ಅರ್ವತ್ತೆಂಟರ ಹಳೆ ಪತ್ರಕರ್ತ ಎಂಬತ್ತೆÉ್ತಂಟರ ಸಾಧನೀಯ ರಾಜಕಾರಣಿ - ಜೋರ್ಜ್ ಮ್ಯಾಥ್ಯೂ ಫೆರ್ನಾಂಡಿಸ್.


Rons Bantwal
Kemmannu News Network, 01-02-2019 06:50:49


Write Comment     |     E-Mail To a Friend     |     Facebook     |     Twitter     |     Print


ಅರ್ವತ್ತೆಂಟರ ಹಳೆ ಪತ್ರಕರ್ತ ಎಂಬತ್ತೆÉ್ತಂಟರ ಸಾಧನೀಯ ರಾಜಕಾರಣಿ - ಜೋರ್ಜ್ ಮ್ಯಾಥ್ಯೂ ಫೆರ್ನಾಂಡಿಸ್ ಮಂಗಳೂರು

ಮುಂಬಯಿ, ಜ.29: ದಕ್ಷ ಸಾಧನೆಯನ್ನೇ ಜೀವನವಾಗಿಸಿ, ಪ್ರಾಮಾಣಿಕತೆಯನ್ನೇ ಮೇಲ್ಫಂಕ್ತಿಯಾಗಿರಿಸಿ, ಸಂಘಟನಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿ, ಸಮಾಜ ಸೇವೆಯನ್ನೇ ಪ್ರವೃತ್ತಿಯಾಗಿರಿಸಿ ಪ್ರಾಮಾಣಿಕ ಸೇವೆಯೊಂದಿಗೆ ಕೋಟ್ಯಾಂತರ ಜನತೆಯ ಹೃನ್ಮನಗಳಲ್ಲಿ ನೆಲೆಯಾಗಿರುವ ಸರ್ವಶ್ರೇಷ್ಠ ರಾಜಕಾರಣಿಯಾಗಿ ಮೆರೆದು ಜೀವನದ 88 ಸಂವತ್ಸರಗಳನ್ನು ಪೂರೈಸಿದ ಕಾರ್ಮಿಕ ವರ್ಗದ ನಾಯಕ, ಕೊಂಕಣ ರೈಲ್ವೇಯ ರೂವಾರಿ ಜೋರ್ಜ್ ಮ್ಯಾಥ್ಯೂ ಫೆರ್ನಾಂಡಿಸ್ ಇಂದಿಲ್ಲಿ ಮುಂಜಾನೆ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಸ್ವರ್ಗಸ್ಥರಾದರು.

 

