Santhekatte - Kallianpur Road widening work begins.


Richard D’Souza/AL
Kemmannu News Network, 03-10-2020 17:24:54


Write Comment     |     E-Mail To a Friend     |     Facebook     |     Twitter     |     Print


Santhekatte - Kallianpur Road widening work begins.

Santhekatte/Kallianpur, October 10, 2020: The road widening work of the much awaited Santhekatte-Kallianpur Stretch has begun today. Some shops were shifted behind the existing shops as per the markings done by the Municipality officials.

PWD has already sanctioned Rs. 3 Crore for this project and MLA Ragupathi Bhat has laid the foundation to start this work on 2nd October. According to Mr. Ragupathi Bhat a beatiful new roundabout will come-up soon in this place to ease the traffic movement.

ಉಡುಪಿ ಸಂತೆಕಟ್ಟೆ - ಕಲ್ಯಾಣಪುರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ ರೂ. 3 ಕೋಟಿ  ಮಂಜೂರಾಗಿರುವಂತೆ ಇಂದು ದಿನಾಂಕ 08-10-2020 ರಂದು ಶಾಸಕ ಕೆ. ರಘುಪತಿ ಭಟ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಗಡಿಗಳನ್ನು ಗುರುತಿಸಿದರು. ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಮತ್ತು ಅಂಗಡಿಗಳನ್ನು ರವಿವಾರ ಒಳಗಾಗಿ ಸ್ಥಳಾಂತರಿಸುವಂತೆ ಸೂಚಿಸಿ ಬಳಿಕ ಸುಸಜ್ಜಿತವಾದ ಸರ್ಕಲ್ ನಿರ್ಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಮಂಜುಳಾ ನಾಯಕ್, ಬಾಲಕೃಷ್ಣ ಶೆಟ್ಟಿ, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಉಮೇಶ್ ಅಮೀನ್ ಹಾಗೂ ಪಕ್ಷದ ಪ್ರಮುಖರಾದ ಉಮೇಶ್ ಶೆಟ್ಟಿ ಮತ್ತು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಸಹಾಯಕ ಅಭಿಯಂತರರಾದ ಗಿರೀಶ್,   ವಲಯ ಅರಣ್ಯಾಧಿಕಾರಿ ಕ್ಲಿಪರ್ಟ್ ಲೋಬೋ, ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಗುತ್ತಿಗೆದಾರರಾದ ಮಹೇಶ್ ಪಿ. ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

 

ಸಂತೆಕಟ್ಟೆ - ಕಲ್ಯಾಣಪುರ ರಸ್ತೆ ಅಗಲೀಕರಣ ಅಂಗಡಿ ಮಾಲೀಕರೊಂದಿಗೆ ಶಾಸಕ ರಘುಪತಿ ಭಟ್ ಸಭೆ

ಅತಿ ಹೆಚ್ಚು ವಾಹನ ದಟ್ಟಣೆ ಇರುವ ಉಡುಪಿಯ ಸಂತೆಕಟ್ಟೆ - ಕಲ್ಯಾಣಪುರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನಂತೆ ಲೋಕೋಪಯೋಗಿ ಇಲಾಖೆಯಿಂದ ರೂ. 3 ಕೋಟಿ ಅನುದಾನ ಮಂಜೂರಾಗಿರುತ್ತದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಕೆಲವೊಂದು ಗೂಡಂಗಡಿಗಳು, ಶೆಡ್ ನಿರ್ಮಿಸಿದ ಅಂಗಡಿಗಳಿದ್ದು, ರಸ್ತೆ ಅಗಲಗೊಳಿಸಲು ಇವುಗಳನ್ನು ಸ್ಥಳಾಂತರಿಸುವ ಕುರಿತು ಇಂದು ದಿನಾಂಕ 05-10-2020 ರಂದು  ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಅಂಗಡಿ ಮಾಲೀಕರೊಂದಿಗೆ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಸಿದರು.

ನಗರ ಸಭೆಯಿಂದ ತ್ವರಿತವಾಗಿ ದಿನಾಂಕ 07-10-2020ರ ಒಳಗೆ ರಸ್ತೆ ಅಂಚುಗಳನ್ನು (Margin) ಗುರುತುಪಡಿಸಿ ರಸ್ತೆ ಅಂಚಿನಲ್ಲಿರುವ ಗೂಡಂಗಡಿಗಳನ್ನು, ಶೆಡ್ ನಿರ್ಮಿಸಿರುವ ಅಂಗಡಿಗಳನ್ನು ದಿನಾಂಕ 08-10-2020ಕ್ಕೆ ನಗರ ಸಭೆ ಸೂಚಿಸಿದ ಜಾಗಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತ ಆನಂದ್ ಸಿ ಕಲ್ಲೋಲಿಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ರಾಜ್, ಕಂದಾಯ ಅಧಿಕಾರಿಗಳಾದ ಧನಂಜಯ್ ಮತ್ತು ನಗರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.*

ಕಲ್ಯಾಣಪುರ : ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ರಘುಪತಿ ಭಟ್

ಉಡುಪಿ ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡಿನ ಹಳೆ ಎಂ.ಜಿ.ಸಿ. ಎನ್.ಎಚ್.-66 ರಿಂದ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡುವಿನ ಬಾಗಿಲು ವರೆಗಿನ ರಸ್ತೆ ಅಭಿವೃದ್ಧಿ ಲೋಕೋಪಯೋಗಿ ಇಲಾಖೆಯಿಂದ ರೂ. 3 ಕೋಟಿ ರೂಪಾಯಿ ಮಂಜೂರಾಗಿದ್ದು, ಕಾಮಗಾರಿಗೆ ಇಂದು ದಿನಾಂಕ 02-10-2020 ರಂದು ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಗುದ್ದಲಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ್ ತೋನ್ಸೆ, ಸ್ಥಳೀಯ ನಗರಸಭಾ ಸದಸ್ಯರಾದ ಮಂಜುಳಾ ನಾಯಕ್, ಗ್ರಾಮಾಂತರ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಶು ಕುಮಾರ್ ಕಲ್ಯಾಣಪುರ, ಕಾರ್ಯದರ್ಶಿ ಅಪ್ಪು ಜತ್ತನ್, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಕೃಷ್ಣ, ಉಮೇಶ್ ನೇಜಾರು, ನಾಗರಾಜ್ ಕುಂದರ್ ಮತ್ತು ಪಕ್ಷದ ಪ್ರಮುಖರಾದ ಉಮೇಶ್ ಶೆಟ್ಟಿ ಹಾಗೂ ಗುತ್ತಿಗೆದಾರರಾದ ಮಹೇಶ್ ಪಿ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Comments on this Article
Dr Gerald PInto, Kallianpur Thu, October-15-2020, 7:48
SAnthekatte Kallianpur is dead end road and it is almost desrted when educational instituions are closed. What is needed here is not widening but maintaining. Noproper drinage. If road is maintained properly it is emough. But at Santhekatte yes, needed. But vehicles parkimg on the road is the main problem.
Agree[1]
Rajesh, Kallianpur Wed, October-14-2020, 10:16
Cant it be done without cutting down the trees.

Already so many trees are cut in santhekatte now no shade in main road.Road widening is retirement agreed. But also trees should be saved because need shade . already we face global warming ,virus do know if we destroy trees like this what next awaits.Looks like govt official hand in glove with contractor for some quick money by selling big tree.

Agree[1]
R ಜಗದೀಶ Tonse, Kallianpura Tue, October-13-2020, 3:47
ಸಂತೆಕಟ್ಟೆಯಿಂದ ಕಲ್ಯಾಣಪುರದ ರಸ್ತೆ ಅಗಲಿಕರಣ ಉತ್ತಮ ಯೋಜನೆ. ಇ ರಸ್ತೆಯನ್ನು ಬಳಸಿ ನಿತ್ಯ ಸಾವಿರಾರು ವಿಧ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಶಾಲ ಕಾಲೆಜುಗಳಿಗೆ ಸಾಗುತ್ತಿರುವಾಗ ಕಾಲುದಾರಿಗೆ ಅವಕಾಶವಿಲ್ಲದೆ ವಹಾನಗಳು ಸಂಚರಿಸುವ ರಸ್ತೆ ಮೇಲೆ ನಡೆದಾಡಿ ಬಹಳಷ್ಟು ಅಪಘಾತಗಳಿಗೆ ಗುರಿಯಾಗಿದ್ದಾರೆ.

. ಗೂಡಂಗಡಿಗಳು ಮಲಕರು ತಮ್ಮ ಮಾರಟದ ಸಾಮನುಗಳನ್ನು, ಹಣ್ಣು, ತರಕಾರಿಗಳನ್ನು ಇತ್ಯಾದಿ ಕಲ್ಯಾಣಪುರದ ರಸ್ತೆಯಂಚ್ಚಿನಲ್ಲಿ ಇಡುತಿದ್ದು ಚರಂಡ್ಡಿ ನೀರು ಹರಿಯಲು ಅವಕಾಶ ಇಲ್ಲದೆ ಪಾದಚಾರಿಗಳಿಗೆ ತೊಂದರೆ ಆಗಿತ್ತು. ತತ್ಕಾಲಿಕವಾಗಿ ನಿರ್ಮಿಸಿದ್ದ ಮೀನು ಮಾರುಕಟ್ಟೆಯಿಂದ ತ್ಯಾಜ್ಯದಿಂದ ವಾಸನೆಯು ಮೂಗು ಮುಚ್ಚಿ ನಡೆಯಬೇಕಾದ ಪರಿಸ್ಥಿತಿ ತಲೆದೊರಿತ್ತು, ಶಾಸಕರು ಉಡುಪಿ ನಗರ ಸಭೆಯ ಆಡಳಿತ ವರ್ಗ ಹಾಗು ಸ್ಥಳಿಯ ಮುಖಂಡ್ಡರು ಒಂದು ಒಳ್ಳೆಯ ಭವಿಷ್ಯಕ್ಕೆ ಬೇಕಾದ ಮೂಲಸೌಕರ್ಯ ಒದಗಿಸಲು ಮುಂದ್ದಾಗಿದ್ದು ಉತ್ತಮ ಅಭಿವೃದ್ಧಿ

Agree[4]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Rozaricho Gaanch - December 2020Rozaricho Gaanch - December 2020
Congratulations to Prathiksha Shetty, KemmannuCongratulations to Prathiksha Shetty, Kemmannu
Congratulations to the winners of Panchayat Elections from Kemmannu Parish.Congratulations to the winners of Panchayat Elections from Kemmannu Parish.
Milarchi Lara December 2020Milarchi Lara December 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte