ಮುಂಬಯಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ-ಪದವಿ ಪ್ರದಾನ ರಂಗಭೂಮಿ ಸಮಾಜ ಸುಧಾರಣಾ ಮಾಧ್ಯಮ-ತೋನ್ಸೆ ವಿಜಯಕುಮಾರ್ ಶೆಟ್ಟಿ  


Rons Bantwal
Kemmannu News Network, 16-09-2019 10:01:49


Write Comment     |     E-Mail To a Friend     |     Facebook     |     Twitter     |     Print


ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸ-ಪದವಿ ಪ್ರದಾನ ರಂಗಭೂಮಿ ಸಮಾಜ ಸುಧಾರಣಾ ಮಾಧ್ಯಮ-ತೋನ್ಸೆ ವಿಜಯಕುಮಾರ್ ಶೆಟ್ಟಿ

ಮುಂಬಯಿ, ಸೆ.14: ಕೇವಲ ಡಿಗ್ರಿ ಅನ್ನುವುದು ಮಾತ್ರ ಶಿಕ್ಷಣವಲ್ಲ. ಬದುಕು ರೂಪಿಸಲು ಕಲಿಯುವುದೇ ಶಿಕ್ಷಣ. ಇಂತಹ ನೈಜ್ಯಶಿಕ್ಷಣ ನೀಡುವ ಕ್ಷೇತ್ರವೇ ರಂಗಭೂಮಿ. ನಾನು ತುಂಬಾ ಪ್ರೀತಿಸುವ ಕ್ಷೇತ್ರವೂ ಇದಾಗಿದೆ. ನನಗೆ ಬದುಕು, ಸುಖ, ಅನುಭವ, ಅಭಿಮಾನಗಳನ್ನು ನೀಡಿದ ರಂಗಸ್ಥಳವನ್ನು ನಾನು ಹೃದಯಸ್ಪರ್ಶಿಯಾಗಿ  ಬೆಳೆಸಿ ಉಳಿಸಿ ಬಂದವ. ಇಲ್ಲಿ ಆಳವಾದ ಅಭ್ಯಾಸ ಕಲಿಯಲಿದ್ದು ರಂಗಭೂಮಿ ನನಗೆ ದೇವಸ್ಥಾನವಾಗಿದೆ. ಸಮಾಜವನ್ನು ತಿದ್ದುವ ಶಿಕ್ಷಣ ರಂಗಭೂಮಿಯಾಗಿದ್ದು ಇದು ಜನಜೀವನಕ್ಕೆ ಪ್ರೇರಕರಾಗಬೇಕು. ರಂಗಭೂಮಿ ಯಕ್ಷಪ್ರೆಶ್ನೆಗಳಿಗೆ ಉತ್ತರಿಸುವ ಜೀವಂತ ಕಲೆಯಾಗಿದ್ದು ಇದೊಂದು ಸಮಾಜ ಸುಧಾರಣಾ ಮಾಧ್ಯಮವಾಗಿದೆ. ಜೀವನಕ್ಕೆ ಶಿಸ್ತು ಬದ್ಧತೆ ಕಲಿಸುವ ಅದ್ಭುತ ಕಲೆ ಇದಾಗಿದ್ದು ಆದುದರಿಂದಲೇ ರಂಗಭೂಮಿಯನ್ನು ಜೀವನ ಪಾಠ ಅನ್ನುವುದಿದೆ ಎಂದು ರಾಷ್ಟ್ರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೇಷ್ಠ ಕಲಾವಿದ, ಕಲಾಜಗತ್ತು ಮುಂಬಯಿ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ತಿಳಿಸಿದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ-ತುಳು ಬದುಕು ವಸ್ತು ಸಂಗ್ರಹಾಲಯ ಬಂಟ್ವಾಳ ಮತ್ತು ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಹಯೋಗದಲ್ಲಿ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಉಪನ್ಯಾಸ-ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು `ರಂಗಭೂಮಿಯಿಂದ ವ್ಯಕ್ತಿತ್ವ ವಿಕಸನ’ ವಿಷಯವಾಗಿ ವಿಜಯಕುಮಾರ್ ಶೆಟ್ಟಿ ವಿಶೇಷ ಉಪನ್ಯಾಸವನ್ನೀಡಿ ಮಾತನಾಡಿದರು.

