ಮೀಸಲಾತಿಗೆ ಮೀಸಲಾದರೆ ಬಾಬಾ ಸಾಹೇಬರು ...?!. - ಪ್ರದೀಪ್ ಡಿ.ಎಮ್


Pradeep D.M Havanje.

Write Comment     |     E-Mail To a Friend     |     Facebook     |     Twitter     |     Print


ಮೀಸಲಾತಿಗೆ ಮೀಸಲಾದರೆ ಬಾಬಾ ಸಾಹೇಬರು ...?!.

"ಜ್ಞಾನವು ಸುಮ್ಮನೆ ನಮ್ಮ ಕಡೆ ಬರುವುದಿಲ್ಲ ಅದು ನಿರಂತರ ಪ್ರಯತ್ನದ ಫಲ" - ಡಾ।ಬಾಬಾಸಾಹೇಬ್ ಅಂಬೇಡ್ಕರ್

 ಭಾರತ ರತ್ನ ,ಭಾರತದ ಸಂವಿಧಾನದ ಶಿಲ್ಪಿ ಆಧುನಿಕ ಮನು ,ಡಾ।। ಬಿ.ಆರ್ ಅಂಬೇಡ್ಕರರು 1891ರ   ,ಏಪ್ರಿಲ್ 14 ರಂದು  ಮಹಾರಾಷ್ಟ್ರದ
 ರತ್ನಗಿರಿ ಜಿಲ್ಲೆಯ ಅಂಬೇವಾಡಿಯಲ್ಲಿ  (ಈಗಿನ ಮಧ್ಯ ಪ್ರದೇಶದ  ಮೂವ್ ಪ್ರದೇಶ ) ಜನಿಸಿದರು. ತಂದೆ ರಾಮ್ ಜಿ  ಸಕ್ಬಾಲ್ ತಾಯಿ ಭೀಮಾಬಾಯಿ.ಭೀಮರಾವ್ ಬಾಲ್ಯದಲ್ಲಿ ಶಾಲೆಗೆ ಸೇರಿಕೊಳ್ಳಲು ಪಟ್ಟ ಪಾಡು!  ಅನೇಕ ಷರತ್ತುಗಳೊಂದಿಗೆ  ತರಗತಿಯಲ್ಲಿ  ಪ್ರತ್ಯೇಕವಾಗಿ ಚಿಕ್ಕ ಚಾಪೆಯಲ್ಲಿ ಕುಳಿತುಕೊಂಡು ವಿದ್ಯಾಭ್ಯಾಸ.ತರಗತಿಯಲ್ಲಿ ಸಹಪಾಠಿಗಳ ಜೊತೆಗೆ ಒಟ್ಟಿಗೆ ಸೇರಲಾಗದೆ ,ಜೊತೆಯಾಗಿ ಆಟ ಆಡಲಾಗದ ಪರಿಸ್ಥಿತಿ ,ನೀರು ಬೇಕೆಂದರೆ ಎತ್ತರದಿಂದ ಸುರಿದು ಬಿಡುತ್ತಿದ್ದ ಶಾಲಾ ಕೆಲಸದವ !ಆತ ಶಾಲೆಗೆ ರಜೆ ಹಾಕಿದರಂತು ಅಂದು ಭೀಮ್ ರಾವ್ ನೀರು ಕುಡಿಯಾಲಾಗದೆ ಹಾಗೇಯೇ ಉಳಿದು ಬಿಡುತ್ತಿದ್ದ.ಅದೇ ಸಮಯದಲ್ಲಿ ತಾಯಿಯ ಸಾವು. ಗೋರೆಗಾಂವ್ ಗಾಡಿಯಲ್ಲಿ ಆದ ಅಸ್ಪೃಶ್ಯತೆಯ ಕರಾಳ ದರ್ಶನ ಭೀಮನ ಬದುಕಿನ ದಾರಿಯನ್ನು ಇನ್ನಷ್ಟು ಘಾಸಿಗೊಳಿಸಿತು. ಶಾಲೆಯಲ್ಲಿ ಅಂಬೇಡ್ಕರ್ ಎಂಬ ಗುರುಗಳ ಪ್ರೀತಿ ,ಮಾರ್ಗದರ್ಶನ, ಪ್ರೋತ್ಸಾಹ, ಮುಂದೆ ಭೀಮನ ಬದುಕಿನಲ್ಲಿ ಗುರುಗಳ ಹೆಸರು ಮುಂದುವರಿಯಿತು.ಕೇಳಸ್ಕರ್ ಗುರುಗಳು ಅಂಬೇಡ್ಕರರಿಗೆ ಹೆಚ್ಚು ಸಹಾಯವನ್ನು ಮಾಡಿದರು.ಮುಂದೆ
ಮೆಟ್ರಿಕ್ಯುಲೇಷನ್ ಪರೀಕ್ಷೆ ತೇರ್ಗಡೆಯಾದ ಅಂಬೇಡ್ಕರರ  ಸಾಧನೆಗೆ ಬರೋಡದ ಮಹಾರಾಜರಿಂದ ಅಂಬೇಡ್ಕರರಿಗೆ  ಅಮೆರಿಕದಲ್ಲಿ ಉನ್ನತ ಅಧ್ಯಯನಕ್ಕೆ   ವಿದ್ಯಾರ್ಥಿ ವೇತನದ ಮೂಲಕ ಸಹಾಯ ದೊರಕಿತು. ಈ ಪ್ರೋತ್ಸಾಹದಿಂದ ಅವರು ಕಾನೂನು ಪದವೀಧರರಾದರು.