George Fernandes @ Kemmannu Kambala

ಭಾರತೀಯರ ಸಾಮರಸ್ಯ-ಸ್ನೇಹಮಯಿ ಜೀವನದ ಸೇತುವೆಯಾದ್ದ ಜಾರ್ಜ್ ಅವಿಭಜಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸರ್ವೋಭಿವೃದ್ಧಿಗೆ ಸತತ ಸೇವಾಕಾಂಕ್ಷೆಯಾಗಿ ನೀಡಿದ ಪ್ರೇರಣೆ ನಮಗೆಲ್ಲರಿಗೂ ಆದರಣೀಯ.  ಭಾರತ ರಾಷ್ಟ್ರದ ಸಮಗ್ರ ಜನತೆಯೊಂದಿಗೆ ಅತ್ಮೀಯರಾಗಿ, ಪ್ರತಿಭಾಶೀಲ ರಾಜಕಾರಣಿ ಎಂದೆಣಿಸಿ ರಾಷ್ಟ್ರದ ಸರ್ವೋನ್ನತ ಹುದ್ದೆಯಾಗಿರುವ ಎನ್.ಡಿ.ಎ ಸಂಚಾಲಕರಾಗಿ, ಮಾಜಿ ಕೇಂದ್ರ ರಕ್ಷಣಾ ಹಾಗೂ ರೈಲ್ವೇ ಸಚಿವ, ಕೈಗಾರಿಕೆ ಮತ್ತು ದೂರಸಂಪರ್ಕ ಖಾತೆಯ ಮಂತ್ರಿಗಳಾಗಿ ಶ್ರಮಿಸಿ ರಾಷ್ಟ್ರದ ರಾಜಕಾರಣದಲ್ಲಿ ಎಲ್ಲರನ್ನೂ ಉಬ್ಬೇರಿಸುವಂತೆ ಮಾಡಿದ ನಿಷ್ಠಾವಂತ ಧುರೀಣ ಜಾರ್ಜ್. ತಮ್ಮ ಎಂಭತ್ತೆಂಟು ವರ್ಷಗಳ ಬಹುರಂಗಿತ ಬದುಕಿನಲ್ಲಿ ಅದೇಷ್ಟೋ ಏರುಪೇರುಗಳು ಕಂಡರೂ ನೀರಸಗೊಳ್ಳದ ಜೀವನೋತ್ಸವ ತಮ್ಮ ಅಭಿಮಾನಿಗಳಿಗೆ ಆಸಕ್ತಿ ಮತ್ತು ಕುತೂಹಲಕಾರಿ ವಿಷಯ. ತಮ್ಮ ಬದುಕಿನ ಇನ್ನೊಂದು ಜನಾಂಗಪರ ಪಲ್ಲಟಕ್ಕೆ ಮೆರಗು ನೀಡಿ ನಮ್ಮನ್ನಗಲಿದ ಜಾರ್ಜ್ ಫೆರ್ನಾಂಡಿಸ್ ಅವರ ಬದುಕು ಇನ್ನು ನೆನಪು ಮಾತ್ರವೇ ಸರಿ.

ಜೋರ್ಜ್ ಮ್ಯಾಥ್ಯೂ ಫೆರ್ನಾಂಡಿಸ್:
ಜೋರ್ಜ್ ಅವರ ತಂದೆ ಜೋನ್ ಜೊಸ್ ಫೆರ್ನಾಂಡಿಸ್ ಇವರ ತವರೂರು ಬಜ್ಪೆಯ ಕರಂಬಾರು. ವೈವಾಹಿಕ ಜೀವನದ ನಂತರ ಇವರು ತಮ್ಮ ಸಂಸಾರಿಕ ಬದುಕನ್ನು ಹರಸಿ ಮಂಗಳೂರುನ ಬಿಜೈಯನ್ನು ಸೇರಿದ್ದರು. ಇಲ್ಲಿ 03.ಜೂನ್.1930.ರಂದು ಜೋರ್ಜ್ ಫೆರ್ನಾಂಡಿಸ್ ಇವರ ಜನನ. ಇಂಗ್ಲೆಂಡ್‍ನ ರಾಜ ಐದನೇ ಜೋರ್ಜ್ ಹುಟ್ಟು ಹಬ್ಬದ ದಿನವೇ ಆಗಿದ್ದುದರಿಂದ ಜೋನ್ ಜೊಸ್‍ರ ಮಡದಿ ಶ್ರೀಮತಿ ಆಲಿಸ್ ಮಾರ್ಥಾ ಇವರ ಅಪೇಕ್ಷೆಯ ಪ್ರಕಾರ ಜೋರ್ಜ್‍ಗೆ ಕೂಡಾ ಜೋರ್ಜ್ ಮ್ಯಾಥ್ಯೂ ಫೆರ್ನಾಂಡಿಸ್ ಎಂದು ನಾಮಕರಣಗೊಳಿಸಲಾಯಿತು. ಜೋನ್ ಜೊಸ್ ಮತ್ತು ಆಲಿಸ್ ಮಾರ್ಥಾ ದಂಪತಿಗೆ ಒಟ್ಟು ಆರು ಗಂಡು ಮಕ್ಕಳೇ ಆಗಿದ್ದು, ಜೋರ್ಜ್ ಮನೆತನದ ಮೊದಲ ವಂಶಕುಡಿ ಆಗಿ ಹುಟ್ಟಿರುವರು.