ಕೊಲ್ಯಾರು ರಾಜು ಶೆಟ್ಟಿ, ಯಜ್ಞ ನಾರಾಯಣ, ಗೋಪಾಲ ತ್ರಾಸಿ, ಸುಶೀಲಾ ಎಸ್.ದೇವಾಡಿಗ, ಸುರೇಖಾ ಹೆಚ್.ದೇವಾಡಿಗ ಮತ್ತಿತರರು ರಂಗಭೂಮಿ ಬಗ್ಗೆ ತೋನ್ಸೆ ವಿಜಯಕುಮಾರ್ ಅವರಲ್ಲಿ ಸಂವಾದ ನಡೆಸಿ ಇಂತಹ ನಾಟಕಗಳು ಬರೇ ವಾರ್ಷಿಕೋತ್ಸವಕ್ಕೆ ಮಾತ್ರ ಸೀಮಿತವಾಗಬಾರದು ಎಂದು ವ್ಯಥೆವ್ಯಕ್ತ ಪಡಿಸಿದರು.

ಮುಂಬಯಿ ವಿಶ್ವವಿದ್ಯಾಲಯದಿಂದ ಎಂಎ ಪದವಿಧರೆಯರಾದ ಕುಮುದಾ ಆಳ್ವ,  ಜಯ ಪೂಜಾರಿ, ಉದಯ ಶೆಟ್ಟಿ, ಪಾರ್ವತಿ ಪೂಜಾರಿ, ಜಮೀಳಾ ಬಾನು, ಸೋಮಶೇಖರ್ ಮಸಳಿ, ಜ್ಯೋತಿ ಶೆಟ್ಟಿ, ಸುರೇಖಾ ಶೆಟ್ಟಿ ಇವರಿಗೆ ಪದವಿ ಪ್ರದಾನ ಹಾಗೂ 2018ನೇ ಸಾಲಿನ ಕನ್ನಡ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವೈಷ್ಣವಿ ಬಿ.ಶೆಟ್ಟಿ (ಪ್ರಥಮ), ಜಾನ್ವಿ ಎನ್.ಕೋಟ್ಯಾನ್ (ದ್ವಿತೀಯ), ಆದಿತ್ಯ ಆರ್.ಆಚಾರ್ (ತೃತೀಯ) ಹಾಗೂ ರತ್ನಾಕರ್ ಎ.ರಾವ್, ಡಾ| ಪ್ರತೀಮ ಎಸ್.ಕೊಡ್ಕರ್ಣಿ, ಪುಷ್ಪಾ ರೂಪಾಲಿ ಶರಶ್ಚಂದ್ರ, ಡಾ| ಸುನೀತಾ ಎಸ್.ಪಾಟೀಲ್, ನಿವೇದಿತಾ ಜಿ.ಪಿ ಮುತಾಲಿಕ್, ಅನಿರುದ್ಧ್ ಯು.ಶೆಟ್ಟಿ, ಪ್ರೀತಿ ಪಿ.ರಾವ್, ಅನನ್ಯ ಪ್ರಾಣೇಶ್ ರಾವ್, ಅದಿತಿ ಪಿ.ರಾವ್, ತನೀಷ್ ಜೆ.ಕುಕ್ಯಾನ್, ಭೂಮಿಕಾ ಎಸ್.ಅಂಚನ್, ಫಿಯೋಲಾ ಫೆರ್ನಾಂಡಿಸ್, ನಿಖಿಲ್ ಹೆಚ್. ಸಾಲ್ಯಾನ್, ವೀಕ್ಷಾ ಬಂಗೇರ, ಚಿರಾಯು ಪ್ರಕಾಶ್, ನವ್ಯ ಪೂಜಾರಿ, ಸಾನಿಧ್ಯ ಎಸ್.ಪೂಜಾರಿ, ಪರಿಣಿತ ದೇವಾಡಿಗ, ಸುದರ್ಶನ್ ಕುಲ್ಕರ್ಣಿ, ಚೇತನ್ ನಾಯಕ್, ನಿಯಥಿü ಎಂ.ಆಚಾರ್ಯ, ಅನುರುದ್ಧ್ ಎಸ್. ಅವಿೂನ್ ಇವರಿಗೆ ವಿಜಯಕುಮಾರ್ ಪದವಿ ಪ್ರದಾನಿಸಿ ಅಭಿನಂದಿಸಿದರು.