ಕೊಲಂಬಿಯಾ ಮತ್ತು ನ್ಯೂಯಾರ್ಕ್ ನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಿದ ಅಂಬೇಡ್ಕರರು ಭಾರತದಲ್ಲಿನ ಸಾಮಾಜಿಕ ಪರಿಸ್ಥಿತಿ,ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಹಣಕಾಸು ಎಂಬ ಮಾಹಾ  ಪ್ರಬಂಧಗಳನ್ನು ಮಂಡಿಸುವುದರ ಮೂಲಕ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು.ನಂತರ ಮತ್ತಷ್ಟು ಪ್ರಬಂಧವನ್ನು ಮಂಡಿಸಿದರು.ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಬಂದ ಅಂಬೇಡ್ಕರರು ಭಾರತದಲ್ಲಿ ಅಸ್ಪೃಶ್ಯತೆಯ ಕರಾಳ ದರ್ಶನ ಅನುಭವಿಸಿದರು .ನಾಸಿಕ್ ಕಾಳ ರಾಮ ದೇವಸ್ಥಾನ ಪ್ರವೇಶಕ್ಕೆ ಅಸ್ಪೃಶ್ಯರಿಗಿದ್ದ  ನಿರ್ಬಂಧ ಮತ್ತು ಮಹಾಡದ ಚೌಡರ್ ಕೆರೆಯಲ್ಲಿ ನೀರಿನ  ಹೋರಾಟದಲ್ಲಿ  ಯಶಸ್ವಿಯಾದ ಬಾಬಾಸಾಹೇಬರು ಜ್ಯೋತಿ ಬಾ ಪುಲೆ,ಬುದ್ಧನ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಮುಂದೆ  ಅಸ್ಪೃಶ್ಯ ಜನಾಂಗದ ನಾಯಕರಾಗಿ ಬೆಳೆದರು. ಬರೋಡದ ಮಹಾರಾಜರಲ್ಲಿ  ಕೆಲವು ಕಾಲ ಸೇವೆ ಸಲ್ಲಿಸಿದ ಅಂಬೇಡ್ಕರರು ಮುಂದೆ 1917  ರಲ್ಲಿ ಮುಂಬಯಿ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಹಿಂದುಳಿದ ಜನಾಂಗದವರ ಅಭಿವೃದ್ಧಿಗಾಗಿ, ವಿಮೋಚನೆಗಾಗಿ ಅನೇಕ  ಸಾರ್ವಜನಿಕ  ಸಭೆಗಳಲ್ಲಿ ಭಾಗವಹಿಸಿದರು.ಹೆಂಡತಿ ರಮಾಬಾಯಿ ಅಂಬೇಡ್ಕರರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