ಜೋರ್ಜ್ ಯಾನೆ ಜೆರಿ ಆಲಿಯಾಸ್ ಜೆರಿ ಇಜಯ್ ಮುಂತಾದ ಹಲವು ಹೆಸರುಗಳಿಂದ ಪ್ರಸಿದ್ಧಿ ಪಡೆದ ಜೋರ್ಜ್ ಮ್ಯಾಥ್ಯೂ ಫೆರ್ನಾಂಡಿಸ್ ಅವರು ಸಂತ ಅಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿನ ಹಳೆ ವಿದ್ಯಾಥಿರ್ü. 1946ರಲ್ಲಿ ಮೆಟ್ರಿಕ್ ಪಾಸು ಮಾಡಿದ ಜೋರ್ಜ್ ಕ್ರಮೇಣ ಬೆಂಗಳೂರು ಸೇರಿ ತನ್ನ ತಂದೆಯ ಇಷ್ಟದಂತೆ `ಧರ್ಮಗುರು’ ಆಗುವ ನಿರ್ಧಾರಗೈದು ಅಲ್ಲಿನ ಸೈಂಟ್ ಪೀಟರ್’ಸ್ ಸೆಮಿನರಿ ಪ್ರವೇಶಿಸಿದರು. ಇಲ್ಲಿ ಎರಡುವರೆ ವರ್ಷದ ಧಾರ್ಮಿಕ ಶಿಕ್ಷಣ ಪೂರೈಸಿ ವಾಪಸ್ಸಾದರು.

ನಂತರ 1949ರಲ್ಲಿ  28 ಹಳೆಗಳ `ಕೊಂಕ್ಣಿ ಯುವಕ್’ ಕೊಂಕಣಿ ಮಾಸಿಕವನ್ನು ಆರಂಭಿಸಿದ್ದು, ಈ ಪತ್ರಿಕೆಯ ಪ್ರತಿ ಒಂದರ ಬೆಲೆ 4 ಆಣೆ ಮತ್ತು ವಾರ್ಷಿಕ ಚಂದಾ ದರ ರೂಪಾಯಿ 3/- ಮಾತ್ರ ಆಗಿತ್ತು...! ಆ ವೇಳೆಗೆ ಜೋರ್ಜ್‍ರ ಪತ್ರಿಕೋದ್ಯಮದ ಕೊಡುಗೆ ಅನನ್ಯ ಎನ್ನುತ್ತಾರೆ ಹಿರಿಯ ಸಾಹಿತಿ, ಓದುಗರು. ಅದು ಎರಡನೇ ಮಹಾಯುದ್ಧ ಕೊನೆಗೊಂಡ ಸಮಯವಾಗಿದ್ದು, ನಾಡು, ದೇಶದ ಜನತೆ ಹೊಸ ಬಾಳಿನ ಭವಿಷ್ಯವನ್ನು ಹರಸಿ ಮುನ್ನುಗ್ಗುತ್ತಿದ್ದ ಸಮಯ. ಅವಾಗಲೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ರಾಮ್ ಮನೋಹರ್ ಲೋಹಿಯಾ ಇವರ ಸಮಾಜವಾದದ ತತ್ವ, ಆದರ್ಶವನ್ನು ಅನುಕರಿಸಿದ ಜೋರ್ಜ್ ಓರ್ವ ನಿಷ್ಠಾವಂತ ಸಮಾಜವಾದಿಯಾಗಿ ಪರಿವರ್ತನೆಗೊಂಡರು. ಸಾಹಿತಿಕ, ವಿಚಾರತ್ಮಕ ಮನೋಧರ್ಮವುಳ್ಳ ಜೋರ್ಜ್ ಸಮಾಜವಾದದಲ್ಲಿ ಆಸಕ್ತರೆಣಿಸಿ ಈ ಸಂಧಿಕಾಲದಲ್ಲೇ ಸೋಶಲಿಸ್ಟ್ ಪಾರ್ಟಿಯ ಸದಸ್ಯರಾಗಿ ರಾಜಕಾರಣವನ್ನು ಪ್ರವೇಶಿಸಿದರು.