ವಿಜಯಕುಮಾರ್ ರಂಗಭೂಮಿಗೆ ದೊಡ್ಡ ಪ್ರಮಾಣದಲ್ಲಿ ಆತ್ಮವಿಶ್ವಾಸ ತುಂಬಿದ ಪ್ರಥಮ ದಾಖಲೆಗಳ ಸರದಾರ ಮತ್ತು ದೊಡ್ಡಣ್ಣ ಆಗಿದ್ದಾರೆ. ಸಿನೆಮಾ ಪರದೆಯಲ್ಲಿ ದೊಡ್ಡದಾಗಿಯೂ, ಕಿರುತೆರೆ (ಟಿವಿ)ಯಲ್ಲಿ ಚಿಕ್ಕದಾಗಿಯೂ ಕಾಣುವ ಕಲಾವಿದ ರಂಗಭೂಮಿಯ ಲ್ಲಿ ಮಾತ್ರ ಮನುಷ್ಯನನ್ನು ಮನುಷ್ಯನಾದ ನೈಜ್ಯರೂಪ ಕಾಣಲು ಸಾಧ್ಯವಾಗುವುದು. ನಾಟಕರಂಗವು ಬದುಕಿಗೆ ಶಿಸ್ತು ಕಲಿಸುವ ಗರಡಿಯಾದಿದೆÀ. ರಂಗಭೂಮಿಯಿಂದ ವ್ಯಕ್ತಿತ್ವ ವಿಕಾಸನ ಸಾಧ್ಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಉಪಾಧ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ   ಕನ್ನಡ ವಿಭಾಗದ ಡಾ| ಉಮಾರಾವ್, ಕುಮುದಾ ಆಳ್ವ, ಮದುಸೂಧನ ರಾವ್, ಶೈಲಜಾ ಹೆಗಡೆ, ಡಾ| ಶ್ಯಾಮಲಾ ಪ್ರಕಾಶ್, ಸುರೇಖಾ ಎಸ್.ದೇವಾಡಿಗ, ಶ್ರೀಪಾದ ಪತಕಿ, ಗೀತಾ ಮಂಜುನಾಥ್, ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೀತಂ ಎನ್.ದೇವಾಡಿಗ, ವಿಶೇಷ ಆಮಂತ್ರಿತ ಸದಸ್ಯರಾದ ನ್ಯಾ| ವಸಂತ್ ಎಸ್.ಕಲಕೋಟಿ, ಸಾ.ದಯಾ, ಗೋಪಾಲ ತ್ರಾಸಿ, ಸವಿತಾ ಸುರೇಶ್ ಶೆಟ್ಟಿ, ಕರುಣಾಕರ್ ವಿ.ಶೆಟ್ಟಿ ಹಾಗೂ ಮಹಾನಗರದಲ್ಲಿನ ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಹಾಜರಿದ್ದರು.

ಕಲಾ ಭಾಗ್ವತ್, ಶಾಂತಲಾ ಹೆಗಡೆ, ಪಾರ್ವತಿ ಪೂಜಾರಿ, ಶಶಿಕಲಾ ಹೆಗಡೆ ಇವರ ಸ್ವರ್ಗೀತ ಬಿ.ಎಸ್ ಕುರ್ಕಾಲ್ ರಚಿತ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸುನೀಲ್ ದೇಶ್‍ಪಾಂಡೆ, ನಾಗಪ್ಪ ಸಿದ್ಧಪ್ಪ ಕಲ್ಲೂರು, ಡಾ| ಶ್ಯಾಮಲಾ ಪ್ರಕಾಶ್ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಪತ್ರಕರ್ತರ ಸಂಘ ಮಹಾರಾಷ್ಟ್ರ  ಅಧ್ಯಕ್ಷ ರೋನ್ಸ್ ಬಂಟ್ವಾಳ್  ಸುಖಾಗಮನ ಬಯಸಿ ಪ್ರಸ್ತಾವನೆಗೈದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅತಿಥಿü ಪರಿಚಯನೀಡಿ ಕಾರ್ಯಕ್ರಮ ನಿರ್ವಹಿಸಿದರು. ಸಾ.ದಯಾ ಕೃತಜ್ಞತೆ  ಸಮರ್ಪಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
The drinking water for Udupi ??
View More

Obituary: Rafael Saldana, St. Joseph Ward (Kodi), Kemmannu.Obituary: Rafael Saldana, St. Joseph Ward (Kodi), Kemmannu.
*ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತೀ ಗರೋಡಿ, ತೋನ್ಸೆ.* *ವಾರ್ಷಿಕ ನೇಮೋತ್ಸವದ ಕರೆಯೋಲೆ**ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತೀ ಗರೋಡಿ,  ತೋನ್ಸೆ.* *ವಾರ್ಷಿಕ ನೇಮೋತ್ಸವದ  ಕರೆಯೋಲೆ*
Land for Sale at Neelavara, Udupi District.Land for Sale at Neelavara, Udupi District.
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 115Veez Konkani Illustrated Weekly e-Magazine # 115
Milagres English Medium, School, KallianpurMilagres English Medium, School, Kallianpur
Open Air Dance and Music Festival at Aryan Resorts, near Kemmannu on 7th March.Open Air Dance and Music Festival at Aryan Resorts, near Kemmannu on 7th March.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India