ದುಂಡು ಮೇಜಿನ ಸಭೆಯಲ್ಲಿ ಅಸ್ಪೃಶ್ಯ ಮುಂದೆಯೂ ಜನಾಂಗದ ನಾಯಕರಾಗಿ ಭಾಗವಹಿಸಿದ ಅಂಬೇಡ್ಕರರು ಹಿಂದುಳಿದ ಜನಾಂಗದ ಅಭಿವೃದ್ಧಿಗಾಗಿ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು  ಕೇಳಿದರು.ಬಾಬಾ ಸಾಹೇಬರ ಈ ಸಾಮಾಜಿಕ ಚಿಂತನೆಯ ನಡೆ ಗಾಂಧೀಜಿ ಮತ್ತು ಅಂಬೇಡ್ಕರರ ನಡುವೆ ಒಡಕು ಮೂಡಿ. ಗಾಂಧೀಜಿ ಅಮರಣಾಂತ ಉಪವಾಸ ಕೈಗೊಂಡರು ನಂತರ ಹಲವು ನಾಯಕರ ಒತ್ತಾಯದ ಮೇರೆಗೆ ಅಂಬೇಡ್ಕರರು ಅಸ್ಪೃಶ್ಯರಿಗೆ ಕೇಳಿದ್ದ ಪ್ರತ್ಯೇಕ ಮತದಾನದ ಹಕ್ಕನ್ನು  ಕೈ ಬಿಟ್ಟರು. ಈ ಘಟನೆ ಭಾರತದಲ್ಲಿನ ಅಸ್ಪೃಶ್ಯರ ಬದುಕಿಗೆ ಮಹಾ ಸೋಲಾಗಿ ಪರಿಣಮಿಸಿತು.ಮುಂದೆ ಅಂಬೇಡ್ಕರರು ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಿ ಬರಲು ಹಲವಾರು ಅಡೆ ತಡೆಗಳು ಉಂಟಾದವು ಕೊನೆಗೆ ಸಂವಿಧಾನ ರಚನೆ ಸಭೆಗೆ ಏಳು ಮಂದಿ ಆಯ್ಕೆಯಾದರು ಅದರಲ್ಲಿ ಅಂಬೇಡ್ಕರರು ಸಂವಿಧಾನ ಕರಡು ಸಮಿತಿಯ  ಅಧ್ಯಕ್ಷರಾಗಿ ಆಯ್ಕೆಯಾದರು. ಸಂವಿಧಾನ ಸಭೆಗೆ ಸಂವಿಧಾನಾತ್ಮಕ ಸಲಹೆಗಾರರಾಗಿ ಬಿ.ಎನ್.ರಾವ್ ನೇಮಕಗೊಂಡರು. ಸಂವಿಧಾನ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಂಬೇಡ್ಕರರು ಹಗಲು ರಾತ್ರಿಯೆನ್ನದೆ ಭಾರತೀಯರಿಗೆ ಒಪ್ಪತಕ್ಕ ಸಂವಿಧಾನವನ್ನು  ಬ್ರಿಟನ್ ,ಅಮೇರಿಕ,ಐಲೆ೯ಂಡ್ ,ಫ್ರಾನ್ಸ್ ,ಕೆನಡಾ ,ಜಪಾನ್,

ಜಮ೯ನಿ ದೇಶದ ಸಂವಿಧಾನ ,ಕಾನೂನುಗಳನ್ನು ಅಧ್ಯಯನ ಮಾಡಿ 2 ವರುಷ ,11 ತಿಂಗಳು,18 ದಿನಗಳಲ್ಲಿ   ಸಾರ್ವಭೌಮ , ಸಮಾಜವಾದಿ ,ಜಾತ್ಯತೀತ, ಪ್ರಜಾಸತ್ತಾತ್ಮಕ  ಗಣರಾಜ್ಯವಾಗಿ  ಸಮಾನತೆಯ ಸಂವಿಧಾನವನ್ನು 1950 ಜನವರಿ  26 ರಂದು  ಭಾರತೀಯರಿಗೆ ಭಾರತೀಯರೇ ಅರ್ಪಿಸಿಕೊಂಡರು. ಸದಾ ಹಿಂದುಳಿದ ಜನಾಂಗದ ಉದ್ಧಾರಕ್ಕಾಗಿ ದುಡಿದರು.

"ಮನುಷ್ಯರನ್ನು ಮನುಷ್ಯರನ್ನಾಗಿ ನೋಡದ ಧರ್ಮವು ಧರ್ಮವಲ್ಲ "
 "ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೆಂಬ ಭಾವನೆ ಬೇಕಾಗಿಲ್ಲ
ಮನುಷ್ಯರ ದೃಷ್ಟಿಯಲ್ಲಿ ಎಲ್ಲರು ಸಮಾನರು ಎಂಬ ಭಾವನೆ ಬೇಕಾಗಿದೆ."

ಧರ್ಮ ಭೇದಭಾವದಲ್ಲಿ ಸೋತು ದಣಿದಿದ್ದ ಅವರು  ತಮ್ಮ ಅನುಯಾಯಿಗಳು ಜೊತೆಗೆ ಬೌದ್ಧ ಧರ್ಮ  ಸ್ವೀಕರಿಸಿದರು. 1956 ಡಿಸೆಂಬರ್ 06 ರಂದು ಬಾಬಾಸಾಹೇಬರು ಪರಿ ನಿಬ್ಬಾಣ ಹೊಂದಿದರು.ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಿರಿ ಪ್ರೀತಿಯಿಲ್ಲದ ಸೇವೆ ಸೇವೆಯಲ್ಲ  ಎಂಬುದು ಅವರ ಜೀವನ ಸಿದ್ಧಾಂತವಾಗಿತ್ತು.