ತಕ್ಷಣವೇ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾದ ಜೋರ್ಜ್ ಇವರು ಅಮ್ಮೆಂಬಳ ಬಾಳಪ್ಪರ ಜೊತೆಗೂಡಿ ಮಂಗಳೂರಿನಿಂದ ಕುಂದಾಪುರದ ವರೇಗೆ ಬಹುತೇಕ ಕಾಲ್ನಡಿಗೆಯಲ್ಲೇ ಸಂಚಾರಿಸಿ ಕೃಷಿ ಕಾರ್ಮಿಕರನ್ನು ಒಗ್ಗೂಡಿಸಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕೃಷಿ ಕಾರ್ಮಿಕರ ಅಧಿವೇಶನವನ್ನು ಯಶಸ್ವಿ ಗೊಳಿಸಿದ್ದರು ಎನ್ನಲಾಗಿದೆ.
ಬರ ಬರುತ್ತಾ ಬಸ್ ಕಾರ್ಮಿಕರ, ಕಾರು-ಲಾರಿ ಚಾಲಕ ನೌಕÀರರನ್ನು ಒಗ್ಗೂಡಿಸಿ ಕಾರ್ಮಿಕ ಸಂಘಟಕರ ಆಶೋತ್ತರಗಳಿಗೆ ಸ್ಪಂದಿಸಿ ಕಾರ್ಮಿಕ ನೇತಾರರೆಣಿಸಿದರು. ಹಿಗೇ ಕಾರ್ಮಿಕ ಸಂಘಟನೆಯ ಚಳುವಳಿಯಲ್ಲಿ ಜಯ ಸಾಧಿಸಿದ ಜೋರ್ಜ್ ತಮ್ಮ ಆತ್ಮವಿಶ್ವಾಸವನ್ನು ಬಲಪಡಿಸಿ ಪ್ರಭಾವೀ ನಾಯಕರಾಗಿ ರೂಪ ತಾಳಿದರು.
ಕ್ರಮೇಣ ಮುಂಬಯಿ ಸೇರಿದ ಜೋರ್ಜ್ ಚೌಪಟ್ಟಿಯಲ್ಲಿ ಅಲೆಮಾರಿ ಜೀವನ ನಡೆಸುತಂತಾಯಿತು. ಇಲ್ಲಿ ಹೊಟ್ಟೆಗೆ ಅನ್ನದ ತಾಪತ್ರೆಕ್ಕಿಂದ ಪೆÇೀಲಿಸರ ಉಪದ್ರ ಹೆಚ್ಚೆನಿಸಿದರೂ ಕಡ್ಲೆ ತಿಂದು ನೀರು ಕುಡಿದು ಬದುಕು ಸಾಗಿಸಿದರು. ಸಾಮಾನ್ಯ ಜನಕ್ಕಿಂತ ಭಿನ್ನವಾದ ಭಾವನೆವುಳ್ಳ ಜೊರ್ಜ್ ತನ್ನ ಕುಟುಂಬಿಕರನ್ನು ಅವಲಂಬಿಸದೆ ತನ್ನಲ್ಲಿದ್ದ `ಫೌಂಟನ್’ ಪೆನ್ ಮಾರಿ ಜೀವನ ಸಾಗಿಸಿದರು. ನಂತರ ಜೀವನೋಪಾಯಕ್ಕಾಗಿ `ಟೈಂಸ್ ಆಫ್ ಇಂಡಿಯಾ’ ಆಗ್ಲ ಮಾಧ್ಯಮ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಸೇವೆ ಸಲ್ಲಿಸಿ ವೃತ್ತಿ ನಿರತರಾದರು.

