ಉದ್ಯಾವರ: ಜ.19 ಐಸಿವೈಎಮ್ ಸುವರ್ಣ ಮಹೋತ್ಸವ
Kemmannu News Network, 17-01-2020 15:50:28
ಉಡುಪಿ: ಉಡುಪಿ : ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವ್ಯಾಪ್ತಿಯ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ)ಕ್ಕೆ ಸುವರ್ಣ ಮಹೋತ್ಸವ ಸಂಭ್ರಮ. ಜನವರಿ 19, ಆದಿತ್ಯವಾರದಂದು ಸಂಜೆ 5.15 ಕ್ಕೆ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಕ್ರಮಗಳ ಸಂಚಾಲಕರಾದ ಸ್ಟೀವನ್ ಕುಲಾಸೊ ಉದ್ಯಾವರ ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1971ರಲ್ಲಿ ದೇವಾಲಯದ ಸಹಾಯಕ ಧರ್ಮಗಳುಗಳಾಗಿ ಸೇವೆ ಸಲ್ಲಿಸುತ್ತಿದ್ದ ವಂ ಹೆನ್ರಿ ಫೆರ್ನಾಂಡಿಸ್ ರವರು ಅಂದಿನ ಯುವಕ ಯುವತಿಯರನ್ನು ಒಗ್ಗೂಡಿಸಿ ಸಿವೈಎ ಎಂಬ ಹೆಸರಿನೊಂದಿಗೆ ಈ ಸಂಸ್ಥೆಯನ್ನು ಆರಂಭಿಸಿದ್ದರು. ಕಾಲಕ್ರಮೇಣ ಸಿವೈಎ ಹೆಸರು ಬದಲಾಗಿ ಐಸಿವೈಎಂ ಆಗಿ ಈ ಸಂಸ್ಥೆ ಮರು ನಾಮಕರಣವಾಗಿತ್ತು.
“ಸೇವೆಯೊಂದಿಗೆ ನಾಯಕತ್ವ” ಎಂಬ ಧ್ಯೇಯದೊಂದಿಗೆ ಈ ಸಂಸ್ಥೆ ಬೆಳೆದಿದ್ದು, ಸ್ಥಾಪಕ ಅಧ್ಯಕ್ಷರಾಗಿ ದಿ.ಜೊಯ್ಪಿರೇರಾ ಸೇವೆ ಸಲ್ಲಿಸಿದ್ದಾರೆ. ಕಳೆದ49 ವರ್ಷಗಳಲ್ಲಿ ವರ್ಷಂಪ್ರತಿ ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಹೊಸ ಕಾರ್ಯಕಾರಿ ಸಮಿತಿಗಳು ಆಸ್ತಿತ್ವಕ್ಕೆ ಬಂದಿದ್ದು, ಹಲವಾರು ಯುವಕ ಯುವತಿಯರು ಸಂಚಲನದ ನೇತೃತ್ವವನ್ನು ವಹಿಸಿ, ತಮ್ಮ ನಾಯಕತ್ವವನ್ನು ಮತ್ತು ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸಿದ್ದಾರೆ. ಬಡವರಿಗೆ ವೈದ್ಯಕೀಯ ಮತ್ತು ವಿದ್ಯಾರ್ಥಿಗಳಿಗೆ ಸಾಲ್ಕರ್ಶಿಪ್, ವಿವಿಧ ಆರೋಗ್ಯ ತಪಾಸಣ ಶಿಬಿರಗಳು, ನಾಯಕತ್ವದ ಮಾಹಿತಿ, ಯುವ ಸಮಾವೇಶ, ಶ್ರಮದಾನ, ಕ್ರೀಡಾಕೂಟ ಸಹಿತ ದೇವಾಲಯ ಮಾತ್ರವಲ್ಲದೇ, ಗ್ರಾಮದಲ್ಲಿಯೂ ತನ್ನ ಕೈಯಲ್ಲ್ಲಾದಷ್ಟೂ ಸಹಾಯ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸರ್ವರಿಗೂ ಸಹಕಾರಿಯಾಗಿದೆ.
ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಲವಾರು ಯುವಕರು ಧರ್ಮಗುರುಗಳಾಗಿದ್ದು, ದೇವಾಲಯದ ಮತ್ತು ಧರ್ಮ ಪ್ರಾಂತ್ಯಕ್ಕೆ ಸಂತಸದ ವಿಷಯ. ಶ್ರೀಮಂತ ಬಡವ ಎಂಬ ಬೇದವಿಲ್ಲದೆ ಎಲ್ಲಾ ಯುವಕರು ಸಹೋದರ – ಸಹೋದರಿಯಂತೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ತಿಂಗಳಿಗೆ ಒಂದು ಕಾರ್ಯಕ್ರಮದಂತೆ ವರ್ಷಕ್ಕೆ ಕನಿಷ್ಟ 12 ಕಾರ್ಯಕ್ರಮಗಳನ್ನು ಸಂಘಟಿಸಿ ಯುವಕರಿಗೆ ನಾಯಕತ್ವದ ದಾರಿಯನ್ನು ತೋರಿಸಿದೆ. ಈ ಸಂಚಲನದಲ್ಲಿ ಸೇವೆಯಲ್ಲಿಸಿದ ಯುವ ಜನರು ಕೇವಲ ಉದ್ಯಾವರಕ್ಕೆ ಸೀಮಿತವಾಗಿರದೆ ವಲಯ, ಧರ್ಮ ಪ್ರಾಂತ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ನಾಯಕತ್ವವನ್ನು ಪ್ರದರ್ಶಸಿದ್ದಾರೆ.