ಬಾಬಾಸಾಹೇಬ ಅಂಬೇಡ್ಕರರು ರಚಿಸಿದ ಸಂವಿಧಾನ ಕೇವಲ ಒಂದು ಜನಾಂಗ, ಜಾತಿ ,ಧರ್ಮಕ್ಕೆ ಸೀಮಿತವಾಗಿಲ್ಲ.ನೆಹರು ಅವರ ಮಂತ್ರಿ ಮಂಡಲದಲ್ಲಿ  ಕಾನೂನು ಮಂತ್ರಿಯಾಗಿದ್ದ ಡಾಕ್ಟರ್ ಬಿ.ಆರ್ ಅಂಬೇಡ್ಕರರು ಮಹಿಳೆಯರಿಗಾಗಿ ಹಿಂದೂ ಕೋಡ್ ಬಿಲ್, ಆಸ್ತಿಯ ಹಕ್ಕನ್ನು ಜಾರಿಗೆ ತಂದರು. ಹೆಣ್ಣು ಮಕ್ಕಳು ಬಾಬಾಸಾಹೇಬರನ್ನು ಸದಾ ನೆನಪಿಸಿಕೊಳ್ಳಬೇಕಾಗಿದೆ.

ಬಾಬಾಸಾಹೇಬ್ ಅಂಬೇಡ್ಕರರು ತಾನು ಬದುಕುಳಿದ ಅಷ್ಟು ದಿನವೂ ಎಲ್ಲಾ ಜನಾಂಗದ ಸಮಾನತೆ ಬದುಕಿಗೆ ಹೋರಾಡಿದರು. ಸಂವಿಧಾನದ ಪ್ರತಿಫಲ ಕಟ್ಟ ಕಡೆಯ ಭಾರತೀಯನಿಗೂ ತಲುಪಬೇಕೆಂಬುದು ಅವರ ಆಶಯವಾಗಿತ್ತು. ಸವ೯ ಸಮಾನತೆಯ ಗೌರವದ ಬದುಕಿಗೆ  ತಮ್ಮ ಸಂವಿಧಾನದಲ್ಲಿ ಕೊಡುಗೆ ನೀಡಿದ್ದರು.ಆದರೂ  ಭಾರತೀಯರಿಗೆ ಅಂಬೇಡ್ಕರರು ಯಾಕೆ ಮೀಸಲಾತಿಗೆ ಮೀಸಲಾದರು !? ಉತ್ತರಿಸಲಾಗದ ಪ್ರಶ್ನೆಯಾಗಿ ಕಾಡುತಿದೆ.ಎಪ್ರಿಲ್ 14 ಬಾಬಾಸಾಹೇಬರ  129 ಜನ್ಮ ದಿನಾಚರಣೆಯ ಈ ಶುಭ ದಿನವನ್ನು ಅರ್ಥಪೂರ್ಣವಾಗಿ  ನಮ್ಮ  ಮನೆ ಮನಗಳಲ್ಲಿ ಆಚರಿಸೋಣ.ವಿಶ್ವದ ನಾನಾ ರಾಷ್ಟ್ರಗಳು ಅಂಬೇಡ್ಕರರ ವಿದ್ಯಾಭ್ಯಾಸ  ,ಜ್ಞಾನ ,ವಿದ್ವತ್ ,ಸಾಮಾಜಿಕ ಸೇವೆ,ಹೋರಾಟ ಗಮನಿಸಿ  ನೀಡುತ್ತಿರುವ ಗೌರವ ,ಅಭಿನಂದನೆಗಳು,ಪ್ರೀತಿಗಳನ್ನು ನೋಡಿದಾಗ ತಿಳಿಯುತ್ತದೆ ಬಾಬಾಸಾಹೇಬರು ಕೇವಲ ಜನಾಂಗದ ನಾಯಕರಲ್ಲ .ವಿಶ್ವದ ಮಹಾನ್ ನಾಯಕರಾಗಿದ್ದಾರೆ ಆದರೂ ಭಾರತೀಯರಿಗೇಕೆ ಅವರು ಮೀಸಲಾತಿಗೆ ಮೀಸಲಾದರು!?.... 

 -ಪ್ರದೀಪ್ ಡಿ.ಎಮ್.ಹಾವಂಜೆ,  ಉಡುಪಿ .
 ಶಿಕ್ಷಕ ಕವಿ ,ಬರಹಗಾರ ,ನಿರೂಪಕ , ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ಉದ್ಘೋಷಕ.

Comments on this Article
kishore, santhekatte Mon, April-13-2020, 8:26
nice article
Agree[1]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Udupi: Traffic congestion and dangers to pedestria
View More

Congratulations to Rochelle D Souza.Congratulations to Rochelle D Souza.
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Donate Your Old Smart Phone this DiwaliDonate Your Old Smart Phone this Diwali
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
The Tablet - International Catholic WeeklyThe Tablet - International Catholic Weekly
GSB delicacies at Hotte Thumba Fish Court UdupiGSB delicacies at Hotte Thumba Fish Court Udupi
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Computerised Clinical Laboratory, Kemmannu.Computerised Clinical Laboratory, Kemmannu.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India