ಈ ವೃತ್ತಿಕ್ಕಿಂತ ಕಾರ್ಮಿಕ ಸಂಘಟನೆಯಲ್ಲೇ ಹೆಚ್ಚು ಆಸಕ್ತರೆಣಿಸಿದ್ದ ಜೋರ್ಜ್ ಆಗೀನ ಶ್ರದ್ಧಾಳು ಕಾರ್ಮಿಕ ನಾಯಕ ಪಿ.ಡಿ ಮೆಲ್ಲೋ ಇವರ ಹೆಸರಿನೊಂದಿಗೆ ಗೋಧಿ ಕಾರ್ಮಿಕ ಸಂಘಟನೆಯ ಕಛೇರಿ ತಲುಪಿ ಯೂನಿಯಾನ್ ಸೇವೆಯಲ್ಲಿ ತೊಡಗಿಸಿಕೊಂಡರು. ಜೊತೆಗೆ ಕಾಲೇಜು ಶಿಕ್ಷಣ ಮುಂದುವರಿಸಿದರು. ಅಷ್ಟರಲ್ಲಿ ವೆಲ್ಲೂರು ಜೈಲಿನಿಂದ ಬಿಡುಗಡೆಗೊಂಡು ಮುಂಬಯಿ ತಡಿಪಾರು ಆದೇಶಕ್ಕೆ ತೆರೆ ಬಿದ್ದಿದ್ದ ಖ್ಯಾತ ಕಾರ್ಮಿಕ ಧುರೀಣ ಪಿ.ಡಿ.ಮೆಲ್ಲೋ ಇವರು ಮಹಾನಗರಕ್ಕಾಗಮಿಸಿದ್ದು, ಅವರ ಜೊತೆ ಜೋರ್ಜ್ ಜೊತೆಗೂಡಿದರು. ಅವರ ನಿರ್ದೇಶನದಂತೆ ಬಿ.ಪಿ.ಟಿ ಡೊಕ್ ಸ್ಟಾಫ್ ಯೂನಿಯಾನ್ ಸೇರಿದರು. ಇಲ್ಲಿ ಯೂನಿಯಾನ್‍ನ `ಡೊಕ್‍ಮೆನ್’ ಮಾಸಿಕ ಪ್ರಕಾಶಿತಗೊಳ್ಳುತ್ತಿದ್ದು, ತನ್ನ ಹವ್ಯಾಸದ ಪತ್ರಿಕೋದ್ಯಮಕ್ಕೆ ಮತ್ತೆ ಚಾಲನೆ ನೀಡಿ ಈ ಮೂಲಕ ಪತ್ರಿಕೋದ್ಯಮವನ್ನು ಮುನ್ನಡೆಸಿದರು. ಜೊತೆಗೆ ಪಿ.ಡಿ.ಮೆಲ್ಲೋ ಚಾರಿತ್ರಿತ  `ಶೇರ್-ಎ-ಡೊಕ್’ಪುಸ್ತಕ ಪ್ರಕಟಿಸಿದರು.