ಪ್ರಸ್ತುತ ವರ್ಷವು ಐಸಿವೈಎಂ ಉದ್ಯಾವರ ಘಟಕಕ್ಕೆ 50ನೇ ವರ್ಷ. ಸುವರ್ಣ ಮಹೋತ್ಸವ ಸಂಭ್ರಮವನ್ನು ಐತಿಹಾಸಿಕವಾಗಿ ನಡೆಸಲು ಈ ಸಂಘಟನೆಯು ನಿರ್ಧರಿಸಿದೆ. ಪ್ರಸ್ತುತ ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ, ಧರ್ಮ ಪ್ರಾಂತ್ಯದ ಕುಲಪತಿ ಅತಿ ವಂದನೀಯ ಸ್ಟಾನಿ.ಬಿ ಲೋಬೊರವರ ವಿಶೇಷ ಮುತುವರ್ಜಿಯಿಂದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳಿಗಾಗಿ, ಸುವರ್ಣ ಮಹೋತ್ಸವದ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಈ ಸಮಿತಿಯಲ್ಲಿ ಅಂದಿನ ಸಿವೈಎದಿಂದ ಇಂದಿನ ಐಸಿವೈಎಂ ವರೆಗೆ ಸೇವೆ ಸಲ್ಲಿಸಿದ ಹಲವಾರು ಹಿರಿಯ ಕಿರಿಯ ಸದಸ್ಯರಿಗೆ ಪ್ರಧಾನ ಸಮಿತಿ ಮತ್ತು ಸಹ ಸಮಿತಿಗಳಿಗೆ ಆಯ್ಕೆ ಮಾಡಲಾಗಿದೆ. ಐಸಿವೈಎಂ ಸಂಘಟನೆಯ ಮಾಜಿ ಅಧ್ಯಕ್ಷ ಪ್ರಸ್ತುತ ದೇವಾಲಯದ ಕಾರ್ಯದರ್ಶಿ ಮೈಕಲ್ ಡಿಸೋಜಾರವರನ್ನು ಅಧ್ಯಕ್ಷರನ್ನಾಗಿ, ಡೋರಾ ಅರೋಜಾರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಿಲಾಗಿದೆ. ಈ ಸಂಘಟನೆಯ ದಶಮಾನೋತ್ಸವದ ಅಧ್ಯಕ್ಷರಾಗಿ ಯಶಸ್ವಿ ಕಾರ್ಯಕ್ರಮಗಳನ್ನು ಅಯೋಜಿಸಿದ್ದ, ಪ್ರಸ್ತುತ ಯಶಸ್ವಿ ಉದ್ಯಮಿ ನೋರ್ಬರ್ಟ್ ಕ್ರಾಸ್ಟೊರವರನ್ನು ಸುವರ್ಣ ಮಹೋತ್ಸವ ಸಮಿತಿಯ ಗೌರವದ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಸಂಘಟನೆಯ ಅದ್ಯಾತ್ಮಿಕ ನಿರ್ದೇಶಕರಾಗಿ ಅತಿ ವಂದನೀಯ ಸ್ಟಾನಿ ಬಿ ಲೋಬೊರವನ್ನು ಆಯ್ಕೆ ಮಾಡಲಾಗಿದೆ. ಸುವರ್ಣ ಮಹೋತ್ಸವದ ವರ್ಷದಲ್ಲಿ 50 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಸಂಚಾಲಕರರಾಗಿ ಸ್ಟೀವನ್ ಕುಲಾಸೊರವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಸಮಿತಿ ಸಹಿತ ಸಹ ಸಮಿತಿಗಳನ್ನು ರಚಿಸಲಾಗಿದ್ದು. ಹಲವಾರು ಮಂದಿಗೆ ತಮ್ಮ ನಾಯಕತ್ವ ಮತ್ತು ಪ್ರತಿಭೆಯನ್ನು ತೋರ್ಪಡಿಸಲು ಅವಕಾಶ ದೊರಕಿದೆ.
