ಕಲ್ಯಾಣಪುರದ ಬುಲ್ ಬುಲ್ ಸಿಂಧೂರಿ ಬಗ್ಗೆಯೇ ಎಲ್ಲ ಮಾತು; ಸಿಎಂ ಯಡಿಯೂರಪ್ಪರಿಂದಲೂ ಪ್ರಶಂಸೆ


News18

Write Comment     |     E-Mail To a Friend     |     Facebook     |     Twitter     |     Print


ಕಲ್ಯಾಣಪುರದ ಬುಲ್ ಬುಲ್ ಸಿಂಧೂರಿ ಬಗ್ಗೆಯೇ ಎಲ್ಲ ಮಾತು; ಸಿಎಂ ಯಡಿಯೂರಪ್ಪರಿಂದಲೂ ಪ್ರಶಂಸೆ

ಸಿಂಧೂರಿಗೆ ಒಂದು ಕೈ ಇಲ್ಲದಿದ್ದರೂ ಸ್ವಂತವಾಗಿ ಮಾಸ್ಕ್ಗಳನ್ನ ಹೊಲಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ತನ್ನ ಅಂಗನ್ಯೂನತೆಗೆ ಜಗ್ಗದ ಈಕೆ ಸೈಕ್ಲಿಂಗ್ ಸೇರಿದಂತೆ ಅನೇಕ ಚಟುವಟಿಕೆಗಳನ್ನ ನಿರಾಯಾಸವಾಗಿ ಮಾಡುತ್ತಾಳೆ.

ಉಡುಪಿ(ಜೂನ್ 23):-ಕೊರೋನಾ ವಾರಿಯರ್ಸ್​ಗೆ ಮಾನಸಿಕ ಬೆಂಬಲ ನೀಡುವ ಮೂಲಕ ಸದ್ಯ ಸುದ್ದಿಯಾಗಿದ್ದಾಳೆ ಈ ಪುಟ್ಟ ಬಾಲಕಿ. ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ವಿಡಿಯೋ ವೈರಲ್ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ, ಈಕೆಯ ಕಾರ್ಯ ಮೆಚ್ಚಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರೇ ಟ್ವೀಟ್ ಮಾಡಿ ಶಹಬಾಸ್ ಎಂದಿದ್ದಾರೆ.

ಉಡುಪಿಯ ಕಲ್ಯಾಣಪುರದ ನಿವಾಸಿಗಳಾದ ಸುಧೀರ್ ಮತ್ತು ರೇಣುಕಾ ದಂಪತಿಯ ಪುತ್ರಿ ಸಿಂಧೂರಿ ಈಕೆ. ಕಲ್ಯಾಣಪುರದ ಮೌಂಟ್ ರೊಸರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಈಕೆ ಓದಿನಲ್ಲೂ ಮುಂದು. ಸ್ಕೌಟ್ಸ್ ಆಂಡ್ ಗೈಡ್​ನಲ್ಲಿ ಬುಲ್ ಬುಲ್ ಆಗಿರೋ ಸಿಂಧೂರಿ ಕೋರೋನಾ ಸಮರದಲ್ಲಿ ಕೈಜೋಡಿಸಿದ್ದಾಳೆ. ಮಾಸ್ಕ್ ಹೊಲಿಯುವ ಮೂಲಕ ಕೊರೋನಾ ಸಮರದಲ್ಲಿ ತನ್ನನೂ ತೊಡಗಿಸಿಕೊಂಡಿದ್ದಾಳೆ. ನಾವು‌ ನೀವು‌ ಮಾಸ್ಕ್ ಹೊಲಿದ್ರೆ ಅದು ಮಹಾನ್ ಸಾಧನೆ ಯಲ್ಲ‌ ಬಿಡಿ. ಅದ್ರೆ ಈಕೆಗೆ ಹುಟ್ಟಿನಿಂದಲೇ ಒಂದು ಕೈ ಬೆಳವಣಿಗೆ ಇಲ್ಲ. ಬಲಗೈ ಮಾತ್ರ ಸಹಜವಾಗಿದೆ. ಎಡಗೈ ಬೆಳವಣಿಗೆಯಾಗಿಲ್ಲ. ಈಕೆ ಒಂದೇ ಕೈ ಬಳಸಿ 15 ಮಾಸ್ಕ್ ತಯಾರಿ ಮಾಡಿದ್ದಾಳೆ.

ಮೌಂಟ್ ರೆಸರಿಯೊ ಶಾಲೆಯ ಅಧ್ಯಾಪಕರು ಹತ್ತನೇ ಕ್ಲಾಸ್ ಮಕ್ಕಳ ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ಮಕ್ಕಳಿಗೆ ಮಾಸ್ಕ್ ತಯಾರಿಸಲು ಸೂಚಿಸಿದ್ದಾರೆ. ಆದರೆ, ತನ್ನ ಅಂಗನ್ಯೂನತೆ ಲೆಕ್ಕಿಸದೆ  ಸಿಂಧೂರಿ ಕೂಡ ಹಟ ತೊಟ್ಟು ಮಾಸ್ಕ್ ಹೊಲಿದು ಸ್ಕೂಲ್ ಟೀಚರ್​ಗೆ ಕೊಟ್ಟು ಶಬ್ಬಾಸ್​​ಗಿರಿ ‌ಪಡೆದಿದ್ದಾಳೆ. ತನ್ನ ಒಂದೇ ಕೈಯಲ್ಲಿ ಮಾಸ್ಕ್ ಹೊಲಿದು ತಂದ ಸಿಂದೂರಿಗೆ ಅಧ್ಯಾಪಕರು ಬೇಷ್ ಅಂದ್ರೆ, ಮನೆ ಮಂದಿ ಕೂಡ ಆಕೆಯ ಆಸೆಗೆ ಆಸರೆ ಯಾಗಿದ್ದಾರೆ.

ತಾನೇ ಮಾಸ್ಕ್ ಹೊಲಿದು ಕೊಡುತ್ತೇನೆ ಎಂದು ಹಠಬಿದ್ದ ಬಾಲಕಿಗೆ ಹೇಗೆ ಒಂದು ಕೈ ಯಲ್ಲಿ ಮಾಸ್ಕ್ ಸಿದ್ದಮಾಡಬಹುದು ಅನ್ನೊ‌ ಭಯ ಇದ್ದರೂ ಪೋಷಕರು ವಿಶ್ವಾಸ ತುಂಬಿದ್ಧಾರೆ. ಆಕೆ ಮಾಸ್ಕ್ ತಯಾರಿಸಿದ ವಿಡಿಯೋ ಸದ್ಯ ಸಖತ್ ವೈರಲ್ ಅಗಿದೆ. ರಾಜ್ಯ ಮುಖ್ಯಮಂತ್ರಿ ಬಿಎಸ್​ವೈ ಕೂಡ ಆಕೆಯ ಕಾರ್ಯ ಕಂಡು ಟ್ವೀಟ್ ಮಾಡಿದ್ದಾರೆ. ಈ ಕೆಲಸ ಕೋರೋನಾದಂತಹ ಮಾರಿ ವಿರುದ್ಧದ ಹೋರಾಟಕ್ಕೆ‌ ಮತ್ತಷ್ಟು ಬಲ ನೀಡುತ್ತೆ ಸಿಎಂ ಬರೆದುಕೊಂಡಿದ್ದಾರೆ.

Proud of this young Covid warrior Sindhuri.

Her smile as she stitches that mask inspires all of us to go beyond our limitations and strengthens us to fight this battle together.

God bless you!#Covid19Warrior#KarnatakaFightsCorona@BSYBJP_https://twitter.com/XpressBengaluru/status/1275080393721434112?s=09 …

TNIE Karnataka

@XpressBengaluru

Sindhuri, little #CovidWarrior & differently abled class 6 school girl from #Udupi learnt stitching during lockdown. Now she is stitching face masks for SSLC students. She takes 10 mins/ mask

Story : @prakash_TNIE@nimmasuresh@ShobhaBJP@santwana99 https://www.youtube.com/watch?v=8ROjxeqlJ9Q …

 

Comments on this Article
Angels foundations, kallianpur Thu, June-25-2020, 4:31
Well done we proud of you
Agree[2]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
BIGGEST FLOOD IN 46 YEARS, KEMMANNU - UDUPI
View More

Now Open - Kallianpura Rotary Dialysis Center at Goretti Hospital, Santhekatte.Now Open - Kallianpura Rotary Dialysis Center at Goretti Hospital, Santhekatte.
Computerised Clinical Laboratory, Kemmannu.Computerised Clinical Laboratory, Kemmannu.
Milarchi Lara - Bulletin Issue July 2020.Milarchi Lara - Bulletin Issue July 2020.
Cut down your medical expenses. With Manipal Arogya CardCut down your medical expenses. With Manipal Arogya Card
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
St. Alphonsa of India