1954ರಲ್ಲಿ ಪಿ.ಡಿ.ಮೆಲ್ಲೋ ಇವರು ಅನೇಕಾನೇಕ ಸಂಘಟನೆಗಳನ್ನು ಒಗ್ಗೂಡಿಸಿ ಸ್ಥಾಪಿಸಿದ `ಟ್ರಾನ್ಸ್‍ಪೆÇೀರ್ಟ್ ಎಂಡ್ ಡೊಕ್ ವರ್ಕರ್ಸ್ ಂiÀiುನಿಯಾನ್’ ಕಾರ್ಯದರ್ಶಿಯಾಗಿ ನೇಮಕಗೊಂಡರು. ಇದು ಜೋರ್ಜ್ ಇವರ ನೇತೃತ್ವಕ್ಕೆ ಮೈಲುಗಲ್ಲು ಆಗಿ ಪರಿಣಮಿಸಿತು. ಜೋರ್ಜ್ ಫೆರ್ನಾಂಡಿಸ್ ಇವರ ಮುಂದಾಳುತ್ವದಲ್ಲಿ ಸಮಗ್ರ ಕಾರ್ಮಿಕ ವರ್ಗದ ಏಕಾತೆಯಲ್ಲಿ ಭಾರತ ರಾಷ್ಟ್ರದ ಆರ್ಥಿಕ ರಾಜಧಾನಿಯ ಮೊತ್ತ ಮೊದಲ  `ಬೊಂಬಯಿ ಬಂದ್’ 1958ರಲ್ಲಿ ಆಗಿದ್ದು ಇದು ಇಡೀ ಮುಂಬಯಿ ಜೀವನದ ಮೇಲೆ ಪರಿಣಾಮ ಬೀರಿತ್ತು.  ಇದು ಸಂಘಟನೆಯ ವಿಜಯೋತ್ಸವದ ಅಸ್ತ್ರ ಆಗಿ ರೂಢಿಸಿಕೊಂಡರು.

ಜೋರ್ಜ್ ಫೆರ್ನಾಂಡಿಸ್ ಇವರ ಸರ್ವ ಶ್ರೇಷ್ಠ ಸಾಧನೆಗಳೆಂದರೆ ಎಸ್.ಕೆ.ಪಾಟೀಲ್ ಇವರ ಪ್ರತಿಸ್ಪರ್ಧಿಯಾಗಿ ಗಿಟ್ಟಿಸಿದ ವಿಜಯ, ತುರ್ತು ಪರಿಸ್ಥಿತಿ ವೇಳೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇವರಿಗೆ ಪಂಥಾಹ್ವನ ನೀಡಿದ್ದು, ಜೈಲಲ್ಲಿ ಇದ್ದೂ ಮುಜ್ಹಾಫರ್‍ಪುರ್‍ನಲ್ಲಿ ಪ್ರಚಂಡ ಬಹುಮತದ ಗೆಲುವು ಸಾಧನೆ, ತ್ರಿರಾಜ್ಯಗಳ ಜೀವನ ನಾಡಿಯ ಕೊಂಡಿಯಾಗಿರುವ ಕೊಂಕಣ ರೈಲು ಯಾನದ ಅಸ್ತಿತ್ವ. ಕರ್ಮಭೂಮಿ ಮುಂಬಯಿಯಲ್ಲಿ ಕಾರ್ಮಿಕ ಸಂಘಟನೆ.

ಜಾರ್ಜ್ ಅಭಿನಂದನೆ ಸಮಿತಿ ಇವರ ಪರವಾಗಿ ಜಾರ್ಜ್ ಫೆರ್ನಾಂಡಿಸ್ ಅಭಿನಂದನಾ ಕಾರ್ಯಕ್ರಮ (2008 ಜನವರಿ.17) ಡಾ| ಬಿ. ಆರ್ ಅಂಬೇಡ್ಕರ್ ಭವನ, ಬಸವೇಶ್ವರ ರಸ್ತೆ, ವಸಂತನಗರ, ಬೆಂಗಳೂರು ಇಲ್ಲಿ ನಡೆಸಲಾಗಿದ್ದು ಸಮಾರಂಭದ ಉದ್ಘಾಟನೆಯನ್ನು ಧರ್ಮಗುರುಗಳಾದ ಪರಮಪೂಜ್ಯ ಶ್ರೀ ದಲಾಯಿ ಲಾಮ ನೇರವೇರಿಸಿದ್ದರು. ಸಭಾಧ್ಯಧ್ಯಕ್ಷತೆಯನ್ನು ಸಂಸದ ಸದಸ್ಯ, ಮಾಜಿ ಕೇಂದ್ರ ಸಚಿವರಾದ ಶರದ್ ಯಾದವ್ ವಹಿಸಿದ್ದು ಮಾಜಿ ಉಪ ಪ್ರಧಾನಮಂತ್ರಿ ಎಲ್.ಕೆ ಅಡ್ವಾನಿ ಮತ್ತು ಅಂದಿನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇನ್ನಿತರ ಗಣ್ಯಾಧಿಗಣ್ಯರು ಜೊತೆಗೂಡಿ ಜಾರ್ಜ್ ಫೆರ್ನಾಂಡಿಸ್ ಅವರನ್ನು ಅಭಿನಂದಿಸಿರುವುದು ಬಹುಶಃ ಇದೇ ಕೊನೆಯ ಸಾರ್ವಜನಿಕ ಸನ್ಮಾನ ಸ್ವೀಕರ ಆಗಿರ ಬಹುದು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




| Special Program in collaboration with Kemmannu Y
View More

Earth Angels Kemmannu (EAK) warmly invites allEarth Angels Kemmannu (EAK) warmly invites all
Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, UdupiSilver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi
Annual Day Calebration 2025 | Carmel English School, KemmannuAnnual Day Calebration 2025 | Carmel English School, Kemmannu
Final Journey Of Francis Paul Quadros (59 Years) | LIVE From UdupiFinal Journey Of Francis Paul Quadros (59 Years) | LIVE From Udupi
Final Journey of Sudeep Sebastian Gordon Martis (55 years) | LIVE from KalmadyFinal Journey of Sudeep Sebastian Gordon Martis (55 years) | LIVE from Kalmady
Final Journey of Tyron Pereira (57 years) | LIVE from Kalmady, UdupiFinal Journey of Tyron Pereira (57 years) | LIVE from Kalmady, Udupi
Final Journey of Lawrence M Lewis (82 years) | LIVE from Milagres, Kallianpur, UdupiFinal Journey of Lawrence M Lewis (82 years) | LIVE from Milagres, Kallianpur, Udupi
Final Journey of Salvadore Fernandes (76 Years) | LIVE from Shirva | UdupiFinal Journey of Salvadore Fernandes (76 Years) | LIVE from Shirva | Udupi
Final Journey of Dulcine Cecilia Mathias (89 years) | LIVE from Shirva | UdupiFinal Journey of Dulcine Cecilia Mathias (89 years) | LIVE from Shirva | Udupi
Titular Feast of St. Theresa Church, Kemmannu, UdupiTitular Feast of St. Theresa Church, Kemmannu, Udupi
Final Journey of Dolphy Louis Suares (61 years) | LIVE from Katapady | UdupiFinal Journey of Dolphy Louis Suares (61 years) | LIVE from Katapady | Udupi
Final Journey Of Mrs. Lenny Machado (74 Years) | LIVE From Kemmannu | UdupiFinal Journey Of Mrs. Lenny Machado (74 Years) | LIVE From Kemmannu | Udupi
Mount Rosary Church - Rozaricho Gaanch Sep, 2025 IssueMount Rosary Church - Rozaricho Gaanch Sep, 2025 Issue
Final Journey Of Mrs. Lilly D Souza (68Years) | LIVE From Mount Rosary, Santhekatte, UdupiFinal Journey Of Mrs. Lilly D Souza (68Years) | LIVE From Mount Rosary, Santhekatte, Udupi
ಅನ್-ಡು (UNDO) | A Konkani Short Film | ICYM Kallianpur Deaneryಅನ್-ಡು (UNDO) | A Konkani Short Film | ICYM Kallianpur Deanery
THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi DeaneryTHEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery
Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi