ತೋನ್ಸೆ : ಕೊರೊನಾ ವಾರಿಯರ್ಸ್ ಗಳನ್ನು ಗೌರವಿಸುವ ಮೂಲಕ ನಿರ್ಮಲ್ ತೋನ್ಸೆ ಇದರ ಸ್ಥಾಪನಾ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು. [Video]


RC/TD
Kemmannu News Network, 24-08-2020 09:47:30


Write Comment     |     E-Mail To a Friend     |     Facebook     |     Twitter     |     Print


ತೋನ್ಸೆ : ಕೊರೊನಾ ವಾರಿಯರ್ಸ್ ಗಳನ್ನು ಗೌರವಿಸುವ ಮೂಲಕ ನಿರ್ಮಲ್ ತೋನ್ಸೆ ಇದರ ಸ್ಥಾಪನಾ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.

ಸರಕಾರೇತರ ಪರಿಸರ ಪ್ರೇಮಿ ಸಂಸ್ಥೆ ನಿರ್ಮಲ್ ತೋನ್ಸೆ ಇದರ ಸ್ಥಾಪನಾ ದಿನಾಚರಣೆಯು ಕೊರೊನಾ ವಾರಿಯರ್ಸ್ ಗಳನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಗಸ್ಟ್ 19 ರಂದು ತೋನ್ಸೆ ಹೆಲ್ತ್ ಸೆಂಟರ್ ನಲ್ಲಿ ನಡೆಯಿತು.

ಸ್ಥಾಪನಾ ದಿನವನ್ನು ಸಸಿಯನ್ನು ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ 31ನೇ ತೋನ್ಸೆ ಪಂಚಾಯತ್ ಆಡಳಿತಾಧಿಕಾರಿ ಡಾ. ಪ್ರಶಾಂತ್, ಇತರ ಜೀವಿಗಳಿಗೆ ಮತ್ತು ಮನುಷ್ಯನಿಗೆ ಬುದ್ಧಿಯ ವಿಚಾರದಲ್ಲಿ ಭಿನ್ನತೆ ಇದೆ. ಆದರೆ ಸ್ವಚ್ಛತೆಯನ್ನು ಕಾಪಾಡುವ ವಿಚಾರದಲ್ಲಿ ಮನುಷ್ಯನು ಬುದ್ಧಿಹೀನರಂತೆ ವರ್ತಿಸುವುದು ಬೇಸರದ ಸಂಗತಿ.

ಕೊರೊನಾ ಹಲವಾರು ಪಾಠಗಳನ್ನು ಕಲಿಸಿದೆ. ನಿಸರ್ಗದ ಮೇಲೆ ಅಧಿಪತ್ಯವನ್ನು ಹೊಂದಿದ ಮಾನವ ಈಗ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಹಾಗಿದೆ. ಪ್ರಕೃತಿಯ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ, ಆದರೆ ಋಣ ತೀರಿಸುವಲ್ಲಿ ಸ್ವಲ್ಪವಾದರೂ ಪ್ರಯತ್ನಗಳನ್ನು ನಡೆಸಬೇಕು. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕ್ರಿಯಾಶೀಲ ಪ್ರಯತ್ನಗಳ ಅಗತ್ಯತೆಯಿದೆ, ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಾಂಘಿಕವಾದ ಪ್ರಯತ್ನಗಳು ನಡೆಯಬೇಕು. ಕೊರೊನಾ ವಾರಿಯರ್ಸ್ ಗಳ ಸೇವೆಯನ್ನು ವರ್ಣಿಸಲು ಪದಗಳ ಕೊರತೆಯಿದೆ. ಸಮರ್ಪಣಾ ಮನೋಭಾವದಿಂದ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿದ್ದ ಸ್ವಚ್ಛ ಭಾರತ್ ಫ್ರೆಂಡ್ಸ್ ಸ್ಥಾಪಕರಾದ ಗಣೇಶ್ ಪ್ರಸಾದ್ ಜಿ. ನಾಯಕ್ ಮಾತನಾಡುತ್ತಾ, ಕಲಿಯುಗದಲ್ಲಿ ಕೊರೊನಾ ವಾರಿಯರ್ಸ್ ಗಳೇ ಕಣ್ಣಿಗೆ ಕಾಣುವ ದೇವರು. ತಮ್ಮ ಜೀವದ ಹಂಗು ತೊರೆದು ಸಮಾಜದ ಒಳಿತಿಗಾಗಿ ವೈದ್ಯರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ನಡೆಸುವ ಕಾರ್ಯವು ಎಲ್ಲರಿಗೂ ಪ್ರೇರಣೆಯಾಗಿದೆ. ನಿರ್ಮಲ್ ತೋನ್ಸೆ ಸಂಸ್ಥೆ ಪರಿಸರ ರಕ್ಷಣೆಯಲ್ಲಿ ಶ್ಲಾಘನೀಯ ಕಾರ್ಯವನ್ನು ನಡೆಸುವ ಮೂಲಕ ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿರ್ಮಲ್ ತೋನ್ಸೆ ಅಧ್ಯಕ್ಷರಾದ ವೆಂಕಟೇಶ್ ಜಿ. ಕುಂದರ್, ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಬೆಳಕನ್ನು ಚೆಲ್ಲಿದರು. ಮುಂದಿನ ಯೋಜನೆಗಳ ಬಗ್ಗೆಯೂ ವಿಸ್ತ್ರತವಾಗಿ ಮಾತನಾಡಿದರು. ಕೊರೊನಾ ವಾರಿಯರ್ಸ್ ಗಳ ಸೇವೆಯನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದ ಅವರು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಾರಿಯರ್ಸ್ ಗಳ ತ್ಯಾಗ ಮತ್ತು ನಿಸ್ವಾರ್ಥ ಉದ್ದೇಶ ಇಡೀ ದೇಶಕ್ಕೆ ಮುನ್ನಡೆಯಲು ಇಂಧನವಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಸುಲೋಚನಾ ಸತೀಶ್, ತೋನ್ಸೆ ಹೆಲ್ತ್ ಸೆಂಟರ್ ಮುಖ್ಯ ವೈದ್ಯಾಧಿಕಾರಿ ಡಾ. ಶೃತಾ ದಯಾನಂದ್,
ನಿರ್ಮಲ್ ತೋನ್ಸೆ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಸ್ವಾಗತಿಸಿ, ನಿರ್ಮಲ್ ತೋನ್ಸೆಯ ಕಾರ್ಯದರ್ಶಿ ಎಂ.ಸಯ್ಯದ್ ಖಾನ್ ಸಂಸ್ಥೆಯ ವರದಿ ವಾಚಿಸಿ ವಂದಿಸಿದರು. ಮೊಹಮ್ಮದ್ ಇದ್ರೀಸ್ ನಿರೂಪಿಸಿದರು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಷಾಯವನ್ನು ನೆರೆದ ಎಲ್ಲರಿಗೂ ವಿತರಿಸಲಾಯಿತು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಬಳಿಕ ಒಳಗೆ ಕಳುಹಿಸಲಾಯಿತು. ಕೊರೊನಾ ವಾರಿಯರ್ಸ್ ಗಳಿಗೆ ಆಹಾರ ಕಿಟ್ ಗಳನ್ನು ನೀಡಲಾಯಿತು.

 

 

 



Comments on this Article
Prakash Mendon, Hampankatte/Oman Mon, August-24-2020, 10:17
Well done Nirmal Thonse and Thonse Health Centre. Mother Nature will be very happy to see these kind of activities and will continue to shower us with Her Grace. Lord Corona Virus has been reminding human beings to read the User or Instruction Manual for the human body which is the most delicate and precious machine God has ever made. When we follow the food style as prescribed by the Creator, it will automatically take care of human body, World body and Mother Nature. It is possible to live without damaging or abusing our own body and the environment. Amen!
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Mercine Lewis (94). Baligere Kudru, KemmannuObituary: Mercine Lewis (94). Baligere Kudru, Kemmannu
Unbelievable Stunts on Beach by local boys| Freestyle Jumps | India | Udupi | KemmannuUnbelievable Stunts on Beach by local boys| Freestyle Jumps | India | Udupi | Kemmannu
The Tablet - International Catholic WeeklyThe Tablet - International Catholic Weekly
GSB delicacies at Hotte Thumba Fish Court UdupiGSB delicacies at Hotte Thumba Fish Court Udupi
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Computerised Clinical Laboratory, Kemmannu.Computerised Clinical Laboratory, Kemmannu.
Milarchi Lara - Bulletin Issue July 2020.Milarchi Lara - Bulletin Issue July 2020.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India