಟ್ಟು ಇವತ್ತು ಸಂಜೆ ಕಟ್ಟಬೇಕಿದ್ದ ₹40,000 ಒಂದೇ ಕಡೆ ಲಭಿಸುವಂತೆ ಮಾಡಿದ್ದಾರೆ. ನಿಜಕ್ಕೂ ಕಲ್ಯಾಣಪುರ ರೋಟರಿ ಸಂಸ್ಥೆಗೆ ನಾನು ಆಭಾರಿ. ಹಣ ಕೊಡುವಾಗ ಅವರು ಹೇಳಿದ ಮಾತು "ಇದು ಸೇವೆಯಲ್ಲ. ಸಹಾಯವೂ ಅಲ್ಲ. ನಮ್ಮ ಕರ್ತವ್ಯ" ಎಂದಾಗ ನನಗೆ ರೋಟರಿ ಅಧ್ಯಕ್ಷರ, ಕಾರ್ಯದರ್ಶಿಗಳ ಹಾಗೂ ಸದಸ್ಯರ ಕುರಿತು ಹೆಮ್ಮೆ ಅನಿಸಿತು. ಪ್ರತಿಯೊಬ್ಬರಿಗೂ ಹೃದಯಪೂರ್ವಕ ಕೃತಜ್ಞತೆಗಳು. ಇನ್ನೂ ₹ 40,000 ಆಗೋಕಿದೆ. ಒಂದು ತಿಂಗಳಿದೆ. ಕುವೈಟಿನ ಗೆಳೆಯರಾದ ಮುನ್ನಣ್ಣ (Mohandas Kamath) 4,000 ಕಳಿಸಿದ್ದಾರೆ. ನಾಝಿಯಾ ಅವ್ರಿಗೆ ನೇರವಾಗಿ ಇಬ್ಬರು ಒಟ್ಟು 1,000 ಕೊಟ್ಟಿದ್ದಾರೆ. ಅರಳಿರುವ ಪ್ರತಿಭೆ ಬಾಡಬಾರದೆಂಬುದಷ್ಟೇ ನಮ್ಮ ಉದ್ದೇಶ. ನಿಮ್ಮ ಪ್ರೋತ್ಸಾಹ, ಸಹಕಾರ ಯಾವತ್ತೂ ಇರಲಿ. ಮಂಜುನಾಥ್ ಕಾಮತ್
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi