ಇಂದಿರಾಗಾಂಧಿಯವರ ಜನಪರ ಸಾಧನೆ ತ್ಯಾಗ ಬಲಿದಾನಗಳನ್ನು ಮರೆತಯುವ ಪೀಳಿಗೆ –ಗೀತಾ ವಾಗ್ಳೆ
Kemmannu News Network, 31-10-2020 14:30:09
ಉದ್ಯಾವರ :ತನ್ನ ಹನ್ನೆರಡನೇ ವಯಸ್ಸಿನಲ್ಲಿ ವಾನರ ಸೇನೆ ಎಂಬ ಸಂಘಟನೆಯನ್ನು ಕಟ್ಟಿ ದೇಶ ಸೇವೆಗೆ ಇಳಿದ ಇಂದಿರಾ ಗಾಂದಿ üಅಪತ್ರಿಮ ದೇಶ ಪ್ರೇಮಿ ದೈರ್ಯವಂತೆ ಹಾಗೂ ಬಡವರ ಪಾಲಿನ ದೇವತೆ. ಸ್ವತಂತ್ರ ಭಾರತದ ಈವರೆಗಿನ ಏಕೈಕ ಮಹಿಳಾ ಪ್ರಧಾನಿಯಾಗಿ ದಿಟ್ಟ ಸವಾಲುಗಳನ್ನು ಎದುರಿಸಿ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ತಂದು ನಿಲ್ಲಿಸಲು ಅವರು ಕಂಡು ಕೊಂಡ ಅನೇಕ ಕಾರ್ಯಕ್ರಮಗಳು ಇಂದಿಗೂ ಕೂಡಾ ಮರೆಯಲಾಗದ್ದು. ಇಂದಿರಾಜಿಯವರ ಸಾಧನೆಯನ್ನು ಗುರುತಿಸಲು ಉಳುವವನೇ ಹೊಲದೊಡೆಯ ಎಂಬ ಭೂ ಸುದಾರಣೆ ಕಾನೂನು ಒಂದೇ ಸಾಕು.
ಆದರೆ ಇಂದಿನ ಯುವ ಪೀಳಿಗೆ ಇಂದಿರಾಗಾಂಧಿಯವರ ಜನಪರ ಸಾಧನೆ ತ್ಯಾಗ ಬಲಿದಾನವನ್ನು ಮರೆತು ಸಮ್ಮೋಹನಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಕಾರ್ಯವೆಸಗುತ್ತಿದ್ದಾರೆ. ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆಯವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್‍ರವರ ಜನ್ಮ ದಿನಾಚರಣೆ ಕಾರ್ಯದಲ್ಲಿ ನುಡಿದರು.
ಅವರು ಮುಂದುವರಿಯುತ್ತಾ, ಇಂದಿರಾಜಿಯವರ ಹಸಿರು ಕ್ರಾಂತಿ, ಶ್ವೇತಕ್ರಾಂತಿ, ನೀಲ ಕ್ರಾಂತಿ ಕಾರ್ಯಕ್ರಮ, ಬ್ಯಾಂಕ್‍ಗಳ ರಾಷ್ಟ್ರೀಕರಣ, ಜೀತಪದ್ದತಿ ನಿರ್ಮೂಲನ, ರಾಜಧನ ರದ್ದತಿ ಇವೆಲ್ಲಾ ಕಾರ್ಯಕ್ರಮಗಳು ದೇಶದ ಬಡ ಹಾಗೂ ಮಧ್ಯಮ ವರ್ಗದ ಆರ್ಥಿಕತೆಗೆ ಬಲ ನೀಡಿತು. ಓರ್ವ ಪ್ರಧಾನಿಯಾಗಿ ಅವರು ಕೈಗೊಂಡ ದಿಟ್ಟ ನಿಲುವು ಇಂದು ದೇಶವನ್ನು ಅಖಂಡವಾಗಿ ಉಳಿಸುವಲ್ಲಿ ಪೂರಕವಾಗಿತ್ತು. ಆದರೆ ಇಂದಿರಾಗಾಂಧಿಯವರಿಂದಲೇ ಆರ್ಥಿಕವಾಗಿ ಬಲಾಢ್ಯಗೊಂಡ ವರ್ಗವೊಂದು ಇಂದು ಇಂದಿರಾಗಾಂಧಿಯವರ ಕಾರ್ಯಕ್ರಮವನ್ನೇ ಗೇಲಿ ಮಾಡುತ್ತಿರುವುದು ಈ ದೇಶದ ದುರಂತಎಂದರು.
ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್‍ಕುಮಾರ್‍ರವರು ಮಾತನಾಡಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಕ್ಕೆ ದಾರ್ಮಿಕ ಸ್ವಾತಂತ್ರ್ಯವನ್ನು ಶ್ರೀ ನಾರಾಯಣ ಗುರುಗಳು ತಂದುಕೊಟ್ಟರೆ ಆರ್ಥಿಕ ಸ್ವಾತಂತ್ರ್ಯವನ್ನ ತಂದು ಕೊಟ್ಟವರು ಇಂದಿರಾಗಾಂಧಿ. 1971ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕ್ ಪರವಾಗಿ ಅಮೇರಿಕಾದ ಯುದ್ಧ ನೌಕೆ ಸೆವೆಂತ್ ಫ್ಲೀಟ್ ಭಾರತದೆಡೆಗೆ ಸಾಗ ಹೊರಟಾಗ ಅಮೇರಿಕಾ ಮುಟ್ಟಿನೋಡುವಂತೆ ಸ್ವಾಭಿಮಾನದ ಸಂದೇಶ ನೀಡಿ ಅಮೇರಿಕಾ ಯುದ್ಧ ನೌಕೆ ವಾಪಸು ಹೋಗುವಂತೆ ಮಾಡಿದ ಅಸೀಮ ಧೈರ್ಯವಂತ ಮಹಿಳೆ ಇಂದಿರಾಗಾಧಿಯವರನ್ನು ಅಟಲ ಬಿಹಾರಿ ವಾಜಪೇಯಿಯವರು ದುರ್ಗಾ ಮಾತೆ ಎಂದು ಬಣ್ಣಿಸಿದ್ದರು ಎಂದು ನೆನಪಿಸಿದರು. ಜವಾಹರ್ ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ನೇಹದಿಂದ ಇದ್ದರೂ ಕೂಡ ಅವರ ಮಧ್ಯೆ ನಿವಾರಿಸಲಾಗದ ಭಿನ್ನಾಭಿಪ್ರಾಯ ಇತ್ತು ಎಂದು ಹುಯಿಲೆಬ್ಬಿಸಿ ಬಿಜೆಪಿ ಪಕ್ಷ ಸರ್ದಾರ್ ಪಟೇಲ್‍ರಿಗೆ ಅನ್ಯಾಯವಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆದರೆ ಕೋಮುವಾದದ ವಿರುದ್ಧ ದಿಟ್ಟ ನಿಲುವು ಕೈಗೊಂಡಿದ್ದ ಪಟೇಲರು ಗಾಂಧೀಜಿ ಹತ್ಯೆಯ ನಂತರ ಆರ್.ಎಸ್.ಎಸ್.ಅನ್ನು ನಿಷೇದಿಸಿದ್ದರು ಎನ್ನುವ ಸತ್ಯವನ್ನು ಮರೆಮಾಚುತ್ತಾರೆ. ಪಟೇಲರು ತನ್ನ ಕೊನೆಯ ದಿನಗಳಲ್ಲೂ ಕೂಡಾ ಪ್ರಧಾನಿ ನೆಹರೂರವರಿಗೆ ಸಹಕಾರವನ್ನು ನೀಡುವಂತೆ ಇತರ ಮಂತ್ರಿಗಳಿಗೆ ಹೇಳಿದ್ದು ದಾಖಲೆಯಲ್ಲಿ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕರ್ತ ಕುಮಾರ್ ಸಂಪಿಗೆ ನಗರ ಇವರು ಸರ್ದಾರ್ ವಲ್ಲಭಬಾಯಿ ಪಟೇಲ್ ಬಗ್ಗೆ ವಿವರಿಸುತ್ತಾ ಭಾರತದ ಏಕೀಕರಣದ ರೂವಾರಿ ಉಕ್ಕಿನ ಮನುಷ್ಯನ ದೇಶ ಸೇವೆಯನ್ನು ಕೊಂಡಾಡಿದರು. ಸ್ವತಂತ್ರ ಭಾರತದ ಪ್ರಪ್ರಥಮ ಉಪಪ್ರಧಾನಿ ಹಾಗೂ ಗೃಹಸಚಿವರಾದ ಪಟೇಲರ ದೇಶ ಸೇವೆಯನ್ನು ಈಗಿನ ರಾಜಕಾರಣಿಗಳು ಮೈಗೂಡಿಸಿ ಕೊಳ್ಳಬೇಕು. ಭಾರತದ ಏಕತೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿಉದ್ಯಾವರಗ್ರಾಮೀಣಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗಿರೀಶ್‍ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿತೇಶ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೆಲನ್ ಫೆರ್ನಾಂಡಿಸ್, ಅಲ್ಪಸಂಖ್ಯಾತ ಘಟಕದ ಮಹಮ್ಮದ್ ಇರ್ಫಾನ್, ಕಿಸಾನ್ ಘಟಕದ ಅಧ್ಯಕ್ಷರಾದ ಶೇಖರ್ ಕೆ.ಕೋಟ್ಯಾನ್, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್‍ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಎಸ್.ಸಿ.ಎಸ್.ಟಿ. ಘಟಕದ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಧನ್ಯವಾದವಿತ್ತರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Congratulations to Prathiksha Shetty, Kemmannu

Congratulations to the winners of Panchayat Elections from Kemmannu Parish.

Milarchi Lara December 2020

Flat for Rent at Gopalpura, Santhekatte, Udupi.

Autobiography of Richard Carvalho, Barkur/Mumbai.

Contact on Going Residential ProjectAl Nayaab Residency, Udupi

Choice Furniture vast household showroom opens at Santhekatte, Kallianpur

Focus Studio, Near Hotel Kidiyoor, Udupi

Canara Beach Restaurant, Hoode/Bengre, Udupi.

Delite Catering, Santhekatte


Kemmannu Channel -YouTube Click Here

Click here for Kemmannu Knn Facebook Link
Sponsored Albums
Exclusive
Kodi-Bengre @ CNN News: Ishita Malaviya, India’s first female surfer, is changing her country’s perception of the ocean

Obituary: Augustine Saldanha (90), Kambla Thotta, Kemmannu

Heavy rains continue to lash Udupi, 3 fishing boats capsize, water entered several houses. [Watch Video’s ]

Monthi Fest Konkani Mass and Celebration Live from St. Theresa’s Church, Kemmannu

Last Journey of Benedict P. D Souza (Benna Master)

Revisiting the lost cricketing glory of Kemmannu

Brahmakalabisheka, Maha Anna Santarpane and Religious meet at Bhadrakali Temple, Gudiyam Kemmannu.

Brief History of Christians in Kallianpur Varado:

Great Relief: Kemmannu road completed
