ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಪ್ರಕರಣಗಳ ಆರೋಪಿಗಳ ಬಂಧನ
Kemmannu News Network, 06-08-2022 16:07:01
ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಪ್ರಕರಣಗಳ ಆರೋಪಿಗಳ ಬಂಧನ
ಉಡುಪಿ : ಕಾಪು ವೃತ್ತ ಸರಹದ್ದಿನ ನಂದಿಕೂರು ಯು.ಪಿ.ಸಿ.ಎಲ್. ಬಳಿಯ ಮನೆಯಲ್ಲಿದ್ದ ವೃದ್ದೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ ಪಣಿಯೂರು ಹೋಗುವ ದಾರಿಯಲ್ಲಿರುವ ಮನೆಯೊಂದರಿಂದ ರೂಪಾಯಿ 2,52,000/- ಹಣ ಕಳವು, ಪಡುಬಿದ್ರಿ, ಉಚ್ಚಿಲ, ಕಟಪಾಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಡುಬಿದ್ರಿ ಮತ್ತು ಕಾಪು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಮಾಡುತ್ತಿದ್ದ ಕಳ್ಳರನ್ನು ಮೇಲಾಧಿಕಾರಿಯವರ ನಿರ್ದೇಶನದಂತೆ ಪೊಲೀಸ್ ಉಪಾಧೀಕ್ಷಕರು ಕಾರ್ಕಳ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವೀ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ, ಮಹಮ್ಮದ್ ಮುನೀರ್ ಮತ್ತು ಅಕ್ಬರ್ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿತರುಗಳಿಂದ ಪ್ರಕರಣಗಳಿಗೆ ಸಂಬಂಧಿಸಿ 2 ಳಿ ಪವನ್ ತೂಕದ ಚಿನ್ನದ ಸರ, ಮೊಬೈಲ್ ಪೋನ್-1, ನಗದು ರೂಪಾಯಿ 61,000/-, ಕಳವು ಮಾಡಿದ 3 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ-1, ಮೋಟಾರು ಸೈಕಲ್ -1 ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ದಸ್ತಗಿರಿ ಮಾಡಲಾದ ಆರೋಪಿಗಳ ವಿವರ:
1. ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ , ಪ್ರಾಯ:37 ವರ್ಷ, ತಂದೆ: ದಿ! ಅಹಮ್ಮದ್ ಬಾವ, ಮನೆ ನಂ: 1-112, ಕುರ್ಸುಗುಡ್ಡೆ ಮನೆ, ಕಳವಾರ ಅಂಚೆ, ಬಜ್ಪೆ, ಮಂಗಳೂರು ತಾಲೂಕು (ಹಾಲಿ ವಾಸ: ಗುತ್ತಕಾಡು, ತಾಳಿಪಾಡಿ ಗ್ರಾಮ, ಮಂಗಳೂರು ತಾಲೂಕು)
2. ಮಹಮ್ಮದ್ ಮುನೀರ್, ಪ್ರಾಯ: 24 ವರ್ಷ, ತಂದೆ: ದಿ! ಅಹಮ್ಮದ್ ಬಾವ, ವಾಸ:1-112 ಕುರ್ಸುಗುಡ್ಡೆ,ಕಳವಾರ, ಬಜ್ಪೆ , ಮಂಗಳೂರು ತಾಲೂಕು. ದ.ಕ. ಜಿಲ್ಲೆ (ಹಾಲಿ ವಾಸ: ಮಂಗಳೂರು ತಾಲೂಕು ಕೇಂಜಾರು ಗ್ರಾಮದ ಅಡ್ಮೈಗುಡ್ಡೆ)
3. ಅಕ್ಬರ್, ಪ್ರಾಯ: 36 ವರ್ಷ, ತಂದೆ: ದಿ! ಗೌಸ್ ಬಾಷಾ, ವಾಸ: ಸ್ಮಶಾನದ ಬಳಿ, ಶರೀಫ್ ಎಂಬವರ ಬಾಡಿಗೆ ಮನೆ, ಕುರ್ಸುಗುಡ್ಡೆ, ಕಳವಾರ ಅಂಚೆ, ಬಜ್ಪೆ ಮಂಗಳೂರು.ಆರೋಪಿಗಳ ವಿರುದ್ದ ದಾಖಲಾಗಿರುವ ಪ್ರಕರಣಗಳು:-
1. ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ:- ಈತನು ಬ್ರಹ್ಮಾವರ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ ಪೊಲೀಸ್ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯ 05 ಪ್ರಕರಣಗಳಲ್ಲಿ ತಲೆ ಮರೆಸಿ ಕೊಂಡಿದ್ದು ಒಟ್ಟು ಈತನ ಮೇಲೆ ಒಟ್ಟು 18 ಪ್ರಕರಣಗಳು ದಾಖಲಾಗಿರುತ್ತದೆ.
2. ಮಹಮ್ಮದ್ ಮುನೀರ್ :- ಈತನು ಬ್ರಹ್ಮಾವರ ಪೊಲೀಸ್ ಠಾಣೆ, ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯ 02 ಪ್ರಕರಣಗಳಲ್ಲಿ ತಲೆ ಮರೆಸಿ ಕೊಂಡಿದ್ದು ಈತನ ಮೇಲೆ ಒಟ್ಟು 08 ಪ್ರಕರಣಗಳು ದಾಖಲಾಗಿರುತ್ತದೆ.
3. ಅಕ್ಬರ್ :- ಈತನ ಮೇಲೆ ಒಟ್ಟು 02 ಪ್ರಕರಣಗಳು ದಾಖಲಾಗಿರುತ್ತದೆ.
ಸ್ವಾಧೀನಪಡಿಸಿಕೊಂಡ ಸೊತ್ತುಗಳ ವಿವರ:-
1) 20 ಗ್ರಾಂ ತೂಕದ ಸಣ್ಣ ಗುಂಡುಗಳಿರುವ ಎರಡು ಎಳೆಯ ಚಿನ್ನದ ಸರ-1. ಇದರ ಅಂದಾಜು ಮೌಲ್ಯ ರೂ: 90,000/-
2) SಂಒSUಓಉ ಆUಔS ಎಂದು ಬರೆದಿರುವ ನೀಲಿ ಬಣ್ಣದ ಕೀ ಪ್ಯಾಡ್‌ನ ಮೊಬೈಲ್ ಪೋನ್-1, ಅಂದಾಜು ಮೌಲ್ಯ ರೂ: 500/-
3) ನಗದು ರೂ, 61,000/-
4) ಕೆಎ-20-ಇಜಿ-4203 ನಂಬ್ರದ ದ್ವಿಚಕ್ರ ವಾಹನ ಅಂದಾಜು ಮೌಲ್ಯ ರೂ, 30,000/-
5) ಕೆಎ-20-ಎಲ್-2452 ನಂಬ್ರದ ದ್ವಿಚಕ್ರ ವಾಹನ ಅಂದಾಜು ಮೌಲ್ಯ ರೂ, 10,000/-
6) ಕೆಎ-20-ಇಜಿ-0881 ನಂಬ್ರದ ದ್ವಿಚಕ್ರ ವಾಹನ ಅಂದಾಜು ಮೌಲ್ಯ ರೂ, 25,000/-
7) ಏಂ-19-ಂಂ-5053 ನಂಬ್ರದ ಬಜಾಜ್ ಕಂಪೆನಿಯ ಆಟೋ ರಿಕ್ಷಾ -1 , ಇದರ ಅಂದಾಜು ಮೌಲ್ಯ ರೂ: 50,000/-
8) ಏಂ-19-ಕಿ-8860 ನಂಬ್ರದ ಕಪ್ಪು ಬಣ್ಣದ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ -1, ಅಂದಾಜು ಮೌಲ್ಯ ರೂ,15,000/-
9) ಮೊಬೈಲ್ ಫೋನ್‌ಗಳು-03 ಅಂದಾಜು ಮೌಲ್ಯ ರೂ,17,000/-, ನಗದು ಹಣ ರೂ: 690/- , ಸ್ಕ್ರೂಡ್ರೈ ವರ್-1, ಕಬ್ಬಿಣದ ರಾಡ್ -1, ಕಟ್ಟಿಂಗ್ ಪ್ಲೇಯರ್ -1.
ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 2,99,190/- ಆಗಬಹುದು.
ಈ ಕಾರ್ಯಾಚರಣೆಯನ್ನು ಶ್ರೀ ಎನ್. ವಿಷ್ಣುವರ್ಧನ, ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಉಡುಪಿ ಮತ್ತು ಶ್ರೀ ಎಸ್.ಟಿ. ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ರವರ ನಿರ್ದೇಶನದಂತೆ, ಶ್ರೀ ಎಸ್.ವಿಜಯ ಪ್ರಸಾದ್, ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಕೆ.ಸಿ. ಪೂವಯ್ಯ, ವೃತ್ತ ನಿರೀಕ್ಷಕರು ಕಾಪುರವರ ನೇತೃತ್ವದಲ್ಲಿ ನಡೆಸಿದ್ದು, ಪ್ರಕಾಶ್ ಸಾಲ್ಯಾನ್ ಪಿ.ಎಸ್.ಐ(ತನಿಖೆ), ಪಡುಬಿದ್ರಿ ಠಾಣೆ , ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್, ರಾಜೇಶ್, ಹೇಮರಾಜ್, ಸಂದೇಶ, ಸುಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of Lathicia Dsouza (80 Years) | LIVE from Kuntalnagar