ಸುವರ್ಣ ಮಹೋತ್ಸವದ ಉದ್ಘಾಟನೆಯು ಇದೇ ತಿಂಗಳ 19 ರಿಂದ ಆದಿತ್ಯವಾರ ಸಂಜೆ 5.15ಕ್ಕೆ ಉದ್ಯಾವರ ಸಂತ ಫ್ರಾನಿಸ್ಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ ಜರುಗಲಿದೆ. ಮಾಜಿ ಕೇಂದ್ರ ಸಚಿವೆ ,ಮಾಜಿ ರಾಜ್ಯ ಪಾಲರಾಗಿ ಸೇವೆ ಸಲ್ಲಿಸಿದ ಗೌರವಾನ್ವಿತ ಮಾರ್ಗರೇಟ್ ಅಳ್ವಾ ಸುವರ್ಣ ಮಹೋತ್ಸವದ ಮತ್ತು 50 ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಲಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾಗಿರುವ ಪರಮ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ , ಧರ್ಮ ಪ್ರಾಂತ್ಯದ ಕುಲಪತಿ ಅತಿ ವಂದನೀಯ ಸ್ಟಾನಿ ಬಿ ಲೋಬೋ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂದನೀಯ- ವಲೇರಿಯನ್ ಮೆಂಡೊನ್ಸಾ, ಸ್ಥಾಪಕ ಧರ್ಮಗುರು ವಂ ಹೆನ್ರಿ ಫೆರ್ನಾಂಡಿಸ್, ಐಸಿವೈ ಎಂ ಕರ್ನಾಟಕ ಪ್ರಾಂತೀಯ ಅಧ್ಯಕ್ಷ ಜೈಸನ್ ಪಿರೇರಾ , ಸಂಸ್ಥೆಯ ಗೌರವದ್ಯಕ್ಷ ನೋಬರ್ಟ್ ಕ್ರಾಸ್ಟೋ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ, ಸಹಾಯಕ ಧರ್ಮಗುರು ವಂದನೀಯ ರೊಲ್ವಿನ್ ಅರಾನ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದವವರನ್ನು ಮತ್ತು ನಿರ್ಧೇಶಕರಾಗಿ ಸೇವೆ ಸಲ್ಲಿಸಿದವರಿಗೆ ಗೌರವಿಸುವ ಕಾರ್ಯಕ್ರಮವಿದೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮವಾಗಿ ಐಸಿವೈಎಂ ಸಂಘಟನೆಯ ಮಾಜಿ ಮತ್ತು ಹಾಲಿ ಸದಸ್ಯರಿಂದ ಕೊಂಕಣಿ ಹಾಸ್ಯಮಯ ನಾಟಕ “ಬೇವಾರಿಸ್” ಪ್ರದರ್ಶವಾಗಿಲಿದೆ. ನಾಟಕದ ರಚನೆಯನ್ನು ಜೋನಿ ಮರಿಯ ಭೂಮಿ, ಖ್ಯಾತ ನಿರ್ಧೇಶಕ ಗಣೇಶ್ ರಾವ್ ಎಲ್ಲೂರು ಈ ನಾಟಕದ ನಿರ್ದೇಶನ ಮಾಡುತ್ತಿದ್ದಾರೆ.
ಜನವರಿ 19 ರಂದು ಉದ್ಘಾಟನಾ ಸಮಾರಂಭಕ್ಕೆ ಪೂರ್ವಬಾವಿಯಾಗಿ ಸಂಜೆ 4 ಗಂಟೆಗೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋರವರ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಧ್ಯಾತ್ಮಿಕ ನಿರ್ದೇಶಕರಾದ ಅತಿ ವಂದನೀಯ ಸ್ಟ್ಯಾನಿ ಬಿ ಲೋಬೊ, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡೋರಾ ಆರೋಜ, ನಿರ್ದೇಶಕರಾದ ಜೆರಾಲ್ಡ್ ಪಿರೇರ, ರೊನಾಲ್ಡ್ ಡಿಸೋಜ, ಸಮಿತಿಯ ಉಪಾಧ್ಯಕ್ಷರಾದ ವಿಲ್ಫ್ರೆಡ್ ಡಿಸೋಜ, ಐಸಿವೈಎಂ ಉದ್ಯಾವರದ ಉಪಾಧ್ಯಕ್ಷ ಮರ್ವಿನ್ ಡಿ ಅಲ್ಮೇಡಾ, ಉಡುಪಿ ವಲಯದ ಕೋಶಾಧಿಕಾರಿ ರೊಯ್ಸ್ಟನ್ ಲೂವಿಸ್, ಸುವರ್ಣ ಮಹೋತ್ಸವ ಸಮಿತಿಯ ಸದಸ್ಯರಾದ ಪ್ರೇಮ್ ಮಿನೇಜಸ್, ಪ್ರವೀಣ್ ಪಿಂಟೋ, ಗ್ಲಾಡಿಸ್ ಪಿರೇರಾ ಉಪಸ್ಥಿತರಿದ್ದರು .
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of John Henry Almeida (71 years) | LIVE from Udyavara

Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Bernard G D’Souza | LIVE from Moodubelle

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..