KALMADY CHURCH | PROCLAIMATION AND DEDICATION of OUR LADY VAILANKANNI CENTRE as a DIOCESAN SHRINE |

Final Journey of Leslie S D’Souza (69 Years) | LIVE from Kallianpur

Feast of Assumption & 75th Independence Day Celebration | LIVE From Kemmannu

Final Journey of Walter Sequeira (87 Years) | LIVE from Milagres Kallianpur.

Fianl Journey of Leo D’Souza (96) | LIVE from Kemmannu.

Final Journey of Violet Lewis (66 years) | LIVE from Kallianpur

33rd Ganesh Festival Invitation from Sri Badrakali Temple, Gudium, Kemmannu

Final Journey of Romeo Egbert Lewis (75 Years) | LIVE from Kallianpur

5,000 kms run VAN for Sale. Last price Rs. 7.5 lacs

15 cents land for sale in Santhekatte Udupi

Kallianpura/Santhekatte: Sweet Tooth Ice Cream Parlor inaugurated

Sites for Sale in Santhekatte, Thottam, Alevoor and many other places, Please contact...

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Choice Furniture vast household showroom opens at Santhekatte, Kallianpur

Focus Studio, Near Hotel Kidiyoor, Udupi


Kemmannu Channel - Ktv Live Stream - To Book - Contact Here

Kemmannu Channel -YouTube Click Here

Click here for Kemmannu Knn Facebook Link
Sponsored Albums
Exclusive
Femina Miss India Sini Shetty visits Milagres College, Kallianpur. [Video]

Kallianpura/Santhekatte: Sweet Tooth Ice Cream Parlor inaugurated

Sastan St. Thomas Church ready for Inauguration Today - St. Thomas the Apostle of India.

Stone inscriptions of Vijayanagara King Immadi Devaraya found at Kemmannu

FERNANDES GROUP inaugurates its Overseas office at Deira, Dubai, UAE

KEMMANNU UTSAV 2022 - A perfect family entertainer to celebrate & conclude the parish feast….

Thonse Health Centre chairman BM Zaffer gets Indian Achievers’ Award 2021

Vehicular Overpass at Santhekatte junction : Public meeting held.
‘Old Man’s Club’ – A collection of 25 selected hilarious articles by Joe Quadrus, released in Udupi…..
